Tuesday, October 2, 2018

ಸೇವಂತಿ ಸೇವಂತಿ (2006)


ಜಾಜಿ ಮಲ್ಲಿಗೆ ನೋಡೆ

ಚಲನ ಚಿತ್ರ: ಸೇವಂತಿ ಸೇವಂತಿ (2006)   
ನಿರ್ದೇಶನ: ಎಸ್. ನಾರಾಯಣ್   
ಸಂಗೀತ: ಎಸ್. ಎ. ರಾಜ್ ಕುಮಾರ್   
ಸಾಹಿತ್ಯ: ಎಸ್.ನಾರಾಯಣ್   
ಗಾಯಕರು: ವಿಜಯ್ ರಾಘವೇಂದ್ರ,   
ಶ್ರೇಯಾ ಘೋಷಾಲ್   
ನಟನೆ: ವಿಜಯ್ ರಾಘವೇಂದ್ರ, ರಮ್ಯಾ     


ಗಂಡು: ಜಾಜಿ ಮಲ್ಲಿಗೆ ನೋಡೆ 
ಸೂಜುಗದ ಹೂವೆ ನೋಡೆ 
ಜಾಜಿ ಮಲ್ಲಿಗೆ ನೋಡೆ 
ಸೂಜುಗದ ಹೂವೆ ನೋಡೆ 
ಎನ್ನ ಮ್ಯಾಲ ಮುನಿವಾರೇ.. 
ಜಾಜಿ ಮಲ್ಲಿಗೆ ನೋಡೆ 
ಸೂಜುಗದ ಹೂವೆ ನೋಡೆ 
ಎನ್ನ ಮ್ಯಾಲ ಮುನಿವಾರೇ.. 

ಕಮಲದ ಹೂ ನಿನ್ನ ಕಾಣದೆ ಇರಲಾರೆ 
ಮಲ್ಲಿಗೆ ಮಾಯೆ ಓ.. 
ಕೇದಿಗೆ ಗರಿ ನಿನ್ನ ಅಗಲಿ ಇರಲಾರೆ 
ಮಲ್ಲಿಗೆ ಮಾಯೆ ಓ..   

ಜಾಜಿ ಮಲ್ಲಿಗೆ ನೋಡೆ 
ಸೂಜುಗದ ಹೂವೆ ನೋಡೆ 

ಎನ್ನ ಮ್ಯಾಲ ಮುನಿವಾರೇ..   

ಕೆನ್ನೆ ಕಸ್ತೂರಿ ಬಾಲೆ 
ರಾಮ ಲಕ್ಕುಮಿ ಮಣಿಯೆ 
ಮಾರುದ್ದ ಜಡೆಯೋಳೆ ಬಿಸ್ತರದ ಹೆಣ್ಣೇ.. 
ಕೆನ್ನೆ ಕಸ್ತೂರಿ ಬಾಲೆ ರಾಮ ಲಕ್ಕುಮಿ ಮಣಿಯೆ
ಮಾರುದ್ದ ಜಡೆಯೋಳೆ ಬಿಸ್ತರದ ಹೆಣ್ಣೇ.. 
ಎಳ್ಳು ಹೂವಿನ ಸೀರೆ, ಬೆಳ್ಳಿ ಕಾಲುಂಗೂರ.. 
ಹಳ್ಳದ ನೀರು ತರುತಾಳೆ ನನ ಗೆಳತೀ.. 
ಬಣ್ಣದ ಬಾಲೆ ನೀ ಹೇಳೇ.. 
ಎನ್ನ ಮ್ಯಾಲ ಮುನಿವಾರೇ..   

ಜಾಜಿ ಮಲ್ಲಿಗೆ ನೋಡೆ 
ಸೂಜುಗದ ಹೂವೆ ನೋಡೆ
ಎನ್ನ ಮ್ಯಾಲ ಮುನಿವಾರೇ..   

ಕೋಗಿಲೆ ದನಿ ಚೆಂದ ನಾಗರ ಹೆಡೆ ಚೆಂದ 
ದೇವಲೋಕದ ಪದುಮಿನಿ ನೀನೂ.. 
ಹೆಣ್ಣು: ಮುಂಚಿಲ್ಲ ನನ್ನ ಗೆಳೆಯ ಕನಸಲ್ಲ ನಂಬು ನನ್ನ 
ಚೆನ್ನಾದ ಚೆಲುವ ನೀ ಕೇಳು.. 
ಹಣ್ಣು ಹೋಳಿಗೆ ತುಪ್ಪ ಅಡಿಗೆಯ ನಾ ಮಾಡಿ 

ಬರ್ತೀನಿ ನೀನಿಟ್ಟ ಗುರುತೀಗೆ 
ಬರ್ತೀನಿ ಜಾಣ.. ಬರುವಾ ದಾರಿ ಕಾಯೊ 
ಎನ್ನ ಮ್ಯಾಲ ಮುನಿವಾರೆ..   

ಗಂಡು: ಜಾಜಿ ಮಲ್ಲಿಗೆ ನೋಡೆ 
ಸೂಜುಗದ ಹೂವೆ ನೋಡೆ 
ಜಾಜಿ ಮಲ್ಲಿಗೆ ನೋಡೆ 
ಸೂಜುಗದ ಹೂವೆ ನೋಡೆ 
ಎನ್ನ ಮ್ಯಾಲ ಮುನಿವಾರೇ..   
ಕಮಲದ ಹೂ ನಿನ್ನ ಕಾಣದೆ ಇರಲಾರೆ 
ಮಲ್ಲಿಗೆ ಮಾಯೆ ಓ.. 
ಕೇದಿಗೆ ಗರಿ ನಿನ್ನ ಅಗಲಿ ಇರಲಾರೆ 
ಮಲ್ಲಿಗೆ ಮಾಯೆ ಓ..   

ಜಾಜಿ ಮಲ್ಲಿಗೆ ನೋಡೆ 
ಸೂಜುಗದ ಹೂವೆ ನೋಡೆ 
ಎನ್ನ ಮ್ಯಾಲ ಮುನಿವಾರೇ..

*********************************************************************************

ಭಾಗ್ಯದ ಬಳೆಗಾರ

ರಚನೆ: ಜಾನಪದ ಗೀತೆ 
ಗಾಯಕರು: ಕುನಾಲ್ ಗಾಂಜಾವಾಲಾ , ಶ್ರೇಯಾ ಘೋಷಾಲ್ 


ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ
ನಿನ್ನ ತವರೂರ ನಾನೇನು ಬಲ್ಲೆನು
ಗೊತ್ತಿಲ್ಲ ಎನಗೆ ಗುರಿಯಿಲ್ಲ ಎಲೆಬಾಲೆ
ತೋರಿಸು ಬಾರೇ ತವರೂರಾ

ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ
ಮುತ್ತೈದೆ ಎಲೆ ಹೆಣ್ಣೆ ತೋರು ಬಾ ನಿನ್ ತವರೂರ

ಬಾಳೆ ಬಲಕ್ಕೆ ಬೀಡು, ಸೀಬೆ ಎಡಕ್ಕೆ ಬೀಡು
ನಟ್ಟ ನಡುವೇಲಿ ನೀ ಹೋಗು ಬಳೆಗಾರ
ಅಲ್ಲಿಹುದೆನ್ನಾ ತವರೂರು

ಹಂಚಿನ ಮನೆ ಕಾಣೋ, ಕಂಚಿನ ಕದ ಕಾಣೋ
ಇಂಚಾಡೋ ಎರಡು ಗಿಳಿ ಕಾಣೋ ಬಳೆಗಾರ
ಅಲ್ಲಿಹುದೆನ್ನಾ ತವರೂರು

ಆಲೆ ಹಾಡುತ್ತಾವೆ, ಗಾಣ ತಿರುಗುತ್ತಾವೆ
ನವಿಲು ಸಾರಂಗ ನಲಿದಾವೆ ಬಳೆಗಾರ
ಅಲ್ಲಿಹುದೆನ್ನಾ ತವರೂರು

ಮುತ್ತೈದೆ ಹಟ್ಟೀಲಿ, ಮುತ್ತಿನ ಚಪ್ರಹಾಕಿ
ನಟ್ಟ ನಡುವೇಲಿ ಪಗಡೆಯ ಆಡುತ್ತಾಳೆ
ಅವಳೇ ಕಣೋ ನನ್ನ ಹಡೆದವ್ವ

ಅಚ್ಚ ಕೆಂಪಿನ ಬಳೆ, ಹಸಿರು ಗೀರಿನ ಬಳೆ
ನನ್ನ ಹಡೆದವ್ವಗೆ ಬಲು ಆಸೆ ಬಳೆಗಾರ
ಕೊಂಡ್ಹೋಗೊ ನನ್ನ ತವರೀಗೇ...

*********************************************************************************

ನಿಂಬಿಯಾ ಬನಾದ

ರಚನೆ: ಜಾನಪದ ಗೀತೆ 
ಗಾಯಕರು: ಕುನಾಲ್ ಗಾಂಜಾವಾಲಾ, ಪ್ರಿಯಾ 


ನಿಂಬಿಯಾ ಬನಾದ ಮ್ಯಾಗಳ
ಚಂದ್ರಾಮ ಚಂದಾಡಿದ ||

ಎದ್ದೋನೇ ನಿಮಗ್ಯಾನ ಏಳುತಲಿ ನಿಮಗ್ಯಾನ
ಸಿದ್ದಾರ ಗ್ಯಾನ ಶಿವೂ ಗ್ಯಾನ
ಸಿದ್ದಾರ ಗ್ಯಾನ ಶಿವೂ ಗ್ಯಾನ ಮಾದಶಿವನೆ
ನಿದ್ರೆಗಣ್ಣಾಗೆ ನಿಮಗ್ಯಾನ || ನಿಂಬಿಯಾ ||

ಆರೇಲೆ ಮಾವೀನ ಬೇರಾಗಿ ಇರುವೋಳೆ
ಓಲ್ಗಾದ ಸದ್ದಿಗೆ ಒದಗೋಳೆ
ಓಲ್ಗಾದ ಸದ್ದೀಗೆ ಒದಗೋಳೇ ಸರಸತಿಯೆ
ನಮ್ನಾಲಿಗೆ ತೊಡಿರ ಬಿಡಿಸವ್ವಾ || ನಿಂಬಿಯಾ ||

ಎಂಟೆಲೆ ಮಾವಿನ ದಂಟಾಗಿ ಇರುವೊಳೆ
ಗಂಟೆ ಸದ್ದೀಗೆ ಒದಗೋಳೆ
ಗಂಟೆ ಸದ್ದೀಗೆ ಒದಗೊಳೆ ಸರಸತಿಯೆ
ನಮ್ ಗಂಟಾಲ ತೊಡರ ಬಿಡಿಸವ್ವಾ ||| ನಿಂಬಿಯಾ ||

ರಾಗಿ ಬೀಸೋಕಲ್ಲೆ ರಾಜಾನ ಒಡಿಗಲ್ಲೆ
ರಾಯ ಅಣ್ಣಯ್ನ ಅರಮನೆ
ರಾಯ ಅಣ್ಣಯ್ನ ಅರಮನೆಯ ಈ ಕಲ್ಲೆ
ನೀ ರಾಜಾ ಬೀದೀಲಿ ದನಿದೋರೆ || ನಿಂಬಿಯಾ ||

ಕಲ್ಲವ್ವಾ ಮಾತಾಯಿ ಮಲ್ಲವ್ವಾ ರಾಗೀಯ
ಜಲ್ಲಾ ಜಲ್ಲಾನೆ ಉದುರವ್
ಜಲ್ಲಾ ಜಲ್ಲಾನೆ ಉದುರವ್ವ ನಾ ನಿನಗೆ
ಬೆಲ್ಲಾದಾರತಿಯ ಬೆಳಗೇನು || ನಿಂಬಿಯಾ ||....

*********************************************************************************

ಮಾಯದಂಥ ಮಳೆ ಬಂತಣ್ಣ

ರಚನೆ: ಜಾನಪದ ಗೀತೆ 
ಗಾಯಕರು: ಕೆ. ಎಸ್. ಚಿತ್ರಾ 

ಮಾಯದಂಥ ಮಳೆ ಬಂತಣ್ಣ
ಮಗದಾದ ಕೆರೆಗೆ
ಅಂಗೈಯಗಲ ಮೋಡನಾಡಿ
ಭೂಮಿತೂಕದ ಗಾಳಿಬೀಸಿ
ಗುಡಗಿ ಗುಡಾಡಿ ಚೆಲ್ಲಿದಳೊ
ಗಂಗಮ್ಮ ತಾಯಿ ||

ಏರಿಮ್ಯಾಗಳ ಬಳ್ಳಾಲು ರಾಯ
ಕೆರೆಯ ಒಅಳಗಲ ಬೆಸ್ತಾರು ಹುಡುಗ
ಓಡಿ ಓಡಿ ಸುದ್ದಿಯ ಕೊಡಿರಯ್ಯೋ
ನಾ ನಿಲ್ಲುವಳಲ್ಲ ||

ಅರುಸಾವಿರ ವಡ್ಡರ ಕರೆಸಿ
ಮೂದು ಸಾವಿರ ಗುದ್ದಲಿ ತರಿಸಿ
ಸೋಲು ಸೋಲಿಗೆ ಮಣ್ಣ ಹಾಕಿಸಯ್ಯೊ
ನಾ ನಿಲ್ಲುವಳಲ್ಲ ||

ಆರು ಸಾವಿರ ಕುರಿಗಳ ತರಿಸಿ
ಮೂರು ಸಾವಿರ ಕುಡುಗೋಲು ತರಿಸಿ
ಕಲ್ಲುಕಲ್ಲಿಗೆ ರೈತವ ಬಡಿಸಯ್ಯೋ
ನಾ ನಿಲ್ಲುವಳಲ್ಲ ||

ಒಂದು ಬಂಡೀಲಿ ವೀಎದಡಿಕೆ
ಒಂದು ಬಂಡೀಲಿ ಚಿಗಲಿ ತಮಟ
ಮೂಲೆ ಮೂಲೆಗೆ ಗಂಗಮ್ಮನ ಮಾಡಿಸಯ್ಯೋ
ನಾ ನಿಲ್ಲುವಳಲ್ಲ ||

*********************************************************************************

ನೋಡವಳಂದಾವ

ರಚನೆ: ಜಾನಪದ ಗೀತೆ 
ಗಾಯಕರು: ಶಂಕರ್ ಮಹಾದೇವನ್ 

ನೋಡವಳಂದಾವ ಮೊಗ್ಗಿನ
ಮಾಲೆ ಚಂದಾವ ||

ಬೆಟ್ಟಾ ಬಿಟ್ಟಿಳಿಯುತಲಿ ಬಿಟ್ಯಾಳೇ
ಬಿಟ್ಟಾಳೆ ಮಂಡೇಯ
ಹುಟ್ಟೀರೊ ಲಂಗ ಹುಲಿಚರ್ಮ
ಹುಟ್ಟೀರೊ ಲಂಗ ಹುಲಿಚರ್ಮಾ ಚಾಮುಂಡಿ
ಬೆಟ್ಟಾ ಬಿಟ್ಟಿಳಿಯೊ ಸಡಗಾರ ||

ತಾಯಿ ಚಾಮುಂಡಿಯ
ಬಾಲಾಸು ರಂಗದ ಮೇಲೆ
ಜಾತಾರ ಆದವ್ನೆ ಎಳೆನಾಗೆ ಎಳೆಸರುಪ
ತಾಯಿ ಚಾಮುಂಡಿಗೆ ಬಿಸಿಲೆಂದು ||

ತಾಳೆ ಹೂ ತಂದಿವ್ನಿ
ತಾಳ್ ತಾಯೇ ಚಾಮುಂಡಿ
ಮೇಗಾಳ ತೋಟದ ಮರುಗಾವ
ಮೇಗಾಳ ತೋಟಾದ ಮರುಗಾವಾ ತಂದಿವ್ನಿ
ಒಪ್ಪಿಸಿಕೊಳ್ಳಿ ಹರಕೆಯ ||....

*********************************************************************************

ಚೆಲ್ಲಿದರು ಮಲ್ಲಿಗೆಯಾ

ರಚನೆ: ಜಾನಪದ ಗೀತೆ 
ಗಾಯಕರು: ಎಸ್. ಎ. ರಾಜ್ ಕುಮಾರ್ 


ಚೆಲ್ಲಿದರು ಮಲ್ಲಿಗೆಯಾ
ಬಾಣಾ ಸುರೇರಿ ಮ್ಯಾಲೆ
ಅಂದಾದ ಚೆಂದಾದ ಮಾಯ್ಕಾರ ಮಾದೆವ್ಗೆ
ಚೆಲ್ಲಿದರು ಮಲ್ಲಿಗೆಯ ||

ಮಾದಪ್ಪ ಬರುವಾಗಾ
ಮಾಳೆಪ್ಪ ಘಮ್ಮೆಂದಿತೊ
ಮಾಳದಲಿ ಗರುಕೆ ಚಿಗುರ್ಯಾವೆ
ಮಾದೇವ್ಗೆ ಚೆಲ್ಲಿದರು ಮಲ್ಲಿಗೆಯ ||

ಸಂಪಿಗೆ ಹೂವ್ನಂಗೇ
ಇಂಪಾದೊ ನಿನ ಪರುಸೆ
ಇಂಪಾದೊ ನಿನ ಪರುಸೆ
ಕೌದಳ್ಳಿ ಬಯಲಾಗಿ
ಚೆಲ್ಲಿದರು ಮಲ್ಲಿಗೆಯ ||

ಮಲ್ಲಿಗೆ ಹೂವಿನ ಮಂಚಾ
ಮರುಗಾದ ಮೇಲೊದಪು
ತಾವರೆ ಹೂವು ತಲೆದಿಂಬು
ಮಾದೇವ್ಗೆ ಚೆಲ್ಲಿದರು ಮಲ್ಲಿಗೆಯ ||

ಹೊತ್ತು ಮುಳುಗಿದರೇನೂ
ಕತ್ತಲಾದರೇನು
 ಅಪ್ಪಾ ನಿನ ಪರುಸೆ
ಬರುವೆವು ನಾವು ಚೆಲ್ಲಿದರು ಮಲ್ಲಿಗೆಯ ||...


*********************************************************************************

No comments:

Post a Comment