Sunday, March 31, 2019

ಪ್ರೇಮಾನುಬಂಧ (1981)


ಬೆಳದಿಂಗಳೊಂದು

ಚಲನ ಚಿತ್ರ: ಪ್ರೇಮಾನುಬಂಧ (1981)
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್.ಪಿ. ಬಾಲಸುಬ್ರಹ್ಮಣ್ಯಂ
ನಿರ್ದೇಶನ: ಆರ್.ರಾಮಮೂರ್ತಿ 
ನಟನೆ: ಶ್ರೀನಾಥ್, ಮಂಜುಳಾ, ಕೆ. ವಿಜಯಾ 


ಬೆಳದಿಂಗಳೊಂದು ಹೆಣ್ಣಾಗಿ ಬಂದಂತೆ ಕಂಡೆ
ಕಂಡು ನಿಂತೆ ನಿಂತು ಸೋತೆ ಸೋತು
ಕವಿಯಾಗಿ ಕವಿತೆ ಹಾಡಿದೆ ||2 ಸಲ||

ಹೊಸದಾಗಿ ಮೊಗ್ಗೊಂದು ಹೂವಾಗಿ
ಆ ಹೂವೆ ಈ ಹೆಣ್ಣ ಮೊಗವಾಗಿ
ಸುಳಿದಾಡೋ ಮಿಂಚಿಂದ ಕಣ್ಣಾಗಿ
ಗಿಳಿಮಾತು ಅವಳಾಡೋ ಮಾತಾಗಿ
ತಂಗಾಳಿಗೆ ಓಲಾಡುವ ತಂಗಾಳಿಗೆ ಓಲಾಡುವ
ಲತೆಯೊಂದು ನಡುವಾಯಿತೇನೋ
ನವಿಲೊಂದು ಕುಣಿದಂತೆ ನಡೆವಾಗ ಸಂತೋಷಗೊಂಡೆ.

ಹಗಲಲ್ಲಿ ಕಣ್ಣ್ಮುಂದೆ ನೀನಿರುವೆ
ಇರುಳಲ್ಲಿ ಕನಸಲ್ಲಿ ನೀ ಬರುವೆ
ಜೊತೆಯಾಗಿ ಇರುವಾಸೆ ತಂದಿರುವೆ
ನನಗೆಂದು ಹೊಸ ಬಾಳ ನೀ ತರುವೆ
ಬಂಗಾರಿಯೇ ಸಿಂಗಾರಿಯೆ ಹಾ
ಬಂಗಾರಿಯೇ ಸಿಂಗಾರಿಯೆ
ನನ್ನೊಮ್ಮೆ ನೀ ನೋಡು ಚೆಲುವೆ
ಒಲವಿಂದ ಬಂದೀಗ ನನ್ನನ್ನು ನೀ ಸೇರು ಹೂವೇ

ಬೆಳದಿಂಗಳೊಂದು ಹೆಣ್ಣಾಗಿ ಬಂದಂತೆ ಕಂಡೆ
ಕಂಡು ನಿಂತೆ ನಿಂತು ಸೋತೆ
ಸೋತು ಕವಿಯಾಗಿ ಕವಿತೆ ಹಾಡಿದೆ

********************************************************************************

No comments:

Post a Comment