ಚಲನ ಚಿತ್ರ: ಕರುಳಿನ ಕೂಗು (1994)
ನಿರ್ದೇಶನ: ಡಿ. ರಾಜೇಂದ್ರ ಬಾಬು
ಸಂಗೀತ: ಹಂಸಲೇಖ
ಸಾಹಿತ್ಯ: ಹಂಸಲೇಖ
ಸಾಹಿತ್ಯ: ಹಂಸಲೇಖ
ಗಾಯನ: ಮನು, ಕೆ. ಎಸ್. ಚಿತ್ರಾ
ನಟನೆ: ಪ್ರಭಾಕರ್, ವಿನಯಾ ಪ್ರಸಾದ್, ಶ್ರೀನಾಥ್
ನಾನು ಬಡವ ನಾನು ಬಡವಿ
ನಾನು ಬಡವ ನಾನು ಬಡವಿ
ನಮ್ಮ ಪ್ರೀತಿಗೆ ಬಡತನವಿಲ್ಲ
ನಮ್ಮ ಪ್ರೀತಿಗೆ ಬಡತನವಿಲ್ಲ
ಪ್ರೀತಿಗೆ ಬಡತನವಿಲ್ಲ
ನಾನು ರಾಜ ನಾನು ರಾಣಿ
ನಾನು ರಾಜ ನಾನು ರಾಣಿ
ನಮ್ಮ ಮನೆಯಲ್ಲಿ ಸಿರಿತನವಿಲ್ಲ
ಪ್ರೀತಿಗೆ ಬಡತನವಿಲ್ಲ
ಹಗಲಿನ ಹೊತ್ತು ದೇವರ ಮುತ್ತು
ರಾತ್ರಿಯ ಹೊತ್ತು ತಾಂಡವ ಮೂರ್ತಿ
ಹಗಲು ಮಾತಿನ ಮೇಲೆ ನಡೆಯುತ್ತೆ
ಹಗಲು ಮಾತಿನ ಮೇಲೆ ನಡೆಯುತ್ತೆ
ಮತ್ತೆ ಯಾವುದಮ್ಮ ? ನಿಂ ಅಪ್ಪ ನಮ್ಮ
ನಗುವಿನ ಅಲೆಗಳ ಮದುರ ನುಡಿಗಳ
ಜೊತೆಗೆ ತುತ್ತಿನೋಟ
ತುಟಿಗಳಿಂದಲೆ ತಪ್ಪು ತಿದ್ದುವ
ತುಟಿಗಳಿಂದಲೆ ತಪ್ಪು ತಿದ್ದುವ
ಉಚಿತ ಪ್ರೇಮ ಪಾಟ
ಕೋಪ ನಿಮಿಷ ಪ್ರೇಮ ವರುಷ
ಕೋಪ ನಿಮಿಷ ಪ್ರೇಮ ವರುಷ
ಮಾಯದ ಹರುಷ
ಮನೆ ಹಾಡುವ ಮಕ್ಕಳ ತೋಟ
ಮನೆ ಹಾಡುವ ಮಕ್ಕಳ ತೋಟ
ಮನ ಹಾರುವ ಹಕ್ಕಿಯ ಕೋಟ
ಈ ಜನುಮಕೆ ಬೇಕಿನ್ನೇನು
ಈ ಜನುಮಕೆ ಬೇಕಿನ್ನೇನು
ನಾನು ಬಡವ ನಾನು ಬಡವಿ
ನಾನು ಬಡವ ನಾನು ಬಡವಿ
ನಮ್ಮ ಪ್ರೀತಿಗೆ ಬಡತನ ವಿಲ್ಲ
ನಮ್ಮ ಪ್ರೀತಿಗೆ ಬಡತನ ವಿಲ್ಲ
ಪ್ರೀತಿಗೆ ಬಡತನ ವಿಲ್ಲ
ಶೃಂಗೇರಿಲಿಲ್ಲ ಕೊಲ್ಲೂರಲಿಲ್ಲ
ಚಾಮುಂಡಿಯಲ್ಲ ಕಾವೇರಿಯಲ್ಲ
ಎಲ್ಲ ಪಾಪಗಳ ತೊಳೆಯುತ್ತಾಳೆ
ಎಲ್ಲ ಪಾಪಗಳ ತೊಳೆಯುತ್ತಾಳೆ
ಕಡೆವವರಿಗು ಕೈ ಹಿಡಿಯುತಾಳೆ
ಯಾರ್ ಆ ದೇವತೆ ? ಭೂಮಿ.. ಅಲ್ಲ
ಯಾರ್ ಆ ದೇವತೆ ? ಭೂಮಿ.. ಅಲ್ಲ
ಕಾಮಧೇನು.. ಅಲ್ಲ ಮತ್ತೆ ಯಾವುದಪ್ಪ ?
ನಿಂ ಅಮ್ಮ ನಮ್ಮ
ಎಳು ಬೀಳಿನ ಗಾಳಿ ಎದುರಲು
ನೀನು ಪಾರಿಜಾತ
ಉದಯವಾದರೆ ಹೃದಯದೊಳಗಡೆ
ಉದಯವಾದರೆ ಹೃದಯದೊಳಗಡೆ
ನೀನೆ ಸುಪ್ರಭಾತ
ಮಾಗಿ ಹೊತ್ತು ನೀಡು ಮುತ್ತು ಇಲ್ಲ ಆಪತ್ತು
ಅಪ್ಪ ಪ್ರೇಮದ ಕಲೆ ಇರೊ ಚಂದ್ರ
ಅಮ್ಮ ಕರುಣೆಯ ಮನಸಿರೊ ಕಡಲು
ಈ ಜನುಮಕೆ ಬೇಕಿನ್ನೇನು
ಮಾಗಿ ಹೊತ್ತು ನೀಡು ಮುತ್ತು ಇಲ್ಲ ಆಪತ್ತು
ಅಪ್ಪ ಪ್ರೇಮದ ಕಲೆ ಇರೊ ಚಂದ್ರ
ಅಮ್ಮ ಕರುಣೆಯ ಮನಸಿರೊ ಕಡಲು
ಈ ಜನುಮಕೆ ಬೇಕಿನ್ನೇನು
ನಾನು ಬಡವ ನಾನು ಬಡವಿ
ನಾನು ಬಡವ ನಾನು ಬಡವಿ
ನಮ್ಮ ಪ್ರೀತಿಗೆ ಬಡತನ ವಿಲ್ಲ
ಪ್ರೀತಿಗೆ ಬಡತನವಿಲ್ಲ
ನಾನು ರಾಜ ನಾನು ರಾಣಿ
ನಮ್ಮ ಮನೆಯಲ್ಲಿ ಸಿರಿತನವಿಲ್ಲ
ನಾನು ರಾಜ ನಾನು ರಾಣಿ
ನಮ್ಮ ಮನೆಯಲ್ಲಿ ಸಿರಿತನವಿಲ್ಲ
ಪ್ರೀತಿಗೆ ಬಡತನವಿಲ್ಲ
*********************************************************************************
ಹೆಂಡ ಕುಡುಕ ರತ್ನ
ಸಾಹಿತ್ಯ: ಹಂಸಲೇಖ
ಗಾಯನ: ಮನು
ಹೆಂಡ ಕುಡುಕ ರತ್ನ ನನ್ನ ಮಾಸ್ಟ್ರು
ಹೆಂಡ ಕುಡಿಯ ಬ್ಯಾಡ ಅಂತ ಅಂದ್ರು
ಹೆಂಡ ಮುಟ್ಟಲ್ಲ... ಹೆಂಡ್ತೀನ ಬಿಡಲ್ಲ
ದೇಶೀ ಸಾರಾಯಿ ಕುಡಿಯೋ ಸಿಪಾಯಿ
ಹೆಂಡ ಕುಡಿಯ ಬ್ಯಾಡ ಅಂತ ಅಂದ್ರು
ಹೆಂಡ ಮುಟ್ಟಲ್ಲ... ಹೆಂಡ್ತೀನ ಬಿಡಲ್ಲ
ದೇಶೀ ಸಾರಾಯಿ ಕುಡಿಯೋ ಸಿಪಾಯಿ
ನನ್ನೆಂದ್ರೇ... ನನ್ನೆಂದ್ರೇ... ನನ್ನೆಂದ್ರೇ... ಚಿಂತೆಯಿಲ್ಲಾ
ನನ್ನ ಕೊಂದ್ರು ಪರವಿಲ್ಲ ಕನ್ನಡಾನ ಭೈ ಬ್ಯಾಡಾ
ಕಟ್ಕೊಂಡ ಹೆಂಡ್ತೀನ ಬಿಡಬ್ಯಾಡ
ಒಳಗೈತೆ ಸಾರಾಯಿ ಬಿಡ್ತಾ ಐತೆ ಬಾಯಿ ಬಾಯಿ
ಕೈಲಾಸಂ ಕುಡುದ್ರು ಸತ್ಯಕ್ಕೆ ದೀಪ ಹಿಡಿದ್ರು
ಅನಕೃನು ಕುಡುದ್ರು ಬದುಕಿನ ಬಟ್ಟಿ ಇಳಿಸಿದ್ರೂ
ಬರದು ಬರದು ಕರ್ನಾಟಕಕ್ಕೇ ಪುಣ್ಯಕಟ್ಟಿ ಕೊಟ್ಟು ಹೋದ್ರೂ
ಸುಮ್ನೆ ಕುಡಿಯೋ ನಮ್ಮಂತವರೆಗೆ ಬುದ್ದಿನ ಬಿಚ್ಚಿಟ್ಟು ಹೋದ್ರೂ
ಅನ್ನ ತಿಂದು ಅನ್ನಬೇಡ ಅನ್ನ ತಿಂದು ಅನ್ನಬೇಡ
ಬೆನ್ನ ಹಿಂದೆ ಚುಚ್ಚಬೇಡ ಬೆನ್ನ ಹಿಂದೆ ಚುಚ್ಚಬೇಡ
ನನ್ನನ್ನು ಲಚ್ಛಾ ... ನನ್ನನ್ನು ರಿಚ್ಚಾ
ನನ್ನೆಂದ್ರೇ... ನನ್ನೆಂದ್ರೇ... ನನ್ನೆಂದ್ರೇ... ಚಿಂತೆಯಿಲ್ಲಾ
ಅನಕೃನು ಕುಡುದ್ರು ಬದುಕಿನ ಬಟ್ಟಿ ಇಳಿಸಿದ್ರೂ
ಬರದು ಬರದು ಕರ್ನಾಟಕಕ್ಕೇ ಪುಣ್ಯಕಟ್ಟಿ ಕೊಟ್ಟು ಹೋದ್ರೂ
ಸುಮ್ನೆ ಕುಡಿಯೋ ನಮ್ಮಂತವರೆಗೆ ಬುದ್ದಿನ ಬಿಚ್ಚಿಟ್ಟು ಹೋದ್ರೂ
ಅನ್ನ ತಿಂದು ಅನ್ನಬೇಡ ಅನ್ನ ತಿಂದು ಅನ್ನಬೇಡ
ಬೆನ್ನ ಹಿಂದೆ ಚುಚ್ಚಬೇಡ ಬೆನ್ನ ಹಿಂದೆ ಚುಚ್ಚಬೇಡ
ನನ್ನನ್ನು ಲಚ್ಛಾ ... ನನ್ನನ್ನು ರಿಚ್ಚಾ
ನನ್ನೆಂದ್ರೇ... ನನ್ನೆಂದ್ರೇ... ನನ್ನೆಂದ್ರೇ... ಚಿಂತೆಯಿಲ್ಲಾ
ನನ್ನ ಕೊಂದ್ರು ಪರವಿಲ್ಲ ಕನ್ನಡಾನ ಭೈ ಬ್ಯಾಡಾ
ಕಟ್ಕೊಂಡ ಹೆಂಡ್ತೀನ ಬಿಡಬ್ಯಾಡ
ಒಳಗೈತೆ ಸಾರಾಯಿ ಬಿಡ್ತಾ ಐತೆ ಬಾಯಿ ಬಾಯಿ
ದಕ್ಷಿಣ ಕನ್ನಡ ಸ್ವಚ್ಛ ಉತ್ತರ ಕನ್ನಡ ಉಚ್ಚ
ಹಳೇ ಕನ್ನಡ ಹಾಲು ಹೊಸ ಕನ್ನಡ ಜೇನು
ಇಡ್ಲಿ ರೊಟ್ಟಿ ಮುದ್ದೆ ಮೀನು ಎಲ್ಲ ಊಟಕ್ಕೆ ಬೇಕು
ಕೊಡವ ತುಳುವ ಕೊಂಕಣಿ ಲಂಬಾಣಿ ಕರ್ನಾಟಕ್ಕೆ ಬೇಕು
ಕನ್ನಡಕ್ಕೆ ಬೇಧವಿಲ್ಲಾ ಕನ್ನಡಕ್ಕೆ ಬೇಧವಿಲ್ಲಾ
ಯಾರ ಮೇಲೆ ದ್ವೇಷವಿಲ್ಲ.. ಯಾರ ಮೇಲೆ ದ್ವೇಷವಿಲ್ಲ..
ನನ್ನನ್ನು ಲಚ್ಛಾ ... ನನ್ನನ್ನು ರಿಚ್ಚಾ
ನನ್ನೆಂದ್ರೇ... ನನ್ನೆಂದ್ರೇ... ನನ್ನೆಂದ್ರೇ... ಚಿಂತೆಯಿಲ್ಲಾ
ನನ್ನೆಂದ್ರೇ... ನನ್ನೆಂದ್ರೇ... ನನ್ನೆಂದ್ರೇ... ಚಿಂತೆಯಿಲ್ಲಾ
ನನ್ನ ಕೊಂದ್ರು ಪರವಿಲ್ಲ ಕನ್ನಡಾನ ಭೈ ಬ್ಯಾಡಾ
ಕಟ್ಕೊಂಡ ಹೆಂಡ್ತೀನ ಬಿಡಬ್ಯಾಡ
ಒಳಗೈತೆ ಸಾರಾಯಿ ಬಿಡ್ತಾ ಐತೆ ಬಾಯಿ ಬಾಯಿ
ನಮ್ಮೂರೂ ಹಿಂಸೆ ತಾಳ್ರು ಹಿಂಸೆ ಆದ್ರೂ ಹೇಳ್ರು
ಮಂಗನಥರ ಹಾರು ಕಾಶಿಗೆ ಮಾನ ಮಾರು
ಹಿಂಗೇ ಅಂದು ಹಿಂಗೇ ಅಂದು ಎಲ್ಲ ಬಾಷೆ ಕಲತು
ಕನ್ನಡದೋವರೇ ಕನ್ನಡ ಬಾಷೆ ಮಾತಾಡೋದ ಮರತರು
ನಿನ್ನ ಮೀಸೆ ನೀನೆ ತಿರುವು ಅಲ್ಲೇ ನಿಲ್ಲ ಅಳಿವು ಉಳಿವು
ನನ್ನನ್ನು ಲಚ್ಛಾ ... ನನ್ನನ್ನು ರಿಚ್ಚಾ
ನನ್ನೆಂದ್ರೇ... ನನ್ನೆಂದ್ರೇ... ನನ್ನೆಂದ್ರೇ... ಚಿಂತೆಯಿಲ್ಲಾ
ಮಂಗನಥರ ಹಾರು ಕಾಶಿಗೆ ಮಾನ ಮಾರು
ಹಿಂಗೇ ಅಂದು ಹಿಂಗೇ ಅಂದು ಎಲ್ಲ ಬಾಷೆ ಕಲತು
ಕನ್ನಡದೋವರೇ ಕನ್ನಡ ಬಾಷೆ ಮಾತಾಡೋದ ಮರತರು
ನಿನ್ನ ಮೀಸೆ ನೀನೆ ತಿರುವು ಅಲ್ಲೇ ನಿಲ್ಲ ಅಳಿವು ಉಳಿವು
ನನ್ನನ್ನು ಲಚ್ಛಾ ... ನನ್ನನ್ನು ರಿಚ್ಚಾ
ನನ್ನೆಂದ್ರೇ... ನನ್ನೆಂದ್ರೇ... ನನ್ನೆಂದ್ರೇ... ಚಿಂತೆಯಿಲ್ಲಾ
*********************************************************************************
No comments:
Post a Comment