Saturday, October 6, 2018

ಬುಲ್ ಬುಲ್ (2013)

ಜಗದಲ್ಲಿರೋ

ಚಲನ ಚಿತ್ರ: ಬುಲ್ ಬುಲ್ (2013)
ನಿರ್ದೇಶನ: ಎಂ. ಡಿ. ಶ್ರೀಧರ್ 
ಸಾಹಿತ್ಯ: 
ಸಂಗೀತ: ವಿ. ಹರಿಕೃಷ್ಣ 
ಗಾಯಕರು: ಸೋನು ನಿಗಮ್
ನಟನೆ: ದರ್ಶನ್, ರಚಿತಾ ರಾಮ್, ಅಂಬರೀಷ್ 


ಜಗದಲ್ಲಿರೋ ಹುಚ್ಚರಲ್ಲಿ ನಾನು ಒಬ್ಬ 
ನಿನಗಂತಲೇ ಹುಟ್ಟಿದವ ನಾನೆ ಒಬ್ಬ
ನೀ ನನ್ನವಳೇನ್ನುವುದೆ ನನಗೆ ಜಂಬ 
ಜೋಪಾನ ಮಾಡುವೆನು ತುಂಬಾ ತುಂಬಾ
ಜೀವಮಾನವೆಲ್ಲ ನೀಡು ಪ್ರೀತಿ ಸಾಲ 
ಇನ್ನೇನು ಬೇಡ ಇಷ್ಟೇ ಬೇಡಿಕೆ

ಜಗದಲ್ಲಿರೋ ಹುಚ್ಚರಲ್ಲಿ ನಾನು ಒಬ್ಬ 
ನಿನಗಂತಲೇ ಹುಟ್ಟಿದವ ನಾನೆ ಒಬ್ಬ

ಬಾ ಕೂರು ಒರಗಿ ಸಮಯ ಹಾಗೆ ಜರುಗಿ 
ಯುಗಾನೆ ಜಗಾನೇ ಕೊನೆ ಆಗುವರೆಗೆ
ಇನ್ನೇಕೆ ಒಲವೆ ನಮಗೆ ಬೇರೆ ಗೊಡವೆ 
ಇರೋಣ ಇರೋಣ ಜೊತೆ ಎಂದು ಹೀಗೆ
ಮುಳುಗೋದೆ ಬೇಡಯ್ಯ ರವಿಯೇ ನೀನು 
ದಯಮಾಡಿ ಬರಬೇಡ ಇರುಳೆ ಇನ್ನು
ಈ ಪ್ರೇಮಿಯ ವಿನಂತಿಯ ನಿ ನಡೆಸಿಕೊಡುವೆಯ

ಜಗದಲ್ಲಿರೋ ಹುಚ್ಚರಲ್ಲಿ ನಾನು ಒಬ್ಬ 
ನಿನಗಂತಲೇ ಹುಟ್ಟಿದವ ನಾನೆ ಒಬ್ಬ

ಆತಂಕ ಸಹಜ ನಿಜ ನಾನೊಬ್ಬ ಮನುಜ 
ತಪ್ಪೇನು ಒಪ್ಪೆನು ಇರಬೇಡ ದೂರ
ಈ ಲೊಕದಗಲ ಇರೋ ಸಂತೋಷ ಸಕಲ 
ತರೋದ ಬಿಡೋದ ನಿನ್ನ ಪಾದದಡಿಗೆ
ಒಂದೊಂದು ಹೆಜ್ಜೆನಾ ಇಡಲು ನೀನು 
ಎಂದೆಂದೂ ಕಾವಲಿಗೆ ಇರುವೆ ನಾನು
ನಿನ್ನ ಹೊಣೆ ನಂದೇ ಕಣೆ ಅದೇನೇ ಅದರೂ

ಜಗದಲ್ಲಿರೋ ಹುಚ್ಚರಲ್ಲಿ ನಾನು ಒಬ್ಬ 
ನಿನಗಂತಲೇ ಹುಟ್ಟಿದವ ನಾನೆ ಒಬ್ಬ
ನೀ ನನ್ನವಳೇನ್ನುವುದೆ ನನಗೆ ಜಂಬ 
ಜೋಪಾನ ಮಾಡುವೆನು ತುಂಬಾ ತುಂಬಾ
ಜೀವಮಾನವೆಲ್ಲ ನಿಡು ಪ್ರೀತಿ ಸಾಲ 
ಇನ್ನೇನು ಬೇಡ ಇಷ್ಟೇ ಬೇಡಿಕೆ

*********************************************************************************

No comments:

Post a Comment