Friday, October 5, 2018

ಫ್ರೆಂಡ್ಸ್ (2002)


ದೇವರು ವರವನು ಕೊಟ್ರೇ

ಚಲನ ಚಿತ್ರ: ಫ್ರೆಂಡ್ಸ್ (2002) 
ನಿರ್ದೇಶನ: ಎಂ.ಡಿ.ಶ್ರೀಧರ್ 
ಸಾಹಿತ್ಯ : ಕೆ. ಕಲ್ಯಾಣ್ 
ಸಂಗೀತ : ಜಿ. ಕೃಷ್ಣ 
ಗಾಯನ: ಕುಮಾರಸಾನು 
ನಟನೆ: ಶರಣ್, ಋತಿಕಾ, ವಾಸು, ಮಾಸ್ಟರ್ ಆನಂದ್ 


ದೇವರು ವರವನು ಕೊಟ್ರೇ.
ನಾ ನಿನ್ನೇ ಕೋರುವೆ ಚೆಲುವೆ...
ಹಾ. ನಿದಿರೆಯ ಒಳಗೂ ನಿನ್ನ.
ನೆರಳನ್ನೇ ಸೇರುವೆ ಚೆಲುವೆ...
ಓ. ದೇವರು ವರವನು ಕೊಟ್ರೇ.
ನಾ ನಿನ್ನೇ ಕೋರುವೆ ಚೆಲುವೆ...
ಹಾ. ನಿದಿರೆಯ ಒಳಗೂ ನಿನ್ನ
ನೆರಳನ್ನೇ ಸೇರುವೆ ಚೆಲುವೆ...

ಓ. ತಿಂಗಳಿಗೆ ಕಂಗಳ ಬರೆದು
ತಂಗಾಳಿಗೆ ತುಟಿಗಳ ಬರೆದು
ಮುಂಜಾನೆಗೆ ನಗುವನು ಬರೆದು
ಮುಸ್ಸಂಜೆಗೆ ಲಜ್ಜೆಯ ಬರೆದು
ಪ್ರಕೃತಿಯಲಿ ಕಂಡೆ ನಿನ್ನನ್ನೇ... 

ಓ. ದೇವರು ವರವನು ಕೊಟ್ರೇ
ನಾ ನಿನ್ನೇ ಕೋರುವೆ ಚೆಲುವೆ... 

ಮನಸು ನಿನ್ನ ಕಂಡೊಡನೆ
ತನ್ನ ಮೈಯ ಮರೆತೋಯ್ತು
ಒಂದು ಮಾತು ಕೇಳದೆಲೇ
ನಿನ್ನ ಜೀವ ಸೇರೋಯ್ತು
ಹಾ. ನಿನ್ನ ಒಂದು ನಗೆಯೊಳಗೆ
ನನ್ನತನವೇ ಬೆಳಕಾಯ್ತು
ಯಾವ ಸ್ಪರ್ಶ ಇಲ್ಲದೆಲೇ
ಹೃದಯ ಅದಲು ಬದಲಾಯ್ತು
ನೀ ಮೇಘಗಳ ಹನಿಯೊಳಗೆ ಅವಿತಿದ್ದರೂ
ಮಿಂಚುಗಳ ಏರಿ ಮಳೆಬಿಲ್ಲ ಮೈಗುಡಿಸುವೆ
ಭೂಮಿ ಆಕಾಶದ ಆಚೆಗೂ
ನಿನ್ನ ನೆನಪಲ್ಲೇ ನಾ ಬದುಕುವೆ... 

ದೇವರು ವರವನು ಕೊಟ್ರೇ.
ನಾ ನಿನ್ನೇ ಕೋರುವೆ ಚೆಲುವೆ...
ಹಾ. ನಿದಿರೆಯ ಒಳಗೂ ನಿನ್ನ
ನೆರಳನ್ನೇ ಸೇರುವೆ ಚೆಲುವೆ... 

ಏಳು ಹೆಜ್ಜೆ ಇಡುವೆ ಎಂದು
ಏಳು ಜನ್ಮ ಕಾಯುವೆನು
ಮೂರು ಗಂಟು ಬೆಸೆಯುವೆ ಎಂದು
ನೂರು ಕಾಲ ಬೇಡುವೆನು
ಹಾ. ಎಲ್ಲ ಋತುಗೂ ಮನವಿ ಬರೆದು
ಗಟ್ಟಿಮೇಳ ನುಡಿಸುವೆನು

ಸೂರ್ಯ ಚಂದ್ರ ಚುಕ್ಕಿಯ ಕರೆದು
ಮಂತ್ರ ಘೋಷ ಹರಿಸುವೆನು
ನನ್ನ ಕನಸೆಲ್ಲ ನಿನ್ನ ಕಂಗಳು ನೋಡಲು
ನಿನ್ನ ರೆಪ್ಪೆಯಲೇ ಬಾಯ್ತೆರೆದು ಕಾದಿರುವೆ ನಾ
ಈ ಜಗದಲ್ಲೇ ನೀ ವಿಸ್ಮಯ
ಹೇಯ್ ಬಾ ಒಪ್ಪಿಕೊ ಪ್ರೀತಿಯ... 

ದೇವರು ವರವನು ಕೊಟ್ರೇ
ನಾ ನಿನ್ನೇ ಕೋರುವೆ ಚೆಲುವೆ...
ಓ. ನಿದಿರೆಯ ಒಳಗೂ ನಿನ್ನ
ನೆರಳನ್ನೇ ಸೇರುವೆ ಚೆಲುವೆ...
ಓ. ತಿಂಗಳಿಗೆ ಕಂಗಳ ಬರೆದು
ತಂಗಾಳಿಗೆ ತುಟಿಗಳ ಬರೆದು
ಮುಂಜಾನೆಗೆ ನಗುವನು ಬರೆದು
ಮುಸ್ಸಂಜೆಗೆ ಲಜ್ಜೆಯ ಬರೆದು
ಪ್ರಕೃತಿಯಲಿ ಕಂಡೆ ನಿನ್ನನ್ನೇ 

ಓ... ದೇವರು ವರವನು ಕೊಟ್ರೇ
ನಾ ನಿನ್ನೇ ಕೋರುವೆ ಚೆಲುವೆ
ದೇವರು ವರವನು ಕೊಟ್ರೇ
ನಾ ನಿನ್ನೇ ಕೋರುವೆ ಚೆಲುವೆ...


********************************************************************************

ತಿರುಪತಿ ತಿರುಮಲ

ಸಾಹಿತ್ಯ: ಕೆ. ಕಲ್ಯಾಣ್ 
ಗಾಯಕರು: ಅಶೋಕ್ ಶರ್ಮಾ 

ತಿರುಪತಿ ತಿರುಮಲ ವೆಂಕಟೇಶಾ
ಸ್ವಲ್ಪ ಕಿವಿ ಕೊಟ್ಟು ಕೇಳೋ ಇಲ್ಲಿ ಒಂದು ನಿಮಿಷ
ಓದದೋನು ನೀನಲ್ಲಾ ದುಡಿಯೋನು ನೀನಲ್ಲಾ
ದುಡ್ಡ ಮಾತ್ರ ಹೆಂಗ ಮಾಡ್ತೀಯೋ ಗೋವಿಂದಾ..

ತಿರುಪತಿ ತಿರುಮಲ ವೆಂಕಟೇಶಾ
ಅದು ಎಷ್ಟು ವರ್ಷದಿಂದ ನಿನ್ನ ಈ ಕಾಯಕ
ಗುಂಡು ಹಾಕೋದ ಬಿಡತೀವಿ ಓಓಓಓಓ
ಗುಂಡು ಹೊಡಿಸಿ ಕೋಳ್ತೀವಿ ಓಓಓಓಓ
ಹುಂಡೀನ ಪಾರ್ಸಲ್ ಮಾಡಯ್ಯಾ ಗೋವಿಂದಾ...

ತಿರುಪತಿ ತಿರುಮಲ ವೆಂಕಟೇಶಾ
ಸ್ವಲ್ಪ ಕಿವಿ ಕೊಟ್ಟು ಕೇಳೋ ಇಲ್ಲಿ ಒಂದು ನಿಮಿಷ

ಸಿನೆಮಾಕ ಹೋದರೂ ಬ್ಯ್ಲಾಕ್ ಟಿಕೇಟು
ಬಿಸಿನೆಸ್ ಅಂದರೂ ಬ್ಯ್ಲಾಕ್ ಮಾರ್ಕೇಟು
ಸಿನೆಮಾಕ ಹೋದರೂ ಬ್ಯ್ಲಾಕ್ ಟಿಕೇಟು
ಬಿಸಿನೆಸ್ ಅಂದರೂ ಬ್ಯ್ಲಾಕ್ ಮಾರ್ಕೇಟು
ರೇಸಿಗೆ ಹೋದರೆ ತಲೆಕೆಟ್ಟು 
ಅಲ್ಲೂ ಬ್ಯ್ಲಾಕ್ ಮನಿ ಒನ್ ಬೈಟೂ
ಶಿಷ್ಯ ಶಿಷ್ಯ ಓಓಓಓಓ
ಇನ್ನೇನೊ ವಿಷ್ಯ ಓಓಓಓಓ
ಶಿಷ್ಯ ಶಿಷ್ಯ ಇನ್ನೇನೊ ವಿಷ್ಯ ಹಿಂಗೆ ಹೋದರೆ 
ಹೆಂಗೊ ಭವಿಷ್ಯ ಗಣಪತಿಗೆ ಅಪ್ಲಿಕೇಶನ್ ಹಾಕಪ್ಪಾ..!
ಡೊಳ್ಳು ಹೊಟ್ಟೆ ಡೊಳ್ಳು ಹೊಟ್ಟೆ ಗಣನಾಯಕ
ಸ್ವಲ್ಪ ನಮಗೂ ಕೂಡ ಕಲಿಸಯ್ಯಾ ನಿನ್ನಕಾಯಕ..

ಸೂಪರಸ್ಟಾರ್ಸು ನಾವಾದರೇ 
ಟಾಕೀಸ್ ತುಂಬಾ ನಿನ್ನ ಸ್ಟ್ಯಾಚು
ಸೂಪರಸ್ಟಾರ್ಸು ನಾವಾದರೇ 
ಟಾಕೀಸ್ ತುಂಬಾ ನಿನ್ನ ಸ್ಟ್ಯಾಚು
ಫೈನಾನ್ಸ್ ಮಿನಿಸ್ಟರ್ಸ ನಾವಾದರೇ 
ನೋಟಲೆಲ್ಲಾ ನಿನ್ನ ಫೊಟೋ
ಗಣಪಾ ಗಣಪಾ ಓಓಓಓಓ
ಒಂದು ಡೀಲು ಗಣಪಾ ಓಓಓಓಓ
ಗಣಪಾ ಗಣಪಾ ಡೀಲು ಗಣಪಾ
ಕೈಲಾಸದಲ್ಲಿ ಫಾರ್ಟಿ ಸಿಕ್ಸ್ಟಿ ಕೊಡಸಪ್ಪಾ
ಪಾರ್ಟೀನ ಕೊಡಸತಿನಪ್ಪಾ ಅಯ್ಯಪ್ಪಾ...

ತಿರುಪತಿ ತಿರುಮಲ ವೆಂಕಟೇಶಾ
ಸ್ವಲ್ಪ ಗಣಪತಿಗೆ ಹೋಗಿ ಹೇಳು ಒಂದು ನಿಮಿಷ
ನಿಮ್ಮಿಂದಲೇ ನಾವು ನಮ್ಮಿಂದಲೇ ನೀವು 
ಹಂಗಾದ್ರೂ ಡವ್ ಯಾಕ್ರಯ್ಯಾ?...

********************************************************************************

ಸಾವಿರ ಕನಸಿನ

ಸಾಹಿತ್ಯ: ಕೆ. ಕಲ್ಯಾಣ್ 
ಗಾಯಕರು: ಉದಿತ್ ನಾರಾಯಣ್, ಮಂಜುಳಾ ಗುರುರಾಜ್ 


ಓ ಓ ಓ ಹೋ ಹೋ ಓ ಓ ಓ ಹೋ ಹೋ
ಲ ಲಾ ಲ ಲಾ ಲ ಲಾ ಲ ಲಾ
ತಂದರಾ ನಾನ ತಂದರಾ ನಾನ

ಸಾವಿರ ಕನಸಿನ ಸುಂದರ ಪದಗಳ
ಹಾಡುವ ಸಮಯವಿದು..
ಮೆಚ್ಚಿದ ಮನಸಿನ ಪ್ರೀತಿಯ ಕದಗಳ
ತೆರೆಯುವ ಹೃದಯವಿದು.
ನಾಳೆ ನಮ್ಮದು ಎಂಬುದೇ
ಕಾಲ ಹಾಡೋ ರೇಡಿಯೋ
ಕೈ ಹಿಡಿಯೋ ಪ್ರೀತಿಯೇ
ನಮ್ಮ ಆನಂದ್ ಆಡಿಯೋ
ಒಲವೇ ಜಗದ ಬೆಳ್ಳಿಯ ಹಬ್ಬ

ಸಾವಿರ ಕನಸಿನ ಸುಂದರ ಪದಗಳ
ಹಾಡುವ ಸಮಯವಿದು..
ಮೆಚ್ಚಿದ ಮನಸಿನ ಪ್ರೀತಿಯ ಕದಗಳ
ತೆರೆಯುವ ಹೃದಯವಿದು

ಲೋಕದಲ್ಲಿ ಪ್ರೇಮಿಗಳಿಲ್ಲ         
ಹೂವಿನಂತೋರು
ಹೂವಿನಂತ ಪ್ರೀತಿಗೆ ಎಂದು     
ಉಸಿರಲೇ ತವರು
ಉಸಿರು ಆಡೋ ಮಾತುಗಳೆಲ್ಲ 
ಯಾರು ಬಲ್ಲೋರು
ಯಾರಿಗಾಗಿ ಪ ತಿಸುುತಿವೋ   
ಅವರೇ ನಮ್ಮೋರು
ಅನುರಾಗ ಒಂದು ಹಾಲುಬೆಳದಿಂಗಳು
ಅಂತರಂಗ ಒಂದು ಅಮೃತ ಮಹಲು
ಒಂದು ಸ್ಪರ್ಶದಲ್ಲಿ ಇರುಳು ಕೂಡಾ ಹಗಲು
ಇದೆ ಪ್ರೇಮಿಗಳ ಜೀವನದ ತಿರುಳು
ಒಂದು ಕೋಟಿ ಜನ್ಮ ಬಂದರುನು
ನಾನೆ ನಿಂಗೆ ಅಂಕಿತಾ..

ಸಾವಿರ ಕನಸಿನ ಸುಂದರ ಪದಗಳ
ಹಾಡುವ ಸಮಯವಿದು..
ಮೆಚ್ಚಿದ ಮನಸಿನ ಪ್ರೀತಿಯ ಕದಗಳ
ತೆರೆಯುವ ಹೃದಯವಿದು.

ನೆನಪು ಒಂದು ಕನ್ನಡಿಯಂತೆ               
ಕನಸು ಕಣ್ ಗಳಿಗೆ
ಕನಸು ಒಂದು ಮುನ್ನುಡಿಯಂತೆ           
ಬದುಕು ಮನಗಳಿಗೆ
ಬದುಕು ಒಂದು ಬಣ್ಣದ ಕವಿತೆ               
ಬೆರೆವ ಕೈಗಳಿಗೆ
ಓss ಬೆರೆವ ಭಾಗ್ಯದ ಭಾಗ್ಯಕೆ ಸೋತೆ   
ನಾನು ನಿನ್ನೊಳಗೆ
ಒಂದು ಬೊಗಸೆಯ ಪ್ರೀತಿಯಿಂದ ಜೀವನ
ಒಂದು ಜೀವನವೇ ಪ್ರೀತಿ ಎಂಬ ಗಾಯನ
ಪ್ರತಿ ಪ್ರೇಮಿಗಳ ಹೃದಯದ ಕಂಪನ
ಪ್ರತಿ ಪ್ರೇಮಿಗಳ ಹೃದಯಕು ಔತಣ
ಒಂದು ಕೋಟಿ ತಾಜಿಮಹಲ್ 
ಒಂದು ಆಣಿ ಮಾತಲ್ಲಿ..

ಸಾವಿರ ಕನಸಿನ ಸುಂದರ ಪದಗಳ 
ಹಾಡುವ ಸಮಯವಿದು..
ಮೆಚ್ಚಿದ ಮನಸಿನ ಪ್ರೀತಿಯ ಕದಗಳ 
ತೆರೆಯುವ ಹೃದಯವಿದು.
ನಾಳೆ ನಮ್ಮದು ಎಂಬುದೇ 
ಕಾಲ ಹಾಡೋ ರೇಡಿಯೋ
ಕೈ ಹಿಡಿಯೋ ಪ್ರೀತಿಯೇ 
ನಮ್ಮ ಆನಂದ್ ಆಡಿಯೋ
ಒಲವೇ ಜಗದ ಬೆಳ್ಳಿಯ ಹಬ್ಬ

ಸಾವಿರ ಕನಸಿನ ಸುಂದರ ಪದಗಳ 
ಹಾಡುವ ಸಮಯವಿದು..
ಮೆಚ್ಚಿದ ಮನಸಿನ ಪ್ರೀತಿಯ ಕದಗಳ 
ತೆರೆಯುವ ಹೃದಯವಿದು.

********************************************************************************

ಸ್ಟೈಲಾ ಮಾಡೆಲ್

ಸಾಹಿತ್ಯ: ಕೆ. ಕಲ್ಯಾಣ್ 
ಗಾಯಕರು: ಹೇಮಂತ್

ಹೇ ಹೇ ಹೇ ಹೇ ಹೇ ಹೇ ಹೇ ಹೇ
ಹೇ ಹೇ ಹೇ ಹೇ ಹೇ ಹೇ ಹೇ ಹೇ

ಸ್ಟೈಲಾ ಮಾಡೆಲ್ ಸೆಕ್ಸಿ ಫೋಕಸ್ 
ಸ್ಟೈಲಾ ಮಾಡೆಲ್ ಸೆಕ್ಸಿ ಫೋಕಸ್ 
ಸ್ವಿಮ್ಮಿಂಗ್ ಸೂಟಿನ ವಯ್ಯಾರಿ 
ಮಾರ್ಟಿನ್ ಸ್ಟ್ರಕ್ಚರ್ ಮೆಡೋನ್ನಾ ಪಿಕ್ಚರ್ 
ಟೀನೇಜಗೊಬ್ಬಳೇ ಮದನಾರಿ 
ಅಮ್ಮಾ ಜುಮ್ಮಾ ಹಮ್ಮಾ ಬಾಮ್ಮಾ
ಆ ಆ ಆ ಆ....

ಮಿಸ್ ವರ್ಲ್ಡು ಸ್ಪರ್ಧೆಗೆ ಹೋದರೆ ಜಡ್ಜಿಗೆ ಜ್ವರ ಗ್ಯಾರಂಟಿ
ಟೈಟಾನಿಕ್ ಹೀರೋನ ಕಂಡರೂ ಪೇಶಂಟ್ ಆಗೋದು ಗ್ಯಾರಂಟಿ
ಸ್ವಿಮಸೂಟು ರತಿಯು ಇವಳು ಪ್ರೈಫ್ರೂಟು ಟೇಸ್ಟಿನವಳು
ತೆಂಡೂಲ್ಕರ್ ಸಿಕ್ಸರಿಗಿಂತ ಟೆನ್ ಪರ್ಸೆಂಟ್ ಸೆಕ್ಸಿನವಳು
ಓಡಾಡೋಕ್ ಇವಳು ಹೋದರೆ ಓಲಿಂಪಿಕ್ಸೆ ಇವಳ ಹಿಂದೆ

ಸ್ಟೈಲಾ ಮಾಡೆಲ್ ಸೆಕ್ಸಿ ಫೋಕಸ್ 
ಸ್ವಿಮ್ಮಿಂಗ್ ಸೂಟಿನ ವಯ್ಯಾರಿ 
ಮಾರ್ಟಿನ್ ಸ್ಟ್ರಕ್ಚರ್ ಮೆಡೋನ್ನಾ ಪಿಕ್ಚರ್ 
ಟೀನೇಜಗೊಬ್ಬಳೇ ಮದನಾರಿ 
ನಾರಿ ಚೋರಿ ಯಾರೀ ಪ್ಯಾರಿ

ರಾಕೆಟ್ನ ಸೊಂಟವ ತಾಕಲು ಬ್ರಹ್ಮನು ಹುಟ್ಟುವನು ಮತ್ತೆ
ನಿನ್ನಂತ ಲೇಡಿ ಲಾಡೆನ್ ಸಿಕ್ಕರೆ ಮೈಜುಮ್ ಅನ್ನುತ್ತೆ
ಎಮ್ಟಿವಿ ಮಾಡೆಲ್ಸ್ ಆದರೂ ನಿನ್ನ ಮುಂದೆ ನೂಡಲ್ಸೆ
ಕಿಂಗಡಮ್ಮೆ ಬರಕೋಡತೀನಿ ಕ್ವೀನ್ ಆಗಿ ನೀ ಪ್ರೀತ್ಸೆ
ಓಓ ನಿನ್ನಿಂದ ಬರಬಹುದೇನೆ ವರ್ಲ್ಡು ವರ್ಲ್ಡು ವಾರು

ಸ್ಟೈಲಾ ಮಾಡೆಲ್ ಸೆಕ್ಸಿ ಫೋಕಸ್ 
ಸ್ವಿಮ್ಮಿಂಗ್ ಸೂಟಿನ ವಯ್ಯಾರಿ 
ಮಾರ್ಟಿನ್ ಸ್ಟ್ರಕ್ಚರ್ ಮೆಡೋನ್ನಾ ಪಿಕ್ಚರ್ 
ಟೀನೇಜಗೊಬ್ಬಳೇ ಮದನಾರಿ 
ಅಮ್ಮಾ ಜುಮ್ಮಾ ಹಮ್ಮಾ ಬಾಮ್ಮಾ

******************************************************************************

ತಕಧಿಮಿ ತಕಧಿಮಿ

ಸಾಹಿತ್ಯ: ಕೆ. ಕಲ್ಯಾಣ್ 
ಗಾಯಕರು: ಉದಿತ್ ನಾರಾಯಣ್

ತಕಧಿಮಿ ತಕಧಿಮಿ ದಂತದ ಗೊಂಬೆ 
ಸೌಂದರ್ಯದಲಿ ರಂಭೆಗೂ ರಂಭೆ 
ಮಿರ್ ಮಿರ ಮಿನುಗುವ ಮಾವಿನ ಕೊಂಬೆ
ರಸಿಕರ ಪಾಲಿಗೆ ರಸದ ಲಿಂಬೆ
ಮಿರ್ ಮಿರ ಮಿನುಗುವ ಮಾವಿನ ಕೊಂಬೆ
ರಸಿಕರ ಪಾಲಿಗೆ ರಸದ ಲಿಂಬೆ
ರಾಜಕುಮಾರಿಯೇ ಚಮ್ ಚಮ್ ಚಕೋರಿಯೇ 
ಕೋಮಲಾಂಗಿಯೇ ಕೋಲ್ಮಿಂಚು ರಾಣಿಯೇ
ನೀ ನಮಗೆ ಇಷ್ಟ ಕಣಮ್ಮಿ ನಮ್ ಮನಸು ನಿಂದೆ ಕಣಮ್ಮಿ
ನೀ ನಮಗೆ ಇಷ್ಟ ಕಣಮ್ಮಿ ನಮ್ ಮನಸು ನಿಂದೆ ಕಣಮ್ಮಿ

ತಕಧಿಮಿ ತಕಧಿಮಿ ದಂತದ ಗೊಂಬೆ 
ಸೌಂದರ್ಯದಲಿ ರಂಭೆಗೂ ರಂಭೆ 
ಮಿರ್ ಮಿರ ಮಿನುಗುವ ಮಾವಿನ ಕೊಂಬೆ
ರಸಿಕರ ಪಾಲಿಗೆ ರಸದ ಲಿಂಬೆ

ಕಂಡ ಒಡನೆ ಅಲ್ಲೆ ಶುರುವಾಯಿತು ಕಲರವ
ಪ್ರತಿ ನೆನಪಿನಲ್ಲಿ ಕೂಡ ಎದೆಯಲ್ಲೂ ಕುವಕುವ
ನಾನೆಲ್ಲಿ ನೋಡಲಲ್ಲಿ ಪ್ರತಿಬಿಂಬ ನಿನ್ನದೇ
ಯಾವ ಮಾತು ಕೇಳಿ ಬರಲಿ ಪ್ರತಿಧ್ವನಿಯು ನಿನ್ನದೆ
ಅದು ಯಾವುದಮ್ಮ ಚಿನ್ನ ನಿನ್ನ ಸೇರೋ ಶುಭದಿನ
ಎದೆಯಾಳ ಪಾರಿವಾಳವಾಗಿ ಹಾರೋ ಶುಭದಿನ
ನೀ ನಮಗೆ ಇಷ್ಟ ಕಣಮ್ಮೀ ನಮ್ಮ ಮನಸು ನಿಂದೆ ಕಣಮ್ಮೀ

ತಕಧಿಮಿ ತಕಧಿಮಿ ದಂತದ ಗೊಂಬೆ 
ಸೌಂದರ್ಯದಲಿ ರಂಭೆಗೂ ರಂಭೆ 
ಮಿರ್ ಮಿರ ಮಿನುಗುವ ಮಾವಿನ ಕೊಂಬೆ
ರಸಿಕರ ಪಾಲಿಗೆ ರಸದ ಲಿಂಬೆ ಏ ಏ ಏ ಏ

ಶಾಕುಂತಲೆಗೂ ಚೆಂದ ನಿನ್ನ ನಗುವಿನಂದವೂ
ಆ ಬೆಂಡೆಕಾವುಕೆಲ್ಲ ನೀನಂತೆ ಸೋತೆಯೂ
ಈ ಜಗದ ಸೃಷ್ಠಿಯೆಲ್ಲಾ ನಿನ್ನ ರೆಪ್ಪೆಯೊಳಗಿದೆ
ನಿನ್ನ ಪ್ರೇಮ ದೃಷ್ಠಿ ಮಾತ್ರ ನನ್ನೆದೆಯ ಒಳಗಿದೆ
ಅದು ಎಷ್ಟು ಯುಗವೇ ಬರಲಿ ಮತ್ತೆ ಹುಟ್ಟಿ ಬರುವೆ ನಾ
ಪ್ರತಿಯೊಂದು ಹೆಜ್ಜೆಯಲ್ಲು ಹೃದಯ ಮೀಟುತಿರುವೆ ನಾ
ನೀ ನಮಗೆ ಇಷ್ಟ ಕಣಮ್ಮೀ ನಮ್ಮ ಮನಸು ನಿಂದೆ ಕಣಮ್ಮೀ

ತಕಧಿಮಿ ತಕಧಿಮಿ ದಂತದ ಗೊಂಬೆ 
ಸೌಂದರ್ಯದಲಿ ರಂಭೆಗೂ ರಂಭೆ 
ಮಿರ್ ಮಿರ ಮಿನುಗುವ ಮಾವಿನ ಕೊಂಬೆ
ರಸಿಕರ ಪಾಲಿಗೆ ರಸದ ಲಿಂಬೆ ಏ ಏ ಏ ಏ
ರಾಜಕುಮಾರಿಯೇ ಚಮ್ ಚಮ್ ಚಕೋರಿಯೇ 
ಕೋಮಲಾಂಗಿಯೇ ಕೋಲ್ಮಿಂಚು ರಾಣಿಯೇ
ನೀ ನಮಗೆ ಇಷ್ಟ ಕಣಮ್ಮಿ ನಮ್ ಮನಸು ನಿಂದೆ ಕಣಮ್ಮಿ
ನೀ ನಮಗೆ ಇಷ್ಟ ಕಣಮ್ಮಿ ನಮ್ ಮನಸು ನಿಂದೆ ಕಣಮ್ಮಿ

******************************************************************************

ಸಿಕ್ಸ್ಟೀನ್ ಇಯರ್ ಊರ್ವಶಿ

ಸಾಹಿತ್ಯ: ಕೆ. ಕಲ್ಯಾಣ್ 
ಗಾಯಕರು: ಸುರೇಶ್ ಪೀಟರ್

ಸಿಕ್ಸ್ಟೀನ್ ಸೆವೆಂಟಿನ್
ಸಿಕ್ಸ್ಟೀನ್ ಇಯರ್ ಊರ್ವಶಿ
ಕಂಡ ಕೂಡಲೇ ದಿಲ್ಖುಷಿ
ಆದರೂ ಜಂಭ ಕೋಳಿಯ ಜಂಭ
ಹೇ ಹೇ ಹೇ ಬಾ ಬಾ ಬಾ




******************************************************************************

No comments:

Post a Comment