ನಾನಿರುವುದೇ ನಿಮಗಾಗಿ
ಚಲನ ಚಿತ್ರ: ಮಯೂರ (1975)
ಸಂಗೀತ: ಜಿ.ಕೆ.ವೆಂಕಟೇಶ್
ಸಾಹಿತ್ಯ: ಚಿ.ಉದಯಶಂಕರ್
ಗಾಯಕರು: ಡಾ.ರಾಜ್‌ಕುಮಾರ್
ನಟನೆ: ಡಾ. ರಾಜ್ ಕುಮಾರ್, ಮಂಜುಳಾ
ನಾನಿರುವುದೇ ನಿಮಗಾಗಿ
ನಾನಿರುವುದೇ ನಿಮಗಾಗಿ
ನಾಡಿರುವುದು ನಮಗಾಗಿ
ಕಣ್ಣೀರೇಕೆ ಬಿಸಿಯುಸಿರೇಕೆ
ಕಣ್ಣೀರೇಕೆ ಬಿಸಿಯುಸಿರೇಕೆ
ಬಾಳುವಿರೆಲ್ಲ ಹಾಯಾಗಿ
ಬಾಳುವಿರೆಲ್ಲ ಹಾಯಾಗಿ

ಒಂದೇ ನಾಡಿನ ಮಕ್ಕಳು ನಾವು
ಸೋದರರಂತೆ ನಾವೆಲ್ಲ
ಒಂದೇ ನಾಡಿನ ಮಕ್ಕಳು ನಾವು
ಸೋದರರಂತೆ ನಾವೆಲ್ಲ
ನಿಮ್ಮೊಡನಿಂದು ನಾನು ನೊಂದು
ನಿಮ್ಮೊಡನಿಂದು ನಾನು ನೊಂದು
ಮಿಡಿದಾ ಕಂಬನಿ ಆರಿಲ್ಲ
ಭರವಸೆ ನೀಡುವೆ ಇಂದು
ನಾ ನಿಮ್ಮೊಡನಿರುವೆನು ಎಂದು
ಭರವಸೆ ನೀಡುವೆ ಇಂದು
ನಾ ನಿಮ್ಮೊಡನಿರುವೆನು ಎಂದು
ತಾಯಿಯ ಆಣೆ ನಿಮ್ಮನು
ಕಾಡುವ ವೈರಿಯ ಉಳಿಸೋಲ್ಲ
ನಾನಿರುವುದೇ ನಿಮಗಾಗಿ
ನಾಡಿರುವುದು ನಮಗಾಗಿ
ಕಣ್ಣೀರೇಕೆ ಬಿಸಿಯುಸಿರೇಕೆ
ಕಣ್ಣೀರೇಕೆ ಬಿಸಿಯುಸಿರೇಕೆ
ಬಾಳುವಿರೆಲ್ಲ ಹಾಯಾಗಿ
ಬಾಳುವಿರೆಲ್ಲ ಹಾಯಾಗಿ
ನಾನಿರುವುದೆ ನಿಮಗಾಗಿ
ಸಾವಿರ ಜನುಮದ ಪುಣ್ಯವೊ ಏನೋ
ನಾನೀ ನಾಡಲಿ ಜನಿಸಿರುವೆ
ಸಾವಿರ ಜನುಮದ ಪುಣ್ಯವೊ ಏನೋ
ನಾನೀ ನಾಡಲಿ ಜನಿಸಿರುವೆ
ತಪಸಿನ ಫಲವೊ ಹಿರಿಯರ ವರವೊ
ತಪಸಿನ ಫಲವೊ ಹಿರಿಯರ ವರವೊ
ನಿಮ್ಮೀ ಪ್ರೀತಿಯ ಗಳಿಸಿರುವೆ
ವೈರಿಯ ಬಡಿದೋಡಿಸುವ
ಈ ನಾಡಿಗೆ ಬಿಡುಗಡೆ ತರುವ
ವೈರಿಯ ಬಡಿದೋಡಿಸುವ

ಜನತೆಗೆ ನೆಮ್ಮದಿ ಸೌಖ್ಯವತರಲು
ಪ್ರಾಣವನೆ ಕೊಡುವೆ
ನಾನಿರುವುದೇ ನಿಮಗಾಗಿ
ನಾಡಿರುವುದು ನಮಗಾಗಿ
ಕಣ್ಣೀರೇಕೆ ಬಿಸಿಯುಸಿರೇಕೆ
ಕಣ್ಣೀರೇಕೆ ಬಿಸಿಯುಸಿರೇಕೆ
ಬಾಳುವಿರೆಲ್ಲ ಹಾಯಾಗಿ
ಬಾಳುವಿರೆಲ್ಲ ಹಾಯಾಗಿ
ನಾನಿರುವುದೇ ನಿಮಗಾಗಿ

*********************************************************************************
ಈ ಮೌನವ ತಾಳೆನು
ರಚನೆ: ಚಿ. ಉದಯಶಂಕರ್
ಹೆ: ಈ ಮೌನವ ತಾಳೆನು ಈ ಮೌನವ ತಾಳೆನು
ಮಾತಾಡೆ ದಾರಿಯ ಕಾಣೆನು ಓ ರಾಜ,
ಈ ಮೌನವ ತಾಳೆನು
ಗಂ: ನೀ ಹೇಳದೆ ಬಲ್ಲೆನು, ನಿನ್ನಾಸೆ ಕಣ್ಣಲ್ಲೇ ಕಂಡೆನು
ಓ ರಾಣಿ, ನೀ ಹೇಳದೆ ಬಲ್ಲೆನು
ಗಂ: ನಾನಂದು ನಿನ್ನ ಕಂಡಾಗ ಚಿನ್ನ ಏನೇನೊ ಹೊಸ ಭಾವನೆ
ಹೂವಾಗಿ ಮನಸು ಏನೇನೊ ಕನಸು ನಾ ಕಾಣದ ಕಲ್ಪನೆ
ನಾನಂದು ನಿನ್ನ ಕಂಡಾಗ ಚಿನ್ನ ಏನೇನೊ ಹೊಸ ಭಾವನೆ
ಹೂವಾಗಿ ಮನಸು ಏನೇನೊ ಕನಸು ನಾ ಕಾಣದ ಕಲ್ಪನೆ
ಹೆ: ಇಂದು ನಿನ್ನ ಬಿಡೆನು ಈ ದೂರ ಸಹಿಸೆನು
ಗಂ: ನೀ ಹೇಳದೆ ಬಲ್ಲೆನು ನಿನ್ನಾಸೆ ಕಣ್ಣಲ್ಲೇ ಕಂಡೆನು
ಓ ರಾಣಿ, ನೀ ಹೇಳದೆ ಬಲ್ಲೆನು
ಹೆ: ಈ ಅಂದ ಕಂಡು ನಾ ಮೋಹಗೊಂಡು ಮನ ಹಿಗ್ಗಿ ಹೂವಾಯಿತು
ಬಾನಲ್ಲಿ ಮುಗಿಲು ಕಂಡಾಗ ನವಿಲು ಕುಣಿವಂತೆ ನನಗಾಯಿತು
ಈ ಅಂದ ಕಂಡು ನಾ ಮೋಹಗೊಂಡು ಮನ ಹಿಗ್ಗಿ ಹೂವಾಯಿತು
ಬಾನಲ್ಲಿ ಮುಗಿಲು ಕಂಡಾಗ ನವಿಲು ಕುಣಿವಂತೆ ನನಗಾಯಿತು
ಗಂ: ಅಂದೆ ನಿನಗೆ ಸೋತೆ, ನಾ ಜಗವನೆ ಮರೆತೆ
ಹೆ: ಈ ಮೌನವ ತಾಳೆನು, ಮಾತಾಡೆ ದಾರಿಯ ಕಾಣೆನು, ಓ ರಾಜ
ಗಂ: ಓ ರಾಣಿ
ಹೆ: ಓ ರಾಜ ...
*********************************************************************************
No comments:
Post a Comment