Sunday, November 11, 2018

ಶ್ರುತಿ ಸೇರಿದಾಗ (1987)


ನಗಲಾರದೇ 

ಚಲನ ಚಿತ್ರ : ಶ್ರುತಿ ಸೇರಿದಾಗ (1987)  
ನಿರ್ದೇಶನ: ಚಿ. ದತ್ತರಾಜ್   
ಸಂಗೀತ: ಟಿ. ಜಿ. ಲಿಂಗಪ್ಪ   
ರಚನೆ: ಚಿ. ಉದಯಶಂಕರ್    
ಗಾಯಕ: ಡಾ. ರಾಜ್ ಕುಮಾರ್  
ನಟನೆ: ರಾಜ್ ಕುಮಾರ್, ಮಾಧವಿ, ಗೀತಾ 


ನಗಲಾರದೇ....  ಅಳಲಾರದೇ....
ತೊಳಲಾಡಿದೆ ಜೀವ....
ನಗಲಾರದೇ....  ಅಳಲಾರದೇ....
ತೊಳಲಾಡಿದೆ ಜೀವ....
ಬರಿಮಾತಲೀ ಹೇಳಲಾರದೇ ಮನದಾಳದ ನೋವ 

ದಿನಕೊಂದು ಬಣ್ಣ, ಕ್ಪಣಕೊಂದು ಬಣ್ಣ,
ಏನೇನೋ ವೇಷ ಮಾತಲ್ಲಿ ಮೋಸ
ದಿನಕೊಂದು ಬಣ್ಣ, ಕ್ಪಣಕೊಂದು ಬಣ್ಣ,
ಏನೇನೋ ವೇಷ ಮಾತಲ್ಲಿ ಮೋಸ
ಆ ಮಾತನ್ನೆಲ್ಲ ನಿಜವೆಂದು ನಂಬಿ
ಆ ಮಾತನ್ನೆಲ್ಲ ನಿಜವೆಂದು ನಂಬಿ 
ಮನದಾಸೆಯೇ... ಮಣ್ಣಾಯಿತೇ...
ಮನದಾಸೆಯೆ ಮಣ್ಣಾಯಿತೆ ಮನ
ನೆಮ್ಮದಿ ದೂರಾಯಿತೇ.... 

ನಗಲಾರದೇ ಅಳಲಾರದೇ ತೊಳಲಾಡಿದೆ ಜೀವ
ನಿಜವಾದ ಪ್ರೇಮ, ನಿಜವಾದ ಸ್ನೇಹ,
ಅನುರಾಗವೇನೋ ಬಲ್ಲೋರು ಇಲ್ಲ
ನಿಜವಾದ ಪ್ರೇಮ, ನಿಜವಾದ ಸ್ನೇಹ,
ಅನುರಾಗವೇನೋ ಬಲ್ಲೋರು ಇಲ್ಲ
ಬಾಳಲ್ಲೆ ನಟನೆ ಹೀಗೇಕೊ ಕಾಣೆ
ಬಾಳಲ್ಲೆ ನಟನೆ ಹೀಗೇಕೊ ಕಾಣೆ
ಬದುಕಲ್ಲಿಯೇ... ಹುಡುಗಾಟವೇ...
ಬದುಕಲ್ಲಿಯೆ ಹುಡುಗಾಟವೆ ಈ ಆಟಕೆ ಕೊನೆಯಿಲ್ಲವೇ 

ನಗಲಾರದೇ ಅಳಲಾರದೇ ತೊಳಲಾಡಿದೆ ಜೀವ
ಬರಿಮಾತಲೀ ಹೇಳಲಾರದೇ ಮನದಾಳದ ನೋವ .... 

*********************************************************************************

ಶೃತಿ ಸೇರಿದೆ ಹಿತವಾಗಿದೆ

ಸಾಹಿತ್ಯ: ಚಿ||ಉದಯಶಂಕರ್ 
ಗಾಯನ: ಡಾ||ರಾಜ್, ಎಸ್.ಜಾನಕಿ 


ಶೃತಿ ಸೇರಿದೆ ಹಿತವಾಗಿದೆ ಮಾತೆಲ್ಲವು ಇಂಪಾಗಿದೆ
ಹೊಸ ರಾಗದ ಲತೆಯಲ್ಲಿ  ಹೊಸ ಪಲ್ಲವಿ ಹೂವಾಗಿದೆ
ಹೊಸ ಆಸೆಯ ಕಂಪಿಂದ  ಹೊಸ ಪ್ರೇಮವು ಸವಿಯಾಗಿದೆ
ಹೊಸ ನೋಟವು ಕಣ್ತುಂಬಿ ಹೊಸ ರೀತಿಯು ತಂಪಾಗಿದೆ
ಬದುಕೆಲ್ಲ ಹಸಿರಾಗಿ ಒಲವೊಂದೆ ಉಸಿರಾಗಿ

ಶೃತಿ ಸೇರಿದೆ ಹಿತವಾಗಿದೆ  ಮಾತೆಲ್ಲವು ಇಂಪಾಗಿದೆ
ಮಳೆಗಾಲವು ಬಂದಾಗಿದೆ ನೆಲವೆಲ್ಲ ಹಸಿರಾಗಿದೆ
ಚಳಿಗಾಲವ ಕಂಡಾಗಿದೆ  ಮಂಜಿನ ತೆರೆ ಹಾಸಿದೆ
ಋತುಚಕ್ರವು ಉರುಳಿರಲು ಬಾಳೆಂಬುವ ಬಳ್ಳಿಯಲಿ
ಹೊಸದೊಂದು ಮೊಗ್ಗಾಗಿ  ಸಂಸಾರದ ಬೆಳಕಾಗಿ

ಶೃತಿ ಸೇರಿದೆ ಹಿತವಾಗಿದೆ  ಮಾತೆಲ್ಲವು ಇಂಪಾಗಿದೆ

*********************************************************************************

ಬೊಂಬೆಯಾಟವಯ್ಯ

ರಚನೆ: ಚಿ. ಉದಯಶಂಕರ್  
ಗಾಯಕ: ಡಾ. ರಾಜ್ ಕುಮಾರ್, ವಾಣಿ ಜಯರಾಮ್ 


ಬೊಂಬೆಯಾಟವಯ್ಯ, ಇದು ಬೊಂಬೆಯಾಟವಯ್ಯ
ನೀ ಸೂತ್ರಧಾರಿ, ನಾ ಪಾತ್ರಧಾರಿ, ದಡವ ಸೇರಿಸಯ್ಯ
ಬೊಂಬೆಯಾಟವಯ್ಯ

ಯಾವ ಕಾಲಕೆ, ಯಾವ ತಾಳಕೆ... ಆಆಆ
ಯಾವ ಕಾಲಕೆ, ಯಾವ ತಾಳಕೆ ಏಕೆ ಕಳಿಸುವೆಯೊ ನಾ ಅರಿಯೇ
ಯಾರ ಸ್ನೇಹಕೆ, ಯಾರ ಪ್ರೇಮಕೆ ಯಾರ ನೂಕುವೆಯೊ ನಾ ತಿಳಿಯೇ
ನೆಡೆಸಿದಂತೆ ನೆಡೆವೇ, ನುಡಿಸಿದಂತೆ ನುಡಿವೇ
ವಿನೋದವೋ, ವಿಷಾದವೋ, ತರುತ, ಇರುವೆ, ದಿನವು
ಬೊಂಬೆಯಾಟವಯ್ಯ 

ಯಾರ ನೋಟಕೆ, ಕಣ್ಣ ಬೇಟೆಗೆ 
ಯಾರ ನೋಟಕೆ, ಕಣ್ಣ ಬೇಟೆಗೆ ಸೋತು ಸೊರಗುವೆನೊ ನಾ ಅರಿಯೇ
ಯಾವ ಸಮಯಕೆ, ಯಾರ ಸರಸಕೆ 
ಯಾವ ಸಮಯಕೆ, ಯಾರ ಸರಸಕೆ ಬೇಡಿ ಕೊರಗುವೆನೊ ನಾ ತಿಳಿಯೇ
ಕವಿತೆ ನುಡಿಸಿಬಿಡುವೇ, ಕವಿಯ ಮಾಡಿ ನಗುವೇ
ಸಂಗೀತವೋ, ಸಾಹಿತ್ಯವೋ, ಸಮಯ, ನೋಡಿ, ಕೊಡುವೆ 
ಬೊಂಬೆಯಾಟವಯ್ಯ, ಸನಿದಪ ಬೊಂಬೆಯಾಟವಯ್ಯ,

ರೀಗ ರೀಗ ರಿಸ ನೀಸ ನೀಸ ನಿಸದ ಸಸ ನಿನಿ ದದ
ಪಪ ಮಪದನಿ ಬೊಂಬೆಯಾಟವಯ್ಯ
ಸಾಸಾ ನಿರಿಸ ನಿರಿಸ ನಿರಿಸ ನಿರಿಸ ನಿನಿಸ ನಿನಿ ಸಸ ನಿನಿ ದದ ಮಮದಾ
ಆಆಆಆಆಅ..... ಗಾಗಾಗ ರಿಗಾಗಾಗ ರಿಸಾರಿಗ ಆಆಆಆ... (ಕೆಮ್ಮು)
ಹೆಣ್ಣು : ರೀಗ ಸಾರಿಗ ರಿಗ ಸಾರಿಗ
ಗಂಡು : ಗಾಗಾಗಗಗ ಗಾಗರಿಸ ಸಾರಿಗ
ಹೆಣ್ಣು: ಗಾಗ ಪದರಿ ಗಮ ಗಮ
ಗಂಡು : ರಿರಿ ಗರಿಸ ರಿಗರಿಗ
ಹೆಣ್ಣು : ಸಾಸ ಸರಿನಿ     ಗಂಡು : ನಿನಿ ನಿಸದ
ಹೆಣ್ಣು : ಗಾ ದನಿಪ        ಗಂಡು : ಪ ಪದಮ
ಹೆಣ್ಣು : ಗಮಪ ಮಪದ     ಗಂಡು : ಪದ ನಿದನಿಸ
ಹೆಣ್ಣು: ಗರಿಸ     ಗಂಡು : ನಿಸನಿ
ಹೆಣ್ಣು : ಪನಿದ    ಗಂಡು : ರಿಸಪ
ಹೆಣ್ಣು : ಪದನಿ ದನಿಸ ಗಮಪ ಮಪದ
ಗಂಡು : ಸನಿ  ದನಿದ ನಿದನಿದ ಸನಿದಪ ಮಪ ದಪದ ಸನಿದಪ ಪದನಿ

ಬೊಂಬೆಯಾಟವಯ್ಯ ... ಇದು ಬೊಂಬೆಯಾಟವಯ್ಯಾ..
ನೀ ಸೂತ್ರಧಾರಿ, ನಾ ಪಾತ್ರಧಾರಿ, ದಡವ ಸೇರಿಸಯ್ಯ
ಬೊಂಬೆಯಾಟವಯ್ಯ ... ಇದು ಬೊಂಬೆಯಾಟವಯ್ಯಾ..

*********************************************************************************

ರಾಗ ಜೀವನ ರಾಗ

ಸಾಹಿತ್ಯ: ಚಿ.ಉದಯಶಂಕರ್ 
ಗಾಯಕರು: ಡಾ.ರಾಜ್‌ಕುಮಾರ್, ವಾಣಿ ಜಯರಾಮ್


ರಾಗ ಜೀವನ ರಾಗ, ರಾಗ ಜೀವನ ರಾಗ
ಪ್ರೇಮ ಸುಮವು ಅರಳಿದಾಗ ಮೋಹದ ರಾಗ
ಒಲಿದ ಜೀವ ಸೇರಿದಾಗ ಮೌನವೆ ರಾಗ
ರಾಗ ಜೀವನ ರಾಗ, ರಾಗ ಜೀವನ ರಾಗ

ಕಂಗಳು ಬೆರೆತಾಗ ಆ ಅನುರಾಗ
ಹಾಡಿತು ಕಿವಿಯಲ್ಲಿ ಪ್ರೇಮದ ರಾಗ
ಎದೆಯಲಿ ಆನಂದ ತುಂಬಲು ಆಗ
ಎದೆಯಲಿ ಆನಂದ ತುಂಬಲು ಆಗ
ದಿನವೂ ದಿನವೂ ನೂರು ಹೊಸ ರಾಗ

ರಾಗ ಜೀವನ ರಾಗ, ರಾಗ ಜೀವನ ರಾಗ

ಮೈಯಿಗೆ ಮೈ ಸೋಕಿದಾಗ
ಏತಕೊ ನನ್ನಲ್ಲಿ ಆವೇಗ
ಆಸೆಯ ಬಾನಾಡಿ ಬಾನಿಗೆ ಜಿಗಿದಾಗ
ಆಸೆಯ ಬಾನಾಡಿ ಬಾನಿಗೆ ಜಿಗಿದಾಗ
ಸೇರುವ ಕಾತರ ಮೂಡಿತು ಬೇಗ

ಮೈಯಿಗೆ ಮೈ ಸೋಕಿದಾಗ
ಏತಕೊ ನನ್ನಲ್ಲಿ ಆವೇಗ
ಪ್ರೇಮದ ನುಡಿಯೆಂದೂ ಸವಿಯಾದ ರಾಗ
ಪ್ರೀತಿಯ ಹಾಡೆಲ್ಲ ಹಿತವಾದ ರಾಗ
ಸರಸದ ನುಡಿಯೆಂದೂ ಸವಿಯಾದ ರಾಗ
ಪ್ರಣಯದ ಹಾಡೆಲ್ಲ ಹಿತವಾದ ರಾಗ
ಬಿಸಿಲೆಲ್ಲ ಆಗ ಬೆಳದಿಂಗಳಾಗಿ
ಅನುಕ್ಷಣ ಹೊಸತನ ಚಿಗುರುವುದಾಗ
ಮೈಯಿಗೆ ಮೈ ಸೋಕಿದಾಗ
ಏತಕೊ ನನ್ನಲ್ಲಿ ಆವೇಗ

ರಾಗ ಜೀವನ ರಾಗ, ರಾಗ ಜೀವನ ರಾಗ
ಪ್ರೇಮ ಸುಮವು ಅರಳಿದಾಗ ಮೋಹದ ರಾಗ
ಒಲಿದ ಜೀವ ಸೇರಿದಾಗ ಮೌನವೆ ರಾಗ
ರಾಗ ಜೀವನ ರಾಗ, ರಾಗ ಜೀವನ ರಾಗ

*********************************************************************************

ಕನಸಲ್ಲಿ ಬಂದವನಾರೇ

ಸಾಹಿತ್ಯ: ಚಿ.ಉದಯಶಂಕರ್  
ಗಾಯನ: ಎಸ್.ಜಾನಕಿ 


ಆ.......ಆ.......
ಕನಸಲ್ಲಿ ಬಂದವನಾರೇ..
ಮನಸಲ್ಲಿ ನಿಂದವನಾರೇ
ಅವನಾರೋ ನಾ ಕಾಣೆ ನೀ ಹೇಳೆ ಗೆಳತಿ......{ಪಲ್ಲವಿ}

ಜಟೆಯಲ್ಲಿ ಗಂಗೆಯ ಧರಿಸಿರುವಾ
ಮುಡಿಯಲಿ ಚಂದ್ರನ ಮುಡಿದಿರುವಾ
ಶೂಲವು ಅವನಾ ಕರದಲ್ಲೀ..
ನಗುವಾ ಮೊಗವಾ ಕಂಡು ಸೋತೆ....{ಪಲ್ಲವಿ}

ಮಂಜಿನ ಗಿರಿಯಲಿ ಕಾಣಿಸಿದಾ
ಸೂರ್ಯನ ಕಾಂತಿಯ ನಾಚಿಸಿದಾ
ಪ್ರೇಮದಿ ನನ್ನಾ ಬಳಿ ಬಂದಾ
ಒಲಿದು ಬಂದೆ ಗಿರಿಜೆ ಎಂದ....{ಪಲ್ಲವಿ}

*********************************************************************************

ಹೊನ್ನಿನಾ ತೇರಿನಲಿ

ರಚನೆ: ಚಿ. ಉದಯಶಂಕರ್ 
ಗಾಯಕ: ಎಸ್.ಜಾನಕಿ 


ಹೊನ್ನಿನಾ ತೇರಿನಲಿ ಬಾಲ ಬಾಸ್ಕರ ಬಂದು
ಬೆಳ್ಳಿ ಬೆಟ್ಟದ ಮೇಲೆ ಬೆಳಕ ಚೆಲ್ಲಿರುವ

ಬೆಳಗಾಯಿತೇಳಯ್ಯ ಶಶಿ ಶೇಖರ
ಬೆಳಗಾಯಿತೇಳಯ್ಯ ಗಂಗಾಧರ
ನಂದಿ ಭೃಂಗಿಗಳೆಲ್ಲ ಬಾಗಿಲಲಿ ನಿಂತಿಹರು
ಋಷಿ ಮುನಿಗಳೆಲ್ಲರು ಕಾಣ ಬಂದಿಹರು
ಬೆಳಗಾಯಿತೇಳಯ್ಯ ಶಶಿ ಶೇಖರ
ಬೆಳಗಾಯಿತೇಳಯ್ಯ ಗಂಗಾಧರ

ಹೊನ್ನಿನಾ ತೇರಿನಲಿ ಬಾಲ ಬಾಸ್ಕರ ಬಂದು
ಬೆಳ್ಳಿ ಬೆಟ್ಟದ ಮೇಲೆ ಬೆಳಕ ಚೆಲ್ಲಿರುವ

ಗಿರಿರಾಜನ ಕುವರಿ ಕಾಲ ಬಳಿ ನಿಂತಿಹಳು
ಪಾದಗಳ ಪೂಜಿಸಲು ಪುಷ್ಪಗಳ ತಂದಿಹಳು
ಬೆಳಗಾಯಿತೇಳಯ್ಯ ಶಶಿ ಶೇಖರ
ಬೆಳಗಾಯಿತೇಳಯ್ಯ ಗಂಗಾಧರ

ಹೊನ್ನಿನಾ ತೇರಿನಲಿ ಬಾಲ ಬಾಸ್ಕರ ಬಂದು
ಬೆಳ್ಳಿ ಬೆಟ್ಟದ ಮೇಲೆ ಬೆಳಕ ಚೆಲ್ಲಿರುವ 

*********************************************************************************

ಅನುರಾಗ ಅರಳಿತು (1988)


ಬೀಸದಿರು ತಂಗಾಳಿ

ಚಲನ ಚಿತ್ರ: ಅನುರಾಗ ಅರಳಿತು (1988)
ನಿರ್ದೇಶನ: ಎಂ. ಎಸ್. ರಾಜಶೇಖರ್  ಸಾಹಿತ್ಯ: ಚಿ. ಉದಯಶಂಕರ್ 
ಸಂಗೀತ: ಉಪೇಂದ್ರಕುಮಾರ್ 
ಗಾಯನ: ವಾಣಿ ಜಯರಾಂ
ನಟನೆ: ರಾಜ್ ಕುಮಾರ್, ಗೀತಾ, ಮಾಧವಿ 


ಬೀಸದಿರು ತಂಗಾಳಿ ತಂಪನ್ನು ಚೆಲ್ಲಾಡಿ
ಝುಮ್ಮೆಂದು ಮೈಯನ್ನು ಸೋಕುತ್ತ ಕಾಡುತ್ತ
ಬೀಸದಿರು ತಂಗಾಳಿ ತಂಪನ್ನು ಚೆಲ್ಲಾಡಿ
ಝುಮ್ಮೆಂದು ಮೈಯನ್ನು ಸೋಕುತ್ತ ಕಾಡುತ್ತ.. ಬೀಸದಿರು

ಕಾಡಲ್ಲಿ ಮೊಗ್ಗೊಂದು ಅರಳಿ ಹೂವಾದರೇನಾಯಿತು
ಮುಡಿಯೋರು ಯಾರೆಂದು ಕಾಣೆ
ಧೂಳಲ್ಲಿ ಹೊರಳಾಡಿತು
ಅಂಥ ಹೂವಂತೆ ಆದೆ ನಾನಿಂದು
ಕಣ್ಣೀರು ಬಂದಾಗಲೆ
ಹೊಸ ಆಸೆಗಳ ಸವಿ ತೋರಿಸುತ
ಹೊಸ ಆಸೆಗಳ ಸವಿ ತೋರಿಸುತ
ಸಂತೋಷ ತುಂಬುತ್ತ ಸೋಕುತ್ತ ಕಾಡುತ್ತ

ಬೀಸದಿರು ತಂಗಾಳಿ ತಂಪನ್ನು ಚೆಲ್ಲಾಡಿ
ಝುಮ್ಮೆಂದು ಮೈಯನ್ನು ಸೋಕುತ್ತ ಕಾಡುತ್ತ  ... ಬೀಸದಿರು

ಹೂವಂಥ ಈ ಮೆತ್ತೆ ಇಂದು ಮುಳ್ಳಂತೆ ಏಕಾಯಿತು
ಆ ಚಂದ್ರನ ಕಾಂತಿ ಸೋಕಿ  ಮೈಯೆಲ್ಲ ಬಿಸಿಯಾಯಿತು
ಒಂಟಿ ಬಾಳಿಂದು ಸಾಕು ಸಾಕೆಂದು
ನಾನಿನ್ದು ನೊಂದಾಗಲೆ
ಚಳಿ ತುಂಬುತಲಿ ಈ ರಾತ್ರಿಯಲಿ   (ಉಶ್..)
ಚಳಿ ತುಂಬುತಲಿ ಈ ರಾತ್ರಿಯಲಿ ಸಂಗಾತಿ 
ಎಲ್ಲೆಂದು ಕೇಳುತ್ತ ಕಾಡುತ್ತಾ

ಬೀಸದಿರು ತಂಗಾಳಿ ತಂಪನ್ನು ಚೆಲ್ಲಾಡಿ
ಝುಮ್ಮೆಂದು ಮೈಯನ್ನು ಸೋಕುತ್ತ ಕಾಡುತ್ತ..  ಬೀಸದಿರು

*********************************************************************************

ಸಾರ್ಥಕವಾಯಿತು

ಚಿತ್ರಗೀತೆ : ಚಿ. ಉದಯಶಂಕರ್ 
ಗಾಯನ: ಡಾ ರಾಜ್ ಕುಮಾರ್ 


ಸಾರ್ಥಕವಾಯಿತು
ಸಾರ್ಥಕವಾಯಿತು ಚಿನ್ನಾ ನಿನ್ನಾ ಹೊನ್ನಾ ನುಡಿ ಕೇಳಿ ಈಗ
ಸಾರ್ಥಕವಾಯಿತು ಚಿನ್ನಾ ನಿನ್ನಾ ಹೊನ್ನಾ ನುಡಿ ಕೇಳಿ ಈಗ
ಸಾರ್ಥಕವಾಯಿತು

ನಿನ್ನೀ ಕ೦ಗಳು ನೈದಿಲೆಯ೦ತೆ   
ಸು೦ದರ ಮೊಗವು ತಾವರೆಯ೦ತೆ
ಮು೦ಗುರುಳೆನೋ ದು೦ಬಿಗಳ೦ತೆ
ಒಳಗೇನಿದೆಯೊ ಎ೦ಬುದು ಚಿ೦ತೆ

ಸಾರ್ಥಕವಾಯಿತು ಚಿನ್ನಾ ನಿನ್ನಾ ಹೊನ್ನಾ ನುಡಿ ಕೇಳಿ ಈಗ 
ಸಾರ್ಥಕವಾಯಿತು

ಆ ಸಾವಿತ್ರಿ ನಿನ್ನ ನೋಡಿದರೆ ಎದೆಯೇ ಓಡೆದು ಸಾಯುತಳಿದ್ದಳು
ಪತಿ ಭಕ್ತಿಯಲಿ ನಿನಗೆಣೆಯಿಲ್ಲ ಓ ಕುಲ ನಾರಿ ಕುಬೇರನ ಕುವರಿ
ಸಾರ್ಥಕವಾಯಿತು ಚಿನ್ನಾ ನಿನ್ನಾ ಹೊನ್ನಾ ನುಡಿ ಕೇಳಿ ಈಗ  ಸಾರ್ಥಕವಾಯಿತು

ಕವಿ ವಾಲ್ಮೀಕಿ ಇದ್ದರೆ ಈಗ ಹೊಸ ಕಾವ್ಯವನೆ ಬರೆಯುತಲಿದ್ದ
ಭಾರತ ಬರೆದ ವ್ಯಾಸರು ನಿನ್ನ ಕ೦ಡರೆ ಕಾಡಿಗೆ ಓಡುತಲಿದ್ದರು
ಸಾರ್ಥಕವಾಯಿತು ಚಿನ್ನಾ ನಿನ್ನಾ ಹೊನ್ನಾ ನುಡಿ ಕೇಳಿ ಈಗ
ಸಾರ್ಥಕವಾಯಿತು ಚಿನ್ನಾ ನಿನ್ನಾ ಹೊನ್ನಾ ನುಡಿ ಕೇಳಿ ಈಗ  ಸಾರ್ಥಕವಾಯಿತು

*********************************************************************************

ನೀ ನಡೆದರೆ ಸೊಗಸು

ಚಿತ್ರಗೀತೆ : ಚಿ. ಉದಯಶಂಕರ್ 
ಗಾಯನ: ಡಾ ರಾಜ್ ಕುಮಾರ್ 


ನೀ ನಡೆದರೆ ಸೊಗಸು...ನೀ ನಡೆದರೆ ಸೊಗಸು...
ನೀ ನಿಂತರೆ ಸೊಗಸು... ನಕ್ಕರೆ ಸೊಗಸು.., ಕೋಪದಿ ಸಿಡಿದರೂ ಸೊಗಸು...

ನೀ ನಡೆದರೆ ಸೊಗಸು...

ಕಣ್ಗಳ ಕಾಡುವ ಸೊಗಸು.. ಜೋಡಿಯ ಬೇಡುವ ವಯಸು... -೨
ಹೆಣ್ಣೇ ತೋಳಿಂದ ಬಳಸಿ..,ಹೆಣ್ಣೇ...ತೋಳಿಂದ ಬಳಸಿ,
ನನ್ನನು ಕುಣಿಸು..ಕುಣಿಸು... ನೀ ನಡೆದರೆ ಸೊಗಸು...
ನಿನ್ನನು ನೋಡಿದ ಮನಸು... ಕಂಡಿತು ಸಾವಿರ ಕನಸು... -೨
ಚಿನ್ನಾ ನಾ ತಾಳೆನು ವಿರಹ..ಚಿನ್ನಾ..,ನಾ ತಾಳೆನು ವಿರಹ...
ಬೇಗನೆ ಪ್ರೀತಿಸು.., ಪ್ರೀತಿಸು..ನೀ ನಡೆದರೆ ಸೊಗಸು...-೨

*********************************************************************************

ಗಂಗಾ ಯಮುನಾ ಸಂಗಮ

ರಚನೆ: ಚಿ. ಉದಯಶಂಕರ್  
ಗಾಯಕ: ಡಾ. ರಾಜಕುಮಾರ್, ಎಸ್. ಜಾನಕಿ 

ಆಹಾ.... ಲಾಲಾಲಲ...  ಅಹಹ...  ಒಹೋ...  ಒಹೋ 
ಗಂಗಾ ಯಮುನಾ ಸಂಗಮ 
ಗಂಗಾ ಯಮುನಾ ಸಂಗಮ
ಈ ಪ್ರೇಮ, ಕೆನೆ ಹಾಲು ಜೇನು ಸೇರಿದಂತೆ ಈ ಬದುಕು
ಕೆನೆ ಹಾಲು ಜೇನು ಸೇರಿದಂತೆ ಈ ಬದುಕು
ಗಂಗಾ ಯಮುನಾ ಸಂಗಮ
ಈ ಪ್ರೇಮ, ಕೆನೆ ಹಾಲು ಜೇನು ಸೇರಿದಂತೆ ಈ ಬದುಕು
ಕೆನೆ ಹಾಲು ಜೇನು ಸೇರಿದಂತೆ ಈ ಬದುಕು
ಹೆ: ಅನುದಿನ ಸಂತೋಷ, ಅನುದಿನ ಉಲ್ಲಾಸ
      ಗೆಳೆಯ ನಿನ್ನ ಸೇರಿ ಪ್ರೇಮದ ಆವೇಷ
ಗಂ: ಪ್ರಣಯದ ಕಣ್ಣೋಟ, ಸರಸದ ಚೆಲ್ಲಾಟ
     ದಿನವೂ ನೋಡಿ ನೋಡಿ ಒಲವಿನ ತುಂಟಾಟ
ಹೆ: ಅರಿತೂ ಬೆರೆತೂ
ಗಂ: ಕೆನೆ ಹಾಲು ಜೇನು ಸೇರಿದಂತೆ ಈ ಬದುಕು
ಹೆ: ಕೆನೆ ಹಾಲು ಜೇನು ಸೇರಿದಂತೆ ಈ ಬದುಕು
ಗಂ: ಗಂಗಾ ಯಮುನಾ ಸಂಗಮ
ಹೆ: ಗಂಗಾ ಯಮುನಾ ಸಂಗಮ
ಜೊ: ಈ ಪ್ರೇಮ
ಗಂ: ಬಾಳಲಿ ಇನ್ನೆಂದು, ಚಿಂತೆಯ ಮಾತಿಲ್ಲ
       ಗೆಳತೀ ಏನೇ ಕೇಳು, ಕೊಡುವೆ ನಾನೆಲ್ಲ
ಹೆ: ಕೇಳೆನು ಏನನ್ನು, ಬಯಸೆನು ಇನ್ನೇನು
     ಗೆಳೆಯ ಎಂದೂ ಹೀಗೆ ಪ್ರೀತಿಸು ನನ್ನನು
ಗಂ: ನಿನ್ನಾ ಸೇರೀ
ಹೆ: ಕೆನೆ ಹಾಲು ಜೇನು ಸೇರಿದಂತೆ ಈ ಬದುಕು
ಗಂ: ಕೆನೆ ಹಾಲು ಜೇನು ಸೇರಿದಂತೆ ಈ ಬದುಕು
ಹೆ: ಗಂಗಾ ಯಮುನಾ ಸಂಗಮ
ಗಂ: ಗಂಗಾ ಯಮುನಾ ಸಂಗಮ
ಜೊ: ಈ ಪ್ರೇಮ ಕೆನೆ ಹಾಲು ಜೇನು ಸೇರಿದಂತೆ ಈ ಬದುಕು
       ಕೆನೆ ಹಾಲು ಜೇನು ಸೇರಿದಂತೆ ಈ ಬದುಕು

*********************************************************************************

ಶ್ರೀಕಂಠ ವಿಷಕಂಠ

ರಚನೆ: ಚಿ. ಉದಯಶಂಕರ್ 
ಗಾಯಕ: ಡಾ. ರಾಜಕುಮಾರ್ 


ಶ್ರೀಕಂಠ ವಿಷಕಂಠ.... ಶ್ರೀಕಂಠ ವಿಷಕಂಠ
ಲೋಕವನುಳಿಸಲು ವಿಷವನು ಕುಡಿದ ನಂಜುಂಡೇಶ್ವರನೇ
ಲೋಕವನುಳಿಸಲು ವಿಷವನು ಕುಡಿದ ನಂಜುಂಡೇಶ್ವರನೇ
ಗತಿ ನೀನೆಂದರೆ ಓಡುತ ಬರುವ ಕರುಣಾಸಾಗರನೆ
ಗತಿ ನೀನೆಂದರೆ ಓಡುತ ಬರುವ ಕರುಣಾಸಾಗರನೆ 
ಶ್ರೀಕಂಠ ವಿಷಕಂಠ....     ಶ್ರೀಕಂಠ ವಿಷಕಂಠ
ಹರಿಯುವ ನದಿಯಲಿ ಕಲರವ ನಾದ ಕೂಡ ಶಿವ ಶಿವ ಎನ್ನುತಿದೇ
ಅರಳಿದ ಸುಮದಲಿ ನಲಿಯುವ ಭ್ರಮರವು ಶಿವ ನಾಮ ಹಾಡುತಿದೆ
ಬೀಸುವ ಗಾಳಿಯು ಪರಿಮಳ ಚೆಲ್ಲುತ ನಿನ್ನನೆ ಸ್ಮರಿಸುತಿದೇ 
ಬೀಸುವ ಗಾಳಿಯು ಪರಿಮಳ ಚೆಲ್ಲುತ ನಿನ್ನನೆ ಸ್ಮರಿಸುತಿದೇ
ಶ್ರೀಕಂಠ ವಿಷಕಂಠ....     ಶ್ರೀಕಂಠ ವಿಷಕಂಠ
ಸಾವಿರ ಜನುಮವೆ ಬಂದರು ಹೀಗೆ ನಿನ್ನ ಸನ್ನಿಧಿಯಲ್ಲಿ ಇರಿಸೂ
ಉಸಿರಿನ ಉಸಿರಲು ತಂದೆ ಎಂದು ನಾಮಾವನೂ ಬೆರೆಸು
ಕತ್ತಲಲಿರುವೆ ನೆಮ್ಮದಿ ತುಂಬಿ ಕೈಹಿಡಿದು ನೆಡೆಸು 
ಕತ್ತಲಲಿರುವೆ ನೆಮ್ಮದಿ ತುಂಬಿ ಕೈಹಿಡಿದು ನೆಡೆಸು
ಶ್ರೀಕಂಠ ವಿಷಕಂಠ....     ಶ್ರೀಕಂಠ ವಿಷಕಂಠ
ಲೋಕವನುಳಿಸಲು ವಿಷವನು ಕುಡಿದ ನಂಜುಂಡೇಶ್ವರನೇ
ಗತಿ ನೀನೆಂದರೆ ಓಡುತ ಬರುವ ಕರುಣಾಸಾಗರನೆ 
ಶ್ರೀಕಂಠ ವಿಷಕಂಠ....     ಶ್ರೀಕಂಠ ವಿಷಕಂಠ

*********************************************************************************

ಅಣ್ಣಾಬಾಂಡ್ (2012)

ಏನೆಂದು ಹೆಸರಿಡಲಿ

ಚಲನ ಚಿತ್ರ: ಅಣ್ಣಾಬಾಂಡ್ (2012)
ನಿರ್ದೇಶನ: ಸೂರಿ 
ಸಂಗೀತ : ವಿ.ಹರಿಕೃಷ್ಣ  
ಸಾಹಿತ್ಯ : ಜಯಂತ ಕಾಯ್ಕಿಣಿ  
ಗಾಯನ : ಸೋನು ನಿಗಮ್, ಶ್ರೇಯಾ ಘೋಷಾಲ್  
ನಟನೆ: ಪುನೀತ್ ರಾಜ್ ಕುಮಾರ್, ನಿಧಿ ಸುಬ್ಬಯ್ಯ, ಪ್ರಿಯಾ ಮಣಿ


ಏನೆಂದು ಹೆಸರಿಡಲಿ ಈ ಚಂದ ಅನುಭವಕೆ...
ಈಗಂತೂ ಹೃದಯದಲಿ ನಿಂದೇನೆ ಚಟುವಟಿಕೆ...
ಈ ಮೋಹದ ರೂವಾರಿ ನೀನಲ್ಲವೇ ..  
ಇನ್ನೇತಕೆ ಬೇಜಾರು ನಾನಿಲ್ಲವೇ...

ಏನೆಂದು ಹೆಸರಿಡಲಿ ಈ ಚಂದ ಅನುಭವಕೆ...
ಈಗಂತೂ ಹೃದಯದಲಿ ನಿಂದೇನೆ ಚಟುವಟಿಕೆ...

ಜಾತ್ರೆಲೂ ಸಂತೆಲೂ ನೀ ಕೈಯ ಬಿಡದಿರೂ..
ಆಗಾಗ ಕಣ್ಣಲ್ಲಿ ಸಂದೇಶ ಕೊಡುತಿರು..
ಅದೇ ಪ್ರೀತಿ ಬೇರೆ ರೀತಿ... ಹೆಂಗಂತ ಹೇಳೋದೂ...
ಇದೆ ರಾತ್ರೀ ಕಳೆದೇ ನಿನ್ನ ಬೆಳಕಿಗೇ ಕಾದೂ...
ಈ ಸ್ವಪ್ನದ ಸಂಚಾರ ಸಾಕಲ್ಲವೇ...
ಇನ್ನೇತಕೇ ಬೇಜಾರು ನಾನಿಲ್ಲವೇ...

ಏನೆಂದು ಹೆಸರಿಡಲಿ ಈ ಚಂದ ಅನುಭವಕೆ...
ಈಗಂತೂ ಹೃದಯದಲಿ ನಿಂದೇನೆ ಚಟುವಟಿಕೆ...

ಹೊತ್ತಿಲ್ಲ ಗೊತ್ತಿಲ್ಲ ಬೆನ್ನಲ್ಲೇ ಬರುವೆ ನಾ..
ನೀನಿತ್ತ ಮುತ್ತನ್ನು ಇನ್ನೆಲ್ಲಿ ಬಡತನ
ಗಸ್ತು ಹೊಡೆವ ಚಂದ್ರ ಬಂದ ಕೇಳುತ್ತ ಮಾಮೂಲು
ಕೊಟ್ಟು ಕಳಿಸೋಣ ಒಂದು ಕವಿತೆಯ ಸಾಲು
ನಿನ್ನಾಸೆಯು ನಂದನೂ ಹೌದಲ್ಲವೇ
ಇನ್ನೇತಕೆ ಬೇಜಾರು ನಾನಿಲ್ಲವೇ

ಏನೆಂದು ಹೆಸರಿಡಲಿ ಈ ಚಂದ ಅನುಭವಕೆ...
ಈಗಂತೂ ಹೃದಯದಲಿ ನಿಂದೇನೆ ಚಟುವಟಿಕೆ...

*********************************************************************************

ತುಂಬಾ ನೋಡ್ಬೇಡಿ

ಸಾಹಿತ್ಯ : ಯೋಗರಾಜ್ ಭಟ್   
ಗಾಯನ :ವಿ.ಹರಿಕೃಷ್ಣ 


ತುಂಬಾ ನೋಡ್ಬೇಡಿ ಲವ್-ಉ ಆಯ್ತದೇ
ಲವ್-ಉ  ಮಾಡ್ಬೇಡಿ ನೋವ್ವು ಆಯ್ತದೇ
ಹೂವ್ ಕೊಡ್ಬೇಡಿ ಮದುವೇ ಆಯ್ತದೇ
ಟಡಾಣ್ ಟಾನ್ ಟ ಡಾಂ

ಗಿಫ್ಟ್-ಉ ಕೊಡಬೇಡಿ ಖರ್ಚುಆಯ್ತದೇ
ಲಿಫ್ಟ್-ಉ ಕೊಡಬೇಡಿ ಕಷ್ಟ ಆಯ್ತದೇ
ಜಾಸ್ತಿ ನಗಬೇಡಿ ತುಟಿ ನೋಯ್ತದೆ
ಟಡಾಣ್ ಟಾನ್ ಟ ಡಾಂ 

ಬರುವಾಗ ಬೆತ್ತಲೆ... ಹೋಗುವಾಗ ಬೆತ್ತಲೇ... 
ಸೆಂಟ್ರಲ್ಲಿ ಹೆಣ್ಣು ಹೊನ್ನು ಮಣ್ಣು... 
ಯಾಕಲೇ..  ಯಾಕಲೇ.. ಎತ್ತಲೇ ಎತ್ತಲೇ 

ತುಂಬಾ ನೋಡ್ಬೇಡಿ ಲವ್-ಉ ಆಯ್ತದೇ
ಲವ್-ಉ  ಮಾಡ್ಬೇಡಿ ನೋವ್ವು ಆಯ್ತದೇ
ಹೂವ್ ಕೊಡ್ಬೇಡಿ ಮದುವೇ ಆಯ್ತದೇ
ಟಡಾಣ್ ಟಾನ್ ಟ ಡಾಂ 

ಕನ್ನಡಿಗೆ ನಾನ್ ಕಣ್ಣು ಹೊಡಿತೀನಿ 
ಲೈಟ್-ಉ ಕಂಬಕೆ ಡಿಕ್ಕಿ ಹೊಡಿತೀನಿ 
ಘಂಟೆಗೆ ಒಂದು ಸಲ ತಲೆ ಬಾಚ್ತಿನಿ  
ಟಡಾಣ್ ಟಾನ್ ಟ ಡಾಂ 
ಅವಳು ಕಂಡರೇ ಬ್ರೈಟ್ ಆಯ್ತೀನಿ 
ಕಾಣದಿದ್ದರೇ ಡಲ್ ಹೊಡೀತೀನಿ 
ಖಾಲಿ ರೋಡಿಗೆ ಕಲ್ಲು ಹೊಡಿತೀನಿ  
ಟಡಾಣ್ ಟಾನ್ ಟ ಡಾಂ 
ಪ್ರಿಯಾಮಣಿ ಯಮ್ಮಾರಿ ಒಮ್ಮೆ ತಿರುಗಿ ನೋಡಿದರೆ
ಹೊಟ್ಟೆ ಒಳಗೆ ಚಿಟ್ಟೆನಾ ಬಿಟ್ಟಂಗ್ ಆಯ್ತದೇ
ಇವಳೊಮ್ಮೆ ನಕ್ಕರೆ ಫ್ರೀ ಸೈಟ್-ಉ ಸಿಕ್ಕರೇ
ಸೆಂಟ್ರಲ್ಲಿ ನಾನು ತಾಜುಮಹಲು
ಕಟ್ಟಲೇ .. ಕಟ್ಟಲೇ ಎತ್ತಲೇ..  ಎತ್ತಲೇ

ತುಂಬಾ ನೋಡ್ಬೇಡಿ ಲವ್-ಉ ಆಯ್ತದೇ
ಲವ್-ಉ  ಮಾಡ್ಬೇಡಿ ನೋವ್ವು ಆಯ್ತದೇ
ಹೂವ್ ಕೊಡ್ಬೇಡಿ ಮದುವೇ ಆಯ್ತದೇ
ಟಡಾಣ್ ಟಾನ್ ಟ ಡಾಂ 

ಕೆಲಸಕ್ ಹೋದರೆ ಸಂಬಳ ಕೊಡತಾರೆ
ಬ್ಯಾಂಕಿಗೆ ಹೋದರೆ ಸಾಲ್ ಕೊಡತಾರೇ
ಪ್ರಿತಿಯೊಳಗಡೆ ಏನು ಸಿಗತದೆ 
ಟಡಾಣ್ ಟಾನ್ ಟ ಡಾಂ
ನಗು ಬರ್ತದೆ.. ಅಳು ಬರ್ತದೆ
ಎಚ್ಚರ ಇದ್ದರೂ ಕನಸು ಬೀಳತದೆ
ಕುಣಿಯದ್ದಿದ್ದರೂ ಕಾಲು ನೋಯ್ತದೇ
ಟಡಾಣ್ ಟಾನ್ ಟ ಡಾಂ
ಲವೂ ಕನ್ಫರ್ಮ್ ಆಗದೇನೆ 
ಫ್ರೆಂಡ್ಸು ಹತ್ರ ಮಾತಾಡಿ  ಫೋನಿನಲ್ಲಿ ಕರೆನ್ಸಿ ಖಾಲಿ ಆಯ್ತದೇ 
ಹೇಳ್ತಾನೆ ಹೋದರೇ ಮುಗಿಯಲ್ಲಾ ಮಾನ್ಯರೇ 
ಸೆಂಟ್ರಲ್ಲಿ ನನ್ನ ಹುಡುಗಿ ನಂಗೆ ಬೈತಾಳೆ ಬೈತಾಳೆ..  ಎತ್ತಲೇ..  ಎತ್ತೊಲೇ... 

ತುಂಬಾ ನೋಡ್ಬೇಡಿ ಲವ್-ಉ ಆಯ್ತದೇ
ಲವ್-ಉ  ಮಾಡ್ಬೇಡಿ ನೋವ್ವು ಆಯ್ತದೇ
ಹೂವ್ ಕೊಡ್ಬೇಡಿ ಮದುವೇ ಆಯ್ತದೇ
ಟಡಾಣ್ ಟಾನ್ ಟ ಡಾಂ
ಗಿಫ್ಟ್-ಉ ಕೊಡಬೇಡಿ ಖರ್ಚುಆಯ್ತದೇ
ಲಿಫ್ಟ್-ಉ ಕೊಡಬೇಡಿ ಕಷ್ಟ ಆಯ್ತದೇ
ಜಾಸ್ತಿ ನಗಬೇಡಿ ತುಟಿ ನೋಯ್ತದೆ
ಟಡಾಣ್ ಟಾನ್ ಟ ಡಾಂ 
ಬರುವಾಗ ಬೆತ್ತಲೆ... ಹೋಗುವಾಗ ಬೆತ್ತಲೇ... 
ಸೆಂಟ್ರಲ್ಲಿ ಹೆಣ್ಣು ಹೊನ್ನು ಮಣ್ಣು... 
ಯಾಕಲೇ..  ಯಾಕಲೇ.. ಎತ್ತಲೇ ಎತ್ತಲೇ 

*********************************************************************************

ಬೋಣಿ ಆಗದ ಹೃದಯಾನ


ಸಾಹಿತ್ಯ : ಯೋಗರಾಜ್ ಭಟ್ 
ಗಾಯನ : ಟಿಪ್ಪು  


ಬೋಣಿ ಆಗದ ಹೃದಯಾನ ಹೂವಿನಂಗಡಿ ಮಾಡ್ಕೊಂಡು 
ಕಸ್ಟಮರು ಹುಡುಕುವ ಕ್ಯಾಮೆ ಬೇಕಿತ್ತ
ಅಪ್ಪಿ ತಪ್ಪಿ ನನ್ನನ್ನು ಇವ್ಳು ಅಪ್ಪಿಕೊಂಡಾಗ 
ಒಳ್ಳೆವ್ನಾಗೆ ಉಳ್ಕೊಳ್ಳೊ ಕ್ಯಾಮೆ ಬೇಕಿತ್ತ
ಓಡಿ ಹೋಗೋ ಹೃದಕ್ಕೊಂದು ಬ್ರೇಕು ಬೇಕಿತ್ತ
ಇವ್ಳಾ ನೋಡೋದಕ್ಕೆ ಒಂದು ಎಕ್ಸ್‌ ಟ್ರಾ ಕಣ್ಣು ಬೇಕಿತ್ತ
ಚೆನ್ನಾಗಿದ್ದೆ ನಾನು ಪ್ರೀತಿ ಮಾಡ್ಲೇ ಬೇಕಿತ್ತ 

ಬೋಣಿ ಆಗದ ಹೃದಯಾನ ಹೂವಿನಂಗಡಿ ಮಾಡ್ಕೊಂಡು 
ಕಸ್ಟಮರು ಹುಡುಕುವ ಕ್ಯಾಮೆ ಬೇಕಿತ್ತ 

ತಂಗಾಳಿನ ತಬ್ಕೊಂಡು ನೂರು ಮುತ್ತು ಕೊಟ್ಕೊಂಡು 
ಮೈಕೈ ನೋವು ಮಾಡಿಕೊಂಡ ನಾನು ಲೂಸ
ಹಿಂಗೆ ಇದ್ದ್ರೆ ಯೂಸಾಗಲ್ಲ ನಾಲ್ಕು ಪೈಸ
ಪ್ರೀತಿಯೊಂದು ತಣ್ಣೀರು, ಜಾಸ್ತಿ ಆದ್ರೆ ಬಿಸಿನೀರು, 
ಕುಡಿದು ನೋಡ್ಲ ಸ್ನಾನ ಮಾಡ್ಲ ಯಾರಾನ ಹೇಳಿ
ವಯಸ್ಸಿನ್ನಲ್ಲಿ ಕಂಫ್ಯೂಷನ್ನು ತುಂಬ ಮಾಮೂಲಿ
ಒಂಟಿ ಪಿಟೀಲು ಅಳ್ತಾ ಇದ್ರೆ ಎಂಥ ಸಂಗೀತ
ಬೇಡ ಅಂದ್ರು ಬೀಳೊ ಕನಸಿಗೊಂದು ಕ್ಯಾಮರ ಬೇಕಿತ್ತ
ಚೆನ್ನಾಗಿದ್ದೆ ನಾನು ಪ್ರೀತಿ ಮಾಡ್ಲೆಬೇಕಿತ್ತ 

ಬೋಣಿ ಆಗದ ಹೃದಯಾನ ಹೂವಿನಂಗಡಿ ಮಾಡ್ಕೊಂಡು 
ಕಸ್ಟಮರು ಹುಡುಕುವ ಕ್ಯಾಮೆ ಬೇಕಿತ್ತ 

ಗಂಡು ನವಿಲಿಗೆ ಮಾತ್ರನೇ, ಪುಕ್ಕ ಕೊಟ್ಟ ಭಗವಂತ, 
ಕುಣಿಯೋ ಕೆಲಸ ಗಂಡಸರಿಗೆ ಹೇಳಿ ಮಾಡ್ಸಿದ್ದು
ಹೆಣ್ಣು ಮಕ್ಕಳು ಕುಣಿಸೋದಕ್ಕೆ ವರ್ಲ್ಡ್ ಫೇಮಸ್ಸು
ಫೀಲಿಂಗಲ್ಲಿ ಒಮ್ಮೊಮ್ಮೆ, ವೈನ್ ಶಾಪಿನ ಮುಂದೇನೆ, 
ನಡ್ಕೊಂಡ್ ಹೋದ್ರು ಹಿಡ್ಕೊತಾರೆ ನೈಟು ಪೋಲೀಸು
ಯಾವಾನಿಗೆ ಬೇಕು ಸ್ವಾಮಿ ಪ್ರೀತಿ ತಪಸ್ಸು
ಎಲ್ಲ ಇದ್ದ್ರು ಕೂಡ ನಮ್ಮದು ಖಾಲಿ ಏಕಾಂತ
ಇನ್ನು ಬಿಟ್ಟ್ರೆ ಶುರುವಾಗುತ್ತೆ ನಮ್ಮ್ಮ ಪೋಲಿ ವೇದಾಂತ
ಚೆನ್ನಾಗಿದ್ದೆ ನಾನು ಪ್ರೀತಿ ಮಾಡ್ಲೆಬೇಕಿತ್ತ
ಸೂರ್ಯ ಮುಳುಗೋ ಟೈಂ ಅಲ್ಲಿ ಇವಳು ಕುಂತು ಹೋದಂತ 
ಬೆಂಚು ಮುಟ್ಟಿ ನೋಡುವ ಕ್ಯಾಮೆ ಬೇಕಿತ್ತ

*********************************************************************************

ನಾಗರಹೊಳೆ (1977)

ಇಲ್ಲೇ ಸ್ವರ್ಗ ಇಲ್ಲೇ ನರಕ

ಚಲನ ಚಿತ್ರ: ನಾಗರಹೊಳೆ (1977)
ನಿರ್ದೇಶನ: ಎಸ್.ವಿ. ರಾಜೇಂದ್ರ ಸಿಂಗ್ ಬಾಬು 
ಸಂಗೀತ : ಚೆಲ್ಲಾಪಿಳ್ಳ ಸತ್ಯಂ
ಸಾಹಿತ್ಯ : ಚಿ.ಉದಯಶಂಕರ್ 
ಗಾಯನ : ರವಿ 
ನಟನೆ: ವಿಷ್ಣುವರ್ಧನ್, ಭಾರತಿ


ಇಲ್ಲೇ ಸ್ವರ್ಗ ಇಲ್ಲೇ ನರಕ  ಮೇಲೇನಿಲ್ಲ ಸುಳ್ಳು. 
ಹುಟ್ಟು ಸಾವು ಎರಡರ ಮಧ್ಯೆ ಮೂರು ದಿನದ ಬಾಳು.

ಇಲ್ಲೇ ಸ್ವರ್ಗ ಇಲ್ಲೇ ನರಕ ಮೇಲೇನಿಲ್ಲ ಸುಳ್ಳು. 
ಹುಟ್ಟು ಸಾವು ಎರಡರ ಮಧ್ಯೆ ಮೂರು ದಿನದ ಬಾಳು
 ಹೇ.. ಮೂರು ದಿನದ ಬಾಳು.  

ಕಪ್ಪು ಬಿಳುಪು ಬಣ್ಣ ಹೇಗೊ ಹಗಲು ರಾತ್ರಿ ಹಾಗೆ 
ನಗುವು ಅಳುವು ಎರಡು ಉಂಟು ಬೇಡ ಅಂದರೆ ಹೇಗೆ? 
ಬಂದಾಗ ನಗುವೆ ಹೋದಾಗ ಮಾತ್ರ ಕಣ್ಣೀರೇಕೊ ಕಾಣೆ? 
ಕಸಿದುಕೊಳ್ಳುವ ಹಕ್ಕು ಎಂದು ಕೊಟ್ಟೋನ್ಗೇನೇ ತಾನೆ.

ಇಲ್ಲೇ ಸ್ವರ್ಗ ಇಲ್ಲೇ ನರಕ ಮೇಲೇನಿಲ್ಲ ಸುಳ್ಳು. 
ಹುಟ್ಟು ಸಾವು ಎರಡರ ಮಧ್ಯೆ ಮೂರು ದಿನದ ಬಾಳು
ಹೇ.. ಮೂರು ದಿನದ ಬಾಳು.   

ಬಿಸಿಲಿಗೆ ಕರಗೋ ಮಂಜೇನಲ್ಲ ಕಷ್ಟ ನಷ್ಟ ಎಲ್ಲ 
ಎದುರಿಸಬೇಕು ಧೈರ್ಯದಿಂದ ಬೇರೆ ದಾರಿಯಿಲ್ಲ 
ಬೆಟ್ಟ ಕೊರೆದು ದಾರಿ ಮಾಡಿ ನೀರು ನುಗ್ಗೋ ಹಾಗೆ 
ಮುಂದೆ ನುಗ್ಗಿ ಹೋದ್ರೆ ತಾನೆ ದಾರಿ ಕಾಣೋದ್ ನಂಮ್ಗೆ 

ಇಲ್ಲೇ ಸ್ವರ್ಗ ಇಲ್ಲೇ ನರಕ  ಮೇಲೇನಿಲ್ಲ ಸುಳ್ಳು. 
ಹುಟ್ಟು ಸಾವು ಎರಡರ ಮಧ್ಯೆ ಮೂರು ದಿನದ ಬಾಳು
ಹೇ.. ಮೂರು ದಿನದ ಬಾಳು.

*********************************************************************************

ಈ ನೋಟಕೆ


ಸಾಹಿತ್ಯ : ಚಿ. ಉದಯಶಂಕರ್, 
ಗಾಯನ : ವಿಷ್ಣುವರ್ಧನ್, ಭಾರತಿ 


ಈ ನೋಟಕೆ ಮೈ ಮಾಟಕೆ ನಾ ಸೋತೆ ಈ ಸ್ನೇಹಕೆ 
ಬಿಡಲಾರೆ ಬಳಿ ಬಾರೇ ಈ ದೂರ ಇನ್ನೇತಕೆ 
ಈ ನೋಟಕೆ ಸವಿಮಾತಿಗೆ ನಾ ಸೋತೆ 
ಈ ಸ್ನೇಹಕೆ ನಿನಗಾಗಿ ಹೊಸದಾಗಿ ನಾ ತಂದೆ  ಈ ಕಾಣಿಕೆ 

ನಿಜವಾಯ್ತು ನಾ ಕಂಡ ನಿನ್ನಾ ತೋಳಿಂದ ಬಳಸಿದ ನನ್ನ 
ಹೇ ಬಿಡಲಾರೆ ಇನ್ನೆಂದು ನಿನ್ನಾ ನಿನಗಿಂತ ಯಾರಿಲ್ಲ ಚಿನ್ನ 
ಹೊಸದಾದ ಆನಂದ ನಿನ್ನಿಂದ ನಾ ಕಂಡೆನು 

ಈ ನೋಟಕೆ ಮೈ ಮಾಟಕೆ ನಾ ಸೋತೆ ಈ ಸ್ನೇಹಕೆ 

ಎಲ್ಲಿಂದಲೋ ನೀನು ಬಂದೆ ಅನುರಾಗ ತಾನೇನು ತಂದೆ 
ನನಗಾಗಿ ಏನೇನು ತಂದೆ ನಿನ್ನಲ್ಲಿ ನೂರಾಸೆ ತಂದಿ 
ಹೇ.. ನನ್ನನ್ನೇ ನಾ ಮರೆತು ನಿನ್ನಲ್ಲಿ ಒಂದಾದನೇ 

ಈ ನೋಟಕೆ ಮೈ ಮಾಟಕೆ ನಾ ಸೋತೆ ಈ ಸ್ನೇಹಕೆ 
ಬಿಡಲಾರೆ ಬಳಿ ಬಾರೇ ಈ ದೂರ ಇನ್ನೇತಕೆ 
ಈ ನೋಟಕೆ ಸವಿಮಾತಿಗೆ ನಾ ಸೋತೆ 
ಈ ಸ್ನೇಹಕೆ ನಿನಗಾಗಿ ಹೊಸದಾಗಿ ನಾ ತಂದೆ  ಈ ಕಾಣಿಕೆ

*********************************************************************************

ಅಪರಿಚಿತ (1978)


ಈ ನಾಡ ಅಂದ

ಚಲನ ಚಿತ್ರ: ಅಪರಿಚಿತ (1978)
ನಿರ್ದೇಶನ:  ಕಾಶೀನಾಥ್ 
ಸಾಹಿತ್ಯ: ಪಿ. ರಾಮದಾಸ್ ನಾಯ್ಡು 
ಸಂಗೀತ: ಎಲ್.ವೈದ್ಯನಾಥನ್ 
ಗಾಯಕರು: ಎಸ್.ಪಿ. ಬಾಲಸುಬ್ರಹ್ಮಣ್ಯಂ 
ನಟನೆ: ಸುರೇಶ್ ಹೆಬ್ಳಿಕರ್, ಶೋಭಾ, ವಾಸುದೇವ್ ರಾವ್


ಈ ನಾಡ ಅಂದ ಈ ತಾಣ ಚಂದ
ಈ ಸೊಬಗ ಅಂದ ಈ ನೋಟ ಚಂದ
ಈ ಬೆಡಗು ಬಿನ್ನಾಣ ಈ ಸುಗಸು ವೈಯಾರ
ಉತ್ಸಾಹ ಉಲ್ಲಾಸ ಚೈತನ್ಯ ಆನಂದ

ಹರಿಯುವ ಝರಿಗಳ ಧಾರೆಯ ದನಿ ಜುಳುಜುಳು
ಕಲರವ ಗುಂಪಿನ ಇಂಪಿನ ದನಿ ಕಲಕಲ
ಇದೇ ಸ್ವರ್ಗ ಸ್ವರ್ಗ ಸ್ವರ್ಗ
ಈ ಬೆಡಗು ಬಿನ್ನಾಣ ಈ ಸೊಗಸು ವೈಯಾರ
ಉತ್ಸಾಹ ಉಲ್ಲಾಸ ಚೈತನ್ಯ ಆನಂದ

ಈ ನಾಡ ಅಂದ ಈ ತಾಣ ಚಂದ
ಈ ಸೊಬಗ ಅಂದ ಈ ನೋಟ ಚಂದ

ಓ ಚೈತ್ರದ ಬೆಡಗು ಕೋಗಿಲೆ ಕಂಠದ ರಾಗದ ಸುಧೆಯು ಆಹಾ
ಹೇ ಸಂಚಿನ ಸುಳಿಯ ಮೋಹಕ ಬಲೆಯ ಎದುರಲಿ ಗೆಲುವನು ನೀ
ನೀಡು ನೀಡು ನೀಡು
ಈ ಬೆಡಗು ಬಿನ್ನಾಣ ಈ ಸೊಗಸು ವೈಯಾರ
ಉತ್ಸಾಹ ಉಲ್ಲಾಸ ಚೈತನ್ಯ ಆನಂದ

ಈ ನಾಡ ಅಂದ ಈ ತಾಣ ಚಂದ
ಈ ಸೊಬಗ ಅಂದ ಈ ನೋಟ ಚಂದ

*********************************************************************************

ಸವಿನೆನಪುಗಳು ಬೇಕು

ಸಾಹಿತ್ಯ: ರಾಮದಾಸ ನಾಯ್ಡು  
ಗಾಯಕರು : ವಾಣಿ ಜಯರಾಂ


ಸವಿನೆನಪುಗಳು ಬೇಕು ಸವಿಯಲೀ ಬದುಕು
ಕಹಿನೆನಪು ಸಾಕೊಂದು ಮಾಸಲೀ ಬದುಕು
ಬೆಂಬಿಡದ ಆ ನೆನಪು ಮರುಕಳಿಸಿ ದಿನವೆಲ್ಲ
ಕಾಡುತಿದೆ ಮನವ
ಸವಿನೆನಪುಗಳು ಬೇಕು ಸವಿಯಲೀ ಬದುಕು

ಪ್ರಿಯತಮನ ಒಲವಿಂದ ಕನಸುಗಳು ಮೂಡಿ
ಇನಿಯನ ಎದೆಗೊರಗಿ ಆಸರೆಯ ಬೇಡಿ
ಸರಸ ಸವಿಯ ಬಯಸಿದೆನು ನಾನು
ವಿರಹ ವಿಫಲ ಫಲಿಸಿದವು ನನಗೆ
ಇನಿಯನ ಎದೆ ಬಡಿತ ಗುಂಡಿನ ದನಿಗಿರಿದು
ಮಾಸುತಿದೆ ಕನಸು

ಸವಿನೆನಪುಗಳು ಬೇಕು ಸವಿಯಲೀ ಬದುಕು

ಬೀಸುತಿಹ ತಂಗಾಳಿ ಬಿಸಿಯಾಗಿ ಕಾಡಿ
ನೆನಪಿನ ಭೀತಿಯಲಿ ನಾ ಬಂಧಿಯಾಗಿ
ಮನಸು ಹೃದಯ ನೊಂದು ನೋವಾಗಿದೆ
ಒಲವು ನಲಿವು ಮೂಡಿ ಮಸುಕಾಗಿದೆ
ಅರಳುವ ಹೂವೊಂದು ಕಮರುವ ಭಯದಲೀ
ಸಾಗುತಿದೆ ಬದುಕು

ಸವಿನೆನಪುಗಳು ಬೇಕು ಸವಿಯಲೀ ಬದುಕು

*********************************************************************************

ಅಣ್ಣಾವ್ರು (2003)


ಕನ್ನಡಕ್ಕಾಗಿ ಜನನ

ಚಲನ ಚಿತ್ರ: ಅಣ್ಣಾವ್ರು (2003)
ನಿರ್ದೇಶನ: ಓಂ ಪ್ರಕಾಶ್ ರಾವ್  ಸಂಗೀತ: ರಾಜೇಶ್ ರಾಮನಾಥ್ 
ಸಾಹಿತ್ಯ : ಕೆ. ಕಲ್ಯಾಣ್  
ಗಾಯನ : ಎಸ್.ಪಿ.ಬಾಲಸುಬ್ರಹ್ಮಣ್ಯಂ & ಸಂಗಡಿಗರು 
ನಟನೆ: ಅಂಬರೀಷ್, ದರ್ಶನ್, ಕನ್ನಿಕಾ, ಸುಹಾಸಿನಿ 


ಕನ್ನಡಕ್ಕಾಗಿ ಜನನ ಕನ್ನಡಕ್ಕಾಗಿ ಮರಣ
ಕನ್ನಡತನಕೆ ನಮ್ಮ ಉಸಿರೇ ಚಿರಋಣಿ
ಮುತ್ತಂತಿರೋ  ಈ ಮಣ್ಣಲ್ಲಿಯೇ
ನಿಮ್ಮ ಮಗನಾಗಿ ಹುಟ್ಟುವೇ ನಾ ಪ್ರತಿ ಜನ್ಮ.... ಪ್ರತಿ ಜನ್ಮ
ಕನ್ನಡಕ್ಕಾಗಿ ಜನನ ಕನ್ನಡಕ್ಕಾಗಿ ಮರಣ
ಕನ್ನಡತನಕೆ ನಮ್ಮ ಉಸಿರೇ ಚಿರಋಣಿ

ಗಂಡು : ಸ್ನೇಹವಿದೇ ಬಂಧವಿದೆ ನಾವಾಡುವ ಮಾತೊಳಗೆ
            ತ್ಯಾಗವಿದೆ ತಾಳ್ಮೆ ಇದೆ ಈ ಮಣ್ಣ ಮಡಿಲೊಳಗೇ
            ಕೋಟ್ಯಾನು ಕೋಟಿ ಹೃದಯವ ಮೀಟಿ ಅರಳಲಿ ಕರುನಾಡು
            ಈ ನಾಡು ಈ ನುಡಿಗೆ ಜೀವ ಪಣವಿಡುವೇ
           ಕಾವೇರಿ ಎದೆಯನ್ನು ಕಾವು ಆರಿಸುವೆ
ಕೊರಸ್ :  ಅಣ್ಣಾ ಕಣೋ ನೀ ಅಣ್ಣ ಕಣೋ ನಿನ್ನ ನೆರಳಲಿ ನಾವೂ ಕಣೋ
                ಮರೆಯದಿರೂ.. ಮರೆಯದಿರೂ

ಗಂಡು : ಕನ್ನಡಕ್ಕಾಗಿ ಜನನ ಕನ್ನಡಕ್ಕಾಗಿ ಮರಣ
           ಕನ್ನಡತನಕೆ ನಮ್ಮ ಉಸಿರೇ ಚಿರಋಣಿ

ಗಂಡು : ಈ ನಾಡ ಬಾವುಟಕೆ ನೀನೊಂದು ಗುರುತಾಗು
            ಬಸವಳಿದ ಭೂಪಟಕೆ ಕಾಯುವ ದೊರೆಯಾಗು
           ಏಳೇಳು ಜನ್ಮಕೆ ಭರವಸೆಯೇ ಏಳು ಜ್ಞಾನಪೀಠಗಳು
          ಕೈ ತುತ್ತು ಕೊಟ್ಟವರ ಕಂಕಣವಾಗ್ತಿನಿ
          ಕನ್ನಡತಿ ಮಾನಕ್ಕೆ ಪ್ರಾಣ ಕೊಡ್ತೀನಿ
ಕೋರಸ್ : ಅಣ್ಣಾ ಕಣೋ ನೀ ಅಣ್ಣ ಕಣೋ ನೀ ಕೈ ಇಟ್ರೇ ಸೋಲಿಲ್ಲ
               ನಿಮ್ಮ ಉಸಿರೇ ನಮ್ಮ ಉಸಿರೂ

ಗಂಡು :    ಕನ್ನಡಕ್ಕಾಗಿ ಜನನ ಕನ್ನಡಕ್ಕಾಗಿ ಮರಣ
               ಕನ್ನಡತನಕೆ ನಮ್ಮ ಉಸಿರೇ ಚಿರಋಣಿ
               ಮುತ್ತಂತಿರೋ  ಈ ಮಣ್ಣಲ್ಲಿಯೇ
               ನಿಮ್ಮ ಮಗನಾಗಿ ಹುಟ್ಟುವೇ ನಾ
               ಪ್ರತಿ ಜನ್ಮ.... ಪ್ರತಿ ಜನ್ಮ
               ಕನ್ನಡಕ್ಕಾಗಿ ಜನನ ಕನ್ನಡಕ್ಕಾಗಿ ಮರಣ
               ಕನ್ನಡತನಕೆ ನಮ್ಮ ಉಸಿರೇ ಚಿರಋಣಿ

*********************************************************************************

ಕಾಮನಬಿಲ್ಲು (1983)

ಬಾ ಮುತ್ತು ಕೊಡುವೆ

ಚಲನ ಚಿತ್ರ: ಕಾಮನಬಿಲ್ಲು (1983)
ನಿರ್ದೇಶನ: ಚಿ. ದತ್ತರಾಜ್ 
ಸಾಹಿತ್ಯ : ಚಿ.ಉದಯಶಂಕರ್ 
ಸಂಗೀತ : ಉಪೇಂದ್ರ ಕುಮಾರ್ 
ಗಾಯನ : ಡಾ.ರಾಜಕುಮಾರ್
ನಟನೆ: ರಾಜ್ ಕುಮಾರ್, ಅನಂತ್ ನಾಗ್, ಸರಿತಾ


ಬಾ ಮುತ್ತು ಕೊಡುವೆ ಕoದನೆ ನನ್ನ ಮುದ್ದು ರಾಜ
ಬಾ ಮುತ್ತು ಕೊಡುವೆ ಕoದನೆ ನನ್ನ ಮುದ್ದು ರಾಜ
ನಿನ್ನ ಹವಳದಂಥ ತುಟಿಗೆ ಇಂದು ಪ್ ಎಂದು
ಬಾ ಮುತ್ತು ಕೊಡುವೆ ಕoದನೆ ನನ್ನ ಮುದ್ದು ರಾಜ
ಬಾ ಮುತ್ತು ಕೊಡುವೆ ಕoದನೆ ನನ್ನ ಮುದ್ದು ರಾಜ

ನಿನ್ನ ಮೊಗವನ್ನು ಕಂಡಾಗ ನಾಚಿ
ಶಶಿ ಮೋಡದಲಿ ಮರೆಯಾದನು
ನಿನ್ನ ಕಂಡಾಗ ಬೆರಗಾಗಿ
ಕೃಷ್ಣ ಗುಡಿಯಲ್ಲಿ ಶಿಲೆಯಾದನು

ನೀನಾಡೋ ತೊದಲು ನುಡಿ ಅರಗಿಣಿಯ ಮಾತಂತೆ
ನೀನಾಡೋ ತೊದಲು ನುಡಿ ಅರಗಿಣಿಯ ಮಾತಂತೆ
ಸವಿಜೇನ ಹನಿಯಂತೆ ನನ್ನ ಮುದ್ದು ರಾಜ
ಬಾ ಮುತ್ತು ಕೊಡುವೆ ಕoದನೆ ನನ್ನ ಮುದ್ದು ರಾಜ
ಬಾ ಮುತ್ತು ಕೊಡುವೆ ಕoದನೆ ನನ್ನ ಮುದ್ದು ರಾಜ

ನಿನ್ನ ಹವಳದಂಥ ತುಟಿಗೆ ಇಂದು
ಬಾ ಮುತ್ತು ಕೊಡುವೆ ಕoದನೆ ನನ್ನ ಮುದ್ದು ರಾಜ
ಬಾ ಮುತ್ತು ಕೊಡುವೆ ಕoದನೆ ನನ್ನ ಮುದ್ದು ರಾಜ

ನಕ್ಕು ನಲಿವಾಗ ಬೆಳದಿಂಗಳಂತೆ
ನೀನು ಅತ್ತಾಗ ಸಂಗೀತವೂ
ನನ್ನ ಬಂಗಾರದ ಬೊಂಬೆಯಂತೆ
ಕಂದ ಈ ಮನೆಗೆ ನೀ ಪ್ರಾಣವೂ
ನಿನ್ನನ್ನು ಬಣ್ಣಿಸಲು ನನ್ನಲ್ಲಿ ಮಾತಿಲ್ಲ
ನಿನ್ನನ್ನು ಬಣ್ಣಿಸಲು ನನ್ನಲ್ಲಿ ಮಾತಿಲ್ಲ
ನೀ ನನ್ನ ಉಸಿರಂತೆ ನನ್ನ ಮುದ್ದು ರಾಜ
ಬಾ ಮುತ್ತು ಕೊಡುವೆ ಕoದನೆ ನನ್ನ ಮುದ್ದು ರಾಜ
ಬಾ ಮುತ್ತು ಕೊಡುವೆ ಕoದನೆ ನನ್ನ ಮುದ್ದು ರಾಜ

ನಿನ್ನ ಹವಳದಂಥ ತುಟಿಗೆ ಇಂದು
ಬಾ ಮುತ್ತು ಕೊಡುವೆ ಕoದನೆ ನನ್ನ ಮುದ್ದು ರಾಜ
ಬಾ ಮುತ್ತು ಕೊಡುವೆ ಕoದನೆ ನನ್ನ ಮುದ್ದು ರಾಜ
ಚoದಮಾಮನ್ ನೋಡ್ದಾ ಅಲ್ಲಿ ಚoದಮಾಮನ್ನ
ಹಾಲ್ ಕುಡಿತ್ಯಾ ? ಬೆಣ್ಣೆ ತಿನ್ನಿಸ್ಲಾ ?
ಬೇಡಾ ಅoತೀಯಾ ?
ಏನಪ್ಪಾ ಮಾಡ್ಲಿ ನಾನ್ ಈವಾಗ ?

ಬಾ ಮುತ್ತು ಕೊಡುವೆ ಕoದನೆ ನನ್ನ ಮುದ್ದು ರಾಜ
ಬಾ ಮುತ್ತು ಕೊಡುವೆ ಕoದನೆ ನನ್ನ ಮುದ್ದು ರಾಜ
ಬಾ ಮುತ್ತು ಕೊಡುವೆ ಕoದನೆ ನನ್ನ ಮುದ್ದು ರಾಜ
ಬಾ ಮುತ್ತು ಕೊಡುವೆ ಕoದನೆ ನನ್ನ ಮುದ್ದು ರಾಜ
ಬಾ ....ಬಾ...ಬಾ...

*********************************************************************************

ಇಂದು ಆನಂದ

ಸಾಹಿತ್ಯ: ಚಿ.ಉದಯಶಂಕರ್ 
ಗಾಯನ: ಡಾ| ರಾಜ್ ಕುಮಾರ್ ಮತ್ತು ವಾಣಿ ಜಯರಾಂ


ಗಂಡು: ಇಂದು ಆನಂದ ನಾ ತಾಳಲಾರೆ ಚಿನ್ನ ಮಾತಲ್ಲಿ ನಾ ಹೇಳಲಾರೆ
           ನನ್ನ ಕುಣಿಸಲು ಬಯಕೆಗಳು ಕಂಡೆ ಹೊಸ ಹೊಸ ಕನಸುಗಳು
           ನನ್ನ ಕುಣಿಸಲು ಬಯಕೆಗಳು ಕಂಡೆ ಹೊಸ ಹೊಸ ಕನಸುಗಳು
           ನೀನೆಂದೆಂದು ನನ್ನವಳೆss
ಹೆಣ್ಣು: ಇಂದು ಆನಂದ ನಾ ತಾಳಲಾರೆ ನಲ್ಲ ಮಾತಲ್ಲಿ ನಾ ಹೇಳಲಾರೆ
         ನನ್ನ ಕುಣಿಸಲು ಬಯಕೆಗಳು ಕಂಡೆ ಹೊಸ ಹೊಸ ಕನಸುಗಳು
         ನನ್ನ ಕುಣಿಸಲು ಬಯಕೆಗಳು ಕಂಡೆ ಹೊಸ ಹೊಸ ಕನಸುಗಳು
         ನೀನೆಂದೆಂದು ನನ್ನವನೆss
ಗಂಡು: ಬಳಸುತಿದೆ ಲತೆ ಬಳಸುತಿದೆ ಆಸರೆ ಬೇಕೆಂದು ಮರವನ್ನು
           ನಮ್ಮಂತೆ ಅನುರಾಗದಿss
ಹೆಣ್ಣು: ನಲಿಯುತಿದೆ ಹೊಸ ಹೂಗಳಲಿ ಜೇನನು ಹೀರುತ್ತ ದುಂಬಿಗಳು
          ನಮ್ಮಂತೆ ಉಲ್ಲಾಸದಿss
ಗಂಡು: ನೋಡು ಈ ಸಂಜೆಯಲ್ಲಿ, ಬೀಸೋ ತಂಪಾದ ಗಾಳಿ
           ಬಂದು ಸೂಯ್ ಎಂದು ಹಾಡಿ, ನನ್ನ ಬಳಿ ಹೇಳಿದೆ
           ನೀನೆಂದೆಂದು ನನ್ನವಳೆss
ಹೆಣ್ಣು: ಇಂದು ಆನಂದ ನಾ ತಾಳಲಾರೆ ನಲ್ಲ ಮಾತಲ್ಲಿ ನಾ ಹೇಳಲಾರೆ
ಗಂಡು: ನನ್ನ ಕುಣಿಸಲು ಬಯಕೆಗಳು ಕಂಡೆ ಹೊಸ ಹೊಸ ಕನಸುಗಳು
            ನನ್ನ ಕುಣಿಸಲು ಬಯಕೆಗಳು ಕಂಡೆ ಹೊಸ ಹೊಸ ಕನಸುಗಳು
            ನೀನೆಂದೆಂದು ನನ್ನವಳೆss
ಹೆಣ್ಣು: ಹರಿಯುತಿದೆ ನದಿ ಹರಿಯುತಿದೆ ಸಾಗರ ಎಲ್ಲೆಂದು ಹುಡುಕುತಿದೆ
          ನಮ್ಮಂತೆ ಒಂದಾಗಲು
ಗಂಡು: ಕರೆಯುತಿದೆ ಎಲೆ ಮರೆಯಲ್ಲಿ ಕೋಗಿಲೆಯೊಂದು ಹಾಡುತಿದೆ
          ಸಂಗಾತಿಯ ಸೇರಲು
ಹೆಣ್ಣು: ನೋಡು ಬಾನಂಚಿನಲ್ಲಿ, ಸಂಜೆ ರಂಗನ್ನು ಚೆಲ್ಲಿ
          ನಮಗೆ ಶುಭವನ್ನು ಕೋರಿ, ನನ್ನ ಬಳಿ ಹೇಳಿದೆ
          ನೀನೆಂದೆಂದು ನನ್ನವನೇss
ಗಂಡು: ಇಂದು ಆನಂದ ನಾ ತಾಳಲಾರೆ ಚಿನ್ನ ಮಾತಲ್ಲಿ ನಾ ಹೇಳಲಾರೆ
           ನನ್ನ ಕುಣಿಸಲು ಬಯಕೆಗಳು ಕಂಡೆ ಹೊಸ ಹೊಸ ಕನಸುಗಳು
           ನನ್ನ ಕುಣಿಸಲು ಬಯಕೆಗಳು ಕಂಡೆ ಹೊಸ ಹೊಸ ಕನಸುಗಳು
           ನೀನೆಂದೆಂದು ನನ್ನವಳೆss
ಹೆಣ್ಣು: ಇಂದು ಆನಂದ ನಾ ತಾಳಲಾರೆ ನಲ್ಲ ಮಾತಲ್ಲಿ ನಾ ಹೇಳಲಾರೆ
ಇಬ್ಬರು: ನನ್ನ ಕುಣಿಸಲು ಬಯಕೆಗಳು ಕಂಡೆ ಹೊಸ ಹೊಸ ಕನಸುಗಳು
            ನನ್ನ ಕುಣಿಸಲು ಬಯಕೆಗಳು ಕಂಡೆ ಹೊಸ ಹೊಸ ಕನಸುಗಳು
ಹೆಣ್ಣು: ನೀನೆಂದೆಂದು ನನ್ನವನೆss
ಗಂಡು: ನೀನೆಂದೆದು ನನ್ನವಳೆss

*********************************************************************************

ಕಣ್ಣು ಕಣ್ಣು ಕಲೆತಾಗ

ಸಾಹಿತ್ಯ : ಚಿ.ಉದಯಶಂಕರ್ 
ಗಾಯನ : ಡಾ.ರಾಜಕುಮಾರ್ ಮತ್ತು ವಾಣಿಜಯರಾಮ್


ಡಾ.ರಾಜ : ಕಣ್ಣು ಕಣ್ಣು ಕಲೆತಾಗ ಕಣ್ಣು ಕಣ್ಣು ಕಲೆತಾಗ
                ಮನವು ಉಯ್ಯಾಲೆಯಾಗಿದೆ ತೂಗಿ
                ಹೃದಯ ಬಿಡಲಾರೆ ಎಂದಿದೆ ಕೂಗಿ
ವಾಣಿ: ಕಣ್ಣು ಕಣ್ಣು ಕಲೆತಾಗ ಮನವು ಉಯ್ಯಾಲೆಯಾಗಿದೆ ತೂಗಿ
           ಹೃದಯ ಬಿಡಲಾರೆ ಎಂದಿದೆ ಕೂಗಿ
ವಾಣಿ: ಹೊಸ ಸುಖ ಕಾಣುತಿದೆ ಹೊಸ ಕನಸಾಗುತಿದೆ
           ಹೊಸ ಬಯಕೆಯು ಮೂಡುತಿದೆ
ಡಾ.ರಾಜ : ಹೊಸ ಹೊಸ ಭಾವನೆ ಹೊಸ ಹೊಸ ಕಲ್ಪನೆ
                ಹೊಸ ಲೋಕಕೆ ಸೆಳೆಯುತಿದೆ
ವಾಣಿ: ಆಹಾ ಏನೋ ಹೇಳುವಾಸೆ ಆಹಾ ಏನೋ ಕೇಳುವಾಸೆ ನಾಚಿಕೆ ತಡೆಯುತಿದೆ
         ಆಹಾ ಏನೋ ಹೇಳುವಾಸೆ ಆಹಾ ಏನೋ ಕೇಳುವಾಸೆ ನಾಚಿಕೆ ತಡೆಯುತಿದೆ
ಡಾ.ರಾಜ : ಕಣ್ಣು ಕಣ್ಣು ಕಲೆತಾಗ ಮನವು ಉಯ್ಯಾಲೆಯಾಗಿದೆ ತೂಗಿ
ವಾಣಿ: ಹೃದಯ ಬಿಡಲಾರೆ ಎಂದಿದೆ ಕೂಗಿ
ಡಾ.ರಾಜ : ಮೈನವಿರೇಳುತಿದೆ ತನು ಹೂವಾಗುತಿದೆ
               ಮನ ಕವಿತೆಯ ಹಾಡುತಿದೆ
ವಾಣಿ: ನಿನ ಮನ ಹಾಡಿರುವ ಸವಿ ನುಡಿ ಸಾಲುಗಳ
          ಈ ಕಂಗಳು ಹೇಳುತಿವೆ
ಡಾ.ರಾಜ : ಈ ಮಾತು ಎಂಥಾ ಚೆನ್ನ ಈ ನೋಟ ಎಂಥಾ ಚೆನ್ನ
                ಈ ಮಾತು ಎಂಥಾ ಚೆನ್ನ ಈ ನೋಟ ಎಂಥಾ ಚೆನ್ನ
                ನಿನ್ನ ಪ್ರೇಮಕೆ ನಾ ಸೋತೆ
ವಾಣಿ: ಕಣ್ಣು ಕಣ್ಣು ಕಲೆತಾಗ ಮನವು ಉಯ್ಯಾಲೆಯಾಗಿದೆ ತೂಗಿ
ಡಾ.ರಾಜ : ಹೃದಯ ಬಿಡಲಾರೆ ಎಂದಿದೆ ಕೂಗಿ
ಇಬ್ಬರೂ: ಕಣ್ಣು ಕಣ್ಣು ಕಲೆತಾಗ ಮನವು ಉಯ್ಯಾಲೆಯಾಗಿದೆ ತೂಗಿ
             ಹೃದಯ ಬಿಡಲಾರೆ ಎಂದಿದೆ ಕೂಗಿ
*********************************************************************************

ನೀನಾಡದಾ ಮಾತು

ಸಾಹಿತ್ಯ : ಚಿ.ಉದಯಶಂಕರ್ 
ಗಾಯನ : ಎಸ್.ಪಿ.ಬಿ  ಹಾಗೂ ಸುಲೋಚನಾ


ಎಸ್.ಪಿ.ಬಾಲ: ನೀನಾಡದಾ ಮಾತು ಮಾತಲ್ಲ ನೀನಾಡದಾ ಹಾಡು ಹಾಡಲ್ಲ
                     ನೀನಿಲ್ಲದಾ ಮನೆ ಮನೆಯಲ್ಲ ನೀನಿಲ್ಲದೇ ನನಗೆ ಬಾಳಿಲ್ಲ
ಸುಲೋಚನಾ: ನೀನಾಡದಾ ಮಾತು ಮಾತಲ್ಲ ನೀನಾಡದಾ ಹಾಡು ಹಾಡಲ್ಲ
                     ನೀನಿಲ್ಲದಾ ಮನೆ ಮನೆಯಲ್ಲ ನೀನಿಲ್ಲದೇ ನನಗೆ ಬಾಳಿಲ್ಲ
ಎಸ್.ಪಿ.ಬಾಲ: ನಲ್ಲೆ ನೀನು ಮುಡಿಯದ ಹೂವಲ್ಲಿ ಅಂದವಿಲ್ಲ
                     ನಲ್ಲೆ ನೀನು ಮುಡಿಯದ ಹೂವಲ್ಲಿ ಅಂದವಿಲ್ಲ
                     ಚೆಲುವೆ ನೀನು ಸವಿಯದ ಹಣ್ಣಲ್ಲಿ ಸಿಹಿಯು ಇಲ್ಲ
ಸುಲೋಚನಾ: ನಿನ್ನಂಥ ಮಾತುಗಾರನ ಇನ್ನೆಲ್ಲೂ ನಾನು ಕಾಣೆನು ಇನಿಯ ಸೋತೆನು
ಎಸ್.ಪಿ.ಬಾಲ: ನೀನಾಡದಾ ಮಾತು ಮಾತಲ್ಲ ನೀನಾಡದಾ ಹಾಡು ಹಾಡಲ್ಲ
ಸುಲೋಚನಾ: ನೀನಿಲ್ಲದಾ ಮನೆ ಮನೆಯಲ್ಲ ನೀನಿಲ್ಲದೇ ನನಗೆ ಬಾಳಿಲ್ಲ
ಸುಲೋಚನಾ: ನಲ್ಲ ನಿನ್ನ ಕಾಣದ ದಿನವೆಲ್ಲ ಶಾಂತಿಯಿಲ್ಲ
                     ನಲ್ಲ ನಿನ್ನ ಕಾಣದ ದಿನವೆಲ್ಲ ಶಾಂತಿಯಿಲ್ಲ
                     ಚೆಲುವ ನಿನ್ನ ಸೇರದ ಇರುಳಲ್ಲಿ ಸೌಖ್ಯವಿಲ್ಲ
ಎಸ್.ಪಿ.ಬಾಲ: ಮುದ್ದಾಗಿ ಮಾತನಾಡುತ ಮಾತಲ್ಲಿ ನಿನ್ನ ಗೆಲ್ಲುತ ಸರಸ ತುಂಬಿದೆ
ಸುಲೋಚನಾ: ನೀನಾಡದಾ ಮಾತು ಮಾತಲ್ಲ ನೀನಾಡದಾ ಹಾಡು ಹಾಡಲ್ಲ
                     ನೀನಿಲ್ಲದಾ ಮನೆ ಮನೆಯಲ್ಲ ನೀನಿಲ್ಲದೇ ನನಗೆ ಬಾಳಿಲ್ಲ
ಎಸ್.ಪಿ.ಬಾಲ: ನೀನಾಡದಾ ಮಾತು ಮಾತಲ್ಲ ನೀನಾಡದಾ ಹಾಡು ಹಾಡಲ್ಲ
                     ನೀನಿಲ್ಲದಾ ಮನೆ ಮನೆಯಲ್ಲ ನೀನಿಲ್ಲದೇ ನನಗೆ ಬಾಳಿಲ್ಲ
ಸುಲೋಚನಾ: ನೀನಿಲ್ಲದೇ ನನಗೆ ಬಾಳಿಲ್ಲ
ಎಸ್.ಪಿ.ಬಾಲ: ನೀನಿಲ್ಲದೇ ನನಗೆ ಬಾಳಿಲ್ಲ
ಸುಲೋಚನಾ: ನೀನಿಲ್ಲದೇ ನನಗೆ ಬಾಳಿಲ್ಲ
ಎಸ್.ಪಿ.ಬಾಲ: ನೀನಿಲ್ಲದೇ ನನಗೆ ಬಾಳಿಲ್ಲ

*********************************************************************************

ನೇಗಿಲ ಯೋಗಿ

ಸಾಹಿತ್ಯ: ಕುವೆಂಪು 
ಗಾಯಕರು: ಸಿ. ಅಶ್ವಥ್ 


ನೇಗಿಲ ಹಿಡಿದ ಹೊಲದೊಳು ಹಾಡುತ 
ಉಳುವಾ ಯೋಗಿಯ ನೋಡಲ್ಲಿ
ಫಲವನು ಬಯಸದೆ ಸೇವೆಯೆ ಪೂಜೆಯು 
ಕರ್ಮವೆ ಇಹಪರ ಸಾಧನವು
ಕಷ್ಟದೊಳನ್ನವ ದುಡಿವನೆ ತ್ಯಾಗಿ 
ಸೃಷ್ಟಿನಿಯಮದೊಳಗವನೇ ಭೋಗೀ
ಉಳುವಾ ಯೋಗಿಯ ನೋಡಲ್ಲಿ ||

ಲೋಕದೊಳೇನೇ ನಡೆಯುತಲಿರಲಿ ತನ್ನೀ ಕಾರ್ಯವ ಬಿಡನೆಂದೂ
ರಾಜ್ಯಗಳುಳಿಸಲಿ ರಾಜ್ಯಗಳಳಿಯಲಿ ಹಾರಲಿ ಗದ್ದುಗೆ ಮುಕುಟಗಳು
ಮುತ್ತಿಗೆ ಹಾಕಲಿ ಸೈನಿಕರೆಲ್ಲ ಬಿತ್ತುಳುವುದನವ ಬಿಡುವುದೆ ಇಲ್ಲ ||
ಉಳುವಾ ಯೋಗಿಯ ನೋಡಲ್ಲಿ ||
ಯಾರೂ ಅರಿಯದ ನೇಗಿಲ ಯೋಗಿಯೆ ಲೋಕಕೆ ಅನ್ನವನೀಯುವನು
ಹೆಸರನು ಬಯಸದೆ ಅತಿಸುಖ ಗಳಿಸದೆ ದುಡಿವನು ಗೌರವಕಾಶಿಸದೆ
ನೇಗಿಲ ಕುಲದೊಳಗಡಗಿದೆ ಕರ್ಮ ನೇಗಿಲ ಮೇಲೆಯೆ ನಿಂತಿದೆ ಧರ್ಮ ||
ಉಳುವಾ ಯೋಗಿಯ ನೋಡಲ್ಲಿ ||

*********************************************************************************

Saturday, November 10, 2018

ಚಿನ್ನಾರಿಮುತ್ತ (1993)

ಮಣ್ಣಲ್ಲಿ ಬಿದ್ದೊನು

ಚಲನ ಚಿತ್ರ: ಚಿನ್ನಾರಿ ಮುತ್ತ (1993)
ನಿರ್ದೇಶನ: ಟಿ. ಎಸ್. ನಾಗಾಭರಣ 
ಸಾಹಿತ್ಯ: ಡಾ.ಎಚ್.ಎಸ್.ವೆಂಕಟೇಶ ಮೂರ್ತಿ 
ಸಂಗೀತ: ಸಿ.ಅಶ್ವಥ್ 
ಗಾಯನ: ಅಜಿತ್, ಅರ್ಚನ, ಬೇಬಿ ರೇಖಾ, ಸಂಗೀತಾ, ಆರಾಧನಾ, ಸಮನ್ವಿತ
ನಟನೆ: ಮಾ. ವಿಜಯ್ ರಾಘವೇಂದ್ರ, ಹೆಚ್.ಜಿ. ದತ್ತಾತ್ರೇಯ 


ಮಣ್ಣಲ್ಲಿ ಬಿದ್ದೊನು ಮುಗಿಲಲ್ಲಿ ಎದ್ದನು ಕತ್ಲಲ್ಲಿ ಇದ್ದನು ಬಂಗಾರ ಗೆದ್ದನು
ಹೇಗಿದ್ದ ಹೇಗಾದ ಗೊತ್ತಾ  ನಮ್ಮ ಚಿನ್ನಾರಿ ಮುತ್ತ ..  ನಮ್ಮ ಚಿನ್ನಾರಿ ಮುತ್ತ ... ೨
ಮುತ್ತ ಮುತ್ತ ಮುತ್ತ ಚಿನ್ನಾರಿ ಮುತ್ತ   ಮುತ್ತ ಮುತ್ತ ಮುತ್ತ ಚಿನ್ನಾರಿ ಮುತ್ತ
ಮುತ್ತ ಮುತ್ತ ಮುತ್ತ ಚಿನ್ನಾರಿ ಮುತ್ತ  ಮುತ್ತ ಮುತ್ತ ಮುತ್ತ ಚಿನ್ನಾರಿ ಮುತ್ತ
ಮೆಟ್ಟಿದ್ದ  ಕದ್ದೋನು ಕದ್ದೊಡುತ್ತಿದ್ದೊನು ಮನಮನ ಕದ್ದನು  ನಾಡನ್ನೆ ಗೆದ್ದನು ... ೨
ಹೇಗಿದ್ದ ಹೇಗಾದ ಗೊತ್ತಾ   ನಮ್ಮ ಚಿನ್ನಾರಿ ಮುತ್ತ   ನಮ್ಮ ಚಿನ್ನಾರಿ ಮುತ್ತ
ಮುತ್ತ ಮುತ್ತ ಮುತ್ತ ಚಿನ್ನಾರಿ ಮುತ್ತ  ಮುತ್ತ ಮುತ್ತ ಮುತ್ತ ಚಿನ್ನಾರಿ ಮುತ್ತ
ಬೀದಿಲಿ ಸಿಕ್ಕೊನು  ಏಕಾಂಗಿ ಬಿಕ್ಕೊನು ನಮಗಿನ್ನು ಸಿಕ್ಕನು  ಬಾನಲ್ಲಿ ನಕ್ಕನು ... ೨
ಹೇಗಿದ್ದ ಹೇಗಾದ ಗೊತ್ತಾ  ನಮ್ಮ ಚಿನ್ನಾರಿ ಮುತ್ತ
ಮುತ್ತ ಮುತ್ತ ಮುತ್ತ ಚಿನ್ನಾರಿ ಮುತ್ತ  ಮುತ್ತ ಮುತ್ತ ಮುತ್ತ ಚಿನ್ನಾರಿ ಮುತ್ತ
ಇಲ್ಲಿದ್ದೆ ಹಾಡೊಣಾ ಹಾಡಿ ಕೊಂಡಾಡೊಣಾ ಚಂದಿರ ರಾಮನ  ಚಂದಾವಾ ನೋಡೊಣಾ ... ೨
ಹೇಗಿದ್ದ ಹೇಗಾದ ಗೊತ್ತಾ  ನಮ್ಮ ಚಿನ್ನಾರಿ ಮುತ್ತ ನಮ್ಮ ಚಿನ್ನಾರಿ ಮುತ್ತ  ।। ಮಣ್ಣಲ್ಲಿ ...।।

*********************************************************************************

ಎಷ್ಟೊಂದ್ ಜನ

ಸಾಹಿತ್ಯ: ಡಾ.ಎಚ್.ಎಸ್.ವೆಂಕಟೇಶ ಮೂರ್ತಿ 
ಗಾಯಕಿ: ರೇಖ 

ಎಷ್ಟೊಂದ್ ಜನ ಇಲ್ಲಿ ಯಾರು ನನ್ನೊರು
ಎಷ್ಟೊಂದ್ ಮನೆ ಇಲ್ಲಿ ಎಲ್ಲಿ ನಮ್ಮನೆ
ಎಲ್ಲಿ ಎಲ್ಲಿ ಎಲ್ಲಿ ನಮ್ಮನೆ
ಮೂಟೆ ಹೊತ್ತೊರು ಹೊತ್ತು ಮಂಡಿ ಸುತ್ತೊರು
ಇಟ್ಟಿಗೆ ಎತ್ತೊರು ಎತ್ತಿ ಮಾಡಿ ಹತ್ತೊರು
ತಿಂಡಿ ಆಯೊರು ಸಂದಿ ಗುಂದಿ ಹಾಯೊರು
ಕಣ್ಣು ಮೂಗು ಕಾಣದ ಹಾಗೆ ಮಣ್ಣು ಮೆತ್ತಿದ ಅಣ್ಣ ತಮ್ಮ
ಶಾಲಿಗ್ ಹೋಗೊರು  ಹಕ್ಕಿ ಹಾಗೆ ಹಾರೊರು
ಕಣ್ಣಡಿ ಕಣ್ಣೊರು ಕಂಡದೆಲ್ಲಾ ತಿನ್ನೊರು
ಭಾರಿ ಕಾರೊರು ಗಾಳಿ ಮೇಲೆ ತೇಲೊರು
ಕಣ್ಣು ಮೂಗು ಕಾಣದ ಕುಕ್ಕೊ ಗಾಜಿನ ಮನೆಯ ಅಣ್ಣ ತಮ್ಮ
ರೋಡಲ್ ಓಡೊರು ಮೇಲೆ ಎಲ್ಲೊ ನೋಡೊರು
ಒಂಟೆ ನಡೆಯೊರು  ಬಿಚ್ಚಿದ ಹೂವಿನ ಕೊಡೆಯೊರು
ಹರವಿದ ಮುಡಿಯೊರು ಅರಿಯದ ಭಾಷೆ ನುಡಿಯೊರು
ಕಣ್ಣು ಮೂಗು ಕಾಣದ ಹಾಗೆ ಬಣ್ಣ ಮೆತ್ತಿದ ಅಕ್ಕ ತಂಗಿ
ಒಣಕಲು ಮೈಯ್ಯೊರು  ಚಾಚಿದ ಸಣಕಲು ಕೈಯ್ಯೊರು
ಕೆದರಿದ ಜಡೆಯೊರು ಎಂಜಲು ಮಡಿಲಲ್ ನಡೆಯೊರು
ಮಾಸಿದ ಕಣ್ಣೊರು  ಶಿವನೆ ಸಾಕೊ ಎನ್ನೊರು
ಕಣ್ಣು ಮೂಗು ಕಾಣದ ಹಾಗೆ ಮಣ್ಣು ಮೆತ್ತಿದ ಅಕ್ಕ ತಂಗಿ

*********************************************************************************

ರೆಕ್ಕೆ ಇದ್ದರೆ ಸಾಕೆ

ಸಾಹಿತ್ಯ: ಡಾ.ಎಚ್.ಎಸ್.ವೆಂಕಟೇಶ ಮೂರ್ತಿ 
ಗಾಯಕಿ: ರೇಖಾ 


ರೆಕ್ಕೆ ಇದ್ದರೆ ಸಾಕೆ ಹಕ್ಕಿಗೆ ಬೇಕು ಬಾನು
ಬಯಲಲಿ ತೆಲುತಾ ತಾನು ಮ್ಯಾಲೆ ಹಾರೋಕೆ..
ಕಾಲೊಂದಿದ್ದರೆ ಸಾಕೆ ಚಿಗರೆಗೆ ಬೇಕು ತಾನು ಜಿಗಿದು ಓಡೋಕೆ
ರೆಕ್ಕೆ ಇದ್ದರೆ ಸಾಕೆ
ಹೂವೊಂದಿದ್ದರೆ ಸಾಕೆ ಬ್ಯಾಡವೇ ಗಾಳಿ
ನೀವೇ ಹೇಳಿ ಕಂಪ ಬೀರೋಕೆ
ಮುಖವೊಂದಿದ್ದರೆ ಸಾಕೆ ದುಂಬಿಯ ತವ
ಬ್ಯಾಡವೇ ಹೂವ ಜೇನ ಹೀರೋಕೆ
ರೆಕ್ಕೆ ಇದ್ದರೆ ಸಾಕೆ ಹಕ್ಕಿಗೆ ಬೇಕು ಬಾನು
ಬಯಲಲಿ ತೆಲುತಾ ತಾನು ಮ್ಯಾಲೆ ಹಾರೋಕೆ..
ನೀರೊಂದಿದ್ದರೆ ಸಾಕೆ ಬ್ಯಾಡವೇ ಹಳ್ಳ
ಬಲ್ಲವಬಲ್ಲ ತೊರೆಯು ಹರಿಯೋಕೆ
ಮೋಡ ಇದ್ದರೇ ಸಾಕೆ ಬ್ಯಾಡವೇ ಭೂಮಿ
ಹೇಳಿ ಸ್ವಾಮಿ ಮಳೆಯೂ ಸುರಿಯೋಕೆ
ರೆಕ್ಕೆ ಇದ್ದರೆ ಸಾಕೆ ಹಕ್ಕಿಗೆ ಬೇಕು ಬಾನು
ಬಯಲಲಿ ತೆಲುತಾ ತಾನು ಮ್ಯಾಲೆ ಹಾರೋಕೆ..
ಕಣ್ಣೊಂದಿದರೆ ಸಾಕೆ ಬ್ಯಾಡವೇ ಮಂಡೇ
ಕಣ್ಣಿನಮುಂದೆ ನಿಮಗೆ ಕಾಣೋಕೆ
ಕೊರಳೊಂದಿದ್ದರೆ ಸಾಕೆ ಬ್ಯಾಡವೇ ಹಾಡು
ಎಲ್ಲರ ಜೋಡಿ ಕೂಡಿ ಹಾಡೋಕೆ
ರೆಕ್ಕೆ ಇದ್ದರೆ ಸಾಕೆ ಹಕ್ಕಿಗೆ ಬೇಕು ಬಾನು
ಬಯಲಲಿ ತೆಲುತಾ ತಾನು ಮ್ಯಾಲೆ ಹಾರೋಕೆ..
ಕಾಲೊಂದಿದ್ದರೆ ಸಾಕೆ ಚಿಗರೆಗೆ ಬೇಕು ತಾನು ಜಿಗಿದು ಓಡೋಕೆ
ರೆಕ್ಕೆ ಇದ್ದರೆ ಸಾಕೆ

*********************************************************************************

ನಾವು ಇರುವಾಗ

ಚಿತ್ರಗೀತೆ : ಡಾ.ಎಚ್.ಎಸ್.ವೆಂಕಟೇಶ ಮೂರ್ತಿ 
ಗಾಯಕಿ: ಅಜಿತ,  ರೇಖ


ನಾವು ಇರುವಾಗ ನಿಂಗೇನು ಚಿಂತೆ
ನಗ್ತಾ ನಗ್ತಾ ಇರು ರಾಣಿಯಂತೆ
ನಾವು ಇರುವಾಗ ನಿಂಗೇನು ಚಿಂತೆ
ನಗ್ತಾ ನಗ್ತಾ ಇರು ರಾಣಿಯಂತೆ
ಕಾಡಿಗೆ ನಾವೇ ಹೋಗ್ತಿವಿ ಒಣಗಿದ ಕೂರ್ಲೇ ತರತಿವಿ
ಕಾಡಿಗೆ ನಾವೇ ಹೋಗ್ತಿವಿ ಒಣಗಿದ ಕೂರ್ಲೇ ತರತಿವಿ.. ನಿನ್ನ ಜೊತೇಲ ಇರುತೀವಿ
ದ್ಯಾವರಂಗೆ ನಿನ್ನ ಕೂರಿಸಿ ಎಲ್ಲ ಸೇವೆ ಮಾಡ್ತಿವಿ
ಅಜ್ಜಿ ಆಗಿದ್ದೆಲ್ಲಾ ನೀನು ಮರೆತು  ನಗ್ತಾ ನಗ್ತಾ ಇರು ರಾಣಿಯಂತೆ
ನಗ್ತಾ ನಗ್ತಾ ಇರು ರಾಣಿಯಂತೆ 
ನಾವು ಇರುವಾಗ ನಿಂಗೇನು ಚಿಂತೆ
ನಗ್ತಾ ನಗ್ತಾ ಇರು ರಾಣಿಯಂತೆ
ನೀರು ಗೀರು ಎಳ್ಕೊಂಡು ನೆಲ ಸಾರಿಸಿ ಬಳಕೊಂಡು
ನೀರು ಗೀರು ಎಳ್ಕೊಂಡು ನೆಲ ಸಾರಿಸಿ ಬಳಕೊಂಡು
ಸ್ವಾರೆ  ನಾವೇ ತೊಳ್ಕೊಂಡು ಬಿಸಿ ಅಣ್ಣ ಗೊಜ್ಜು ಮಾಡಿ
ನಿಂಗೆ ಮುಮ ಮುಮ ಮಾಡಿತಿವಿ ಅಜ್ಜಿ ಆಗಿದ್ದೆಲ್ಲಾ ನೀನು ಮರೆತು
ನಗ್ತಾ ನಗ್ತಾ ಇರು ರಾಣಿಯಂತೆ
ನಾವು ಇರುವಾಗ ನಿಂಗೇನು ಚಿಂತೆ
ನಗ್ತಾ ನಗ್ತಾ ಇರು ರಾಣಿಯಂತೆ 
ಕೈಯ್ಯ ಹಿಂಗೇ ಮಾಡ್ಸೋದು ಕೋಲು ಕೊಟ್ಟು ನಡಸೋದು
ಕೈಯ್ಯ ಹಿಂಗೇ ಮಾಡ್ಸೋದು ಕೋಲು ಕೊಟ್ಟು ನಡಸೋದು
ಸೀರೆ ನಾವೇ ಉಡಿಸೋದು 
ರಾತ್ರಿ ನಿನ್ನ ಕಾಲನ್ನೊತ್ತಿ ನಾವೇ ಜೋ ಜೋ ಹಾಡೋದು 
ಅಜ್ಜಿ ಆಗಿದ್ದೆಲ್ಲಾ ನೀನು ಮರೆತು
ನಗ್ತಾ ನಗ್ತಾ ಇರು ರಾಣಿಯಂತೆ
ನಾವು ಇರುವಾಗ ನಿಂಗೇನು ಚಿಂತೆ
ನಗ್ತಾ ನಗ್ತಾ ಇರು ರಾಣಿಯಂತೆ 

*********************************************************************************

ಮಾರಿಷ ಮಾರಿಷ ವೃಕ್ಷ

ಸಾಹಿತ್ಯ: ಡಾ.ಎಚ್.ಎಸ್.ವೆಂಕಟೇಶ ಮೂರ್ತಿ 
ಗಾಯಕರು: ನರಸಿಂಹ ನಾಯ್ಕ, ಮಂಜುಳಾ ಗುರುರಾಜ್ 


ಮಾರಿಷ ಮಾರಿಷ ವೃಕ್ಷ ಕನ್ಯೆ ಮಾರಿಷ
ವೃಕ್ಷ ಕನ್ಯೆ ಮಾರಿಷ ಮಾರಿಷ ಮಾರಿಷ
ಎಂಥ ಚೆಲುವೆ ಮಾರಿಷ ಎಂಥಾ ಚೆಲುವೆ ಮಾರಿಷ
ಬಳ್ಳಿಯ ಮೈಯ್ಯ ಚಿಗುರಿನ ಕೈಯ್ಯ ಅರಳು ಮೊಗದ ಕನ್ಯೆಗೆ
ಬಳ್ಳಿಯ ಮೈಯ್ಯ ಚಿಗುರಿನ ಕೈಯ್ಯ ಅರಳು ಮೊಗದ ಕನ್ಯೆಗೆ
ಸೋತು ಮುತ್ತು ಕೊಡುತಲಿತ್ತು ಸೋತು ಮುತ್ತು ಕೊಡುತಲಿತ್ತು
ಸಂಜೆ ಬಿಸಿಲು ಕೆನ್ನೆಗೆ ಮಾರಿಷ ಮಾರಿಷ ವೃಕ್ಷ ಕನ್ಯೆ
ಮಾರಿಷ ಮಾರಿಷ ವೃಕ್ಷ ಕನ್ಯೆ
ಕಾಡ  ಕಡಿಯಲೆಂದು ಬರಲು ನಾದ ರಾಜಕುವರನು
ತಡೆದಲಾಗ ವೃಕ್ಷ ಕನ್ಯೆಈ ಕೈಯ್ಯ ಕೊಡಲಿ ಜನರನು
ಕಾಡಿನ ಕೈ ಹಿಡಿಯಿತಾಗ ನಡು ಹೀಗೆ ಒಲಿದು
ಹಾಲ  ಧಾರೆ ಎರೆಯುತಿತ್ತು
ಹಾಲ  ಧಾರೆ ಎರೆಯುತಿತ್ತು  ಬೆಳದಿಂಗಳು ಸುರಿದು
ಹಸಿರ ರಥವ ಏರಿ ಬರುವ ಮೊಗ್ಗಿನಂಬ ಎಸೆಯುವ
ಕಣ್ಣಿನ್ನೊಂದು ಹೊರಳಿನಲ್ಲಿ ಮಿಂಚಿನಾಳಗ ಮಸೆಯುವ
ಹಸಿರ ರಥವ ಏರಿ ಬರುವ ಮೊಗ್ಗಿನಂಬ ಎಸೆಯುವ
ಕಣ್ಣಿನ್ನೊಂದು ಹೊರಳಿನಲ್ಲಿ ಮಿಂಚಿನಾಳಗ ಮಸೆಯುವ
ಭಾಗಿವ ಕೊಕ್ಕ ತೆರೆದ ಪಕ್ಕ ಸಾಲು ಸಾಲು ಹಕ್ಕಿ
ಭಾಗಿವ ಕೊಕ್ಕ ತೆರೆದ ಪಕ್ಕ ಸಾಲು ಸಾಲು ಹಕ್ಕಿ
ಬರುತಲಿಹವು ಮಾರಿಷೆಯ ನಗುವಿನಂತೆ
ಬರುತಲಿಹವು ಮಾರಿಷೆಯ ನಗುವಿನಂತೆ
ಸೋತ ಒಂದೇ ನಿಮಿಷದಲ್ಲೇ ಬಂದ ಹಿಡಿದು ಮಾಲೆ
ಸ್ವಸ್ತಿಯಂದು ನಗುತಲಿದ್ದ ಚಂದ್ರ ತಲೆಯ ಮೇಲೆ
ಸೋತ ಒಂದೇ ನಿಮಿಷದಲ್ಲೇ ಬಂದ  ಹಿಡಿದು ಮಾಲೆ
ಸ್ವಸ್ತಿಯಂದು ನಗುತಲಿದ್ದ ಚಂದ್ರ ತಲೆಯ ಮೇಲೆ

*********************************************************************************

ಮ್ಯಾಲೆ ಕಾವು ಕೊಂಡಾವ

ಚಿತ್ರಗೀತೆ : ಡಾ.ಎಚ್.ಎಸ್.ವೆಂಕಟೇಶ ಮೂರ್ತಿ 
ಗಾಯನ : ಮಂಜುಳಾ ಗುರುರಾಜ್ 

ಮ್ಯಾಲೆ ಕಾವು ಕೊಂಡಾವ ಮುಂಗಾರು ಮೋಡ
ಮ್ಯಾಲೆ ಕಾವು ಕೊಂಡಾವ ಮುಂಗಾರು ಮೋಡ
ತೂರಿ ಬರ್ತಾನ ಚಂದ್ರಾಮ ನೋಡ 
ತೂರಿ ಬರ್ತಾನ ಚಂದ್ರಾಮ ನೋಡ 
ಹೋತರಸಿ ಕತ್ತಲ ರಾಹು ಕೇತು
ಚಂದುಳ್ಳ ಚಿಗರಿ ಹೆಗಲೇರಿ ಕೂತು
ಹೋತರಸಿ ಕತ್ತಲ ರಾಹು ಕೇತು
ಚಂದುಳ್ಳ ಚಿಗರಿ ಹೆಗಲೇರಿ ಕೂತು
ಬೆಂದಂತ ಬಾಳಿಗೆ ಬೆಳದಿಂಗಳ ಸುರಿಸಿ 
ಲೋಕವ ತುಂಬಿದ ವ್ಯಾಕುಲ ಹರಿಸಿ 
ಮ್ಯಾಲೆ ಕಾವು ಕೊಂಡಾವ ಮುಂಗಾರು ಮೋಡ
ತೂರಿ ಬರ್ತಾನ ಚಂದ್ರಾಮ ನೋಡ 
ನೀಲಿಯ ನವಿಲ ಹಾರಿಸಿಕೊಂಡು
ಚುಕ್ಕಿಯ ಬಾವುಟ ಏರಿಸಿಕೊಂಡು
ನೀಲಿಯ ನವಿಲ ಹಾರಿಸಿಕೊಂಡು
ಚುಕ್ಕಿಯ ಬಾವುಟ ಏರಿಸಿಕೊಂಡು
ಅಂಗಳಕೆ ಬರುತಾನೆ ಆವರೆಗೂ ತಾಳೂ
ಬಂದಾಗ ಮಾವಯ್ಯಾ ಬೇಕಾದ್ದು ಕೇಳು
ಮ್ಯಾಲೆ ಕಾವು ಕೊಂಡಾವ ಮುಂಗಾರು ಮೋಡ
ತೂರಿ ಬರ್ತಾನ ಚಂದ್ರಾಮ ನೋಡ 
ಮೋಡದ ನಾಡಿಗೆ ನಿನ್ನನ್ನು ಒಯ್ದು
ತೂಗಿ ತೊಟ್ಟಿಲನೆಂದು ರಂಬೆರ ಬೈದು
ಮೋಡದ ನಾಡಿಗೆ ನಿನ್ನನ್ನು ಒಯ್ದು
ತೂಗಿ ತೊಟ್ಟಿಲನೆಂದು ರಂಬೆರ ಬೈದು
ಮುತ್ತನ ನಿದ್ದೆಗೆ ಕನಸೆಳೆಯೋ ಹೊತ್ತು 
ಕೊಡ್ತಾನೆ ಮಾವಯ್ಯ ಬೆಚ್ಚನೆ ಮುತ್ತು 
ಮ್ಯಾಲೆ ಕಾವು ಕೊಂಡಾವ ಮುಂಗಾರು ಮೋಡ
ತೂರಿ ಬರ್ತಾನ ಚಂದ್ರಾಮ ನೋಡ 

*********************************************************************************

ಹಳ್ಳಿ ಮುಕ್ಕ ಮುತ್ತು 

ಸಾಹಿತ್ಯ: ಡಾ.ಎಚ್.ಎಸ್.ವೆಂಕಟೇಶ ಮೂರ್ತಿ 
ಗಾಯನ : ಅಜಿತ ಮತ್ತು ಸಂಗಡಿಗರು 


ಹಳ್ಳಿ ಮುಕ್ಕ ಮುತ್ತು ಇವನಿಗೇನು ಗೊತ್ತು
ಹಳ್ಳಿ ಮುಕ್ಕ ಮುತ್ತು ಇವನಿಗೇನು ಗೊತ್ತು
ಹಳ್ಳಿ ಮುಕ್ಕ ಮುತ್ತು ಇವನಿಗೇನು ಗೊತ್ತು
ಹಳ್ಳಿ ಮುಕ್ಕ ಮುತ್ತು ಇವನಿಗೇನು ಗೊತ್ತು
ನೋಡಬೇಕು ಹೇಗೆ ಹಾರೋ ಹದ್ದಿನ ಹಾಗೆ
ಎತ್ತಬೇಕು ಹೇಗೆ ಗೊತ್ತೇ ಆಗದ ಹಾಗೆ
ಒಡಬೇಕು ಹೇಗೆ ಕಾಡ ಕುದುರೆ ಹಾಗೆ
ಹಳ್ಳಿ ಮುಕ್ಕ ಮುತ್ತು ಇವನಿಗೇನು ಗೊತ್ತು
ಹಳ್ಳಿ ಮುಕ್ಕ ಮುತ್ತು ಇವನಿಗೇನು ಗೊತ್ತು 
ಬರ್ತಾ ಇದ್ರೆ ಅಕ್ಕ ನಿಲ್ಲೋ ತಮ್ಮ ಪಕ್ಕ
ಗುಡಿಯೊಳಗ ಹೋದ್ಲು ಪಾಪ ಇನ್ನು ಪಕ್ಕ ಬಾಪಾ
ಬರ್ತಾ ಇದ್ರೆ ಅಕ್ಕ ನಿಲ್ಲೋ ತಮ್ಮ ಪಕ್ಕ
ಗುಡಿಯೊಳಗ ಹೋದ್ಲು ಪಾಪ ಇನ್ನು ಪಕ್ಕ ಬಾಪಾ
ಪೂಜೆ ಚೀಟಿ ಕೊಂಡು ಪೂಜಾರನ ಕಂಡು 
ಪೂಜೆ ಚೀಟಿ ಕೊಂಡು ಪೂಜಾರನ ಕಂಡು
ವಡ್ಸೋದರಲ್ಲಿ ಕಾಯ ಜೋಡಿ ಇಲ್ಲಿ ಮಾಯಾ
ವಡ್ಸೋದರಲ್ಲಿ ಕಾಯ ಜೋಡಿ ಇಲ್ಲಿ ಮಾಯಾ
ಹಳ್ಳಿ ಮುಕ್ಕ ಮುತ್ತು ಇವನಿಗೇನು ಗೊತ್ತು 
ಬರ್ತಾ ಇದ್ರೆ ಅಣ್ಣ ಸಲಾಂ ಅನಬೇಕಣ್ಣ
ಭಾರಿ ಬೆಲೆ ಜೋಡು ಕಣ್ಣನ ಅರಳಿಸಿ ನೋಡು
ಬರ್ತಾ ಇದ್ರೆ ಅಣ್ಣ ಸಲಾಂ ಅನಬೇಕಣ್ಣ
ಭಾರಿ ಬೆಲೆ ಜೋಡು ಕಣ್ಣನ ಅರಳಿಸಿ ನೋಡು
ಕಾಲನ ಚಾಚು ಅಡ್ಡ ಆಗೇ ಹೊತ್ತು ಖೇಡ್ಡ 
ಏಳೋದರಲ್ಲಿ ಆಣೆ ಹುಡ್ಗ ಸಿಕ್ರೆ ತಾನೇ
ಹಳ್ಳಿ ಮುಕ್ಕ ಮುತ್ತು ಇವನಿಗೇನು ಗೊತ್ತು 
ಹಪ ಹಪ ಹಪ ಹಪ ಹಪ ಹಪ ಹಪ ಹೊಟ್ಟೆ
ಬೇಗ ಹಾಕು ಬೇಗ ಹಾಕು ಬೇಗ ಹಾಕು ತಟ್ಟೆ
ಸಾರು ಸಾರು ಸಾರು ಸಾರು ಸಾರು ತಂದು ಇಟ್ಟೇ
ಜಾಗ ಮಾತ್ರ ಜಾಗ ಮಾತ್ರ ಜಾಗ ಮಾತ್ರ ನಿಂಗೆ ಬಿಟ್ಟೆ
ಬಾರೋ ಮುತ್ತ ಇಲ್ಲಿ ನೀನು ನಮ್ಮೊನೆ ಕಾಣೋ ಬಡಿಸೋನು
ಬಾರೋ ಮುತ್ತ ಇಲ್ಲಿ ನೀನು ನಮ್ಮೊನೆ ಕಾಣೋ ಬಡಿಸೋನು
ತಿನ್ನು ಬೇಕಾದ್ದೆಲ್ಲಾ ತಿನ್ನು 
ತಿನ್ನು ಬೇಕಾದ್ದೆಲ್ಲಾ ತಿನ್ನು
ತಿನ್ನು ತಿನ್ನು ತಿನ್ನು ತಿನ್ನು ತಿನ್ನು ತಿನ್ನು
ದಾದಾಗ ಮೊದಲು ಜೈ ಅನ್ನು ಜೈ

*********************************************************************************

ಚಂದ್ರ ನಿಂಗೆ ಕರುಣೆ 

ಸಾಹಿತ್ಯ: ಡಾ.ಎಚ್.ಎಸ್.ವೆಂಕಟೇಶ ಮೂರ್ತಿ 
ಗಾಯನ : ಅಜಿತ ಮತ್ತು ಸಂಗಡಿಗರು 

ಚಂದ್ರ ನಿಂಗೆ ಕರುಣೆ ಇರ್ಲಿ ಮೋಡದ ಮರೆಲಿ ಇರು
ಮೋಡ ಮೋಡ ಒಂದೇ ಸಮ್ನೆ ಸುರಿತಿರು
ಮಿಂಚು ಹೊಡೆದು ದೀಪ ಎಲ್ಲ ಥಟ್ಟಂತ ಆರಿ ಹೋಗ್ಲಿ
ಪೊಲೀಸ್ ಮಾಮ ಬರೋದರಲ್ಲಿ ಎಲ್ಲೆಲ್ಲೂ ಕತ್ಲಾಗಲಿ
ಚಂದ್ರ ನಿಂಗೆ ಕರುಣೆ ಇರ್ಲಿ ಮೋಡದ ಮರೆಲಿ ಇರು
ಮೋಡ ಮೋಡ ಒಂದೇ ಸಮ್ನೆ ಸುರಿತಿರು
ಮಿಂಚು ಹೊಡೆದು ದೀಪ ಎಲ್ಲ ಥಟ್ಟಂತ ಆರಿ ಹೋಗ್ಲಿ
ಪೊಲೀಸ್ ಮಾಮ ಬರೋದರಲ್ಲಿ ಎಲ್ಲೆಲ್ಲೂ ಕತ್ಲಾಗಲಿ.. ಕತ್ಲಾಗಲಿ
ಗಾಳಿ ನೀನು ಜೋರಾಗ್ ಬೀಸಿ ಕಣ್ಣಿಗ ಮಣ್ಣು ತೂರು 
ಬೀದಿ ತುಂಬಾ ತೂಗತಾ ಬರಲಿ ಬರಗೇರಮ್ಮನ ತೇರು
ಓಡೋ ಹಾದಿಗ ಅಡ್ಡ ಬರಲೀ ನೂರಾ ಒಂದು ಕಾರು
ಪೊಲೀಸನೋರ ಮುತ್ತಕೊಂಡಿರಲಿ  ಯಾರೋ ಮುಷ್ಕರದೋರು
ಗಾಳಿ ನೀನು ಜೋರಾಗ್ ಬೀಸಿ ಕಣ್ಣಿಗ ಮಣ್ಣು ತೂರು
ಬೀದಿ ತುಂಬಾ ತೂಗತಾ ಬರಲಿ ಬರಗೇರಮ್ಮನ ತೇರು
ಓಡೋ ಹಾದಿಗ ಅಡ್ಡ ಬರಲೀ ನೂರಾ ಒಂದು ಕಾರು
ಪೊಲೀಸನೋರ ಮುತ್ತಕೊಂಡಿರಲಿ  ಯಾರೋ ಮುಷ್ಕರದೋರು.. ಮುಷ್ಕರದೋರು  
ಭೂಮಿ ತಾಯಿಕಾಪಾಡವ್ವ ಜಾರದೆ ಇರಲಿ ಕಾಲು
ಓಡುವಾಗ ಉಳಕದೆ ಇರಲಿ ಕಾಲಿನ ಮಂಡಿ ಕೀಲು
ಪಿಸ್ತೂಲ ಕುದುರೆ ಮೀಟಿದರನೂ ಹಾರದೆ ಇರಲಿ ಗುಂಡು
ಗೊತ್ತಿದರನೂ ಮಾಡ್ತೀವಿ ತಪ್ಪನ ಕಂಡು ಕಂಡು
ಭೂಮಿ ತಾಯಿಕಾಪಾಡವ್ವ ಜಾರದೆ ಇರಲಿ ಕಾಲು
ಓಡುವಾಗ ಉಳಕದೆ ಇರಲಿ ಕಾಲಿನ ಮಂಡಿ ಕೀಲು
ಪಿಸ್ತೂಲ ಕುದುರೆ ಮೀಟಿದರನೂ ಹಾರದೆ ಇರಲಿ ಗುಂಡು
ಗೊತ್ತಿದರನೂ ಮಾಡ್ತೀವಿ ತಪ್ಪನ ಕಂಡು ಕಂಡು
ತಪ್ಪನ ಕಂಡು ಕಂಡು  

*********************************************************************************

ಚಿನ್ನಾರಿ ಮುತ್ತ 

ಸಾಹಿತ್ಯ: ಡಾ.ಎಚ್.ಎಸ್.ವೆಂಕಟೇಶ ಮೂರ್ತಿ 
ಗಾಯನ: ನರಸಿಂಹ ನಾಯಕ 


ಚಿನ್ನಾರಿ ಮುತ್ತ ಹಾಕ್ತಿದ್ದ ಗೊತ್ತಾ ಎಂಥ ಹಿಡಿತಾ
ಹಿಡಿತಾ ಹಿಡಿತಾ ಹಿಡಿತಾ ಹಿಡಿತಾ ಎಂಥ ಹಿಡಿತಾ
ನೋಡ್ತಿದ್ದಾಗ ಉಳೋದರೆಲ್ಲಾ ಕಣ್ ಕಣ್ ಬಿಡ್ತಾ
ಬಿಡ್ತಾ ಬಿಡ್ತಾ ಬಿಡ್ತಾ ಬಿಡ್ತಾ ಕಣ್ ಕಣ್ ಬಿಡ್ತಾ
ಚಿನ್ನಾರಿ ಮುತ್ತ ಹಾಕ್ತಿದ್ದ ಗೊತ್ತಾ ಎಂಥ ಹಿಡಿತಾ
ಹಿಡಿತಾ ಹಿಡಿತಾ ಹಿಡಿತಾ ಹಿಡಿತಾ ಎಂಥ ಹಿಡಿತಾ
ನೋಡ್ತಿದ್ದಾಗ ಉಳೋದರೆಲ್ಲಾ ಕಣ್ ಕಣ್ ಬಿಡ್ತಾ
ಬಿಡ್ತಾ ಬಿಡ್ತಾ ಬಿಡ್ತಾ ಬಿಡ್ತಾ ಕಣ್ ಕಣ್ ಬಿಡ್ತಾ
ಸಂತೆ ಮಾಳಕ್ಕೆ ಬಂದಿತಣ್ಣ ಈ ಚಿನಾಲಿ 
ಬಂದ ಮೇಲೆ ಏನಾಗತ್ತೆ ನೀವೇ ಹೇಳಿ 
ಸಂತೆ ಮಾಳಕ್ಕೆ ಬಂದಿತಣ್ಣ ಈ ಚಿನಾಲಿ 
ಬಂದ ಮೇಲೆ ಏನಾಗತ್ತೆ ನೀವೇ ಹೇಳಿ 
ಒಂದೇ ನಿಮಿಷದಲ್ಲಿ ಸಂತೆ ಚೆಲ್ಲಾಪಿಲ್ಲಿ
ಒಂದೇ ನಿಮಿಷದಲ್ಲಿ ಸಂತೆ ಚೆಲ್ಲಾಪಿಲ್ಲಿ
ಚಿನ್ನಾರಿ ಮುತ್ತ ಹಾಕ್ತಿದ್ದ ಗೊತ್ತಾ ಎಂಥ ಹಿಡಿತಾ
ಹಿಡಿತಾ ಹಿಡಿತಾ ಹಿಡಿತಾ ಹಿಡಿತಾ ಎಂಥ ಹಿಡಿತಾ
ನೋಡ್ತಿದ್ದಾಗ ಉಳೋದರೆಲ್ಲಾ ಕಣ್ ಕಣ್ ಬಿಡ್ತಾ
ಬಿಡ್ತಾ ಬಿಡ್ತಾ ಬಿಡ್ತಾ ಬಿಡ್ತಾ ಕಣ್ ಕಣ್ ಬಿಡ್ತಾ
ಬೇಕೆನವ್ವಾ ನಿಂಬೆ ಹಣ್ಣು ಮಲ್ಲಕ್ಕ ಬಂದ್ಲು 
ಹಾರಿ ಬಂದ ಕರ ನೋಡಿ ಹೌಹಾರಿ ಹೋದ್ಲು 
ಬೇಕೆನವ್ವಾ ನಿಂಬೆ ಹಣ್ಣು ಮಲ್ಲಕ್ಕ ಬಂದ್ಲು 
ಹಾರಿ ಬಂದ ಕರ ನೋಡಿ ಹೌಹಾರಿ ಹೋದ್ಲು 
ಓಡುವಾಗ ರಂಬೆ ಬೀದಿ ತುಂಬಾ ನಿಂಬೆ 
ಓಡುವಾಗ ರಂಬೆ ಬೀದಿ ತುಂಬಾ ನಿಂಬೆ 
ಚಿನ್ನಾರಿ ಮುತ್ತ ಹಾಕ್ತಿದ್ದ ಗೊತ್ತಾ ಎಂಥ ಹಿಡಿತಾ
ಹಿಡಿತಾ ಹಿಡಿತಾ ಹಿಡಿತಾ ಹಿಡಿತಾ ಎಂಥ ಹಿಡಿತಾ
ನೋಡ್ತಿದ್ದಾಗ ಉಳೋದರೆಲ್ಲಾ ಕಣ್ ಕಣ್ ಬಿಡ್ತಾ
ಬಿಡ್ತಾ ಬಿಡ್ತಾ ಬಿಡ್ತಾ ಬಿಡ್ತಾ ಕಣ್ ಕಣ್ ಬಿಡ್ತಾ
ಮಲ್ಲಿನ ಪಂಚೆ ಉಟ್ಕೊಂಡಿರೋ ಇರೊಪ್ಪನೋವರು
ಕರ ಜಿಗಿದು ಮೇಲಕ್ಕೆಗರಿ ರಾಡಿ ಕೆಸರು
ಮಲ್ಲಿನ ಪಂಚೆ ಉಟ್ಕೊಂಡಿರೋ ಇರೊಪ್ಪನೋವರು
ಕರ ಜಿಗಿದು ಮೇಲಕ್ಕೆಗರಿ ರಾಡಿ ಕೆಸರು
ನೋಡದಾಗವರ ಹೆಂಡ್ರು ಕರಡಿ ಹಾಗೆ ಕಂಡ್ರು 
ನೋಡದಾಗವರ ಹೆಂಡ್ರು ಕರಡಿ ಹಾಗೆ ಕಂಡ್ರು 
ಚಿನ್ನಾರಿ ಮುತ್ತ ಹಾಕ್ತಿದ್ದ ಗೊತ್ತಾ ಎಂಥ ಹಿಡಿತಾ
ಹಿಡಿತಾ ಹಿಡಿತಾ ಹಿಡಿತಾ ಹಿಡಿತಾ ಎಂಥ ಹಿಡಿತಾ
ನೋಡ್ತಿದ್ದಾಗ ಉಳೋದರೆಲ್ಲಾ ಕಣ್ ಕಣ್ ಬಿಡ್ತಾ
ಬಿಡ್ತಾ ಬಿಡ್ತಾ ಬಿಡ್ತಾ ಬಿಡ್ತಾ ಕಣ್ ಕಣ್ ಬಿಡ್ತಾ
ಬಂತು ಬಂತು ಬಂತು ಬಂತು ಬಂತು ಬಂತು ಬಂಗಾರ ಕಂದ
ಬಾಲ ಬಿಸಿ ಗಾಳಿ ಲೇಸಿ ಸುತ್ತ ಮುತ್ತ ತಿರುವುತ ಕತ್ತ 
ಬಂತು ಬಂತು ಬಂತು ಬಂತು ಬಂತು ಬಂತು ಬಂಗಾರ ಕಂದ

*********************************************************************************

ಒಂದು ಎರಡು ಮೂರೂ

ಸಾಹಿತ್ಯ: ಡಾ.ಎಚ್.ಎಸ್.ವೆಂಕಟೇಶ ಮೂರ್ತಿ 
ಗಾಯನ: ನರಸಿಂಹ ನಾಯಕ


ಒಂದು ಎರಡು ಮೂರೂ ನಾಲ್ಕು ಕೈಯ್ಯನ್ನೇಲಾಕ್  ತಗಿಸಬೇಕು
ಐದು ಆರು ಏಳು ಎಂಟು ತಾಳಕ್ಕ ತಕ್ಕ ಹೆಜ್ಜೆ ಉಂಟು
ನಾಲ್ಕು ಮೂರೂ ಎರಡು ಒಂದು ತಲೆ ತಗ್ಸಿ ಕೈಯ್ಯನ್ನು ತಂದು
ಎಂಟು ಏಳು ಆರು ಐದು ಕಾಲನ ನೀಡಿ ಮುಂದಕ್ಕ ಒಯ್ದು
ಒಂದು ಎರಡು ಮೂರೂ ನಾಲ್ಕು ಕೈಯ್ಯನ್ನೇಲಾಕ್  ತಗಿಸಬೇಕು
ಐದು ಆರು ಏಳು ಎಂಟು ತಾಳಕ್ಕ ತಕ್ಕ ಹೆಜ್ಜೆ ಉಂಟು
ಹಳ್ಳಿ ಊರ ಈ ಗಮಾರ ಇಲ್ಲೇತಕೆ ಬಂದನೋ
ರಾಗಿ ಮುದ್ದೆ ರೊಟ್ಟಿ ಸೊಪ್ಪು ಇಲ್ಲೇತಕೆ ಬಂದಿತೋ
ಹಳ್ಳಿ ಊರ ಈ ಗಮಾರ ಇಲ್ಲೇತಕೆ ಬಂದನೋ
ರಾಗಿ ಮುದ್ದೆ ರೊಟ್ಟಿ ಸೊಪ್ಪು ಇಲ್ಲೇತಕೆ ಬಂದಿತೋ
ನಮ್ಮ ಮೂತಿಗೆ ಮಣ್ಣು ಎರೆಚೋಕೆ 
ನಾಡಿನುದ್ದಕು ಸುದ್ದಿ ಮಾಡೋಕೆ 
ಮೆಲ್ಲ ಮೆಲ್ಲಗೆ ಬಂದ ಇಲ್ಲೆಗೆ 
ಪಡ್ಕ ಹೊಡೆಯೋಕೆ ಬೆಟ್ಟ ಕಡಿಯೋಕೆ 
ಹಳ್ಳಿ ಊರ ಈ ಗಮಾರ ಇಲ್ಲೇತಕೆ ಬಂದನೋ
ರಾಗಿ ಮುದ್ದೆ ರೊಟ್ಟಿ ಸೊಪ್ಪು ಇಲ್ಲೇತಕೆ ಬಂದಿತೋ
ಹಳ್ಳಿ ಊರ ಈ ಗಮಾರ ಇಲ್ಲೇತಕೆ ಬಂದನೋ
ರಾಗಿ ಮುದ್ದೆ ರೊಟ್ಟಿ ಸೊಪ್ಪು ಇಲ್ಲೇತಕೆ ಬಂದಿತೋ

ಬಿದ್ದ ಮಂದಿಯೇ ಎದ್ದು ನಿಲ್ಲೋರು
ಕಷ್ಟ ಪಡುವ ಜನರೇ ಕೊನೆಗೆ ಗೆಲ್ಲೋರು
ಬಿದ್ದ ಮಂದಿಯೇ ಎದ್ದು ನಿಲ್ಲೋರು
ಕಷ್ಟ ಪಡುವ ಜನರೇ ಕೊನೆಗೆ ಗೆಲ್ಲೋರು
ಬೇಧ ಭಾವ ತೊರೆದು ಎಲ್ಲಾ ಬನ್ನಿ 
ನಾಡ ಕೀರ್ತಿಯನ್ನು ಮುಂದೆ ತನ್ನಿ 
ಬೇಧ ಭಾವ ತೊರೆದು ಎಲ್ಲಾ ಬನ್ನಿ 
ನಾಡ ಕೀರ್ತಿಯನ್ನು ಮುಂದೆ ತನ್ನಿ 
ಬಿದ್ದ ಮಂದಿಯೇ ಎದ್ದು ನಿಲ್ಲೋರು
ಕಷ್ಟ ಪಡುವ ಜನರೇ ಕೊನೆಗೆ ಗೆಲ್ಲೋರು
ಇನ್ನು ಮೇಲೆ ಎಲ್ಲ ಸೇರಿ ಹಾಡೋದು 
ನೂರು ಕಣ್ಣು ಒಂದೇ ನೋಟ ನೋಡೋದು 
ಇನ್ನು ಮೇಲೆ ಎಲ್ಲ ಸೇರಿ ಹಾಡೋದು 
ನೂರು ಕಣ್ಣು ಒಂದೇ ನೋಟ ನೋಡೋದು 
ಹೇಳುತೀವಿ ಎಲ್ಲ ನಿಮಗೇ ಸಾರೀ 
ನಿಮಗೆ ನೀವು ತೋರಿಸಿದ್ದೆ ನಮ್ಮ ದಾರಿ 
ಹೇಳುತೀವಿ ಎಲ್ಲ ನಿಮಗೇ ಸಾರೀ 
ನಿಮಗೆ ನೀವು ತೋರಿಸಿದ್ದೆ ನಮ್ಮ ದಾರಿ 
ಇನ್ನು ಮೇಲೆ ಎಲ್ಲ ಸೇರಿ ಹಾಡೋದು 
ನೂರು ಕಣ್ಣು ಒಂದೇ ನೋಟ ನೋಡೋದು 
ಇನ್ನು ಮೇಲೆ ಎಲ್ಲ ಸೇರಿ ಹಾಡೋದು 
ನೂರು ಕಣ್ಣು ಒಂದೇ ನೋಟ ನೋಡೋದು 

*********************************************************************************

ಕೃಷ್ಣ (2007)


ಹೇ ಮೌನಾ

ಚಲನ ಚಿತ್ರ: ಕೃಷ್ಣ (2007)
ನಿರ್ದೇಶನ: ಎಂ.ಡಿ. ಶ್ರೀಧರ್ 
ಸಂಗೀತ: ವಿ.ಹರಿಕೃಷ್ಣ    
ಸಾಹಿತ್ಯ: ಕವಿರಾಜ್  
ಗಾಯಕ: ಶಂಕರ್ ಮಹಾದೇವನ್
ನಟನೆ: ಗಣೇಶ್, ಪೂಜಾ ಗಾಂಧಿ, ಶರ್ಮಿಳಾ ಮಾಂಡ್ರೆ 


ಹೇ ಮೌನಾ ಏ ಹೇ ಮೌನಾ
ನೀ ಕಾಡಬೇಡ ನನ್ನಾ ನೀ ಮಾತನಾಡು ಎನ್ನಾ
ನನ್ನೆದೆಯ ಹೂವು ಬಿರಿವಂತೆ ಮಾಡು ಅದು ಬಾಡಿ ಹೋಗೊ ಮುನ್ನ
ಚಂದಿರನ ಮೌನ ಮುರಿವಂತೆ ಹಾಡು ಅವ ಜಾರಿ ಹೋಗೊ ಮುನ್ನ 

ಹೇ ಮೌನಾ ಏ ಹೇ ಮೌನಾ
ನೀ ಕಾಡಬೇಡ ನನ್ನಾ  ನೀ ಮಾತನಾಡು ಎನ್ನಾ

ಓ ನೀ ಒಲವಿನ ಕಡಲನ್ನು ಈಜುತ ದಾಟುವೆಯಾ
ಅಥವ ಆಳದಲಿ ಮುಳುಗಿ ಮುತ್ತುಗಳ ಆಯುವೆಯಾ
ಓ ನೀ ನೆನಪಿನ ತೀರದಲಿ ಸುಮ್ಮನೆ ನಡೆಯುವೆಯಾ
ಅಥವ ಮರಳಿನಲಿ ಮುದ್ದು ಹೆಸರನ್ನು ಬರೆಯುವೆಯಾ
ಈ ಭೂಮಿ ಗಂಧ ಈ ಭಾವ ಬಂಧ ಎಂದೆಂದು ಮುರಿಯದೇನು
ನಿನಗೆಂದೆ ನಾನು ಹೂವಾಯುವಾಗ ನೀ ಬಂದು ಹೋದೆ ಏನು

ಹೇ ಮೌನಾ ...

ಓ ನೀ ಕನಸಿನ ಬೀದಿಯಲಿ ಅರಸುತ ಅಲೆಯುವೆಯಾ
ಅಥವ ಬಾಗಿಲನು ತೆರೆದು ಹೊಸ್ತಿಲಲಿ ಕಾಯುವೆಯಾ
ಓ ನೀ ಒಲವಿನ ಚಿಹ್ನೆಗಳ ಅಳಿಸದೆ ಉಳಿಸುವೆಯಾ
ಅಥವ ನೋವುಗಳ ಕಣ್ಣು ತಪ್ಪಿಸುತ ಸಹಿಸುವೆಯಾ
ಆಕಾಶದಲ್ಲಿ ತಾರೆಗಳ ಜಾತ್ರೆ ಚಂದಿರನ ಬೆಳ್ಳಿ ತೇರು
ಈ ಲೋಕ ತನ್ನ ಪಾಡಲ್ಲಿ ತಾನು ನನ್ನವರು ಇಲ್ಲಿ ಯಾರು

ಹೇ ಮೌನಾ ...

*********************************************************************************

ನೀನು ಬ೦ದ ಮೇಲೆ

ಸಾಹಿತ್ಯ: ಕವಿರಾಜ್  
ಗಾಯಕ: ಸೋನು ನಿಗಮ್, ನಂದಿತಾ 


ನೀನು ಬ೦ದ ಮೇಲೆ ತಾನೆ 
ಇಷ್ಟು ಚ೦ದ ಈ ಬಾಳು
ನೀನೇ ತಾನೆ ಹೇಳಿಕೊಟ್ಟೆ ಪ್ರೀತಿಸಲು
ಕ೦ಗಳು ಹಿ೦ದೆ೦ದೂ ಕಾಣದ ಹೊಸದೊ೦ದು 
ಲೋಕಕೆ ನನ್ನನ್ನು ನೀ ಸೆಳೆದೆ

ನೀನು ಬ೦ದ ಮೇಲೆ ತಾನೆ 
ಇಷ್ಟು ಚ೦ದ ಈ ಬಾಳು
ನೀನೇ ತಾನೆ ಹೇಳಿಕೊಟ್ಟೆ ಪ್ರೀತಿಸಲು
ಕ೦ಗಳು ಹಿ೦ದೆ೦ದೂ ಕಾಣದ ಹೊಸದೊ೦ದು 
ಲೋಕಕೆ ನನ್ನನ್ನು ನೀ ಸೆಳೆದೆ

ಹೆಸರನು ಕೂಡಿಸಿ ಬರೆಯೋ ಆ ಖುಷಿ ಇನ್ನೆಲ್ಲೂ ನಾಕಾಣೆ
ಈ ಪ್ರೀತಿ ಎ೦ಥ ಅಸಮಾನ
ಕಾಯಿಸಿ ಕಾಯಿಸಿ ಬರದೆ ಸತಾಯಿಸಿ ಕಾಡೋದು ಪ್ರೀತೀನೆ
ಅದರಲ್ಲೂ ಆಹಾ ಎ೦ಥಾ ಹಿತ
ಒ೦ದಿಷ್ಟು ಹುಸಿಮುನಿಸು  ಒ೦ದಷ್ಟು ಸಿಹಿಗನಸು
ಪ್ರೀತಿಸೋರ ಜೋಳಿಗೇಲಿ ಎ೦ದು ಇರಬೇಕು
ಕ೦ಗಳು ಹಿ೦ದೆ೦ದೂ ಕಾಣದ ಹೊಸದೊ೦ದು 
ಲೋಕಕೆ ನನ್ನನ್ನು ನೀ ಸೆಳೆದೆ

ನೀನು ಬ೦ದ ಮೇಲೆ ತಾನೆ ಇಷ್ಟು ಚ೦ದ ಈ ಬಾಳು
ನೀನೇ ತಾನೆ ಹೇಳಿಕೊಟ್ಟೆ ಪ್ರೀತಿಸಲು

ನಡೆದರೆ ನಿನ್ನ ಹೆಜ್ಜೆ ಮೇಲೆ ನನಗದೆ ಸಪ್ತಪದಿ
ಎ೦ದೆ೦ದೂ ಮಾತು ತಪ್ಪೊಲ್ಲ
ಮಡಿದರೆ ನಿನ್ನ ಮಡಿಲ ಮೇಲೆ ಇರುವ೦ಥ ಒಪ್ಪ೦ದ
ಇ೦ದಿ೦ದ ಒಪ್ಪೊ ಭಗವ೦ತ
ಇದ್ದರೂ ನಿನ್ನ ಜೊತೆ   ಹೋದರೂ ನಿನ್ನ ಜೊತೆ
ನೀನೇ ನಾನು ನಾನೇ ನೀನು ಪ್ರೀತಿ ಮೇಲಾಣೆ
ಕ೦ಗಳು ಹಿ೦ದೆ೦ದೂ ಕಾಣದ ಹೊಸದೊ೦ದು 
ಲೋಕಕೆ ನನ್ನನ್ನು ನೀ ಸೆಳೆದೆ

ನೀನು ಬ೦ದ ಮೇಲೆ ತಾನೆ ಇಷ್ಟು ಚ೦ದ ಈ ಬಾಳು
ನೀನೇ ತಾನೆ ಹೇಳಿಕೊಟ್ಟೆ ಪ್ರೀತಿಸಲು
ನಿನ್ನನೆ ನಾ ನೆನಿಸಿ ನನ್ನೆದೆ ಸ೦ಭ್ರಮಿಸಿ 
ನಿನ್ನದೇ ಸ೦ಪೂರ್ಣ ಈ ಜೀವನ..

*********************************************************************************

ಚಕ್ರವ್ಯೂಹ (1983)

ಚಳಿ ಚಳಿ ತಾಳೆನು

ಚಲನ ಚಿತ್ರ: ಚಕ್ರವ್ಯೂಹ (1983)
ನಿರ್ದೇಶನ: 
ಸಾಹಿತ್ಯ: ಚಿ.ಉದಯಶಂಕರ್ 
ಸಂಗೀತ: ಶಂಕರ್-ಗಣೇಶ್ 
ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ
ನಟನೆ: ಅಂಬರೀಷ್, 

ಗಂಡು:  ಚಳಿ ಚಳಿ ತಾಳೆನು ಈ ಚಳಿಯ, ಆಹಾ ಆಹಾ             
            ಗೆಳತಿಯ ಬಾರೆಯ ನೀ ಸನಿಹ, ಆಹಾ ಆಹಾ
            ಒಲವಿನ ಕಥೆಯ ಹೇಳುವೆನು   
            ವಿರಹದ ವ್ಯಥೆಯ ನೀಡುವೆನು
            ಚಳಿ ಚಳಿss
ಹೆಣ್ಣು:  ಚಳಿ ಚಳಿ ತಾಳೆನು ಈ ಚಳಿಯ, ಆಹಾ ಓಹೋ
          ಗೆಳಯನೆ ಬಾರೆಯ ನೀ ಸನಿಹ, ಓಹೋ ಆಹಾ
          ನಡುಗುವ ಮೈಯ ನೋಡಿದೆಯ  ರಸಿಕನೆ ಜೀವ ತುಂಬುವೆಯ
          ಚಳಿ ಚಳಿss
ಗಂಡು: ಚಳಿ ಚಳಿ ತಾಳೆನು ಈ ಚಳಿಯ, ಆಹಾ ಆಹಾ
ಹೆಣ್ಣು: ಗೆಳಯನೆ ಬಾರೆಯ ನೀ ಸನಿಹ, ಆಹಾ ಓಹೋ
ಗಂಡು:||ಏಕೆ ಹೀಗೆ ನಾಚುವೆ  ಏಕೆ ಎಲ್ಲೋ ನೋಡುವೆ
            ಕಣ್ಣು ಕಣ್ಣು ಬೆರೆಸಿದರೆ  ನನ್ನ ತೋಳಲಿ ಬಳಸಿದರೆ|| - 2
ಹೆಣ್ಣು:  ನಯನದಿ ಮಿಂಚು ತುಂಬುವೆಯ
          ಮುತ್ತಿನ ಮಳೆಯ ಸುರಿಸಿವೆಯ ಚಳಿ ಚಳಿss
ಗಂಡು:  ಚಳಿ ಚಳಿ ತಾಳೆನು ಈ ಚಳಿಯ, ಆಹಾ ಆಹಾ
           ಗೆಳತಿಯ ಬಾರೆಯ ನೀ ಸನಿಹ, ಆಹಾ ಆಹಾ
ಹೆಣ್ಣು :  ನಡುಗುವ ಮೈಯ ನೋಡಿದೆಯ   
            ರಸಿಕನೆ ಜೀವ ತುಂಬುವೆಯ
            ಚಳಿ ಚಳಿss
ಹೆಣ್ಣು: ಚಳಿ ಚಳಿ ತಾಳೆನು ಈ ಚಳಿಯ, ಆಹಾ ಆಹಾ
ಗಂಡು: ಗೆಳತಿಯ ಬಾರೆಯ ನೀ ಸನಿಹ, ಆಹಾ ಆಹಾ
ಹೆಣ್ಣು : ತನುವು ಹೂವಂತಾಗಿದೆ  ಮನವು ಎಲ್ಲೋ ತೇಲಿದೆ
          ಪ್ರಣಯದ ಮತ್ತು ಏರುತಿದೆ   ತುಟಿಗಳು ತುಟಿಯ ಸೇರುತಿದೆ|| - 2
ಗಂಡು:  ಸುಖದ ಚಿಲುಮೆ ಉಕ್ಕುತಿದೆ  ಇನ್ನೂ ಬೇಕು ಎನ್ನಿಸಿದೆ
           ಚಳಿ ಚಳಿss
ಹೆಣ್ಣು:  ಚಳಿ ಚಳಿ ತಾಳೆನು ಈ ಚಳಿಯ, ಆಹಾ ಆಹಾ
           ಗೆಳಯನೆ ಬಾರೆಯ ನೀ ಸನಿಹ, ಓಹೋ ಓಹೋ
ಗಂಡು:  ಒಲವಿನ ಕಥೆಯ ಹೇಳುವೆನು  ವಿರಹದ ವ್ಯಥೆಯ ನೀಡುವೆನು
            ಚಳಿ ಚಳಿss
ಗಂಡು:  ಚಳಿ ಚಳಿ ತಾಳೆನು ಈ ಚಳಿಯ, ಆಹಾ ಆಹಾ
ಹೆಣ್ಣು:  ಗೆಳಯನೆ ಬಾರೆಯ ನೀ ಸನಿಹ, ಓಹೋ ಆಹಾ

*********************************************************************************

ಚಕ್ರವ್ಯೂಹ

ಸಾಹಿತ್ಯ: ಚಿ.ಉದಯಶಂಕರ್ 
ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ 


ಚಕ್ರವ್ಯೂಹ ಇದು ಚಕ್ರವ್ಯೂಹ  ಹಣದ ಮೋಹ ಅಧಿಕಾರದ ಧಾಹ 
ಒಬ್ಬನ ಕೊಂದೆ ಒಬ್ಬನು ಬಾಳುವ ಚಕ್ರವ್ಯೂಹ  ಇದು ಚಕ್ರವ್ಯೂಹ .... ।। ಪ ।। 
ಮೋಸ ವಂಚನೆ ದ್ರೋಹಗಳೆಂಬ ಆಯುಧ ಹಿಡಿದವರು 
ಮಾನವ ರಕ್ತವ ಗಟಗಟ ಕುಡಿಯುವ ಕುಡಿಯುವ ತೇಗುವ ರಾಕ್ಷಸರು ... ।। 
ಸುತ್ತಲೂ ಕುಣಿಯುತಲಿರಲು ಕತ್ತಲು ಕಣ್ಣತುಂಬಿರಲು.... ।। 
ದಾರಿ ಎಲ್ಲಿದೇ .. ನಿನಗೆ ದಾರಿ ಎಲ್ಲಿದೇ ... ।।
ಚಕ್ರವ್ಯೂಹ ಇದು ಚಕ್ರವ್ಯೂಹ....                    
ಉಕ್ಕಿನ ಕೋಟೆಯ ನಡುವಲಿ ನಿಂತು ಯಾರನು ಕೂಗುವೆಯೋ 
ಸೊಕ್ಕಿದ ಆನೆಗಳೆದುರಲೀ  ಓರ್ವನೇ ನುಗ್ಗುತ ಸಾಯುವೆಯೋ ... ।।
ಎದುರಿಸಿ ಉಳಿಯುವೆ ಏನೋ.. ಚದುರಿಸಬಲ್ಲೆಯಾ ನೀನು .. ।।
ದಾರಿ ಎಲ್ಲಿದೇ .. ನಿನಗೆ ದಾರಿ ಎಲ್ಲಿದೇ ... ।।
ಚಕ್ರವ್ಯೂಹ ಇದು ಚಕ್ರವ್ಯೂಹ....      
        *********************************************************************************

ಗಡಿಬಿಡಿ ಅಳಿಯ (1995)

ಜಮಾ ಜಮಾ ಜಮಾ

ಚಲನ ಚಿತ್ರ: ಗಡಿಬಿಡಿ ಅಳಿಯ (1995)
ನಿರ್ದೇಶನ: ಓಂ ಸಾಯಿ ಪ್ರಕಾಶ್  ಸಂಗೀತ : ಸಾಲೋರಿ ಕೋಟೇಶ್ವರ್ ರಾವ್  
ಸಾಹಿತ್ಯ : ಆರ್. ಎನ್. ಜಯಗೋಪಾಲ್ 
ಗಾಯನ : ಎಸ್. ಪಿ. ಬಾಲಸುಬ್ರಹ್ಮಣ್ಯಂ, ಚಿತ್ರಾ
ನಟನೆ: ಶಿವರಾಜ್ ಕುಮಾರ್, ಮಾಲಾಶ್ರೀ, ಮೋಹಿನಿ 


ಜಮಾ ಜಮಾ ಜಮಾ ಜಮಾ ಜಮಾ
ಜಮಾ ಜಮಾ ಜಮಾ ಜಮಾ ಜಮಾ
ಒಹ್.. ಒಹ್.. ಜಮಾ ಜಮಾ ಜಮಾ ಜಮಾಯಿಸಿ 
ಲವ್ವಿಗ್ಯಾವ ಲೈಸನ್ಸ ಇಲ್ಲಾ ಲಗಾಯಿಸಿ
ಒಹ್.. ಒಹ್.. ಜಮಾ ಜಮಾ ಜಮಾ ಜಮಾಯಿಸಿ 
ಲವ್ವಿಗ್ಯಾವ ಲೈಸನ್ಸ ಇಲ್ಲಾ ಲಗಾಯಿಸಿ
ಟೀನೇಜಿನಾ ರೋಮ್ಯಾನ್ಸ್ ಇದು

ಡಿಂಗು ಡಾಂಗು ಡುಯೆಟ್ ಇದು 
ಅಂಬಾಪುರ ಬ್ಯುಟಿಗೂನು ಗಾಜನೂರ ಗಂಡಿಗೂನು 
ಲವ್ ಲವ್ ಲವ್ ಲವ್ ಲವ್ ಲವ್ ಲವ್ ಲವ್ 
ಒಹ್.. ಒಹ್.. ಜಮಾ ಜಮಾ ಜಮಾ ಜಮಾಯಿಸಿ
ಲವ್ವಿಗ್ಯಾವ ಲೈಸನ್ಸ ಇಲ್ಲಾ ಲಗಾಯಿಸಿ
ಒಹ್.. ಒಹ್.. ಜಮಾ ಜಮಾ ಜಮಾ ಜಮಾಯಿಸಿ 
ಲವ್ವಿಗ್ಯಾವ ಲೈಸನ್ಸ ಇಲ್ಲಾ ಲಗಾಯಿಸಿ
ಆಯ್ ಲವ್ ಯು ಎಂದಾಗಲೇ ಬೋಯಿಂಗಲ್ಲಿ 
ಕ್ಲೌಡು ಮೇಲೆ ಹೋದಂತೆಯೇ
ಜಮಾ ಜಮಾ ಜಮಾ ಜಮಾ
ಓಹೋಹೋ... ಹ್ ಹಾರ್ಟ್ ಬೀಟೂ ತಾಳ ಕಥೆ  
ತಗೋ ಕ್ಲಬ್ ರೇಸ್ ಹಾರ್ಸ್ ಓಡಿದಂತೆಯೇ

ಜಮಾ ಜಮಾ ಜಮಾ ಜಮಾ
ಲವ್ಲೀ ಬೀಚು ರೀಪೆರಸ್ಯಾಂಡು ಲವರ್ಸ್ ಪಾರ್ಕು ಮೆರ್ರಿ ಲ್ಯಾಂಡು ನಮ್ಮದೇ ನಮ್ಮದೇ
ಬೋಟಿಂಗ್ ಆಗಲಿ ಡ್ರಿಫ್ಟಿಂಗ್ ಆಗಲಿ ಬೋನಿ ಹಾರ್ಸ್ ರೈಡಿಂಗ್ ಆಗಲಿ ನಮ್ಮದೇ ನಮ್ಮದೇ
ಸಾಟಿ ಇಲ್ಲ ಪಿಂಕು ರೆಡ್ ಲಿಪ್ಪಿಗೆ ಉಯ್ಯೋ ಮರೋ ತೂಗಾಡೋ ಹಿಪ್ಪಿಗೇ
ತಪ್ಪೇ ಇಲ್ಲ ಲಿಪ್ಪು ಸೇರೇ ಲಿಪ್ಪಿಗೆ ಕಿಕ್ಕು ಕೊಡೋ ತುಟಿ ಜೇನು ಸಿಪ್ಪಿಗೇ
ಈ ಕಿಸ್ಸು ಈ ಡ್ರೆಸ್ಸು ಸ್ವರ್ಗಕ್ಕೆ ಅಡ್ರೆಸ್ಸೂ
ಲವ್ ಲವ್ ಲವ್ ಲವ್ ಲವ್ ಲವ್ ಲವ್ ಲವ್   ಜಮಾ ಜಮಾ ಜಮಾ ಜಮಾ
ಒಹ್.. ಒಹ್.. ಜಮಾ ಜಮಾ ಜಮಾ ಜಮಾಯಿಸಿ ಲವ್ವಿಗ್ಯಾವ ಲೈಸನ್ಸ ಇಲ್ಲಾ ಲಗಾಯಿಸಿ
ಜಮಾ ಜಮಾ ಜಮಾ ಜಮಾಯಿಸಿ ಲವ್ವಿಗ್ಯಾವ ಲೈಸನ್ಸ ಇಲ್ಲಾ ಲಗಾಯಿಸಿ 
ಸೂಪರ್ ಹೀರೊ ಸೂಪರ್ ಲವ್ವರ್ ನಾಜೂಕಾಗಿ ಹಿಡಿ ನಾನು ಟೆಂಡರ್ ಫ್ಲವರ್
ಜಮಾ ಜಮಾ ಜಮಾ ಜಮಾ
ಒಹ್... ಮೆಗಾಸ್ಟಾರು ಮೆಗಾ ಲವ್ವರ್ ಸುರೀತಿನೀ ನಿನ್ನ ಮೇಲೆ ಪ್ರೀತಿ ಶವರ್
ಜಮಾ ಜಮಾ ಜಮಾ ಜಮಾ
ಲೈಲಾ ಮಜನು ಗಿಂತ ನಮ್ಮ ಟೂಟಿ ಫ್ರೂಟಿ ಸ್ವೀಟು ಪ್ರೇಮ ಸೂಪರೋ ಸೂಪರೋ
ಮಿಸ್ ವರ್ಲ್ಡ್ ಗಿಂತ ನೀನು ಸೆಕ್ಸಿ ಮಾಡೆಲ್ ಬ್ಯೂಟಿ ಕ್ವೀನೂ ಒಹ್ ಡಿಯರ್ ಒಹ್ ಡಿಯರ್
ನೈಟು ಫುಲ್ಲೂ ನಿದ್ದೇ ಇಲ್ಲಾ ಕಣ್ಣಿಗೆ ನಿಲ್ಲಿಸೂ ನೀನೇ ಬೇಕು ನೀನೆ ಮೈಯಿಗೆ
 ಡಿಯರ್ ಡಿಯರ್ ಗಟ್ಟಿಯಾಗಿ ತಬ್ಬಿಕೋ ರೋಮ್ಯಾನ್ಸಿಗೆ ಕಿಂಗು ನಾನು ಅಂಟಿಕೊ
ಹೌದೌದು ಡಾರ್ಲಿಂಗು ಎಂಬ್ರಾಸ್ ಥ್ರಿಲ್ಲಿಂಗ್ಲವ್ ಲವ್ ಲವ್ ಲವ್ ಲವ್ ಲವ್ ಲವ್ ಲವ್ 
ಜಮಾ ಜಮಾ ಜಮಾ ಜಮಾ
ಓಹೋಹೋ . ಜಮಾ ಜಮಾ ಜಮಾ ಜಮಾಯಿಸಿ ಲವ್ವಿಗ್ಯಾವ ಲೈಸನ್ಸ ಇಲ್ಲಾ ಲಗಾಯಿಸಿ
ಓಹೋಹೋ . ಜಮಾ ಜಮಾ ಜಮಾ ಜಮಾಯಿಸಿ ಲವ್ವಿಗ್ಯಾವ ಲೈಸನ್ಸ ಇಲ್ಲಾ ಲಗಾಯಿಸಿ 
ಟೀನೇಜಿನಾ ರೋಮ್ಯಾನ್ಸ್ ಇದು 
ಡಿಂಗು ಡಾಂಗು ಡುಯೆಟ್ ಇದು 
ಅಂಬಾಪುರ ಬ್ಯುಟಿಗೂನು ಗಾಜನೂರ ಗಂಡಿಗೂನು 
ಲವ್ ಲವ್ ಲವ್ ಲವ್ ಲವ್ ಲವ್ ಲವ್ ಲವ್ 
ಆಆಆಆ.... ( ಜಮಾ ಜಮಾ ಜಮಾ ಜಮಾ)
ಆಆಆಆಆಅ (ಜಮಾ ಜಮಾ ಜಮಾ ಜಮಾ)

*********************************************************************************

ಕನ್ನಡದ ಕುವರನು ನಾನೇ

ಸಾಹಿತ್ಯ : ಆರ್.ಎನ್.ಜಯಗೋಪಾಲ್
ಗಾಯನ :ರಾಜೇಶ್ ಕೃಷ್ಣನ್, ಡಾ।। ರಾಜ್ ಕುಮಾರ್ 


ಕನ್ನಡದ ಕುವರನು ನಾನೇ ರಣರಂಗದ ಗಂಡುಗಲಿ ನಾನೇ
ಆನಂದ ಸವ್ಯಸಾಚಿ ನಾನೇ ನಿಮ್ಮ ಪ್ರೀತಿ ಮುತ್ತಣ್ಣ...
ನಮ್ಮೆಲ್ಲರ ಪ್ರೀತಿಯ ಕಂದ ನೀನೇ, ನ್ಯಾಯಕ್ಕಾಗಿ ನಿಲ್ಲುವವ ನೀನೇ
ನಮ್ಮ ಕಷ್ಟದಲ್ಲಿ ಪಾಲುದಾರ ನೀನೇ, ಮರಿಲಾರೆವು ನಿನ್ನನ್ನ...
ಕೇರಿಗೆ ನಾಯಕ ನಾನೇ ವೈರಿಗೆ ಕಂಟಕ ನಾನೇ
ಕೆಣಕಲು ಸಿಂಹವು ಜೋಪಾನಾ... ಅಹ್ಹ..ಆಹ್ಹಾ.. ...
ಜಿಮ್ಮಾರೆ ಜಿಮ್ಮಾ ಜಿಮ್ಮಾ ಜಿಮ್ಮಾರೆ ಜಿಮ್ಮಾ ಜಿಮ್ಮಾ ಹೊಯ್ಯಲಾ...ಹೊ
ಸಿಂಹದ ಮರಿ ನೀನು ಜೊತೆಗಿದ್ದರೆ ನಮಗಿಲ್ಲ ತೊಂದರೆ ಎಂದೂ ಹೊಯ್ಯಾ ಹೋ
ಅಣ್ಣ ತಮ್ಮ ಯಾರು ಇಲ್ಲ ಬಂಧು ಬಳಗ ನೀವೇ ಎಲ್ಲ
ಅಬಲೆ ಹೆಣ್ಣಿಗೆ ನಾನೇ ಅಣ್ಣ ನೋವ ಮರೆಸಿ ಒರೆಸುವೆ ಕಣ್ಣ
ಕೊಟ್ಟ ಮಾತನು ಉಳಿಸೋದಕ್ಕೆ ಇಟ್ಟ ಹೆಜ್ಜೆ ಮುಂದಿಡೋಕೆ
ನೇರಮೆಯಾಗಿ ನಡೆಯೋದಕ್ಕೆ  ಜೀವ ಕೊಡುವೆ ಇಲ್ಲ ಶಂಕೆ
ಬಂಗಾರದ ಮನುಷ್ಯನ ವಂಶದ ಕುಡಿ ನೀನಪ್ಪ
ನಮ್ಮ ಕಣ್ಣು ಎಂದೂ ನೀನು ಶಿವ ಮೆಚ್ಚಿದ ಕಣ್ಣಪ್ಪ
ಮಣ್ಣಿನ ಮಗ ಜಗ ಮೆಚ್ಚಿದ ಹುಡುಗ ಪುರುಷೋತ್ತಮ ನಾನೇ
ಜ್ವಾಲಾಮುಖಿಯಂತೆ ಪರಶುರಾಮನಂತೆ ಮೃತ್ಯುಂಜಯ ನಾನೇ
ನಿನ್ನನ್ನು ಹೆತ್ತೋರ ಹೊಟ್ಟೆಯು ತಣ್ಣಗಿರಲಿ ಆಶೀರ್ವಾದ ನಿನಗಿರಲಿ
ಕನ್ನಡದ ಕುವರನು ನಾನೇ ರಣರಂಗದ ಗಂಡುಗಲಿ ನಾನೇ
ಆನಂದ ಸವ್ಯಸಾಚಿ ನಾನೇ ನಿಮ್ಮ ಪ್ರೀತಿಯ ಮುತ್ತಣ್ಣ...
ಜಾತಿ ಮತವು ಬೇರೆ ಆದ್ರೂ ತಾಯಿ ಹಾಲು ಒಂದೇ ರುಚಿಯು 
ನಾವು ನೀವು ಯಾರೇ ಆದ್ರೂ  ನಮ್ಮ ತಾಯೇ ಭುವನೇಶ್ವರಿಯು 
ಕೋಟಿ ಕೋಟಿ ಹಣವೇ ಇರಲಿ ತಿನ್ನುವುದು ಎರಡೇ ಹೊತ್ತು 
ಅರಮನೆಯೇ  ನಮಗಾಗಿರಲಿ ಕೊನೆಗೆ ಇಹುದು ಆರಡಿ ಸೊತ್ತು 
ದೇವತಾ ಮನುಷ್ಯನಾಗಿ ವೀರಕೇಸರಿ ಆಗು 
ಭಾಗ್ಯದ ಬಾಗಿಲು ತೆರೆದು  ಧೃವತಾರೆ ಆಗು 
ಏನು ಪುಣ್ಯ ಮಾಡಿ ಯಾವ ಪೂಜೆ ಮಾಡಿ ಇಲ್ಲಿ ನಾನು ಹುಟ್ಟಿರುವೆ 
ನಿಮ್ಮ ಅಭಿಮಾನ ಸದಾ ನನ್ನ ಪ್ರಾಣ ದೊಡ್ಡರ ದಾರೀಲಿ ನಡೆವೆ 
ನಿನ್ನನ್ನು ಹೆತ್ತೋರ ಹೊಟ್ಟೆಯು ತಣ್ಣಗಿರಲಿ ಆಶೀರ್ವಾದ ನಿನಗಿರಲಿ 
ಕನ್ನಡದ ಕುವರನು ನಾನೇ ರಣರಂಗದ ಗಂಡುಗಲಿ ನಾನೇ
ಆನಂದ ಸವ್ಯಸಾಚಿ ನಾನೇ ನಿಮ್ಮ ಪ್ರೀತಿಯ ಮುತ್ತಣ್ಣ...
ನಮ್ಮೆಲ್ಲರ ಪ್ರೀತಿಯ ಕಂದ ನೀನೇ, ನ್ಯಾಯಕ್ಕಾಗಿ ನಿಲ್ಲುವವ ನೀನೇ
ನಮ್ಮ ಕಷ್ಟದಲ್ಲಿ ಪಾಲುದಾರ ನೀನೇ, ಮರಿಲಾರೆವು ನಿನ್ನನ್ನ
ಕೇರಿಗೆ ನಾಯಕ ನಾನೇ ವೈರಿಗೆ ಕಂಟಕ ನಾನೇ
ಕೆಣಕಲು ಸಿಂಹವು ಜೋಪಾನಾ... ಅಹ್ಹ..ಆಹ್ಹಾ.. ...
ಜಿಮ್ಮಾರೆ ಜಿಮ್ಮಾ ಜಿಮ್ಮಾ ಜಿಮ್ಮಾರೆ ಜಿಮ್ಮಾ ಜಿಮ್ಮಾ ಹೊಯ್ಯಲಾ...ಹೊ
ಸಿಂಹದ ಮರಿ ನೀನು ಜೊತೆಗಿದ್ದರೆ ನಮಗಿಲ್ಲ ತೊಂದರೆ ಎಂದೂ ಹೊಯ್ಯಾ ಹೋ
ಹೊಯ್..ಅಹ್ಹ..ಹ್ಹ...ಹೊಯ್

*********************************************************************************

ಎಲ್. ಓ. ವಿ. ಈ

ಸಾಹಿತ್ಯ : ಆರ್.ಎನ್.ಜಯಗೋಪಾಲ್ 
ಗಾಯನ : ಎಸ್. ಪಿ. ಬಾಲಸುಬ್ರಹ್ಮಣ್ಯಂ, ಚಿತ್ರಾ


ಎಲ್. ಓ. ವಿ. ಈ . ಲವ್ ಲವ್ ಲವ್ ಲವ್ ಲವ್ ಲವ್ವು...
ಲೇಡಿಗೆ ಜೆಂಟ್ಲೆಮೆನ್ ಹೊಸ ಜೋಡಿ ಹೊಸ ಜೋಡಿ ಜೋಡಿ
ಪ್ರೀತಿಗೆ ಲವ್ ಟ್ಯಾಕ್ಸ್ ಇಡಬೇಡಿ ಇಡಬೇಡಿ
ಹೊಸ ರೂಟಿನಲ್ಲಿ ಹೋಗಬೇಕು
ಹೊಸ ಲವ್ವು ಸಾಂಗ್ ಹಾಡಬೇಕು
ಮೊಹಬ್ಬತ್ತು ಎಂಥ ಮತ್ತು ಕರಾಮತ್ತು ಬಲು ಗಮ್ಮತ್ತು ಅಬ್ಬಬ್ಬಬ್ಬಾಬ್ಬಾ
ಓ... ಲೇಡಿಗೆ ಜೆಂಟ್ಲೆಮೆನ್ ಹೊಸ ಜೋಡಿ ಹೊಸ ಜೋಡಿ ಜೋಡಿ
ಪ್ರೀತಿಗೆ ಲವ್ ಟ್ಯಾಕ್ಸ್ ಇಡಬೇಡಿ ಇಡಬೇಡಿ
ಹೊಸ ರೂಟಿನಲ್ಲಿ ಹೋಗಬೇಕು
ಹೊಸ ಲವ್ವು ಸಾಂಗ್ ಹಾಡಬೇಕು
ಮೊಹಬ್ಬತ್ತು ಎಂಥ ಮತ್ತು ಕರಾಮತ್ತು ಬಲು ಗಮ್ಮತ್ತು ಅಬ್ಬಬ್ಬಬ್ಬಾಬ್ಬಾ
ಲುಕ್ ಲುಕ್ ಲುಕ್ ಲುಕ್ ಬೇಬಿ ಲುಕ್
ಶೇಕ್ ಶೇಕ್ ಶೇಕ್ ಶೇಕ್ ಜಾಬ್ ಶೇಕ್
ಕಾದಲ್ ಅಂದ್ರೆ ಪ್ರೀತಿ ತಮಿಳಲೇ  ಪ್ರೇಮ ಆಂಟೆ ಒಲವು ತೆಲುಗಲೇ
ಪ್ಯಾರ್ ಹೋತಾ ಹೈ ಲವ್ ಹಿಂದೀಲಿ ಪ್ರೇಮದ  ಬಾಷೇ ಒಂದೇ ಜಗದಲಿ
ಮೊದಲು ಆಗ್ನಿ ರೇಷನ್ ಬಳಿಕ ಆಡೋರೇಷನ್
ಕಣ್ ಕಣ್ಗಳ ಆ ಯುದ್ಧವೇ ಲವ್ಲಿ ಅಟ್ರ್ಯಾಕ್ಷನ್
ಹಾರ್ಟ್ ಹಾರ್ಟಿನ ಆ ಸಂಗಮ ಲೈಫಿಗೆ ಕನೆಕ್ಷನ್
ನಾನು ನೀನು ಮೆಡ್ ಫಾರ್ ಈಚ್ ಅದರ್
ಪ್ರೇಮ ಮಾಡಲು ನಮಗೆ ನೋ ಫಿಯರ್
ಪ್ರೇಮಕ್ಕೆ ಬೇಡ ಟೆಕ್ಸ್ಟ್ ಬುಕ್ಕೂ  ಅದು ಡಾಕ್ಟರೇಟ್ ಡಿಗ್ರಿ ನಮ್ಮ ಹಕ್ಕದು
ಬೇಬಿ ಓ ಬೇಬಿ ಬೇಬಿ ಓ ಬೇಬಿ
ಲೇಡಿಗೆ ಜೆಂಟ್ಲೆಮೆನ್ ಹೊಸ ಜೋಡಿ ಹೊಸ ಜೋಡಿ ಜೋಡಿ
ಪ್ರೀತಿಗೆ ಲವ್ ಟ್ಯಾಕ್ಸ್ ಇಡಬೇಡಿ ಇಡಬೇಡಿ ಬೇಡಿ
ಕಿಸಕಿಸ್ ಕಿಸಕಿಸ್  ಕಿಸ  ಬೇಬಿ ಕಿಸ್
ಹಕ್ ಹಕ್ ಹಕ್ ಹಕ್ ಹಕ್ ಬಾಬ್ ಹಕ್
ಬಾಡಿಗೆ ಬಾಡಿಯು ಆದರೆ ಟಚ್ಚು  ಹಾಕಿದ ಹಾಗೆ ಕರೆಂಟಿನ ಸ್ವಿಚ್ಚು
ಹಾರಿದೆ ನಮ್ಮಯ ಮಧ್ಯದಿ ಸ್ಪಾರ್ಕ್ ಕರೆದಿದೆ ನಮ್ಮನ್ನು ಲವ್ವರ್ಸ್ ಪಾರ್ಕು
ಲಿಸನ್ ಮೈ ಡಾರ್ಲಿಂಗ್ ಮೊದಲ್ ಅಂಡರ್  ಸ್ಟ್ಯಾಂಡಿಂಗ್
ವಯಸ್ ನಕ್ಕರೆ ಲೈಫ್ ಸಕ್ಕರೆ ಹೋಮ್ ಸ್ವೀಟು ಹೋಮು
ಈ ಫಾರ್ಮುಲ ಗೊತ್ತಿದ್ದರೆ ಲವ್ ಸ್ವಿಸ್ ಜಾಮು
ಪ್ರೀತಿ ಹರುಷದ ಗೋಲ್ಡ್ ವೈನಿದು ಮಾರ್ಡನ್ ಆದರೂ ಹಳೆಯ ವೈನಿದು
ಬಾಳಲಿ ಸನ್ ಶೈನ್ ರೈನೇ ಬಂದರೂ ಎಂದೂ ಮುರಿಯದ ಸ್ಟ್ರಾಂಗ್ ಚೈನಿದು
ಬೇಬಿ  ಓ.. ಬೇಬಿ   ಬೇಬಿ  ಓ ಬೇಬಿ ಬೇಬಿ
ಲೇಡಿಗೆ ಜೆಂಟ್ಲೆಮೆನ್ ಹೊಸ ಜೋಡಿ ಹೊಸ ಜೋಡಿ ಜೋಡಿ
ಪ್ರೀತಿಗೆ ಲವ್ ಟ್ಯಾಕ್ಸ್ ಇಡಬೇಡಿ ಇಡಬೇಡಿ
ಹೊಸ ರೂಟಿನಲ್ಲಿ ಹೋಗಬೇಕು
ಹೊಸ ಲವ್ವು ಸಾಂಗ್ ಹಾಡಬೇಕು
ಮೊಹಬ್ಬತ್ತು ಎಂಥ ಮತ್ತು ಕರಾಮತ್ತು
ಬಲು ಗಮ್ಮತ್ತು ಅಬ್ಬಬ್ಬಬ್ಬಾಬ್ಬಾ

*********************************************************************************

ರೀಂಬೋಲ್ ರೀಂಬೋಲ್ 

ಸಾಹಿತ್ಯ: ಆರ್.ಎನ್. ಜಯಗೋಪಾಲ್ 
ಗಾಯನ: ರಾಜೇಶ್ ಕೃಷ್ಣನ್, ಮಂಜುಳಾ ಗುರುರಾಜ್, ಸಂಗೀತಾ ಕಟ್ಟಿ 


ಉಮ್ಮ್ ಬೇಕೇ ಸೈ, ಚುಮ್ ಬೇಕೇ ಸೈ
ಅಪ್ಪುಗೆ ಬೇಕೇ ಸೈ, ತಬ್ಬಿಕೋ ಸೈ
ರೀಂಬೋಲ್ ರೀಂಬೋಲ್ ರೀಂಬೋಲ್
ಟಾಪು ಇದು ಸೈ ಬಾಟಮು ಸೈ  ಒಬ್ಬರು ಸೈಯ್  ಇಲ್ಲ ಇಬ್ಬರು ಸೈಯ್
ನಂಬೋಲ್ಲ ನಂಬೋಲ್ಲ ನಂಬೋಲ್ಲ
ಹೇ.. ರೀಂಬೋಲ್ ರೀಂಬೋಲ್ ರೀಂಬೋಲ್
ಆ ಕೃಷ್ಣಗೆ ರುಕ್ಮಿಣಿ ಇದ್ದಂತೆ ನಾನಿರುವೆ
ಕಾಲು ಒತ್ತುವೇ ನಿನ್ನ ಸೇವೆ ಮಾಡುವೇ
ಎಣ್ಣೆ ಹಚ್ಚುವೇ ನಿನ್ನ ಮೈಯ್ ತಿಕ್ಕುವೇ
ಭಾಮೆಯ ಪ್ರೀತಿಯ ತಂದಂತೆ ನಾ ತರುವೆ
ಮುತ್ತು ಕೊಡುವೆ ನಾ ಸಿಪ್ಪು ಮಾಡುವೆ
ಹನಿಮೂನನು ನೆವರ್ ಎಂಡಿಂಗ್ ಮಾಡುವೇ
ಪ್ರೀತಿಯನೆ ಆಲಯದಿ ಪೂಜೆ ಮಾಡುವೇ ಸದಾ
ಯೂತ್ ಎನ್ನುವ ರಿವರೊಳಗೆ ಸ್ವೀಮ್ಮು ಮಾಡಿಸುವೇ
ದಿನ ಸೆರಗಿನಲ್ಲಿ ನಿನ್ನ ಮುಚ್ಚಿ ಇಡುವೆ
ಬಾ ಮರೆಯಲ್ಲಿ ಬೇಡಿದನ್ನೂ ಕೊಡುವೇ
ಪ್ರೇಮ ಓಪನ್ ಪ್ರೇಮ ಓಪನ್ ಪ್ರೇಮ ಓಪನ್
ಮುಚ್ಚು ಮೇರ್ ಏಕೆ ಎಲ್ಲ ಕೊಡ್ತಿನ ಇನ್ನೂ ಇನ್ನೂ ಬೇಕೇ
ಈ ಕಡೇ ಆ ಕಡೇ ಎಲ್ಲಿ.. ಯಾರಿಗೇ ಯಾರಿಗೆ ಯಾರಿಗೆ ಓಕೆ ಹೇಳಿ
ಉಮ್ಮ್ ಬೇಕೇ ಸೈ, ಚುಮ್ ಬೇಕೇ ಸೈ
ಅಪ್ಪುಗೆ ಬೇಕೇ ಸೈ, ತಬ್ಬಿಕೋ ಸೈ
ರೀಂಬೋಲ್ ರೀಂಬೋಲ್ ರೀಂಬೋಲ್
ಟಾಪು ಇದು ಸೈ ಬಾಟಮು ಸೈ  ಒಬ್ಬರು ಸೈಯ್  ಇಲ್ಲ ಇಬ್ಬರು ಸೈಯ್
ನಂಬೋಲ್ಲ ನಂಬೋಲ್ಲ ನಂಬೋಲ್ಲ
ಹೇ.. ರೀಂಬೋಲ್ ರೀಂಬೋಲ್ ರೀಂಬೋಲ್
ಹಾಂ... ನನ್ನವ ಏನು ಅರಿಯದವ ಬಲು ಒಳ್ಳೆಯವ 
ಇರುಳು ಬಂದರೆ ನನ್ನ ಅಂಟಿಕೊಳ್ಳುವ 
ನೆರಳು ಬಂದರೆ ನನ್ನ ಅಪ್ಪಿಕೊಳ್ಳುವಾ 
ನನ್ನವ ಎಲ್ಲ ಬಲ್ಲನವ ಬಲು ತುಂಟನವ 
ಚಾನ್ಸೂ ಸಿಕ್ಕರೆ ಹ್ಯಾಂಡಲ್ ಮಾಡುವಾ 
ಪಬ್ಲಿಕನಲ್ಲಿಯೇ ದೊಡ್ಡ ಸ್ಕ್ಯಾಂಡಲ್ ಮಾಡುವ 
ದೇವರಂತೆ ಆವ ಬೇಡುವ ಹಾಲು ಹಣ್ಣನು ಸದಾ  
ರಸಿಕತನ ತೋರಿಸುವ ಲವ್ವಿನಾಟದೇ ದಿನ 
ಮಗುವಿನಂತೆ ಮಡಿಲಲಿ ಮಲಗಿ ಹಸಿವು ಎಂದು ಸೆರಗನು ಸೆಳೆವ 
ಮಮ್ಮಿ ಡ್ಯಾಡಿ ಮಮ್ಮಿ ಡ್ಯಾಡಿ ಮಮ್ಮಿ ಡ್ಯಾಡಿ ಆಟವ ಆಡಿ 
ಮನ್ಮಥನೇ ಚೇಂಜ್ ಮಾಡುವ 
ಬಾಪರೇ ಬಾಪರೇ  ಅಂದರ್ ಬಾಹರ್ 
ಮದುವೆಗೆ ಮುಂಚೇ ಡೇಂಜರ್ ಡೇಂಜರ್ ಡೇಂಜರ್ 
ಟಾಪು ಇದು ಸೈ ಬಾಟಮು ಸೈ  ಒಬ್ಬರು ಸೈಯ್  ಇಲ್ಲ ಇಬ್ಬರು ಸೈಯ್
ನಂಬೋಲ್ಲ ನಂಬೋಲ್ಲ ನಂಬೋಲ್ಲ
ಹೇ.. ರೀಂಬೋಲ್ ರೀಂಬೋಲ್ ರೀಂಬೋಲ್
ಉಮ್ಮ್ ಬೇಕೇ ಸೈ,  ಬೇಡಾ..
ಚುಮ್ ಬೇಕೇ ಸೈ.. ನೋ... .
ಅಪ್ಪುಗೆ ಬೇಕೇ ಸೈ, .. ನೋ...
ತಬ್ಬಿಕೋ ನನ್ನ ಸೈ ... ನಹೀ...
ರೀಂಬೋಲ್ ರೀಂಬೋಲ್ ರೀಂಬೋಲ್
ನಂಬೋಲ್ಲ ನಂಬೋಲ್ಲ ನಂಬೋಲ್ಲ
ಹೇ.. ರೀಂಬೋಲ್ ರೀಂಬೋಲ್ ರೀಂಬೋಲ್

*********************************************************************************

Saturday, October 27, 2018

ಗಂಗಾ ಯಮುನಾ (1997)


ಬಂತು ಬಂತು ಮೈನಾ

ಚಲನ ಚಿತ್ರ: ಗಂಗಾ ಯಮುನ (1997)
ನಿರ್ದೇಶನ: ಎಸ್.ಮಹೇಂದರ್ 
ಸಂಗೀತ: ವಿದ್ಯಾಸಾಗರ್ 
ಸಾಹಿತ್ಯ: ಆರ್.ಎನ್.ಜಯಗೋಪಾಲ್ 
ಗಾಯಕರು: ಎಸ್.ಪಿ.ಬಿ., ಎಸ್.ಜಾನಕಿ
ನಟನೆ: ಶಿವರಾಜ್ ಕುಮಾರ್, ಮಾಲಾಶ್ರೀ 


ಬಂತು ಬಂತು ಮೈನಾ ತಂತು ಪ್ರೀತಿಯ ಗಾನ
ಬಂತು ಬಂತು ಮೈನಾ ತಂತು ಪ್ರೀತಿಯ ಗಾನ
ಅದು ಮಿಡಿಯಲು ಸವಿ ನುಡಿಯಲು
ನನ್ನ ಎದೆಯ ಒಳಗೆ ತನನ
ಅದು ಕರೆಯಲು ಜೊತೆ ಬೆರೆಯಲು
ಹೃದಯದೆ ಪ್ರೀತಿ ಕವನ
ಬಂತು ಬಂತು ಮೈನಾ ತಂತು ಪ್ರೀತಿಯ ಗಾನ
ನೀನು ಆಡೊ ಮಾತೆ     ಮಧುರ ಪ್ರೇಮ ಗೀತೆ
ಅದರಲಿ ಬೆರೆತೆ            ನಾ ನನ್ನನೆ ಮರೆತೆ
ಹರೆಯ ತಂದ ರಂಗು    ತುಟಿಯ ಸವಿಯ ಗುಂಗು
ಬರೆಸಿತು ಕವಿತೆ           ಆ ಸುಖದಲಿ ಕಲೆತೆ
ಎದೆಯೊಳಗೆ ಕ್ಷಣ ಕ್ಷಣ   ಅರಿಯದ ತಲ್ಲಣ
ಕೊಡುವೆನು ನಾ ದಿನ ದಿನ   ಅನುಭವ ನೂತನ
ಹೊಸದೊಂದು ಸುಖ ತಂತು   ಈ ನಿನ್ನ ಚುಂಬನ
ಬಂತು ಬಂತು ಮೈನಾ ತಂತು ಪ್ರೀತಿಯ ಗಾನ
ನದಿಯ ಸ್ವರದ ಹಾಗೆ              ನಿನ್ನ ನಗೆಯು ಜಾಣೆ
ಆ ಸ್ವರ ಕೇಳಿ                         ನಾ ಹೋದೆನು ತೇಲಿ
ನಿನ್ನ ಪ್ರೇಮಕಿಂತ                  ಬೇರೆ ಸ್ವರ್ಗ ಕಾಣೆ
ಒಲವಿನ ಸುಖದೆ                   ನಾ ಹರುಷದೆ ನಲಿದೆ
ಮನಸಿನಲಿ ಹೊಸ ಹೊಸ       ಆಸೆಯ ತೋರಣ
ನಗುತಿರಲಿ ಸದಾ ಸದಾ         ಪ್ರೀತಿಯ ಬಂಧನ
ಪ್ರಿಯೆ ನಿನ್ನ ಜೊತೆಯಲ್ಲಿ         ಇರಬೇಕು ನಿತ್ಯ ನಾ
ಬಂತು ಬಂತು ಮೈನಾ         ತಂತು ಪ್ರೀತಿಯ ಗಾನ
ಬಂತು ಬಂತು ಮೈನಾ        ತಂತು ಪ್ರೀತಿಯ ಗಾನ
ಅದು ಮಿಡಿಯಲು ಸವಿ ನುಡಿಯಲು
ನನ್ನ ಎದೆಯ ಒಳಗೆ ತನನ
ಅದು ಕರೆಯಲು ಜೊತೆ ಬೆರೆಯಲು
ಹೃದಯದೆ ಪ್ರೀತಿ ಕವನ
ಬಂತು ಬಂತು ಮೈನಾ     ತಂತು ಪ್ರೀತಿಯ ಗಾನ
ಬಂತು ಬಂತು ಮೈನಾ     ತಂತು ಪ್ರೀತಿಯ ಗಾನ

********************************************************************************

ಪ್ರಿಯೆ ನಿನ್ನ ನೀಲಿ ಕಣ್ಣಲಿ

ಸಾಹಿತ್ಯ: ಆರ್.ಎನ್.ಜಯಗೋಪಾಲ್ 
ಗಾಯಕರು: ಎಸ್.ಪಿ.ಬಿ., ಎಸ್.ಜಾನಕಿ 


ಪ್ರಿಯೆ ನಿನ್ನ ನೀಲಿ ಕಣ್ಣಲಿ... ಕಂಡೆ ಪ್ರೇಮದ ಕಾದಂಬರಿ...
ಪ್ರಿಯ ನಿನ್ನ ಪ್ರೀತಿ ಮಾತಲಿ... ಸುಖ ಸಂಭ್ರಮ ನೀಲಾಂಬರಿ...
ಓಓಓ.. ನೀ ಬಂದೆ ನನ್ನ ಬಾಳಲಿ, ಆನಂದ ಏನು ಹೇಳಲಿ
ನಾ ತೇಲಿದೇ ಬಾನಲಿ... ಸಂಗೀತವೇ ಬಾಳಲಿ... ಓಓಓ... ಸಂಗೀತವೇ ಬಾಳಲಿ...
ಓ ಪ್ರಿಯ ನಿನ್ನ ಪ್ರೀತಿ ಮಾತಲಿ... ಸುಖ ಸಂಭ್ರಮ ನೀಲಾಂಬರಿ...
ಉಸಿರಲ್ಲಿ ಉಸಿರಾಗಿ ಕಲೆತಾಗ ನೀನು
ಅನುರಾಗ ಸುಖರಾಗ ಸವಿಕಂಡೆ ನಾನು
ಒಡಲಲ್ಲಿ ಕಣಕಣವು ತುಂಬಿರಲು ನೀನು
ಬದುಕಲ್ಲಿ ನಾ ಕಂಡೆ ಸವಿಯಾದ ಜೇನು
ಒಲವೆಂಬ ಹೂ ಹಾಸಿ ನಿಂತೆ
ನೀನು ನೆಡೆವಂತ ಈ ದಾರಿಗೆ ಓಓಓ... ನೆಡೆವಂತ ಈ ದಾರಿಗೆ
ಪ್ರಿಯ ನಿನ್ನ ಪ್ರೀತಿ ಮಾತಲಿ... ಸುಖ ಸಂಭ್ರಮ ನೀಲಾಂಬರಿ...
ಪ್ರಿಯೆ ನಿನ್ನ ನೀಲಿ ಕಣ್ಣಲಿ... ಕಂಡೆ ಪ್ರೇಮದ ಕಾದಂಬರಿ...
ಪ್ರಿಯ ನಿಮ್ಮ ಪ್ರತಿರೋಪ ಈ ನಮ್ಮ ಕಂದ
ನಗೆಹಾಲ ಹೊಳೆಯಂತೆ ನಗುವಾಗ ಚಂದ
ಮಮತೆಯ ಮಡಿಲಲ್ಲಿ ಮಗುವಾಗಿ ಬಂದು
ಬಾಳೆಂಬ ಲತೆಯಲ್ಲಿ ಹೂವಾದಳಿಂದು
ಇನ್ನೇನು ಆನಂದ ಬೇಕು... ಆ ಸ್ವರ್ಗವೆ ನಮದಾಗಿದೆ... ಅಆಆ... ಸ್ವರ್ಗವೆ ನಮದಾಗಿದೆ...
ಓ ಪ್ರಿಯೆ ನಿನ್ನ ನೀಲಿ ಕಣ್ಣಲಿ... ಕಂಡೆ ಪ್ರೇಮದ ಕಾದಂಬರಿ...
ಓ ಪ್ರಿಯ ನಿನ್ನ ಪ್ರೀತಿ ಮಾತಲಿ... ಸುಖ ಸಂಭ್ರಮ ನೀಲಾಂಬರಿ...
ಓ ನೀ ಬಂದೆ ನನ್ನ ಬಾಳಲಿ, ಆನಂದ ಏನು ಹೇಳಲಿ
ನಾ ತೇಲಿದೇ ಬಾನಲಿ... ಸಂಗೀತವೇ ಬಾಳಲಿ... ಓಓಓ... ಸಂಗೀತವೇ ಬಾಳಲಿ...

*********************************************************************************

ಒಲವೇ.. ಮೌನವೇ

ಸಾಹಿತ್ಯ: ಆರ್.ಎನ್.ಜಯಗೋಪಾಲ್  
ಗಾಯಕರು: ಎಸ್.ಪಿ.ಬಿ., ಎಸ್.ಜಾನಕಿ


ಒಲವೇ.. ಮೌನವೇ ಮೌನವೇ ಗಾನವೇ
ಮನಸು ನಾಚಿದೆ ಮಾತು ಬಾರದೆ ಪ್ರಿಯ
ಪ್ರಣಯ ರಾಗದಲಿ ಹೃದಯ ವೀಣೆ ಮೀಟಿದೆ
ನನ್ನ ದೇಹದಲ್ಲಿ ಪ್ರಾಣವಾಗಿ ನಲಿದೆ
ಏನೋ ಸುಖ ಓಲಾಡಿದೆ
ಏಕೋ ಮನ ತೇಲಾಡಿದೆ
ಜಗವಾ ಮರೆಸೆ (ನಿನ್ನಾ ಬೆರೆಸೆ)
ಹೊಸದು ಒಂದು ಲೋಕ ನುಡಿದೆ

ಒಲವೇ... ಮೌನವೇ ಮೌನವೇ ಗಾನವೇ
ಮನಸು ನಾಚಿದೆ ಮಾತು ಬಾರದೆ ಪ್ರಿಯ
ಗಾಳಿಯಂತೆ ಬಂದು ಪ್ರೀತಿ ತಂಪು ಎರೆದೆ 
ಬಾಳ ಪುಸ್ತಕದಿ ಪ್ರೇಮ ಕಥೆಯ ಬರೆದೆ 
ತಂದೆ ಹೊಸ ರೋಮಾಂಚನ 
ಜೇನ ಸವಿ ಈ ಚುಂಬನ 
ಹೇ.. ಉಸಿರೇ ಉಸಿರೇ  (ಬಾಳ ಹಸಿರೇ )
ಅದೋ ನೋಡು ಚಂದ್ರ ಜಾರಿದೆ

ಒಲವೇ.. ಮೌನವೇ ಮೌನವೇ ಗಾನವೇ
ಮನಸು ನಾಚಿದೆ ಮಾತು ಬಾರದೆ ಪ್ರಿಯ

********************************************************************************

ನೀ ಹೇಳೇ ಗಿಣಿಯೇ


ಸಾಹಿತ್ಯ: ಆರ್.ಎನ್.ಜಯಗೋಪಾಲ್  
ಗಾಯಕರು: ಎಸ್.ಪಿ.ಬಿ., 


ನೀ ಹೇಳೇ ಗಿಣಿಯೇ ನಿನಗಾರು ಇಂದು ಜೋತೆಯು
ಹೋದೆ ಆಸೆ ಹಿಂದೆ ಕಣ್ಣೀರೇ ನಿನ್ನ ಕಥೆಯೆ
ನಿನ್ನ ಬಂಗಾರದ ಅರಮನೆಯು ಶೂನ್ಯವು
ಬಾಳ ಪಥದೆ ಇಂದು ಏಕಾಂಗಿ ನೀನು
ನೀ ಹೇಳೇ ಗಿಣಿಯೇ ನಿನಗಾರು ಇಂದು ಜೋತೆಯು

ಅಮೃತವ ದೂರ ಮಾಡಿ ವಿಷವ ತಿಂದೆಯಲ್ಲಿ 
ಬದುಕೇ ಆಯಿತು ಬಲು ಹೇಳಮ್ಮ ಒಲವನು 
ಕಡೆಗಣಿಸಿ ಹಣವನು ಪಡೆದೆ ಎಂದೇ ಲಾಭ ಏನು ಬಂತು ಹೇಳಮ್ಮ 
ಸಂತೋಷ ನೀಡುವಂಥ ಹಣವೇಕೆ 
ಪ್ರೀತಿ ಪ್ರೇಮ ಇಲ್ಲದಂತ ಬದುಕೇಕೆ ಹೇಳೇ 
ಏಕೆ ಇಂಥ ವ್ಯಾಪಾರ ಗೈದೆ

ನೀ ಹೇಳೇ ಗಿಣಿಯೇ ನಿನಗಾರು ಇಂದು ಜೋತೆಯು
ಹೋದೆ ಆಸೆ ಹಿಂದೆ ಕಣ್ಣೀರೇ ನಿನ್ನ ಕಥೆಯೆ

ಬೆಳಕನು ದೂರ ಮಾಡಿ ಇರುಳಲಿ ನಿಂತೆಯಲ್ಲಿ 
ಮುಗಿಲ ಮಲ್ಲಿಗೆಯು ಸುಖವಮ್ಮ ಧನದ ಮಳೆಯಲಿ 
ಮೆರೆದೆ ಬ್ರಾಂತಿಯಲಿ ಕುರುಡು ಮೋಹವಿದು ತಿಳಿಯಮ್ಮ 
ಅನಾಥೆ ಇಂದು ನೀನು ಲೋಕದಲಿ ನಿನ್ನೋರು ಯಾರು 
ಇಲ್ಲ ನೋವಿನಲಿ ಶಾಂತಿ ತೀರಾ ಬಲು ದೂರ ದೂರವಮ್ಮಾ..

ನೀ ಹೇಳೇ ಗಿಣಿಯೇ ನಿನಗಾರು ಇಂದು ಜೋತೆಯು
ಹೋದೆ ಆಸೆ ಹಿಂದೆ ಕಣ್ಣೀರೇ ನಿನ್ನ ಕಥೆಯೆ 

*********************************************************************************

ನೂರೊಂದು ಆಸೆ 

ಸಾಹಿತ್ಯ: ಆರ್.ಎನ್.ಜಯಗೋಪಾಲ್  
ಗಾಯಕರು: ಎಸ್.ಪಿ.ಬಿ., ಚಿತ್ರಾ 


ನೂರೊಂದು ಆಸೆ ಹೊತ್ತು ಪ್ರೀತಿ ಮುತ್ತು
ತಂದೆನು ಒಲವಿಂದ ಹಾಡಿದೆ ಈ ರಾಗ
ಎಂದೆಂದೂ ಹೆಣ್ಣು ಅಂದ ಹೂವಿನಂತೆ
ಪ್ರೇಯಸಿ ಚೆಲುವಿಂದ ಹಾಡಿದೆ ಈ ರಾಗ
ಯೌವ್ವನವು ಬಂದಾಗ (ಎಳೆಎಳೆಯ ಮನಸಾಗ )
ಈ ಭಾವ ಕಾವ್ಯಧಾರೆ ಪ್ರೇಮ

ನೂರೊಂದು ಆಸೆ ಹೊತ್ತು ಪ್ರೀತಿ ಮುತ್ತು
ತಂದೆನು ಒಲವಿಂದ ಹಾಡಿದೆ ಈ ರಾಗ
ಕಣ್ಣು ಕಣ್ಣು  ಹೆಣ್ಣು ಗಂಡು ಮೆಲ್ಲ ಮೆಲ್ಲ ಕದ್ದು ಕದ್ದು
ಸೂರೆ  ಮಾಡೇ ಪ್ರೇಮ ತಾನೇ
ಒಮ್ಮೆ ಒಮ್ಮೆ ಹಾಡಿ ಕೂಡಿ ಆಡಿ ಮೋಡಿ
ಮಾಡೋ ಸ್ನೇಹ ಹೌದೇನೇ 
ಶೃಂಗಾರ ನೀರಲೂ ಹೊಂಗಿರಣವು
ಅಂಗಾಂಗ ರಂಗೇರಿ ಶೃಂಗಾರವು
ಎಂತು ಸಮ ಮಾತಲ್ಲಿ ಗೆಳೆಯ

ನೂರೊಂದು ಆಸೆ ಹೊತ್ತು ಪ್ರೀತಿ ಮುತ್ತು
ತಂದೆನು ಒಲವಿಂದ ಹಾಡಿದೆ ಈ ರಾಗ
ಮಲ್ಲೆ ಮಲ್ಲೆ ಅಂಜು ಮಲ್ಲೆ ಅಂಜಬೇಡ
ಮಂಜ ಹನಿ ನನ್ನ ಪ್ರೇಮ ಅಲ್ಲ ನಲ್ಲೆ
ಬಲ್ಲೆ ಬಲ್ಲೆ ಎಲ್ಲ ಬಲ್ಲೆ ಸಂಜೆ ಗಾಳಿ
ಬೀಸೋ ವೇಳೆ ಇರುವೆ ಜೊತೆಯಲ್ಲಿ
ಪ್ರೀತಿಗೆ ಸಾವಿಲ್ಲಿ ಓ ಸುಂದರಿ
ಹೃದಯದಿ ನುಡಿಯು ನೀನು ಬರಿ
ಮಂದಾರ ನೀ ನನಗೆ ಗೆಳತೀ

ನೂರೊಂದು ಆಸೆ ಹೊತ್ತು ಪ್ರೀತಿ ಮುತ್ತು
ತಂದೆನು ಒಲವಿಂದ ಹಾಡಿದೆ ಈ ರಾಗ

********************************************************************************

ಶೃಂಗಾರ ಸೌಭಾಗ್ಯ 


ಸಾಹಿತ್ಯ: ಆರ್.ಎನ್.ಜಯಗೋಪಾಲ್  
ಗಾಯಕರು: ಎಸ್.ಪಿ.ಬಿ., ಎಸ್. ಜಾನಕಿ 


ಶೃಂಗಾರ ಸೌಭಾಗ್ಯ ಕುಂಕುಮ ತಂದಾನ ತಂದಾನ
ಮಂಗಳ ಸಿಂಧೂರ ಈ ಕುಂಕುಮ ತಂದಾನ ತಂದಾನ
ಪ್ರೀತಿಯ ಕುಂಕುಮ ಚೆಲುವಿನ ಕುಂಕುಮ ನನ್ನಾಸೆ
ಕಾರಂಜಿ ಈ ಕುಂಕುಮ ಮುನ್ನೂರು ರಂಗಿನ ಪ್ರಿಯ ಸಂಗಮ
ತಂದಾನ ತಂದಾನ

ಶೃಂಗಾರ ಸೌಭಾಗ್ಯ ಕುಂಕುಮ ತಂದಾನ ತಂದಾನ
ಮಂಗಳ ಸಿಂಧೂರ ಈ ಕುಂಕುಮ ತಂದಾನ ತಂದಾನ

ಈ ನಮ್ಮ ಒಲವಿನ ರಂಗು ಹೋ... ತಂದಿದೆ ಹರುಷದ ಗುಂಗು 
ನೀ ತಂದ ಪ್ರೇಮದ ರಂಗು ಬದುಕಿನ ಸುಂದರ ರಂಗು 
ಗಗನ ತಾರೆ ನಿನ್ನ ಕಣ್ಣಲಿ 
ಸೊಬಗಿನ ಮಳೆಬಿಲ್ಲು ನಿನ್ನ ಮಾತಲ್ಲಿ 
ಕುಂಕುಮ ಅಂದ ಮುತ್ತೈದೆಗೆ ಚೆಂದ 
ನಲ್ಲ ನಿನ್ನ ಪ್ರೀತಿ ಅಂದ ರಂಗೋಲಿಯ 
ರಂಗೇ ಅಂದ ತಂದಾನ ತಂದಾನ

ಶೃಂಗಾರ ಸೌಭಾಗ್ಯ ಕುಂಕುಮ ತಂದಾನ ತಂದಾನ
ಮಂಗಳ ಸಿಂಧೂರ ಈ ಕುಂಕುಮ ತಂದಾನ ತಂದಾನ

ಪ್ರಿಯೆ ನಿನ್ನ ನಗುವಿನ ರಂಗು 
ಹೋ ...ಮುತ್ತಿನ ಮಳೆಯಂತ ರಂಗು 
ಪ್ರಿಯೇ ನಿನ್ನ ಕೆನ್ನೆಯ ರಂಗೇ ಸಂಜೆ ಓಕುಳಿ ರಂಗು 
ಹಸುರಿನ ಪೈರಂತ ಓ.. ಈ ಕುಂಕುಮ 
ಅರಳಿದ ಮಂದಾರ ಹೋಲೊ ಕುಂಕುಮ 
ಕುಂಕುಮ ಭಾಗ್ಯ ಈ ಹೆಣ್ಣಿಗೆ ಅಂದ 
ಬಂಗಾರಕ್ಕಿಂತ ಕುಂಕುಮವೇ ಎಂದೂ ಚೆಂದ  
ತಂದಾನ ತಂದಾನ

ಶೃಂಗಾರ ಸೌಭಾಗ್ಯ ಕುಂಕುಮ ತಂದಾನ ತಂದಾನ
ಮಂಗಳ ಸಿಂಧೂರ ಈ ಕುಂಕುಮ ತಂದಾನ ತಂದಾನ 
ಪ್ರೀತಿಯ ಕುಂಕುಮ ಚೆಲುವಿನ ಕುಂಕುಮ ನನ್ನಾಸೆ
ಕಾರಂಜಿ ಈ ಕುಂಕುಮ ಮುನ್ನೂರು ರಂಗಿನ ಪ್ರಿಯ ಸಂಗಮ
ತಂದಾನ ತಂದಾನ 

********************************************************************************