Saturday, October 27, 2018

ಗಂಗಾ ಯಮುನಾ (1997)


ಬಂತು ಬಂತು ಮೈನಾ

ಚಲನ ಚಿತ್ರ: ಗಂಗಾ ಯಮುನ (1997)
ನಿರ್ದೇಶನ: ಎಸ್.ಮಹೇಂದರ್ 
ಸಂಗೀತ: ವಿದ್ಯಾಸಾಗರ್ 
ಸಾಹಿತ್ಯ: ಆರ್.ಎನ್.ಜಯಗೋಪಾಲ್ 
ಗಾಯಕರು: ಎಸ್.ಪಿ.ಬಿ., ಎಸ್.ಜಾನಕಿ
ನಟನೆ: ಶಿವರಾಜ್ ಕುಮಾರ್, ಮಾಲಾಶ್ರೀ 


ಬಂತು ಬಂತು ಮೈನಾ ತಂತು ಪ್ರೀತಿಯ ಗಾನ
ಬಂತು ಬಂತು ಮೈನಾ ತಂತು ಪ್ರೀತಿಯ ಗಾನ
ಅದು ಮಿಡಿಯಲು ಸವಿ ನುಡಿಯಲು
ನನ್ನ ಎದೆಯ ಒಳಗೆ ತನನ
ಅದು ಕರೆಯಲು ಜೊತೆ ಬೆರೆಯಲು
ಹೃದಯದೆ ಪ್ರೀತಿ ಕವನ
ಬಂತು ಬಂತು ಮೈನಾ ತಂತು ಪ್ರೀತಿಯ ಗಾನ
ನೀನು ಆಡೊ ಮಾತೆ     ಮಧುರ ಪ್ರೇಮ ಗೀತೆ
ಅದರಲಿ ಬೆರೆತೆ            ನಾ ನನ್ನನೆ ಮರೆತೆ
ಹರೆಯ ತಂದ ರಂಗು    ತುಟಿಯ ಸವಿಯ ಗುಂಗು
ಬರೆಸಿತು ಕವಿತೆ           ಆ ಸುಖದಲಿ ಕಲೆತೆ
ಎದೆಯೊಳಗೆ ಕ್ಷಣ ಕ್ಷಣ   ಅರಿಯದ ತಲ್ಲಣ
ಕೊಡುವೆನು ನಾ ದಿನ ದಿನ   ಅನುಭವ ನೂತನ
ಹೊಸದೊಂದು ಸುಖ ತಂತು   ಈ ನಿನ್ನ ಚುಂಬನ
ಬಂತು ಬಂತು ಮೈನಾ ತಂತು ಪ್ರೀತಿಯ ಗಾನ
ನದಿಯ ಸ್ವರದ ಹಾಗೆ              ನಿನ್ನ ನಗೆಯು ಜಾಣೆ
ಆ ಸ್ವರ ಕೇಳಿ                         ನಾ ಹೋದೆನು ತೇಲಿ
ನಿನ್ನ ಪ್ರೇಮಕಿಂತ                  ಬೇರೆ ಸ್ವರ್ಗ ಕಾಣೆ
ಒಲವಿನ ಸುಖದೆ                   ನಾ ಹರುಷದೆ ನಲಿದೆ
ಮನಸಿನಲಿ ಹೊಸ ಹೊಸ       ಆಸೆಯ ತೋರಣ
ನಗುತಿರಲಿ ಸದಾ ಸದಾ         ಪ್ರೀತಿಯ ಬಂಧನ
ಪ್ರಿಯೆ ನಿನ್ನ ಜೊತೆಯಲ್ಲಿ         ಇರಬೇಕು ನಿತ್ಯ ನಾ
ಬಂತು ಬಂತು ಮೈನಾ         ತಂತು ಪ್ರೀತಿಯ ಗಾನ
ಬಂತು ಬಂತು ಮೈನಾ        ತಂತು ಪ್ರೀತಿಯ ಗಾನ
ಅದು ಮಿಡಿಯಲು ಸವಿ ನುಡಿಯಲು
ನನ್ನ ಎದೆಯ ಒಳಗೆ ತನನ
ಅದು ಕರೆಯಲು ಜೊತೆ ಬೆರೆಯಲು
ಹೃದಯದೆ ಪ್ರೀತಿ ಕವನ
ಬಂತು ಬಂತು ಮೈನಾ     ತಂತು ಪ್ರೀತಿಯ ಗಾನ
ಬಂತು ಬಂತು ಮೈನಾ     ತಂತು ಪ್ರೀತಿಯ ಗಾನ

********************************************************************************

ಪ್ರಿಯೆ ನಿನ್ನ ನೀಲಿ ಕಣ್ಣಲಿ

ಸಾಹಿತ್ಯ: ಆರ್.ಎನ್.ಜಯಗೋಪಾಲ್ 
ಗಾಯಕರು: ಎಸ್.ಪಿ.ಬಿ., ಎಸ್.ಜಾನಕಿ 


ಪ್ರಿಯೆ ನಿನ್ನ ನೀಲಿ ಕಣ್ಣಲಿ... ಕಂಡೆ ಪ್ರೇಮದ ಕಾದಂಬರಿ...
ಪ್ರಿಯ ನಿನ್ನ ಪ್ರೀತಿ ಮಾತಲಿ... ಸುಖ ಸಂಭ್ರಮ ನೀಲಾಂಬರಿ...
ಓಓಓ.. ನೀ ಬಂದೆ ನನ್ನ ಬಾಳಲಿ, ಆನಂದ ಏನು ಹೇಳಲಿ
ನಾ ತೇಲಿದೇ ಬಾನಲಿ... ಸಂಗೀತವೇ ಬಾಳಲಿ... ಓಓಓ... ಸಂಗೀತವೇ ಬಾಳಲಿ...
ಓ ಪ್ರಿಯ ನಿನ್ನ ಪ್ರೀತಿ ಮಾತಲಿ... ಸುಖ ಸಂಭ್ರಮ ನೀಲಾಂಬರಿ...
ಉಸಿರಲ್ಲಿ ಉಸಿರಾಗಿ ಕಲೆತಾಗ ನೀನು
ಅನುರಾಗ ಸುಖರಾಗ ಸವಿಕಂಡೆ ನಾನು
ಒಡಲಲ್ಲಿ ಕಣಕಣವು ತುಂಬಿರಲು ನೀನು
ಬದುಕಲ್ಲಿ ನಾ ಕಂಡೆ ಸವಿಯಾದ ಜೇನು
ಒಲವೆಂಬ ಹೂ ಹಾಸಿ ನಿಂತೆ
ನೀನು ನೆಡೆವಂತ ಈ ದಾರಿಗೆ ಓಓಓ... ನೆಡೆವಂತ ಈ ದಾರಿಗೆ
ಪ್ರಿಯ ನಿನ್ನ ಪ್ರೀತಿ ಮಾತಲಿ... ಸುಖ ಸಂಭ್ರಮ ನೀಲಾಂಬರಿ...
ಪ್ರಿಯೆ ನಿನ್ನ ನೀಲಿ ಕಣ್ಣಲಿ... ಕಂಡೆ ಪ್ರೇಮದ ಕಾದಂಬರಿ...
ಪ್ರಿಯ ನಿಮ್ಮ ಪ್ರತಿರೋಪ ಈ ನಮ್ಮ ಕಂದ
ನಗೆಹಾಲ ಹೊಳೆಯಂತೆ ನಗುವಾಗ ಚಂದ
ಮಮತೆಯ ಮಡಿಲಲ್ಲಿ ಮಗುವಾಗಿ ಬಂದು
ಬಾಳೆಂಬ ಲತೆಯಲ್ಲಿ ಹೂವಾದಳಿಂದು
ಇನ್ನೇನು ಆನಂದ ಬೇಕು... ಆ ಸ್ವರ್ಗವೆ ನಮದಾಗಿದೆ... ಅಆಆ... ಸ್ವರ್ಗವೆ ನಮದಾಗಿದೆ...
ಓ ಪ್ರಿಯೆ ನಿನ್ನ ನೀಲಿ ಕಣ್ಣಲಿ... ಕಂಡೆ ಪ್ರೇಮದ ಕಾದಂಬರಿ...
ಓ ಪ್ರಿಯ ನಿನ್ನ ಪ್ರೀತಿ ಮಾತಲಿ... ಸುಖ ಸಂಭ್ರಮ ನೀಲಾಂಬರಿ...
ಓ ನೀ ಬಂದೆ ನನ್ನ ಬಾಳಲಿ, ಆನಂದ ಏನು ಹೇಳಲಿ
ನಾ ತೇಲಿದೇ ಬಾನಲಿ... ಸಂಗೀತವೇ ಬಾಳಲಿ... ಓಓಓ... ಸಂಗೀತವೇ ಬಾಳಲಿ...

*********************************************************************************

ಒಲವೇ.. ಮೌನವೇ

ಸಾಹಿತ್ಯ: ಆರ್.ಎನ್.ಜಯಗೋಪಾಲ್  
ಗಾಯಕರು: ಎಸ್.ಪಿ.ಬಿ., ಎಸ್.ಜಾನಕಿ


ಒಲವೇ.. ಮೌನವೇ ಮೌನವೇ ಗಾನವೇ
ಮನಸು ನಾಚಿದೆ ಮಾತು ಬಾರದೆ ಪ್ರಿಯ
ಪ್ರಣಯ ರಾಗದಲಿ ಹೃದಯ ವೀಣೆ ಮೀಟಿದೆ
ನನ್ನ ದೇಹದಲ್ಲಿ ಪ್ರಾಣವಾಗಿ ನಲಿದೆ
ಏನೋ ಸುಖ ಓಲಾಡಿದೆ
ಏಕೋ ಮನ ತೇಲಾಡಿದೆ
ಜಗವಾ ಮರೆಸೆ (ನಿನ್ನಾ ಬೆರೆಸೆ)
ಹೊಸದು ಒಂದು ಲೋಕ ನುಡಿದೆ

ಒಲವೇ... ಮೌನವೇ ಮೌನವೇ ಗಾನವೇ
ಮನಸು ನಾಚಿದೆ ಮಾತು ಬಾರದೆ ಪ್ರಿಯ
ಗಾಳಿಯಂತೆ ಬಂದು ಪ್ರೀತಿ ತಂಪು ಎರೆದೆ 
ಬಾಳ ಪುಸ್ತಕದಿ ಪ್ರೇಮ ಕಥೆಯ ಬರೆದೆ 
ತಂದೆ ಹೊಸ ರೋಮಾಂಚನ 
ಜೇನ ಸವಿ ಈ ಚುಂಬನ 
ಹೇ.. ಉಸಿರೇ ಉಸಿರೇ  (ಬಾಳ ಹಸಿರೇ )
ಅದೋ ನೋಡು ಚಂದ್ರ ಜಾರಿದೆ

ಒಲವೇ.. ಮೌನವೇ ಮೌನವೇ ಗಾನವೇ
ಮನಸು ನಾಚಿದೆ ಮಾತು ಬಾರದೆ ಪ್ರಿಯ

********************************************************************************

ನೀ ಹೇಳೇ ಗಿಣಿಯೇ


ಸಾಹಿತ್ಯ: ಆರ್.ಎನ್.ಜಯಗೋಪಾಲ್  
ಗಾಯಕರು: ಎಸ್.ಪಿ.ಬಿ., 


ನೀ ಹೇಳೇ ಗಿಣಿಯೇ ನಿನಗಾರು ಇಂದು ಜೋತೆಯು
ಹೋದೆ ಆಸೆ ಹಿಂದೆ ಕಣ್ಣೀರೇ ನಿನ್ನ ಕಥೆಯೆ
ನಿನ್ನ ಬಂಗಾರದ ಅರಮನೆಯು ಶೂನ್ಯವು
ಬಾಳ ಪಥದೆ ಇಂದು ಏಕಾಂಗಿ ನೀನು
ನೀ ಹೇಳೇ ಗಿಣಿಯೇ ನಿನಗಾರು ಇಂದು ಜೋತೆಯು

ಅಮೃತವ ದೂರ ಮಾಡಿ ವಿಷವ ತಿಂದೆಯಲ್ಲಿ 
ಬದುಕೇ ಆಯಿತು ಬಲು ಹೇಳಮ್ಮ ಒಲವನು 
ಕಡೆಗಣಿಸಿ ಹಣವನು ಪಡೆದೆ ಎಂದೇ ಲಾಭ ಏನು ಬಂತು ಹೇಳಮ್ಮ 
ಸಂತೋಷ ನೀಡುವಂಥ ಹಣವೇಕೆ 
ಪ್ರೀತಿ ಪ್ರೇಮ ಇಲ್ಲದಂತ ಬದುಕೇಕೆ ಹೇಳೇ 
ಏಕೆ ಇಂಥ ವ್ಯಾಪಾರ ಗೈದೆ

ನೀ ಹೇಳೇ ಗಿಣಿಯೇ ನಿನಗಾರು ಇಂದು ಜೋತೆಯು
ಹೋದೆ ಆಸೆ ಹಿಂದೆ ಕಣ್ಣೀರೇ ನಿನ್ನ ಕಥೆಯೆ

ಬೆಳಕನು ದೂರ ಮಾಡಿ ಇರುಳಲಿ ನಿಂತೆಯಲ್ಲಿ 
ಮುಗಿಲ ಮಲ್ಲಿಗೆಯು ಸುಖವಮ್ಮ ಧನದ ಮಳೆಯಲಿ 
ಮೆರೆದೆ ಬ್ರಾಂತಿಯಲಿ ಕುರುಡು ಮೋಹವಿದು ತಿಳಿಯಮ್ಮ 
ಅನಾಥೆ ಇಂದು ನೀನು ಲೋಕದಲಿ ನಿನ್ನೋರು ಯಾರು 
ಇಲ್ಲ ನೋವಿನಲಿ ಶಾಂತಿ ತೀರಾ ಬಲು ದೂರ ದೂರವಮ್ಮಾ..

ನೀ ಹೇಳೇ ಗಿಣಿಯೇ ನಿನಗಾರು ಇಂದು ಜೋತೆಯು
ಹೋದೆ ಆಸೆ ಹಿಂದೆ ಕಣ್ಣೀರೇ ನಿನ್ನ ಕಥೆಯೆ 

*********************************************************************************

ನೂರೊಂದು ಆಸೆ 

ಸಾಹಿತ್ಯ: ಆರ್.ಎನ್.ಜಯಗೋಪಾಲ್  
ಗಾಯಕರು: ಎಸ್.ಪಿ.ಬಿ., ಚಿತ್ರಾ 


ನೂರೊಂದು ಆಸೆ ಹೊತ್ತು ಪ್ರೀತಿ ಮುತ್ತು
ತಂದೆನು ಒಲವಿಂದ ಹಾಡಿದೆ ಈ ರಾಗ
ಎಂದೆಂದೂ ಹೆಣ್ಣು ಅಂದ ಹೂವಿನಂತೆ
ಪ್ರೇಯಸಿ ಚೆಲುವಿಂದ ಹಾಡಿದೆ ಈ ರಾಗ
ಯೌವ್ವನವು ಬಂದಾಗ (ಎಳೆಎಳೆಯ ಮನಸಾಗ )
ಈ ಭಾವ ಕಾವ್ಯಧಾರೆ ಪ್ರೇಮ

ನೂರೊಂದು ಆಸೆ ಹೊತ್ತು ಪ್ರೀತಿ ಮುತ್ತು
ತಂದೆನು ಒಲವಿಂದ ಹಾಡಿದೆ ಈ ರಾಗ
ಕಣ್ಣು ಕಣ್ಣು  ಹೆಣ್ಣು ಗಂಡು ಮೆಲ್ಲ ಮೆಲ್ಲ ಕದ್ದು ಕದ್ದು
ಸೂರೆ  ಮಾಡೇ ಪ್ರೇಮ ತಾನೇ
ಒಮ್ಮೆ ಒಮ್ಮೆ ಹಾಡಿ ಕೂಡಿ ಆಡಿ ಮೋಡಿ
ಮಾಡೋ ಸ್ನೇಹ ಹೌದೇನೇ 
ಶೃಂಗಾರ ನೀರಲೂ ಹೊಂಗಿರಣವು
ಅಂಗಾಂಗ ರಂಗೇರಿ ಶೃಂಗಾರವು
ಎಂತು ಸಮ ಮಾತಲ್ಲಿ ಗೆಳೆಯ

ನೂರೊಂದು ಆಸೆ ಹೊತ್ತು ಪ್ರೀತಿ ಮುತ್ತು
ತಂದೆನು ಒಲವಿಂದ ಹಾಡಿದೆ ಈ ರಾಗ
ಮಲ್ಲೆ ಮಲ್ಲೆ ಅಂಜು ಮಲ್ಲೆ ಅಂಜಬೇಡ
ಮಂಜ ಹನಿ ನನ್ನ ಪ್ರೇಮ ಅಲ್ಲ ನಲ್ಲೆ
ಬಲ್ಲೆ ಬಲ್ಲೆ ಎಲ್ಲ ಬಲ್ಲೆ ಸಂಜೆ ಗಾಳಿ
ಬೀಸೋ ವೇಳೆ ಇರುವೆ ಜೊತೆಯಲ್ಲಿ
ಪ್ರೀತಿಗೆ ಸಾವಿಲ್ಲಿ ಓ ಸುಂದರಿ
ಹೃದಯದಿ ನುಡಿಯು ನೀನು ಬರಿ
ಮಂದಾರ ನೀ ನನಗೆ ಗೆಳತೀ

ನೂರೊಂದು ಆಸೆ ಹೊತ್ತು ಪ್ರೀತಿ ಮುತ್ತು
ತಂದೆನು ಒಲವಿಂದ ಹಾಡಿದೆ ಈ ರಾಗ

********************************************************************************

ಶೃಂಗಾರ ಸೌಭಾಗ್ಯ 


ಸಾಹಿತ್ಯ: ಆರ್.ಎನ್.ಜಯಗೋಪಾಲ್  
ಗಾಯಕರು: ಎಸ್.ಪಿ.ಬಿ., ಎಸ್. ಜಾನಕಿ 


ಶೃಂಗಾರ ಸೌಭಾಗ್ಯ ಕುಂಕುಮ ತಂದಾನ ತಂದಾನ
ಮಂಗಳ ಸಿಂಧೂರ ಈ ಕುಂಕುಮ ತಂದಾನ ತಂದಾನ
ಪ್ರೀತಿಯ ಕುಂಕುಮ ಚೆಲುವಿನ ಕುಂಕುಮ ನನ್ನಾಸೆ
ಕಾರಂಜಿ ಈ ಕುಂಕುಮ ಮುನ್ನೂರು ರಂಗಿನ ಪ್ರಿಯ ಸಂಗಮ
ತಂದಾನ ತಂದಾನ

ಶೃಂಗಾರ ಸೌಭಾಗ್ಯ ಕುಂಕುಮ ತಂದಾನ ತಂದಾನ
ಮಂಗಳ ಸಿಂಧೂರ ಈ ಕುಂಕುಮ ತಂದಾನ ತಂದಾನ

ಈ ನಮ್ಮ ಒಲವಿನ ರಂಗು ಹೋ... ತಂದಿದೆ ಹರುಷದ ಗುಂಗು 
ನೀ ತಂದ ಪ್ರೇಮದ ರಂಗು ಬದುಕಿನ ಸುಂದರ ರಂಗು 
ಗಗನ ತಾರೆ ನಿನ್ನ ಕಣ್ಣಲಿ 
ಸೊಬಗಿನ ಮಳೆಬಿಲ್ಲು ನಿನ್ನ ಮಾತಲ್ಲಿ 
ಕುಂಕುಮ ಅಂದ ಮುತ್ತೈದೆಗೆ ಚೆಂದ 
ನಲ್ಲ ನಿನ್ನ ಪ್ರೀತಿ ಅಂದ ರಂಗೋಲಿಯ 
ರಂಗೇ ಅಂದ ತಂದಾನ ತಂದಾನ

ಶೃಂಗಾರ ಸೌಭಾಗ್ಯ ಕುಂಕುಮ ತಂದಾನ ತಂದಾನ
ಮಂಗಳ ಸಿಂಧೂರ ಈ ಕುಂಕುಮ ತಂದಾನ ತಂದಾನ

ಪ್ರಿಯೆ ನಿನ್ನ ನಗುವಿನ ರಂಗು 
ಹೋ ...ಮುತ್ತಿನ ಮಳೆಯಂತ ರಂಗು 
ಪ್ರಿಯೇ ನಿನ್ನ ಕೆನ್ನೆಯ ರಂಗೇ ಸಂಜೆ ಓಕುಳಿ ರಂಗು 
ಹಸುರಿನ ಪೈರಂತ ಓ.. ಈ ಕುಂಕುಮ 
ಅರಳಿದ ಮಂದಾರ ಹೋಲೊ ಕುಂಕುಮ 
ಕುಂಕುಮ ಭಾಗ್ಯ ಈ ಹೆಣ್ಣಿಗೆ ಅಂದ 
ಬಂಗಾರಕ್ಕಿಂತ ಕುಂಕುಮವೇ ಎಂದೂ ಚೆಂದ  
ತಂದಾನ ತಂದಾನ

ಶೃಂಗಾರ ಸೌಭಾಗ್ಯ ಕುಂಕುಮ ತಂದಾನ ತಂದಾನ
ಮಂಗಳ ಸಿಂಧೂರ ಈ ಕುಂಕುಮ ತಂದಾನ ತಂದಾನ 
ಪ್ರೀತಿಯ ಕುಂಕುಮ ಚೆಲುವಿನ ಕುಂಕುಮ ನನ್ನಾಸೆ
ಕಾರಂಜಿ ಈ ಕುಂಕುಮ ಮುನ್ನೂರು ರಂಗಿನ ಪ್ರಿಯ ಸಂಗಮ
ತಂದಾನ ತಂದಾನ 

********************************************************************************

No comments:

Post a Comment