ಚಲನ ಚಿತ್ರ: ತವರಿನ ಸಿರಿ (2006)

ನಿರ್ದೇಶನ: ಓಂ ಸಾಯಿ ಪ್ರಕಾಶ್
ಸಾಹಿತ್ಯ: ಹಂಸಲೇಖ
ಗಾಯಕರು: ಎಸ್.ಪಿ. ಬಾಲಸುಬ್ರಹ್ಮಣ್ಯಂ, ನಂದಿತಾ
ನಟನೆ: ಶಿವರಾಜ್ ಕುಮಾರ್, ಡೈಸಿ ಬೋಪಣ್ಣ,
ಹಸಿದಾಗ ಅನ್ನ ದಣಿದಾಗ ನೀರು ಕೊಡದಿದ್ದ ಮೇಲೆ
ಏನ್ ಚಂದವೋ ಏನ್ ಚಂದವೋ
ಮನಸಿದ್ದು ಪ್ರೀತಿ ಕೈ ಇದ್ದು ದಾನ ಕೊಡದಿದ್ದ ಮೇಲೆ
ಏನ್ ಚಂದವೋ ಏನ್ ಚಂದವೋ
ಭೂಮಿ ತಾಯಿ ತಂದ ಬೆವರಿನ ಸಿರಿ
ಹಂಚಿಕೊಂಡು ತಿನ್ನದೇ ಇದ್ರೆ ಏನ್ ಚಂದವೋ
ಹಸಿದಾಗ ಅನ್ನ ದಣಿದಾಗ ನೀರು ಕೊಡದಿದ್ದ ಮೇಲೆ
ಏನ್ ಚಂದವೋ ಏನ್ ಚಂದವೋ

ಹಂಚಿಕೊಂಡು ತಿನ್ನದೇ ಇದ್ರೆ ಏನ್ ಚಂದವೋ
ಹಸಿದಾಗ ಅನ್ನ ದಣಿದಾಗ ನೀರು ಕೊಡದಿದ್ದ ಮೇಲೆ
ಏನ್ ಚಂದವೋ ಏನ್ ಚಂದವೋ
ಮೋಡ ಮುನಿದು ಚದುರಿದರೆ ಪೈರು ತೆನೆ ಇಲ್ಲಣ್ಣ
ಹೂವು ಮುನಿದು ಮುಚ್ಚಿದರೆ ಜೇನು ಗೂಡೇ ಇಲ್ಲಣ್ಣ
ತನ್ನೆಲ್ಲ ಕೆಚ್ಚಲು ಕರುವಿಗೆ ಅಂದರೆ
ಹಸುವಿನ ಹಾಲೇ ನಮಗಿಲ್ಲ ಹಸುವಿನ ಹಾಲೇ ನಮಗಿಲ್ಲ
ನೀಡೋ ಈ ನಿಯಮ ಪಾಲಿಸದಿದ್ದರೆ
ಏನ್ ಚಂದವೋ ಏನ್ ಚಂದವೋ
ಶಿವನು ಕೊಟ್ಟ ಆಸ್ತಿ ಭೂಮಿಯಾ ಸಿರಿ
ಅವನಾಸ್ತಿ ನನದೆನ್ನೋದು
ಏನ್ ಚಂದವೋ ಏನ್ ಚಂದವೋ
ಹಸಿದಾಗ ಅನ್ನ ದಣಿದಾಗ ನೀರು ಕೊಡದಿದ್ದ ಮೇಲೆ
ಏನ್ ಚಂದವೋ ಏನ್ ಚಂದವೋ

ಗುಡಿಸಲಿಗೆ ಸೂರಾಗಿ ಸೇತುವೆಗೆ ಹಾಸಾಗಿ
ಬದುಕೆಲ್ಲಾ ನೀಡುತ್ತಾ ಬಾನೆತ್ತರ ಬಾಳುತ್ತಾ
ಇರಬೇಕು ತೆಂಗಿನ ಮರದಂತೆ
ಇರಬೇಕು ತೆಂಗಿನ ಮರದಂತೆ
ನರನಾಗಿ ಮರೆತು ಕೀಳಾಗಿ ಹೋದರೆ
ಏನ್ ಚಂದವೋ ಏನ್ ಚಂದವೋ
ಮನಸಿದ್ದು ಪ್ರೀತಿ ಕೈ ಇದ್ದು ದಾನ ಕೊಡದಿದ್ದ ಮೇಲೆ
ಏನ್ ಚಂದವೋ ಏನ್ ಚಂದವೋ
ನಮ್ಮ ಅಣ್ಣನೇ ನಮ್ಮ ತವರಿನ ಸಿರಿ
ಈ ದೈವ ಇಲ್ಲದ ಊರು ಏನ್ ಚಂದವೋ
ಹಸಿದಾಗ ಅನ್ನ ದಣಿದಾಗ ನೀರು ಕೊಡದಿದ್ದ ಮೇಲೆ
ಏನ್ ಚಂದವೋ ಏನ್ ಚಂದವೋ
*********************************************************************************
No comments:
Post a Comment