ಅವರಿವರಾ ಜೊತೆ ಸೇರದೇ
ಚಲನ ಚಿತ್ರ: ಜರಾಸಂಧ (2011)ನಿರ್ದೇಶನ: ಶಶಾಂಕ್
ಸಂಗೀತ: ಅರ್ಜುನ್ ಜನ್ಯ
ಸಾಹಿತ್ಯ: ಜಯಂತ್ ಕಾಯ್ಕಿಣಿ

ನಟನೆ: ದುನಿಯಾ ವಿಜಯ್, ಪ್ರಣೀತಾ
ಓ... ಓ... ಓ... ಓ... ಓ... ಓ...
ಅವರಿವರಾ ಜೊತೆ ಸೇರದೇ...
ಅವರಿವರಾ ನುಡಿ ಕೇಳದೇ...
ಗೆಳತಿಯರಾ ಜೊತೆ ಹೋಗದೇ...
ಪರಿಚಿತರಾ ಬಳಿ ಕೂರದೇ...
ನನ್ನನಷ್ಟೇ... ಸಾಯೋ ಹಾಗೆ ನೀನು ಪ್ರೀತಿಸೂ...
ನಿನ್ನ ಎಲ್ಲಾ... ಅಸೆಗಳ ಸಾಲಿನಲ್ಲಿ
ಎಂದೂ ನನ್ನ ಮುಂದೆ ಇರಿಸು
ಅವರಿವರಾ ಜೊತೆ ಸೇರದೇ...
ಅವರಿವರಾ ನುಡಿ ಕೇಳದೇ...
ನೀ ಹೇಳುವಾ ನಾ ಕೇಳುವಾ ಮಾತು ಒಂದೇ ಆಗಲಿ
ನೀನಾಡುವಾ ಸುಳ್ಳಲ್ಲಿಯೂ ನಾನೇ ಇರಲಿ
ನೀ ಸೋತರೂ ನಾ ಸೋತರೂ ಪ್ರೀತಿ ಎಂದೂ ಗೆಲ್ಲಲೀ
ನೀನೆನ್ನುವಾ ನಾನೆನ್ನುವಾ ಮಾತಿನ್ನೆಲ್ಲಿ
ನಗುವೆಲ್ಲ ನನಗಾಗಿ ಕೂಡಿ ಹಾಕೂ...
ಮುನಿಸನ್ನು ಬರದಂತೆ ದೂರ ನೂಕೂ..
ಮನಸಲ್ಲಿ ಮರೆಮಾಚಿ ಇಟ್ಟ ಎಲ್ಲಾ...
ಗುಟ್ಟುಗಳ ನನ್ನೆದುರೇ ತೆರಿಯಾ ಬೇಕೂ..
ಎನನ್ನೋ ಹುಡುಕುವ ಘಳಿಗೆ
ನನ್ನ ನಗುವೇ ನಿನಗೆ ಸಿಗಲೀ
ಯಾರನ್ನೋ ಕರಿಯುವ ಕ್ಷಣದೀ
ನನ್ನ ಹೆಸರೇ ಮೊದಲೂ ಬರಲೀ...
ಬೇರೆಯೇನೂ ಯೋಚಿಸದೆ ನನ್ನ ಪ್ರೀತಿಸೂ...
ನಿನ್ನ ಎಲ್ಲಾ... ಅಸೆಗಳ ಸಾಲಿನಲ್ಲಿ
ಎಂದೂ ನನ್ನ ಮುಂದೆ ಇರಿಸು
ಹೋ...ಹೋ...ಹೋ... ಹೋ...ಹೋ...ಹೋ...
ಓ... ಓ... ಓ... ಓ... ಓ... ಓ...
ನೀ ಹೇಳುವಾ ನಾ ಕೇಳುವಾ ಮಾತು ಒಂದೇ ಆಗಲಿ
ನೀನಾಡುವಾ ಸುಳ್ಳಲ್ಲಿಯೂ ನಾನೇ ಇರಲಿ
ನೀ ಸೋತರೂ ನಾ ಸೋತರೂ ಪ್ರೀತಿ ಎಂದೂ ಗೆಲ್ಲಲೀ
ನೀನೆನ್ನುವಾ ನಾನೆನ್ನುವಾ ಮಾತಿನ್ನೆಲ್ಲಿ
ನೆರಳಾಗಿ ಹಗಲ್ಲೆಲ್ಲಾ ನೀನು ಬೇಕೂ...
ಕನಸಾಗಿ ಇರುಳೆಲ್ಲಾ ಕಾಡ ಬೇಕೂ...
ಬದುಕಲ್ಲಿ ಗುರಿಯಂತೆ ನನ್ನ ಸೇರೀ...
ಅನುರಾಗ ಅನುಗಾಲ ನೀಡು ಸಾಕೂ...
ಮುಂಜಾನೆ ಬೆಳಕಲಿ ಸ್ಮರಿಸು
ಸರಿರಾತ್ರಿ ಕನಸಲಿ ವರಿಸು
ಜಗವೆಲ್ಲಾ ಹೊಗಳುವ ವೇಳೆ
ಮನಸ್ಸಲ್ಲಿ ನನ್ನನೆ ನೆನಸು ದೇವರನ್ನೂ...
ಬೇಡುವಾಗ ನನ್ನ ಜಪಿಸೂ...
ನಿನ್ನ ಎಲ್ಲಾ... ಅಸೆಗಳ ಸಾಲಿನಲ್ಲಿ
ಎಂದೂ ನನ್ನ ಮುಂದೆ ಇರಿಸು
ಅವರಿವರಾ ಜೊತೆ ಸೇರದೇ...
ಅವರಿವರಾ ನುಡಿ ಕೇಳದೇ...
ಓ... ಓ... ಓ... ಓ... ಓ... ಓ...
*********************************************************************************

ಹಳೇ ಹುಬ್ಳಿ
ಸಾಹಿತ್ಯ: ಯೋಗರಾಜ್ ಭಟ್ಗಾಯಕರು: ಅರ್ಜುನ್ ಜನ್ಯ
ಅಆಇಈಉಉಊ.... ಅಆಇಈಉಉಊ....
ಅಆಇಈಉಉಊ.... ಅಆಇಈಉಉಊ....
ಅಆಇಈಉಉಊ.... ಅಆಇಈಉಉಊ....

ಮಿರ್ಚಿ ಮಂಡಕ್ಕ್ಕೀಮಾ ತಿಂದು ಚಾ.. ಕುಡ್ ದೇ..
ಹಳೆ ಹುಬ್ಳಿ ಬಸ್ಸ್ ಸ್ಟ್ಯಾಂಡ್ಮ್ಯಾಗಾ ನಿಂತಿದ್ದೆ...
ಮಿರ್ಚಿ ಮಂಡಕ್ಕ್ಕೀಮಾ ತಿಂದು ಚಾ.. ಕುಡ್ ದೇ...
ಅಡ್ಡ್ಕೀ ಏಲೀ ಹ್ಯಾಕಿಯೆನ್‌ಡ್ಯೂ ನಾ ಬೀಡಿ ಹಚ್ಚಿದ್ದೆ....
ಆಕಿ ಕ್ಕಂಡ್ಲೋ.. ಆಕಿ ಕ್ಕಂಡ್ಲೋ..
ತದಕಲ್ಳಾರ್ಡೇ ಕಣನ್ ಹೊಡ್ದೆ...
ಅಆಇಈಉಉಊ.... ಅಆಇಈಉಉಊ....
ಅಆಇಈಉಉಊ.... ಅಆಇಈಉಉಊ....
ಹಳೆ ಹುಬ್ಳಿ ಬಸ್ಸ್ ಸ್ಟ್ಯಾಂಡ್ಮ್ಯಾಗಾ ನಿಂತಿದ್ದೆ...
ಮಿರ್ಚಿ ಮಂಡಕ್ಕ್ಕೀಮಾ ತಿಂದು ಚಾ.. ಕುಡ್ ದೇ...
ಇಳ್ಕಲ್ ಸೀರೆಒಳಗ ಬಾತ್ಕೋಳಿ ಇಟ್ಟಂಗ್ಐತಿ...
ಇಟ್ಟಂಗ್ಐತಿ... ಇಟ್ಟಂಗ್ಐತಿ...
ಕೂಡ್ಲು ಮಾತ್ರ ಕಿಲೊಮಿಟ್ರ್ ಒದ್ದ ಐತಿ... ಒದ್ದ ಐತಿ...
ಕಣ್ಣಿನೊಳಗ ಅರ್ದಾ ಲಿಟ್ರ್ ಹೆಂಡ ಐತಿ... ಹೆಂಡ ಐತಿ...
ಕೊಬರಿ ಎಣ್ನಿ ಜಳಕ ಮಾಡಿ.. ಹೀಟು ಕೂಮ್ನಿ ಆಡವಾಲ್ದೂ...
ಲವ್ವು ಮಾಡಬೇಡಾ ಅಂತ ಲೇಡೀ ಡಾಕ್ಟರೂ ಹೆಳ್ಯರಪ್ಪ...
ಹುಡಗಿ ಕಂಡಮೇಲ ನಮಗ ಸುಮ್ಮನಿರಕ್ಕಾಗಳಲ್ರಪ್ಪ್...
ಮುಂದ.. ಈಕೀ ಮುಂದ... ಹೊಸ ಮಂಗ್ಯ ನಾನಾದೆ....
ಅಆಇಈಉಉಊ.... ಅಆಇಈಉಉಊ....
ಅಆಇಈಉಉಊ.... ಅಆಇಈಉಉಊ....
ಹಳೆ ಹುಬ್ಳಿ ಬಸ್ಸ್ ಸ್ಟ್ಯಾಂಡ್ಮ್ಯಾಗಾ ನಿಂತಿದ್ದೆ...
ಮಿರ್ಚಿ ಮಂಡಕ್ಕ್ಕೀಮಾ ತಿಂದು ಚಾ.. ಕುಡ್ ದೇ...
ಗೋಲ ಗುಂಬಾಜ್ಮ್ಯಾಲ ಕರ್ಕೊಂಡು ಹೋಗಿ
ಮುತ್ತು ಕೊಟ್ರ.. ಮುತ್ತು ಕೊಟ್ರ.... ಮುತ್ತು ಕೊಟ್ರ
ಯಾವ್ ಶೀಮೀ ಗಂಡಸ್ಸು ನೀನು
ಅಂತಳ್ ನೋಡ್ರೀ... ಅಂತಳ್ ನೋಡ್ರೀ...
ನಾನಾ ನಾಚೋಹಂಗ ಕೆನ್ನೀ
ಕಚ್ಚಾಳ್ ನೋಡ್ರೀ... ಕಚ್ಚಾಳ್ ನೋಡ್ರೀ...
ಮಳಿ ಬೆಳಿ ಆಗ್ಬೇಕಂದ್ರ.. ಇಂಥವಳೊಬ್ಬ್ಲೂ ಇರ್ಬೆಕ್ರಪ್ಪ...
ಬಯಲು ಸೀಮೀ ಗಾಳಿ ಕುಡಿದು ಬೆಳೆಸಿಕೊಂಡ ಬಾಡೀ ನಂದು...
ರೊಟ್ಟಿ ಒಳ್ಳಾಗಡ್ಡಿ ತಿಂದು ಬೆಳೆಸಿಕೊಂಡ ಶೀಲ ನಂದು...
ಕನಸೋ... ಹಗಲ-ಕನಸಿಂಮ್ಯಾಗಾ ಎಲ್ಲ ಕಳಕೊಂಡೆ....
ಅಆಇಈಉಉಊ.... ಅಆಇಈಉಉಊ....
ಅಆಇಈಉಉಊ.... ಅಆಇಈಉಉಊ....
ಹಳೆ ಹುಬ್ಳಿ ಬಸ್ಸ್ ಸ್ಟ್ಯಾಂಡ್ಮ್ಯಾಗಾ ನಿಂತಿದ್ದೆ...
ಓ ಓ ಒಹೋ ಮಿರ್ಚಿ ಮಂಡಕ್ಕ್ಕೀಮಾ ತಿಂದು ಚಾ.. ಕುಡ್ ದೇ..
ಓ ಓ ಒಹೋ.. ಅಡ್ಡ್ಕೀ ಏಲೀ ಹ್ಯಾಕಿಯೆನ್‌ಡ್ಯೂ ನಾ ಬೀಡಿ ಹಚ್ಚಿದ್ದೆ....
ಆಕಿ ಕ್ಕಂಡ್ಲೋ.... ಆಕಿ ಕ್ಕಂಡ್ಲೋ....
*********************************************************************************
No comments:
Post a Comment