Saturday, October 6, 2018

ಮುತ್ತಿನ ಹಾರ (1990)


ಕೊಡಗರ ವೀರ

ಚಲನ ಚಿತ್ರ: ಮುತ್ತಿನ ಹಾರ (1990)
ನಿರ್ದೇಶನ: ಎಸ್.ವಿ. ರಾಜೇಂದ್ರ ಸಿಂಗ್ ಬಾಬು 
ಸಾಹಿತ್ಯ & ಸಂಗೀತ: ಹಂಸಲೇಖ 
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ, ಕೆ.ಎಸ್. ಚಿತ್ರಾ
ನಟನೆ: ವಿಷ್ಣುವರ್ಧನ್, ಸುಹಾಸಿನಿ 


ಕೊಡಗರ ವೀರ ಗಂಡೆದೆ ಶೂರ
ಭಲೆ ಗುರಿಕಾರ ಪುಲಿ ಕೊಂದ ಧೀರ
ಕಾಟ್ಟೀರೊ ಅವಂಗ ಇಟ್ಟು ಪೊನ್ನ ಬಳಕನ
ಮಾಡೀರೊ ಅವಂಗ ಇಟ್ಟು ಪುಲಿ ಮಂಗಳ |  ೨ |

ಹುಲಿಯ ಹಾಲಿನ ಮೇವು ಎರೆವೇನು ನಿನಗೆ
ಸವಿದು ಬೆಳೆಯೋ ಕೊಡವನೇ
ಆನೇ ದಂತವ ನಾನು ಕೊಡುವೇನು ನಿನಗೆ
ಆಡಿ ಬೆಳೆಯೋ ಕೊಡವನೇ
ಕಾವೇರಮ್ಮನ ಮಡಿಲ ಕಂದ ಲಾಲಿ ಲಾಲಿ ಜೋ
ಕಾವೇರಮ್ಮೆದ ಕುಞೆ ನೀನು ಲಾಲಿ ಲಾಲಿ ಜೋ
ತಾಯ್ನಾಡಿಗಾಗಿ ಹಿಡಿಯೋ ಕೈಲಿ ಖಡುಗ ಖಡುಗ
ಕೊಡವ ಹೇ ಕೊಡವ ಹಿಡಿ ಖಡುಗ
ಎದೆ ಸೀಳೊ ಜೋಡಿ ಖೋವಿಯಲ್ಲಿ ಗುಂಡು ಸಿಡಿ ಗುಂಡು
ಕೊಡವ ಹೇ ಕೊಡವ ನೀ ಗಂಡು

ಕೊಡವರ ಹೆಣ್ಣು ಹೆತ್ತರೆ ಸ್ವರ್ಗ
ಯುದ್ಧದಿ ಗಂಡು ಸತ್ತರೆ ಸ್ವರ್ಗ
ಕಾವೇರಿ ತಾಯಿ ಕೊಟ್ಟ ನಾಡು ನಮ್ಮದು
ಈ ಮಣ್ಣಿನಲ್ಲಿ ನೂರು ಜನ್ಮ ನಮ್ಮದು
ಕವಣೆ ಬೀಸಲು ನಿನಗೆ ಹೆಬ್ಬಾವ ಕೊಡುವೆ
ದೇಶ ಕಾಯೊ ಕೊಡವನೆ
ಕಾವೇರಮ್ಮನು ನಿನಗೆ ವಿಜಯಮಾಲೆ ತರಲಯ್ಯ
ಕಾವೇರಮ್ಮೆ ನಿನಕು ವಿಜಯಮಾಲೆ ತಕ್ಕುಲಾ
ಕೊಡಗಲ್ಲಿ ಜನಿಸಿ ಬಂದ ಬಂದ ಚಂದ್ರ ಈ ಚಂದ್ರ
ಪುತರಿಯ ಪುತರಿಯ ಚಂದ್ರ
ಇರುಳಲ್ಲಿ ಬೆಳಕ ತಂದ ತಂದ ಚಂದ್ರ ಈ ಚಂದ್ರ
ಪುತರಿಯ ಪುತರಿಯ ಚಂದ್ರ
ನಮ್ಮನೆ ದೀಪ ದೇವರ ರೂಪ
ಕೈಯಲಿ ಖೋವಿ ವೀರನ ಠೀವಿ
ವರವಾಗಿ ತಂದ ನಮಗೆ ??? ಇಗ್ಗುತಪ್ಪನು ???
??? ವರ ಆಯ್ತು ತಾತನಂಕು ಇಗ್ಗುತಪ್ಪನು ??? || ಕೊಡಗರ ||

ಅವ್ವ ಅವ್ವ ನಾಡ ಮುತ್ತಿನಂಥ ಅವ್ವ
ಪಪ್ಪ, ನಾಡ ಪಪ್ಪ, ಪಪ್ಪ ಎಲ್ಲಿಗೆ ಪೋಯ್ತ
ಮೋನೆ ಮೋನೆ ನಾಡ ಮುತ್ತಿನಂಥ ಮೋನೆ
ಪಪ್ಪ, ನೀಡ ಪಪ್ಪ, ದೇಶ ಕಾತ್ತುಕು ಪೋಯ್ತು
|| ಕೊಡವರ ಹೆಣ್ಣು ಹೆತ್ತರೆ ಸ್ವರ್ಗ ||

*********************************************************************************

ಮಡಿಕೇರಿ ಸಿಪಾಯಿ

ಸಾಹಿತ್ಯ: ಹಂಸಲೇಖ  
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ, ಕೆ.ಎಸ್. ಚಿತ್ರಾ


ಮಡಿಕೇರಿ ಸಿಪಾಯೀ ಮುತ್ತು ಕಾತ್ತು ಮರೇನು
ಮಡಿಕೇರಿ ಸಿಪಾಯೀ ಮುತ್ತು ಕಾತ್ತು ಮರೇನು
ಅಧರ ಈ ಅಧರ ಮಧುರ ಓ ಮಧುರ
ನಿಂಗಡ ಪ್ರೇಮವೋ ದುಂಬ ಚಾಯಿ ದುಂಬ ಚಾಯಿ
ಚಾಯ್ ಕತ್ತಿ ಮೂಡಿಕ್ಕ  ನಾ ಮುತ್ತಿಕ ಮರೇನ
ಅಧರ ಈ ಅಧರ ಮಧುರ ಓ ಮಧುರ
ನಂಗಡ ಪ್ರೇಮವೋ ದುಂಬ ಚಾಯಿ ದುಂಬ ಚಾಯಿ

ಓ ಹೋ ಮಳೆ ಮಳೆ ಮಳೆ ಓಒ ಓಒ ಓಒ ಓಒ
ಇಳೆಯ ಮೇಲೆ ಇಳಿದು ಬಂತು ಹೂವಿನ ಮಳೆ
ಓ ಹೋ ಮಳೆ ಮಳೆ ಮಳೆ  ಓಒ ಓಒ ಓಒ ಓಒ
ಇಳೆಯ ಮೇಲೆ ಇಳಿದು ಬಂತು ಹೂವಿನ ಮಳೆ
ಭೂರಮೆಯ ರಮಿಸಿ  ಪ್ರೀತಿಗಳ ಹರಸಿ
ನಲಿವ ಈ ವನವೆ ಕುಣಿವ ಈ ಮನವೆ
ನಿಂಗಡ ನೆನಪುಕು ಅಮರ ಅಮರ ಅಮರ ಅಮರ
|| ಮಡಿಕೇರಿ ಸಿಪಾಯಿ ||

ಓ ಹೋ ನುಡಿ ನುಡಿ ನುಡಿ  ಓಒ ಓಒ ಓಒ ಓಒ
ದೇಹದೊಳಗೆ ಪ್ರಾಣವಾಗೊ ಆಣೆಯ ನುಡಿ
ಓ ಹೋ ದಿನ ಪ್ರತಿ ಕ್ಷಣ
ನುಡಿವ ನಿನ್ನ ಹೃದಯ ನನ್ನ ಉಸಿರು ಎಂದೆ ನಾ
ನೀ ನುಡಿವ ಸಮಯ  ಮಾರ್ದನಿಯೆ ಹೃದಯ
ಆಣೆ ನಿನ್ನಾಣೆ ಭೂಮಿ ತಾಯಆಣೆ
ನಿಂಗಡ ಬಂಧನ ಹಸಿರೋ ಹಸಿರು ಹಸಿರೋ ಹಸಿರು 
 || ಮಡಿಕೇರಿ ಸಿಪಾಯೀ ||

|| ಚಾಯ್ ಕತ್ತಿ ||

*********************************************************************************

ದೇವರು ಹೊಸೆದ ಪ್ರೇಮದ ದಾರ

ಸಾಹಿತ್ಯ: ಹಂಸಲೇಖ   
ಗಾಯಕರು: ಡಾ|| ಬಾಲಮುರಳಿಕೃಷ್ಣ, ಕೆ.ಎಸ್. ಚಿತ್ರಾ

ದೇವರು ಹೊಸೆದ ಪ್ರೇಮದ ದಾರ
ದಾರದಿ ಬೆಸೆದ ಋತುಗಳ ಹಾರ
ಋತುಗಳ ಜೊತೆಗೆ ಪ್ರೇಮದ ಪಯಣ
ಮುಗಿಯದು ಮುತ್ತಿನ ಹಾರದ ಕವನ || ಪ ||

ಬೇಸಿಗೆಯಲಿ ಆ ಸೂರ್ಯ ಭೂತಾಯಿಯ ಸುಡುತಾನೆ
ಪ್ರೇಮಕೂ ಅಗ್ನಿಪರೀಕ್ಷೆ ಸುಳಿವಿಲ್ಲದೆ ಕೊಡುತಾನೆ
ಬೇಡ ಎಂದರೆ ನಾವು ಸುಡದೆ ಇರುವುದೆ ನೋವು
ಸರಿಯೋಕಾಲದ ಜೊತೆಗೆ ವ್ಯಸನ ನಡೆವುದು ಹೊರಗೆ
||ದೇವರು ಹೊಸೆದ ||

ಮೇಘವೋ ಮೇಘವು ಮುಂಗಾರಿನ ಮೇಘವು
ಮೇಘವೋ ಮೇಘವು ಹಿಂಗಾರಿನ ಮೇಘವು
ಹನಿ ಹನಿ ಹನಿ ಹನಿ ಚಿಟಪಟ ಮಳೆ ಹನಿ
ಹನಿ ಹನಿ ಹನಿ ಹನಿ ತುಂತುರು ಮಳೆ ಹನಿ
ಗುಡು ಗುಡು ಗುಡು ಗುಡು ಗುಡುಗೋ ಗುಡುಗಿನ
ಫಳ ಫಳ ಮಿಂಚುವ ಸಿಡಿಯುವ ಸಿಡಿಲಿನ
ಧರಣಿ ತಣಿಸುವ ಭರಣಿ ಹೊಳೆಮಳೆ
ಹಸ್ತ ಚಿತ್ತ ಸ್ವಾತಿ ಹೊಳೆ ಮಳೆ
ಸಿಡಿಯುವ ಭುವಿಗೆ ಗಂಗಾವಾಹಿನಿ
ಉರಿಯುವ ಪ್ರೇಮಕೆ ಅಮೃತವರ್ಷಿಣಿ
ಆsss ಆssss ಆssss

ವಸಂತಮಾಸದಲ್ಲಿ ಪ್ರೇಮವು ವೈಯ್ಯಾರಿಯಾಗಿ ಕುಣಿಯೆ
ಆssssss ಆsss
ವಸಂತಮಾಸದಲ್ಲಿ ಪ್ರೇಮವು ವೈಯ್ಯಾರಿಯಾಗಿ ಕುಣಿಯೆ
ಕವಿಗಳು ಝರಿಗಳು ಗಿಡಗಳು ಪೊದೆಗಳು ಗಾಯನ ಮಾಡಿದವು
ಕುಹು ಕುಹು ಕುಹು ಕುಹು ಕುಹು ಕುಹು ಕುಹು ಕುಹು
ಋತುಗಳ ಚಕ್ರವು ತಿರುಗುತ ಇರಲು
ಕ್ಷಣಿಕವೇ ಕೊಗಿಲೆ ಗಾನದ ಹೊನಲು
ಬಿಸಿಲೋ ಮಳೆಯೋ ಚಿಗುರೋ ಹಿಮವೋ
ಅಳುವೋ ನಗುವೋ ಸೋಲೋ ಗೆಲುವೋ
ಬದುಕೇ ಪಯಣ ನಡಿಯೇ ಮುಂದೆ
ಒಲವೇ ನಮಗೆ ನೆರಳು ಹಿಂದೆ
||ದೇವರು ಹೊಸೆದ||

*********************************************************************************

ಸಾರು ಸಾರು ಮಿಲ್ಟ್ರಿ ಸಾರು

ಸಾಹಿತ್ಯ: ಹಂಸಲೇಖ   
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ, 
ಲತಾ ಹಂಸಲೇಖ


ಸಾರು ಸಾರು ಮಿಲ್ಟ್ರಿ ಸಾರು 
ಸಾರು ಸಾರು ಮಿಲ್ಟ್ರಿ ಸಾರು
ಯಾರು ಯಾರು  ನಾನು ಯಾರು   ಹೇಳಿ ಸಾರು
ಮಾರಿ ಮಾರಿ ತಂಟೆ ಮಾರಿ 
ಮಾರಿ ಮಾರಿ ತಂಟೆ ಮಾರಿ
ಕೇಳೇ ಕೇಳು ಏನೇ ಕೇಳು ಹೆದರೋರ್ಯಾರು 
ಕೋಣೆಯಲ್ಲಿ ಮಂಚ ಕಾಯುತಿತ್ತು   ಒಹೋ..      
ನನ್ನ ಜೀವ ನಿನ್ನ ಕೇಳುತಿತ್ತು  ಒಹೋ..
ನೀನು ಬರದೆ ಹಸಗೊಂಡ್ ಹೋದೆ 
ನಾನು ಯಾರು

ತಿಗಣೆ ಮರಿಯೆ ತಿಗಣೆ ಮರಿಯೆ     
ರಕ್ತ ಹೀರೊ ಆಸೆ ಮರಿಯೆ
ನಿನ್ನ ಒಡಲು ನೀರಲ್ಲಿರಲು ನೀನು ಯಾರು
ಸಾರು ಸಾರು ಮಿಲ್ಟ್ರಿ ಸಾರು 
ಚಿಟಿಕೆಯಲ್ಲೆ ಬರುವೆ ನಾನು ಸ್ವರ್ಗ ತೋರುವೆ
ಹತ್ತು ಕೈಗು ತುತ್ತು ನೀಡಿ ಹೊಟ್ಟೆ ತುಂಬುವೆ

ಮಿಲ್ಟ್ರಿ ಸಾರು ಹೇ ಹೇ ನಾನು ಯಾರು
ಮೂಗು ನಶ್ಯ (ಹಾ ಛಿ) ಅಂಬಾಳೆ ನಶ್ಯ 
ಅಯ್ಯೋ...   ಕೆಂಪು ಕೆಂಪು ನನ್ನ ಮೈಯ ಬಣ್ಣ ಕೆಂಪಗೆ
ಹೊಟ್ಟೆ ಒಳಗೆ ಇರುವ ಚಿನ್ನದ ಕಾಸು ಯಾರಿಗೆ
ಮಿಲ್ಟ್ರಿ ಸಾರು ಹೇ ಹೇ ನಾನು ಯಾರು
ಮೆಣಸಿನ ಕಾಯಿ ಮೆಣಸಿನ ಕಾಯಿ
ನಿನ್ನ ಹೆಸರೇ ಖಾರಾ ಬಾಯಿ
ಖಾರಾ ಬಾಯಿ ಖಾರಾ ಬಾಯಿ ಖಾರಾ ಬಾಯಿ
ಸಾರು ಸಾರು ಮಿಲ್ಟ್ರಿ ಸಾರು ಅಯ್ಯೋ... ಅಹ್ಹ..   
ಅಜ್ಜಿ ಅಜ್ಜಿ ಅಜ್ಜಿ ಮೈಗೆ ಕಜ್ಜಿ ಬಂದಿದೆ
ಸೊಂಟ ಇರದೆ ಪಾಪ ಜೋತು ಬಿದ್ದು ತೂಗಿದೆ
ಮಿಲ್ಟ್ರಿ ಸಾರು ಹೇ ಹೇ ನಾನು ಯಾರು
ಹಾಗಲಕಾಯಿ (ಅಯ್ಯೋ) ತೆಗಿ ಬೇಗ ಬಾಯಿ (ಅಯ್ಯಯ್ಯೋ)
ಕೋಟೆ ಕೋಟೆ ನಂದು ಏಳು ಸುತ್ತಿನ ಕೋಟೆಯೊ
ಕೋಟೆ ಕಟ್ಟೊ ಸೈನ್ಯ ನನ್ನ ಹೊಟ್ಟೆಗೆ ಬೇಟೆಯೊ
ಮಿಲ್ಟ್ರಿ ಸಾರು ಹೇ ಹೇ ನಾನು ಯಾರು
ನಾಗರ ಹಾವೆ ಹಾವೊಳು ಹೂವೆ 
ಬಾಗಿಲಬಿಲದಿ ನಿನ್ನಯ ಠಾವೆ
ಗೆದ್ದೆ ನಾನು ಸೋತೆ ನೀನು ಕೇಳೆ ಇನ್ನು
ತಂದೆಯ ಚಿನ್ನ ತನ್ನ ಕೈಯಲಿ ಹಿಡಿವ ಹೋ
ತಾಯಿಯ ಅನ್ನ ತನ್ನ ಬಾಯಲಿ ಕಡಿವ ಹೋ
ಹೇಳೇ ನೀನು ಏಳೇ ನೀನು ಯಾರೆ ನಾನು

*********************************************************************************

No comments:

Post a Comment