ಮಾಯಾವಿ ಮಾಯಾವೀ.
ಚಲನ ಚಿತ್ರ: ಲೈಫು ಇಷ್ಟೇನೇ (2011)ನಿರ್ದೇಶನ: ಪವನ್ ಕುಮಾರ್
ಸಂಗೀತ: ಮನೋ ಮೂರ್ತಿ
ಸಾಹಿತ್ಯ: ಯೋಗರಾಜ್ ಭಟ್
ಗಾಯಕರು: ಸೋನು ನಿಗಮ್, ಶ್ರೇಯಾ ಘೋಷಾಲ್
ನಟನೆ: ದಿಗಂತ್, ಸಂಯುಕ್ತಾ ಹೊರನಾಡು, ಸಿಂಧು ಲೋಕನಾಥ್,
ಮಾಯಾವಿ, ಮಾಯಾವೀ...ಮಾಯ ಮಾಡು ನನ್ನ
ಅರೆ ನಿಮಿಷ ಮಾತಾಡು ಮಾತಾಡು ಮಾಯವಾಗು ಮುನ್ನ...

ನನಗೆ ನೀನು ಬೇಕು, ನನಗೂ ನೀನೆ ಬೇಕು.
ಹೃದಯವಿದು ಕಾದಿದೆ ಓಡಲು ನಿನ್ನೊಂದಿಗೆ,
ಒಲವಿನಲಿ ಈಗಲು ಬೀಳದೆ ಇನ್ನೆಂದಿಗೆ...
ನಯನಗಳ ಸಂಭಾಷಣೆ, ಪುಳಕಗಳ ಸಂಪಾದನೆ,
ಬಯಕೆಗಳ ಸಂಶೋಧನೆ ನುಡಿಸಬೆಕು ನೀನು....
ಕನಸಿನಲಿ ಮಾತಾಡಲು, ಎಳೆದಕಡೆ ಓಡಾಡಲು,
ನೆನಪುಗಳ ಕಾಪಾಡಲು, ಕಲಿಯಬೇಕು ನೀನು....
ಇಡಬಹುದೆ ಆಸೆಯಾ, ಠೇವಣಿ ನಿನ್ನೊಂದಿಗೆ?
ಪಿಸುನುಡಿಯ ಇಗಲು, ಕೇಳದೇ ಇನ್ನೆಂದಿಗೆ...
ಓ... ನಿನಗೆ ನಾನು ಬೇಕೆ?, ನಿನಗೂ ನಾನೆ ಬೇಕೆ?.
ಮಾಯಾವಿ, ಮಾಯಾವೀ...ಮಾಯ ಮಾಡು ನನ್ನ
ಅರೆ ನಿಮಿಷ ಮಾತಾಡು ಮಾತಾಡು ಮಾಯವಾಗು ಮುನ್ನ...
ಮೂರೆ ಶಬ್ದದಲಿ ಎಲ್ಲ ಭಾವನೆಯ ಹೇಳು ಸಾಕು
ನನಗೆ ನೀನು ಬೇಕು, ನನಗೂ ನೀನೆ ಬೇಕು.....
ಮೊದಲಸಲ ಕಂಡಾಗಲೆ, ವಿರಹದಲಿ ಬೆಂದಾಗಲೆ,
ಸರಸದಲಿ ಮಿಂದಾಗಲೆ ಒಲಿದೆ ಎನು ನೀನು?
ಮಿಡಿತವನು ಕದ್ದಾಲಿಸಿ, ಲಹರಿಗಳ ಸಂಭಾಲಿಸಿ,
ಸೆಳೆತವನು ಹಿಂಬಾಲಿಸಿ ಬರುವೆ ಏನು ನೀನು?
ಮಾಯಾವಿ, ಮಾಯಾವೀ...ಮಾಯ ಮಾಡು ನನ್ನ
ಅರೆ ನಿಮಿಷ ಮಾತಾಡು ಮಾತಾಡು ಮಾಯವಾಗು ಮುನ್ನ...
ಮೂರೆ ಶಬ್ದದಲಿ ಎಲ್ಲ ಭಾವನೆಯ ಹೇಳು ಸಾಕು
ನನಗೆ ನೀನು ಬೇಕು, ನನಗೂ ನೀನೆ ಬೇಕು...
ಹೃದಯವಿದು ಕಾದಿದೆ ಓಡಲು ನಿನ್ನೊಂದಿಗೆ,
ಒಲವಿನಲಿ ಈಗಲು ಬೀಳದೆ ಇನ್ನೆಂದಿಗೆ...
ನನಗೆ ನೀನು ಬೇಕಿ, ನನಗೂ....
********************************************************************************

ಹೃದಯ ಜಾರುತಿದೆ
ಸಾಹಿತ್ಯ: ಯೋಗರಾಜ್ ಭಟ್
ಹೃದಯ ಜಾರುತಿದೆ ನಿನ್ನ ಕಡೆಗೆ ನೀನೇ ಸಂಭಾಳಿಸು…
ಪ್ರಣಯದಾಸೆಯಲಿ ಹೀಗೆ ನೀನು ನನ್ನೇ ಹಿಂಬಾಲಿಸು...
ಬಯಕೆ ಹೂವೊಂದು ಕಣ್ಣಲ್ಲಿ ನಗಲು ಬೇರೆ
ಏನು ಹೇಳಲಿ ಇಂದು ನಾ.. ಮುಗಿಸು ಮೌನವನು
ಸಹನೆ ಮರೆತು ತುಟಿಯ ದಾಟಳಿ ಮೊದಲ ಸ್ಪಂದನ..
ಹೃದಯ ಜಾರುತಿದೆ ನಿನ್ನ ಕಡೆಗೆ ನೀನೇ ಸಂಭಾಳಿಸು…
ನೆನಪಿನಾಳದಲಿ ಬಿಡದೆ ನಗುವ ಅವಳ ಮುಂಗುರುಳು...
ಕನಸಿನಾಳದಲಿ ಬೆಳಕು ಮುಗಿದ ಕುರುಡು ಬೆಳದಿಂಗಳು…
ಹರಿದ ಹಾಳೆಯಲಿ ನಗುತಾ ಬರೆದ ಮೊದಲ ಪದವು ನನ್ನನೇ ನೋಡಿದೆ..
ಹಳೆಯ ಮೌನದಲಿ ಹೇಳೇ ಇರದ ಕೊನೆಯ ಮಾತು ಈಗಲೂ ಕೇಳಿದೆ...
ನೆನಪಿನಾಳದಲಿ ಬಿಡದೆ ನಗುವ ಅವಳ ಮುಂಗುರುಳು...
*********************************************************************************

ಜೂನಿಯರ್ ದೇವದಾಸ್
ಸಾಹಿತ್ಯ: ಪವನ್ ಕುಮಾರ್ಗಾಯಕರು: ಹೇಮಂತ್ ಕುಮಾರ್, ಅನನ್ಯ ಭಗತ್
ಹುಡುಗಿ: ಜೂನಿಯರ್ ದೇವದಾಸ ಅಂದ್ರೆ ಓ ಅಂತಿಯಾ
ಡೈಲಿ ಒಂದು ಹೆಸರಿಡ್ತಿನೀ ಏನಂತೀಯಾ?
ಹುಡುಗ: ಹಳೇ ಹುಡುಗಿ ಕಳ್ಸೊಲ ಮೆಸೇಜು
ಹುಡುಗಿ: ತಗೊತಾಳೆ ಸಿಮ್ ಕಾರ್ಡ್ ಹೊಸದು

ಹುಡುಗಿ: ನಿನ್ನ ಗೋಳು ತುಂಬಾನೆ ಹಳೇದು
ಎಳೋ ಗುಲ್ಡು ಎಷ್ಟೆ ಅಂದ್ರು ಈ ಲೈಫ಼ು ಇಷ್ಟೆನೇ
ಹುಡುಗ: ಕಷ್ಟ ಸುಖ ಮಾತಾಡೋನ ಬೈಟು ಕಾಫಿ ಹೇಳ್ತೀಯಾ
ಹುಡುಗಿ: ಬೇಡ ಅಂದ್ರು ನಕ್ಕೊಂಡ್ ನಕ್ಕೊಂಡ್ ಅಡ್ಡ ಸಿಕ್ತಾರೆ
ಹೃದಯಯೆಂಬ ಮಂಚೊರಿಲಿ ಕಡ್ಡಿ ಇಡ್ತಾರೆ
ಡೈಲಿ ರಾತ್ರಿ ಎಸ್.ಎಮ್.ಎಸ್ ಲ್ಲಿ ಮುದ್ದು ಮಾಡ್ತಾರೆ
ಆಮೇಲ್ ಬೇರೆಯವರ ಜೊತೆ ಮದುವೆ ಅಂತಾರೆ
ಗ್ಯಾಪಲಿ ನಾವು ಸಿಕ್ಕಿದಕ್ಕೆ ಥ್ಯಾಂಕ್ಸು ಹೇಳ್ತಾರೆ
ಹೋಗಿ ಬಿಡ್ತಾರೆ ಒಮ್ಮೆ ತಿರುಗಿ ನೋಡಿ ಸೀದ ಹೋಗೆ........ ಬಿಡ್ತಾರೆ
ಹುಡುಗಿ: ಸೆಕೆಂಡೆ ಹ್ಯಾಂಡ್ ಗಂಡ್ ಮಕ್ಳದ್ದು ಲೈಫ಼ು ಇಷ್ಟೆನಾ
ಹುಡುಗ: ಡೀಟೇಲಾಗಿ ಮಾತಾಡೋನ ನಾಳೆ ಬೇಗ ಸಿಕ್ತಿಯಾ
ಹುಡುಗಿ: ಜೂನಿಯರ್ ದೇವದಾಸ ಅಂದ್ರೆ ಓ ಅಂತಿಯಾ
ಡೈಲಿ ಒಂದು ಹೆಸರಿಡ್ತಿನೀ ಏನಂತೀಯಾ?
ಹುಡುಗಿ: ಕಂಡ ಕೂಡ್ಲೆ ದೂಸ್ರ ಮಾತೆ ಇಲ್ದೇ ಹಿಂದೆ ಬೀಳ್ತೀರಿ
ಬೇಡ ಅಂದ್ರು ಬೈಕಿನಲ್ಲಿ ಲಿಫ಼್ಟು ಕೊಡ್ತೀರಿ
Facebookನಲ್ಲಿ ಹಲ್ಲು ಕಿರ್ಕೊಂಡು ಜೊಲ್ಲು ಬಿಡ್ತೀರಿ
ಎದುರು ಸಿಕ್ರೆ ಸಾಚ ತರ ಸ್ಮೈಲು ಕೊಡ್ತೀರಿ
ನಮಗೆ ಆಕಳಿಕೆ ಬರೋ ಹಂಗೆ ಲವ್ ಯು ಅಂತೀರಿ
ಹಿಂದೆ ಬರ್ತೀರಿ ಮಂಡಿ ಮೇಲೆ ನಿಂತು ಹೂವು ಕೊಟ್ಟೆ ಬಿಡ್ತೀರಿ
ಹುಡುಗ: ಛೇಂಜು ಆಗೋ ಮಕ್ಕ್ಳೆ ಅಲ್ಲ ನಮ್ಮ ಲೈಫ಼ು ಇಷ್ಟೇಯಾ
ಹುಡುಗಿ: ನಿನ್ನ ಮೂತಿ ಸ್ವಲ್ಪ ನೋಡ ಬೇಕು ಪ್ಲೀಸ್ ಗಡ್ಡ ಬೊಳ್ಸಯ್ಯ
********************************************************************************
No comments:
Post a Comment