
ತೆರೆದಿದೆ ಮನೆ ಓ..
ಚಲನಚಿತ್ರ: ಹೊಸಬೆಳಕು (1982)ಸಾಹಿತ್ಯ: ಕುವೆಂಪು
ಸಂಗೀತ: ಎಂ. ರಂಗಾ ರಾವ್
ಗಾಯನ: ಎಸ್.ಜಾನಕಿ, ವಾಣಿ ಜಯರಾಮ್
ನಿರ್ದೇಶನ: ದೊರೈ ಭಗವಾನ್
ನಟನೆ: ರಾಜ್ ಕುಮಾರ್, ಸರಿತಾ
ಆ ಆ ಆ ನ ನ .. ಆ ... ಆ ... ಆ ...
ತೆರೆದಿದೆ ಮನೆ ಓ ಬಾ ಅತಿಥಿ
ಆ ... ಆ ... ಆ ...

ತೆರೆದಿದೆ ಮನೆ ಓ ಬಾ ಅತಿಥಿ
ಹೊಸ ಬೆಳಕಿನ ಹೊಸ ಗಾಳಿಯ
ಹೊಸ ಬಾಳನು ತಾ ಅತಿಥಿ
ತೆರೆದಿದೆ ಮನೆ ಓ ಬಾ ಅತಿಥಿ
ಹೊಸ ಬೆಳಕಿನ ಹೊಸ ಗಾಳಿಯ
ಹೊಸ ಬಾಳನು ತಾ ಅತಿಥಿ
ಆವ ರೂಪದೊಳು ಬಂದರು ಸರಿಯೇ
ಆವ ವೇಶದೊಳು ನಿಂದರು ಸರಿಯೇ
ಆವ ರೂಪದೊಳು ಬಂದರು ಸರಿಯೇ
ಆವ ವೇಶದೊಳು ನಿಂದರು ಸರಿಯೇ
ನೇಸರು ದಯದೊಳು ಬಹೆಯ ಬಾ
ತಿಂಗಳಂದದಲಿ ಬಹೆಯ ಬಾ..
ತೆರೆದಿದೆ ಮನೆ ಓ ಬಾ ಅತಿಥಿ
ಹೊಸ ಬೆಳಕಿನ ಹೊಸ ಗಾಳಿಯ
ಹೊಸ ಬಾಳನು ತಾ ಅತಿಥಿ
ಇನ್ತಾದರು ಬಾ ಅಂತಾದರೂ ಬಾ
ಎಂತಾದರು ಬಾ ಬಾ ಬಾ
ಇನ್ತಾದರು ಬಾ ಅಂತಾದರೂ ಬಾ
ಎಂತಾದರು ಬಾ ಬಾ ಬಾ
ಬೇಸರವಿದನು ಸರಿಸುವ ಹೊಸ ಬಾಳ
ಉಸಿರಾಗಿ ಬಾ ಬಾ ಬಾ ..
ತೆರೆದಿದೆ ಮನೆ ಓ ಬಾ ಅತಿಥಿ
ಹೊಸ ಬೆಳಕಿನ ಹೊಸ ಗಾಳಿಯ
ಹೊಸ ಬಾಳನು ತಾ ಅತಿಥಿ
ಕಡಲಾಗಿ ಬಾ.. ಬಾನಾಗಿ ಬಾ..
ಗಿರಿಯಾಗಿ ಬಾ.. ಕಾನಾಗಿ ಬಾ..
ಕಡಲಾಗಿ ಬಾನಾಗಿ ಗಿರಿಯಾಗಿ
ಕಾನಾಗಿ ತೆರೆದಿದೆ ಮನ ಓ .. ಬಾ ..
ಹೊಸ ತಾನದ.. ಹೊಸ ಗಾನದ
ಹೊಸ ತಾನದ.. ಹೊಸ ಗಾನದ
ರಸ ಜೀವವ ತಾ ತಾ ತಾ
ತೆರೆದಿದೆ ಮನೆ ಓ ಬಾ ಅತಿಥಿ
ಹೊಸ ಬೆಳಕಿನ ಹೊಸ ಗಾಳಿಯ
ಹೊಸ ಬಾಳನು ತಾ ಅತಿಥಿ
ಹೊಸ ಬಾಳನು ತಾ ಅತಿಥಿ
ಹೊಸ ಬಾಳನು ತಾ... ಅತಿಥಿ...
********************************************************************************
ಕಣ್ಣೀರ ಧಾರೆ ಇದೇಕೆ
ಸಾಹಿತ್ಯ: ಚಿ. ಉದಯಶಂಕರ್ಗಾಯನ: ಡಾ. ರಾಜ್ ಕುಮಾರ್

ಕಣ್ಣೀರ ಧಾರೆ ಇದೇಕೆ ಇದೇಕೆ
ಕಣ್ಣೀರ ಧಾರೆ ಇದೇಕೆ ಇದೇಕೆ
ನನ್ನೊಲವಿನ ಹೂವೆ ಈ ಶೋಕವೇಕೆ
ನನ್ನೊಲವಿನ ಹೂವೆ ಈ ಶೋಕವೇಕೆ
ಕಣ್ಣೀರ ಧಾರೆ ಇದೇಕೆ ಇದೇಕೆ
ವಿಧಿಯಾಟವೇನು ಬಲ್ಲವರು ಯಾರು
ಮುಂದೇನು ಎಂದು ಹೇಳುವರು ಯಾರು
ವಿಧಿಯಾಟವೇನು ಬಲ್ಲವರು ಯಾರು
ಮುಂದೇನು ಎಂದು ಹೇಳುವರು ಯಾರು
ಬರುವುದು ಬರಲೆಂದು ನಗು ನಗುತ ಬಾಳದೆ
ಬರುವುದು ಬರಲೆಂದು ನಗು ನಗುತ ಬಾಳದೆ
ನಿರಾಸೆ ವಿಷಾದ ಇದೇಕೆ ಇದೇಕೆ
ನಿರಾಸೆ ವಿಷಾದ ಇದೇಕೆ ಇದೇಕೆ
ಕಣ್ಣೀರ ಧಾರೆ ಇದೇಕೆ ಇದೇಕೆ
ಬಾಳೆಲ್ಲ ನನಗೆ ಇರುಳಾದರೇನು
ಜೊತೆಯಾಗಿ ಎಂದೆಂದು ನೀನಿಲ್ಲವೇನು
ಬಾಳೆಲ್ಲ ನನಗೆ ಇರುಳಾದರೇನು
ಜೊತೆಯಾಗಿ ಎಂದೆಂದು ನೀನಿಲ್ಲವೇನು
ನಾನಿನ್ನ ಕಣ್ಣಿಂದ ನೋಡುತಿರೆ ಸೊಗಸೆಲ್ಲ
ನಾನಿನ್ನ ಕಣ್ಣಿಂದ ನೋಡುತಿರೆ ಸೊಗಸೆಲ್ಲ
ನಿನ್ನಲ್ಲಿ ನೋವು ಇದೇಕೆ ಇದೇಕೆ
ನಿನ್ನಲ್ಲಿ ನೋವು ಇದೇಕೆ ಇದೇಕೆ
ಕಣ್ಣೀರ ಧಾರೆ ಇದೇಕೆ ಇದೇಕೆ
ನನ್ನೊಲವಿನ ಹೂವೆ ಈ ಶೋಕವೇಕೆ
ಕಣ್ಣೀರ ಧಾರೆ ಇದೇಕೆ... ಇದೇಕೆ

********************************************************************************
No comments:
Post a Comment