ಚಲನ ಚಿತ್ರ: ಆ ದಿನಗಳು (2007)
ನಿರ್ದೇಶನ: ಕೆ. ಎಂ. ಚೈತನ್ಯ
ಸಂಗೀತ: ಇಳಯರಾಜ
ಸಾಹಿತ್ಯ: ಕೆ. ಕಲ್ಯಾಣ್
ಗಾಯಕರು: ಇಳಯರಾಜ, ನಂದಿತಾ
ನಟನೆ: ಚೇತನ್, ಅರ್ಚನಾ, ಶರತ್ ಲೋಹಿತಾಶ್ವ,
ಅತುಲ್ ಕುಲಕರ್ಣಿ, ಆಶಿಶ್ ವಿದ್ಯಾರ್ಥಿ, ಗಿರೀಶ್ ಕಾರ್ನಾಡ್
ಸಿಹಿಗಾಳಿ ಸಿಹಿಗಾಳಿ ಸಹಿ ಹಾಕಿದೆ ಮನಸಿನಲಿ

ಸಿಹಿಗಾಳಿ ಸಿಹಿಗಾಳಿ ಸಹಿ ಹಾಕಿದೆ ಮನಸಿನಲಿ
ಬರಿಮಾತು ಬರಿಮಾತು ಇನ್ಯಾಕೆ ಪ್ರೀತಿಯಲಿ
ನೋಟವೊಂದೆ ಸಾಕು, ದಿನವು ಬೆರೆಯಲೇ ಬೇಕು
ಪ್ರೇಮ ಅಮೃತದ ಗೀತೆ, ಬರೆಯೋಣ ಬಾ...
ಸಿಹಿಗಾಳಿ ಸಿಹಿಗಾಳಿ ಸಹಿ ಹಾಕಿದೆ ಮನಸಿನಲಿ
ಬರಿಮಾತು ಬರಿಮಾತು ಇನ್ಯಾಕೆ ಪ್ರೀತಿಯಲಿ
ಬಾನಾಡಿಗೊಂದು ಸವಿಮಾತು ಕಲಿಸುವ
ಆ ವೀಣೆಗೊಂದು ಎದೆರಾಗ ತಿಳಿಸುವ
ನದಿಗಳಿಗೆ ಅಲೆಗಳಿಗೆ ಕುಣಿವ ಮನಸು ಕೊಡುವ
ಅರಳುತಿರೋ ಹೂಗಳಿಗೆ ಒಲವ ಸುಧೆಯ ಕೊಡುವ
ಬಾಳಿನ ಅರ್ಥವೇ ಪ್ರೇಮವೆಂಬುದಲ್ಲವೇ
ಪ್ರೇಮವೇ ಇಲ್ಲದೆ ನಾನು ನೀನು ಯಾಕೆ....
ಸಿಹಿಗಾಳಿ ಸಿಹಿಗಾಳಿ ಸಹಿ ಹಾಕಿದೆ ಮನಸಿನಲಿ
ಬರಿಮಾತು ಬರಿಮಾತು ಇನ್ಯಾಕೆ ಪ್ರೀತಿಯಲಿ
ನೋಟವೊಂದೆ ಸಾಕು, ದಿನವು ಬೆರೆಯಲೇ ಬೇಕು
ಪ್ರೇಮ ಅಮೃತದ ಗೀತೆ, ಬರೆಯೋಣ ಬಾ...
ಸಿಹಿಗಾಳಿ ಸಿಹಿಗಾಳಿ ಸಹಿ ಹಾಕಿದೆ ಮನಸಿನಲಿ
ಬರಿಮಾತು ಬರಿಮಾತು ಇನ್ಯಾಕೆ ಪ್ರೀತಿಯಲಿ
*********************************************************************************
ಆ ದಿನಗಳು ಪ್ರತಿ ಕ್ಷಣ
ಸಾಹಿತ್ಯ: ಡಿ. ಸುಮನಾ ಕಿತ್ತೂರ್ ಗಾಯಕರು: ವಿಜಯ್ ಯೇಸುದಾಸ್
ಆ ದಿನಗಳು ಪ್ರತಿ ಕ್ಷಣ ಹೃದಯದೊಳಗೆ
ಹಸಿರಾಗಿದೆ ಅದೇ ಇದೇ ನನ್ನ ಬಿಡದೆ
ಗಾಳಿಯಲ್ಲೂ ಪ್ರೇಮಗೀತೆ ಬರೆದ ಸಂದೇಶವೂ
ಬಳಸಿ ಬಂದು ಹೇಳಲಿಲ್ಲವೇ ನನ್ನ ಈ ಸ್ನೇಹವೋ
ಪ್ರೀತಿಯ ಈ ಹಾದಿಯ ಏಕೆ ಬಿಟ್ಟು ಹೋದೆ
ಆ ದಿನಗಳು ಪ್ರತಿ ಕ್ಷಣ ಹೃದಯದೊಳಗೆ
ಹಸಿರಾಗಿದೆ ಅದೇ ಇದೇ ನನ್ನ ಬಿಡದೆ
ದಿನ ದಿನ ಮುಖವನು ನೋಡಿ ಹೊಗಳುವ ಮಾತೆಲ್ಲಿ
ಮುನಿಯುತ ಜಗಳವ ಆಡಿ ನಟಿಸಿದ ನಗುವೆಲ್ಲಿ
ನನ್ನ ಕಲ್ಪನೆ ಎಲ್ಲೋ ನಿನ್ನ ಹುಡುಕಿ ಹೋಯ್ತು
ಆ ಶಿಲ್ಪದಲಿ ಕಂಡೂ ಮನಸು ಶಾಂತವಾಯಿತು
ನೀನೆಲ್ಲೋ ನಾನೆಲ್ಲೋ ಇನ್ನು ತಾಳೆ ವಿರಹನೋವಾ
ಆ ದಿನಗಳು ಪ್ರತಿ ಕ್ಷಣ ಹೃದಯದೊಳಗೆ
ಹಸಿರಾಗಿದೆ ಅದೇ ಇದೇ ನನ್ನ ಬಿಡದೆ

*********************************************************************************
No comments:
Post a Comment