ಹಬ್ಬ ಹಬ್ಬ
ಚಲನ ಚಿತ್ರ: ಹಬ್ಬ (1999)
ನಿರ್ದೇಶನ: ಡಿ. ರಾಜೇಂದ್ರ ಬಾಬು
ಸಾಹಿತ್ಯ & ಸಂಗೀತ: ಹಂಸಲೇಖ
ಗಾಯಕರು: ರಾಜೇಶ್ ಕೃಷ್ಣನ್, ನಂದಿತಾ, ರಮೇಶ್ ಚಂದ್ರ
ನಟನೆ: ವಿಷ್ಣುವರ್ಧನ್, ಅಂಬರೀಷ್, ದೇವರಾಜ್,
ಶಶಿಕುಮಾರ್, ರಾಮ್ ಕುಮಾರ್, ಜಯಪ್ರದಾ,
ಊರ್ವಶಿ, ಕಸ್ತೂರಿ, ಚಾರುಲತಾ, ವಿಜಯಲಕ್ಶ್ಮೀ
ಶಶಿಕುಮಾರ್, ರಾಮ್ ಕುಮಾರ್, ಜಯಪ್ರದಾ,
ಊರ್ವಶಿ, ಕಸ್ತೂರಿ, ಚಾರುಲತಾ, ವಿಜಯಲಕ್ಶ್ಮೀ
ಹಬ್ಬ ಹಬ್ಬ ಹಬ್ಬ ಹಬ್ಬ ಹಬ್ಬ ಹಬ್ಬ ಹಬ್ಬ ಹಬ್ಬ
ಇದು ಕರುನಾಡ ಮನೆ ಮನೆ ಹಬ್ಬ
ಇದು ಚಾಮುಂಡಿ ತಾಯಿ ತವರ ಹಬ್ಬ
ವಿಜಯದ ಹಬ್ಬ ಆಯುಧ ಪೂಜ ಹಬ್ಬ
ಇದು ಉಸಿರ ತನ್ನುಸಿರ ತೆತ್ತ ದಸರ ಹಬ್ಬ
ಇದು ಮೈಸೂರ ಸೀಮೆ ರಾಜ ಹಬ್ಬ
ಇದು ಕುಣಿದಾಡೊ ಮಕ್ಕಳ ಬೊಂಬೆ ಹಬ್ಬ
ವಿಜಯದ ಹಬ್ಬ ಅಯುಧ ಪೂಜ ಹಬ್ಬ
ಇದು ಮನೆಗೆ ಮನೆ ಮನೆಗೆ ಹೋಗಿ ಕರಿಯೋ ಹಬ್ಬ
ಇದು ಕರುನಾಡ ಮನೆ ಮನೆ ಹಬ್ಬ
ಇದು ಚಾಮುಂಡಿ ತಾಯಿ ತವರ ಹಬ್ಬ
ವಿಜಯದ ಹಬ್ಬ ಆಯುಧ ಪೂಜ ಹಬ್ಬ

ಇದು ಮೈಸೂರ ಸೀಮೆ ರಾಜ ಹಬ್ಬ
ಇದು ಕುಣಿದಾಡೊ ಮಕ್ಕಳ ಬೊಂಬೆ ಹಬ್ಬ
ವಿಜಯದ ಹಬ್ಬ ಅಯುಧ ಪೂಜ ಹಬ್ಬ
ಇದು ಮನೆಗೆ ಮನೆ ಮನೆಗೆ ಹೋಗಿ ಕರಿಯೋ ಹಬ್ಬ
ವಿದ್ಯೆಗೆಲ್ಲ ಮಹರಾಣಿ ವಾಣಿ ವರವಿ ನಾಪಾಣಿ
ಹಸೆಮೇಲೆ ಹೂಮಳೆ ತೊಟ್ಟು ನಲಿಯೋ ಸಂಭ್ರಮ
ದುಷ್ಟ ದಮನೆ ಸ್ತ್ರೀ ದುರ್ಗ ಶಾಂತ ಮೂರ್ತಿ ತಾನಾಗಿ
ನಗುವಿನ ಒಡವೇನ ತೊಟ್ಟು ನಲಿಯೋ ಸಂಭ್ರಮ
ರಂಗೋಲಿ ಚಿತ್ತಾರ ಮತಾಪು ದೀಪ ವಿಹಾರ
ಬಳೆಗಳ ಹಬ್ಬ ಹೆಣ್ಣು ಮಕ್ಕಳ ಹಬ್ಬ
ಇದು ಮನೆಗೆ ಮನೆ ಮನೆಗೆ ಹೋಗಿ ಕರಿಯೋ ಹಬ್ಬ
ಹಸೆಮೇಲೆ ಹೂಮಳೆ ತೊಟ್ಟು ನಲಿಯೋ ಸಂಭ್ರಮ
ದುಷ್ಟ ದಮನೆ ಸ್ತ್ರೀ ದುರ್ಗ ಶಾಂತ ಮೂರ್ತಿ ತಾನಾಗಿ
ನಗುವಿನ ಒಡವೇನ ತೊಟ್ಟು ನಲಿಯೋ ಸಂಭ್ರಮ
ರಂಗೋಲಿ ಚಿತ್ತಾರ ಮತಾಪು ದೀಪ ವಿಹಾರ
ಬಳೆಗಳ ಹಬ್ಬ ಹೆಣ್ಣು ಮಕ್ಕಳ ಹಬ್ಬ
ಇದು ಮನೆಗೆ ಮನೆ ಮನೆಗೆ ಹೋಗಿ ಕರಿಯೋ ಹಬ್ಬ
ಹೊನ್ನಮಳೆಯ ಸುರಿಸಿದ ನಮ್ಮ ವಿಜಯನಗರದ
ವೈಭವ ನೆನೆಯುವ ಕನ್ನಡಿಗರ ಸಂಭ್ರಮ
ಕಲೆಗು ಖಡ್ಗಕ್ಕೂ ಮೈತ್ರಿ ತಂದು ಕೊಡೋ ನವರಾತ್ರಿ
ಇತಿಹಾಸ ಮರುವೇಷ ತೊಟ್ಟು ನಲಿವ ಸಂಭ್ರಮ
ಕಠಾರಿ ಪೆಠಾರಿ ನಗಾರಿ ಜಂಬು ಸವಾರಿ
ಜನಗಳ ಹಬ್ಬ ಹತ್ತು ದಿನಗಳ ಹಬ್ಬ
ಇದು ದಾನ ಅಭಿಮಾನ ನೀಡೊ ಹಬ್ಬಗಳ ಹಬ್ಬ
ವೈಭವ ನೆನೆಯುವ ಕನ್ನಡಿಗರ ಸಂಭ್ರಮ
ಕಲೆಗು ಖಡ್ಗಕ್ಕೂ ಮೈತ್ರಿ ತಂದು ಕೊಡೋ ನವರಾತ್ರಿ
ಇತಿಹಾಸ ಮರುವೇಷ ತೊಟ್ಟು ನಲಿವ ಸಂಭ್ರಮ
ಕಠಾರಿ ಪೆಠಾರಿ ನಗಾರಿ ಜಂಬು ಸವಾರಿ
ಜನಗಳ ಹಬ್ಬ ಹತ್ತು ದಿನಗಳ ಹಬ್ಬ
ಇದು ದಾನ ಅಭಿಮಾನ ನೀಡೊ ಹಬ್ಬಗಳ ಹಬ್ಬ
ಜೇನಿನ ಗೂಡು ನಾವೆಲ್ಲಾ
ಸಾಹಿತ್ಯ: ಹಂಸಲೇಖ
ಸಂಗೀತ: ಹಂಸಲೇಖ
ಒ ಒ ಒ ಒ ಒ ಒಓಓಓ ಒ ಒ ಒ ಒ ಒ ಒಓಓಓ
ಜೇನಿನ ಗೂಡು ನಾವೆಲ್ಲಾ ಬೇರೇ ಆದರೆ ಜೇನಿಲ್ಲಾ
ಜೇನಿನ ಗೂಡು ನಾವೆಲ್ಲಾ ಬೇರೇ ಆದರೆ ಜೇನಿಲ್ಲಾ
|| ಜೇನಿನ ಗೂಡು ||
ಜೇನಿನ ಗೂಡು ನಾವೆಲ್ಲಾ ಬೇರೇ ಆದರೆ ಜೇನಿಲ್ಲಾ
ಜೇನಿನ ಗೂಡು ನಾವೆಲ್ಲಾ ಬೇರೇ ಆದರೆ ಜೇನಿಲ್ಲಾ
|| ಜೇನಿನ ಗೂಡು ||
ಮನಗಳು ಸೇರಿದರೇ ತುಂಬಿದ ಮನೆಯಂತೇ
ಮನಗಳು ಸೇರಿದರೇ ತುಂಬಿದ ಮನೆಯಂತೇ
ತುಂಬಿದ ಮನೆಯವನೇ
ಧರೆಯಲಿ ನಗುವಿನ ದೊರೆಯಂತೇ
|| ಜೇನಿನ ಗೂಡು ||
ಬದುಕಿನಾ ಬೆಂಡಿಗೇ ಅಂಟಿರೋ ಜೋಳದಾ
ಕಾಳುಗಳಾ ನೋಡು ಹೌದಪ್ಪಾ
ಸಿಪ್ಪೆಯಾ ಸೂರಿನಲ್ಲಿ ಸಹಜೀವನ ಮಾಡೋ
ಸಿಪ್ಪೆಯಾ ಸೂರಿನಲ್ಲಿ ಸಹಜೀವನ ಮಾಡೋ
ಅವರೆ ಕಾಳುಗಳಾ ನೋಡು ಶಹಬ್ಬಾಸ್
ಭೂಮಿಗೇ ಒಟ್ಟಿಗೇ ಬಂದು,
ಭೂಮಿಗೇ ಒಟ್ಟಿಗೇ ಬಂದು,
ಬೆಂದರೇ ಒಟ್ಟಿಗೇ ಬೆಂದು ಆಹಾ
ಬಾಳೋ ದವಸದಂತೆ ನಾವೂಊಊ ಅದಪ್ಪಾ
ಬಾಳೆಯಂತೆ, ಹಲಸಿನಂತೆ,
ಬಾಳೋ ದವಸದಂತೆ ನಾವೂಊಊ ಅದಪ್ಪಾ
ಬಾಳೆಯಂತೆ, ಹಲಸಿನಂತೆ,
ದಾಳಿಂಬೆಯಂತೆ ನಾವುಉಉ ವಾರೆ ವಾಹ್
ಒಗ್ಗಟ್ಟೇ ಸೃಷ್ಟಿ ನಿಯಮಾ
ರುಚಿಗಳು ಸೇರಿದರೇ , ಅಭಿರುಚಿ ಇದೆಯಂತೇ
ರುಚಿಗಳು ಸೇರಿದರೇ , ಅಭಿರುಚಿ ಇದೆಯಂತೇ
ಅಭಿರುಚಿ ಬೆರೆತವರೇ,
ಬಾಳಿನ ಅಡುಗೆಯ ದೊರೆಯಂತೇ
।। ಜೇನಿನ ಗೂಡು ||
ಒಗ್ಗಟ್ಟೇ ಸೃಷ್ಟಿ ನಿಯಮಾ
ರುಚಿಗಳು ಸೇರಿದರೇ , ಅಭಿರುಚಿ ಇದೆಯಂತೇ
ರುಚಿಗಳು ಸೇರಿದರೇ , ಅಭಿರುಚಿ ಇದೆಯಂತೇ
ಅಭಿರುಚಿ ಬೆರೆತವರೇ,
ಬಾಳಿನ ಅಡುಗೆಯ ದೊರೆಯಂತೇ
।। ಜೇನಿನ ಗೂಡು ||
ಕಹಿಯನ್ನೆಲ್ಲಾ ಮರೆಯಬೇಕಯ್ಯಾ
ಅದ ಮರೆಯೋದಕ್ಕೂ ಮರೆವು ಬೇಕಯ್ಯಾ
ಮರೆಯೋ ವರವೇ ಇಲ್ಲದಿದ್ದರೇ
ಮನಸ್ಸೇ ಕುಡಿದಾ ಮಂಗನಂತಯ್ಯಾ
ಕೆದಕಿ ಕೆದಕಿ, ಕೆದಕಿ ಕೆದಕಿ,
ದ್ವೇಷ ಬರಿಸುವುದಂತಯ್ಯಾ
ಮನಸ್ಸು ಮುರಿದು ಹೋಗಲು
ಕಹಿಯೇ ಮೂಲವಯ್ಯಾ
ತುಂಬಿದ ಮನೆಯು ಒಡೆದುಹೋಗಲೂ
ಕಹಿ ನೆನಪೇ ನೆಪವಯ್ಯಾ
ಮರೆವಿನ ಮರೆಯಲ್ಲೇ ಕ್ಷಮೆಯು ಇದೆಯಂತೇ
ಮರೆವಿನ ಮರೆಯಲ್ಲೇ ಕ್ಷಮೆಯು ಇದೆಯಂತೇ
ಕ್ಷಮಿಸಲು ಕಲಿತವನೇ ಕಹಿಯನು ಸಿಹಿ ಎನ್ನುವನಂತೆ
|| ಜೇನಿನ ಗೂಡು ||
ಅದ ಮರೆಯೋದಕ್ಕೂ ಮರೆವು ಬೇಕಯ್ಯಾ
ಮರೆಯೋ ವರವೇ ಇಲ್ಲದಿದ್ದರೇ
ಮನಸ್ಸೇ ಕುಡಿದಾ ಮಂಗನಂತಯ್ಯಾ
ಕೆದಕಿ ಕೆದಕಿ, ಕೆದಕಿ ಕೆದಕಿ,
ದ್ವೇಷ ಬರಿಸುವುದಂತಯ್ಯಾ
ಮನಸ್ಸು ಮುರಿದು ಹೋಗಲು
ಕಹಿಯೇ ಮೂಲವಯ್ಯಾ
ತುಂಬಿದ ಮನೆಯು ಒಡೆದುಹೋಗಲೂ
ಕಹಿ ನೆನಪೇ ನೆಪವಯ್ಯಾ
ಮರೆವಿನ ಮರೆಯಲ್ಲೇ ಕ್ಷಮೆಯು ಇದೆಯಂತೇ
ಮರೆವಿನ ಮರೆಯಲ್ಲೇ ಕ್ಷಮೆಯು ಇದೆಯಂತೇ
ಕ್ಷಮಿಸಲು ಕಲಿತವನೇ ಕಹಿಯನು ಸಿಹಿ ಎನ್ನುವನಂತೆ
|| ಜೇನಿನ ಗೂಡು ||
ಮನೆಯೆ ನಮ್ಮ ಜೀವಾ,
ಗುರು ಹಿರಿಯರೆನ್ನ ದೈವಾ
ಗುರು ಹಿರಿಯರೆನ್ನ ದೈವಾ
ದೈವ ಪಾದಗಳಿಗೇ ನಮ್ಮ ಪ್ರೀತಿಯೆಂಬ ಹೂವಾ
ಹಳೆಯ ಬೇರಿನ ಮಡಿಲಲ್ಲಿ,
ಹೊಸ ಚಿಗುರುಗಳು ಚಿಗುರೊಡೆವಂತೆ
ನಡೆಯಬೇಕು ಎಲ್ಲಾ ಕಿರಿಯರು,
ಹಿರಿಯರು ಹೇಳಿದ ನುಡಿಯಂತೆ
ಉಲ್ಲಾಸಾ, ಉಲ್ಲಾಸಾ,
ಹಿರಿಯರ ನೆರಳಲಿ ವಿಕಾಸಾ
ಹಿರಿಯರ ನೆರಳಲಿ ವಿಕಾಸಾ
ಮನಗಳು ಸೇರಿದರೇ ತುಂಬಿದ ಮನೆಯಂತೇ
ಮನಗಳು ಸೇರಿದರೇ ತುಂಬಿದ ಮನೆಯಂತೇ
ತುಂಬಿದ ಮನೆಯವನೇ
ಧರೆಯಲಿ ನಗುವಿನ ದೊರೆಯಂತೇ
ಪ್ರೀತಿಯ ಗೂಡು ನಾವೆಲ್ಲಾ
ಬೇರೇ ಆದರೆ ಒಲವಿಲ್ಲಾ || ಜೇನಿನ ಗೂಡು ||
No comments:
Post a Comment