Saturday, October 6, 2018

ಮನ ಮೆಚ್ಚಿದ ಹುಡುಗಿ (1987)


ಗೌರಮ್ಮ ನಿನ್ನ ಗಂಡ


ಚಲನ ಚಿತ್ರ: ಮನ ಮೆಚ್ಚಿದ ಹುಡುಗಿ (1987)
ನಿರ್ದೇಶನ: ಎಂ. ಎಸ್. ರಾಜಶೇಖರ್ 
ಸಂಗೀತ: ಉಪೇಂದ್ರ ಕುಮಾರ್ 
ಸಾಹಿತ್ಯ: ಚಿ.ಉದಯಶಂಕರ್ 
ಗಾಯಕರು: ಎಸ್. ಪಿ. ಬಾಲಸುಬ್ರಮಣ್ಯಂ, ಎಸ್. ಜಾನಕಿ
ನಟನೆ: ಶಿವರಾಜ್ ಕುಮಾರ್, ಸುಧಾರಾಣಿ  


ಗಂಡು :  ಗೌರಮ್ಮಾ...
            ಗೌರಮ್ಮಾ ನಿನ್ನ ಗಂಡ ಯಾರಮ್ಮಾ ||೨||
            ಗಂಡ ಎಂದ ಒಡನೆ ಕೆನ್ನೆ ಕೆಂಪು ಯಾಕಮ್ಮಾ ||೨||
            ಓರೆ ನೋಟ ಏಕಮ್ಮ  ತುಟಿಯ ಮಿಂಚು ಏನಮ್ಮಾ
            ಹೀಗೆ ನಾಚಿಕೇ ಏ
            ಹೀಗೆ ನಾಚಿಕೇ ಏಕಮ್ಮಾ?
            ಇಂಥ ಮುದ್ದು ಹೆಣ್ಣಾ ಮನಸ ಗೆದ್ದ ಭೂಪ ಯಾರಮ್ಮಾ?
           ಗೌರಮ್ಮಾ ನಿನ್ನ ಗಂಡ ಯಾರಮ್ಮಾ
           ಗೌರಮ್ಮಾ ನಿನ್ನ ಗಂಡ ಯಾರಮ್ಮಾ
ಹೆಣ್ಣು:   ಗಂಡ ಎಂದರವನೆ ಗುಂಡು ಕಲ್ಲಿನಂತಮ್ಮ
            ಗಂಡು ಸಿಂಹ ಅವನಮ್ಮ, ಭಯದ ಮಾತೆ ಇಲ್ಲಮ್ಮ
            ಎದಿರು ನಿಲ್ಲೋರೂ, ಎದುರು ನಿಲ್ಲೋರಿಲ್ಲಮ್ಮ
            ಅವನ ಎದುರು ಗೆಲ್ಲೋ ವೀರ ಇನ್ನು ಹುಟ್ಟೇ ಇಲ್ಲಮ್ಮ
ಗಂಡು: ಗೌರಮ್ಮಾ ನಿನ್ನ ಗಂಡ ಯಾರಮ್ಮಾ
ಹೆಣ್ಣು: ಗಂಗಮ್ಮಾ ನನ್ನ ಗಂಡ ಶಿವನಮ್ಮ

ಗಂಡು;  ಏನಾ ಕಂಡು ಒಲಿದೆ ನೀನು ಶಿವನಿಗೇ?
             ಅಪ್ಪ ಇಲ್ಲ ಅಮ್ಮ ಇಲ್ಲ ಹೆಣ್ಣೆ ಅವನಿಗೇ
             ಏನಾ ಕಂಡು ಒಲಿದೆ ನೀನು ಶಿವನಿಗೇ?
             ಅಪ್ಪ ಇಲ್ಲ ಅಮ್ಮ ಇಲ್ಲ ಹೆಣ್ಣೆ ಅವನಿಗೇ
             ಹಣೆಯ ವಿಭೂತಿಯೋ, ಕೊರಳ ರುದ್ರಾಕ್ಷಿಯೋ
             ತಿರಿದು ತಿನ್ನೋ ಗಂಡಾ ಕಂಡು
             ಪ್ರೀತಿ ಹೇಗೆ ಬಂತಮ್ಮಾ
ಹೆಣ್ಣು:   ಅವನ ಕಂಡ ಮೊದಲ ದಿನವೇ ಸೋತೆನು
            ಮೊಗ್ಗು ಹಿಗ್ಗಿ ಹೂವು ಆದ ಹಾಗೆ ಆದೆನು
            ಶಿವನ ಆಕಾರಕೆ, ಅವನ ಸವಿಮಾತಿಗೆ
            ಎಲ್ಲಾ ಹೆಣ್ಣು ಸೋಲೋರೇನೆ, ನಾನೂ ಹಾಗೆ ಗಂಗಮ್ಮಾ

ಗಂಡು: ಗೌರಮ್ಮ ನಿನ್ನ ಗಂಡ ಯಾರಮ್ಮಾ
ಹೆಣ್ಣು:  ಗಂಗಮ್ಮಾ ನನ್ನ ಗಂಡ ಶಿವನಮ್ಮ

ಗಂಡು:   ಬೆಳ್ಳಿ ಚಿನ್ನ ಕಂಡೋನಲ್ಲ ಈ ತಿರುಕನು
              ಹಾಲು ಹಣ್ಣು ಮಹಲು ಮಂಚ ಒಂದೂ ಕಾಣನು
              ಬೆಳ್ಳಿ ಚಿನ್ನ ಕಂಡೋನಲ್ಲ ಈ ತಿರುಕನು
              ಹಾಲು ಹಣ್ಣು ಮಹಲು ಮಂಚ ಒಂದೂ ಕಾಣನು
              ಗಂಡ ಅವನೆಂದರೆ ನಿನಗೆ ಬಲು ತೊಂದರೆ
              ನಾಳೆ ಬರುವ ಕಷ್ಟ ತಿಳಿಯದೆ
              ಈಗ ದುಡುಕಬೇಡಮ್ಮ
ಹೆಣ್ಣು:   ಹೊನ್ನು ಮಣ್ಣು ಎರಡೂ ಒಂದೇ ಶಿವನಿಗೆ
             ಮರದ ನೆರಳೆ ಮಹಲು ಅವನು ಒಲಿದಾ ಹೆಣ್ಣಿಗೆ
             ಊರೇ ಎದುರಾಗಲಿ, ಯಾರೇ ಹೋರಾಡಲಿ
             ಶಿವನ ಕೈಯ್ಯಾ ಹಿಡಿಯಲೆ ಭುವಿಗೆ ಇಳಿದ ಹೆಣ್ಣು ಗೌರಮ್ಮಾ

ಗಂಡು : ಗೌರಮ್ಮಾ ನಿನ್ನ ಗಂಡ ಯಾರಮ್ಮಾ
ಹೆಣ್ಣು: ಗಂಗಮ್ಮಾ ನನ್ನ ಗಂಡ ಶಿವನಮ್ಮ
ಗಂಡು: ಗೌರಮ್ಮಾ ನಿನ್ನ ಗಂಡ ಯಾರಮ್ಮಾ
ಹೆಣ್ಣು: ಗಂಗಮ್ಮಾ ನನ್ನ ಗಂಡ ಶಿವನಮ್ಮ

*********************************************************************************

ಗೌರೀ ಮೊಗವು

ಸಾಹಿತ್ಯ: ಚಿ.ಉದಯಶಂಕರ್ 
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ 


ಗೌರೀ ಮೊಗವು ಚಂದಿರನಂತೆ
ಗೌರೀ ನಗುವು ಹುಣ್ಣಿಮೆಯಂತೆ
ನನ್ನ ಬಂಗಾರಿ ಸಿಂಗಾರಿ ಗೌರಿಯ
ಮಾತೆ ಮುತ್ತಂತೇ ಏ ಮಾತೆ ಮುತ್ತಂತೇ  ||ಗೌರೀ ಮೊಗವು||

ಜಿಂಕೆಮರಿಯೋ ಮುದ್ದುಗಿಳಿಯೋ
ಒಲಿದು ಬಂದ ಪ್ರೇಮ ಸಿರಿಯೋ
ಮೇಲೆ ಬಾನಿಂದ ನನಗಾಗಿ ಕಾದಿಹ  ಮಿನುಗುವಾ ತಾರೆಯೋ
ಮಿನುಗುವಾ ತಾರೆಯೋ  ||ಗೌರೀ ಮೊಗವು||

ಹೊಲದಲ್ಲಿ ಓಡೋವಾಗ, ಕಾಲ್ಗೆಜ್ಜೆಯೂ ತಂದ
ಖಲಿರೆಂದು ಚಿಮ್ಮುವಾಗ, ಕಿವಿಗೆಂಥ ಚೆಂದ
ಆ..ಹೊಲದಲ್ಲಿ ಓಡೋವಾಗ, ಕಾಲ್ಗೆಜ್ಜೆಯೂ ತಂದ
ಖಲಿರೆಂದು ಚಿಮ್ಮುವಾಗ, ಕಿವಿಗೆಂಥ ಚೆಂದ
ಅವಳ ಕೈ ಸೋಕಿ ಹೊನ್ನಾಯ್ತು ಪೈರು
ಅವಳ ತುಟಿ ಸೋಕಿ ಸಿಹಿಯಾಯ್ತು ನೀರು
ಅವಳ ಕೈ ಸೋಕಿ ಹೊನ್ನಾಯ್ತು ಪೈರು
ಅವಳ ತುಟಿ ಸೋಕಿ ಸಿಹಿಯಾಯ್ತು ನೀರು
ಮುದ್ದು ಗೌರೀ...
ಚಿಟ್ಟೆ ಹಾರಾಡದೆ ಅವಳ ಆಟ ನೋಡಿತು
ಹಕ್ಕಿ ಬೆರಗಾಗುತ ಅವಳ ಮಾತು ಕೇಳಿತು
ದೂರ ಮಾವಿನ ಮರದಲ್ಲಿ ಕೋಗಿಲೆ
ಮೌನವ ತಾಳಿತು  ಮೌನವ ತಾಳಿತು..ಅಹ್  ||ಗೌರೀ ಮೊಗವು||

ನದಿಯಲ್ಲಿ ಈಜೋವಾಗ, ಮೀನಂತೆ ಆಡಿ
ನನ್ನನ್ನು ನೋಡಿದಾಗ, ಮಿಂಚಂತೆ ಓಡಿ  ಹಾ..||ನದಿಯಲ್ಲಿ||
ಕೆಣಕಿ ಕಾಡುತ್ತಾ ತುಂಟಾಟದಿಂದ
ಕೂಗಿ ಹಾಡುತ್ತಾ ಸಂತೋಷದಿಂದ
ಕೆಣಕಿ ಕಾಡುತ್ತಾ ತುಂಟಾಟದಿಂದ
ಕೂಗಿ ಹಾಡುತ್ತಾ ಸಂತೋಷದಿಂದ
ಮುದ್ದು ಗೌರೀ..
ಕೈಯ ಹಿಡಿದಾಗಲೆ, ಬಳಿಗೆ ಸೆಳೆದಾಗಲೆ
ನನ್ನ ಮನಸ್ಸೆನ್ನುವ ನವಿಲು ಕುಣಿದಾಗಲೇ
ಮೇಲೆ ಮುಗಿಲಲ್ಲಿ ಜೊತೆಯಾಗಿ ಹಾರುವ
ಕನಸನು ಕಾಣುವೇ ಏ
ಕನಸನು ಕಾಣುವೇ.. ||ಗೌರೀ ಮೊಗವು||

*********************************************************************************

ಬೆಂಕಿಯಲ್ಲು ತಂಪು ಕಂಡೆನು

ಸಾಹಿತ್ಯ: ಚಿ.ಉದಯಶಂಕರ್   
ಗಾಯಕರು: ಎಸ್. ಪಿ. ಬಾಲಸುಬ್ರಮಣ್ಯಂ, ಎಸ್. ಜಾನಕಿ


ಗಂಡು : ಡಿಂಗರ ಡಿಂಗರ ಡಿಂಗರ ಡಿಂಗರ ಡಿಂಗರ ಡಿಂಗರ ಡಿಂಗ
ಹೆಣ್ಣು :  ಡಿಂಗರ ಡಿಂಗರ ಡಿಂಗರ ಡಿಂಗರ ಡಿಂಗರ ಡಿಂಗರ ಡಿಂಗ
 ಗಂಡು : ಹಾ..ಜಿಂಗಿಚಕ್ಕ ಜಿಂಗಿಚಕ್ಕ ಜಿಂಗಿಚಕ್ಕ
ಜಿಂಗಿಚಕ್ಕ ಜಿಂಗಿಚಕ್ಕ ಜಿಂಗಿಚಕ್ಕ
ಹೆಣ್ಣು : ಜಿಂಗಿಚಕ್ಕ ಜಿಂಗಿಚಕ್ಕ ಜಿಂಗಿಚಕ್ಕ
ಜಿಂಗಿಚಕ್ಕ ಜಿಂಗಿಚಕ್ಕ ಜಿಂಗಿಚಕ್ಕ
ಗಂಡು: ಓ ಹೋ....ಓ ಹೋ...ಓ ಹೋ..ಓ ಹೋ..
ಆ ಹ ಹ  ಆ ಹ ಹ     ಹೆಣ್ಣು: ಆ ಹ ಹ

ಗಂಡು : ನಿನ್ನಾಣೆ ನಾನು ಬೆಂಕಿಯಲ್ಲು ತಂಪು ಕಂಡೆನು
            ನನ್ನಾಣೆ ನಾನು ಡೊಂಕಿನಲ್ಲು ಅಂದ ಕಂಡೆನು
           ನಿನ್ನಾಣೆ ನಾನು ಬೆಂಕಿಯಲ್ಲು ತಂಪು ಕಂಡೆನು
           ನನ್ನಾಣೆ ನಾನು ಡೊಂಕಿನಲ್ಲು ಅಂದ ಕಂಡೆನು
          ಮಾವನ ಮಗಳು ನನ್ನ ಮೋಹಿಸಿ ಬಂದಾಗ
          ಮಾವನ ಮಗಳು ನನ್ನ ಮೋಹಿಸಿ ಬಂದಾಗ  ಬೇವಿನಲ್ಲೂ ಸಿಹಿಯಾ ಕಂಡೆನು

ಹೆಣ್ಣು:  ನಿನ್ನಾಣೆ ನಾನು ಕತ್ತಲಲ್ಲೂ ಬೆಳಕ ಕಂಡೆನು  ನನ್ನಾಣೆ ನಾನು ಮತ್ತಿನಲ್ಲೂ ಸುಖವ ಕಂಡೆನು
          ನಿನ್ನಾಣೆ ನಾನು ಕತ್ತಲಲ್ಲೂ ಬೆಳಕ ಕಂಡೆನು  ನನ್ನಾಣೆ ನಾನು ಮತ್ತಿನಲ್ಲೂ ಸುಖವ ಕಂಡೆನು
         ಅತ್ತೆಯಾ ಮಗನು ನನ್ನ ಹತ್ತಿರ ಬಂದಾಗ  ಅತ್ತೆಯಾ ಮಗನು ನನ್ನ ಹತ್ತಿರ ಬಂದಾಗ
        ಮುತ್ತಿನಂಥ ಕನಸು ಕಂಡೆನು 
ಗಂಡು: ನಿನ್ನಾಣೆ ನಾನು ಬೆಂಕಿಯಲ್ಲು ತಂಪು ಕಂಡೆನು
ಹೆಣ್ಣು: ನನ್ನಾಣೆ ನಾನು ಕತ್ತಲಲ್ಲು ಬೆಳಕ ಕಂಡೆನು

ಗಂಡು : ಉರಿವಾ ಬಿಸಿಲೆಲ್ಲಾ ಹೊಂಗೇ ನೆರಳಂತೆ  ತುಳಿವಾ ಮುಳ್ಳೆಲ್ಲಾ ಹಸಿರೂ ಹುಲ್ಲಂತೇ
           ಬಳ್ಳಿಯಾ ಮೊಗ್ಗುಗಳೆಲ್ಲಾ ಹೂವಾಗಿ ನಕ್ಕಂತೇ
          ಹರಿಯುವಾ ನದಿನೀರೆಲ್ಲಾ ಸಿಹಿಯಾದ ಜೇನಂತೆ
         ಕಲ್ಲುಕೂಡ ಮೆತ್ತಗಾಯಿತು  ಆ ಕಲ್ಲುಕಂಡ ಹಕ್ಕಿ ಕೂಡ ನಾಚಿಕೊಂಡಿತು
        ಬೆಟ್ಟದಂಥಾ ಆಸೆ ಬಂದಿತು  ಆ ಆಸೆಯಿಂದ ನನ್ನ ಮೈಯೇ ಭಾರವಾಯಿತು
ಹೆಣ್ಣು: ಓ ನನ್ನ ಗೆಳೆಯ ನೀ ಬರಲು ಸನಿಹ  ಚಳಿಯು ಹೋಗಿ ಬಿಸಿಲು ಏರಿತು

ಗಂಡು: ನಿನ್ನಾಣೆ ಬೆಂಕಿಯಲ್ಲು ತಂಪು ಕಂಡೆನು
ಹೆಣ್ಣು: ನನ್ನಾಣೆ ನಾನು ಕತ್ತಲಲ್ಲೂ ಬೆಳಕ ಕಂಡೆನು
ಇಬ್ಬರು : ಜಿಂಗಿಚಕ್ಕ ಜಿಂಗಿಚಕ್ಕ ಜಿಂಗಿಚಕ್ಕಾ..  ಜಿಂಗಿಚಕ್ಕ ಜಿಂಗಿಚಕ್ಕ ಜಿಂಗಿಚಕ್ಕಾ..

ಹೆಣ್ಣು :  ಗುಡುಗೂ ಸಿಡಿಲೆಲ್ಲಾ ಕಿವಿಗೆ ಇಂಪಂತೇ  ಸುರಿವಾ ಮಳೆನೀರು ಹಿತವಾ ತಂದಂತೇ
           ಮುಗಿಲಲ್ಲಿ ಓಡೋ ಮಿಂಚು ಬೆಳಕನ್ನು ತಂದಂತೇ  ಒಲವೆಲ್ಲಾ ಸಾಗರವಾಗಿ ಎದೆಯಲ್ಲಿ ಹರಿದಂತೆ
           ಸುತ್ತಮುತ್ತ ಅಂದ ಕಂಡೆನು  ಆ ಅಂದದಲ್ಲಿ ನನ್ನೆ ನಾನು ಮರೆತು ಹೋದೆನು ಹಾಯ್..
          ಮನಸಿನಲ್ಲಿ ಮನಸಾನಿಟ್ಟೇನು  ನನ್ ಮನಸಾ ನಿನ್ನ ಉಸಿರಿನಲ್ಲಿ ಉಸಿರಾನಿಟ್ಟೇನು
ಗಂಡು : ಓ ನನ್ನ ನಲ್ಲೇ  ನೀನಿರುವಾಗ ಇಲ್ಲೇ  ಮಂಜಿನಂತೆ ಕರಗಿ ಹೋದೇನು

ಹೆಣ್ಣು: ನಿನ್ನಾಣೆ ನಾನು ಕತ್ತಲಲ್ಲೂ ಬೆಳಕ ಕಂಡೆನು ನನ್ನಾಣೆ ನಾನು ಮತ್ತಿನಲ್ಲೂ ಸುಖವ ಕಂಡೆನು
ಗಂಡು: ನಿನ್ನಾಣೆ ನಾನು ಬೆಂಕಿಯಲ್ಲೂ ತಂಪು ಕಂಡೆನು ನನ್ನಾಣೆ ನಾನು ಡೊಂಕಿನಲ್ಲೂ ಅಂದ ಕಂಡೆನು
ಇಬ್ಬರು : ಲಾಲ ಲ್ಲಲ್ಲ ಲಾಲ ಲ್ಲಲ್ಲ ಲಾ  ಲ್ಲಲ್ಲಾಲ ಲಾ ಲಾಲ ಲ್ಲಲ್ಲ ಲಾಲ ಲ್ಲಲ್ಲ ಲಾ

*********************************************************************************

ಉಸಿರೇ ಉಸಿರೇ 

ಸಾಹಿತ್ಯ: ಚಿ.ಉದಯಶಂಕರ್  
ಗಾಯಕರು: ಎಸ್.ಪಿ. ಬಾಲಸುಬ್ರಹ್ಮಣ್ಯಂ 

ಉಸಿರೇ...  ಉಸಿರೇ.... 
ಒಡಲನು ಬಿಟ್ಟು ಹೋದೆಯ
ಉಸಿರೇ...  ಉಸಿರೇ.... 
ಒಡಲನು ಬಿಟ್ಟು ಹೋದೆಯ
ಉಸಿರೇ...  ಉಸಿರೇ... 
ಒಡಲನು ಬಿಟ್ಟು ಹೋದೆಯ

ನನ್ನ ಬಾಳಿನ ಜ್ಯೋತಿಯಾಗಿ  
ನನ್ನ ಪ್ರೇಮದ ಮೂರ್ತಿಯಾಗಿ
ನನ್ನ ಪ್ರಾಣದ ಪ್ರಾಣವಾಗಿ  
ಎಲ್ಲಿ ಹೋದೆ ದೂರವಾಗಿ
ಚೆಲುವೇ... , ಒಲವೇ...   
ಚೆಲುವೇ, ಒಲವೇ   ।। ಉಸಿರೇ... ।।

ಹಗಲೊ ಇರುಳೊ ಅರಿಯದೆ ಹೋದೆ  
ಚಿಂತೆಯ ಭಾರ ತಾಳದೆ ನೊಂದೆ
ಹಗಲೊ ಇರುಳೊ ಅರಿಯದೆ ಹೋದೆ  
ಚಿಂತೆಯ ಭಾರ ತಾಳದೆ ನೊಂದೆ
ಕಣ್ತುಂಬ ನೋಡದೇನೆ     ಸವಿಮಾತು ಆಡದೇನೆ
ನೋವೆಲ್ಲ ಮರೆಯದೇನೆ  ಈ ಜೀವ ಉಳಿವುದೇನೆ

ಚೆಲುವೇ, ಒಲವೇ  
ಚೆಲುವೇ, ಒಲವೇ
ಉಸಿರೇ..  ಉಸಿರೇ...   
ಒಡಲನು ಬಿಟ್ಟು ಹೋದೆಯ

ಮುಗಿಲೇ ಕರಗಿ ಅಳುತಿರುವಾಗ    
ಹೃದಯವು ನೊಂದು ಕೂಗಿರುವಾಗ
ಮುಗಿಲೇ ಕರಗಿ ಅಳುತಿರುವಾಗ    
ಹೃದಯವು ನೊಂದು ಕೂಗಿರುವಾಗ
ನನ್ನ ಮಾತು ಕೇಳದೇನೆ       
ನನ್ನ ನೆನಪು ಬಾರದೇನೆ
ನಮ್ಮ ಪ್ರೇಮ ಮರೆತೆಯೇನೆ  
ನನ್ನ ಸ್ನೇಹ ಬೇಡವೇನೆ

ಚೆಲುವೇ...  ಚೆಲುವೇ....   
ಚೆಲುವೇ, ಚೆಲುವೇ
ಉಸಿರೇ ಉಸಿರೇ  
ಒಡಲನು ಬಿಟ್ಟು ಹೋದೆಯ
ಉಸಿರೇ ಉಸಿರೇ  
ಒಡಲನು ಬಿಟ್ಟು ಹೋದೆಯ

*********************************************************************************

ಕೇಳಿ ಎಲ್ಲ ಕೇಳಿ

ಸಾಹಿತ್ಯ: ಚಿ.ಉದಯಶಂಕರ್  
ಗಾಯಕರು: ಎಸ್.ಪಿ. ಬಾಲಸುಬ್ರಹ್ಮಣ್ಯಂ 


ಕೇಳಿ ಎಲ್ಲ ಕೇಳಿ.. ಕೇಳಿ ಎಲ್ಲ ಕೇಳಿ..  
ಶಿವನೆಂದು ಹಾಡಿದರೆ ಸಂತೋಷ 
ಶಿವನೆಂದು ಕೂಗಿದರೆ ಉಲ್ಲಾಸ 
ಶಿವ ನಾಮ ಒಂದೇ ನಿನ್ನನ್ನು 
ಕಾಪಾಡೋ ಶಕ್ತಿ ಎಂದೆಂದೂ 
ನಂಬಿದರೇ ಕೈಲಾಸ ಶಿವನ 
ನಂಬಿದರೇ ಕೈಲಾಸ 

ಕೇಳಿ ಎಲ್ಲ ಕೇಳಿ.. ಕೇಳಿ ಎಲ್ಲ ಕೇಳಿ..
ಹಾಲ ಕಡಲನ್ನು ಸುರರು ಕಡೆದಾಗ 
ವಿಷವು ಯಮನಂತೆ ಮೇಲೆ ಬಂದಾಗ 
ಹಾಲ ಕಡಲನ್ನು ಸುರರು ಕಡೆದಾಗ 
ವಿಷವು ಯಮನಂತೆ ಮೇಲೆ ಬಂದಾಗ 
ಅಯ್ಯೋ ಗತಿಯೇನು ನಮಗೆಂದು ಸುರರೆಲ್ಲ ಕೂಗಿ 
ಸಾವು ಬಂತೆಂದು ನಡುಗುತ  ಓಡಿ ಹೋಗಿ 
ದೇವ ಜಗದೀಶ ಸರ್ವೇಶ ಕಾಪಾಡು ಏನೇ 
ಶಿವನೇ ದಯೆ ತೋರಿದಾ.. ಅಭಯವ ನೀಡಿದ 
ಕ್ಷಣದಲೇ ವಿಷವನ್ನು ಹಾಲಂತೆ ಕುಡಿದಾ 
ಸುರರನು ಕಾಪಾಡಿ ಶಿವನೇ ವಿಷಕಂಠ ತಾನಾದ

ಕೇಳಿ ಎಲ್ಲ ಕೇಳಿ.. ಕೇಳಿ ಎಲ್ಲ ಕೇಳಿ..  
ಸಾವು ನೋವಿಲ್ಲ ನಿನಗೆ ಎದುರಿಲ್ಲಾ ಶಿವನೇ 
ನಂಬಿದರೆ ಯಾರ ಭಯವಿಲ್ಲ 
ಸಾವು ನೋವಿಲ್ಲ ನಿನಗೆ ಎದುರಿಲ್ಲಾ ಶಿವನೇ 
ನಂಬಿದರೆ ಯಾರ ಭಯವಿಲ್ಲ 
ವಯಸು ಹದಿನಾರು ಮುಗಿದಾಗ ಮುನಿ ಬಾಳನು ಕಂಡು 
ಯಮಧರ್ಮ ತನ್ನ ಪಾಶ ಎಸೆದಾಗ ಅವನು 
ಅಯ್ಯೋ ಮಹಾದೇವ ಸಾಕೆಂದು ಅತ್ತಾಗ ಮಗುವು 
ಶಿವನು ತನ್ನ ಶೂಲವ.. ಬಿಸಿ ಎಸೆದಾಗಲೇ 
ಯಮನು ಅಪರಾಧ ತನ್ನದೆಂದು ತಲೆ ಬಾಗಿದ  
ಆ ಗಂಗೆಯ ಕೈ ಮುಗಿದ ಆ ಶಿವನ ಕೊಂಡಾಡಿದ 

ಕೇಳಿ ಎಲ್ಲ ಕೇಳಿ.. ಕೇಳಿ ಎಲ್ಲ ಕೇಳಿ..

*********************************************************************************

ಹಳ್ಳಿಗೆಲ್ಲಾ ಇವನೇ

ಸಾಹಿತ್ಯ: ಚಿ.ಉದಯಶಂಕರ್  
ಗಾಯನ: ಎಸ್. ಜಾನಕಿ


ಆಹಾ ಓ ಹೋ ಲಾ ಲಾ 

ಹಳ್ಳಿಗೆಲ್ಲಾ.. ಇವನೇ ಚಂದ 
ನಡೆಯು ಅಂದಾ.. ನುಡಿಯು ಅಂದ.. 
ಕ್ಷಣದಲ್ಲಿ ನನ್ನ ಮನದಿ ಇವನೇ ತುಂಬಿಕೊಂಡ
ಹಳ್ಳಿಗೆಲ್ಲಾ.. ಇವನೇ ಚಂದ 
ನಡೆಯು ಅಂದಾ.. ನುಡಿಯು ಅಂದ.. 
ಕ್ಷಣದಲ್ಲಿ ನನ್ನ ಮನದಿ ಇವನೇ ತುಂಬಿಕೊಂಡ

ಹಳ್ಳಿಗೆಲ್ಲಾ.. ಇವನೇ ಚಂದ

ಒಲಿದಾಗ ಈ ಗಂಡು ಮಲ್ಲಿಗೆಯಂತೆ 
ಒಲಿದಾಗ ಈ ಗಂಡು ಮಲ್ಲಿಗೆಯಂತೆ  
ಮುನಿದಾಗ ಈ ಗಂಡು ಬರ ಸಿಡಿಲಿನಂತೆ 
ಇವನ ಪ್ರೀತಿಗೆ ನನ್ನೇ ಕೊಡುವೆನು 
ಇವನ ಪ್ರೀತಿಗೆ ನನ್ನೇ ಕೊಡುವೆನು 
ಸುಳ್ಳನ್ನು ಹೇಳೋದಿಲ್ಲ ದೂರಕೆ ಹೋಗೋದಿಲ್ಲ 
 ಸುಳ್ಳನ್ನು ಹೇಳೋದಿಲ್ಲ ದೂರಕೆ ಹೋಗೋದಿಲ್ಲ  
ಇಂಥ ಗಂಡು ಇಲ್ಲಿ ಉಂಟು ಇವನ ನಗುವೇ ಸಕ್ಕರೆ ಬೆಲ್ಲ 

ಹಳ್ಳಿಗೆಲ್ಲಾ.. ಇವನೇ ಚಂದ 
ನಡೆಯು ಅಂದಾ.. ನುಡಿಯು ಅಂದ.. 
ಕ್ಷಣದಲ್ಲಿ ನನ್ನ ಮನದಿ ಇವನೇ ತುಂಬಿಕೊಂಡ
ಹಳ್ಳಿಗೆಲ್ಲಾ.. ಇವನೇ ಚಂದ

ಓ ಗೆಳೆಯಾ ನೀ ನನ್ನ ಮನೆಗೆಂದು ಬರುವೆ 
ಓ ಗೆಳೆಯಾ ನೀ ನನ್ನ ಮನೆಗೆಂದು ಬರುವೆ 
ಬಳಿ ಬಂದು ನೀನೆಂದು ಸಿಹಿ ಮಾತ ನುಡಿವೆ 
ನನ್ನ ಕೆನ್ನೆಗೆ ಮುತ್ತು ಕೊಡದಿರೆ 
ನನ್ನ ಕೆನ್ನೆಗೆ ಮುತ್ತು ಕೊಡದಿರೆ 
ಇಂದೆಯೇ ಓಡಿ ಬರುವೆ ಕೈಲೇ ಹಿಡಿದು ಎಳೆವೆ 
ಇಂದೆಯೇ ಓಡಿ ಬರುವೆ ಕೈಲೇ ಹಿಡಿದು ಎಳೆವೆ 
ಮುತ್ತೇ ನಾನು ನನಗು ಒಂದು ಕೊಟ್ಟು ಹೋಗೋ ಇಲ್ಲ ಏನದೆ 

ಹಳ್ಳಿಗೆಲ್ಲಾ.. ಇವನೇ ಚಂದ 
ನಡೆಯು ಅಂದಾ.. ನುಡಿಯು ಅಂದ.. 
ಕ್ಷಣದಲ್ಲಿ ನನ್ನ ಮನದಿ ಇವನೇ ತುಂಬಿಕೊಂಡ
ಹಳ್ಳಿಗೆಲ್ಲಾ.. ಇವನೇ ಚಂದ

*********************************************************************************

No comments:

Post a Comment