Friday, October 5, 2018

ಗೌರಮ್ಮ (2005)


ಒಂದು ಸಾರಿ ಹೇಳಿಬಿಡು

ಚಲನ ಚಿತ್ರ: ಗೌರಮ್ಮ (2005)
ನಿರ್ದೇಶನ: ನಾಗಣ್ಣ 
ಸಂಗೀತ: ಎಸ್.ಎ.ರಾಜ್‌ಕುಮಾರ್
ಸಾಹಿತ್ಯ: ಕವಿರಾಜ್   
ಗಾಯಕರು: ಉದಿತ್ ನಾರಾಯಣ್, ಚಿತ್ರಾ
ನಟನೆ: ಉಪೇಂದ್ರ, ರಮ್ಯಾ, ಶ್ರೀನಿವಾಸ್ ಮೂರ್ತಿ 


ಒಂದು ಸಾರಿ ಹೇಳಿಬಿಡು  
ಕಾಡ ಬೇಡ ಹೇಳಿಬಿಡು
ನನ್ನನು ನೀನು ಪ್ರೀತಿಸುವೆ 
ಅನ್ನೊ ನಿಜವನ್ನು ಹೇಳಿಬಿಡು
ನನ್ನಾಣೆ ನಿನ್ನಾಣೆ ಇಟ್ಟು ನೀನು  
ನನ್ನಾಸೆ ನಿನ್ನಾಸೆ ಒಂದೇನೆ ಎಂದು
ನನ್ನಾಣೆ ನಿನ್ನಾಣೆ ಇಟ್ಟು ನೀನು  
ನನ್ನಾಸೆ ನಿನ್ನಾಸೆ ಒಂದೇನೆ ಎಂದು
ಮುಚ್ಚಿ ಇಟ್ಟ ಮಾತು ಹೇಳು ನೀ 

ಒಂದು ಸಾರಿ ಹೇಳಿಬಿಡು 
ಕಾಡ ಬೇಡ ಹೇಳಿಬಿಡು
ನನ್ನನು ನೀನು ಪ್ರೀತಿಸುವೆ 
ಅನ್ನೊ ನಿಜವನ್ನು ಹೇಳಿಬಿಡು

ಹೂವಿನ ಹಾಗೆ ಕಂಡರು ಕೂಡ ಮುಳ್ಳಿನ ಹಂದರ ಪ್ರೀತಿ ಇದು
ಮುಟ್ಟಲು ಹೋದರೆ ಚುಚ್ಚುವುದಮ್ಮ ನೋಡಲು ಮಾತ್ರವೆ ಚೆಂದವದು
ಬದುಕು ಎಂಬುದೆ ಹೀಗೇ ಕಣೋ ಹೂವು ಮುಳ್ಳಿನ ಹಾದಿ ಕಣೋ 
ಬದುಕು ಎಂಬುದೆ ಹೀಗೇ ಕಣೋ ಹೂವು ಮುಳ್ಳಿನ ಹಾದಿ ಕಣೋ 
ಹೆದರದೇ ಮುನ್ನುಗ್ಗಲು ಸಿಗುವವು ಆ ಹೂಗಳು
ಗೊತ್ತಿದ್ದು ಎಲ್ಲವು ತಪ್ಪನ್ನು ಮಾಡುವ
ಪ್ರೀತಿ ಆಸೆಯು ಬೇಡ ಬಿಡು

ಒಂದು ಸಾರಿ ಹೇಳಿಬಿಡು ಕಾಡ ಬೇಡ ಹೇಳಿಬಿಡು
ನನ್ನನು ನೀನು ಪ್ರೀತಿಸುವೆ ಅನ್ನೊ ನಿಜವನ್ನು ಹೇಳಿಬಿಡು

ಕುರುಡು ಪ್ರೀತಿಯ ಬೆನ್ನಿಗೆ ಬಿದ್ದು ಸಾಗುವೆ ಎಲ್ಲಿಗೆ ಎಚ್ಚರಿಕೆ
ಇರುಳು ಕಾಣುವ ಬಾವಿಗೆ ಏಕೆ ಹಗಲು ಬೀಳುವ ಕಾತರಿಕೆ
ಕುರುಡು ಪ್ರೀತಿಯು ಅಲ್ಲ ಕಣೋ ಕುರುಡು ಎಂದಿಗೂ ನಾವೇ ಕಣೋ
ಕುರುಡು ಪ್ರೀತಿಯು ಅಲ್ಲ ಕಣೋ ಕುರುಡು ಎಂದಿಗೂ ನಾವೇ ಕಣೋ
ಒಳಗಿನಾ ಈ ಕಣ್ಣನು ತೆರೆಸುವಾ ಜ್ಯೋತಿ ಅದು
ನಾವಂದುಕೊಳ್ಳುವ ಹಾಗೇನೆ ಯಾವುದು
ಇಲ್ಲೆಂದು ಆಗದು ಗೊತ್ತಾ ಇದು

ಒಂದು ಸಾರಿ ಹೇಳಿಬಿಡು ಕಾಡ ಬೇಡ ಹೇಳಿಬಿಡು
ನನ್ನನು ನೀನು ಪ್ರೀತಿಸುವೆ ಅನ್ನೊ ನಿಜವನ್ನು ಹೇಳಿಬಿಡು
ನನ್ನಾಣೆ ನಿನ್ನಾಣೆ ಇಟ್ಟು ನೀನು ನನ್ನಾಸೆ ನಿನ್ನಾಸೆ ಒಂದೇನೆ ಎಂದು
ನನ್ನಾಣೆ ನಿನ್ನಾಣೆ ಇಟ್ಟು ನೀನು ನನ್ನಾಸೆ ನಿನ್ನಾಸೆ ಒಂದೇನೆ ಎಂದು
ಮುಚ್ಚಿಇಟ್ಟ ಮಾತು ಹೇಳು ನೀ  

*********************************************************************************

No comments:

Post a Comment