Saturday, October 27, 2018

ಗಂಗಾ ಯಮುನಾ (1997)


ಬಂತು ಬಂತು ಮೈನಾ

ಚಲನ ಚಿತ್ರ: ಗಂಗಾ ಯಮುನ (1997)
ನಿರ್ದೇಶನ: ಎಸ್.ಮಹೇಂದರ್ 
ಸಂಗೀತ: ವಿದ್ಯಾಸಾಗರ್ 
ಸಾಹಿತ್ಯ: ಆರ್.ಎನ್.ಜಯಗೋಪಾಲ್ 
ಗಾಯಕರು: ಎಸ್.ಪಿ.ಬಿ., ಎಸ್.ಜಾನಕಿ
ನಟನೆ: ಶಿವರಾಜ್ ಕುಮಾರ್, ಮಾಲಾಶ್ರೀ 


ಬಂತು ಬಂತು ಮೈನಾ ತಂತು ಪ್ರೀತಿಯ ಗಾನ
ಬಂತು ಬಂತು ಮೈನಾ ತಂತು ಪ್ರೀತಿಯ ಗಾನ
ಅದು ಮಿಡಿಯಲು ಸವಿ ನುಡಿಯಲು
ನನ್ನ ಎದೆಯ ಒಳಗೆ ತನನ
ಅದು ಕರೆಯಲು ಜೊತೆ ಬೆರೆಯಲು
ಹೃದಯದೆ ಪ್ರೀತಿ ಕವನ
ಬಂತು ಬಂತು ಮೈನಾ ತಂತು ಪ್ರೀತಿಯ ಗಾನ
ನೀನು ಆಡೊ ಮಾತೆ     ಮಧುರ ಪ್ರೇಮ ಗೀತೆ
ಅದರಲಿ ಬೆರೆತೆ            ನಾ ನನ್ನನೆ ಮರೆತೆ
ಹರೆಯ ತಂದ ರಂಗು    ತುಟಿಯ ಸವಿಯ ಗುಂಗು
ಬರೆಸಿತು ಕವಿತೆ           ಆ ಸುಖದಲಿ ಕಲೆತೆ
ಎದೆಯೊಳಗೆ ಕ್ಷಣ ಕ್ಷಣ   ಅರಿಯದ ತಲ್ಲಣ
ಕೊಡುವೆನು ನಾ ದಿನ ದಿನ   ಅನುಭವ ನೂತನ
ಹೊಸದೊಂದು ಸುಖ ತಂತು   ಈ ನಿನ್ನ ಚುಂಬನ
ಬಂತು ಬಂತು ಮೈನಾ ತಂತು ಪ್ರೀತಿಯ ಗಾನ
ನದಿಯ ಸ್ವರದ ಹಾಗೆ              ನಿನ್ನ ನಗೆಯು ಜಾಣೆ
ಆ ಸ್ವರ ಕೇಳಿ                         ನಾ ಹೋದೆನು ತೇಲಿ
ನಿನ್ನ ಪ್ರೇಮಕಿಂತ                  ಬೇರೆ ಸ್ವರ್ಗ ಕಾಣೆ
ಒಲವಿನ ಸುಖದೆ                   ನಾ ಹರುಷದೆ ನಲಿದೆ
ಮನಸಿನಲಿ ಹೊಸ ಹೊಸ       ಆಸೆಯ ತೋರಣ
ನಗುತಿರಲಿ ಸದಾ ಸದಾ         ಪ್ರೀತಿಯ ಬಂಧನ
ಪ್ರಿಯೆ ನಿನ್ನ ಜೊತೆಯಲ್ಲಿ         ಇರಬೇಕು ನಿತ್ಯ ನಾ
ಬಂತು ಬಂತು ಮೈನಾ         ತಂತು ಪ್ರೀತಿಯ ಗಾನ
ಬಂತು ಬಂತು ಮೈನಾ        ತಂತು ಪ್ರೀತಿಯ ಗಾನ
ಅದು ಮಿಡಿಯಲು ಸವಿ ನುಡಿಯಲು
ನನ್ನ ಎದೆಯ ಒಳಗೆ ತನನ
ಅದು ಕರೆಯಲು ಜೊತೆ ಬೆರೆಯಲು
ಹೃದಯದೆ ಪ್ರೀತಿ ಕವನ
ಬಂತು ಬಂತು ಮೈನಾ     ತಂತು ಪ್ರೀತಿಯ ಗಾನ
ಬಂತು ಬಂತು ಮೈನಾ     ತಂತು ಪ್ರೀತಿಯ ಗಾನ

********************************************************************************

ಪ್ರಿಯೆ ನಿನ್ನ ನೀಲಿ ಕಣ್ಣಲಿ

ಸಾಹಿತ್ಯ: ಆರ್.ಎನ್.ಜಯಗೋಪಾಲ್ 
ಗಾಯಕರು: ಎಸ್.ಪಿ.ಬಿ., ಎಸ್.ಜಾನಕಿ 


ಪ್ರಿಯೆ ನಿನ್ನ ನೀಲಿ ಕಣ್ಣಲಿ... ಕಂಡೆ ಪ್ರೇಮದ ಕಾದಂಬರಿ...
ಪ್ರಿಯ ನಿನ್ನ ಪ್ರೀತಿ ಮಾತಲಿ... ಸುಖ ಸಂಭ್ರಮ ನೀಲಾಂಬರಿ...
ಓಓಓ.. ನೀ ಬಂದೆ ನನ್ನ ಬಾಳಲಿ, ಆನಂದ ಏನು ಹೇಳಲಿ
ನಾ ತೇಲಿದೇ ಬಾನಲಿ... ಸಂಗೀತವೇ ಬಾಳಲಿ... ಓಓಓ... ಸಂಗೀತವೇ ಬಾಳಲಿ...
ಓ ಪ್ರಿಯ ನಿನ್ನ ಪ್ರೀತಿ ಮಾತಲಿ... ಸುಖ ಸಂಭ್ರಮ ನೀಲಾಂಬರಿ...
ಉಸಿರಲ್ಲಿ ಉಸಿರಾಗಿ ಕಲೆತಾಗ ನೀನು
ಅನುರಾಗ ಸುಖರಾಗ ಸವಿಕಂಡೆ ನಾನು
ಒಡಲಲ್ಲಿ ಕಣಕಣವು ತುಂಬಿರಲು ನೀನು
ಬದುಕಲ್ಲಿ ನಾ ಕಂಡೆ ಸವಿಯಾದ ಜೇನು
ಒಲವೆಂಬ ಹೂ ಹಾಸಿ ನಿಂತೆ
ನೀನು ನೆಡೆವಂತ ಈ ದಾರಿಗೆ ಓಓಓ... ನೆಡೆವಂತ ಈ ದಾರಿಗೆ
ಪ್ರಿಯ ನಿನ್ನ ಪ್ರೀತಿ ಮಾತಲಿ... ಸುಖ ಸಂಭ್ರಮ ನೀಲಾಂಬರಿ...
ಪ್ರಿಯೆ ನಿನ್ನ ನೀಲಿ ಕಣ್ಣಲಿ... ಕಂಡೆ ಪ್ರೇಮದ ಕಾದಂಬರಿ...
ಪ್ರಿಯ ನಿಮ್ಮ ಪ್ರತಿರೋಪ ಈ ನಮ್ಮ ಕಂದ
ನಗೆಹಾಲ ಹೊಳೆಯಂತೆ ನಗುವಾಗ ಚಂದ
ಮಮತೆಯ ಮಡಿಲಲ್ಲಿ ಮಗುವಾಗಿ ಬಂದು
ಬಾಳೆಂಬ ಲತೆಯಲ್ಲಿ ಹೂವಾದಳಿಂದು
ಇನ್ನೇನು ಆನಂದ ಬೇಕು... ಆ ಸ್ವರ್ಗವೆ ನಮದಾಗಿದೆ... ಅಆಆ... ಸ್ವರ್ಗವೆ ನಮದಾಗಿದೆ...
ಓ ಪ್ರಿಯೆ ನಿನ್ನ ನೀಲಿ ಕಣ್ಣಲಿ... ಕಂಡೆ ಪ್ರೇಮದ ಕಾದಂಬರಿ...
ಓ ಪ್ರಿಯ ನಿನ್ನ ಪ್ರೀತಿ ಮಾತಲಿ... ಸುಖ ಸಂಭ್ರಮ ನೀಲಾಂಬರಿ...
ಓ ನೀ ಬಂದೆ ನನ್ನ ಬಾಳಲಿ, ಆನಂದ ಏನು ಹೇಳಲಿ
ನಾ ತೇಲಿದೇ ಬಾನಲಿ... ಸಂಗೀತವೇ ಬಾಳಲಿ... ಓಓಓ... ಸಂಗೀತವೇ ಬಾಳಲಿ...

*********************************************************************************

ಒಲವೇ.. ಮೌನವೇ

ಸಾಹಿತ್ಯ: ಆರ್.ಎನ್.ಜಯಗೋಪಾಲ್  
ಗಾಯಕರು: ಎಸ್.ಪಿ.ಬಿ., ಎಸ್.ಜಾನಕಿ


ಒಲವೇ.. ಮೌನವೇ ಮೌನವೇ ಗಾನವೇ
ಮನಸು ನಾಚಿದೆ ಮಾತು ಬಾರದೆ ಪ್ರಿಯ
ಪ್ರಣಯ ರಾಗದಲಿ ಹೃದಯ ವೀಣೆ ಮೀಟಿದೆ
ನನ್ನ ದೇಹದಲ್ಲಿ ಪ್ರಾಣವಾಗಿ ನಲಿದೆ
ಏನೋ ಸುಖ ಓಲಾಡಿದೆ
ಏಕೋ ಮನ ತೇಲಾಡಿದೆ
ಜಗವಾ ಮರೆಸೆ (ನಿನ್ನಾ ಬೆರೆಸೆ)
ಹೊಸದು ಒಂದು ಲೋಕ ನುಡಿದೆ

ಒಲವೇ... ಮೌನವೇ ಮೌನವೇ ಗಾನವೇ
ಮನಸು ನಾಚಿದೆ ಮಾತು ಬಾರದೆ ಪ್ರಿಯ
ಗಾಳಿಯಂತೆ ಬಂದು ಪ್ರೀತಿ ತಂಪು ಎರೆದೆ 
ಬಾಳ ಪುಸ್ತಕದಿ ಪ್ರೇಮ ಕಥೆಯ ಬರೆದೆ 
ತಂದೆ ಹೊಸ ರೋಮಾಂಚನ 
ಜೇನ ಸವಿ ಈ ಚುಂಬನ 
ಹೇ.. ಉಸಿರೇ ಉಸಿರೇ  (ಬಾಳ ಹಸಿರೇ )
ಅದೋ ನೋಡು ಚಂದ್ರ ಜಾರಿದೆ

ಒಲವೇ.. ಮೌನವೇ ಮೌನವೇ ಗಾನವೇ
ಮನಸು ನಾಚಿದೆ ಮಾತು ಬಾರದೆ ಪ್ರಿಯ

********************************************************************************

ನೀ ಹೇಳೇ ಗಿಣಿಯೇ


ಸಾಹಿತ್ಯ: ಆರ್.ಎನ್.ಜಯಗೋಪಾಲ್  
ಗಾಯಕರು: ಎಸ್.ಪಿ.ಬಿ., 


ನೀ ಹೇಳೇ ಗಿಣಿಯೇ ನಿನಗಾರು ಇಂದು ಜೋತೆಯು
ಹೋದೆ ಆಸೆ ಹಿಂದೆ ಕಣ್ಣೀರೇ ನಿನ್ನ ಕಥೆಯೆ
ನಿನ್ನ ಬಂಗಾರದ ಅರಮನೆಯು ಶೂನ್ಯವು
ಬಾಳ ಪಥದೆ ಇಂದು ಏಕಾಂಗಿ ನೀನು
ನೀ ಹೇಳೇ ಗಿಣಿಯೇ ನಿನಗಾರು ಇಂದು ಜೋತೆಯು

ಅಮೃತವ ದೂರ ಮಾಡಿ ವಿಷವ ತಿಂದೆಯಲ್ಲಿ 
ಬದುಕೇ ಆಯಿತು ಬಲು ಹೇಳಮ್ಮ ಒಲವನು 
ಕಡೆಗಣಿಸಿ ಹಣವನು ಪಡೆದೆ ಎಂದೇ ಲಾಭ ಏನು ಬಂತು ಹೇಳಮ್ಮ 
ಸಂತೋಷ ನೀಡುವಂಥ ಹಣವೇಕೆ 
ಪ್ರೀತಿ ಪ್ರೇಮ ಇಲ್ಲದಂತ ಬದುಕೇಕೆ ಹೇಳೇ 
ಏಕೆ ಇಂಥ ವ್ಯಾಪಾರ ಗೈದೆ

ನೀ ಹೇಳೇ ಗಿಣಿಯೇ ನಿನಗಾರು ಇಂದು ಜೋತೆಯು
ಹೋದೆ ಆಸೆ ಹಿಂದೆ ಕಣ್ಣೀರೇ ನಿನ್ನ ಕಥೆಯೆ

ಬೆಳಕನು ದೂರ ಮಾಡಿ ಇರುಳಲಿ ನಿಂತೆಯಲ್ಲಿ 
ಮುಗಿಲ ಮಲ್ಲಿಗೆಯು ಸುಖವಮ್ಮ ಧನದ ಮಳೆಯಲಿ 
ಮೆರೆದೆ ಬ್ರಾಂತಿಯಲಿ ಕುರುಡು ಮೋಹವಿದು ತಿಳಿಯಮ್ಮ 
ಅನಾಥೆ ಇಂದು ನೀನು ಲೋಕದಲಿ ನಿನ್ನೋರು ಯಾರು 
ಇಲ್ಲ ನೋವಿನಲಿ ಶಾಂತಿ ತೀರಾ ಬಲು ದೂರ ದೂರವಮ್ಮಾ..

ನೀ ಹೇಳೇ ಗಿಣಿಯೇ ನಿನಗಾರು ಇಂದು ಜೋತೆಯು
ಹೋದೆ ಆಸೆ ಹಿಂದೆ ಕಣ್ಣೀರೇ ನಿನ್ನ ಕಥೆಯೆ 

*********************************************************************************

ನೂರೊಂದು ಆಸೆ 

ಸಾಹಿತ್ಯ: ಆರ್.ಎನ್.ಜಯಗೋಪಾಲ್  
ಗಾಯಕರು: ಎಸ್.ಪಿ.ಬಿ., ಚಿತ್ರಾ 


ನೂರೊಂದು ಆಸೆ ಹೊತ್ತು ಪ್ರೀತಿ ಮುತ್ತು
ತಂದೆನು ಒಲವಿಂದ ಹಾಡಿದೆ ಈ ರಾಗ
ಎಂದೆಂದೂ ಹೆಣ್ಣು ಅಂದ ಹೂವಿನಂತೆ
ಪ್ರೇಯಸಿ ಚೆಲುವಿಂದ ಹಾಡಿದೆ ಈ ರಾಗ
ಯೌವ್ವನವು ಬಂದಾಗ (ಎಳೆಎಳೆಯ ಮನಸಾಗ )
ಈ ಭಾವ ಕಾವ್ಯಧಾರೆ ಪ್ರೇಮ

ನೂರೊಂದು ಆಸೆ ಹೊತ್ತು ಪ್ರೀತಿ ಮುತ್ತು
ತಂದೆನು ಒಲವಿಂದ ಹಾಡಿದೆ ಈ ರಾಗ
ಕಣ್ಣು ಕಣ್ಣು  ಹೆಣ್ಣು ಗಂಡು ಮೆಲ್ಲ ಮೆಲ್ಲ ಕದ್ದು ಕದ್ದು
ಸೂರೆ  ಮಾಡೇ ಪ್ರೇಮ ತಾನೇ
ಒಮ್ಮೆ ಒಮ್ಮೆ ಹಾಡಿ ಕೂಡಿ ಆಡಿ ಮೋಡಿ
ಮಾಡೋ ಸ್ನೇಹ ಹೌದೇನೇ 
ಶೃಂಗಾರ ನೀರಲೂ ಹೊಂಗಿರಣವು
ಅಂಗಾಂಗ ರಂಗೇರಿ ಶೃಂಗಾರವು
ಎಂತು ಸಮ ಮಾತಲ್ಲಿ ಗೆಳೆಯ

ನೂರೊಂದು ಆಸೆ ಹೊತ್ತು ಪ್ರೀತಿ ಮುತ್ತು
ತಂದೆನು ಒಲವಿಂದ ಹಾಡಿದೆ ಈ ರಾಗ
ಮಲ್ಲೆ ಮಲ್ಲೆ ಅಂಜು ಮಲ್ಲೆ ಅಂಜಬೇಡ
ಮಂಜ ಹನಿ ನನ್ನ ಪ್ರೇಮ ಅಲ್ಲ ನಲ್ಲೆ
ಬಲ್ಲೆ ಬಲ್ಲೆ ಎಲ್ಲ ಬಲ್ಲೆ ಸಂಜೆ ಗಾಳಿ
ಬೀಸೋ ವೇಳೆ ಇರುವೆ ಜೊತೆಯಲ್ಲಿ
ಪ್ರೀತಿಗೆ ಸಾವಿಲ್ಲಿ ಓ ಸುಂದರಿ
ಹೃದಯದಿ ನುಡಿಯು ನೀನು ಬರಿ
ಮಂದಾರ ನೀ ನನಗೆ ಗೆಳತೀ

ನೂರೊಂದು ಆಸೆ ಹೊತ್ತು ಪ್ರೀತಿ ಮುತ್ತು
ತಂದೆನು ಒಲವಿಂದ ಹಾಡಿದೆ ಈ ರಾಗ

********************************************************************************

ಶೃಂಗಾರ ಸೌಭಾಗ್ಯ 


ಸಾಹಿತ್ಯ: ಆರ್.ಎನ್.ಜಯಗೋಪಾಲ್  
ಗಾಯಕರು: ಎಸ್.ಪಿ.ಬಿ., ಎಸ್. ಜಾನಕಿ 


ಶೃಂಗಾರ ಸೌಭಾಗ್ಯ ಕುಂಕುಮ ತಂದಾನ ತಂದಾನ
ಮಂಗಳ ಸಿಂಧೂರ ಈ ಕುಂಕುಮ ತಂದಾನ ತಂದಾನ
ಪ್ರೀತಿಯ ಕುಂಕುಮ ಚೆಲುವಿನ ಕುಂಕುಮ ನನ್ನಾಸೆ
ಕಾರಂಜಿ ಈ ಕುಂಕುಮ ಮುನ್ನೂರು ರಂಗಿನ ಪ್ರಿಯ ಸಂಗಮ
ತಂದಾನ ತಂದಾನ

ಶೃಂಗಾರ ಸೌಭಾಗ್ಯ ಕುಂಕುಮ ತಂದಾನ ತಂದಾನ
ಮಂಗಳ ಸಿಂಧೂರ ಈ ಕುಂಕುಮ ತಂದಾನ ತಂದಾನ

ಈ ನಮ್ಮ ಒಲವಿನ ರಂಗು ಹೋ... ತಂದಿದೆ ಹರುಷದ ಗುಂಗು 
ನೀ ತಂದ ಪ್ರೇಮದ ರಂಗು ಬದುಕಿನ ಸುಂದರ ರಂಗು 
ಗಗನ ತಾರೆ ನಿನ್ನ ಕಣ್ಣಲಿ 
ಸೊಬಗಿನ ಮಳೆಬಿಲ್ಲು ನಿನ್ನ ಮಾತಲ್ಲಿ 
ಕುಂಕುಮ ಅಂದ ಮುತ್ತೈದೆಗೆ ಚೆಂದ 
ನಲ್ಲ ನಿನ್ನ ಪ್ರೀತಿ ಅಂದ ರಂಗೋಲಿಯ 
ರಂಗೇ ಅಂದ ತಂದಾನ ತಂದಾನ

ಶೃಂಗಾರ ಸೌಭಾಗ್ಯ ಕುಂಕುಮ ತಂದಾನ ತಂದಾನ
ಮಂಗಳ ಸಿಂಧೂರ ಈ ಕುಂಕುಮ ತಂದಾನ ತಂದಾನ

ಪ್ರಿಯೆ ನಿನ್ನ ನಗುವಿನ ರಂಗು 
ಹೋ ...ಮುತ್ತಿನ ಮಳೆಯಂತ ರಂಗು 
ಪ್ರಿಯೇ ನಿನ್ನ ಕೆನ್ನೆಯ ರಂಗೇ ಸಂಜೆ ಓಕುಳಿ ರಂಗು 
ಹಸುರಿನ ಪೈರಂತ ಓ.. ಈ ಕುಂಕುಮ 
ಅರಳಿದ ಮಂದಾರ ಹೋಲೊ ಕುಂಕುಮ 
ಕುಂಕುಮ ಭಾಗ್ಯ ಈ ಹೆಣ್ಣಿಗೆ ಅಂದ 
ಬಂಗಾರಕ್ಕಿಂತ ಕುಂಕುಮವೇ ಎಂದೂ ಚೆಂದ  
ತಂದಾನ ತಂದಾನ

ಶೃಂಗಾರ ಸೌಭಾಗ್ಯ ಕುಂಕುಮ ತಂದಾನ ತಂದಾನ
ಮಂಗಳ ಸಿಂಧೂರ ಈ ಕುಂಕುಮ ತಂದಾನ ತಂದಾನ 
ಪ್ರೀತಿಯ ಕುಂಕುಮ ಚೆಲುವಿನ ಕುಂಕುಮ ನನ್ನಾಸೆ
ಕಾರಂಜಿ ಈ ಕುಂಕುಮ ಮುನ್ನೂರು ರಂಗಿನ ಪ್ರಿಯ ಸಂಗಮ
ತಂದಾನ ತಂದಾನ 

********************************************************************************

Wednesday, October 24, 2018

ಲೈಫು ಇಷ್ಟೇನೇ (2011)


ಮಾಯಾವಿ ಮಾಯಾವೀ.

ಚಲನ ಚಿತ್ರ: ಲೈಫು ಇಷ್ಟೇನೇ (2011)
ನಿರ್ದೇಶನ: ಪವನ್ ಕುಮಾರ್ 
ಸಂಗೀತ: ಮನೋ ಮೂರ್ತಿ 
ಸಾಹಿತ್ಯ: ಯೋಗರಾಜ್ ಭಟ್ 
ಗಾಯಕರು: ಸೋನು ನಿಗಮ್, ಶ್ರೇಯಾ ಘೋಷಾಲ್ 
ನಟನೆ: ದಿಗಂತ್, ಸಂಯುಕ್ತಾ ಹೊರನಾಡು, ಸಿಂಧು ಲೋಕನಾಥ್, 


ಮಾಯಾವಿ, ಮಾಯಾವೀ...ಮಾಯ ಮಾಡು ನನ್ನ
ಅರೆ ನಿಮಿಷ ಮಾತಾಡು ಮಾತಾಡು ಮಾಯವಾಗು ಮುನ್ನ... 
ಮೂರು ಶಬ್ದದಲಿ ಎಲ್ಲ ಭಾವನೆಯ ಹೇಳು ಸಾಕು
ನನಗೆ ನೀನು ಬೇಕು, ನನಗೂ ನೀನೆ ಬೇಕು. 

ಹೃದಯವಿದು ಕಾದಿದೆ ಓಡಲು ನಿನ್ನೊಂದಿಗೆ,
ಒಲವಿನಲಿ ಈಗಲು ಬೀಳದೆ ಇನ್ನೆಂದಿಗೆ... 
ನಯನಗಳ ಸಂಭಾಷಣೆ, ಪುಳಕಗಳ ಸಂಪಾದನೆ,
ಬಯಕೆಗಳ ಸಂಶೋಧನೆ ನುಡಿಸಬೆಕು ನೀನು.... 

ಕನಸಿನಲಿ ಮಾತಾಡಲು, ಎಳೆದಕಡೆ ಓಡಾಡಲು,
ನೆನಪುಗಳ ಕಾಪಾಡಲು, ಕಲಿಯಬೇಕು ನೀನು.... 
ಇಡಬಹುದೆ ಆಸೆಯಾ, ಠೇವಣಿ ನಿನ್ನೊಂದಿಗೆ?
ಪಿಸುನುಡಿಯ ಇಗಲು, ಕೇಳದೇ ಇನ್ನೆಂದಿಗೆ...

ಓ... ನಿನಗೆ ನಾನು ಬೇಕೆ?, ನಿನಗೂ ನಾನೆ ಬೇಕೆ?. 

ಮಾಯಾವಿ, ಮಾಯಾವೀ...ಮಾಯ ಮಾಡು ನನ್ನ
ಅರೆ ನಿಮಿಷ ಮಾತಾಡು ಮಾತಾಡು ಮಾಯವಾಗು ಮುನ್ನ... 
ಮೂರೆ ಶಬ್ದದಲಿ ಎಲ್ಲ ಭಾವನೆಯ ಹೇಳು ಸಾಕು
ನನಗೆ ನೀನು ಬೇಕು, ನನಗೂ ನೀನೆ ಬೇಕು..... 

ಮೊದಲಸಲ ಕಂಡಾಗಲೆ, ವಿರಹದಲಿ ಬೆಂದಾಗಲೆ,
ಸರಸದಲಿ ಮಿಂದಾಗಲೆ ಒಲಿದೆ ಎನು ನೀನು? 
ಮಿಡಿತವನು ಕದ್ದಾಲಿಸಿ, ಲಹರಿಗಳ ಸಂಭಾಲಿಸಿ,
ಸೆಳೆತವನು ಹಿಂಬಾಲಿಸಿ ಬರುವೆ ಏನು ನೀನು? 

ಮಾಯಾವಿ, ಮಾಯಾವೀ...ಮಾಯ ಮಾಡು ನನ್ನ
ಅರೆ ನಿಮಿಷ ಮಾತಾಡು ಮಾತಾಡು ಮಾಯವಾಗು ಮುನ್ನ... 
ಮೂರೆ ಶಬ್ದದಲಿ ಎಲ್ಲ ಭಾವನೆಯ ಹೇಳು ಸಾಕು
ನನಗೆ ನೀನು ಬೇಕು, ನನಗೂ ನೀನೆ ಬೇಕು... 
ಹೃದಯವಿದು ಕಾದಿದೆ ಓಡಲು ನಿನ್ನೊಂದಿಗೆ,
ಒಲವಿನಲಿ ಈಗಲು ಬೀಳದೆ ಇನ್ನೆಂದಿಗೆ... 
ನನಗೆ ನೀನು ಬೇಕಿ, ನನಗೂ....

********************************************************************************

ಹೃದಯ ಜಾರುತಿದೆ

ಸಾಹಿತ್ಯ: ಯೋಗರಾಜ್ ಭಟ್ 
ಗಾಯಕರು: ರಂಜಿತ್ ರಾಘವ್, ಅಂಕಿತಾ ಪೈ 


ಹೃದಯ ಜಾರುತಿದೆ ನಿನ್ನ ಕಡೆಗೆ ನೀನೇ ಸಂಭಾಳಿಸು…
ಪ್ರಣಯದಾಸೆಯಲಿ ಹೀಗೆ ನೀನು ನನ್ನೇ ಹಿಂಬಾಲಿಸು...
ಬಯಕೆ ಹೂವೊಂದು ಕಣ್ಣಲ್ಲಿ ನಗಲು ಬೇರೆ
ಏನು ಹೇಳಲಿ ಇಂದು ನಾ.. ಮುಗಿಸು ಮೌನವನು
ಸಹನೆ ಮರೆತು ತುಟಿಯ ದಾಟಳಿ ಮೊದಲ ಸ್ಪಂದನ..

ಹೃದಯ ಜಾರುತಿದೆ ನಿನ್ನ ಕಡೆಗೆ ನೀನೇ ಸಂಭಾಳಿಸು… 
ನೆನಪಿನಾಳದಲಿ ಬಿಡದೆ ನಗುವ ಅವಳ ಮುಂಗುರುಳು...

ಕನಸಿನಾಳದಲಿ ಬೆಳಕು ಮುಗಿದ ಕುರುಡು ಬೆಳದಿಂಗಳು…
ಹರಿದ ಹಾಳೆಯಲಿ ನಗುತಾ ಬರೆದ ಮೊದಲ ಪದವು ನನ್ನನೇ ನೋಡಿದೆ..
ಹಳೆಯ ಮೌನದಲಿ ಹೇಳೇ ಇರದ ಕೊನೆಯ ಮಾತು ಈಗಲೂ ಕೇಳಿದೆ...
ನೆನಪಿನಾಳದಲಿ ಬಿಡದೆ ನಗುವ ಅವಳ ಮುಂಗುರುಳು...

*********************************************************************************

ಜೂನಿಯರ್ ದೇವದಾಸ್  

ಸಾಹಿತ್ಯ: ಪವನ್ ಕುಮಾರ್  
ಗಾಯಕರು: ಹೇಮಂತ್ ಕುಮಾರ್, ಅನನ್ಯ ಭಗತ್ 


ಹುಡುಗಿ: ಜೂನಿಯರ್ ದೇವದಾಸ ಅಂದ್ರೆ ಓ ಅಂತಿಯಾ
ಡೈಲಿ ಒಂದು ಹೆಸರಿಡ್ತಿನೀ ಏನಂತೀಯಾ?
ಹುಡುಗ: ಹಳೇ ಹುಡುಗಿ ಕಳ್ಸೊಲ ಮೆಸೇಜು
ಹುಡುಗಿ: ತಗೊತಾಳೆ ಸಿಮ್ ಕಾರ್ಡ್ ಹೊಸದು
ಹುಡುಗ: ಕನಸು ಒಂದು ನೆನಪಿನ ಗರಾಜು
ಹುಡುಗಿ: ನಿನ್ನ ಗೋಳು ತುಂಬಾನೆ ಹಳೇದು
ಎಳೋ ಗುಲ್ಡು ಎಷ್ಟೆ ಅಂದ್ರು ಈ ಲೈಫ಼ು ಇಷ್ಟೆನೇ
ಹುಡುಗ: ಕಷ್ಟ ಸುಖ ಮಾತಾಡೋನ ಬೈಟು ಕಾಫಿ ಹೇಳ್ತೀಯಾ 

ಹುಡುಗಿ: ಬೇಡ ಅಂದ್ರು ನಕ್ಕೊಂಡ್ ನಕ್ಕೊಂಡ್ ಅಡ್ಡ ಸಿಕ್ತಾರೆ
ಹೃದಯಯೆಂಬ ಮಂಚೊರಿಲಿ ಕಡ್ಡಿ ಇಡ್ತಾರೆ
ಡೈಲಿ ರಾತ್ರಿ ಎಸ್.ಎಮ್.ಎಸ್ ಲ್ಲಿ ಮುದ್ದು ಮಾಡ್ತಾರೆ
ಆಮೇಲ್ ಬೇರೆಯವರ ಜೊತೆ ಮದುವೆ ಅಂತಾರೆ
ಗ್ಯಾಪಲಿ ನಾವು ಸಿಕ್ಕಿದಕ್ಕೆ ಥ್ಯಾಂಕ್ಸು ಹೇಳ್ತಾರೆ
ಹೋಗಿ ಬಿಡ್ತಾರೆ ಒಮ್ಮೆ ತಿರುಗಿ ನೋಡಿ ಸೀದ ಹೋಗೆ........ ಬಿಡ್ತಾರೆ
ಹುಡುಗಿ: ಸೆಕೆಂಡೆ ಹ್ಯಾಂಡ್ ಗಂಡ್ ಮಕ್ಳದ್ದು ಲೈಫ಼ು ಇಷ್ಟೆನಾ
ಹುಡುಗ: ಡೀಟೇಲಾಗಿ ಮಾತಾಡೋನ ನಾಳೆ ಬೇಗ ಸಿಕ್ತಿಯಾ

ಹುಡುಗಿ: ಜೂನಿಯರ್ ದೇವದಾಸ ಅಂದ್ರೆ ಓ ಅಂತಿಯಾ
ಡೈಲಿ ಒಂದು ಹೆಸರಿಡ್ತಿನೀ ಏನಂತೀಯಾ? 

ಹುಡುಗಿ: ಕಂಡ ಕೂಡ್ಲೆ ದೂಸ್ರ ಮಾತೆ ಇಲ್ದೇ ಹಿಂದೆ ಬೀಳ್ತೀರಿ
ಬೇಡ ಅಂದ್ರು ಬೈಕಿನಲ್ಲಿ ಲಿಫ಼್ಟು ಕೊಡ್ತೀರಿ
Facebookನಲ್ಲಿ ಹಲ್ಲು ಕಿರ್ಕೊಂಡು ಜೊಲ್ಲು ಬಿಡ್ತೀರಿ
ಎದುರು ಸಿಕ್ರೆ ಸಾಚ ತರ ಸ್ಮೈಲು ಕೊಡ್ತೀರಿ
ನಮಗೆ ಆಕಳಿಕೆ ಬರೋ ಹಂಗೆ ಲವ್ ಯು ಅಂತೀರಿ
ಹಿಂದೆ ಬರ್ತೀರಿ ಮಂಡಿ ಮೇಲೆ ನಿಂತು ಹೂವು ಕೊಟ್ಟೆ ಬಿಡ್ತೀರಿ
ಹುಡುಗ: ಛೇಂಜು ಆಗೋ ಮಕ್ಕ್ಳೆ ಅಲ್ಲ ನಮ್ಮ ಲೈಫ಼ು ಇಷ್ಟೇಯಾ
ಹುಡುಗಿ: ನಿನ್ನ ಮೂತಿ ಸ್ವಲ್ಪ ನೋಡ ಬೇಕು ಪ್ಲೀಸ್ ಗಡ್ಡ ಬೊಳ್ಸಯ್ಯ

********************************************************************************

ಜರಾಸಂಧ (2011)


ಅವರಿವರಾ ಜೊತೆ ಸೇರದೇ

ಚಲನ ಚಿತ್ರ: ಜರಾಸಂಧ (2011)
ನಿರ್ದೇಶನ: ಶಶಾಂಕ್ 
ಸಂಗೀತ: ಅರ್ಜುನ್ ಜನ್ಯ 
ಸಾಹಿತ್ಯ: ಜಯಂತ್ ಕಾಯ್ಕಿಣಿ 
ಗಾಯಕರು: ಸೋನು ನಿಗಮ್, ಅನುರಾಧ ಭಟ್ 
ನಟನೆ: ದುನಿಯಾ ವಿಜಯ್, ಪ್ರಣೀತಾ 


ಓ... ಓ... ಓ... ಓ... ಓ... ಓ... 

ಅವರಿವರಾ ಜೊತೆ ಸೇರದೇ...
ಅವರಿವರಾ ನುಡಿ ಕೇಳದೇ...
ಗೆಳತಿಯರಾ ಜೊತೆ ಹೋಗದೇ...
ಪರಿಚಿತರಾ ಬಳಿ ಕೂರದೇ...
ನನ್ನನಷ್ಟೇ... ಸಾಯೋ ಹಾಗೆ ನೀನು ಪ್ರೀತಿಸೂ...
ನಿನ್ನ ಎಲ್ಲಾ... ಅಸೆಗಳ ಸಾಲಿನಲ್ಲಿ
ಎಂದೂ ನನ್ನ ಮುಂದೆ ಇರಿಸು

ಅವರಿವರಾ ಜೊತೆ ಸೇರದೇ...
ಅವರಿವರಾ ನುಡಿ ಕೇಳದೇ...

ನೀ ಹೇಳುವಾ ನಾ ಕೇಳುವಾ ಮಾತು ಒಂದೇ ಆಗಲಿ
ನೀನಾಡುವಾ ಸುಳ್ಳಲ್ಲಿಯೂ ನಾನೇ ಇರಲಿ
ನೀ ಸೋತರೂ ನಾ ಸೋತರೂ ಪ್ರೀತಿ ಎಂದೂ ಗೆಲ್ಲಲೀ
ನೀನೆನ್ನುವಾ ನಾನೆನ್ನುವಾ ಮಾತಿನ್ನೆಲ್ಲಿ 

ನಗುವೆಲ್ಲ ನನಗಾಗಿ ಕೂಡಿ ಹಾಕೂ...
ಮುನಿಸನ್ನು ಬರದಂತೆ ದೂರ ನೂಕೂ..
ಮನಸಲ್ಲಿ ಮರೆಮಾಚಿ ಇಟ್ಟ ಎಲ್ಲಾ...
ಗುಟ್ಟುಗಳ ನನ್ನೆದುರೇ ತೆರಿಯಾ ಬೇಕೂ..
ಎನನ್ನೋ ಹುಡುಕುವ ಘಳಿಗೆ
ನನ್ನ ನಗುವೇ ನಿನಗೆ ಸಿಗಲೀ
ಯಾರನ್ನೋ ಕರಿಯುವ ಕ್ಷಣದೀ
ನನ್ನ ಹೆಸರೇ ಮೊದಲೂ ಬರಲೀ...
ಬೇರೆಯೇನೂ ಯೋಚಿಸದೆ ನನ್ನ ಪ್ರೀತಿಸೂ...
ನಿನ್ನ ಎಲ್ಲಾ... ಅಸೆಗಳ ಸಾಲಿನಲ್ಲಿ
ಎಂದೂ ನನ್ನ ಮುಂದೆ ಇರಿಸು 

ಹೋ...ಹೋ...ಹೋ... ಹೋ...ಹೋ...ಹೋ...
ಓ... ಓ... ಓ... ಓ... ಓ... ಓ...

ನೀ ಹೇಳುವಾ ನಾ ಕೇಳುವಾ ಮಾತು ಒಂದೇ ಆಗಲಿ
ನೀನಾಡುವಾ ಸುಳ್ಳಲ್ಲಿಯೂ ನಾನೇ ಇರಲಿ
ನೀ ಸೋತರೂ ನಾ ಸೋತರೂ ಪ್ರೀತಿ ಎಂದೂ ಗೆಲ್ಲಲೀ
ನೀನೆನ್ನುವಾ ನಾನೆನ್ನುವಾ ಮಾತಿನ್ನೆಲ್ಲಿ

ನೆರಳಾಗಿ ಹಗಲ್ಲೆಲ್ಲಾ ನೀನು ಬೇಕೂ...
ಕನಸಾಗಿ ಇರುಳೆಲ್ಲಾ ಕಾಡ ಬೇಕೂ...
ಬದುಕಲ್ಲಿ ಗುರಿಯಂತೆ ನನ್ನ ಸೇರೀ...
ಅನುರಾಗ ಅನುಗಾಲ ನೀಡು ಸಾಕೂ...
ಮುಂಜಾನೆ ಬೆಳಕಲಿ ಸ್ಮರಿಸು
ಸರಿರಾತ್ರಿ ಕನಸಲಿ ವರಿಸು
ಜಗವೆಲ್ಲಾ ಹೊಗಳುವ ವೇಳೆ
ಮನಸ್ಸಲ್ಲಿ ನನ್ನನೆ ನೆನಸು ದೇವರನ್ನೂ...
ಬೇಡುವಾಗ ನನ್ನ ಜಪಿಸೂ...
ನಿನ್ನ ಎಲ್ಲಾ... ಅಸೆಗಳ ಸಾಲಿನಲ್ಲಿ
ಎಂದೂ ನನ್ನ ಮುಂದೆ ಇರಿಸು

ಅವರಿವರಾ ಜೊತೆ ಸೇರದೇ...
ಅವರಿವರಾ ನುಡಿ ಕೇಳದೇ...

ಓ... ಓ... ಓ... ಓ... ಓ... ಓ...

*********************************************************************************

ಹಳೇ ಹುಬ್ಳಿ 

ಸಾಹಿತ್ಯ: ಯೋಗರಾಜ್ ಭಟ್
ಗಾಯಕರು: ಅರ್ಜುನ್ ಜನ್ಯ


ಅಆಇಈಉಉಊ.... ಅಆಇಈಉಉಊ....
ಅಆಇಈಉಉಊ.... ಅಆಇಈಉಉಊ....
ಅಆಇಈಉಉಊ.... ಅಆಇಈಉಉಊ.... 

ಹಳೆ ಹುಬ್ಳಿ ಬಸ್ಸ್ ಸ್ಟ್ಯಾಂಡ್ಮ್ಯಾಗಾ ನಿಂತಿದ್ದೆ...
ಮಿರ್ಚಿ ಮಂಡಕ್ಕ್ಕೀಮಾ ತಿಂದು ಚಾ.. ಕುಡ್ ದೇ.. 
ಹಳೆ ಹುಬ್ಳಿ ಬಸ್ಸ್ ಸ್ಟ್ಯಾಂಡ್ಮ್ಯಾಗಾ ನಿಂತಿದ್ದೆ...
ಮಿರ್ಚಿ ಮಂಡಕ್ಕ್ಕೀಮಾ ತಿಂದು ಚಾ.. ಕುಡ್ ದೇ...
ಅಡ್ಡ್ಕೀ ಏಲೀ ಹ್ಯಾಕಿಯೆನ್‌ಡ್ಯೂ ನಾ ಬೀಡಿ ಹಚ್ಚಿದ್ದೆ....
ಆಕಿ ಕ್ಕಂಡ್ಲೋ.. ಆಕಿ ಕ್ಕಂಡ್ಲೋ..
ತದಕಲ್ಳಾರ್ಡೇ ಕಣನ್ ಹೊಡ್ದೆ...

ಅಆಇಈಉಉಊ.... ಅಆಇಈಉಉಊ....
ಅಆಇಈಉಉಊ.... ಅಆಇಈಉಉಊ.... 

ಹಳೆ ಹುಬ್ಳಿ ಬಸ್ಸ್ ಸ್ಟ್ಯಾಂಡ್ಮ್ಯಾಗಾ ನಿಂತಿದ್ದೆ...
ಮಿರ್ಚಿ ಮಂಡಕ್ಕ್ಕೀಮಾ ತಿಂದು ಚಾ.. ಕುಡ್ ದೇ...

ಇಳ್ಕಲ್ ಸೀರೆಒಳಗ ಬಾತ್ಕೋಳಿ ಇಟ್ಟಂಗ್ಐತಿ...
ಇಟ್ಟಂಗ್ಐತಿ... ಇಟ್ಟಂಗ್ಐತಿ...
ಕೂಡ್ಲು ಮಾತ್ರ ಕಿಲೊಮಿಟ್ರ್ ಒದ್ದ ಐತಿ... ಒದ್ದ ಐತಿ...
ಕಣ್ಣಿನೊಳಗ ಅರ್ದಾ ಲಿಟ್ರ್ ಹೆಂಡ ಐತಿ... ಹೆಂಡ ಐತಿ...
ಕೊಬರಿ ಎಣ್ನಿ ಜಳಕ ಮಾಡಿ.. ಹೀಟು ಕೂಮ್ನಿ ಆಡವಾಲ್ದೂ...
ಲವ್ವು ಮಾಡಬೇಡಾ ಅಂತ ಲೇಡೀ ಡಾಕ್ಟರೂ ಹೆಳ್ಯರಪ್ಪ...
ಹುಡಗಿ ಕಂಡಮೇಲ ನಮಗ ಸುಮ್ಮನಿರಕ್ಕಾಗಳಲ್ರಪ್ಪ್...
ಮುಂದ.. ಈಕೀ ಮುಂದ... ಹೊಸ ಮಂಗ್ಯ ನಾನಾದೆ.... 

ಅಆಇಈಉಉಊ.... ಅಆಇಈಉಉಊ....
ಅಆಇಈಉಉಊ.... ಅಆಇಈಉಉಊ.... 
ಹಳೆ ಹುಬ್ಳಿ ಬಸ್ಸ್ ಸ್ಟ್ಯಾಂಡ್ಮ್ಯಾಗಾ ನಿಂತಿದ್ದೆ...
ಮಿರ್ಚಿ ಮಂಡಕ್ಕ್ಕೀಮಾ ತಿಂದು ಚಾ.. ಕುಡ್ ದೇ... 

ಗೋಲ ಗುಂಬಾಜ್ಮ್ಯಾಲ ಕರ್ಕೊಂಡು ಹೋಗಿ
ಮುತ್ತು ಕೊಟ್ರ.. ಮುತ್ತು ಕೊಟ್ರ.... ಮುತ್ತು ಕೊಟ್ರ
ಯಾವ್ ಶೀಮೀ ಗಂಡಸ್ಸು ನೀನು
ಅಂತಳ್ ನೋಡ್ರೀ... ಅಂತಳ್ ನೋಡ್ರೀ...
ನಾನಾ ನಾಚೋಹಂಗ ಕೆನ್ನೀ
ಕಚ್ಚಾಳ್ ನೋಡ್ರೀ... ಕಚ್ಚಾಳ್ ನೋಡ್ರೀ...
ಮಳಿ ಬೆಳಿ ಆಗ್ಬೇಕಂದ್ರ.. ಇಂಥವಳೊಬ್ಬ್ಲೂ ಇರ್ಬೆಕ್ರಪ್ಪ...
ಬಯಲು ಸೀಮೀ ಗಾಳಿ ಕುಡಿದು ಬೆಳೆಸಿಕೊಂಡ ಬಾಡೀ ನಂದು...
ರೊಟ್ಟಿ ಒಳ್ಳಾಗಡ್ಡಿ ತಿಂದು ಬೆಳೆಸಿಕೊಂಡ ಶೀಲ ನಂದು...
ಕನಸೋ... ಹಗಲ-ಕನಸಿಂಮ್ಯಾಗಾ ಎಲ್ಲ ಕಳಕೊಂಡೆ.... 

ಅಆಇಈಉಉಊ.... ಅಆಇಈಉಉಊ....
ಅಆಇಈಉಉಊ.... ಅಆಇಈಉಉಊ.... 
ಹಳೆ ಹುಬ್ಳಿ ಬಸ್ಸ್ ಸ್ಟ್ಯಾಂಡ್ಮ್ಯಾಗಾ ನಿಂತಿದ್ದೆ...
ಓ ಓ ಒಹೋ ಮಿರ್ಚಿ ಮಂಡಕ್ಕ್ಕೀಮಾ ತಿಂದು ಚಾ.. ಕುಡ್ ದೇ..
ಓ ಓ ಒಹೋ.. ಅಡ್ಡ್ಕೀ ಏಲೀ ಹ್ಯಾಕಿಯೆನ್‌ಡ್ಯೂ ನಾ ಬೀಡಿ ಹಚ್ಚಿದ್ದೆ....
ಆಕಿ ಕ್ಕಂಡ್ಲೋ.... ಆಕಿ ಕ್ಕಂಡ್ಲೋ....

*********************************************************************************

Tuesday, October 23, 2018

ಜೀವನದಿ (1996)


ಕನ್ನಡ ನಾಡಿನ

ಚಲನ ಚಿತ್ರ: ಜೀವನದಿ (1996)
ನಿರ್ದೇಶನ: ಡಿ. ರಾಜೇಂದ್ರ ಬಾಬು 
ಸಂಗೀತ: ಸಾಲೊರಿ ಕೋಟೇಶ್ವರ ರಾವ್ 
ಸಾಹಿತ್ಯ: ಆರ್.ಎನ್. ಜಯಗೋಪಾಲ್ 
ಗಾಯನ: ಎಸ್. ಪಿ. ಬಾಲಸುಬ್ರಹ್ಮಣ್ಯಂ, ಅನುರಾಧ ಪೌಡ್ವಾಲ್ 
ನಟನೆ: ವಿಷ್ಣುವರ್ಧನ್, ಖುಷ್ಬೂ 


ಆ....ಆ....ಆ....

ಗಂಗೆಯ ತುಂಗೆಯ ಪ್ರೀತಿಯ ಸೋದರಿ
ಪಾವನೆ ಪುಣ್ಯನದಿ
ಬಳುಕುತ ಕುಲುಕುತ ಹರುಷವ ಚೆಲ್ಲುತ
ಸಾಗುವ ಧನ್ಯ ನದಿ
ತಾ ಹೆಜ್ಜೆಯ ಇಟ್ಟೆಡೆ ಅಮೃತ ಹರಿಸಿ
ಕಾಯುವ ಭಾಗ್ಯನದಿ 

ಕನ್ನಡ ನಾಡಿನ ಜೀವನದೀ ಈ ಕಾವೇರಿ
ಓ ಹೋ ಹೋ ಜೀವನದೀ ಈ ಕಾವೇರಿ
ಅನ್ನವ ನೀಡುವ ದೇವನದಿ ಈ ವಯ್ಯಾರಿ
ಓ ಹೋ ಹೋ ಸುಖವ ತರೋ ಈ ಸಿಂಗಾರಿ 

ಈ ತಾಯಿಯೂ ನಕ್ಕರೇ ಸಂತೋಷದಾ ಸಕ್ಕರೇ
ಮಮತೆಯಾ ಮಾತೆಗೆ ಭಾಗ್ಯದಾ ದಾತೆಗೆ
ಮಾಡುವೆ ಭಕ್ತಿಯಾ ವಂದನೇ ಓ... 

ಕನ್ನಡ ನಾಡಿನ ಜೀವನದೀ ಈ ಕಾವೇರಿ
ಓ ಹೋ ಹೋ ಜೀವನದೀ ಈ ಕಾವೇರಿ 

ಪ್ರೇಮದಿ ಕಾವೇರಿ ಹರಿವಳು ನಲಿವಿಂದ
ಸಾಗರದೆಡೆ ಓಡಿ ಸಂಗಮಕೆ
ಹೃದಯದ ಹೊಲದಲ್ಲಿ ಒಲವಿನ ಬೆಳೆ ತಂದು
ಜೀವಗಳೊಂದಾದ ಸಂಭ್ರಮದೆ
ಸಾಗರ ಕಾಣದೆ ಎದೆಯಲಿ ವೇಗವು ಒಡಲಲಿ ಕಂಪನ
ಸ್ಪರ್ಶದ ಸುಖದ ಕಲ್ಪನೆ ತಂದಿದೆ ಏನೋ ರೋಮಾಂಚನ
ಯಾವಾ ಬಂಧವೋ, ಸೃಷ್ಟಿ ಸ್ಪಂದವೋ
ಆಯಸ್ಕಾಂತದ ಸೆಳೆತವೋ ಹರೆಯದ ತುಡಿತವೋ
ಮನಸೂ ತೇಲಾಡಿದೆ... 

ಕನ್ನಡ ನಾಡಿನ ಜೀವನದೀ ಈ ಕಾವೇರಿ
ಓ ಹೋ ಹೋ ಜೀವನದೀ ಈ ಕಾವೇರಿ 

ಹೃದಯದ ಕಡಲಲ್ಲಿ ಆಸೆಯ ಅಲೆ ಎದ್ದು
ಹೊಮ್ಮಿದೆ ಭೋರೆಂದೂ ವಿರಹದಲಿ
ಬೆರೆಯುತ ತನ್ನಲ್ಲಿ ತಣಿಸುವ ನದಿಗಾಗಿ
ಕಾದಿದೆ ನೋಡೆಂದೂ ತವಕದಲಿ 

ಲಜ್ಜೆಯು ಅಳಿಯದು ಮೀರುತಾ ಸಾಗಿಸಿ ಸಾಗರ ಹರಸಿದೆ
ತನ್ನನೆ ಮರೆತು, ಕಡಲಲೆ ಬೆರೆತು ಧನ್ಯವು ತಾನಾಗಿದೆ 

ಪ್ರಕೃತಿ ನಿಯಮವೋ, ಪ್ರೇಮದ ಧರ್ಮವೋ
ಬಳಿ ಸೇರುತ ಓಡುವ ಅಲೆಯ ತಲೆಯಲಿ
ಪ್ರೇಮಾ ಹಾಡಾಗಿದೆ 

ಕನ್ನಡ ನಾಡಿನ ಜೀವನದೀ ಈ ಕಾವೇರಿ
ಓ ಹೋ ಹೋ ಜೀವನದೀ ಈ ಕಾವೇರಿ
ಅನ್ನವ ನೀಡುವ ದೇವನದಿ ಈ ವಯ್ಯಾರಿ
ಓ ಹೋ ಹೋ ಸುಖವ ತರೋ ಈ ಸಿಂಗಾರಿ
ಈ ತಾಯಿಯೂ ನಕ್ಕರೇ ಸಂತೋಷದಾ ಸಕ್ಕರೇ
ಮಮತೆಯಾ ಮಾತೆಗೇ ಭಾಗ್ಯದಾ ದಾತೆಗೇ
ಮಾಡುವೆ ಭಕ್ತಿಯಾ ವಂದನೇ....ಏ.....ಓ.....



*********************************************************************************

Sunday, October 7, 2018

ನಮ್ಮ ಪ್ರೀತಿಯ ರಾಮು (2003)


ನಾ ಕಾಣೋ ಲೋಕವನ್ನೂ 

ನಮ್ಮ ಪ್ರೀತಿಯ ರಾಮು (2003)
ನಿರ್ದೇಶನ: ಸಂಜಯ್-ವಿಜಯ್ 
ಸಂಗೀತ : ಇಳೆಯರಾಜ 
ಸಾಹಿತ್ಯ : ಬಿ.ಪಿ. ರಾಮೇಗೌಡ 
ಗಾಯನ : ಉದಿತ್ ನಾರಾಯಣ್
ನಟನೆ: ದರ್ಶನ್, ನವ್ಯಾ ನಟರಾಜನ್, ಹಂಸವಿಜೇತಾ  


ನಾ ಕಾಣೋ ಲೋಕವನ್ನು
ಕಾಣೋರು ಯಾರು
ನಾ ಕಾಣೋ ಲೋಕವನ್ನು
ಕಾಣೋರು ಯಾರು
ಹೇಳುವೆಯಾ ನೀ ಓ ಇಬ್ಬನಿಯೇ...
ಮೆಲ್ಲನೆ ಹೇಳು ಓ ಮಲ್ಲಿಗೆಯೇ...
ನನ್ನ ಕಾಣೋ ಭೂಮಿ ತಾಯೆ

ನಿನ್ನ ನೋಡಲು ನನಗೆ ಇನ್ನೊಂದು ಜನುಮವು ಬೇಕು
ಬಾನಾಡಿಯ ಹಾಗೆ ನಾ ಹಾಡಿ ಬದುಕಿರಲು ಬೇಕು...
ನಾ ಕಾಣೋ ಲೋಕವನ್ನು ಕಾಣೋರು ಯಾರು

ಅರಳಿದ ಹೂಗಳ ನೋಡದೆ ಹೋದರು ಆ ನಗೆ ನಾನ್ ಅರಿವೇ
ಹರಿಯುವ ನದಿಗಳ ಕಾಣದೆ ಹೋದರು ಸ್ಪರ್ಶದೆ ನಾ ತಿಳಿವೇ
ಕುಹೂ ಕುಹೂ ಕೂಗುವ ಕೋಗಿಲೆ ಗುಂಪಿನ ಇಂಪಲಿ ನಾ ಇರುವೆ
ಕಲ್ಪನೆ ಲೋಕದ ಬೆನ್ನನ್ನು ಏರಿ ರೆಕ್ಕೆಯ ನಾ ಪಡೆವೆ
ನೋವಿಲ್ಲಾ ನಿಮ್ಮನು ನಾ ನೋಡದೆ ಹೋದರೂ
ನೀವು ನನ್ನ ನೋಡಿದರೆ ಸಾಕಲ್ಲವೇ ಅದೂ
ನಿಮ್ಮ ಮುಂದೆ ಗಾಯಕ ನಾ...

ನಾ ಕಾಣೋ ಲೋಕವನ್ನು ಕಾಣೋರು ಯಾರು
ನಾ ಕಾಣೋ ಲೋಕವನ್ನು ಕಾಣೋರು ಯಾರು

ರಾತ್ರಿಯ ಕಳೆಯಲು ಅಮ್ಮನು ಹಾಡಿದ ಲಾಲಿಯ ಸವಿ ಕಥೆಯು
ಕೇಳಿದ ಕಥೆಯಲಿ ಜಗವನು ಕಂಡೆನು ನೆನಪೇ ಹಚ್ಚ ಹಸಿರು
ಹಿರಿಯರ ಮಾತನು ಕೇಳಲು ದಕ್ಕಿತು ಅರಿವಿನ ಈ ವರವು
ಕನ್ನಡ ಪದದಲ್ಲಿ ಬಾಗಿಲು ತೆರೆಯಿತು ಕಷ್ಟಗಳೇ ಇರವು
ಅನುಭವದ ಭಾವಗಳ ಅನುಭವದಲ್ಲಿ
ಇದ್ದುಕೊಂಡೇ ನಂಬಿಕೆಯಾ ಜೀವನವಿಲ್ಲಿ
ಹಾಡಲ್ಲೇ ಬಾಳೋ ಕೋಗಿಲೆ ನಾ ಒಹೋ.. ಒಹೋ..

ನಾ ಕಾಣೋ ಲೋಕವನ್ನು ಕಾಣೋರು ಯಾರು
ನಾ ಕಾಣೋ ಲೋಕವನ್ನು ಕಾಣೋರು ಯಾರು

ಹೇಳುವೆಯಾ ನೀ ಓ ಇಬ್ಬನಿಯೇ...
ಮೆಲ್ಲನೆ ಹೇಳು ಓ ಮಲ್ಲಿಗೆಯೇ...
ನನ್ನ ಕಾಣೋ ಭೂಮಿ ತಾಯೆ
ನಿನ್ನ ನೋಡಲು ನನಗೆ ಇನ್ನೊಂದು ಜನುಮವು ಬೇಕು
ಬಾನಾಡಿಯ ಹಾಗೆ ನಾ ಹಾಡಿ ಬದುಕಿರಲು ಬೇಕು...

ನಾ ಕಾಣೋ ಲೋಕವನ್ನು ಕಾಣೋರು ಯಾರು

*********************************************************************************

ನನ್ನೆದೆ ಬಾನಲಿ

ಸಾಹಿತ್ಯ : ಕೆ. ಕಲ್ಯಾಣ್ 
ಗಾಯನ : ಹರಿಹರನ್ 


ನನ್ನೆದೆ ಬಾನಲಿ ರೆಕ್ಕೆಯ ತೆರೆಯೋ ಬಣ್ಣದ ಹಕ್ಕಿಗಳೇ
ನನ್ನ ಕಥೆಯ ಕೇಳಲು ನಿಮ್ಮಯ ರೆಕ್ಕೆಯು ತಾನೇ ಮುಚ್ಚುವುದು
ಕಲ ಕಲ  ನಗುವಲಿ ಕಚಗುಳಿ ಇರಿಸಿ ಚಿಮ್ಮುವ ನೀರ್ ಅಲೆಯೇ
ನನ್ನ ಸ್ಥಿತಿಯ ಕೇಳಲು ನಿಮ್ಮಯ ಸಡಗರ ಮೌನವ ತಾಳುವುದು
ನಿಮ್ಮಯ ಹಾಗೆ ರೆಕ್ಕೆಯ ಪಡೆಯಲು ಆಸೆಯ ದಿನ ಕಳೆದೆ
ರೆಕ್ಕೆಗಳಿರದೆ ಬಾನಿಗೆ ಹಾರಿ ಮರಳಿ ಕೆಳಗಿಳಿದೆ
ಒಂದು ಹಾಡು ಸಾಲದು ಮನಸು ಬಿಚ್ಚಲು
ಹೃದಯ ತಾಳದು ನೀ ಕೇಳೋ

ನನ್ನೆದೆ ಬಾನಲಿ ರೆಕ್ಕೆಯ ತೆರೆಯೋ ಬಣ್ಣದ ಹಕ್ಕಿಗಳೇ
ನನ್ನ ಕಥೆಯ ಕೇಳಲು ನಿಮ್ಮಯ ರೆಕ್ಕೆಯು ತಾನೇ ಮುಚ್ಚುವುದು
ಕಲ ಕಲ  ನಗುವಲಿ ಕಚಗುಳಿ ಇರಿಸಿ ಚಿಮ್ಮುವ ನೀರ್ ಅಲೆಯೇ
ನನ್ನ ಸ್ಥಿತಿಯ ಕೇಳಲು ನಿಮ್ಮಯ ಸಡಗರ ಮೌನವ ತಾಳುವುದು

ದೇವರಲಿ ಕೇಳಿದೆ ವರವ ನೀಡಿದನು ಅವನ ಸ್ವರವ 
ಜನರಲಿ ಇದ ಯಾರು ತಿಳಿಯೋರು ನಾ ಹಾಡೋ ಹಾಡುಗಳೆಲ್ಲಾ 
ನಾನು ಪಟ್ಟ ಬದುಕಿನ ಪಾಡು ಜಗದಲಿ ಇದ ಯಾರು ಅರಿಯೋರು 
ಮನಸಲಿ ಮಾಳಿಗೆ ವಾಸ ಬರೆದಿದ್ದು ಮರದಡಿ ವಾಸ 
ಇದ್ದರೇನು ನೋವಿನ ನೋವುಗಳಿಲ್ಲಾ ರಾಗವಿದೆ ತಾಳ ಇದೆ 
ನನಗು ಒಂದು ಗರ್ವವಿದೆ ಸತ್ಯವೆಂದು ನನ್ನಲ್ಲಿ ಉಂಟು ಬೇರೇನೂ ಬೇಕು 

ನನ್ನೆದೆ ಬಾನಲಿ ರೆಕ್ಕೆಯ ತೆರೆಯೋ ಬಣ್ಣದ ಹಕ್ಕಿಗಳೇ
ನನ್ನ ಕಥೆಯ ಕೇಳಲು ನಿಮ್ಮಯ ರೆಕ್ಕೆಯು ತಾನೇ ಮುಚ್ಚುವುದು
ಕಲ ಕಲ  ನಗುವಲಿ ಕಚಗುಳಿ ಇರಿಸಿ ಚಿಮ್ಮುವ ನೀರ್ ಅಲೆಯೇ
ನನ್ನ ಸ್ಥಿತಿಯ ಕೇಳಲು ನಿಮ್ಮಯ ಸಡಗರ ಮೌನವ ತಾಳುವುದು

ಹಣಕ್ಕಾಗಿ ಹಾಡೋ ಹಾಡಿಗೆ ಬಿಡಿಗಾಸು ಬೆಲೆಯೂ ಇಲ್ಲಾ
ದಿನ ದಿನ ಅದನೆ ನಾ ಹಾಡಿದೆ ಬೆಲೆ ಇಲ್ಲದ ಹಾಡು ಆದರೂ
ಹಣವ ಎಸೆದು ಬೆಲೆ ಕಟ್ಟುವರು ಅವರಿಗೆ ಎಂದೆಂದೂ ಕೈ ಮುಗಿಯುವೆ
ಮನಸಿರೋರು ನನ್ನ ನೋಡವರು ಮನಸೊಳಗೆ ಕಾಣುವೆ ಅವರ
ಮರೆಯದ ಹಾಡು ಇದು ತಾನೇ
ಬಾಳು ಎಂಬ ನಾಟಕವು ಎಷ್ಟೋ ಇದೆ ಭೂಮಿಯಲಿ
ನೋಡಬಲ್ಲೆ ನೋಟ ಇಲ್ಲದೇನೆ...

ನನ್ನೆದೆ ಬಾನಲಿ ರೆಕ್ಕೆಯ ತೆರೆಯೋ ಬಣ್ಣದ ಹಕ್ಕಿಗಳೇ
ನನ್ನ ಕಥೆಯ ಕೇಳಲು ನಿಮ್ಮಯ ರೆಕ್ಕೆಯು ತಾನೇ ಮುಚ್ಚುವುದು
ಕಲ ಕಲ  ನಗುವಲಿ ಕಚಗುಳಿ ಇರಿಸಿ ಚಿಮ್ಮುವ ನೀರ್ ಅಲೆಯೇ
ನನ್ನ ಸ್ಥಿತಿಯ ಕೇಳಲು ನಿಮ್ಮಯ ಸಡಗರ ಮೌನವ ತಾಳುವುದು

ನಿಮ್ಮಯ ಹಾಗೆ ರೆಕ್ಕೆಯ ಪಡೆಯಲು ಆಸೆಯ ದಿನ ಕಳೆದೆ
ರೆಕ್ಕೆಗಳಿರದೆ ಬಾನಿಗೆ ಹಾರಿ ಮರಳಿ ಕೆಳಗಿಳಿದೆ
ಒಂದು ಹಾಡು ಸಾಲದು ಮನಸು ಬಿಚ್ಚಲು
ಹೃದಯ ತಾಳದು ನೀ ಕೇಳೋ 

ನನ್ನೆದೆ ಬಾನಲಿ ರೆಕ್ಕೆಯ ತೆರೆಯೋ ಬಣ್ಣದ ಹಕ್ಕಿಗಳೇ
ನನ್ನ ಕಥೆಯ ಕೇಳಲು ನಿಮ್ಮಯ ರೆಕ್ಕೆಯು ತಾನೇ ಮುಚ್ಚುವುದು 
ಕಲ ಕಲ  ನಗುವಲಿ ಕಚಗುಳಿ ಇರಿಸಿ ಚಿಮ್ಮುವ ನೀರ್ ಅಲೆಯೇ
ನನ್ನ ಸ್ಥಿತಿಯ ಕೇಳಲು ನಿಮ್ಮಯ ಸಡಗರ ಮೌನವ ತಾಳುವುದು

*********************************************************************************

ತೇಗದ ಮರ ಕಡಿದು

ಸಾಹಿತ್ಯ : ಕೆ.ಕಲ್ಯಾಣ್ 
ಗಾಯನ : ಹರಿಹರನ್ 


ತೇಗದ ಮರ ಕಡಿದು,
ಗೋವಿನ ತೊಗಲು ಕೊಂಡು
ಮನುಜ ಕಂಡು ಕೊಂಡಾ
ಡೋಲು ವಾದ್ಯಗಳಾ
ಹೇ...  ಸೋಗೆಯ ಮರವ ಕೊಂಡು
ಬಿದಿರು ತಕ್ಕೊಂಡು
ಚಂದಾಗಿ ನಮಗೆ ತಂದ ಕೊಳಲು ಮೇಳಗಳ
ಜೀವ ಶ್ರುತಿ ಸೇರಲೂಬೇಕು
ತಾಳದಲ್ಲಿ ನಡೀಲೇ ಬೇಕು
ತಪ್ಪಿದರೇ.. ರಾಗಗಳೆಲ್ಲಾ ರೋಗ ರೋಗ

ತೇಗದ ಮರ ಕಡಿದು, ಗೋವಿನ ತೊಗಲು ಕೊಂಡು
ಮನುಜ ಕಂಡು ಕೊಂಡಾ ಡೋಲು ವಾದ್ಯಗಳಾ

ಹೇ.. ಮದುವೆ ಎಂದರೆ ಮಂಗಳ ವಾದ್ಯವು ಬೇಕಲ್ಲಾ
ಗಟ್ಟಿಮೇಳ ಬೇಕಲ್ಲಾ ಅದು ಒಳ್ಳೆದಲ್ಲವಾ
ದೇವಸ್ಥಾನದಲ್ಲಿ ದೇವರ ಉತ್ಸವವಾಗಲಿ  ತೇರುಗಳು ಸಾಗಲಿ
ವಯಸು ಮಕ್ಕಳು ವಯಸ್ಸಿಗೆ ಬಂದು ಕೂರಲಿ ಆ ಮನೆಯಲ್ಲಿ
ತಪ್ಪದೆ ಅಲ್ಲಿಯೂ ತಾಳವು ಮೇಳವು ಬೇಕಲ್ಲಾ ಇಷ್ಟು ಸಾಕಲ್ಲ...
ರಾಜಕೀಯ ಭೇಟಿಗೆ ಮುಂಚೆ ಮೆರವಣಿಗೆ ನಡೆಯುತ್ತಿದ್ದರೇ
ಬೇಕಲ್ಲವೇ ತೂರಿ ತುತ್ತೂರಿ
ಶ್ವಾಸವ ಮರೆತೋನಿಗೆ ಅವನೂರಿಗೆ ಕಳಿಸೋದಕ್ಕೆ
ಇದು ಅಲ್ಲಿಯೂ ಬೇಕಲ್ಲವೇ
ತಂಗಡ ದಕ್ಕುಂ ತಂಗಡ ತಂಗಡ ತಂಗಡ ಥಾಮ್

ತೇಗದ ಮರ ಕಡಿದು, ಗೋವಿನ ತೊಗಲು ಕೊಂಡು
ಮನುಜ ಕಂಡು ಕೊಂಡಾ ಡೋಲು ವಾದ್ಯಗಳಾ

ಹೇ...  ಸೋಗೆಯ ಮರವ ಕೊಂಡು ಬಿದಿರು ತಕ್ಕೊಂಡು
ಚಂದಾಗಿ ನಮಗೆ ತಂದ ಕೊಳಲು ಮೇಳಗಳ
ಹೇ.. ಮನಸಾರೆ ಮಹಾದೇವಂಗೆ  ಚೆಲ್ಲೋಣವ್ವಾ ಮಲ್ಲಿಗೆಯಾ
ಚೆಲ್ಲೋಣವ್ವಾ ಮಲ್ಲಿಗೆಯಾ ಚೆಲ್ಲಿದರೆ ಮಲ್ಲಿಗೆಯಾ
ಕೊಡತನವ್ವಾ ಐಸಿರಿಯಾ ಕೊಡತನವ್ವಾ ಐಸಿರಿಯಾ
ಘಲಿರು ಗೆಜ್ಜೆಯ ಕಟ್ಟಿ ಹೂ ನಗೆಯ ಕೈಯ್ಯ ತಟ್ಟಿ
ಆಡೋಣ ಬನ್ನಿ ಬನ್ನಿ ಕುಣಿಯೋಣ ಬನ್ನಿ ಬನ್ನಿ
ತಾಳವ ಕೊಡುವ ಡೋಲುಗೆ ಎರಡು ಪಕ್ಕವೂ ಕಡ್ಡಿ ಏಟು
ಎಂದು ಎಂದು ತಪ್ಪದು ಎಲ್ಲೊ ಬಡಿದರೂ ಎಲ್ಲೆಲ್ಲೂ ಕೆಳತತೇ
ಜೋರಾಗಿ ಯಾವಾಗಲು ನಿಲ್ಲದು
ವಾದ್ಯವ ಬಾರಸೋರು ಹೇಳಿದರು ಆ ತರಹ ಹಣೆಬರಹ
ಸಂಗೀತ ಸಂಸಾರ ಎರಡನ್ನು
ಹಿಡಕೊಂಡು ಬೈದರು ಬಿಟ್ಟುಕೊಡರು
ಕಚೇರಿಯ ಮುಗಿದ ಮೇಲೆ ವಾದ್ಯಗಳು ಮನೆಯ ಒಳಗೆ 
ಮಲುಗತ್ತೇ ಎಲ್ಲೊ ಮೂಲೆಯಲ್ಲೇ 
ಹಾಗೇ ಕಲಾವಿದರೂ ಇಲ್ಲಿ ಬೇರೇನೂ ನೋಡಿದರು 
ಆ ದೇವರೇ ಸೃಷ್ಟಿ ಇದು 
ತಂಗಡ ದಕ್ಕುಂ ತಂಗಡ ತಂಗಡ ತಂಗಡ ಥಾಮ್

ತೇಗದ ಮರ ಕಡಿದು, ಗೋವಿನ ತೊಗಲು ಕೊಂಡು
ಮನುಜ ಕಂಡು ಕೊಂಡಾ ಡೋಲು ವಾದ್ಯಗಳಾ
ಹೇ...  ಸೋಗೆಯ ಮರವ ಕೊಂಡು ಬಿದಿರು ತಕ್ಕೊಂಡು
ಚಂದಾಗಿ ನಮಗೆ ತಂದ ಕೊಳಲು ಮೇಳಗಳ
ಜೀವ ಶ್ರುತಿ ಸೇರಲೂಬೇಕು ತಾಳದಲ್ಲಿ ನಡೀಲೇ ಬೇಕು
ತಪ್ಪಿದರೇ.. ರಾಗಗಳೆಲ್ಲಾ ರೋಗ ರೋಗ

ತೇಗದ ಮರ ಕಡಿದು, ಗೋವಿನ ತೊಗಲು ಕೊಂಡು
ಮನುಜ ಕಂಡು ಕೊಂಡಾ ಡೋಲು ವಾದ್ಯಗಳಾ  

*********************************************************************************

ಕಣ್ಣಿಲ್ದೇ ಹೋದರೂ

ಸಾಹಿತ್ಯ : ಕೆ. ಕಲ್ಯಾಣ್ 
ಗಾಯನ : ಉದಿತ್ ನಾರಾಯಣ್, ಗಂಗಾ ಸೀತಾರಸು 


ಕಣ್ಣಿಲ್ಲದೇ ಹೋದರೂ ದುಡ್ಡು ಕಾಣಬಹುದು
ದುಡ್ಡಿಲ್ಲಿ ಇದ್ದರೇ ಕಣ್ಣು ಕಾಣೋದಿಲ್ಲಾ
ಕಣ್ಣಿಲ್ಲದೇ ಹೋದರೂ ದುಡ್ಡು ಕಾಣಬಹುದು
ದುಡ್ಡಿಲ್ಲಿ ಇದ್ದರೇ ಕಣ್ಣು ಕಾಣೋದಿಲ್ಲಾ
ದುಡ್ಡಿಲ್ಲದೇ ಹೋದರೂ ಬಾಳು ನಡೆಯಬಹುದು

ಬಾಳೆಂಬುವ ಮಣ್ಣಲಿ ದುಡ್ಡು ಮಾತ್ರ ಇಲ್ಲ
ವಸಿ ಚಿಲ್ಲರೆ ಬಂದ್ರೆ ಮನುಷ್ಯ ಅವನ್ ಚಿಲ್ಲರೆ ಬುದ್ದಿ ತೋರ್ಸವ
ಕಾಲಲ್ಲಿ ನಡೆವುದ ಬಿಟ್ಟು ತಲೆಯಲ್ಲೇ  ನಡೆವ ಬಡವ
ಹೇ... ಬಿಡು ಬಿಡು ಅದ್ನ್ ಹೇಳೋದೇ ಬೇಜಾರು
ಬರಿ ಒಬ್ಬರಿಗೊಬ್ಬರಿಗೆಷ್ಟು  ವ್ಯತ್ಯಾಸ
ಹೀಗೆ ಬಿಟ್ಟು ಬಿಟ್ಟು ಎಲ್ಲಿ ಹೋದೆ ಸರ್ವೇಶ
ಬರಿ ಒಬ್ಬರಿಗೊಬ್ಬರಿಗೆಷ್ಟು ವ್ಯತ್ಯಾಸ
ಹೀಗೆ ಬಿಟ್ಟು ಬಿಟ್ಟು ಎಲ್ಲಿ ಹೋದೆ ಸರ್ವೇಶ

ಕಣ್ಣಿಲ್ಲದೇ ಹೋದರೂ ದುಡ್ಡು ಕಾಣಬಹುದು
ದುಡ್ಡಿಲ್ಲಿ ಇದ್ದರೇ ಕಣ್ಣು ಕಾಣೋದಿಲ್ಲಾ

ಮನಸು ಎಷ್ಟು ಚಿಕ್ಕ ಚಿಕ್ಕದು ಆಸೆ ಮಾತ್ರ ದೊಡ್ಡ ದೊಡ್ಡದು
ತಿಳ್ಕೊ ಇದು ತಿಳ್ಕೊ ತಿಳಿದೋರ್ ಕೇಳಿ ಬದುಕೋ
ಒಸೆದು ಒಸೆದು ಮನುಜ ಮಾಡಿದ
ತಲೆಯ ಯಾಕೆ ಹುಂಡಿ ಮಾಡಿದ
ನೋಡಿಕೋ ಮುಂದೆ ನೋಡಿಕೋ ವಿಷಯ ಬಿಟ್ಟು ನೋಡಿಕೋ
ದುಡ್ಡೋ ಹೋಗೋ ಕಡೆಯೆಲ್ಲಾ ನೀನ್ ಹೋಗಲು ಸಾಧ್ಯವೇ
ದುಡ್ಡೋ ಹೇಳೋ ಕಲ್ಮಶವ ಮಾಡೋದ್ ಕಲಿಯ ಪೂಜ್ಯವೇ
ಹಾಂ...  ಬೆಲೆ ಕೊಟ್ಟು ಕೊಟ್ಟು ಏನೇನೊ ತಕ್ಕೊಳ್ಳುವೆ
ಹಾಂ... ಪ್ರೀತಿ ವಿಷಯಕೆ ಏನು ಬೆಲೆ ಕೊಡುವೆ
ಅರೇ.. ಯಾವಾಗಲು ಯಾಕೆ ನಿಂಗೆ ಪ್ರಯಾಸ
ಅದ ಬಿಟ್ಟು ಬಿಟ್ಟು ಪ್ರೀತಿ ಮಾಡೋ ರಮೇಶ

ಕಣ್ಣಿಲ್ಲದೇ ಹೋದರೂ ದುಡ್ಡು ಕಾಣಬಹುದು
ದುಡ್ಡಿಲ್ಲಿ ಇದ್ದರೇ ಕಣ್ಣು ಕಾಣೋದಿಲ್ಲಾ
ಕಣ್ಣಿಲ್ಲದೇ ಹೋದರೂ ದುಡ್ಡು ಕಾಣಬಹುದು
ದುಡ್ಡಿಲ್ಲಿ ಇದ್ದರೇ ಕಣ್ಣು ಕಾಣೋದಿಲ್ಲಾ

ನೀಲಿ ಬಾನ  ಕೊಡೆಯಲಿ, ನಿಂತ ಬೆಳ್ಳಿ ತಿಂಗಳು ನೀ
ನಿನ್ನ ಈ ಮೌನ ಹೊಸರಾಗ ಭಾವಗೀತೆ
ಅರಳೋ ಹೂವು ಮಡಿಲಲ್ಲಿ ಹಾರಾಡೋ ಗಂಧದೆಡೆಯಲ್ಲಿ
ನಿನ್ನ ಮುಖ ಭಾವ ನನಗೊಂದು ಒಲವ ಕವಿತೆ
ತಂಗಾಳಿ ತೋರುತಿದೆ  ನೀ ನಡೆಯೋ ದಾರಿಗಳ
ಮಳೆಬಿಲ್ಲು ತೋರುತಿದೆ ನಿನ್ನ ಕನಸಿನ ಬಣ್ಣಗಳ
ನನ್ನ ಕವಿ ತುಂಬಾ ಕಲ್ಯಾಣ ನಾದ ಸ್ವರ
ಮನಸಂತೆ ಮಾಂಗಲ್ಯ ನೀ ನೋಡುವ ಸಾಗರ
ಎಂಥ ಚಂದ ಚಂದ ಈ ಚಂದ
ಮೈ ಅರಳೋ ಅರಳೋ ಶ್ರೀಗಂಧ
ಕುಕು ಕುಕ್ಕೋ ಕೋಗಿಲೆ ಕೋಟಿ ಕೋಟಿ ತಂದೆ
ಮನ ಬಿಚ್ಚಿ ಹೇಳು ನೀ ಯಾಕೆ ನಾಚಿಕೊಂಡೆ
ಕುಕು ಕುಕ್ಕೋ ಕೋಗಿಲೆ ಕೋಟಿ ಕೋಟಿ ತಂದೆ
ಮನ ಬಿಚ್ಚಿ ಹೇಳು ನೀ ಯಾಕೆ ನಾಚಿಕೊಂಡೆ
ಕುಣಿದಾಗ ನಿನ್ನ ಗೆಜ್ಜೆ ಸಂಗೀತವಾಗಿ ಬಿಡುವೆ 
ಆಗಾಗ ಪ್ರೇಮ ಪೂಜೆ ಕಲಿಸೋಕೆ  ಬಂದು ಬಿಡುವೆ 
ಹೇ.. ಒಂದು ಹೊಸ ಗೂಡು ಮನಸಲ್ಲೇ ನಿನಗಾಗಿದೆ 
ಎಂಥ ಚಂದ ಚಂದ ಈ ಚಂದ 
ಮೈ ಅರಳೋ ಅರಳೋ ಶ್ರೀಗಂಧ 
ಎಂಥ ಚಂದ ಚಂದ ಈ ಚಂದ 
ಮೈ ಅರಳೋ ಅರಳೋ ಶ್ರೀಗಂಧ 
ಕುಕು ಕುಕ್ಕೋ ಕೋಗಿಲೆ ಕೋಟಿ ಕೋಟಿ ತಂದೆ
ಮನ ಬಿಚ್ಚಿ ಹೇಳು ನೀ ಯಾಕೆ ನಾಚಿಕೊಂಡೆ 

*********************************************************************************

ಬಡವನ ಗುಡಿಸಲು 

ಸಾಹಿತ್ಯ : ಕೆ. ಕಲ್ಯಾಣ್ 
ಗಾಯನ : ಇಳಯರಾಜ 


ಬಡವನ ಗುಡಿಸಲು ಗುಡಿಯಾಗಿ ಮಾಡಲೆಂದು
ಆ ದೇವರೇ ಇಲ್ಲಿ ಯಾಕೆ ಬಂದ
ಬಡವನ ಗುಡಿಸಲು ಗುಡಿಯಾಗಿ ಮಾಡಲೆಂದು
ಬಡವನ ಗುಡಿಸಲು ಗುಡಿಯಾಗಿ ಮಾಡಲೆಂದು
ಆ ದೇವರೇ ಇಲ್ಲಿ ಯಾಕೆ ಬಂದ ಈಗ್ಯಾಕೆ ಬಂದ
ದೇವರ ನೋಡಲು ನೋಟವಿಲ್ಲಾ
ಆದರೂ ಕಣ್ಣ ನೀರಾಗಿ ತುಂಬಿದ

ಬಡವನ ಗುಡಿಸಲು ಗುಡಿಯಾಗಿ ಮಾಡಲೆಂದು
ಆ ದೇವರೇ ಇಲ್ಲಿ ಯಾಕೆ ಬಂದ ಈಗ್ಯಾಕೆ ಬಂದ

ಸೂರ್ಯ ಅಂದರೆ ಏನೋ ಅಂದುಕೊಂಡೆ
ಅರಿಯದ ಸಾವಿರಾರು ಕಲ್ಪನೆ
ಅದ ನಾ ಏನು ಎಂದು ಇಂದು ನಾ ಕಂಡು ಕೊಂಡೆ
ಕಾರಣ ಬಲ್ಲವರು ನೀವೇನೇ
ರಾಗಕೆ ಜೀವ ನೀ ನಾದಕೆ ದೈವ ನೀ
ಎಂದು ಪೂಜೆಯ ಮಾಡುವೆ ಗೀತೆಯ
ಹಾಡುವೆ ಈ ನಿಮ್ಮ ಋಣ ತಿರಲೆಂದು
ಈ ಜನ್ಮವು ಒಂದು ಸಾಲದು

ಬಡವನ ಗುಡಿಸಲು ಗುಡಿಯಾಗಿ ಮಾಡಲೆಂದು
ಆ ದೇವರೇ ಇಲ್ಲಿ ಯಾಕೆ ಬಂದ

ಕರೆದರೆ ಕುಂಬಾರನು ವಿಠ್ಠಲನು ಬರಬಹುದು
ಕಣಕಣ ಕೈ ಹಿಡಿವ ಕೇಶವ ಪುಣ್ಯವ ಪಡೆಯಲೆಂದು
ರಾಮನ ಕರಿಬಹುದು ಈ ರಾಮುಗಿರೋದೊಂದೇ ಪಾಪವ
ಉಪ್ಪಿನ ಸಾಗರ ಕಣ್ಣಲ್ಲಿ ತುಂಬಿದೆ
ಏನಿದು ಉಪ್ಪಿನ ನೀರಿದು ಸಿಹಿಯೇ ಆಯಿತು
ನಿಮ್ಮ ಪಾದ ಗಂಗೆ ಇದು ಯೋಗ ಇದು ನನ್ನ ಭಾಗ್ಯ ಇದು

ಬಡವನ ಗುಡಿಸಲು ಗುಡಿಯಾಗಿ ಮಾಡಲೆಂದು
ಆ ದೇವರೇ ಇಲ್ಲಿ ಯಾಕೆ ಬಂದ
ದೇವರ ನೋಡಲು ನೋಟವಿಲ್ಲಾ
ಆದರೂ ಕಣ್ಣ ನೀರಾಗಿ ತುಂಬಿದ

ಬಡವನ ಗುಡಿಸಲು ಗುಡಿಯಾಗಿ ಮಾಡಲೆಂದು
ಆ ದೇವರೇ ಇಲ್ಲಿ ಯಾಕೆ ಬಂದ

*********************************************************************************

ಜೋಲಿ ಜೋಕಾಲಿಯಲ್ಲಿ

ಸಾಹಿತ್ಯ: ಕೆ.ಕಲ್ಯಾಣ್ 
ಗಾಯನ: ಹರಿಹರನ್  


ಜೋಲಿ ಜೋಕಾಲಿಯಲ್ಲಿ ಜೋಡಿ ಗಿಳಿ ಎರಡು
ಸುವ್ವಾಲಿ ಸುವ್ವಿ ಅಂತಿದೆ ಅಹ.. ಅಹ.. ಅಹ...
ಸುವ್ವಿ ಸುವ್ವಾಲಿಯಲ್ಲಿ ಸೋನೇ ಸೋಬಾನೆ ಒಂದು
ಸೊಂಪಾಗಿ ಹಾಡು ಎಂದಿದೆ ಓದಲು ಬಾರದ ನನಗೆ
ಒಳ್ಳೆ ಹಾಡೊಂದ ತಂದೋರು ಯಾರು
ಕಾಣದ ಮನಸಿನೊಳಗೆ ಸವಿ ಗಾನವ ಕಾಣಿಸೋರ ಯಾರು
ಜೊತೆ ಸೇರಿಕೋ ತಾಳವ ಹಿಡಿಕೋ ಜುಮ್ಮು ಜುಮ್ಮಂಥ

ಜೋಲಿ ಜೋಕಾಲಿಯಲ್ಲಿ ಜೋಡಿ ಗಿಳಿ ಎರಡು
ಸುವ್ವಾಲಿ ಸುವ್ವಿ ಅಂತಿದೆ

ನದಿಯಲ್ಲಿ ಅಲೆಗಳಲ್ಲಿ ನನ್ನ ಮನಸನ ನೋಡಿಕೋ
ಅಲೆಯಂತೆ ಕುಣಿದು ಕುಣಿದು ನನ್ನ ಸಂಗಾತಿ ಅಂದುಕೋ
ರಾಣಿ ಮಾಡೋ ಅಪ್ಪಣೆಯಾ ಮಾಡೋ ಸೇವಕ
ಸೇವೆಯನು ಹೇಳು ಇಲ್ಲಿ ಓ ಮೈನಾ
ಇನ್ನು ಎಂದು ನಿನ್ನ ಒಳ್ಳೆ ರಾಜ್ಯ ನಡೆಯಲಿ
ಪಲ್ಲಕಿಯ ಮಾಡುವೆ ನಾ ಈ ಮೈನಾ
ಹೇ... ರಾಗಿ ಪದವಾಗಿ ಹೇ.. ಗೀಗಿ ಪದ ಕೂಗಿ
ನೀ ಜಾನಪದವಾಗೇ ನನಗೆ ಜುಮ್ಮು ಜುಮ್ಮಂತ

ಜೋಲಿ ಜೋಕಾಲಿಯಲ್ಲಿ ಜೋಡಿ ಗಿಳಿ ಎರಡು
ಸುವ್ವಾಲಿ ಸುವ್ವಿ ಅಂತಿದೆ ಅಹ.. ಅಹ.. ಅಹ...
ಸುವ್ವಿ ಸುವ್ವಾಲಿಯಲ್ಲಿ ಸೋನೇ ಸೋಬಾನೆ ಒಂದು
ಸೊಂಪಾಗಿ ಹಾಡು ಎಂದಿದೆ

ಆ ದೈವ ಕಣ್ಣು ಇಲ್ಲದೆ ಇಲ್ಲಿ ಯಾಕೋ ಹುಟ್ಟಿಸಿದ
ಕಣ್ಣು ಕೊಡೊ ದೈವ ನಿನಗೆ ನನ್ನ ಋಣಿಯಾಗಿ ಮಾಡಿದ
ನಿನ್ನ ಸಾಲ ತೀರಿಸಿಕೋ ಏನು ನನಗಿದೆ
ಋಣಾನುಬಂಧವೆಲ್ಲಾ ಹೀಗೆನಾ
ಕೊರಳೆರಡೂ ಇದ್ದಿದ್ದರೆ ನಿಂಗೆ ಒಂದು ತಂದು
ಹಾಡೋ ಹಾಡು ಹೇಳುತಿದ್ದೆ ಓ ಮೈನಾ
ಈ ಜನ್ಮವಿದು ಸಾಕು ಇನ್ನೆಲ್ಲೂ ಜನ್ಮ ಬೇಕು
ಹೇ.. ರಾಧಾ ನೀನು ರಾಗ ನಾನಾಗಿ ಜುಮ್ಮ್ ಜುಮ್ಮಂತ

ಜೋಲಿ ಜೋಕಾಲಿಯಲ್ಲಿ ಜೋಡಿ ಗಿಳಿ ಎರಡು
ಸುವ್ವಾಲಿ ಸುವ್ವಿ ಅಂತಿದೆ ಅಹ.. ಅಹ.. ಅಹ...
ಸುವ್ವಿ ಸುವ್ವಾಲಿಯಲ್ಲಿ ಸೋನೇ ಸೋಬಾನೆ ಒಂದು
ಸೊಂಪಾಗಿ ಹಾಡು ಎಂದಿದೆ

ಓದಲು ಬಾರದ ನನಗೆ ಒಳ್ಳೆ ಹಾಡೊಂದ ತಂದೋರು ಯಾರು
ಕಾಣದ ಮನಸಿನೊಳಗೆ ಸವಿ ಗಾನವ ಕಾಣಿಸೋರ ಯಾರು
ಜೊತೆ ಸೇರಿಕೋ ತಾಳವ ಹಿಡಿಕೋ ಜುಮ್ಮು ಜುಮ್ಮಂಥ 

ಜೋಲಿ ಜೋಕಾಲಿಯಲ್ಲಿ ಜೋಡಿ ಗಿಳಿ ಎರಡು
ಸುವ್ವಾಲಿ ಸುವ್ವಿ ಅಂತಿದೆ ಅಹ.. ಅಹ.. ಅಹ...
ಸುವ್ವಿ ಸುವ್ವಾಲಿಯಲ್ಲಿ ಸೋನೇ ಸೋಬಾನೆ ಒಂದು
ಸೊಂಪಾಗಿ ಹಾಡು ಎಂದಿದೆ 

*********************************************************************************

ಕರುಳಿನ ಕೂಗು (1994)


ನಾನು ಬಡವ ನಾನು ಬಡವಿ

ಚಲನ ಚಿತ್ರ: ಕರುಳಿನ ಕೂಗು (1994)
ನಿರ್ದೇಶನ: ಡಿ. ರಾಜೇಂದ್ರ ಬಾಬು 
ಸಂಗೀತ: ಹಂಸಲೇಖ 
ಸಾಹಿತ್ಯ: ಹಂಸಲೇಖ 
ಗಾಯನ: ಮನು, ಕೆ. ಎಸ್. ಚಿತ್ರಾ  
ನಟನೆ: ಪ್ರಭಾಕರ್, ವಿನಯಾ ಪ್ರಸಾದ್, ಶ್ರೀನಾಥ್ 

ನಾನು ಬಡವ ನಾನು ಬಡವಿ
ನಾನು ಬಡವ ನಾನು ಬಡವಿ
ನಮ್ಮ ಪ್ರೀತಿಗೆ ಬಡತನವಿಲ್ಲ  
ಪ್ರೀತಿಗೆ ಬಡತನವಿಲ್ಲ
ನಾನು ರಾಜ ನಾನು ರಾಣಿ    
ನಮ್ಮ ಮನೆಯಲ್ಲಿ ಸಿರಿತನವಿಲ್ಲ 
ಪ್ರೀತಿಗೆ ಬಡತನವಿಲ್ಲ

ಹಗಲಿನ ಹೊತ್ತು ದೇವರ ಮುತ್ತು  
ರಾತ್ರಿಯ ಹೊತ್ತು ತಾಂಡವ ಮೂರ್ತಿ
ಹಗಲು ಮಾತಿನ ಮೇಲೆ ನಡೆಯುತ್ತೆ  
ರಾತ್ರಿ ನಾಲ್ಕು ಕಾಲ್ಮೇಲೆ ನಡೆಯುತ್ತೆ  ಯಾವುದದು ?
ಕುದುರೆ.. ಅಲ್ಲ   ಭೂತ .. ಅಲ್ಲ  
ಮತ್ತೆ ಯಾವುದಮ್ಮ ?  ನಿಂ ಅಪ್ಪ ನಮ್ಮ

ನಗುವಿನ ಅಲೆಗಳ ಮದುರ ನುಡಿಗಳ  
ಜೊತೆಗೆ ತುತ್ತಿನೋಟ
ತುಟಿಗಳಿಂದಲೆ ತಪ್ಪು ತಿದ್ದುವ   
ಉಚಿತ ಪ್ರೇಮ ಪಾಟ
ಕೋಪ ನಿಮಿಷ ಪ್ರೇಮ ವರುಷ  
ಮಾಯದ ಹರುಷ
ಮನೆ ಹಾಡುವ ಮಕ್ಕಳ ತೋಟ  
ಮನ ಹಾರುವ ಹಕ್ಕಿಯ ಕೋಟ
ಈ ಜನುಮಕೆ ಬೇಕಿನ್ನೇನು

ನಾನು ಬಡವ ನಾನು ಬಡವಿ   
ನಾನು ಬಡವ ನಾನು ಬಡವಿ
ನಮ್ಮ ಪ್ರೀತಿಗೆ ಬಡತನ ವಿಲ್ಲ
ಪ್ರೀತಿಗೆ ಬಡತನ ವಿಲ್ಲ

ಶೃಂಗೇರಿಲಿಲ್ಲ ಕೊಲ್ಲೂರಲಿಲ್ಲ  
ಚಾಮುಂಡಿಯಲ್ಲ ಕಾವೇರಿಯಲ್ಲ
ಎಲ್ಲ ಪಾಪಗಳ ತೊಳೆಯುತ್ತಾಳೆ  
ಕಡೆವವರಿಗು ಕೈ ಹಿಡಿಯುತಾಳೆ
ಯಾರ್ ಆ ದೇವತೆ ?  ಭೂಮಿ.. ಅಲ್ಲ  
ಕಾಮಧೇನು.. ಅಲ್ಲ  ಮತ್ತೆ ಯಾವುದಪ್ಪ ?
ನಿಂ ಅಮ್ಮ ನಮ್ಮ

ಎಳು ಬೀಳಿನ ಗಾಳಿ ಎದುರಲು  
ನೀನು ಪಾರಿಜಾತ
ಉದಯವಾದರೆ ಹೃದಯದೊಳಗಡೆ 
ನೀನೆ ಸುಪ್ರಭಾತ
ಮಾಗಿ ಹೊತ್ತು ನೀಡು ಮುತ್ತು ಇಲ್ಲ ಆಪತ್ತು
ಅಪ್ಪ ಪ್ರೇಮದ ಕಲೆ ಇರೊ ಚಂದ್ರ
ಅಮ್ಮ ಕರುಣೆಯ ಮನಸಿರೊ ಕಡಲು
ಈ ಜನುಮಕೆ ಬೇಕಿನ್ನೇನು

ನಾನು ಬಡವ ನಾನು ಬಡವಿ
ನಾನು ಬಡವ ನಾನು ಬಡವಿ
ನಮ್ಮ ಪ್ರೀತಿಗೆ ಬಡತನ ವಿಲ್ಲ  
ಪ್ರೀತಿಗೆ ಬಡತನವಿಲ್ಲ
ನಾನು ರಾಜ ನಾನು ರಾಣಿ
ನಮ್ಮ ಮನೆಯಲ್ಲಿ ಸಿರಿತನವಿಲ್ಲ 
ಪ್ರೀತಿಗೆ ಬಡತನವಿಲ್ಲ

*********************************************************************************

ಹೆಂಡ ಕುಡುಕ ರತ್ನ

ಸಾಹಿತ್ಯ: ಹಂಸಲೇಖ 
ಗಾಯನ: ಮನು


ಹೆಂಡ ಕುಡುಕ ರತ್ನ ನನ್ನ ಮಾಸ್ಟ್ರು
ಹೆಂಡ ಕುಡಿಯ ಬ್ಯಾಡ ಅಂತ ಅಂದ್ರು
ಹೆಂಡ ಮುಟ್ಟಲ್ಲ... ಹೆಂಡ್ತೀನ ಬಿಡಲ್ಲ
ದೇಶೀ ಸಾರಾಯಿ  ಕುಡಿಯೋ ಸಿಪಾಯಿ
ನನ್ನೆಂದ್ರೇ... ನನ್ನೆಂದ್ರೇ... ನನ್ನೆಂದ್ರೇ... ಚಿಂತೆಯಿಲ್ಲಾ

ನನ್ನ ಕೊಂದ್ರು ಪರವಿಲ್ಲ ಕನ್ನಡಾನ ಭೈ  ಬ್ಯಾಡಾ
ಕಟ್ಕೊಂಡ ಹೆಂಡ್ತೀನ ಬಿಡಬ್ಯಾಡ
ಒಳಗೈತೆ ಸಾರಾಯಿ ಬಿಡ್ತಾ ಐತೆ ಬಾಯಿ ಬಾಯಿ

ಕೈಲಾಸಂ ಕುಡುದ್ರು ಸತ್ಯಕ್ಕೆ ದೀಪ ಹಿಡಿದ್ರು
ಅನಕೃನು  ಕುಡುದ್ರು ಬದುಕಿನ ಬಟ್ಟಿ ಇಳಿಸಿದ್ರೂ
ಬರದು ಬರದು ಕರ್ನಾಟಕಕ್ಕೇ ಪುಣ್ಯಕಟ್ಟಿ ಕೊಟ್ಟು ಹೋದ್ರೂ
ಸುಮ್ನೆ ಕುಡಿಯೋ ನಮ್ಮಂತವರೆಗೆ ಬುದ್ದಿನ ಬಿಚ್ಚಿಟ್ಟು ಹೋದ್ರೂ
ಅನ್ನ ತಿಂದು ಅನ್ನಬೇಡ ಅನ್ನ ತಿಂದು ಅನ್ನಬೇಡ
ಬೆನ್ನ ಹಿಂದೆ ಚುಚ್ಚಬೇಡ ಬೆನ್ನ ಹಿಂದೆ ಚುಚ್ಚಬೇಡ
ನನ್ನನ್ನು ಲಚ್ಛಾ ... ನನ್ನನ್ನು ರಿಚ್ಚಾ
ನನ್ನೆಂದ್ರೇ... ನನ್ನೆಂದ್ರೇ... ನನ್ನೆಂದ್ರೇ... ಚಿಂತೆಯಿಲ್ಲಾ

ನನ್ನ ಕೊಂದ್ರು ಪರವಿಲ್ಲ ಕನ್ನಡಾನ ಭೈ  ಬ್ಯಾಡಾ
ಕಟ್ಕೊಂಡ ಹೆಂಡ್ತೀನ ಬಿಡಬ್ಯಾಡ
ಒಳಗೈತೆ ಸಾರಾಯಿ ಬಿಡ್ತಾ ಐತೆ ಬಾಯಿ ಬಾಯಿ

ದಕ್ಷಿಣ ಕನ್ನಡ ಸ್ವಚ್ಛ ಉತ್ತರ ಕನ್ನಡ ಉಚ್ಚ 
ಹಳೇ ಕನ್ನಡ ಹಾಲು ಹೊಸ ಕನ್ನಡ ಜೇನು 
ಇಡ್ಲಿ ರೊಟ್ಟಿ ಮುದ್ದೆ ಮೀನು ಎಲ್ಲ ಊಟಕ್ಕೆ ಬೇಕು 
ಕೊಡವ ತುಳುವ ಕೊಂಕಣಿ ಲಂಬಾಣಿ ಕರ್ನಾಟಕ್ಕೆ ಬೇಕು 
ಕನ್ನಡಕ್ಕೆ ಬೇಧವಿಲ್ಲಾ ಕನ್ನಡಕ್ಕೆ ಬೇಧವಿಲ್ಲಾ 
ಯಾರ ಮೇಲೆ ದ್ವೇಷವಿಲ್ಲ..  ಯಾರ ಮೇಲೆ ದ್ವೇಷವಿಲ್ಲ.. 
ನನ್ನನ್ನು ಲಚ್ಛಾ ... ನನ್ನನ್ನು ರಿಚ್ಚಾ
ನನ್ನೆಂದ್ರೇ... ನನ್ನೆಂದ್ರೇ... ನನ್ನೆಂದ್ರೇ... ಚಿಂತೆಯಿಲ್ಲಾ

ನನ್ನ ಕೊಂದ್ರು ಪರವಿಲ್ಲ ಕನ್ನಡಾನ ಭೈ  ಬ್ಯಾಡಾ
ಕಟ್ಕೊಂಡ ಹೆಂಡ್ತೀನ ಬಿಡಬ್ಯಾಡ
ಒಳಗೈತೆ ಸಾರಾಯಿ ಬಿಡ್ತಾ ಐತೆ ಬಾಯಿ ಬಾಯಿ

ನಮ್ಮೂರೂ ಹಿಂಸೆ ತಾಳ್ರು ಹಿಂಸೆ ಆದ್ರೂ ಹೇಳ್ರು
ಮಂಗನಥರ ಹಾರು ಕಾಶಿಗೆ ಮಾನ ಮಾರು
ಹಿಂಗೇ ಅಂದು ಹಿಂಗೇ ಅಂದು ಎಲ್ಲ ಬಾಷೆ ಕಲತು
ಕನ್ನಡದೋವರೇ ಕನ್ನಡ ಬಾಷೆ ಮಾತಾಡೋದ ಮರತರು
ನಿನ್ನ ಮೀಸೆ ನೀನೆ ತಿರುವು  ಅಲ್ಲೇ ನಿಲ್ಲ ಅಳಿವು ಉಳಿವು
ನನ್ನನ್ನು ಲಚ್ಛಾ ... ನನ್ನನ್ನು ರಿಚ್ಚಾ
ನನ್ನೆಂದ್ರೇ... ನನ್ನೆಂದ್ರೇ... ನನ್ನೆಂದ್ರೇ... ಚಿಂತೆಯಿಲ್ಲಾ

ನನ್ನ ಕೊಂದ್ರು ಪರವಿಲ್ಲ ಕನ್ನಡಾನ ಭೈ  ಬ್ಯಾಡಾ
ಕಟ್ಕೊಂಡ ಹೆಂಡ್ತೀನ ಬಿಡಬ್ಯಾಡ
ಒಳಗೈತೆ ಸಾರಾಯಿ ಬಿಡ್ತಾ ಐತೆ ಬಾಯಿ ಬಾಯಿ

*********************************************************************************

ಶೃತಿ (1990)



ಕನ್ನಡ ತಾಯಿಯ ಮಕ್ಕಳು

ಚಲನ ಚಿತ್ರ: ಶೃತಿ (1990)
ನಿರ್ದೇಶನ: ದ್ವಾರಕೀಶ್  ಸಂಗೀತ : ಎಸ್. ಎ. ರಾಜಕುಮಾರ್ 
ಸಾಹಿತ್ಯ : ಚಿ. ಉದಯಶಂಕರ್ 
ಗಾಯನ : ಎಸ್. ಎ. ರಾಜಕುಮಾರ್ 
ನಟನೆ: ಸುನೀಲ್, ಶೃತಿ, ಹೊನ್ನವಳ್ಳಿ ಕೃಷ್ಣ 


ಕನ್ನಡ ತಾಯಿಯ ಮಕ್ಕಳು ನಾವೆಲ್ಲಾ ಎಂದೂ ಒಂದೇ
ಸತ್ಯವ ಹೇಳುವೆ ಎಂದಿಗೂ ನೀವೇನೇ ತಾಯಿ ತಂದೆ
ಸುಖ ಸಂತೋಷ ಇರಲಿ ಹೊಸ ಉಲ್ಲಾಸ ತರಲಿ
ಬದುಕಿನ್ನೇಕೆ ಎನ್ನುವ ಬರಿ ನೋವೊಂದೇ ಬರಲಿ
ನಗುತಾ ನಗುತಾ ದಿನ ಬಾಳೋ ಆಸೆ
ಕನ್ನಡ ತಾಯಿಯ ಮಕ್ಕಳು ನಾವೆಲ್ಲಾ ಎಂದೂ ಒಂದೇ
ಸತ್ಯವ ಹೇಳುವೆ ಎಂದಿಗೂ ನೀವೇನೇ ತಾಯಿ ತಂದೆ

ನಮ್ಮ ಜನ ನಮ್ಮ ನಾಡು ನಮ್ಮವರೇ ಎಲ್ಲೆಲ್ಲೂ ನೋಡು ಎಲ್ಲೆಲ್ಲೂ
ಹರಸಿ ಪ್ರೀತಿಯಿಂದ ನಮ್ಮ ಪ್ರೇಮದಿ ಇಂದು ನಮ್ಮ ಪ್ರೇಮದಿ
ಶೃತಿಯ ಬೆರೆಸಿ ಕೋಗಿಲೆಯ ಸ್ವರಕೆ ನಾವು ಹಾಡುತಿರೆ
ಥೈಯ್  ತಕ್ಕ ಎನ್ನುತಲಿ ಹೆಜ್ಜೆ ಹಾಕಿ ಕುಣಿಯುತಿರೆ
ಎಂಥಾ ಸೊಗಸು ನಲಿವಾ ಮನಸು ಸುಖವೆಲ್ಲಾ ಇಲ್ಲಿ ನಮ್ಮ ಹಾಡಾಲೇ

ಕನ್ನಡ ತಾಯಿಯ ಮಕ್ಕಳು ನಾವೆಲ್ಲಾ ಎಂದೂ ಒಂದೇ
ಸತ್ಯವ ಹೇಳುವೆ ಎಂದಿಗೂ ನೀವೇನೇ ತಾಯಿ ತಂದೆ
ನಮ್ಮ ಆಸೆ ಎಂದು ಒಂದೇ ಬೆಳ್ಳಿ ತಾರೆಯ ಹಿಂದೆ ಹಾಡು ಹಾಡೋದು
ಗುರಿಯನು ಮುಟ್ಟೋ ತನಕ ನಿದ್ದೆ ಬಾರದು ನಮಗೆ ನಿದ್ದೆ ಬಾರದು
ಬೆಟ್ಟ ಹತ್ತೋ ಆಸೆ ಇದೆ ಕಲ್ಲು ಮುಳ್ಳು ಕಾಣುವುದೇ
ಬೇಟೆಯಾಡೊ ವೀರನಿಗೆ ಭಯವು ಬಂದು ಕಾಡುವುದೇ
ಛಲವ ಬಿಡದೇ ಮುಂದೆ ನಡೆವ ಕಡೆಗೊಮ್ಮೆ ಗೆಲುವ ಸಾವು ಹೊಂದುವಾ

ಕನ್ನಡ ತಾಯಿಯ ಮಕ್ಕಳು ನಾವೆಲ್ಲಾ ಎಂದೂ ಒಂದೇ
ಸತ್ಯವ ಹೇಳುವೆ ಎಂದಿಗೂ ನೀವೇನೇ ತಾಯಿ ತಂದೆ
ಸುಖ ಸಂತೋಷ ಇರಲಿ ಹೊಸ ಉಲ್ಲಾಸ ತರಲಿ
ಬದುಕಿನ್ನೇಕೆ ಎನ್ನುವ ಬರಿ ನೋವೊಂದೇ ಬರಲಿ
ನಗುತಾ ನಗುತಾ ದಿನ ಬಾಳೋ ಆಸೆ

ಕನ್ನಡ ತಾಯಿಯ ಮಕ್ಕಳು ನಾವೆಲ್ಲಾ ಎಂದೂ ಒಂದೇ
ಸತ್ಯವ ಹೇಳುವೆ ಎಂದಿಗೂ ನೀವೇನೇ ತಾಯಿ ತಂದೆ

*********************************************************************************

ಹೆಣ್ಣಿಗೆ ತಾಳಿ ತಾಳಿ


ಸಾಹಿತ್ಯ : ಚಿ. ಉದಯಶಂಕರ್  
ಗಾಯನ : ಎಸ್. ಪಿ.ಬಾಲಸುಬ್ರಹ್ಮಣ್ಯಂ 


ಹೆಣ್ಣಿಗೆ ತಾಳಿ ತಾಳಿ ನಮಗೆಲ್ಲ ಜಾಲಿ ಜಾಲಿ
ಆಮೇಲೆ ಲಾಲಿ ಲಾಲಿ ಎಂದು ಹಾಡೋದೇ
ಹೆಣ್ಣಿಗೆ ತಾಳಿ ತಾಳಿ ನಮಗೆಲ್ಲ ಜಾಲಿ ಜಾಲಿ
ಆಮೇಲೆ ಲಾಲಿ ಲಾಲಿ ಎಂದು ಹಾಡೋದೇ
ಮದುವೆ ಯೋಗ ಬಂದಾಯ್ತು ಕನಸು ಈಗ ನಿಜವಾಯ್ತು

ಅವಳ ಬಾಳು ಜೇನಾಯ್ತು ನಮಗೆ ಹಬ್ಬ ಬಂದಾಯ್ತು
ಇನ್ನೇನು ನಮಗಿನ್ನೇನು ಸಂಗೀತ ಸೇರಿ ಹಾಡು
ಹೆಣ್ಣಿಗೆ ತಾಳಿ ತಾಳಿ ನಮಗೆಲ್ಲ ಜಾಲಿ ಜಾಲಿ
ಆಮೇಲೆ ಲಾಲಿ ಲಾಲಿ ಎಂದು ಹಾಡೋದೇ... ಉಳೊಳೊ ಆಯಿ..

ಕಾಲದ ವೇಷದ ಮಾತೇ ಇಲ್ಲಾ.. ಜಾತಿಯ ಭಾಷೆಯ ಬೇಧವಿಲ್ಲಾ 
ಪ್ರೀತಿಯ ಸೋಲಿಸೋ ಶಕ್ತಿ ಇಲ್ಲಾ ದೇವರು ಮಾಡಿದ ಮೋಡಿ ಎಲ್ಲಾ 
ನೀನು ಶೃತಿಯ ಸೇರಿಸು ನನ್ನ ಹಾಡಿಗೆ 
ಅದುವೇ ನಮ್ಮ ಕಾಣಿಕೆ ಮದುವೆ ಹೆಣ್ಣಿಗೆ 
ನೀನು ಶೃತಿಯ ಸೇರಿಸು ನನ್ನ ಹಾಡಿಗೆ 
ಅದುವೇ ನಮ್ಮ ಕಾಣಿಕೆ ಮದುವೆ ಹೆಣ್ಣಿಗೆ 
ಎಂದೂ ಹೀಗೆ ಹಾಯಾಗಿ ಬಾಳಲಿ, 
ಬಾಳು ಒಂದು ಉಯ್ಯಾಲೆಯಾಗಲೀ  

ಹೆಣ್ಣಿಗೆ ತಾಳಿ ತಾಳಿ ನಮಗೆಲ್ಲ ಜಾಲಿ ಜಾಲಿ
ಆಮೇಲೆ ಲಾಲಿ ಲಾಲಿ ಎಂದು ಹಾಡೋದೇ

ಹೊಸ ಬದುಕಿಂದ ನಮ್ಮ ಹೆಣ್ಣಿನ ಬಾಳೆ ಬಂಗಾರ 
ಹೆಣ್ಣು ಹೆತ್ತೋರ ಮನದಲ್ಲಿ ಬಲು ಭಾರ 
ಇಂಥ ಚೆಲುವಾದ ಹುಡುಗಿ ದೂರ ಹೋದ ಮೇಲಿನ್ನು 
ಬರಿ ಕಣ್ಣೀರೇ ಅಲ್ಲವೇ ಇನ್ನೇನು 
ಜೀವನ ಹೀಗೇನೆ ಇದು ನೋಡುವ ಕತೆ ತಾನೇ 
ಯಾರೇ ಬರಲಿ ಇದು ಎಲ್ಲರ ಹಾಡೇನೇ 

ಹೆಣ್ಣಿಗೆ ತಾಳಿ ತಾಳಿ ನಮಗೆಲ್ಲ ಜಾಲಿ ಜಾಲಿ
ಆಮೇಲೆ ಲಾಲಿ ಲಾಲಿ ಎಂದು ಹಾಡೋದೇ
ಮದುವೆ ಯೋಗ ಬಂದಾಯ್ತು ಕನಸು ಈಗ ನಿಜವಾಯ್ತು
ಅವಳ ಬಾಳು ಜೇನಾಯ್ತು ನಮಗೆ ಹಬ್ಬ ಬಂದಾಯ್ತು
ಹೇ.. ಶಿವಪ್ಪ ಹೇ.. ತಿಮ್ಮಪ್ಪ ಬನ್ನಿರಿ ಸೇರಿ ಹಾಡೋಣ
ಹೆಣ್ಣಿಗೆ ತಾಳಿ ತಾಳಿ ನಮಗೆಲ್ಲ ಜಾಲಿ ಜಾಲಿ
ಆಮೇಲೆ ಲಾಲಿ ಲಾಲಿ ಎಂದು ಹಾಡೋದೇ... 

*********************************************************************************

ಹಾಡೊಂದು ನಾ ಹಾಡುವೆನು


ಸಾಹಿತ್ಯ : ಆರ್.ಎನ್.ಜಯಗೋಪಾಲ್  
ಗಾಯನ : ಕೆ.ಜೆ. ಯೇಸುದಾಸ್


ಹಾಡೊಂದು ನಾ ಹಾಡುವೆನು ಹೃದಯ ರಾಗದಲ್ಲಿ
ಕವಿತೆಯನು ಬರೆಯುವೆನು ಮನದ ಆಸೆ ಚೆಲ್ಲಿ..
ಪಲ್ಲವಿ ತುಂಬಾ ಚೆನ್ನಾಗಿದೆ ಚರಣ
ಬರೆಯೋದಿಲ್ಲವೇನೋ ಹ್ಞೂ ತಗೋ..
ಹಾಡೊಂದು ನಾ ಹಾಡುವೆನು ಹೃದಯ ರಾಗದಲ್ಲಿ
ಕವಿತೆಯನು ಬರೆಯುವೆನು ಮನದ ಆಸೆ ಚೆಲ್ಲಿ..
ಹಾಡೊಂದು ನಾ ಹಾಡುವೆನು ಹೃದಯ ರಾಗದಲ್ಲಿ
ಕವಿತೆಯನು ಬರೆಯುವೆನು ಮನದ ಆಸೆ ಚೆಲ್ಲಿ..

ಕುಣಿವ ನದಿ ಆಲೆ ಇಂದು ಹಾಡೋ ರಾಗ
ತೆಂಗು ತೂಗಿ ಹಾಕುತಿದೆ ತಾಳ ಮೇಳ
ಮಾಮರದಲಿ ಕೋಗಿಲೆ ತಾನು ಸೇರಿ ಹಾಡೇ ಗಾನ
ನನ್ನೆದೆಯಲಿ ಮೀಟಿದೆ ಇಂದು ಸ್ನೇಹ ವೀಣೆ ತಾನ
ಜಗಕೆಲ್ಲ ಮೈಯ್ಯ ಮರೆಸೋ ಕಲೆಯೇ ನೋಡೋ ಸಂಗೀತ
ಸ್ವರವೇಳು ಮೂರೂ ಲೋಕ ಶೃತಿ ನಾದ ಸಂಕೇತ
ಶೃತಿ ಲಯವು ಬೆರೆತಿರಲು ಸ್ವರ್ಗ ಇಲ್ಲಿದೇ...

ಹಾಡೊಂದು ನಾ ಹಾಡುವೆನು ಹೃದಯ ರಾಗದಲ್ಲಿ
ಕವಿತೆಯನು ಬರೆಯುವೆನು ಮನದ ಆಸೆ ಚೆಲ್ಲಿ..
ಹಾಡೊಂದು ನಾ ಹಾಡುವೆನು ಹೃದಯ ರಾಗದಲ್ಲಿ
ಕವಿತೆಯನು ಬರೆಯುವೆನು ಮನದ ಆಸೆ ಚೆಲ್ಲಿ..

ಮಗುವ ತೊದಲು ಮಾತಿನಲು ಹಾಡು ಇಂಪು
ಅಂಬಾ ಎನ್ನುವ ಕರುವಿನಲೂ ಕವಿತೆ ಇಂಪು
ನಾಳೆ ದಿನ ಜಗದಿ ನಮ್ಮ ಹಾಡೇ ವೇದ ನೋಡು
ಭಾಗ್ಯಗಳ ಸಾವಿರ ಕವಿತೆ ಸಾಲಲಿ ನೋಡು
ಮರುಭೂಮಿಯಲ್ಲಿ ಹಾಡು ಹಸಿರ ಚಿಗುರ ತರದೇನು
ನೊಂದಂತ ಮನಸು ಒಮ್ಮೆ ಹಾಡ ಕೇಳೇ ನಗದೇನು
ಗಂಗೆಯಾದೆ ಹಾಡಿನೊಳು ಇಲ್ಲೇ ಹರಿಯಿತೋ

ಹಾಡೊಂದು ನಾ ಹಾಡುವೆನು ಹೃದಯ ರಾಗದಲ್ಲಿ
ಕವಿತೆಯನು ಬರೆಯುವೆನು ಮನದ ಆಸೆ ಚೆಲ್ಲಿ..
ಹಾಡೊಂದು ನಾ ಹಾಡುವೆನು ಹೃದಯ ರಾಗದಲ್ಲಿ
ಕವಿತೆಯನು ಬರೆಯುವೆನು ಮನದ ಆಸೆ ಚೆಲ್ಲಿ..

*********************************************************************************

ಹಾಡೊಂದು ನಾ ಹಾಡುವೆನು


ಸಾಹಿತ್ಯ : ಆರ್.ಎನ್.ಜಯಗೋಪಾಲ್  
ಗಾಯನ : ಎಸ್. ಪಿ.ಬಾಲಸುಬ್ರಹ್ಮಣ್ಯಂ 


ಹಾಡೊಂದು ನಾ ಹಾಡುವೆನು ಹೃದಯ ರಾಗದಲ್ಲಿ
ಕವಿತೆಯನು ಬರೆಯುವೆನು ಮನದ ಆಸೆ ಚೆಲ್ಲಿ..
ಹಾಡೊಂದು ನಾ ಹಾಡುವೆನು ಹೃದಯ ರಾಗದಲ್ಲಿ
ಕವಿತೆಯನು ಬರೆಯುವೆನು ಮನದ ಆಸೆ ಚೆಲ್ಲಿ..

ಇಂದು ಬಂದ ಹೊಸ ಚೈತ್ರ ನಗಲೀ ಎಂದು
ನಾವು ನಡೆವ ಹಾದಿಯಲಿ ಹೂವ ಸುರಿದು
ಶೃತಿ ಇರದೇ ಬಾಳಿನಲ್ಲಿ ಎಂದು ಹಾಡೇ ಇಲ್ಲ
ಶೃತಿ ಸೆರೆ ಹಾಡಿನಲ್ಲಿ ನಮ್ಮ ಸಾಟಿ ಇಲ್ಲ
ನಮಗಾಗಿ ದೈವ ಬಂದು ದಾರಿ ತೋರಿ ಜೊತೆ ಆಯ್ತು
ನಿಜವಾದ ಸ್ನೇಹ ತಂದು ಕವಿತೆ ನೀಡಿ ಉಸಿರಾಯ್ತು
ಹೊಸ ಹಸಿರು ಹೊಸ ಉಸಿರು ನೀನು ನೀಡಿದೆ

ಹಾಡೊಂದು ನಾ ಹಾಡುವೆನು ಹೃದಯ ರಾಗದಲ್ಲಿ
ಕವಿತೆಯನು ಬರೆಯುವೆನು ಮನದ ಆಸೆ ಚೆಲ್ಲಿ..
ಹಾಡೊಂದು ನಾ ಹಾಡುವೆನು ಹೃದಯ ರಾಗದಲ್ಲಿ
ಕವಿತೆಯನು ಬರೆಯುವೆನು ಮನದ ಆಸೆ ಚೆಲ್ಲಿ..

ಕೋಟಿ ತಾರೆ ನಡುವಿನಲಿ ಚಂದ್ರ ಅಂದ
ನೀನು ಬಂದ ಈ ಘಳಿಗೆ ನಮಗೆ ಚೆಂದ
ಹಾಡದೆ ಉಳಿದ ಕೊರಳಿಗೆ ಇಂದು ನೀನು ನಾದ ತಂದೆ
ತುಂಬಿದ ಛಲದ ಸಾಧನೆಗಿಂದು ಸ್ಫೂರ್ತಿಯಾಗಿ ಬಂದೆ
ಬಾನಲ್ಲಿ ಗುಡುಗು ಸಿಡಿಲು ದ್ವನಿಗೆ ತಡೆಯು ಎಲ್ಲುಂಟು
ಆ ಧ್ವನಿಗೆ ಸಾಟಿಯಾಗಿ ನಮ್ಮ ಕೊರಳು ಇಲ್ಲುಂಟು
ಮುಜಗವ ಹಾಡಿನಲೆ ನಾವು ಗೆಲ್ಲುವಾ..

ಹಾಡೊಂದು ನಾ ಹಾಡುವೆನು ಹೃದಯ ರಾಗದಲ್ಲಿ
ಕವಿತೆಯನು ಬರೆಯುವೆನು ಮನದ ಆಸೆ ಚೆಲ್ಲಿ..
ಹಾಡೊಂದು ನಾ ಹಾಡುವೆನು ಹೃದಯ ರಾಗದಲ್ಲಿ
ಕವಿತೆಯನು ಬರೆಯುವೆನು ಮನದ ಆಸೆ ಚೆಲ್ಲಿ..

*********************************************************************************

ಚಿಲಿಪಿಲಿ ಎನುತಲಿ


ಸಾಹಿತ್ಯ : ಹಂಸಲೇಖ 
ಗಾಯನ : ಮಂಜುಳಾ ಗುರುರಾಜ್ 


ಚಿಲಿಪಿಲಿ ಎನುತಲಿ ಗಗನದ
ಜೊತೆಯಲಿ ಹಾಡಿವೆ ಹಕ್ಕಿಗಳು
ಹರುಷದ ಹೊಳೆಯಲಿ ಸರಿಗಮ
ಸ್ವರದಲ್ಲಿ ಹಾರಿವೆ ಹೃದಯಗಳು
ಈ ಸ್ನೇಹ ಸಂಗೀತ ಸಂತೋಷ ಸಂಕೇತ
ಗೆಳೆತನ ತಂದ  ಬಂದ ಎಂದು ಆನಂದ

ಚಿಲಿಪಿಲಿ ಎನುತಲಿ ಗಗನದ
ಜೊತೆಯಲಿ ಹಾಡಿವೆ ಹಕ್ಕಿಗಳು
ಹರುಷದ ಹೊಳೆಯಲಿ ಸರಿಗಮ
ಸ್ವರದಲ್ಲಿ ಹಾರಿವೆ ಹೃದಯಗಳು
ಈ ಸ್ನೇಹ ಸಂಗೀತ ಸಂತೋಷ ಸಂಕೇತ
ಗೆಳೆತನ ತಂದ  ಬಂದ ಎಂದು ಆನಂದ

ಗಾಳಿಗೊಂದು ಬೇಲಿ ಇಲ್ಲ ಹಕ್ಕಿಗೆ
ಯಾವ ಸಂಕೋಲೆ ಇಲ್ಲಾ
ಬಾನಿಗೊಂದು ಮೇರೆ ಇಲ್ಲಾ ಹಾಡಲು
ಯಾರ ಹಂಗು ಬೇಕಿಲ್ಲಾ
ಅರಿಯದು ಯಾರ ಪಾಪ ಸ್ನೇಹ
ಎನಿಸದು ಎಂದು ತಾನು ದ್ರೋಹ
ಕಲ್ಮಶ ಏನು ಇಲ್ಲ ಇವರ ಮನದಲ್ಲಿ
ನಿರ್ಮಲ ಭಾವ ನೋಡು ಇವರ ಹಾಡಲಿ

ಚಿಲಿಪಿಲಿ ಎನುತಲಿ ಗಗನದ
ಜೊತೆಯಲಿ ಹಾಡಿವೆ ಹಕ್ಕಿಗಳು
ಹರುಷದ ಹೊಳೆಯಲಿ ಸರಿಗಮ
ಸ್ವರದಲ್ಲಿ ಹಾರಿವೆ ಹೃದಯಗಳು
ಈ ಸ್ನೇಹ ಸಂಗೀತ ಸಂತೋಷ ಸಂಕೇತ
ಗೆಳೆತನ ತಂದ  ಬಂದ ಎಂದು ಆನಂದ 

ಎಲ್ಲೋ ಹೇಗೋ ಒಂದಾದವು
ನೋವಿಂದ ಬೆಂದ ಬೀದಿ ಹೂಗಳು
ಅಧರವು ಯಾರಿಲ್ಲವು ತಮ್ಮನ್ನೇ ನಂಬಿ ನಿಂತ ಕೈಗಳು
,ಮುಗಿಲಿಗೆ ಲಗ್ಗೆ ಹಾಕೋ ಧೈರ್ಯ
ತಡೆಗಳ ತಳ್ಳಿ ನಿಲ್ಲೋ ಸ್ಥೈರ್ಯ
ವಿಧಿಯನೆ ಗೆಲ್ಲೊ ಅಂತ ಛಲವು ತಮ್ಮಲ್ಲಿ
ಜಗವನೇ ಸೆಳೆಯೋ ಮೋಡಿ ಇವರ ಹಾಡಲ್ಲಿ

ಚಿಲಿಪಿಲಿ ಎನುತಲಿ ಗಗನದ ಜೊತೆಯಲಿ ಹಾಡಿವೆ ಹಕ್ಕಿಗಳು
ಹರುಷದ ಹೊಳೆಯಲಿ ಸರಿಗಮ ಸ್ವರದಲ್ಲಿ ಹಾರಿವೆ ಹೃದಯಗಳು
ಈ ಸ್ನೇಹ ಸಂಗೀತ ಸಂತೋಷ ಸಂಕೇತ
ಗೆಳೆತನ ತಂದ  ಬಂದ ಎಂದು ಆನಂದ 

*********************************************************************************

ತಾಳಕ್ಕೆ ನಾವೆಲ್ಲಾ

ಸಾಹಿತ್ಯ : ಎಂ.ಎನ್.ವ್ಯಾಸರಾವ್ 
ಗಾಯನ : ಎಸ್. ಪಿ. ಬಾಲಸುಬ್ರಹ್ಮಣ್ಯಂ 


ತಾಳಕ್ಕೆ ನಾವೆಲ್ಲಾ ಹಾಡುತಿರೆ..
ಮೇಳಕ್ಕೆ ನೀವೆಲ್ಲಾ ತೂಗುತಿರೇ
ತಾಳಕ್ಕೆ ನಾವೆಲ್ಲಾ ಹಾಡುತಿರೆ..
ಮೇಳಕ್ಕೆ ನೀವೆಲ್ಲಾ ತೂಗುತಿರೇ
ಬಿಂಕ ಬೇಕೇ ಬೇಡ ಬಿನ್ನಾಣ 
ಸುಂಕವಿಲ್ಲ ಗೆಜ್ಜೆ ಕಟ್ಟೋಣ 
ಬಿಂಕ ಬೇಕೇ ಬೇಡ ಬಿನ್ನಾಣ 
ಸುಂಕವಿಲ್ಲ ಗೆಜ್ಜೆ ಕಟ್ಟೋಣ 
ನೀವು ಕೂಡಾ ತಾಳ ಹಾಕಿ ನಮ್ಮ ಜೋಡಿ ಹಾದಿ 

ತಾಳಕ್ಕೆ ನಾವೆಲ್ಲಾ ಹಾಡುತಿರೆ..
ಮೇಳಕ್ಕೆ ನೀವೆಲ್ಲಾ ತೂಗುತಿರೇ
ಬಿಂಕ ಬೇಕೇ ಬೇಡ ಬಿನ್ನಾಣ 
ಸುಂಕವಿಲ್ಲ ಗೆಜ್ಜೆ ಕಟ್ಟೋಣ 
ನೀವು ಕೂಡಾ ತಾಳ ಹಾಕಿ ನಮ್ಮ ಜೋಡಿ ಹಾದಿ 

ಗಾಳಿ ಬಂದಾಗ ನಾವು ನುಗ್ಗಬೇಕು
ನದಿಗೆ ಎದುರಾಗಿ ಈಜಬೇಕು
ಬಾಳ ಈ ದಾರಿ ಮುಳ್ಳಾದರೇನು
ಅದುವೇ ನಮಗಿಂದು ಹೂವಾಗದೇನು
ಅದೃಷ್ಟ ಕೂಡಿ ಬಂದರೇ ಬೀದಿ ತಿರುಕ ಆದಾನು ರಾಜ
ಅದೃಷ್ಟ ಜಾರಿ ಹೊದ್ರೇ ನಮ್ಮ ರಾಜ ಕೊತಂಬರಿ ಬೀಜ
ನೋಡಿಲ್ಲಿ.. ನಮ್ಮಾಟಕ್ಕೆ ಸೊಲ್ಲಿಲ್ಲಾ
ಸೋಲಸಕ್ಕೆ ಯಾರಪ್ಪಂಗೂ ದಮ್ಮಿಲ್ಲ
ಹಾಡು ಸಂತೋಷಕ್ಕೆ ಹೃದಯ ಸಂಗೀತಕ್ಕೆ..

ತಾಳಕ್ಕೆ ನಾವೆಲ್ಲಾ ಹಾಡುತಿರೆ..
ಮೇಳಕ್ಕೆ ನೀವೆಲ್ಲಾ ತೂಗುತಿರೇ
ಬಿಂಕ ಬೇಕೇ ಬೇಡ ಬಿನ್ನಾಣ 
ಸುಂಕವಿಲ್ಲ ಗೆಜ್ಜೆ ಕಟ್ಟೋಣ 
ನೀವು ಕೂಡಾ ತಾಳ ಹಾಕಿ ನಮ್ಮ ಜೋಡಿ ಹಾದಿ 

ಚಾನ್ಸು ಬಂದಾಗ ಚಾಲೆಂಜ್-ಉ ನಾವು
ಚಳಿಗೆ ಎಂದೆಂದೂ ನಡಗೊಲ್ಲ ನಾವು
ನಾವು ಹಾಡೊದೇ ಈ ನಾಡಿಗಾಗಿ
ಎದೆಯಾ ನೋವೆಲ್ಲಾ ಈ ಪಾಡಿಗಾಗಿ
ಕನಿಷ್ಠ ನೀವು ನಮ್ಮ ಬೆನ್ನು ತಟ್ಟಿ ಆಮೇಲೆ ನೋಡಿ
ಬಲಿಷ್ಠ ಜೋಡಿ ನಾವು ಹೆಮ್ಮೆ ಪಟ್ಟು ಹಾಡ್ತೀವಿ ನೋಡಿ
ಈ ಡಿಸ್ಕೋ ಈ ಮೇಳಕ್ಕೆ ಸಾವಿಲ್ಲ
ಈ ರಿಸ್ಕು ಮುನ್ನೋಟಕ್ಕೆ ಕಾಣಸಲ್ಲ
ಕೂಗಿ ವನ್ಸ್ ಮೊರ್ ಎಂದು ಕುಣಿದು ನಲಿದಾಡಲು
ತಲಾಂಗ್ ತಂಗು ತಾ ತರಿಕಿಟ ತರಿಕಿಟ

ತಾಳಕ್ಕೆ ನಾವೆಲ್ಲಾ ಹಾಡುತಿರೆ..
ಮೇಳಕ್ಕೆ ನೀವೆಲ್ಲಾ ತೂಗುತಿರೇ
ಬಿಂಕ ಬೇಕೇ ಬೇಡ ಬಿನ್ನಾಣ 
ಸುಂಕವಿಲ್ಲ ಗೆಜ್ಜೆ ಕಟ್ಟೋಣ 
ನೀವು ಕೂಡಾ ತಾಳ ಹಾಕಿ ನಮ್ಮ ಜೋಡಿ ಹಾದಿ 

ತಾಳಕ್ಕೆ ನಾವೆಲ್ಲಾ ಹಾಡುತಿರೆ..
ಮೇಳಕ್ಕೆ ನೀವೆಲ್ಲಾ ತೂಗುತಿರೇ
ಬಿಂಕ ಬೇಕೇ ಬೇಡ ಬಿನ್ನಾಣ 
ಸುಂಕವಿಲ್ಲ ಗೆಜ್ಜೆ ಕಟ್ಟೋಣ 
ನೀವು ಕೂಡಾ ತಾಳ ಹಾಕಿ ನಮ್ಮ ಜೋಡಿ ಹಾದಿ 

*********************************************************************************

ಜನುಮ ಜನಮದಲ್ಲೂ

ಸಾಹಿತ್ಯ : ಎಂ.ಎನ್.ವ್ಯಾಸರಾವ್ 
ಗಾಯನ :ಕೆ.ಜೆ.ಯೇಸುದಾಸ್, ಮಂಜುಳಾ ಗುರುರಾಜ್ 


ಜನುಮ ಜನಮದಲ್ಲೂ ನಿನ್ನೊಲವ ಬೇಡುವೇ..
ನನ್ನ ಜೀವ ನಿನ್ನ ಮುಡುಪಾಗಿ ಹೋಗಿದೆ..
ಏಕೋ ಏನೋ ಆಸೆ ಮೀಟಿದೆ.. 
ಬಾಳಾ ದಾರಿ ಹೂವು ಹಾಸಿದೆ
ಇಂಥ ಬಂಧದಿಂದ ಅನುಬಂಧ ಮೂಡಿದೆ...
ಜನುಮ ಜನಮದಲ್ಲೂ ನಿನ್ನೊಲವ ಬೇಡುವೇ..
ನನ್ನ ಜೀವ ನಿನ್ನ ಮುಡುಪಾಗಿ ಹೋಗಿದೆ..

ವಿರಹ  ಕಳೆದು ಹರುಷವ ನೀಡಿದೆ
ಸರಸ ಬೆಸೆದು ಮಿಲನಕೆ ಕೂಗಿದೆ
ದಿನವೂ ಕ್ಷಣವೂ ಕನಸಲಿ ಕಾಡಿದೆ
ಹಗಲು ಇರುಳು ದಹಿಸುತ ಬಾಡಿದೆ
ಹೇಯ್ಯ್... ಪ್ರಣಯದ ಸುಖವ ತೋರು ನನ್ನ ಕೋಗಿಲೆ
ಅನುದಿನ ಇರಳು ನಾಳೆ ಏಕೆ ಈಗಲೇ ...
ಒಲವಿಂದ ಬಳಸೆನ್ನ ತೋರು ಪ್ರೀತಿಯ
ಈ ತನುವಲಿ ನಾ ಬರೆದಿಹೆ ನಿನ್ನ ಮೋಹವ

ಜನುಮ ಜನಮದಲ್ಲೂ ನಿನ್ನೊಲವ ಬೇಡುವೇ..
ನನ್ನ ಜೀವ ನಿನ್ನ ಮುಡುಪಾಗಿ ಹೋಗಿದೆ..

ತಂದ ನಾನ ತಂದ ನಾನ ತಾನ ತಾನ ತಂದಾನಾ ತಂದ ನಾ
ತಂದ ನಾನ ತಂದ ನಾನ ತಾನ ತಾನ ತಂದಾನಾ ತಂದ ನಾ

ಭುವಿಗೆ ಅಮರ ಗಗನದ ಆಸರೆ, ನನಗೆ ಮಧುರ ಇನಿಯನ ಈ ಸೆರೆ
ನದಿಗೆ ಕಡಲು ತೊಡಿಸಿದೆ ಬಂಧನ, ನಿನಗೆ ಕೊಡುವೆ ಉಡುಗೊರೆ ಚುಂಬನ
ಬಗೆ ಬಗೆ ಸವಿಯ ಮೇಳ ನಮ್ಮ ಜೀವನ
ಹೊಸತನ ಹರಿವ ಪ್ರೀತಿ ಹೊಕ್ಕ ಮೈಮನ
ನೀನಗೆಂದೇ ಕೊಡಲೆಂದೇ ಜೀವ ಕಾದಿದೆ
ಈ ಹೃದಯವು ಈ ಚೆಲುವೆಗೆ  ಎಂದೋ ಸೋತಿದೆ..

ಜನುಮ ಜನಮದಲ್ಲೂ ನಿನ್ನೊಲವ ಬೇಡುವೇ..
ನನ್ನ ಜೀವ ನಿನ್ನ ಮುಡುಪಾಗಿ ಹೋಗಿದೆ..
ಏಕೋ ಏನೋ ಆಸೆ ಮೀಟಿದೆ.. ಬಾಳಾ ದಾರಿ ಹೂವು ಹಾಸಿದೆ
ಇಂಥ ಬಂಧದಿಂದ ಅನುಬಂಧ ಮೂಡಿದೆ...
ಜನುಮ ಜನಮದಲ್ಲೂ ನಿನ್ನೊಲವ ಬೇಡುವೇ..
ನನ್ನ ಜೀವ ನಿನ್ನ ಮುಡುಪಾಗಿ ಹೋಗಿದೆ..

*********************************************************************************

ಜೋಡಿ (2001)



ಚಲನ ಚಿತ್ರ: ಜೋಡಿ (2001)
ನಿರ್ದೇಶನ: ಕಿಶೋರ್ ಸರ್ಜಾ 
ಸಂಗೀತ: ಎಸ್.ಎ. ರಾಜ್ ಕುಮಾರ್ 
ಸಾಹಿತ್ಯ: ಅರ್.ಎನ್.ಜಯಗೋಪಾಲ್
ಗಾಯಕರು: ಎಸ್.ಪಿ. ಬಾಲಸುಬ್ರಮಣ್ಯಂ, ಶ್ರೀಮತಿ ಚಿತ್ರ
ನಟನೆ: ಶಿವರಾಜ್ ಕುಮಾರ್, ಜಗ್ಗೇಶ್, ಪೂನಂ ಸಿಂಗಾರ್  

ಗ: ಓ ಪ್ರೀತಿಯೇ ನೀನೆಷ್ಟು ದೂರವೇ
ಹೇ:ಈ ದೂರವು ಒಂದು ಕ್ಷಣವೂ ಮಾತ್ರವೇ
ಗ:ಮಾತಿನಲೆ ಈ ಪ್ರೀತಿಯು ಕನಸುಗಳ ತೆರೆದಾಯಿತು
ಹೇ:ಕಾತರದ ಕಣ್ ಅಂಚಲಿ ಮನಸುಗಳು ಬೇರೆತಾಯಿತು
ಗ:ಈಗಾರು ಹೇಳೇ ಬೇಗ ಮುಖಾಮುಖಿ ಯಾವಾಗ.
ಗ: ಓ ಪ್ರೀತಿಯೇ ನೀನೆಷ್ಟು ದೂರವೇ
ಹೇ:ಈ ದೂರವು ಒಂದು ಕ್ಷಣವೂ ಮಾತ್ರವೇ
ಹೇ:ನಾನೊಂದು ತೀರಾ ನೀನೊಂದು ತೀರಾ
ಇಬ್ಬರ ಮನಸು ಭಾರ ಭಾರ
ಗ:ಈ ಒಂಟಿತನವೂ ಶಾಶ್ವತವಲ್ಲ
ನಂಬಿಕೆಯೊಂದೇ ನಮಗಾಧಾರ
ಹೇ:ನಿಂತಲ್ಲಿ ಕುಂತಲ್ಲಿ ನಿರೀಕ್ಷೆಯೂ ಸಹಜ
ಗ:ಪ್ರತಿಯೊಂದು ಹೆಜ್ಜೆಯಲು ಪರೀಕ್ಷೆಯು ಸಹಜ
ಹೇ:ದಯಮಾಡಿ ಬಾ ಹತ್ತಿರ ತಾಳೆನು ಈ ಕಾತರ
ಗ:ನಿನಗಾಗಿ ಜೀವಾ ಕೊಡಲು ಕಾಯುತಿರುವೆ ಎಲ್ಲಿರುವೆ
ಹೇ: ಓ ಪ್ರೀತಿಯೇ ನೀನೆಷ್ಟು ದೂರವೇ
ಗ:ಈ ದೂರವು ಒಂದು ಕ್ಷಣವೂ ಮಾತ್ರವೇ

ಗ:ಒಂದೊಂದು ನಿಮಿಷ ವರುಷದ ಹಾಗೆ
ಕಾಯಲು ಕಷ್ಟ ಬೇಗ ಕೂಗೆ
ಹೇ:ಒಂದು ಸರತಿ ಸಿಗಲು ನೀನು
ಏನೇ ಕಷ್ಟ ಬಂದರೂ ಸರಿಯೇ
ಗ:ಈ ಪ್ರೀತಿಯ ತಳಮಳವು ಎಲ್ಲಿಂದ ಶುರುವಾಯ್ತು
ಹೇ:ಅಲ್ಲಿಂದಲ್ಲೇ ಈ ಜೀವಕೆ ನಿದಿರೆಯು ಮರೆತೋಯ್ತು
ಗ:ಗಾಳಿಯಲು ನಿನ್ನ ಸ್ಪರ್ಶವ ಹುಚ್ಚನಂತೆ ಹುಡುಕಾಡಿದೆ
ಹೇ:ಪ್ರಿತ್ಸೋರು ನಾವು ಇರಲು ಸೋಲೇ ಇಲ್ಲ ಪ್ರೀತಿಗೆ

ಗ: ಓ ಪ್ರೀತಿಯೇ ನೀನೆಷ್ಟು ದೂರವೇ
ಹೇ:ಈ ದೂರವು ಒಂದು ಕ್ಷಣವೂ ಮಾತ್ರವೇ
ಗ:ಮಾತಿನಲೆ ಈ ಪ್ರೀತಿಯು ಕನಸುಗಳ ತೆರೆದಾಯಿತು
ಹೇ:ಕಾತರದ ಕಣ್ ಅಂಚಲಿ ಮನಸುಗಳು ಬೇರೆತಾಯಿತು
ಗ:ಈಗಾರು ಹೇಳೇ ಬೇಗ ಮುಖಾಮುಖಿ ಯಾವಾಗ.
ಗ: ಓ ಪ್ರೀತಿಯೇ ನೀನೆಷ್ಟು ದೂರವೇ
ಹೇ:ಈ ದೂರವು ಒಂದು ಕ್ಷಣವೂ ಮಾತ್ರವೇ

*********************************************************************************

Saturday, October 6, 2018

ಮನ ಮೆಚ್ಚಿದ ಹುಡುಗಿ (1987)


ಗೌರಮ್ಮ ನಿನ್ನ ಗಂಡ


ಚಲನ ಚಿತ್ರ: ಮನ ಮೆಚ್ಚಿದ ಹುಡುಗಿ (1987)
ನಿರ್ದೇಶನ: ಎಂ. ಎಸ್. ರಾಜಶೇಖರ್ 
ಸಂಗೀತ: ಉಪೇಂದ್ರ ಕುಮಾರ್ 
ಸಾಹಿತ್ಯ: ಚಿ.ಉದಯಶಂಕರ್ 
ಗಾಯಕರು: ಎಸ್. ಪಿ. ಬಾಲಸುಬ್ರಮಣ್ಯಂ, ಎಸ್. ಜಾನಕಿ
ನಟನೆ: ಶಿವರಾಜ್ ಕುಮಾರ್, ಸುಧಾರಾಣಿ  


ಗಂಡು :  ಗೌರಮ್ಮಾ...
            ಗೌರಮ್ಮಾ ನಿನ್ನ ಗಂಡ ಯಾರಮ್ಮಾ ||೨||
            ಗಂಡ ಎಂದ ಒಡನೆ ಕೆನ್ನೆ ಕೆಂಪು ಯಾಕಮ್ಮಾ ||೨||
            ಓರೆ ನೋಟ ಏಕಮ್ಮ  ತುಟಿಯ ಮಿಂಚು ಏನಮ್ಮಾ
            ಹೀಗೆ ನಾಚಿಕೇ ಏ
            ಹೀಗೆ ನಾಚಿಕೇ ಏಕಮ್ಮಾ?
            ಇಂಥ ಮುದ್ದು ಹೆಣ್ಣಾ ಮನಸ ಗೆದ್ದ ಭೂಪ ಯಾರಮ್ಮಾ?
           ಗೌರಮ್ಮಾ ನಿನ್ನ ಗಂಡ ಯಾರಮ್ಮಾ
           ಗೌರಮ್ಮಾ ನಿನ್ನ ಗಂಡ ಯಾರಮ್ಮಾ
ಹೆಣ್ಣು:   ಗಂಡ ಎಂದರವನೆ ಗುಂಡು ಕಲ್ಲಿನಂತಮ್ಮ
            ಗಂಡು ಸಿಂಹ ಅವನಮ್ಮ, ಭಯದ ಮಾತೆ ಇಲ್ಲಮ್ಮ
            ಎದಿರು ನಿಲ್ಲೋರೂ, ಎದುರು ನಿಲ್ಲೋರಿಲ್ಲಮ್ಮ
            ಅವನ ಎದುರು ಗೆಲ್ಲೋ ವೀರ ಇನ್ನು ಹುಟ್ಟೇ ಇಲ್ಲಮ್ಮ
ಗಂಡು: ಗೌರಮ್ಮಾ ನಿನ್ನ ಗಂಡ ಯಾರಮ್ಮಾ
ಹೆಣ್ಣು: ಗಂಗಮ್ಮಾ ನನ್ನ ಗಂಡ ಶಿವನಮ್ಮ

ಗಂಡು;  ಏನಾ ಕಂಡು ಒಲಿದೆ ನೀನು ಶಿವನಿಗೇ?
             ಅಪ್ಪ ಇಲ್ಲ ಅಮ್ಮ ಇಲ್ಲ ಹೆಣ್ಣೆ ಅವನಿಗೇ
             ಏನಾ ಕಂಡು ಒಲಿದೆ ನೀನು ಶಿವನಿಗೇ?
             ಅಪ್ಪ ಇಲ್ಲ ಅಮ್ಮ ಇಲ್ಲ ಹೆಣ್ಣೆ ಅವನಿಗೇ
             ಹಣೆಯ ವಿಭೂತಿಯೋ, ಕೊರಳ ರುದ್ರಾಕ್ಷಿಯೋ
             ತಿರಿದು ತಿನ್ನೋ ಗಂಡಾ ಕಂಡು
             ಪ್ರೀತಿ ಹೇಗೆ ಬಂತಮ್ಮಾ
ಹೆಣ್ಣು:   ಅವನ ಕಂಡ ಮೊದಲ ದಿನವೇ ಸೋತೆನು
            ಮೊಗ್ಗು ಹಿಗ್ಗಿ ಹೂವು ಆದ ಹಾಗೆ ಆದೆನು
            ಶಿವನ ಆಕಾರಕೆ, ಅವನ ಸವಿಮಾತಿಗೆ
            ಎಲ್ಲಾ ಹೆಣ್ಣು ಸೋಲೋರೇನೆ, ನಾನೂ ಹಾಗೆ ಗಂಗಮ್ಮಾ

ಗಂಡು: ಗೌರಮ್ಮ ನಿನ್ನ ಗಂಡ ಯಾರಮ್ಮಾ
ಹೆಣ್ಣು:  ಗಂಗಮ್ಮಾ ನನ್ನ ಗಂಡ ಶಿವನಮ್ಮ

ಗಂಡು:   ಬೆಳ್ಳಿ ಚಿನ್ನ ಕಂಡೋನಲ್ಲ ಈ ತಿರುಕನು
              ಹಾಲು ಹಣ್ಣು ಮಹಲು ಮಂಚ ಒಂದೂ ಕಾಣನು
              ಬೆಳ್ಳಿ ಚಿನ್ನ ಕಂಡೋನಲ್ಲ ಈ ತಿರುಕನು
              ಹಾಲು ಹಣ್ಣು ಮಹಲು ಮಂಚ ಒಂದೂ ಕಾಣನು
              ಗಂಡ ಅವನೆಂದರೆ ನಿನಗೆ ಬಲು ತೊಂದರೆ
              ನಾಳೆ ಬರುವ ಕಷ್ಟ ತಿಳಿಯದೆ
              ಈಗ ದುಡುಕಬೇಡಮ್ಮ
ಹೆಣ್ಣು:   ಹೊನ್ನು ಮಣ್ಣು ಎರಡೂ ಒಂದೇ ಶಿವನಿಗೆ
             ಮರದ ನೆರಳೆ ಮಹಲು ಅವನು ಒಲಿದಾ ಹೆಣ್ಣಿಗೆ
             ಊರೇ ಎದುರಾಗಲಿ, ಯಾರೇ ಹೋರಾಡಲಿ
             ಶಿವನ ಕೈಯ್ಯಾ ಹಿಡಿಯಲೆ ಭುವಿಗೆ ಇಳಿದ ಹೆಣ್ಣು ಗೌರಮ್ಮಾ

ಗಂಡು : ಗೌರಮ್ಮಾ ನಿನ್ನ ಗಂಡ ಯಾರಮ್ಮಾ
ಹೆಣ್ಣು: ಗಂಗಮ್ಮಾ ನನ್ನ ಗಂಡ ಶಿವನಮ್ಮ
ಗಂಡು: ಗೌರಮ್ಮಾ ನಿನ್ನ ಗಂಡ ಯಾರಮ್ಮಾ
ಹೆಣ್ಣು: ಗಂಗಮ್ಮಾ ನನ್ನ ಗಂಡ ಶಿವನಮ್ಮ

*********************************************************************************

ಗೌರೀ ಮೊಗವು

ಸಾಹಿತ್ಯ: ಚಿ.ಉದಯಶಂಕರ್ 
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ 


ಗೌರೀ ಮೊಗವು ಚಂದಿರನಂತೆ
ಗೌರೀ ನಗುವು ಹುಣ್ಣಿಮೆಯಂತೆ
ನನ್ನ ಬಂಗಾರಿ ಸಿಂಗಾರಿ ಗೌರಿಯ
ಮಾತೆ ಮುತ್ತಂತೇ ಏ ಮಾತೆ ಮುತ್ತಂತೇ  ||ಗೌರೀ ಮೊಗವು||

ಜಿಂಕೆಮರಿಯೋ ಮುದ್ದುಗಿಳಿಯೋ
ಒಲಿದು ಬಂದ ಪ್ರೇಮ ಸಿರಿಯೋ
ಮೇಲೆ ಬಾನಿಂದ ನನಗಾಗಿ ಕಾದಿಹ  ಮಿನುಗುವಾ ತಾರೆಯೋ
ಮಿನುಗುವಾ ತಾರೆಯೋ  ||ಗೌರೀ ಮೊಗವು||

ಹೊಲದಲ್ಲಿ ಓಡೋವಾಗ, ಕಾಲ್ಗೆಜ್ಜೆಯೂ ತಂದ
ಖಲಿರೆಂದು ಚಿಮ್ಮುವಾಗ, ಕಿವಿಗೆಂಥ ಚೆಂದ
ಆ..ಹೊಲದಲ್ಲಿ ಓಡೋವಾಗ, ಕಾಲ್ಗೆಜ್ಜೆಯೂ ತಂದ
ಖಲಿರೆಂದು ಚಿಮ್ಮುವಾಗ, ಕಿವಿಗೆಂಥ ಚೆಂದ
ಅವಳ ಕೈ ಸೋಕಿ ಹೊನ್ನಾಯ್ತು ಪೈರು
ಅವಳ ತುಟಿ ಸೋಕಿ ಸಿಹಿಯಾಯ್ತು ನೀರು
ಅವಳ ಕೈ ಸೋಕಿ ಹೊನ್ನಾಯ್ತು ಪೈರು
ಅವಳ ತುಟಿ ಸೋಕಿ ಸಿಹಿಯಾಯ್ತು ನೀರು
ಮುದ್ದು ಗೌರೀ...
ಚಿಟ್ಟೆ ಹಾರಾಡದೆ ಅವಳ ಆಟ ನೋಡಿತು
ಹಕ್ಕಿ ಬೆರಗಾಗುತ ಅವಳ ಮಾತು ಕೇಳಿತು
ದೂರ ಮಾವಿನ ಮರದಲ್ಲಿ ಕೋಗಿಲೆ
ಮೌನವ ತಾಳಿತು  ಮೌನವ ತಾಳಿತು..ಅಹ್  ||ಗೌರೀ ಮೊಗವು||

ನದಿಯಲ್ಲಿ ಈಜೋವಾಗ, ಮೀನಂತೆ ಆಡಿ
ನನ್ನನ್ನು ನೋಡಿದಾಗ, ಮಿಂಚಂತೆ ಓಡಿ  ಹಾ..||ನದಿಯಲ್ಲಿ||
ಕೆಣಕಿ ಕಾಡುತ್ತಾ ತುಂಟಾಟದಿಂದ
ಕೂಗಿ ಹಾಡುತ್ತಾ ಸಂತೋಷದಿಂದ
ಕೆಣಕಿ ಕಾಡುತ್ತಾ ತುಂಟಾಟದಿಂದ
ಕೂಗಿ ಹಾಡುತ್ತಾ ಸಂತೋಷದಿಂದ
ಮುದ್ದು ಗೌರೀ..
ಕೈಯ ಹಿಡಿದಾಗಲೆ, ಬಳಿಗೆ ಸೆಳೆದಾಗಲೆ
ನನ್ನ ಮನಸ್ಸೆನ್ನುವ ನವಿಲು ಕುಣಿದಾಗಲೇ
ಮೇಲೆ ಮುಗಿಲಲ್ಲಿ ಜೊತೆಯಾಗಿ ಹಾರುವ
ಕನಸನು ಕಾಣುವೇ ಏ
ಕನಸನು ಕಾಣುವೇ.. ||ಗೌರೀ ಮೊಗವು||

*********************************************************************************

ಬೆಂಕಿಯಲ್ಲು ತಂಪು ಕಂಡೆನು

ಸಾಹಿತ್ಯ: ಚಿ.ಉದಯಶಂಕರ್   
ಗಾಯಕರು: ಎಸ್. ಪಿ. ಬಾಲಸುಬ್ರಮಣ್ಯಂ, ಎಸ್. ಜಾನಕಿ


ಗಂಡು : ಡಿಂಗರ ಡಿಂಗರ ಡಿಂಗರ ಡಿಂಗರ ಡಿಂಗರ ಡಿಂಗರ ಡಿಂಗ
ಹೆಣ್ಣು :  ಡಿಂಗರ ಡಿಂಗರ ಡಿಂಗರ ಡಿಂಗರ ಡಿಂಗರ ಡಿಂಗರ ಡಿಂಗ
 ಗಂಡು : ಹಾ..ಜಿಂಗಿಚಕ್ಕ ಜಿಂಗಿಚಕ್ಕ ಜಿಂಗಿಚಕ್ಕ
ಜಿಂಗಿಚಕ್ಕ ಜಿಂಗಿಚಕ್ಕ ಜಿಂಗಿಚಕ್ಕ
ಹೆಣ್ಣು : ಜಿಂಗಿಚಕ್ಕ ಜಿಂಗಿಚಕ್ಕ ಜಿಂಗಿಚಕ್ಕ
ಜಿಂಗಿಚಕ್ಕ ಜಿಂಗಿಚಕ್ಕ ಜಿಂಗಿಚಕ್ಕ
ಗಂಡು: ಓ ಹೋ....ಓ ಹೋ...ಓ ಹೋ..ಓ ಹೋ..
ಆ ಹ ಹ  ಆ ಹ ಹ     ಹೆಣ್ಣು: ಆ ಹ ಹ

ಗಂಡು : ನಿನ್ನಾಣೆ ನಾನು ಬೆಂಕಿಯಲ್ಲು ತಂಪು ಕಂಡೆನು
            ನನ್ನಾಣೆ ನಾನು ಡೊಂಕಿನಲ್ಲು ಅಂದ ಕಂಡೆನು
           ನಿನ್ನಾಣೆ ನಾನು ಬೆಂಕಿಯಲ್ಲು ತಂಪು ಕಂಡೆನು
           ನನ್ನಾಣೆ ನಾನು ಡೊಂಕಿನಲ್ಲು ಅಂದ ಕಂಡೆನು
          ಮಾವನ ಮಗಳು ನನ್ನ ಮೋಹಿಸಿ ಬಂದಾಗ
          ಮಾವನ ಮಗಳು ನನ್ನ ಮೋಹಿಸಿ ಬಂದಾಗ  ಬೇವಿನಲ್ಲೂ ಸಿಹಿಯಾ ಕಂಡೆನು

ಹೆಣ್ಣು:  ನಿನ್ನಾಣೆ ನಾನು ಕತ್ತಲಲ್ಲೂ ಬೆಳಕ ಕಂಡೆನು  ನನ್ನಾಣೆ ನಾನು ಮತ್ತಿನಲ್ಲೂ ಸುಖವ ಕಂಡೆನು
          ನಿನ್ನಾಣೆ ನಾನು ಕತ್ತಲಲ್ಲೂ ಬೆಳಕ ಕಂಡೆನು  ನನ್ನಾಣೆ ನಾನು ಮತ್ತಿನಲ್ಲೂ ಸುಖವ ಕಂಡೆನು
         ಅತ್ತೆಯಾ ಮಗನು ನನ್ನ ಹತ್ತಿರ ಬಂದಾಗ  ಅತ್ತೆಯಾ ಮಗನು ನನ್ನ ಹತ್ತಿರ ಬಂದಾಗ
        ಮುತ್ತಿನಂಥ ಕನಸು ಕಂಡೆನು 
ಗಂಡು: ನಿನ್ನಾಣೆ ನಾನು ಬೆಂಕಿಯಲ್ಲು ತಂಪು ಕಂಡೆನು
ಹೆಣ್ಣು: ನನ್ನಾಣೆ ನಾನು ಕತ್ತಲಲ್ಲು ಬೆಳಕ ಕಂಡೆನು

ಗಂಡು : ಉರಿವಾ ಬಿಸಿಲೆಲ್ಲಾ ಹೊಂಗೇ ನೆರಳಂತೆ  ತುಳಿವಾ ಮುಳ್ಳೆಲ್ಲಾ ಹಸಿರೂ ಹುಲ್ಲಂತೇ
           ಬಳ್ಳಿಯಾ ಮೊಗ್ಗುಗಳೆಲ್ಲಾ ಹೂವಾಗಿ ನಕ್ಕಂತೇ
          ಹರಿಯುವಾ ನದಿನೀರೆಲ್ಲಾ ಸಿಹಿಯಾದ ಜೇನಂತೆ
         ಕಲ್ಲುಕೂಡ ಮೆತ್ತಗಾಯಿತು  ಆ ಕಲ್ಲುಕಂಡ ಹಕ್ಕಿ ಕೂಡ ನಾಚಿಕೊಂಡಿತು
        ಬೆಟ್ಟದಂಥಾ ಆಸೆ ಬಂದಿತು  ಆ ಆಸೆಯಿಂದ ನನ್ನ ಮೈಯೇ ಭಾರವಾಯಿತು
ಹೆಣ್ಣು: ಓ ನನ್ನ ಗೆಳೆಯ ನೀ ಬರಲು ಸನಿಹ  ಚಳಿಯು ಹೋಗಿ ಬಿಸಿಲು ಏರಿತು

ಗಂಡು: ನಿನ್ನಾಣೆ ಬೆಂಕಿಯಲ್ಲು ತಂಪು ಕಂಡೆನು
ಹೆಣ್ಣು: ನನ್ನಾಣೆ ನಾನು ಕತ್ತಲಲ್ಲೂ ಬೆಳಕ ಕಂಡೆನು
ಇಬ್ಬರು : ಜಿಂಗಿಚಕ್ಕ ಜಿಂಗಿಚಕ್ಕ ಜಿಂಗಿಚಕ್ಕಾ..  ಜಿಂಗಿಚಕ್ಕ ಜಿಂಗಿಚಕ್ಕ ಜಿಂಗಿಚಕ್ಕಾ..

ಹೆಣ್ಣು :  ಗುಡುಗೂ ಸಿಡಿಲೆಲ್ಲಾ ಕಿವಿಗೆ ಇಂಪಂತೇ  ಸುರಿವಾ ಮಳೆನೀರು ಹಿತವಾ ತಂದಂತೇ
           ಮುಗಿಲಲ್ಲಿ ಓಡೋ ಮಿಂಚು ಬೆಳಕನ್ನು ತಂದಂತೇ  ಒಲವೆಲ್ಲಾ ಸಾಗರವಾಗಿ ಎದೆಯಲ್ಲಿ ಹರಿದಂತೆ
           ಸುತ್ತಮುತ್ತ ಅಂದ ಕಂಡೆನು  ಆ ಅಂದದಲ್ಲಿ ನನ್ನೆ ನಾನು ಮರೆತು ಹೋದೆನು ಹಾಯ್..
          ಮನಸಿನಲ್ಲಿ ಮನಸಾನಿಟ್ಟೇನು  ನನ್ ಮನಸಾ ನಿನ್ನ ಉಸಿರಿನಲ್ಲಿ ಉಸಿರಾನಿಟ್ಟೇನು
ಗಂಡು : ಓ ನನ್ನ ನಲ್ಲೇ  ನೀನಿರುವಾಗ ಇಲ್ಲೇ  ಮಂಜಿನಂತೆ ಕರಗಿ ಹೋದೇನು

ಹೆಣ್ಣು: ನಿನ್ನಾಣೆ ನಾನು ಕತ್ತಲಲ್ಲೂ ಬೆಳಕ ಕಂಡೆನು ನನ್ನಾಣೆ ನಾನು ಮತ್ತಿನಲ್ಲೂ ಸುಖವ ಕಂಡೆನು
ಗಂಡು: ನಿನ್ನಾಣೆ ನಾನು ಬೆಂಕಿಯಲ್ಲೂ ತಂಪು ಕಂಡೆನು ನನ್ನಾಣೆ ನಾನು ಡೊಂಕಿನಲ್ಲೂ ಅಂದ ಕಂಡೆನು
ಇಬ್ಬರು : ಲಾಲ ಲ್ಲಲ್ಲ ಲಾಲ ಲ್ಲಲ್ಲ ಲಾ  ಲ್ಲಲ್ಲಾಲ ಲಾ ಲಾಲ ಲ್ಲಲ್ಲ ಲಾಲ ಲ್ಲಲ್ಲ ಲಾ

*********************************************************************************

ಉಸಿರೇ ಉಸಿರೇ 

ಸಾಹಿತ್ಯ: ಚಿ.ಉದಯಶಂಕರ್  
ಗಾಯಕರು: ಎಸ್.ಪಿ. ಬಾಲಸುಬ್ರಹ್ಮಣ್ಯಂ 

ಉಸಿರೇ...  ಉಸಿರೇ.... 
ಒಡಲನು ಬಿಟ್ಟು ಹೋದೆಯ
ಉಸಿರೇ...  ಉಸಿರೇ.... 
ಒಡಲನು ಬಿಟ್ಟು ಹೋದೆಯ
ಉಸಿರೇ...  ಉಸಿರೇ... 
ಒಡಲನು ಬಿಟ್ಟು ಹೋದೆಯ

ನನ್ನ ಬಾಳಿನ ಜ್ಯೋತಿಯಾಗಿ  
ನನ್ನ ಪ್ರೇಮದ ಮೂರ್ತಿಯಾಗಿ
ನನ್ನ ಪ್ರಾಣದ ಪ್ರಾಣವಾಗಿ  
ಎಲ್ಲಿ ಹೋದೆ ದೂರವಾಗಿ
ಚೆಲುವೇ... , ಒಲವೇ...   
ಚೆಲುವೇ, ಒಲವೇ   ।। ಉಸಿರೇ... ।।

ಹಗಲೊ ಇರುಳೊ ಅರಿಯದೆ ಹೋದೆ  
ಚಿಂತೆಯ ಭಾರ ತಾಳದೆ ನೊಂದೆ
ಹಗಲೊ ಇರುಳೊ ಅರಿಯದೆ ಹೋದೆ  
ಚಿಂತೆಯ ಭಾರ ತಾಳದೆ ನೊಂದೆ
ಕಣ್ತುಂಬ ನೋಡದೇನೆ     ಸವಿಮಾತು ಆಡದೇನೆ
ನೋವೆಲ್ಲ ಮರೆಯದೇನೆ  ಈ ಜೀವ ಉಳಿವುದೇನೆ

ಚೆಲುವೇ, ಒಲವೇ  
ಚೆಲುವೇ, ಒಲವೇ
ಉಸಿರೇ..  ಉಸಿರೇ...   
ಒಡಲನು ಬಿಟ್ಟು ಹೋದೆಯ

ಮುಗಿಲೇ ಕರಗಿ ಅಳುತಿರುವಾಗ    
ಹೃದಯವು ನೊಂದು ಕೂಗಿರುವಾಗ
ಮುಗಿಲೇ ಕರಗಿ ಅಳುತಿರುವಾಗ    
ಹೃದಯವು ನೊಂದು ಕೂಗಿರುವಾಗ
ನನ್ನ ಮಾತು ಕೇಳದೇನೆ       
ನನ್ನ ನೆನಪು ಬಾರದೇನೆ
ನಮ್ಮ ಪ್ರೇಮ ಮರೆತೆಯೇನೆ  
ನನ್ನ ಸ್ನೇಹ ಬೇಡವೇನೆ

ಚೆಲುವೇ...  ಚೆಲುವೇ....   
ಚೆಲುವೇ, ಚೆಲುವೇ
ಉಸಿರೇ ಉಸಿರೇ  
ಒಡಲನು ಬಿಟ್ಟು ಹೋದೆಯ
ಉಸಿರೇ ಉಸಿರೇ  
ಒಡಲನು ಬಿಟ್ಟು ಹೋದೆಯ

*********************************************************************************

ಕೇಳಿ ಎಲ್ಲ ಕೇಳಿ

ಸಾಹಿತ್ಯ: ಚಿ.ಉದಯಶಂಕರ್  
ಗಾಯಕರು: ಎಸ್.ಪಿ. ಬಾಲಸುಬ್ರಹ್ಮಣ್ಯಂ 


ಕೇಳಿ ಎಲ್ಲ ಕೇಳಿ.. ಕೇಳಿ ಎಲ್ಲ ಕೇಳಿ..  
ಶಿವನೆಂದು ಹಾಡಿದರೆ ಸಂತೋಷ 
ಶಿವನೆಂದು ಕೂಗಿದರೆ ಉಲ್ಲಾಸ 
ಶಿವ ನಾಮ ಒಂದೇ ನಿನ್ನನ್ನು 
ಕಾಪಾಡೋ ಶಕ್ತಿ ಎಂದೆಂದೂ 
ನಂಬಿದರೇ ಕೈಲಾಸ ಶಿವನ 
ನಂಬಿದರೇ ಕೈಲಾಸ 

ಕೇಳಿ ಎಲ್ಲ ಕೇಳಿ.. ಕೇಳಿ ಎಲ್ಲ ಕೇಳಿ..
ಹಾಲ ಕಡಲನ್ನು ಸುರರು ಕಡೆದಾಗ 
ವಿಷವು ಯಮನಂತೆ ಮೇಲೆ ಬಂದಾಗ 
ಹಾಲ ಕಡಲನ್ನು ಸುರರು ಕಡೆದಾಗ 
ವಿಷವು ಯಮನಂತೆ ಮೇಲೆ ಬಂದಾಗ 
ಅಯ್ಯೋ ಗತಿಯೇನು ನಮಗೆಂದು ಸುರರೆಲ್ಲ ಕೂಗಿ 
ಸಾವು ಬಂತೆಂದು ನಡುಗುತ  ಓಡಿ ಹೋಗಿ 
ದೇವ ಜಗದೀಶ ಸರ್ವೇಶ ಕಾಪಾಡು ಏನೇ 
ಶಿವನೇ ದಯೆ ತೋರಿದಾ.. ಅಭಯವ ನೀಡಿದ 
ಕ್ಷಣದಲೇ ವಿಷವನ್ನು ಹಾಲಂತೆ ಕುಡಿದಾ 
ಸುರರನು ಕಾಪಾಡಿ ಶಿವನೇ ವಿಷಕಂಠ ತಾನಾದ

ಕೇಳಿ ಎಲ್ಲ ಕೇಳಿ.. ಕೇಳಿ ಎಲ್ಲ ಕೇಳಿ..  
ಸಾವು ನೋವಿಲ್ಲ ನಿನಗೆ ಎದುರಿಲ್ಲಾ ಶಿವನೇ 
ನಂಬಿದರೆ ಯಾರ ಭಯವಿಲ್ಲ 
ಸಾವು ನೋವಿಲ್ಲ ನಿನಗೆ ಎದುರಿಲ್ಲಾ ಶಿವನೇ 
ನಂಬಿದರೆ ಯಾರ ಭಯವಿಲ್ಲ 
ವಯಸು ಹದಿನಾರು ಮುಗಿದಾಗ ಮುನಿ ಬಾಳನು ಕಂಡು 
ಯಮಧರ್ಮ ತನ್ನ ಪಾಶ ಎಸೆದಾಗ ಅವನು 
ಅಯ್ಯೋ ಮಹಾದೇವ ಸಾಕೆಂದು ಅತ್ತಾಗ ಮಗುವು 
ಶಿವನು ತನ್ನ ಶೂಲವ.. ಬಿಸಿ ಎಸೆದಾಗಲೇ 
ಯಮನು ಅಪರಾಧ ತನ್ನದೆಂದು ತಲೆ ಬಾಗಿದ  
ಆ ಗಂಗೆಯ ಕೈ ಮುಗಿದ ಆ ಶಿವನ ಕೊಂಡಾಡಿದ 

ಕೇಳಿ ಎಲ್ಲ ಕೇಳಿ.. ಕೇಳಿ ಎಲ್ಲ ಕೇಳಿ..

*********************************************************************************

ಹಳ್ಳಿಗೆಲ್ಲಾ ಇವನೇ

ಸಾಹಿತ್ಯ: ಚಿ.ಉದಯಶಂಕರ್  
ಗಾಯನ: ಎಸ್. ಜಾನಕಿ


ಆಹಾ ಓ ಹೋ ಲಾ ಲಾ 

ಹಳ್ಳಿಗೆಲ್ಲಾ.. ಇವನೇ ಚಂದ 
ನಡೆಯು ಅಂದಾ.. ನುಡಿಯು ಅಂದ.. 
ಕ್ಷಣದಲ್ಲಿ ನನ್ನ ಮನದಿ ಇವನೇ ತುಂಬಿಕೊಂಡ
ಹಳ್ಳಿಗೆಲ್ಲಾ.. ಇವನೇ ಚಂದ 
ನಡೆಯು ಅಂದಾ.. ನುಡಿಯು ಅಂದ.. 
ಕ್ಷಣದಲ್ಲಿ ನನ್ನ ಮನದಿ ಇವನೇ ತುಂಬಿಕೊಂಡ

ಹಳ್ಳಿಗೆಲ್ಲಾ.. ಇವನೇ ಚಂದ

ಒಲಿದಾಗ ಈ ಗಂಡು ಮಲ್ಲಿಗೆಯಂತೆ 
ಒಲಿದಾಗ ಈ ಗಂಡು ಮಲ್ಲಿಗೆಯಂತೆ  
ಮುನಿದಾಗ ಈ ಗಂಡು ಬರ ಸಿಡಿಲಿನಂತೆ 
ಇವನ ಪ್ರೀತಿಗೆ ನನ್ನೇ ಕೊಡುವೆನು 
ಇವನ ಪ್ರೀತಿಗೆ ನನ್ನೇ ಕೊಡುವೆನು 
ಸುಳ್ಳನ್ನು ಹೇಳೋದಿಲ್ಲ ದೂರಕೆ ಹೋಗೋದಿಲ್ಲ 
 ಸುಳ್ಳನ್ನು ಹೇಳೋದಿಲ್ಲ ದೂರಕೆ ಹೋಗೋದಿಲ್ಲ  
ಇಂಥ ಗಂಡು ಇಲ್ಲಿ ಉಂಟು ಇವನ ನಗುವೇ ಸಕ್ಕರೆ ಬೆಲ್ಲ 

ಹಳ್ಳಿಗೆಲ್ಲಾ.. ಇವನೇ ಚಂದ 
ನಡೆಯು ಅಂದಾ.. ನುಡಿಯು ಅಂದ.. 
ಕ್ಷಣದಲ್ಲಿ ನನ್ನ ಮನದಿ ಇವನೇ ತುಂಬಿಕೊಂಡ
ಹಳ್ಳಿಗೆಲ್ಲಾ.. ಇವನೇ ಚಂದ

ಓ ಗೆಳೆಯಾ ನೀ ನನ್ನ ಮನೆಗೆಂದು ಬರುವೆ 
ಓ ಗೆಳೆಯಾ ನೀ ನನ್ನ ಮನೆಗೆಂದು ಬರುವೆ 
ಬಳಿ ಬಂದು ನೀನೆಂದು ಸಿಹಿ ಮಾತ ನುಡಿವೆ 
ನನ್ನ ಕೆನ್ನೆಗೆ ಮುತ್ತು ಕೊಡದಿರೆ 
ನನ್ನ ಕೆನ್ನೆಗೆ ಮುತ್ತು ಕೊಡದಿರೆ 
ಇಂದೆಯೇ ಓಡಿ ಬರುವೆ ಕೈಲೇ ಹಿಡಿದು ಎಳೆವೆ 
ಇಂದೆಯೇ ಓಡಿ ಬರುವೆ ಕೈಲೇ ಹಿಡಿದು ಎಳೆವೆ 
ಮುತ್ತೇ ನಾನು ನನಗು ಒಂದು ಕೊಟ್ಟು ಹೋಗೋ ಇಲ್ಲ ಏನದೆ 

ಹಳ್ಳಿಗೆಲ್ಲಾ.. ಇವನೇ ಚಂದ 
ನಡೆಯು ಅಂದಾ.. ನುಡಿಯು ಅಂದ.. 
ಕ್ಷಣದಲ್ಲಿ ನನ್ನ ಮನದಿ ಇವನೇ ತುಂಬಿಕೊಂಡ
ಹಳ್ಳಿಗೆಲ್ಲಾ.. ಇವನೇ ಚಂದ

*********************************************************************************