Friday, October 5, 2018

ಅಂಜನಿಪುತ್ರ (2017)

ಭಾರಿ ಖುಷಿ ಮಾರ್ರೆ ನಂಗೆ

ಚಲನಚಿತ್ರ: ಅಂಜನಿಪುತ್ರ (2017)
ಸಾಹಿತ್ಯ: ಪ್ರಮೋದ್ ಮರವಂತೆ 
ಸಂಗೀತ: ರವಿ ಬಸ್ರೂರ
ಗಾಯನ: ರವಿ ಬಸ್ರೂರ, ಅನುರಾಧ ಭಟ್ 
ನಿರ್ದೇಶನ: ಹರ್ಷ. ಎ 
ನಟನೆ: ಪುನೀತ್ ರಾಜ್ ಕುಮಾರ್, ರಶ್ಮಿಕಾ ಮಂದಣ್ಣ, ರಮ್ಯಾ ಕೃಷ್ಣನ್ 


ಭಾರಿ ಖುಷಿ ಮಾರ್ರೆ ನಂಗೆ 
ನನ್ನ ಹೆಂಡ್ತಿ ಕಂಡ್ರೆ 
ಒಂದು ಚೂರು ಬೈಯುದಿಲ್ಲ 
ರಾತ್ರಿ ಕುಡ್ಕಂ ಬಂದ್ರೆ 

ಭಾರಿ ಖುಷಿ ಮಾರ್ರೆ ನಂಗೆ 
ನನ್ನ ಹೆಂಡ್ತಿ ಕಂಡ್ರೆ 
ಒಂದು ಚೂರು ಬೈಯುದಿಲ್ಲ 
ರಾತ್ರಿ ಕುಡ್ಕಂ ಬಂದ್ರೆ 

ಟಿವಿ ರೇಡಿಯೊ ಎಂತ ಬೇಡ 
ಅವ್ಳು ಮನೆಗಿದ್ರೆ 
ಅವ್ಳು ಉಂಬ್ತೆ ಇಲ್ಲ ಕಾಣಿ 
ನಾನು ಊಟ ಮಾಡ್ ದೆ 
ನನ್ ಕಿಂತ ಚೂರು ದಪ್ಪ 
ಆರು ನಂಗೆ ಅಡ್ಡಿಲ್ಲೆ 
ಅವ್ಳು ಕಣ್ಣು ಬಿಟ್ರೆ 
ನಂಗೆ ಮಾತೆ ಬತ್ತಿಲ್ಲೆ 
ಅವ್ಳು ಸೀರೆ ಉಟ್ಕೊ ಬಂದು ಎದ್ರಿಗ್ ನಿಂತ್ 
ಕೂಡ್ಲೆ ಮನ್ಸ್ ಹೆಳತ್ ಒಂದು ಮಾತು 
ಚಂದ ಚಂದ ಚಂದ ಚಂದ ನನ್ ಹೆಂಡ್ತಿ
ಮೂಗಿನ್ ತುದಿಲ್ ಸೊಲ್ಪ ಸಿಟ್ಟು ಜಾಸ್ತಿ
ಚಂದ ಚಂದ ಚಂದ ಚಂದ ನನ್ ಹೆಂಡ್ತಿ
ನನ್ನಂತ ಗಂಡನಿಗೆ ಅವ್ಳೆ ಆಸ್ತಿ

ಮನೆಯ ಬಾಗಿಲಲ್ಲಿ ಮನದಂಗಳದಲ್ಲಿ
ರಂಗೋಲಿ ಇಡುವ ಕೈಯ ಹ್ಯಾಂಗೆ ಮರೆಯಲಿ
ಬೀಸೊ ಗಾಳಿ ತಾಗಿ ಮುಂಗುರುಳು ಕೆಳಗೆ ಇಳಿದು
ಎಷ್ಟು ಚಂದ ಕಾಣುತಾಳೆ ಹ್ಯಾಂಗೆ ಹೇಳಲಿ
ಧರ್ಮ ಪತ್ನಿ ಧರ್ಮಕ್ಕೆ ಕಣ್ಣಿನಲ್ಲೆ ಬೈಯ್ಯೊ ಮಾತು 
ನೋಡಿದಾಗ ನನ್ನ ಹೆಂಡ್ತಿ ಸ್ವಪ್ನ ಸುಂದರಿ 
ಊರ ಮಾತು ಕೇಳಿ ಕೆಟ್ಟು ಬದುಕು ದೊಂಬರಾಟ ಆದ್ರು 
ಸಾಯೊ ತನಕ ಹೆಗಲ ನೀಡೊ ವಿಷ್ವ ಸುಂದರಿ 
ಎಷ್ಟೇ ಬ್ಯೂಟಿ ಎದುರು ಕಂಡ್ರು ನನ್ನ ಹೆಂಡ್ತಿನ್ 
ಕಂಡು ಮನಸು ಹೇಳತ್ ಒಂದು ಮಾತು 
ಚಂದ ಚಂದ ಚಂದ ಚಂದ ನನ್ ಹೆಂಡ್ತಿ 
ಮೂಗಿನ್ ತುದಿಲ್ ಸೊಲ್ಪ ಸಿಟ್ಟು ಜಾಸ್ತಿ 
ಚಂದ ಚಂದ ಚಂದ ಚಂದ ನನ್ ಹೆಂಡ್ತಿ 
ನನ್ನಂತ ಗಂಡನಿಗೆ ಅವ್ಳೆ ಆಸ್ತಿ 
ಭಾರಿ ಖುಷಿ ಮಾರ್ರೆ ನಂಗೆ ನನ್ ಗಂಡ ಅಂದ್ರೆ 
ಕೆನ್ನೆ ಕೆಂಪ್ ಆತ್ ಕಾಣಿ ಅವ್ರು ಹತ್ರ ಬಂದ್ರೆ 
ಚಿನ್ನ ಬೆಳ್ಳಿ ಎಂತ ಬ್ಯಾಡ ಅವ್ರ್ ಪ್ರೀತಿ ಸಿಕ್ರೆ 
ಎಲ್ಲ ಕಷ್ಟ ದೂರ ಆತ್ ಅವ್ರು ಒಮ್ಮೆ ನಕ್ರೆ 
ನನ್ ಕಿಂತ ಮಾತ್ ಕಮ್ಮಿ ಆರು ನಂಗೆ ಅಡ್ಡಿಲ್ಯೆ 
ಹೆಂಡ್ತಿ ಮಾತು ಕೆಂಬೊ ಗಂಡ ಸಿಕ್ರೆ ಸಾಕಲ್ಲೆ 
ಅವ್ರು ಪಂಚೇನ್ ಎತ್ತಿ ಕಟ್ಟಿ ಕಣ್ಣು ಹೊಡ್ದ ಕೂಡಲೆ 
ಮನ್ಸ್ ಹೇಳತ್ ಒಂದ್ ಮಾತು 
ಚಂದ ಚಂದ ಚಂದ ಚಂದ ನನ್ನ ಗಂಡ 
ಕಣ್ಣಿನಾಗೆ ಸನ್ನೆ ಮಾಡಿ ಅಪ್ಪಿಕೊಂಡ 
ಚಂದ ಚಂದ ಚಂದ ಚಂದ ನನ್ನ ಗಂಡ 
ಬೈದ್ರೂನು ಮತ್ತೆ ನನ್ನ ಒಪ್ಪಿಕೊಂಡ 

*********************************************************************************

No comments:

Post a Comment