ನಿನ್ನ ಕಣ್ಣಲ್ಲಿದೇ..
ಚಿತ್ರ: ಚಿರು (2010)ಸಂಗೀತ: ಗಿರಿಧರ್ ದಿವಾನ್
ಸಾಹಿತ್ಯ: ಜಯಂತ್ ಕಾಯ್ಕಿಣಿ
ಗಾಯಕ: ಸೋನು ನಿಗಮ್
ನಿರ್ದೇಶನ: ಮಹೇಶ್ ಬಾಬು
ನಟನೆ: ಚಿರಂಜೀವಿ ಸರ್ಜಾ, ಕೃತಿ ಕರಬಂಧ

ಲ ಲಾ ಲಾ... ಲಾ ಲ ಲಾ...
ಲಾ ಲ ಲಾ...ಲಾ... ಲ ಲಾ...
ನಿನ್ನ ಕಣ್ಣಲ್ಲಿದೇ.. ಒಂದು ಸಂಭಾಷಣೆ
ಇಂದು ನಿನ್ನಲ್ಲಿದೇ... ಏನೊ ಆಕರ್ಷಣೆ
ಹೃದಯದ ಹಾದಿ ಹಿಡಿಯಲೇ ಬೇಕು
ನೀ ಸುಮ್ಮನೇ...
ಹೇ..ಹೆ ಹೇ...
ಯಾರಿಗೂ ತೀರದ ಖಾಸಗೀ
ಸಂಭ್ರಮ ಪ್ರೀತಿಗೇ...
ನಿನ್ನ ಕಣ್ಣಲ್ಲಿದೇ.. ಒಂದು ಸಂಭಾಷಣೆ
ಇಂದು ನಿನ್ನಲ್ಲಿದೇ... ಏನೊ ಆಕರ್ಷಣೆ
ಹೃದಯದ ಹಾದಿ ಹಿಡಿಯಲೇ ಬೇಕು
ನೀ ಸುಮ್ಮನೇ...
ಕಣ್ಣನು ಮುಚ್ಚಿ ನೋಡಿದರೂನೂ...
ಕಾಣುವ ಲೋಕ ಉನ್ಮಾದಕಾ...
ಸಂದಣಿಯಲ್ಲೂ ಕೇಳಿಸುವಂತ
ದೂರದ ರಾಗ ಸಂಮೋಹಕಾ...
ಇನ್ನೆಲ್ಲಿದೇ ಈ ರೀತಿಯಾ ಸದ್ದಿಲ್ಲದಾ ಆಮಂತ್ರಣಾ
ಹೋದಲ್ಲಿ ಬಂದಲ್ಲಿ ನಿಂತಲ್ಲಿ ರೋಮಾಂಚನಾ...
ಹೇ..ಹೆ ಹೇ...
ಯಾರಿಗೂ ತೀರದ ಖಾಸಗೀ
ಸಂಭ್ರಮ ಪ್ರೀತಿಗೇ...
ಕನಸಿನ ಮಾಯ ಕನ್ನಡಿಯಲ್ಲೀ
ಮೂಡಿದೆ ರೂಪ ಸಂತೋಷಕೇ...
ನೆನಪಿನ ನೂರು ಬಣ್ಣಗಳಲ್ಲೀ..
ಬಂದಿದೆ ಜೀವ ಸಂದೇಶಕೇ...
ಈ ಯಾನವೂ ಇನ್ನೂ ಖುಷೀ
ಇದ್ದಾಗಲೇ ಈ ಭಾವನೇ
ಬೇಕಿಲ್ಲ ಬಾಳಲ್ಲೀ ಬೇರೇನು ಸಂಪಾದನೇ...
ಹೇ..ಹೆ ಹೇ...
ಯಾರಿಗೂ ತೀರದ ಖಾಸಗೀ
ಸಂಭ್ರಮ ಪ್ರೀತಿಗೇ...
ನಿನ್ನ ಕಣ್ಣಲ್ಲಿದೇ.. ಒಂದು ಸಂಭಾಷಣೆ
ಇಂದು ನಿನ್ನಲ್ಲಿದೇ... ಏನೊ ಆಕರ್ಷಣೆ
ಹೃದಯದ ಹಾದಿ ಹಿಡಿಯಲೇ ಬೇಕು
ನೀ ಸುಮ್ಮನೇ...
*********************************************************************************
ಇಲ್ಲೇ ಇಲ್ಲಿ ಎಲ್ಲೊ
ಸಾಹಿತ್ಯ: ಗೌಸ್ ಪೀರ್ ಗಾಯಕರು: ಸೋನು ನಿಗಮ್, ಶ್ರೇಯಾ ಘೋಷಾಲ್
ಇಲ್ಲೇ ಇಲ್ಲಿ ಎಲ್ಲೊ ನನ್ನ ಮನಸು ಕಾಣೆಯಾಗಿದೆ
ನಿನ್ನೆ ಮೊನ್ನೆವರೆಗೂ ಇರದ ಕನಸು ಈಗ ಮೂಡಿದೆ
ಹೇಳದೇನೆ ಕೇಳದೇನೇ ನನಗೆ ಏನೋ ಆಗಿದೆ
ನಿಲ್ಲೇ ನಿಲ್ಲೇ ನಿಲ್ಲೇ ನಿನ್ನ ಪಯಣ ಎಲ್ಲಿ ಸಾಗಿದೆ
ಮೆಲ್ಲ ಮೆಲ್ಲ ಮೆಲ್ಲ ನಿನ್ನ ಗಮನ ಯಾರ ಮೇಲಿದೆ
ಹೇಳದೇನೆ ಕೇಳದೇನೇ ನಿನಗೆ ಏನೋ ಆಗಿದೆ
ಇಲ್ಲ್ಲೇ ಇಲ್ಲಿ ಇಲ್ಲೋ ನನ್ನ ಮನಸು ಕಾಣೆಯಾಗಿದೆ.......
ಮುಚ್ಚು ಮರೆಯ ಮಾಡದೆ ಹುಚ್ಚು ಮರೆವು ಕಾಡಿದೆ
ಏನು ಸ್ಪಷ್ಟ ವಾಗದಂತ ಭಾವ ಇಷ್ಟ ವಾಗಿದೆ
ಇಂತ ಆಸೆ ಏಕಿದೆ ನನಗೇ ಅರ್ಥ ವಾಗದೆ
ಸಾಕು ಮಾಡು ನಿನ್ನ ಕನಸು ತುಂಬಾ ದೂರಹೋಗಿದೆ
ನೋಡು ನೋಡು ಲೋಕವೆಲ್ಲ ಪ್ರೇಮಲೋಕದಂತಿದೆ
ಹೇಳದೇನೆ ಕೇಳದೇನೇ ನನಗೆ ಏನೋ ಆಗಿದೆ
ಇಲ್ಲೇ ಇಲ್ಲಿ ಎಲ್ಲೊ ನನ್ನ ಮನಸು ಕಾಣೆಯಾಗಿದೆ
ನಿನ್ನೆ ಮೊನ್ನೆವರೆಗೂ ಇರದ ಕನಸು ಈಗ ಮೂಡಿದೆ ಓ...
ಉಸಿರು ಉಸಿರಿನಲ್ಲಿಯು ಯಾರು ಬೆರೆತ ಸೂಚನೆ
ಎಂದು ಹೀಗೆ ಇರಲಿ ಇಂತ ಮಧುರವಾದ ಯಾತನೆ
ಏಕೆ ಇಂತ ಭಾವನೆ ಏನು ಇದರ ಯೋಜನೆ
ಏನು ಹೇಳಬೇಕೋ ನಿನಗೆ ಈಗ ನಾನು ಕಾಣೆನೆ
ಸವಿಯೋ ಸವಿಯೋ ನನ್ನ ಒಳನೆ ಕುಶಿಯ ಸ್ಪರ್ಷವಾಗಿದೆ
ಹೇಳದೇನೆ ಕೇಳದೇನೇ ನನಗೇ ಏನೋ ಆಗಿದೆ
ಇಲ್ಲ್ಲೇಇಲ್ಲಿ ಇಲ್ಲೋ ನನ್ನ ಮನಸು ಕಾಣೆಯಾಗಿದೆ
ನಿನ್ನೆ ಮೊನ್ನೆವರೆಗೂ ಇರದ ಕನಸು ಈಗ ಮೂಡಿದೆ
ಹೇಳದೇನೆ ಕೇಳದೇನೇ ನನಗೆ ಏನೋ ಆಗಿದೆ
ನಿಲ್ಲೇ ನಿಲ್ಲೇ ನಿಲ್ಲೇ ನಿನ್ನ ಪಯಣ ಎಲ್ಲಿ ಸಾಗಿದೆ
ಮೆಲ್ಲ ಮೆಲ್ಲ ಮೆಲ್ಲ ನಿನ್ನ ಗಮನ ಯಾರ ಮೇಲಿದೆ
ಹೇಳದೇನೆ ಕೇಳದೇನೇ ನಿನಗೆ ಏನೋ ಆಗಿದೆ
ಇಲ್ಲ್ಲೇ ಇಲ್ಲಿ ಇಲ್ಲೋ ನನ್ನ ಮನಸು ಕಾಣೆಯಾಗಿದೆ......
********************************************************************************
No comments:
Post a Comment