ಚೈತ್ರದ ಪ್ರೇಮಾಂಜಲಿಯ
ನಿರ್ದೇಶನ: ಎಸ್.ನಾರಾಯಣ್
ಸಾಹಿತ್ಯ: ಹಂಸಲೇಖ
ಸಂಗೀತ: ಹಂಸಲೇಖ
ಗಾಯಕರು : ಎಸ್. ಪಿ. ಬಾಲಸುಬ್ರಮಣ್ಯಂ
ನಟನೆ: ರಘುವೀರ್, ಶ್ವೇತಾ, ಲೋಕೇಶ್
ಚೈತ್ರದ ಪ್ರೇಮಾಂಜಲಿಯ ಸುಮ ಸುಮ ಸುಮ
ಗಂಧದ ಪರಿಮಳಕಿಂತ ಘಮ ಘಮ ಘಮ
ಚೈತ್ರದ ಪ್ರೇಮಾಂಜಲಿಯ ಸುಮ ಸುಮ ಸುಮ
ಗಂಧದ ಪರಿಮಳಕಿಂತ ಘಮ ಘಮ ಘಮ
ಚೈತ್ರದ ಪ್ರೇಮಾಂಜಲಿಯ ಸುಮ ಸುಮ ಸುಮ
ಗಂಧದ ಪರಿಮಳಕಿಂತ ಘಮ ಘಮ ಘಮ
ಮಲ್ಲಿಗೆಯ ಮಳ್ಳಿ ಚೆಲುವಿನಲಿ ಮೆಲ್ಲುಲಿಯ ಮೆಲ್ಲ ನಗುವಿನಲಿ
ಸಂಪಿಗೆಯ ಮೆಲ್ಲ ನಗುವಿನಲಿ ತಂಪಿಡುವ ಶಶಿಯ ವದನದಲಿ
ಮಾತನಾಡೆ ಮಂದಾರ ನಿನ್ನ ಹೆಸರೆ ಶ್ರುಂಗಾರ
ಕನಕಾಂಬರಿ ಓ ನೀಲಾಂಬರಿ ನಿನಗೆ ನೀ ಸರಿ
ಸೇವಂತಿಗೆ ಸೂಜೀಮಲ್ಲಿಗೆ
ಗಿಡವಾಗಿ ಎಲೆಯಾಗಿ ನಿನಗೆನಾ ಸರಿ
ಚೈತ್ರದ ಪ್ರೇಮಾಂಜಲಿಯ ಸುಮ ಸುಮ ಸುಮ
ಗಂಧದ ಪರಿಮಳಕಿಂತ ಘಮ ಘಮ ಘಮ
ಸಂಪಿಗೆಯ ಮೆಲ್ಲ ನಗುವಿನಲಿ ತಂಪಿಡುವ ಶಶಿಯ ವದನದಲಿ
ಮಾತನಾಡೆ ಮಂದಾರ ನಿನ್ನ ಹೆಸರೆ ಶ್ರುಂಗಾರ
ಕನಕಾಂಬರಿ ಓ ನೀಲಾಂಬರಿ ನಿನಗೆ ನೀ ಸರಿ
ಸೇವಂತಿಗೆ ಸೂಜೀಮಲ್ಲಿಗೆ
ಗಿಡವಾಗಿ ಎಲೆಯಾಗಿ ನಿನಗೆನಾ ಸರಿ
ಚೈತ್ರದ ಪ್ರೇಮಾಂಜಲಿಯ ಸುಮ ಸುಮ ಸುಮ
ಗಂಧದ ಪರಿಮಳಕಿಂತ ಘಮ ಘಮ ಘಮ
ಕಣ್ಣಲ್ಲಿ ನೀನು ಕಮಲವತಿ ಒಡಲಲ್ಲಿ ತಾಳೆ ಪುಷ್ಪವತಿ
ಭಯವೇಕೆ ಅಂಜು ಮಲ್ಲಿಗೆಯೆ ಬಾ ಏಳು ಸುತ್ತು ಮಲ್ಲಿಗೆಯೆ
ಪಾರಿಜಾತ ವರವಾಗು ಸೂರ್ಯ ಕಾಂತಿ ಬೆಳಕಾಗು
ಮಧು ತುಂಬಿದ ಗುಲಾಬಿ ಸುಮ ನಿನಗೆ ನೀ ಸಮ
ನಶೆ ಏರಿಸೊ ಓ ರಜನಿ ಸುಮ
ಹೂದಾನಿ ಅಭಿಮಾನಿ ನಿನಗೆ ನಾ ಸಮ
ಚೈತ್ರದ ಪ್ರೇಮಾಂಜಲಿಯ ಸುಮ ಸುಮ ಸುಮ
ಗಂಧದ ಪರಿಮಳಕಿಂತ ಘಮ ಘಮ ಘಮ
ಭಯವೇಕೆ ಅಂಜು ಮಲ್ಲಿಗೆಯೆ ಬಾ ಏಳು ಸುತ್ತು ಮಲ್ಲಿಗೆಯೆ
ಪಾರಿಜಾತ ವರವಾಗು ಸೂರ್ಯ ಕಾಂತಿ ಬೆಳಕಾಗು
ಮಧು ತುಂಬಿದ ಗುಲಾಬಿ ಸುಮ ನಿನಗೆ ನೀ ಸಮ
ನಶೆ ಏರಿಸೊ ಓ ರಜನಿ ಸುಮ
ಹೂದಾನಿ ಅಭಿಮಾನಿ ನಿನಗೆ ನಾ ಸಮ
ಚೈತ್ರದ ಪ್ರೇಮಾಂಜಲಿಯ ಸುಮ ಸುಮ ಸುಮ
ಗಂಧದ ಪರಿಮಳಕಿಂತ ಘಮ ಘಮ ಘಮ
ಡ್ಯಾನ್ಸ್ ಡ್ಯಾನ್ಸ್
ಸಾಹಿತ್ಯ & ಸಂಗೀತ - ಹಂಸಲೇಖ
ಗಾಯಕ - ಎಸ್.ಪಿ.ಬಾಲಸುಬ್ರಹ್ಮಣ್ಯಂ

ಡ್ಯಾನ್ಸ್ ಡ್ಯಾನ್ಸ್ ರಿಬಬ್ಬಾ ಡ್ಯಾನ್ಸ್
ಗೆದ್ದೋನ್ ನಂಬರ್ ಒನ್ ಒನ್
ಬಿದ್ದೋನ್ ಎಣ್ಣೆ ಟಿನ್ ಟಿನ್
ಲಕಿ ಲಕಿ ಹೋಯ್ ಲಕಿ ಲಕಿ
ಸಿಕ್ಕೋದು ಸೂಪರ್ ಚಾನ್ಸ್ | ಯಪ್ಪಾ
ಡ್ಯಾನ್ಸ್ ಡ್ಯಾನ್ಸ್ ರಿಬಬ್ಬಾ ಡ್ಯಾನ್ಸ್ ||ಪ||
ಜಯವು ಎಂಬುದು ರವಿರವಿ
ಅದರ ಕಿರಣವು ಉರಿಉರಿ
ಜಯದ ಹೊಗಳಿಕೆ ಸವಿಸವಿ
ತಿರುಗೋ ತಲೆಗದು ಗರಿಗರಿ
ಫೈಲ್ ಫೈಲ್ ಫೈಲ್ ಮೆರೆದರೆ
ಫೈಲ್ ಫೈಲ್ ಫೈಲ್
ಜಯವು ಬಂದರೆ ಮುಚ್ಚಿರಿ
ಮುಚ್ಚಿ ಕಣ್ಣನು ತೆರೆಯಿರಿ
ನಾನೇ ಎಂಬುದ ಮರೆಯಿರಿ
ಕುಳಿತು ಮಲಗಲು ಕಲಿಯಿರಿ
ಪಾಸ್ ಪಾಸ್ ಪಾಸ್ ಕಲಿತರೆ
ಪಾಸ್ ಪಾಸ್ ಪಾಸ್ ||೧||
ಅದರ ಕಿರಣವು ಉರಿಉರಿ
ಜಯದ ಹೊಗಳಿಕೆ ಸವಿಸವಿ
ತಿರುಗೋ ತಲೆಗದು ಗರಿಗರಿ
ಫೈಲ್ ಫೈಲ್ ಫೈಲ್ ಮೆರೆದರೆ
ಫೈಲ್ ಫೈಲ್ ಫೈಲ್
ಜಯವು ಬಂದರೆ ಮುಚ್ಚಿರಿ
ಮುಚ್ಚಿ ಕಣ್ಣನು ತೆರೆಯಿರಿ
ನಾನೇ ಎಂಬುದ ಮರೆಯಿರಿ
ಕುಳಿತು ಮಲಗಲು ಕಲಿಯಿರಿ
ಪಾಸ್ ಪಾಸ್ ಪಾಸ್ ಕಲಿತರೆ
ಪಾಸ್ ಪಾಸ್ ಪಾಸ್ ||೧||
ಗೆದ್ದೋನ್ ನಂಬರ್ ಒನ್ ಒನ್ ಬಿದ್ದೋನ್ ಎಣ್ಣೆ ಟಿನ್ ಟಿನ್
ಲಕಿ ಲಕಿ ಲಕಿ ಲಕಿ ಅರೆ ಸಿಕ್ಕೋದು ಸೂಪರ್ ಚಾನ್ಸ್ | ಯಪ್ಪಾ ||ಪ||
ಮೊದಲ ಸ್ಥಾನವು ಬಿಗಿ ಬಿಗಿ ಉಸಿರು ಹಿಡಿಯುತ ಜಿಗಿ ಜಿಗಿ
ದಿನವು ಬೆವರನು ತೆಗಿ ತೆಗಿ ಜಡವ ಹೊರಗಡೆ ಉಗಿ ಉಗಿ
ರಾಂಗ್ ರಾಂಗ್ ರಾಂಗ್ ಮರೆತರೆ ರಾಂಗ್ ರಾಂಗ್ ರಾಂಗ್
ಕಷ್ಟಪಟ್ಟರೆ ಸಾಧನೆ ಅದರ ಹಿಂದಿದೆ ಶೋಧನೆ
ಮರೆಯೋ ಸೋಲಿನ ಯೋಚನೆ ಗೆಲುವೇ ಸೋಲಿನ ನೆರೆಮನೆ
ಬ್ಯಾಂಗ್ ಬ್ಯಾಂಗ್ ಬ್ಯಾಂಗ್ ಗೆದ್ದರೆ ಬ್ಯಾಂಗ್ ಬ್ಯಾಂಗ್ ಬ್ಯಾಂಗ್ ||೨||
ದಿನವು ಬೆವರನು ತೆಗಿ ತೆಗಿ ಜಡವ ಹೊರಗಡೆ ಉಗಿ ಉಗಿ
ರಾಂಗ್ ರಾಂಗ್ ರಾಂಗ್ ಮರೆತರೆ ರಾಂಗ್ ರಾಂಗ್ ರಾಂಗ್
ಕಷ್ಟಪಟ್ಟರೆ ಸಾಧನೆ ಅದರ ಹಿಂದಿದೆ ಶೋಧನೆ
ಮರೆಯೋ ಸೋಲಿನ ಯೋಚನೆ ಗೆಲುವೇ ಸೋಲಿನ ನೆರೆಮನೆ
ಬ್ಯಾಂಗ್ ಬ್ಯಾಂಗ್ ಬ್ಯಾಂಗ್ ಗೆದ್ದರೆ ಬ್ಯಾಂಗ್ ಬ್ಯಾಂಗ್ ಬ್ಯಾಂಗ್ ||೨||
ಗೆದ್ದೋನ್ ನಂಬರ್ ಒನ್ ಒನ್ ಬಿದ್ದೋನ್ ಎಣ್ಣೆ ಟಿನ್ ಟಿನ್
ಲಕಿ ಲಕಿ ಲಕಿ ಲಕಿ ಹಾಯ್ ಸಿಕ್ಕೋದು ಸೂಪರ್ ಚಾನ್ಸ್ | ಯಪ್ಪಾ ||ಪ||
*********************************************************************************
ನನ್ನವರೇ
ಗಾಯನ: ಎಸ್.ಪಿ.ಬಿ, ಮಂಜುಳ ಗುರುರಾಜ
ನನ್ನವರೇ ನನಗೆ ಕೊನೆಗೆ ಮುಳ್ಳಾದರೆದೆಗೆ
ಕನಸುಗಳು ಕರಗಿದವು ಆಸೆಗಳು ಸೊರಗಿದವು ಮರುಗಿದವು
ಅಂಜಿಕೆಯೆ ನನಗೆ ಕೊನೆಗೆ ಉರುಳಾಯಿತೆನಗೆ
ನಂಬಿದರೆ ನಿಜವುಂಟು ಕಾಣಿಸದ ಕಥೆಯುಂಟು ವ್ಯಥೆಯುಂಟು
ಕನಸುಗಳು ಕರಗಿದವು ಆಸೆಗಳು ಸೊರಗಿದವು ಮರುಗಿದವು
ಅಂಜಿಕೆಯೆ ನನಗೆ ಕೊನೆಗೆ ಉರುಳಾಯಿತೆನಗೆ
ನಂಬಿದರೆ ನಿಜವುಂಟು ಕಾಣಿಸದ ಕಥೆಯುಂಟು ವ್ಯಥೆಯುಂಟು
ವಿನೋದದ ಆಲಿಂಗನ ವಿಲಾಸದ ಆ ಚುಂಬನ
ನಾ ಮೈ ಮರೆತೆನು ಕರಿನಾಗದ ಗೆಳೆತನದೊಳಗೆ
ನಾಕಣ್ತೆರೆಯೆಯುವ ಮೊದಲೇರಿತು ವಿಷ ಮೈಯೊಳಗೆ
ನಾ ಮೈ ಮರೆತೆನು ಕರಿನಾಗದ ಗೆಳೆತನದೊಳಗೆ
ನಾಕಣ್ತೆರೆಯೆಯುವ ಮೊದಲೇರಿತು ವಿಷ ಮೈಯೊಳಗೆ
ಅಪಾಯದ ಬಲಾಬಲ ದುರಾಸೆಯ ಫಲಾಫಲ
ಅದರರಿವಿಲ್ಲದೆ ಬರಿ ಪ್ರೇಮದ ಸವಿಯನು ಸವಿದೆ
ದೇವರೆ.. ಈ ಅತಿ ಆಸೆಗೆ ಮಸಿಯನು ಬಳಿದೆ
ವಿವಾಹವೇ ಪ್ರವಾಹವೊ ವಿಮೋಚನೆ ಇಲ್ಲಿಲ್ಲವೊ
ಈ ಸುಳಿಅಲೆಯಲಿ ಎದುರೀಜಲು ಬಲ ಕುಸಿದಿದೆಯೊ
ಈ ಸುಳಿಅಲೆಯಲಿ ಎದುರೀಜಲು ಬಲ ಕುಸಿದಿದೆಯೊ
ನಾ ಮುಳುಗಿರುವೆಡೆ ನಿಜವೆಲ್ಲವು ಒಳಗಡಗಿದೆಯೊ
ಓ ಸಾವೆ ನೀ ದಯಾಮಯ ಈ ನೋವಿಗೆ ತೋರು ದಯ
ಈ ಬದುಕಿನ ಜೊತೆ ಬಯಸುವವರು ನಯ ವಂಚಕರೆ
ಆ ಸವಿನುಡಿಯಲಿ ವಿಷ ಉಣಿಸುವ ಕೊಲೆಪಾತಕರೆ
*********************************************************************************
ಓ ಕೋಗಿಲೆ ನಾ ಹಾಡಲೆ
ಸಾಹಿತ್ಯ & ಸಂಗೀತ: ಹಂಸಲೇಖ
ಗಾಯನ : ಎಸ್. ಪಿ. ಬಾಲಸುಬ್ರಹ್ಮಣ್ಯಂ
ಓ ಕೋಗಿಲೆ ಕೋಗಿಲೆ ಕೋಗಿಲೆ
ನಾ ಹಾಡಲೆ ಹಾಡಲೆ ಹಾಡಲೆ
ಭೂತಾಯಮ್ಮನ ಕೈಗೂ ಸಮ್ಮನ
ಭೂತಾಯಮ್ಮನ ಕೈಗೂ ಸಮ್ಮನ
ಇದೇ ಮೋದಲು ಬರೀ ತೊದಲು ಕೇಳೆ ಹಾಡುವೆ
ಇದೇ ಮೋದಲು ಬರೀ ತೊದಲು ಕೇಳೆ ಹಾಡುವೆ
ಇದೇ ಮೋದಲು ಬರೀ ತೊದಲು ಕೇಳೆ ಹಾಡುವೆ
ಓ ಕೋಗಿಲೆ ನಾ ಹಾಡಲೆ
ಒ೦ಟಿ ನಾನು ಮರಗಳೆ ಒ೦ಟಿ ನಾನು ಎಲೆಗಳೆ
ಕೊಕ್ಕಿನಲ್ಲಿ ತಿ೦ಡಿಯ ಗುಟುಕು ನೀಡೊ ಹಕ್ಕಿಯೆ
ಸ್ವಲ್ಪ ಉಳಿಸಿ ತಿನಿಸೆಯಾ .. ನನಗೂ.. ಹಸಿವಿದೆ
ಕಾಣೆ ತಾಯಿ ಲಾಲಿಯ ಕಾಣೆ ತ೦ದೆ ಪ್ರೀತಿಯ
ತಾಯ ಮಡಿಲ ಗಿಳಿಗಳೆ ತ೦ದೆ ನೆರಳ ಮರಿಗಳೆ
ಬರಲೇ ನಾನು ಈಗಲೆ ನಿಮ್ಮಾ.. ಗೂಡಿಗೆ
ಹಾರಲು ಬಾರದು ಆತುರ ತಾಳದು
ಆನ೦ದದೀ ರಾಗವೆ ಸಾಗದು
ಭೂತಾಯಮ್ಮನ ಕೈಗೂ ಸಮ್ಮನ
ಕೊಕ್ಕಿನಲ್ಲಿ ತಿ೦ಡಿಯ ಗುಟುಕು ನೀಡೊ ಹಕ್ಕಿಯೆ
ಸ್ವಲ್ಪ ಉಳಿಸಿ ತಿನಿಸೆಯಾ .. ನನಗೂ.. ಹಸಿವಿದೆ
ಕಾಣೆ ತಾಯಿ ಲಾಲಿಯ ಕಾಣೆ ತ೦ದೆ ಪ್ರೀತಿಯ
ತಾಯ ಮಡಿಲ ಗಿಳಿಗಳೆ ತ೦ದೆ ನೆರಳ ಮರಿಗಳೆ
ಬರಲೇ ನಾನು ಈಗಲೆ ನಿಮ್ಮಾ.. ಗೂಡಿಗೆ
ಹಾರಲು ಬಾರದು ಆತುರ ತಾಳದು
ಆನ೦ದದೀ ರಾಗವೆ ಸಾಗದು
ಭೂತಾಯಮ್ಮನ ಕೈಗೂ ಸಮ್ಮನ
ಓ ಕೋಗಿಲೆ ನಾ ಹಾಡಲೆ
ಓ ಗಿಲ್ ಗಿಲಿಯಾ
ಯಾವೋನಪ್ಪ ಯಾವೋನು ತಗಡಿನ್ ಡಬ್ಬಿ ತ೦ದೋನು
ವಟಮಟ ನೋಡೋನು ಪಟಗೀಟ ತೆಗ್ಯೋನು
ಪಟ್ಟಾಪಟ್ಟಿ ಅ೦ಗ್ಡಿಯೋನು ರೈಲ್ವೆಪಟ್ಟಿ ಕ೦ಬ್ಯೋನು
ಹೋಟ್ಲಲ್ ಬ೦ದ ಬೂಟ್ಸೋನು ಬನ್ರೆ ಬನ್ರೆ ಜಾಡ್ಸೋಣು
ಯಾವೋನಪ್ಪ ಯಾವೋನು ತಗಡಿನ್ ಡಬ್ಬಿ ತ೦ದೋನು
ವಟಮಟ ನೋಡೋನು ಪಟಗೀಟ ತೆಗ್ಯೋನು
ಪಟ್ಟಾಪಟ್ಟಿ ಅ೦ಗ್ಡಿಯೋನು ರೈಲ್ವೆಪಟ್ಟಿ ಕ೦ಬ್ಯೋನು
ಹೋಟ್ಲಲ್ ಬ೦ದ ಬೂಟ್ಸೋನು ಬನ್ರೆ ಬನ್ರೆ ಜಾಡ್ಸೋಣು
ಹರಿವ ನೀರು ನಿಲ್ಲದು ಇಲ್ಲಿ ಚಿ೦ತೆ ಉಳಿಯದು
ತೊಳೆದು ಎಲ್ಲ ಕಹಿಗಳ ಸವಿದು ಕಾಡ ಸಿಹಿಗಳ
ಎದೆಯ ತು೦ಬ ಹಸಿರಿನ ಬೆಳೆಯೇ... ತೂರಿದೆ
ಬೆಳ್ಳಿ ಹಕ್ಕಿ ಕಿರುದನಿ ಗಿರಿಗಳಿ೦ದ ಮರುದನಿ
ರೆಕ್ಕೆ ಇರದ ಹುಲಿಗಳು ಅ೦ಕೆ ಇರದ ಕಲಿಗಳು
ಕೂರಮೃಗದ ಸೈನ್ಯವೇ ಮರೆಯಲ್ಲೇ ಅಡಗಿದೆ
ಎದೆಯಲಿ ನಡುಕವು ಜೊತೆಯಲಿ ಪುಳಕವು
ಆನ೦ದದೀ ರಾಗವೇ ಸಾಗದು
ಭೂತಾಯಮ್ಮನ ಕೈಗೂ ಸಮ್ಮನ
ತೊಳೆದು ಎಲ್ಲ ಕಹಿಗಳ ಸವಿದು ಕಾಡ ಸಿಹಿಗಳ
ಎದೆಯ ತು೦ಬ ಹಸಿರಿನ ಬೆಳೆಯೇ... ತೂರಿದೆ
ಬೆಳ್ಳಿ ಹಕ್ಕಿ ಕಿರುದನಿ ಗಿರಿಗಳಿ೦ದ ಮರುದನಿ
ರೆಕ್ಕೆ ಇರದ ಹುಲಿಗಳು ಅ೦ಕೆ ಇರದ ಕಲಿಗಳು
ಕೂರಮೃಗದ ಸೈನ್ಯವೇ ಮರೆಯಲ್ಲೇ ಅಡಗಿದೆ
ಎದೆಯಲಿ ನಡುಕವು ಜೊತೆಯಲಿ ಪುಳಕವು
ಆನ೦ದದೀ ರಾಗವೇ ಸಾಗದು
ಭೂತಾಯಮ್ಮನ ಕೈಗೂ ಸಮ್ಮನ
ಇದೇ ಮೊದಲು ಬರೀ ತೊದಲು ಕೇಳೆ ಹಾಡುವೆ
ಇದೇ ಮೊದಲು ಬರೀ ತೊದಲು ಕೇಳೆ ಹಾಡುವೆ
ಇದೇ ಮೊದಲು ಬರೀ ತೊದಲು ಕೇಳೆ ಹಾಡುವೆ
ಓ ಕೋಗಿಲೆ ನಾ ಹಾಡಲೆ
*********************************************************************************
ಓ ಮಲೆನಾಡಿನ
ಸಾಹಿತ್ಯ & ಸಂಗೀತ: ಹಂಸಲೇಖ
ಗಾಯನ : ಎಸ್. ಪಿ. ಬಾಲಸುಬ್ರಹ್ಮಣ್ಯಂ
ಓ ಮಲೆನಾಡಿನ ಮೈಸಿರಿಯೆ
ಆ ರವಿ ಜಾರಿತು ಹೂಗರಿಯೆ
ನನ್ನಯ ಆಣೆಗೆ ನೀಡಿರೆ ಸಾಕ್ಷಿಗೆ
ನೀಡುವೆ ನನ್ನೆನಾ ಮೆಚ್ಚಿನ ಚೆಲುವೆಗೆ
ಓ ಮಲೆನಾಡಿನ ಮೈಸಿರಿಯೆ
ಆ ರವಿ ಜಾರಿತು ಹೂಗರಿಯೆ
ನನ್ನಯ ಆಣೆಗೆ ನೀಡಿರೆ ಸಾಕ್ಷಿಗೆ
ನೀಡುವೆ ನನ್ನೆನಾ ಮೆಚ್ಚಿನ ಚೆಲುವಗೆ
ಓ ಮಲೆನಾಡಿನ ಮೈಸಿರಿಯೆ
ಆ ರವಿ ಜಾರಿತು ಹೂಗರಿಯೆ
ಆ ರವಿ ಜಾರಿತು ಹೂಗರಿಯೆ

ನೀಡುವೆ ನನ್ನೆನಾ ಮೆಚ್ಚಿನ ಚೆಲುವೆಗೆ
ಓ ಮಲೆನಾಡಿನ ಮೈಸಿರಿಯೆ
ಆ ರವಿ ಜಾರಿತು ಹೂಗರಿಯೆ
ನನ್ನಯ ಆಣೆಗೆ ನೀಡಿರೆ ಸಾಕ್ಷಿಗೆ
ನೀಡುವೆ ನನ್ನೆನಾ ಮೆಚ್ಚಿನ ಚೆಲುವಗೆ
ಓ ಮಲೆನಾಡಿನ ಮೈಸಿರಿಯೆ
ಆ ರವಿ ಜಾರಿತು ಹೂಗರಿಯೆ
ಈ ಗ೦ಗೆಯ ಆಣೆಗೆ ಕೈಕೊಡು
ಪನ್ನೀರಿನ ಮನಸಲಿ ಬರೆದಿಡು
ಅ೦ತರಗ೦ಗೆ ನೀನು ನನ್ನ ಪ್ರೇಮಕೆ
ಮ೦ದದ ಹೂವು ನಾನು ನಿನ್ನ
ಸ್ನೇಹಕೆ ಮರೆಯಬೇಡವೆ
ಓ ಮಲೆನಾಡಿನ ಮೈಸಿರಿಯೆ
ಆ ರವಿ ಜಾರಿತು ಹೂಗರಿಯೆ
ಪನ್ನೀರಿನ ಮನಸಲಿ ಬರೆದಿಡು
ಅ೦ತರಗ೦ಗೆ ನೀನು ನನ್ನ ಪ್ರೇಮಕೆ
ಮ೦ದದ ಹೂವು ನಾನು ನಿನ್ನ
ಸ್ನೇಹಕೆ ಮರೆಯಬೇಡವೆ
ಓ ಮಲೆನಾಡಿನ ಮೈಸಿರಿಯೆ
ಆ ರವಿ ಜಾರಿತು ಹೂಗರಿಯೆ
ದೇವರ ಗುಡಿಯ೦ತೆ ವೇದದ ನುಡಿಯ೦ತೆ
ನಾದದ ಅಲೆಯ೦ತೆ ಪ್ರೇಮವು
ಮೇಘದ ಧ್ವನಿಯ೦ತೆ ವರ್ಷದ ಶರದ೦ತೆ
ಧರಣಿಯ ಹಸಿರ೦ತೆ ಪ್ರೇಮವು
ಈ ದೇವರ ಆಣೆಗೆ ಕೈಕೊಡು
ಈ ಜ್ಯೋತಿಯ ಕಣ್ಣಲಿ ನೆನಪಿಡು
ಆತ್ಮಕ್ಕೆ ಸಾವು ಇಲ್ಲ ಎ೦ದು ತೋರಿಸು
ಪ್ರೇಮಕ್ಕೆ ಸಾವು ಇಲ್ಲ ಎ೦ದು
ಪ್ರೀತಿಸು ಮರೆಯಬೇಡವೊ
ಓ ಮಲೆನಾಡಿನ ಮೈಸಿರಿಯೆ
ಆ ರವಿ ಜಾರಿತು ಹೂಗರಿಯೆ
ನನ್ನಯ ಆಣೆಗೆ ನೀಡಿರೆ ಸಾಕ್ಷಿಗೆ
ನೀಡುವೆ ನನ್ನೆನಾ ಮೆಚ್ಚಿನ ಚೆಲುವೆಗೆ
ಓ ಮಲೆನಾಡಿನ ಮೈಸಿರಿಯೆ
ಆ ರವಿ ಜಾರಿತು ಹೂಗರಿಯೆ
ನನ್ನಯ ಆಣೆಗೆ ನೀಡಿರೆ ಸಾಕ್ಷಿಗೆ
ನೀಡುವೆ ನನ್ನೆನಾ ಮೆಚ್ಚಿನ ಚೆಲುವಗೆ
ಓ ಮಲೆನಾಡಿನ ಮೈಸಿರಿಯೆ
ಆ ರವಿ ಜಾರಿತು ಹೂಗರಿಯೆ
ನಾದದ ಅಲೆಯ೦ತೆ ಪ್ರೇಮವು
ಮೇಘದ ಧ್ವನಿಯ೦ತೆ ವರ್ಷದ ಶರದ೦ತೆ
ಧರಣಿಯ ಹಸಿರ೦ತೆ ಪ್ರೇಮವು
ಈ ದೇವರ ಆಣೆಗೆ ಕೈಕೊಡು
ಈ ಜ್ಯೋತಿಯ ಕಣ್ಣಲಿ ನೆನಪಿಡು
ಆತ್ಮಕ್ಕೆ ಸಾವು ಇಲ್ಲ ಎ೦ದು ತೋರಿಸು
ಪ್ರೇಮಕ್ಕೆ ಸಾವು ಇಲ್ಲ ಎ೦ದು
ಪ್ರೀತಿಸು ಮರೆಯಬೇಡವೊ
ಓ ಮಲೆನಾಡಿನ ಮೈಸಿರಿಯೆ
ಆ ರವಿ ಜಾರಿತು ಹೂಗರಿಯೆ
ನನ್ನಯ ಆಣೆಗೆ ನೀಡಿರೆ ಸಾಕ್ಷಿಗೆ
ನೀಡುವೆ ನನ್ನೆನಾ ಮೆಚ್ಚಿನ ಚೆಲುವೆಗೆ
ಓ ಮಲೆನಾಡಿನ ಮೈಸಿರಿಯೆ
ಆ ರವಿ ಜಾರಿತು ಹೂಗರಿಯೆ
ನನ್ನಯ ಆಣೆಗೆ ನೀಡಿರೆ ಸಾಕ್ಷಿಗೆ
ನೀಡುವೆ ನನ್ನೆನಾ ಮೆಚ್ಚಿನ ಚೆಲುವಗೆ
ಓ ಮಲೆನಾಡಿನ ಮೈಸಿರಿಯೆ
ಆ ರವಿ ಜಾರಿತು ಹೂಗರಿಯೆ
*********************************************************************************
Wow.... ಮಸ್ತ್ ಲಿರಿಕ್ಸ್..
ReplyDelete