Sunday, October 7, 2018

ನಮ್ಮ ಪ್ರೀತಿಯ ರಾಮು (2003)


ನಾ ಕಾಣೋ ಲೋಕವನ್ನೂ 

ನಮ್ಮ ಪ್ರೀತಿಯ ರಾಮು (2003)
ನಿರ್ದೇಶನ: ಸಂಜಯ್-ವಿಜಯ್ 
ಸಂಗೀತ : ಇಳೆಯರಾಜ 
ಸಾಹಿತ್ಯ : ಬಿ.ಪಿ. ರಾಮೇಗೌಡ 
ಗಾಯನ : ಉದಿತ್ ನಾರಾಯಣ್
ನಟನೆ: ದರ್ಶನ್, ನವ್ಯಾ ನಟರಾಜನ್, ಹಂಸವಿಜೇತಾ  


ನಾ ಕಾಣೋ ಲೋಕವನ್ನು
ಕಾಣೋರು ಯಾರು
ನಾ ಕಾಣೋ ಲೋಕವನ್ನು
ಕಾಣೋರು ಯಾರು
ಹೇಳುವೆಯಾ ನೀ ಓ ಇಬ್ಬನಿಯೇ...
ಮೆಲ್ಲನೆ ಹೇಳು ಓ ಮಲ್ಲಿಗೆಯೇ...
ನನ್ನ ಕಾಣೋ ಭೂಮಿ ತಾಯೆ

ನಿನ್ನ ನೋಡಲು ನನಗೆ ಇನ್ನೊಂದು ಜನುಮವು ಬೇಕು
ಬಾನಾಡಿಯ ಹಾಗೆ ನಾ ಹಾಡಿ ಬದುಕಿರಲು ಬೇಕು...
ನಾ ಕಾಣೋ ಲೋಕವನ್ನು ಕಾಣೋರು ಯಾರು

ಅರಳಿದ ಹೂಗಳ ನೋಡದೆ ಹೋದರು ಆ ನಗೆ ನಾನ್ ಅರಿವೇ
ಹರಿಯುವ ನದಿಗಳ ಕಾಣದೆ ಹೋದರು ಸ್ಪರ್ಶದೆ ನಾ ತಿಳಿವೇ
ಕುಹೂ ಕುಹೂ ಕೂಗುವ ಕೋಗಿಲೆ ಗುಂಪಿನ ಇಂಪಲಿ ನಾ ಇರುವೆ
ಕಲ್ಪನೆ ಲೋಕದ ಬೆನ್ನನ್ನು ಏರಿ ರೆಕ್ಕೆಯ ನಾ ಪಡೆವೆ
ನೋವಿಲ್ಲಾ ನಿಮ್ಮನು ನಾ ನೋಡದೆ ಹೋದರೂ
ನೀವು ನನ್ನ ನೋಡಿದರೆ ಸಾಕಲ್ಲವೇ ಅದೂ
ನಿಮ್ಮ ಮುಂದೆ ಗಾಯಕ ನಾ...

ನಾ ಕಾಣೋ ಲೋಕವನ್ನು ಕಾಣೋರು ಯಾರು
ನಾ ಕಾಣೋ ಲೋಕವನ್ನು ಕಾಣೋರು ಯಾರು

ರಾತ್ರಿಯ ಕಳೆಯಲು ಅಮ್ಮನು ಹಾಡಿದ ಲಾಲಿಯ ಸವಿ ಕಥೆಯು
ಕೇಳಿದ ಕಥೆಯಲಿ ಜಗವನು ಕಂಡೆನು ನೆನಪೇ ಹಚ್ಚ ಹಸಿರು
ಹಿರಿಯರ ಮಾತನು ಕೇಳಲು ದಕ್ಕಿತು ಅರಿವಿನ ಈ ವರವು
ಕನ್ನಡ ಪದದಲ್ಲಿ ಬಾಗಿಲು ತೆರೆಯಿತು ಕಷ್ಟಗಳೇ ಇರವು
ಅನುಭವದ ಭಾವಗಳ ಅನುಭವದಲ್ಲಿ
ಇದ್ದುಕೊಂಡೇ ನಂಬಿಕೆಯಾ ಜೀವನವಿಲ್ಲಿ
ಹಾಡಲ್ಲೇ ಬಾಳೋ ಕೋಗಿಲೆ ನಾ ಒಹೋ.. ಒಹೋ..

ನಾ ಕಾಣೋ ಲೋಕವನ್ನು ಕಾಣೋರು ಯಾರು
ನಾ ಕಾಣೋ ಲೋಕವನ್ನು ಕಾಣೋರು ಯಾರು

ಹೇಳುವೆಯಾ ನೀ ಓ ಇಬ್ಬನಿಯೇ...
ಮೆಲ್ಲನೆ ಹೇಳು ಓ ಮಲ್ಲಿಗೆಯೇ...
ನನ್ನ ಕಾಣೋ ಭೂಮಿ ತಾಯೆ
ನಿನ್ನ ನೋಡಲು ನನಗೆ ಇನ್ನೊಂದು ಜನುಮವು ಬೇಕು
ಬಾನಾಡಿಯ ಹಾಗೆ ನಾ ಹಾಡಿ ಬದುಕಿರಲು ಬೇಕು...

ನಾ ಕಾಣೋ ಲೋಕವನ್ನು ಕಾಣೋರು ಯಾರು

*********************************************************************************

ನನ್ನೆದೆ ಬಾನಲಿ

ಸಾಹಿತ್ಯ : ಕೆ. ಕಲ್ಯಾಣ್ 
ಗಾಯನ : ಹರಿಹರನ್ 


ನನ್ನೆದೆ ಬಾನಲಿ ರೆಕ್ಕೆಯ ತೆರೆಯೋ ಬಣ್ಣದ ಹಕ್ಕಿಗಳೇ
ನನ್ನ ಕಥೆಯ ಕೇಳಲು ನಿಮ್ಮಯ ರೆಕ್ಕೆಯು ತಾನೇ ಮುಚ್ಚುವುದು
ಕಲ ಕಲ  ನಗುವಲಿ ಕಚಗುಳಿ ಇರಿಸಿ ಚಿಮ್ಮುವ ನೀರ್ ಅಲೆಯೇ
ನನ್ನ ಸ್ಥಿತಿಯ ಕೇಳಲು ನಿಮ್ಮಯ ಸಡಗರ ಮೌನವ ತಾಳುವುದು
ನಿಮ್ಮಯ ಹಾಗೆ ರೆಕ್ಕೆಯ ಪಡೆಯಲು ಆಸೆಯ ದಿನ ಕಳೆದೆ
ರೆಕ್ಕೆಗಳಿರದೆ ಬಾನಿಗೆ ಹಾರಿ ಮರಳಿ ಕೆಳಗಿಳಿದೆ
ಒಂದು ಹಾಡು ಸಾಲದು ಮನಸು ಬಿಚ್ಚಲು
ಹೃದಯ ತಾಳದು ನೀ ಕೇಳೋ

ನನ್ನೆದೆ ಬಾನಲಿ ರೆಕ್ಕೆಯ ತೆರೆಯೋ ಬಣ್ಣದ ಹಕ್ಕಿಗಳೇ
ನನ್ನ ಕಥೆಯ ಕೇಳಲು ನಿಮ್ಮಯ ರೆಕ್ಕೆಯು ತಾನೇ ಮುಚ್ಚುವುದು
ಕಲ ಕಲ  ನಗುವಲಿ ಕಚಗುಳಿ ಇರಿಸಿ ಚಿಮ್ಮುವ ನೀರ್ ಅಲೆಯೇ
ನನ್ನ ಸ್ಥಿತಿಯ ಕೇಳಲು ನಿಮ್ಮಯ ಸಡಗರ ಮೌನವ ತಾಳುವುದು

ದೇವರಲಿ ಕೇಳಿದೆ ವರವ ನೀಡಿದನು ಅವನ ಸ್ವರವ 
ಜನರಲಿ ಇದ ಯಾರು ತಿಳಿಯೋರು ನಾ ಹಾಡೋ ಹಾಡುಗಳೆಲ್ಲಾ 
ನಾನು ಪಟ್ಟ ಬದುಕಿನ ಪಾಡು ಜಗದಲಿ ಇದ ಯಾರು ಅರಿಯೋರು 
ಮನಸಲಿ ಮಾಳಿಗೆ ವಾಸ ಬರೆದಿದ್ದು ಮರದಡಿ ವಾಸ 
ಇದ್ದರೇನು ನೋವಿನ ನೋವುಗಳಿಲ್ಲಾ ರಾಗವಿದೆ ತಾಳ ಇದೆ 
ನನಗು ಒಂದು ಗರ್ವವಿದೆ ಸತ್ಯವೆಂದು ನನ್ನಲ್ಲಿ ಉಂಟು ಬೇರೇನೂ ಬೇಕು 

ನನ್ನೆದೆ ಬಾನಲಿ ರೆಕ್ಕೆಯ ತೆರೆಯೋ ಬಣ್ಣದ ಹಕ್ಕಿಗಳೇ
ನನ್ನ ಕಥೆಯ ಕೇಳಲು ನಿಮ್ಮಯ ರೆಕ್ಕೆಯು ತಾನೇ ಮುಚ್ಚುವುದು
ಕಲ ಕಲ  ನಗುವಲಿ ಕಚಗುಳಿ ಇರಿಸಿ ಚಿಮ್ಮುವ ನೀರ್ ಅಲೆಯೇ
ನನ್ನ ಸ್ಥಿತಿಯ ಕೇಳಲು ನಿಮ್ಮಯ ಸಡಗರ ಮೌನವ ತಾಳುವುದು

ಹಣಕ್ಕಾಗಿ ಹಾಡೋ ಹಾಡಿಗೆ ಬಿಡಿಗಾಸು ಬೆಲೆಯೂ ಇಲ್ಲಾ
ದಿನ ದಿನ ಅದನೆ ನಾ ಹಾಡಿದೆ ಬೆಲೆ ಇಲ್ಲದ ಹಾಡು ಆದರೂ
ಹಣವ ಎಸೆದು ಬೆಲೆ ಕಟ್ಟುವರು ಅವರಿಗೆ ಎಂದೆಂದೂ ಕೈ ಮುಗಿಯುವೆ
ಮನಸಿರೋರು ನನ್ನ ನೋಡವರು ಮನಸೊಳಗೆ ಕಾಣುವೆ ಅವರ
ಮರೆಯದ ಹಾಡು ಇದು ತಾನೇ
ಬಾಳು ಎಂಬ ನಾಟಕವು ಎಷ್ಟೋ ಇದೆ ಭೂಮಿಯಲಿ
ನೋಡಬಲ್ಲೆ ನೋಟ ಇಲ್ಲದೇನೆ...

ನನ್ನೆದೆ ಬಾನಲಿ ರೆಕ್ಕೆಯ ತೆರೆಯೋ ಬಣ್ಣದ ಹಕ್ಕಿಗಳೇ
ನನ್ನ ಕಥೆಯ ಕೇಳಲು ನಿಮ್ಮಯ ರೆಕ್ಕೆಯು ತಾನೇ ಮುಚ್ಚುವುದು
ಕಲ ಕಲ  ನಗುವಲಿ ಕಚಗುಳಿ ಇರಿಸಿ ಚಿಮ್ಮುವ ನೀರ್ ಅಲೆಯೇ
ನನ್ನ ಸ್ಥಿತಿಯ ಕೇಳಲು ನಿಮ್ಮಯ ಸಡಗರ ಮೌನವ ತಾಳುವುದು

ನಿಮ್ಮಯ ಹಾಗೆ ರೆಕ್ಕೆಯ ಪಡೆಯಲು ಆಸೆಯ ದಿನ ಕಳೆದೆ
ರೆಕ್ಕೆಗಳಿರದೆ ಬಾನಿಗೆ ಹಾರಿ ಮರಳಿ ಕೆಳಗಿಳಿದೆ
ಒಂದು ಹಾಡು ಸಾಲದು ಮನಸು ಬಿಚ್ಚಲು
ಹೃದಯ ತಾಳದು ನೀ ಕೇಳೋ 

ನನ್ನೆದೆ ಬಾನಲಿ ರೆಕ್ಕೆಯ ತೆರೆಯೋ ಬಣ್ಣದ ಹಕ್ಕಿಗಳೇ
ನನ್ನ ಕಥೆಯ ಕೇಳಲು ನಿಮ್ಮಯ ರೆಕ್ಕೆಯು ತಾನೇ ಮುಚ್ಚುವುದು 
ಕಲ ಕಲ  ನಗುವಲಿ ಕಚಗುಳಿ ಇರಿಸಿ ಚಿಮ್ಮುವ ನೀರ್ ಅಲೆಯೇ
ನನ್ನ ಸ್ಥಿತಿಯ ಕೇಳಲು ನಿಮ್ಮಯ ಸಡಗರ ಮೌನವ ತಾಳುವುದು

*********************************************************************************

ತೇಗದ ಮರ ಕಡಿದು

ಸಾಹಿತ್ಯ : ಕೆ.ಕಲ್ಯಾಣ್ 
ಗಾಯನ : ಹರಿಹರನ್ 


ತೇಗದ ಮರ ಕಡಿದು,
ಗೋವಿನ ತೊಗಲು ಕೊಂಡು
ಮನುಜ ಕಂಡು ಕೊಂಡಾ
ಡೋಲು ವಾದ್ಯಗಳಾ
ಹೇ...  ಸೋಗೆಯ ಮರವ ಕೊಂಡು
ಬಿದಿರು ತಕ್ಕೊಂಡು
ಚಂದಾಗಿ ನಮಗೆ ತಂದ ಕೊಳಲು ಮೇಳಗಳ
ಜೀವ ಶ್ರುತಿ ಸೇರಲೂಬೇಕು
ತಾಳದಲ್ಲಿ ನಡೀಲೇ ಬೇಕು
ತಪ್ಪಿದರೇ.. ರಾಗಗಳೆಲ್ಲಾ ರೋಗ ರೋಗ

ತೇಗದ ಮರ ಕಡಿದು, ಗೋವಿನ ತೊಗಲು ಕೊಂಡು
ಮನುಜ ಕಂಡು ಕೊಂಡಾ ಡೋಲು ವಾದ್ಯಗಳಾ

ಹೇ.. ಮದುವೆ ಎಂದರೆ ಮಂಗಳ ವಾದ್ಯವು ಬೇಕಲ್ಲಾ
ಗಟ್ಟಿಮೇಳ ಬೇಕಲ್ಲಾ ಅದು ಒಳ್ಳೆದಲ್ಲವಾ
ದೇವಸ್ಥಾನದಲ್ಲಿ ದೇವರ ಉತ್ಸವವಾಗಲಿ  ತೇರುಗಳು ಸಾಗಲಿ
ವಯಸು ಮಕ್ಕಳು ವಯಸ್ಸಿಗೆ ಬಂದು ಕೂರಲಿ ಆ ಮನೆಯಲ್ಲಿ
ತಪ್ಪದೆ ಅಲ್ಲಿಯೂ ತಾಳವು ಮೇಳವು ಬೇಕಲ್ಲಾ ಇಷ್ಟು ಸಾಕಲ್ಲ...
ರಾಜಕೀಯ ಭೇಟಿಗೆ ಮುಂಚೆ ಮೆರವಣಿಗೆ ನಡೆಯುತ್ತಿದ್ದರೇ
ಬೇಕಲ್ಲವೇ ತೂರಿ ತುತ್ತೂರಿ
ಶ್ವಾಸವ ಮರೆತೋನಿಗೆ ಅವನೂರಿಗೆ ಕಳಿಸೋದಕ್ಕೆ
ಇದು ಅಲ್ಲಿಯೂ ಬೇಕಲ್ಲವೇ
ತಂಗಡ ದಕ್ಕುಂ ತಂಗಡ ತಂಗಡ ತಂಗಡ ಥಾಮ್

ತೇಗದ ಮರ ಕಡಿದು, ಗೋವಿನ ತೊಗಲು ಕೊಂಡು
ಮನುಜ ಕಂಡು ಕೊಂಡಾ ಡೋಲು ವಾದ್ಯಗಳಾ

ಹೇ...  ಸೋಗೆಯ ಮರವ ಕೊಂಡು ಬಿದಿರು ತಕ್ಕೊಂಡು
ಚಂದಾಗಿ ನಮಗೆ ತಂದ ಕೊಳಲು ಮೇಳಗಳ
ಹೇ.. ಮನಸಾರೆ ಮಹಾದೇವಂಗೆ  ಚೆಲ್ಲೋಣವ್ವಾ ಮಲ್ಲಿಗೆಯಾ
ಚೆಲ್ಲೋಣವ್ವಾ ಮಲ್ಲಿಗೆಯಾ ಚೆಲ್ಲಿದರೆ ಮಲ್ಲಿಗೆಯಾ
ಕೊಡತನವ್ವಾ ಐಸಿರಿಯಾ ಕೊಡತನವ್ವಾ ಐಸಿರಿಯಾ
ಘಲಿರು ಗೆಜ್ಜೆಯ ಕಟ್ಟಿ ಹೂ ನಗೆಯ ಕೈಯ್ಯ ತಟ್ಟಿ
ಆಡೋಣ ಬನ್ನಿ ಬನ್ನಿ ಕುಣಿಯೋಣ ಬನ್ನಿ ಬನ್ನಿ
ತಾಳವ ಕೊಡುವ ಡೋಲುಗೆ ಎರಡು ಪಕ್ಕವೂ ಕಡ್ಡಿ ಏಟು
ಎಂದು ಎಂದು ತಪ್ಪದು ಎಲ್ಲೊ ಬಡಿದರೂ ಎಲ್ಲೆಲ್ಲೂ ಕೆಳತತೇ
ಜೋರಾಗಿ ಯಾವಾಗಲು ನಿಲ್ಲದು
ವಾದ್ಯವ ಬಾರಸೋರು ಹೇಳಿದರು ಆ ತರಹ ಹಣೆಬರಹ
ಸಂಗೀತ ಸಂಸಾರ ಎರಡನ್ನು
ಹಿಡಕೊಂಡು ಬೈದರು ಬಿಟ್ಟುಕೊಡರು
ಕಚೇರಿಯ ಮುಗಿದ ಮೇಲೆ ವಾದ್ಯಗಳು ಮನೆಯ ಒಳಗೆ 
ಮಲುಗತ್ತೇ ಎಲ್ಲೊ ಮೂಲೆಯಲ್ಲೇ 
ಹಾಗೇ ಕಲಾವಿದರೂ ಇಲ್ಲಿ ಬೇರೇನೂ ನೋಡಿದರು 
ಆ ದೇವರೇ ಸೃಷ್ಟಿ ಇದು 
ತಂಗಡ ದಕ್ಕುಂ ತಂಗಡ ತಂಗಡ ತಂಗಡ ಥಾಮ್

ತೇಗದ ಮರ ಕಡಿದು, ಗೋವಿನ ತೊಗಲು ಕೊಂಡು
ಮನುಜ ಕಂಡು ಕೊಂಡಾ ಡೋಲು ವಾದ್ಯಗಳಾ
ಹೇ...  ಸೋಗೆಯ ಮರವ ಕೊಂಡು ಬಿದಿರು ತಕ್ಕೊಂಡು
ಚಂದಾಗಿ ನಮಗೆ ತಂದ ಕೊಳಲು ಮೇಳಗಳ
ಜೀವ ಶ್ರುತಿ ಸೇರಲೂಬೇಕು ತಾಳದಲ್ಲಿ ನಡೀಲೇ ಬೇಕು
ತಪ್ಪಿದರೇ.. ರಾಗಗಳೆಲ್ಲಾ ರೋಗ ರೋಗ

ತೇಗದ ಮರ ಕಡಿದು, ಗೋವಿನ ತೊಗಲು ಕೊಂಡು
ಮನುಜ ಕಂಡು ಕೊಂಡಾ ಡೋಲು ವಾದ್ಯಗಳಾ  

*********************************************************************************

ಕಣ್ಣಿಲ್ದೇ ಹೋದರೂ

ಸಾಹಿತ್ಯ : ಕೆ. ಕಲ್ಯಾಣ್ 
ಗಾಯನ : ಉದಿತ್ ನಾರಾಯಣ್, ಗಂಗಾ ಸೀತಾರಸು 


ಕಣ್ಣಿಲ್ಲದೇ ಹೋದರೂ ದುಡ್ಡು ಕಾಣಬಹುದು
ದುಡ್ಡಿಲ್ಲಿ ಇದ್ದರೇ ಕಣ್ಣು ಕಾಣೋದಿಲ್ಲಾ
ಕಣ್ಣಿಲ್ಲದೇ ಹೋದರೂ ದುಡ್ಡು ಕಾಣಬಹುದು
ದುಡ್ಡಿಲ್ಲಿ ಇದ್ದರೇ ಕಣ್ಣು ಕಾಣೋದಿಲ್ಲಾ
ದುಡ್ಡಿಲ್ಲದೇ ಹೋದರೂ ಬಾಳು ನಡೆಯಬಹುದು

ಬಾಳೆಂಬುವ ಮಣ್ಣಲಿ ದುಡ್ಡು ಮಾತ್ರ ಇಲ್ಲ
ವಸಿ ಚಿಲ್ಲರೆ ಬಂದ್ರೆ ಮನುಷ್ಯ ಅವನ್ ಚಿಲ್ಲರೆ ಬುದ್ದಿ ತೋರ್ಸವ
ಕಾಲಲ್ಲಿ ನಡೆವುದ ಬಿಟ್ಟು ತಲೆಯಲ್ಲೇ  ನಡೆವ ಬಡವ
ಹೇ... ಬಿಡು ಬಿಡು ಅದ್ನ್ ಹೇಳೋದೇ ಬೇಜಾರು
ಬರಿ ಒಬ್ಬರಿಗೊಬ್ಬರಿಗೆಷ್ಟು  ವ್ಯತ್ಯಾಸ
ಹೀಗೆ ಬಿಟ್ಟು ಬಿಟ್ಟು ಎಲ್ಲಿ ಹೋದೆ ಸರ್ವೇಶ
ಬರಿ ಒಬ್ಬರಿಗೊಬ್ಬರಿಗೆಷ್ಟು ವ್ಯತ್ಯಾಸ
ಹೀಗೆ ಬಿಟ್ಟು ಬಿಟ್ಟು ಎಲ್ಲಿ ಹೋದೆ ಸರ್ವೇಶ

ಕಣ್ಣಿಲ್ಲದೇ ಹೋದರೂ ದುಡ್ಡು ಕಾಣಬಹುದು
ದುಡ್ಡಿಲ್ಲಿ ಇದ್ದರೇ ಕಣ್ಣು ಕಾಣೋದಿಲ್ಲಾ

ಮನಸು ಎಷ್ಟು ಚಿಕ್ಕ ಚಿಕ್ಕದು ಆಸೆ ಮಾತ್ರ ದೊಡ್ಡ ದೊಡ್ಡದು
ತಿಳ್ಕೊ ಇದು ತಿಳ್ಕೊ ತಿಳಿದೋರ್ ಕೇಳಿ ಬದುಕೋ
ಒಸೆದು ಒಸೆದು ಮನುಜ ಮಾಡಿದ
ತಲೆಯ ಯಾಕೆ ಹುಂಡಿ ಮಾಡಿದ
ನೋಡಿಕೋ ಮುಂದೆ ನೋಡಿಕೋ ವಿಷಯ ಬಿಟ್ಟು ನೋಡಿಕೋ
ದುಡ್ಡೋ ಹೋಗೋ ಕಡೆಯೆಲ್ಲಾ ನೀನ್ ಹೋಗಲು ಸಾಧ್ಯವೇ
ದುಡ್ಡೋ ಹೇಳೋ ಕಲ್ಮಶವ ಮಾಡೋದ್ ಕಲಿಯ ಪೂಜ್ಯವೇ
ಹಾಂ...  ಬೆಲೆ ಕೊಟ್ಟು ಕೊಟ್ಟು ಏನೇನೊ ತಕ್ಕೊಳ್ಳುವೆ
ಹಾಂ... ಪ್ರೀತಿ ವಿಷಯಕೆ ಏನು ಬೆಲೆ ಕೊಡುವೆ
ಅರೇ.. ಯಾವಾಗಲು ಯಾಕೆ ನಿಂಗೆ ಪ್ರಯಾಸ
ಅದ ಬಿಟ್ಟು ಬಿಟ್ಟು ಪ್ರೀತಿ ಮಾಡೋ ರಮೇಶ

ಕಣ್ಣಿಲ್ಲದೇ ಹೋದರೂ ದುಡ್ಡು ಕಾಣಬಹುದು
ದುಡ್ಡಿಲ್ಲಿ ಇದ್ದರೇ ಕಣ್ಣು ಕಾಣೋದಿಲ್ಲಾ
ಕಣ್ಣಿಲ್ಲದೇ ಹೋದರೂ ದುಡ್ಡು ಕಾಣಬಹುದು
ದುಡ್ಡಿಲ್ಲಿ ಇದ್ದರೇ ಕಣ್ಣು ಕಾಣೋದಿಲ್ಲಾ

ನೀಲಿ ಬಾನ  ಕೊಡೆಯಲಿ, ನಿಂತ ಬೆಳ್ಳಿ ತಿಂಗಳು ನೀ
ನಿನ್ನ ಈ ಮೌನ ಹೊಸರಾಗ ಭಾವಗೀತೆ
ಅರಳೋ ಹೂವು ಮಡಿಲಲ್ಲಿ ಹಾರಾಡೋ ಗಂಧದೆಡೆಯಲ್ಲಿ
ನಿನ್ನ ಮುಖ ಭಾವ ನನಗೊಂದು ಒಲವ ಕವಿತೆ
ತಂಗಾಳಿ ತೋರುತಿದೆ  ನೀ ನಡೆಯೋ ದಾರಿಗಳ
ಮಳೆಬಿಲ್ಲು ತೋರುತಿದೆ ನಿನ್ನ ಕನಸಿನ ಬಣ್ಣಗಳ
ನನ್ನ ಕವಿ ತುಂಬಾ ಕಲ್ಯಾಣ ನಾದ ಸ್ವರ
ಮನಸಂತೆ ಮಾಂಗಲ್ಯ ನೀ ನೋಡುವ ಸಾಗರ
ಎಂಥ ಚಂದ ಚಂದ ಈ ಚಂದ
ಮೈ ಅರಳೋ ಅರಳೋ ಶ್ರೀಗಂಧ
ಕುಕು ಕುಕ್ಕೋ ಕೋಗಿಲೆ ಕೋಟಿ ಕೋಟಿ ತಂದೆ
ಮನ ಬಿಚ್ಚಿ ಹೇಳು ನೀ ಯಾಕೆ ನಾಚಿಕೊಂಡೆ
ಕುಕು ಕುಕ್ಕೋ ಕೋಗಿಲೆ ಕೋಟಿ ಕೋಟಿ ತಂದೆ
ಮನ ಬಿಚ್ಚಿ ಹೇಳು ನೀ ಯಾಕೆ ನಾಚಿಕೊಂಡೆ
ಕುಣಿದಾಗ ನಿನ್ನ ಗೆಜ್ಜೆ ಸಂಗೀತವಾಗಿ ಬಿಡುವೆ 
ಆಗಾಗ ಪ್ರೇಮ ಪೂಜೆ ಕಲಿಸೋಕೆ  ಬಂದು ಬಿಡುವೆ 
ಹೇ.. ಒಂದು ಹೊಸ ಗೂಡು ಮನಸಲ್ಲೇ ನಿನಗಾಗಿದೆ 
ಎಂಥ ಚಂದ ಚಂದ ಈ ಚಂದ 
ಮೈ ಅರಳೋ ಅರಳೋ ಶ್ರೀಗಂಧ 
ಎಂಥ ಚಂದ ಚಂದ ಈ ಚಂದ 
ಮೈ ಅರಳೋ ಅರಳೋ ಶ್ರೀಗಂಧ 
ಕುಕು ಕುಕ್ಕೋ ಕೋಗಿಲೆ ಕೋಟಿ ಕೋಟಿ ತಂದೆ
ಮನ ಬಿಚ್ಚಿ ಹೇಳು ನೀ ಯಾಕೆ ನಾಚಿಕೊಂಡೆ 

*********************************************************************************

ಬಡವನ ಗುಡಿಸಲು 

ಸಾಹಿತ್ಯ : ಕೆ. ಕಲ್ಯಾಣ್ 
ಗಾಯನ : ಇಳಯರಾಜ 


ಬಡವನ ಗುಡಿಸಲು ಗುಡಿಯಾಗಿ ಮಾಡಲೆಂದು
ಆ ದೇವರೇ ಇಲ್ಲಿ ಯಾಕೆ ಬಂದ
ಬಡವನ ಗುಡಿಸಲು ಗುಡಿಯಾಗಿ ಮಾಡಲೆಂದು
ಬಡವನ ಗುಡಿಸಲು ಗುಡಿಯಾಗಿ ಮಾಡಲೆಂದು
ಆ ದೇವರೇ ಇಲ್ಲಿ ಯಾಕೆ ಬಂದ ಈಗ್ಯಾಕೆ ಬಂದ
ದೇವರ ನೋಡಲು ನೋಟವಿಲ್ಲಾ
ಆದರೂ ಕಣ್ಣ ನೀರಾಗಿ ತುಂಬಿದ

ಬಡವನ ಗುಡಿಸಲು ಗುಡಿಯಾಗಿ ಮಾಡಲೆಂದು
ಆ ದೇವರೇ ಇಲ್ಲಿ ಯಾಕೆ ಬಂದ ಈಗ್ಯಾಕೆ ಬಂದ

ಸೂರ್ಯ ಅಂದರೆ ಏನೋ ಅಂದುಕೊಂಡೆ
ಅರಿಯದ ಸಾವಿರಾರು ಕಲ್ಪನೆ
ಅದ ನಾ ಏನು ಎಂದು ಇಂದು ನಾ ಕಂಡು ಕೊಂಡೆ
ಕಾರಣ ಬಲ್ಲವರು ನೀವೇನೇ
ರಾಗಕೆ ಜೀವ ನೀ ನಾದಕೆ ದೈವ ನೀ
ಎಂದು ಪೂಜೆಯ ಮಾಡುವೆ ಗೀತೆಯ
ಹಾಡುವೆ ಈ ನಿಮ್ಮ ಋಣ ತಿರಲೆಂದು
ಈ ಜನ್ಮವು ಒಂದು ಸಾಲದು

ಬಡವನ ಗುಡಿಸಲು ಗುಡಿಯಾಗಿ ಮಾಡಲೆಂದು
ಆ ದೇವರೇ ಇಲ್ಲಿ ಯಾಕೆ ಬಂದ

ಕರೆದರೆ ಕುಂಬಾರನು ವಿಠ್ಠಲನು ಬರಬಹುದು
ಕಣಕಣ ಕೈ ಹಿಡಿವ ಕೇಶವ ಪುಣ್ಯವ ಪಡೆಯಲೆಂದು
ರಾಮನ ಕರಿಬಹುದು ಈ ರಾಮುಗಿರೋದೊಂದೇ ಪಾಪವ
ಉಪ್ಪಿನ ಸಾಗರ ಕಣ್ಣಲ್ಲಿ ತುಂಬಿದೆ
ಏನಿದು ಉಪ್ಪಿನ ನೀರಿದು ಸಿಹಿಯೇ ಆಯಿತು
ನಿಮ್ಮ ಪಾದ ಗಂಗೆ ಇದು ಯೋಗ ಇದು ನನ್ನ ಭಾಗ್ಯ ಇದು

ಬಡವನ ಗುಡಿಸಲು ಗುಡಿಯಾಗಿ ಮಾಡಲೆಂದು
ಆ ದೇವರೇ ಇಲ್ಲಿ ಯಾಕೆ ಬಂದ
ದೇವರ ನೋಡಲು ನೋಟವಿಲ್ಲಾ
ಆದರೂ ಕಣ್ಣ ನೀರಾಗಿ ತುಂಬಿದ

ಬಡವನ ಗುಡಿಸಲು ಗುಡಿಯಾಗಿ ಮಾಡಲೆಂದು
ಆ ದೇವರೇ ಇಲ್ಲಿ ಯಾಕೆ ಬಂದ

*********************************************************************************

ಜೋಲಿ ಜೋಕಾಲಿಯಲ್ಲಿ

ಸಾಹಿತ್ಯ: ಕೆ.ಕಲ್ಯಾಣ್ 
ಗಾಯನ: ಹರಿಹರನ್  


ಜೋಲಿ ಜೋಕಾಲಿಯಲ್ಲಿ ಜೋಡಿ ಗಿಳಿ ಎರಡು
ಸುವ್ವಾಲಿ ಸುವ್ವಿ ಅಂತಿದೆ ಅಹ.. ಅಹ.. ಅಹ...
ಸುವ್ವಿ ಸುವ್ವಾಲಿಯಲ್ಲಿ ಸೋನೇ ಸೋಬಾನೆ ಒಂದು
ಸೊಂಪಾಗಿ ಹಾಡು ಎಂದಿದೆ ಓದಲು ಬಾರದ ನನಗೆ
ಒಳ್ಳೆ ಹಾಡೊಂದ ತಂದೋರು ಯಾರು
ಕಾಣದ ಮನಸಿನೊಳಗೆ ಸವಿ ಗಾನವ ಕಾಣಿಸೋರ ಯಾರು
ಜೊತೆ ಸೇರಿಕೋ ತಾಳವ ಹಿಡಿಕೋ ಜುಮ್ಮು ಜುಮ್ಮಂಥ

ಜೋಲಿ ಜೋಕಾಲಿಯಲ್ಲಿ ಜೋಡಿ ಗಿಳಿ ಎರಡು
ಸುವ್ವಾಲಿ ಸುವ್ವಿ ಅಂತಿದೆ

ನದಿಯಲ್ಲಿ ಅಲೆಗಳಲ್ಲಿ ನನ್ನ ಮನಸನ ನೋಡಿಕೋ
ಅಲೆಯಂತೆ ಕುಣಿದು ಕುಣಿದು ನನ್ನ ಸಂಗಾತಿ ಅಂದುಕೋ
ರಾಣಿ ಮಾಡೋ ಅಪ್ಪಣೆಯಾ ಮಾಡೋ ಸೇವಕ
ಸೇವೆಯನು ಹೇಳು ಇಲ್ಲಿ ಓ ಮೈನಾ
ಇನ್ನು ಎಂದು ನಿನ್ನ ಒಳ್ಳೆ ರಾಜ್ಯ ನಡೆಯಲಿ
ಪಲ್ಲಕಿಯ ಮಾಡುವೆ ನಾ ಈ ಮೈನಾ
ಹೇ... ರಾಗಿ ಪದವಾಗಿ ಹೇ.. ಗೀಗಿ ಪದ ಕೂಗಿ
ನೀ ಜಾನಪದವಾಗೇ ನನಗೆ ಜುಮ್ಮು ಜುಮ್ಮಂತ

ಜೋಲಿ ಜೋಕಾಲಿಯಲ್ಲಿ ಜೋಡಿ ಗಿಳಿ ಎರಡು
ಸುವ್ವಾಲಿ ಸುವ್ವಿ ಅಂತಿದೆ ಅಹ.. ಅಹ.. ಅಹ...
ಸುವ್ವಿ ಸುವ್ವಾಲಿಯಲ್ಲಿ ಸೋನೇ ಸೋಬಾನೆ ಒಂದು
ಸೊಂಪಾಗಿ ಹಾಡು ಎಂದಿದೆ

ಆ ದೈವ ಕಣ್ಣು ಇಲ್ಲದೆ ಇಲ್ಲಿ ಯಾಕೋ ಹುಟ್ಟಿಸಿದ
ಕಣ್ಣು ಕೊಡೊ ದೈವ ನಿನಗೆ ನನ್ನ ಋಣಿಯಾಗಿ ಮಾಡಿದ
ನಿನ್ನ ಸಾಲ ತೀರಿಸಿಕೋ ಏನು ನನಗಿದೆ
ಋಣಾನುಬಂಧವೆಲ್ಲಾ ಹೀಗೆನಾ
ಕೊರಳೆರಡೂ ಇದ್ದಿದ್ದರೆ ನಿಂಗೆ ಒಂದು ತಂದು
ಹಾಡೋ ಹಾಡು ಹೇಳುತಿದ್ದೆ ಓ ಮೈನಾ
ಈ ಜನ್ಮವಿದು ಸಾಕು ಇನ್ನೆಲ್ಲೂ ಜನ್ಮ ಬೇಕು
ಹೇ.. ರಾಧಾ ನೀನು ರಾಗ ನಾನಾಗಿ ಜುಮ್ಮ್ ಜುಮ್ಮಂತ

ಜೋಲಿ ಜೋಕಾಲಿಯಲ್ಲಿ ಜೋಡಿ ಗಿಳಿ ಎರಡು
ಸುವ್ವಾಲಿ ಸುವ್ವಿ ಅಂತಿದೆ ಅಹ.. ಅಹ.. ಅಹ...
ಸುವ್ವಿ ಸುವ್ವಾಲಿಯಲ್ಲಿ ಸೋನೇ ಸೋಬಾನೆ ಒಂದು
ಸೊಂಪಾಗಿ ಹಾಡು ಎಂದಿದೆ

ಓದಲು ಬಾರದ ನನಗೆ ಒಳ್ಳೆ ಹಾಡೊಂದ ತಂದೋರು ಯಾರು
ಕಾಣದ ಮನಸಿನೊಳಗೆ ಸವಿ ಗಾನವ ಕಾಣಿಸೋರ ಯಾರು
ಜೊತೆ ಸೇರಿಕೋ ತಾಳವ ಹಿಡಿಕೋ ಜುಮ್ಮು ಜುಮ್ಮಂಥ 

ಜೋಲಿ ಜೋಕಾಲಿಯಲ್ಲಿ ಜೋಡಿ ಗಿಳಿ ಎರಡು
ಸುವ್ವಾಲಿ ಸುವ್ವಿ ಅಂತಿದೆ ಅಹ.. ಅಹ.. ಅಹ...
ಸುವ್ವಿ ಸುವ್ವಾಲಿಯಲ್ಲಿ ಸೋನೇ ಸೋಬಾನೆ ಒಂದು
ಸೊಂಪಾಗಿ ಹಾಡು ಎಂದಿದೆ 

*********************************************************************************

No comments:

Post a Comment