Sunday, March 31, 2019

ದೇವರ ದುಡ್ಡು (1977)



ಚಲನ ಚಿತ್ರ: ದೇವರ ದುಡ್ಡು (1977)
ನಿರ್ದೇಶನ: ಕೆ. ಎಸ್. ಎಲ್. ಸ್ವಾಮಿ 
ಸಾಹಿತ್ಯ: ಆರ್. ಎನ್. ಜಯಗೋಪಾಲ್ 
ಸಂಗೀತ: ರಾಜನ್-ನಾಗೇಂದ್ರ  
ಗಾಯನ: ಎಸ್. ಪಿ. ಬಿ
ನಟನೆ: ರಾಜೇಶ್, ಶ್ರೀನಾಥ್, ಜಯಂತಿ 


ತರೀಕೆರೆ ಏರಿಮೇಲೆ ಮೂರುಕರಿ ಕುರಿಮರಿ
ತರೀಕೆರೆ ಏರಿಮೇಲೆ ಮೂರುಕರಿ ಕುರಿಮರಿ
ಮೇಯ್ತಿತ್ತು  ಹಾಯಾಗ್ ಮೇಯ್ತಿತ್ತು
ತರೀ ಕೆರೆ ಏರಿ ಮೇಲೆ ಮೂರು ಕರಿ ಕುರಿ ಮರಿ
ಮೇಯ್ತಿತ್ತು....ಹಾಯಾಗ್ ಮೇಯ್ತಿತ್ತು....
ತರೀಕೆರೆ ಏರಿಮೇಲೆ ಮೂರುಕರಿ ಕುರಿಮರಿ
ತರೀಕೆರೆಏರಿಮೇಲೆಮೂರುಕರಿಕುರಿಮರಿ
ತರೀಕೆರೆಏರಿಮೇಲೆಮೂರುಕರಿಕುರಿಮರಿ
ಮೇಯ್ತಿತ್ತು....ಹಾ...ಯಾ....ಗಿ.....ಮೇ....ಯ್ತಿ.....ತ್ತು....
ಮೇಯ್ತಿತ್ತು.....ಮೇಯ್ತಿತ್ತು....ಮೇಯ್ತಿತ್ತು 

ಕಬ್ಬಿನ ಗದ್ದೆ ಮಧ್ಯದಲ್ಲಿ ಉಬ್ಬಿದ
ಕೊಬ್ಬಿದ ಗಬ್ಬದ್ ತೋಳ.....  ಊ................
ಕಬ್ಬಿನ ಗದ್ದೆ ಮಧ್ಯದಲ್ಲಿ ಉಬ್ಬಿದ
ಕೊಬ್ಬಿದ ಗಬ್ಬದ್ ತೋಳ
ಕುರಿನ್ ನೋಡಿ ಹಬ್ಬ ಎಂದು
ಕಾಯ್ತಿತ್ತು......ತಿನ್ನೊಕ್ ಕಾಯ್ತಿತ್ತು
ಬಾಯಲ್ ನೀರು ಚಪ್ಪರ್ ಸ್ಕೊಂಡು ಹ ಹ ಹ....
ಕಣ್ಣು ಕಣ್ಣು ಕೆಕ್ಕೆರ್ ಸ್ಕೊಂಡು
ಕಣ್ಣು ಕಣ್ಣು ಕೆಕ್ಕೆರ್ ಸ್ಕೊಂಡು
ಬಾಯಲ್ ನೀರು ಚಪ್ಪರ್ ಸ್ಕೊಂಡು
ಕಣ್ಣು ಕಣ್ಣು ಕೆಕ್ಕೆರ್ ಸ್ಕೊಂಡು
ಕುರಿ ಕಡೆ ನೋಡಿಕೊಂಡು
ಬರ್ತಿತ್ತು.....ತೋಳ ಬರ್ತಿತ್ತು
ಬಾಲ ಗೀಲ ಸೆಟರ್ ಸ್ಕೊಂಡು .....
ಬಾಲ ಗೀಲ ಸೆಟರ್ ಸ್ಕೊಂಡು
ಹಾರೊ ಹೊತ್ಗೇ..........
ಹಾಳು ಸೀನು ಬಂದೋಯ್ತು
ಕಾಲು ಜಾರಿ ತೋಳ ಕೆಳಗ್
ಬಿದ್ದೋಯ್ತು....ಕೆರೆಗ್ ಬಿದ್ದೋಯ್ತು 

ಮೋಡದ್ ಮಧ್ಯ ಗುಡುಗೊ ಹಾಗೆ
ಭೂಮಿಎಲ್ಲ ನಡುಗೊ ಹಾಗೆ
ಮೋಡದ್ ಮಧ್ಯ ಗುಡುಗೊ ಹಾಗೆ
ಭೂಮಿಎಲ್ಲ ನಡುಗೊ ಹಾಗೆ
ಜೋರಾಗ್ ಗರ್ಜನೆ ಮಾಡ್ತಾ
ಸಿಂಹ ಬರ್ತಿತ್ತು....ಹ......ಹಸ್ಕೊಂಡ್ ಬರ್ತಿತ್ತು
ತೇಗಿನ್ ಬಿಟ್ಕೊಂಡ್ ಬರೊ ತೋಳ
ತಿನ್ನೋಕಂತ ಬಿಟ್ಕೊಂಡ್ ಬಾಯಿ ನುಗ್ಗಿತ್ತು
ಸಿಂಹ ತೋಳ ತೋಳ ಸಿಂಹ ಸಿಂಹ
ತೋಳ ತೋಳ ಸಿಂಹ....ಹ.....
ಕುಯ್....ಕುಯ್....ಕುಯ್....ಹೋ.......
ಹೆದರ್ಕೊಂಡು ತೋಳ ಮುದುರ್ಕೊಂಡು ಬಾಲ
ತಪ್ಪಿಸ್ಕೊಂಡು ಓಡೋಯ್ತು.....
ಬೇಡ ಹಾಕಿದ್ ಬಲೆಗ್ ಸಿಂಹ ಸಿಕ್ಬಿತ್ತು.......
ತೋಳ ಓಡೋಯ್ತು......ಸಿಂಹ ಸಿಕ್ಬಿತ್ತು
ಇಷ್ಟೆಲ್ಲ ಆದ್ರೂ....... 

ತರೀಕೆರೆ ಏರಿಮೇಲೆ ಮೂರುಕರಿ ಕುರಿಮರಿ
ಮೇಯ್ತಿತ್ತು  ಹಾಯಾಗ್ ಮೇಯ್ತಿತ್ತು  ರೀ....ರೀ....ರೀ.....
ಪನಿಪಮದಪಗಸ ಸಸದದ ಗಗಗ  ಸಸಸ ಗಗಮದ
ಸಗಸನಿ ದಸಸಸ ದಸಸಸ ದಸಸ ತರಿ ಕೆರೆ  ತ ರಿ ಕೆ ರೆ....

ತರೀಕೆರೆ ಏರಿ ಮೇಲೆ ಮೂರು ಕರಿ ಕುರಿ ಮರಿ ಮೇಯ್ತಿತ್ತು
ಆ........ಆ.......ತ.. ರಿ... ಕೆ.... ರೆ
ತರೀಕೆರೆ ಏರಿ ಮೇಲೆ ಮೂರು ಕರಿ ಕುರಿ ಮರಿ
ಮೇಯ್ತಿತ್ತು.....ಮೇಯ್ತಿತ್ತು.....ಮೇಯ್ತಿತ್ತು  ಮೇಯ್ತಿತ್ತು ......
ಮೇಯ್ತಿತ್ತು.....ಮೇಯ್ತಿತ್ತು  ಮೇಯ್ತಿತ್ತು ......
ಮೇಯ್ತಿತ್ತು.....ಮೇಯ್ತಿತ್ತು

ತರೀಕೆರೆ ಏರಿ ಮೇಲೆ ಮೂರು...........
ಮೂರು ಕರಿ ಕುರಿ ಮರಿ ಮೂರು........
ತರೀಕೆರೆ ಏರಿಮೇಲೆ ಮೂರುಕರಿ ಕುರಿಮರಿ
ತರೀಕೆರೆ ಏರಿಮೇಲೆ ಮೂರುಕರಿ ಕುರಿಮರಿ
ತರೀಕೆರೆ ಏರಿಮೇಲೆಮೂರುಕರಿಕುರಿಮರಿ
ತರೀಕೆರೆಏರಿಮೇಲೆಮೂರುಕರಿಕುರಿಮರಿ
ಮೇಯ್ತಿತ್ತು ......ಮೇಯ್ತಿತ್ತು.....ಮೇಯ್ತಿತ್ತು.....
ಮೇಯ್ತಿತ್ತು ......ಮೇಯ್ತಿತ್ತು

*********************************************************************************

ಸಂಗಾತಿ ಮೊದಲು

ಸಾಹಿತ್ಯ: ಹುಣಸೂರು ಕೃಷ್ಣಮೂರ್ತಿ  
ಹಾಡಿದವರು: ಎಸ್.ಪಿ.ಬಿ. ಎಸ್.ಜಾನಕೀ 

ಹೆಣ್ಣು : ಸಂಗಾತಿ ಮೊದಲು ನಿಮ್ಮ ನಾ ಕಂಡಾಗ
            ನನ್ನ ರೀ... ಎಂದಾಗ ನಕ್ಕು.. ನಾ ಬಂದಾಗ  ಓ...
            ಸಂಗಾತಿ ಮೊದಲು ನಿಮ್ಮ ನಾ ಕಂಡಾಗ
            ನನ್ನ ರೀ... ಎಂದಾಗ ನಕ್ಕು.. ನಾ ಬಂದಾಗ  
            ಮೈಯೆಲ್ಲಾ ನಾಚಿ ಬೆವೆತು ನಿಂತೋರೆ 
            ಬಾಳಲ್ಲಿ ಪ್ರೀತಿ ಬೆರೆಸಿ ತಂದೋರೆ 
ಗಂಡು : ಹೇಹೇಹೇ .... ಆಆಆ .... ಮೈಸೂರು ಮಲ್ಲಿಗೆಯ ಹೂವ ಮೂಡಿದವಳೇ 
           ನನ್ನ ಕೈಯ್ ಹಿಡಿದವಳೇ ಬಳ್ಳಿ ಹಂಗೆ ಬಳಕೋಳೆ 
           ಕೈಯ ಬಳೆ ನಾದ ಕಿವಿಗಳಿಗೆ ಇಂಪು.. (ಆ..)   
           ನಿನ್ನ ಅಂದ ಚಂದ ಕಣ್ಣಿಗೆ ಸೋಂಪು 
           ಅಹ್ ..ಕೈಯ ಬಳೆ ನಾದ ಕಿವಿಗಳಿಗೆ ಇಂಪು.. (ಆ..)
           ನಿನ್ನ ಅಂದ ಚಂದ ಕಣ್ಣಿಗೆ ಸೋಂಪು 
ಹೆಣ್ಣು : ನೀ.. ನನ್ನ ಸೆರೆಯಲ್ಲಿ  ಆಸೆಯ.. ಬಂಧಿ ನೀವಿಲ್ಲಿ 
          ನೀ.. ನನ್ನ ಸೆರೆಯಲ್ಲಿ ಆಸೆಯ.. ಬಂಧಿ ನೀವಿಲ್ಲಿ 
         ಏಕೆ ಈ ಕಂಪನ ನಿಮ್ಮ ಬಿಡಲಾರೆನಾ  
         ಈ ಚಿರ ಬಂಧನ ಅನುದಿನ 
ಗಂಡು : ನೀ ಇಂದೂ ಕೊಟ್ಟ ಈ ಕೊಡುಗೆ 
           ಜೇನು ತುಂಬಿಟ್ಟ ಒಂದು ಸಿಹಿ ಗಡಿಗೆ 
           ಮತ್ತೇ ಬೇಕೆನಿಸಿತೇ ಇಲ್ಲ ಸಾಕೆನಿಸಿತೇ 
           ಇನ್ನೂ ಎನ್ನೇನನಿಸಿದೆ  ಹೇಳು ನೀ 
ಹೆಣ್ಣು : ಸಂಗಾತಿ ಮೊದಲು ನಿಮ್ಮ ನಾ ಕಂಡಾಗ
          ನನ್ನ ರೀ... ಎಂದಾಗ ನಕ್ಕು.. ನಾ ಬಂದಾಗ
         ಮೈಯೆಲ್ಲಾ ನಾಚಿ ಬೆವೆತು ನಿಂತೋರೆ (ಅಹ್ಹಹ)
         ಬಾಳಲ್ಲಿ ಪ್ರೀತಿ ಬೆರೆಸಿ ತಂದೋರೆ.. ಅಹ್
ಗಂಡು : ಮೈಸೂರು ಮಲ್ಲಿಗೆಯ ಹೂವ ಮೂಡಿದವಳೇ
           ನನ್ನ ಕೈಯ್ ಹಿಡಿದವಳೇ ಬಳ್ಳಿ ಹಂಗೆ ಬಳಕೋಳೆ
           ಕೈಯ ಬಳೆ ನಾದ ಕಿವಿಗಳಿಗೆ ಇಂಪು.. (ಆ..)   
           ನಿನ್ನ ಅಂದ ಚಂದ ಕಣ್ಣಿಗೆ ಸೋಂಪು 
           ಅಹ್ ..ಕೈಯ ಬಳೆ ನಾದ ಕಿವಿಗಳಿಗೆ ಇಂಪು.. (ಆ..)
           ನಿನ್ನ ಅಂದ ಚಂದ ಕಣ್ಣಿಗೆ ಸೋಂಪು 
ಗಂಡು : ನಾನಾಡೋ ಕಿವಿ ಮಾತಗೆಲ್ಲಾ ನೀನು ಕೆಂಪಾದರೆ ಗುಟ್ಟು ಊರಿಗೆಲ್ಲಾ... ಅಹ್ಹಹ್ಹಹ  
          ನಾನಾಡೋ ಕಿವಿ ಮಾತಗೆಲ್ಲಾ ನೀನು ಕೆಂಪಾದರೆ ಗುಟ್ಟು ಊರಿಗೆಲ್ಲಾ
          ನನ್ನ ಕೆಣಕದಾಗೆಲ್ಲಾ ಸುಮ್ನೆ ಬಿಡೋನಲ್ಲ ಸಾಕು ಸಾಕೆನಸದೇ ನಾ ಬಿಡೋಲ್ಲ.. ಹ್ಹಾಂ  
ಹೆಣ್ಣು : ಹಹ್ಹಹ್ಹಹ್ಹ...  ಹೂರಾಶಿ... ಮಡಿಲಲ್ಲಿ ಇರಲು ನೀ ನನ್ನ ಜೊತೆಯಲ್ಲಿ 
         ಕೈಯ ತುಂಟಾಟವೋ ಸರಸ ಚೆಲ್ಲಾಟವೋ ಯಾವ ಹೊಸ ಪಾಠವೋ ಹೇಳೇನಾ (ಅಹ್ಹಹ ಅಹ್ಹ )
ಹೆಣ್ಣು : ಸಂಗಾತಿ ಮೊದಲು ನಿಮ್ಮ ನಾ ಕಂಡಾಗ
            ನನ್ನ ರೀ... ಎಂದಾಗ ನಕ್ಕು.. ನಾ ಬಂದಾಗ
            ಮೈಯೆಲ್ಲಾ ನಾಚಿ ಬೆವೆತು ನಿಂತೋರೆ
            ಬಾಳಲ್ಲಿ ಪ್ರೀತಿ ಬೆರೆಸಿ ತಂದೋರೆ 
ಗಂಡು : ಹೇಹೇಹೇ .... ಆಆಆ .... ಮೈಸೂರು ಮಲ್ಲಿಗೆಯ ಹೂವ ಮೂಡಿದವಳೇ 
           ನನ್ನ ಕೈಯ್ ಹಿಡಿದವಳೇ ಅಹ್ಹ ಬಳ್ಳಿ ಹಂಗೆ ಬಳಕೋಳೆ 
           ಕೈಯ ಬಳೆ ನಾದ ಕಿವಿಗಳಿಗೆ ಇಂಪು.. (ಆ..)   
           ನಿನ್ನ ಅಂದ ಚಂದ ಕಣ್ಣಿಗೆ ಸೋಂಪು 
           ಅಹ್ ..ಕೈಯ ಬಳೆ ನಾದ ಕಿವಿಗಳಿಗೆ ಇಂಪು.. (ಆ..)
           ನಿನ್ನ ಅಂದ ಚಂದ ಕಣ್ಣಿಗೆ ಸೋಂಪು 
           ಅರೇ  ..ಕೈಯ ಬಳೆ ನಾದ ಕಿವಿಗಳಿಗೆ ಇಂಪು.. (ಆ..)
           ನಿನ್ನ ಅಂದ ಚಂದ ಕಣ್ಣಿಗೆ ಸೋಂಪು 
********************************************************************************

ಕೃಷ್ಣಾ .. ಗಾಳಿಯ ಪಟದಂತೆ

ಸಾಹಿತ್ಯ: ಹುಣಸೂರು ಕೃಷ್ಣಮೂರ್ತಿ
ಹಾಡಿದವರು: ಪಿ.ಬಿ.ಶ್ರೀನಿವಾಸ್

ಕೃಷ್ಣಾ, ಹೇ ಕೃಷ್ಣಾ, ಕೃಷ್ಣಾ
ಗಾಳಿಯ ಪಟದಂತೆ ನಾನಯ್ಯ  ಆಡಿಸೋ ಸೂತ್ರದಾರಿ ನೀನಯ್ಯ
ಒಳಗಿನ ಕಣ್ಣನು ತೆರೆಸಿದೆಯೋ
ಗೀತೆಯ ಮರ್ಮವ ತಿಳಿಸಿದೆಯೋ
ಒಳಗಿನ ಕಣ್ಣನು ತೆರೆಸಿದೆಯೋ
ಗೀತೆಯ ಮರ್ಮವ ತಿಳಿಸಿದೆಯೋ
ನಾನೇ ಎಂಬ ಭಾವ ನಾಶವಾಯಿತು
ನೀನೇ ಎಂಬ ನೀತಿ ನಿಜವಾಯಿತು
ನಾನೇ ಎಂಬ ಭಾವ ನಾಶವಾಯಿತು
ನೀನೇ ಎಂಬ ನೀತಿ ನಿಜವಾಯಿತು
ಶ್ರೀ ಕೃಷ್ಣಾ, ಹೇ ಶ್ರೀ ಕೃಷ್ಣಾ
ಹೇಳಿದ ನೀತಿಯ ಕೇಳದೆ ಹೋದೆ
ಕೇಳಿ ನಡೆಯದೆ ಅವಿವೇಕಿಯಾದೆ
ಎಲ್ಲವು ನಾನು, ನನ್ನದೆ ಎಂದು
ನಂಬಿದೆನಯ್ಯೋ ಶಾಶ್ವತವೆಂದು
ಎಲ್ಲಾ ಸುಳ್ಳು, ಎಲ್ಲವು ಪೊಳ್ಳು
ತಿಳಿದೆನು ಇಂದು, ನಾನು ಮಿಥ್ಯ ನೀನು ಸತ್ಯ
ನಾನೇ ಎಂಬ ಭಾವ ನಾಶವಾಯಿತು
ನೀನೇ ಎಂಬ ನೀತಿ ನಿಜವಾಯಿತು
ಒಳಗಿನ ಕಣ್ಣನು ತೆರೆಸಿದೆಯೋ
ಗೀತೆಯ ಮರ್ಮವ ತಿಳಿಸಿದೆಯೋ
ನಾನೇ ಎಂಬ ಭಾವ ನಾಶವಾಯಿತು
ನೀನೇ ಎಂಬ ನೀತಿ ನಿಜವಾಯಿತು
ಶ್ರೀ ಕೃಷ್ಣಾ, ಹೇ ಶ್ರೀ ಕೃಷ್ಣಾ
ಹೆಂಡತಿ ಮಕ್ಕಳು ಬಂಧು ಬಳಗ
ರಾಗ ಭೋಗಗಳ ವೈಭೋಗ
ಕಾಲನು ಬಂದು, ಬಾ ಎಂದಾಗ
ಎಲ್ಲವು ಶೂನ್ಯ ಚಿತೆ ಏರುವಾಗ
ಎಲ್ಲ ಶೂನ್ಯ, ಎಲ್ಲವು ಶೂನ್ಯ
ಉಳಿಯುವುದೊಂದೆ, ದಾನ ಧರ್ಮ ತಂದ ಪುಣ್ಯ
ನಾನೇ ಎಂಬ ಭಾವ ನಾಶವಾಯಿತು
ನೀನೇ ಎಂಬ ನೀತಿ ನಿಜವಾಯಿತು
ಒಳಗಿನ ಕಣ್ಣನು ತೆರೆಸಿದೆಯೋ
ಗೀತೆಯ ಮರ್ಮವ ತಿಳಿಸಿದೆಯೋ
ನಾನೇ ಎಂಬ ಭಾವ ನಾಶವಾಯಿತು
ನೀನೇ ಎಂಬ ನೀತಿ ನಿಜವಾಯಿತು
ಹೇ ಕೃಷ್ಣಾ, ಹೇ ಕೃಷ್ಣಾ
********************************************************************************

ರಾಜ ನರಸಿಂಹ (2003)

ಮಹಾರಾಜ ರಾಜ ಇವನು 

ಚಲನ ಚಿತ್ರ: ರಾಜ ನರಸಿಂಹ (2003)
ನಿರ್ದೇಶನ: ಮುತ್ಯಾಲ ಸುಬ್ಬಯ್ಯ  ಸಂಗೀತ : ದೇವಾ 
ಸಾಹಿತ್ಯ : ಕೆ. ಕಲ್ಯಾಣ್ 
ಗಾಯನ : ಸುಜಾತ, ಕೋರಸ್ 
ನಟನೆ: ವಿಷ್ಣುವರ್ಧನ್, ರಾಸಿ, ರಮ್ಯಾ ಕೃಷ್ಣನ್ 


ಕೋರಸ್ : ಚಿನ್ನದ ರಂಗನ ಮುತ್ತಿನ ರಾಣಿ ಚಿಲಿಪಿಲಿ ರಾಣಿ ಮುತ್ತಿನ ರಾಣಿ
                ಮಿಣಮಿಣ ಮಿನುಗುವ ಕಿನ್ನರ ವೇಣಿ ಕಿಲಕಿಲವೇಣಿ ಕಿನ್ನರ ವೇಣಿ 
               ಹಾಯ್ ತಾಯಿ ಇಳಿದು ಬಂದಿತು ಈ ಗೆಜ್ಜೆಗೆ ಮೆರಗು ತಂದಿತು
               ತನುವಿಗೊಂದು ಮೆರಗು ತಂತು ಒಲವಿನ ಹೂಮಳೆ ಚೆಲ್ಲಿತೋ ಅಹ್ಹಹ್ಹಹ್ಹ... 
ಹೆಣ್ಣು : ಮಹಾರಾಜ ರಾಜನು ಇವನು...  
         ಮಹಾರಾಜ ರಾಜನು ಇವನು  ಮನಬೆಳಗೂ ಸೂರ್ಯನು ಇವನು 
         ಅಪರೂಪ ಗುಣಗಳಾ ಪದಗಳಿಗೆ ಸಿಗದವ... ಪದಗಳಿಗೆ ಸಿಗದವ
         ಶ್ರೀರಾಮಚಂದ್ರನಾ ಮರುಜನ್ಮ ಇಲ್ಲಿದೇ
         ಆಹ್ ಕಣ್ಣ ತುಂಬಾ ಕರಗೋ ಗುಣ ಇವ ಕರುಣೆಯ ಬೃಂದಾವನ
        ಮಹಾರಾಜ ರಾಜನು ಇವನು
ಕೋರಸ್ : ನನ್ನನ್ನನ್ನ ನನ್ನನ್ನನ್ನ ಡಿಂಗ ಡಿಂಗ ಡಿಂಗ ಡಿಂಗ ಡಿಂಗ ಡಿಂಗ
               ನನ್ನನ್ನನ್ನ ನನ್ನನ್ನನ್ನ ಡಿಂಗ ಡಿಂಗ ಡಿಂಗ ಡಿಂಗ ಡಿಂಗ ಡಿಂಗ
               ನನ್ನನ್ನನ್ನ ನನ್ನನ್ನನ್ನ ಡಿಂಗ ಡಿಂಗ ಡಿಂಗ ಡಿಂಗ ಡಿಂಗ ಡಿಂಗ
               ನನ್ನನ್ನನ್ನ ನನ್ನನ್ನನ್ನ ಡಿಂಗ ಡಿಂಗ ಡಿಂಗ ಡಿಂಗ ಡಿಂಗ ಡಿಂಗ 
              ಓಓಓಓಓಓಓ... 
ಹೆಣ್ಣು :  ನಡೆಯೋ ನುಡಿಯೋ ಚಿನ್ನ ಹೃದಯ ಹಾಲಿನ ಬಣ್ಣ ಕಾಯೋ ದೈವ ಇಲ್ಲಿದೆ
           ದಾನ ಇವನ ಶಕ್ತಿ ಮಾನ ಇವನ ಮುಕ್ತಿ ಸೋಲೋ ಮಾತು ಎಲ್ಲಿದೇ
           ಪ್ರತಿ ಹೆಜ್ಜೆ ಸಿಂಹದಂತೇ ಮೆರೆಯುವನು ಈ ದೊರೆ
           ಬದುಕಲ್ಲಿ ಬ್ರಹ್ಮನಂತೆ ಬೆಸೆಯುವನು ಆಸರೆ
          ಇವ ಕೋಟಿಗೆ ಒಬ್ಬ ಇವ ಜನ್ಮಕೇ ಒಬ್ಬ ಇವ ಬಾಳಿನ ಕಳಶವು
          ಮಹಾರಾಜ ರಾಜನು ಇವನು  ಮನಬೆಳಗೂ ಸೂರ್ಯನು ಇವನು
         ಅಪರೂಪ ಗುಣಗಳಾ ಪದಗಳಿಗೆ ಸಿಗದವ... ಪದಗಳಿಗೆ ಸಿಗದವ
ಕೋರಸ್ : ದುಂ ತಕಿಟತಕ  ತಕಿಟತಕ  ದುಂ ದುಂ ದುಂ ತಕಿಟತಕ  ತಕಿಟತಕ  
               ದುಂ ತಕಿಟತಕ  ತಕಿಟತಕ  ದುಂ ದುಂ ದುಂ ತಕಿಟತಕ  ತಕಿಟತಕ  
              ಡಿಂಗ ಡಿಂಗ ಡಿಂಗ ಡಿಂಗ ಡಿಂಗ ಡಿಂಗ ಡಿಂಗ ಡಿಂಗ ಡಿಂಗ ಡಿಂಗ 
              ಡಿಂಗ ಡಿಂಗ ಡಿಂಗ ಡಿಂಗ ಡಿಂಗ ಡಿಂಗ ಡಿಂಗ ಡಿಂಗ ಡಿಂಗ ಡಿಂಗ 
             ಡಿಂಗ ಡಿಂಗ ಡಿಂಗ ಡಿಂಗ ಆಆಆಆ.... 
ಹೆಣ್ಣು : ಚೆಲುವೇ ನೋಡು ಚೆಲುವೇ ಇದು ನಮ್ಮ ಲಕ್ಷ್ಮಿ ಮದುವೆ ಆಹಾ.. ಎಂಥ ಸಂಭ್ರಮ
          ಓಲೆ ಝುಮುಕಿ ಕೊಟ್ಟು  ಅರಿಶಿನ ಕುಂಕುಮ ಇಟ್ಟು ತಾಳ ಮೇಳ ಸಂಗಮ
          ಹಸೆಮಣೆಯ ಪ್ರೇಮಗೀತೆ ಶುರುವಾಗೋ ವೇಳೆಯೂ
          ಹೊಸ ಬಾಳ ದಾರಿ ಎಲ್ಲ ಹಸಿರಾಗೋ ವೇಳೆಯೂ
         ಈ ಕಾಯೋನ ಮುಂದೆ ಈ ಕ್ಷಮಿಸೋನ ಮುಂದೆ ಅನುರಾಗವೇ ಪಲ್ಲವಿ
         ಮಹಾರಾಜ ರಾಜನು ಇವನು  ಮನಬೆಳಗೂ ಸೂರ್ಯನು ಇವನು
         ಅಪರೂಪ ಗುಣಗಳಾ ಪದಗಳಿಗೆ ಸಿಗದವ
         ಶ್ರೀರಾಮಚಂದ್ರನಾ ಮರುಜನ್ಮ ಇಲ್ಲಿದೇ
         ಆಹ್ ಕಣ್ಣ ತುಂಬಾ ಕರಗೋ ಗುಣ ಇವ ಕರುಣೆಯ  ಬೃಂದಾವನ
        ಮಹಾರಾಜ ರಾಜನು ಇವನು  
*********************************************************************************

ಪ್ರಿಯಾ ಪ್ರಿಯಾ

ಸಾಹಿತ್ಯ : ಕೆ. ಕಲ್ಯಾಣ್ 
ಗಾಯನ : ಎಸ್.ಪಿ.ಬಿ., ಸಂಗೀತ

ಹೆಣ್ಣು : ಆಆಆಆಅ....
ಗಂಡು : ಪ್ರಿಯಾ ಪ್ರಿಯಾ ಪ್ರಿಯಾ ಪ್ರಿಯಾ
           ವಂದಿಸುವೆ ಮಾತಿಗೆ ಸ್ಪಂದಿಸುವೆ ಪ್ರೀತಿಗೆ
           ನನ್ನುಸಿರ ತುಂಬುವೆ ನಿನ್ನುಸಿರ ಹಾಡಿಗೆ
           ಪ್ರಿಯಾ ಪ್ರಿಯಾ ಪ್ರಿಯಾ ಪ್ರಿಯಾ
ಹೆಣ್ಣು : ಏಳು ಬಣ್ಣ ಸೇರಿ ಮಳೆಯ ಬಿಲ್ಲಾಯಿತು
ಗಂಡು : ಏಳು ಕನಸು ಸೇರಿ ನಿನ್ನಾ ಕಣ್ಣಾಯಿತು
ಹೆಣ್ಣು : ನಿನ್ನ ಕಣ್ಣಲ್ಲಿರೋ ಪ್ರೇಮ ಚಿತ್ರಾವಳಿ
          ನನ್ನ ಕೆನ್ನೆಗೊಂದು ರಂಗಾವಳಿ
ಗಂಡು : ನಿನ್ನ ಕಣ್ಣಲ್ಲಿರೋ ಪ್ರೇಮ ಕರಾವಳಿ
           ನನ್ನ ಬಾಳಿಗೊಂದು ಪ್ರಭಾವಳಿ
ಹೆಣ್ಣು : ಇದು ಕಥೆಯಲ್ಲ ಬರಿ ಕನಸಲ್ಲ  ಸವಿ ನೆನಪುಂಟು ನನ್ನ ಬದುಕೆಲ್ಲ
ಗಂಡು : ಇದು ಜಗವೇ ಕಾಣದ ಮೊದಲ ಸಂಭ್ರಮ ಒಂದಾಗಿರಲಿ ನಮ್ಮ ಜನುಮ
           ಪ್ರಿಯಾ ಪ್ರಿಯಾ ಪ್ರಿಯಾ ಪ್ರಿಯಾ
ಗಂಡು : ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲಿ
ಹೆಣ್ಣು : ಇಬ್ಬರು ಒಬ್ಬರಾಗಿ ನಡೆಯುವ ವೇಳೆಯಲಿ
ಗಂಡು : ಇಲ್ಲಿ ಆಣೆ ಎಂಬ ಕನ್ನಂಬಾಡಿ ಕಟ್ಟಿ ಜೀವ ಕಾವೇರಿ ಆಗೋಣ ಬಾ
ಹೆಣ್ಣು : ಯಾವ ಚರಿತ್ರೆಯು ಕಂಡು ಕೇಳಿಲ್ಲದಾ ಪ್ರೇಮ ಕಸ್ತೂರಿ  ಹಂಚೋಣ ಬಾ
ಗಂಡು : ನಿನ್ನ ಉಸಿರಲ್ಲೇ   ದಿನ ನೆನೆಯುವೆ ನಾ ನಿನ್ನ ನೆನಪಲ್ಲೇ ಉಸಿರಾಡುವೆ ನಾ
ಹೆಣ್ಣು : ನಮ್ದು ಹೃದಯವ ಆಳುವ ಅರಸರ ವಂಶ ಮರೆತಿರಲಾರೆ ಇನ್ನೊಂದು ನಿಮಿಷ
ಗಂಡು :   ಪ್ರಿಯಾ ಪ್ರಿಯಾ ಪ್ರಿಯಾ ಪ್ರಿಯಾ
           ವಂದಿಸುವೆ ಮಾತಿಗೆ ಸ್ಪಂದಿಸುವೆ ಪ್ರೀತಿಗೆ
           ನನ್ನುಸಿರ ತುಂಬುವೆ ನಿನ್ನುಸಿರ ಹಾಡಿಗೆ
           ಪ್ರಿಯಾ ಪ್ರಿಯಾ ಪ್ರಿಯಾ ಪ್ರಿಯಾ
*********************************************************************************

ಮಧುವಂತಿ ಎದೆಯಾ ಸ್ವರ ತಂತಿ

ಸಾಹಿತ್ಯ : ಕೆ.ಕಲ್ಯಾಣ 
ಗಾಯನ : ಎಸ್.ಪಿ.ಬಿ., ಸುಜಾತ 

ಗಂಡು : ಓಓಓ... .ಮಧುವಂತಿ ಎದೆಯಾ ಸ್ವರ ತಂತಿ
           ಮಧುವಂತಿ ಎದೆಯಾ ಸ್ವರ ತಂತಿ
           ಮನಸಾರೆ ಪ್ರೀತಿಸುವೆ ನಿನ್ನ ಪ್ರೀತಿಯ ಪೂಜಿಸುವೆ ಗೆಳತೀ
           ಆರಂಭ ನೀನು ಆನಂದ ನಿನ್ನದು
          ಓಓಓ... .ಮಧುವಂತಿ ಎದೆಯಾ ಸ್ವರ ತಂತಿ
ಗಂಡು : ಕೋಗಿಲೆಗೆ ಕುಹೂ ದನಿ ಇದೆ ಅದುವೇ ಚೈತ್ರದ ಪ್ರೀತಿಯ ಗುರುತು
ಹೆಣ್ಣು : ಹೂಗಳಲಿ ಜೇನು ಹನಿ ಇದೆ ಅದುವೇ ದುಂಬಿಯ ಸ್ನೇಹದ ಗುರುತು
ಗಂಡು : ಕಡಲಲಿ ತೇಲುವ ಅಲೆಅಲೆಯು ಮುತ್ತುಗಳ ಪ್ರತಿ ಬಿಂಬವ ತಾನೇ
ಹೆಣ್ಣು : ಬಾಳಲಿ ಮಿನುಗುವ ಚುಕ್ಕಿಗಳು ಕನಸಿನ ಪ್ರತಿರೂಪವ ತಾನೇ
ಗಂಡು : ಓಓಓ... ಹೊಗಳಿಕೆಯ ಮೀರಿದಾ ಈ ಪ್ರೀತಿಗೆ ಜಯವಾಗಲಿ
           ಓಓಓ ... ಮಧುವಂತಿ ಎದೆಯಾ ಸ್ವರ ತಂತಿ
ಹೆಣ್ಣು : ಚೆಲುವಿನ ಸವಿ ಸವಿಯುವ  ಸಾವಿರ ಕನಸಿವೆ ಇಲ್ಲಿ
ಗಂಡು : ನಡೆಯುವ ಪ್ರತಿ ಹೆಜ್ಜೆಲೂ ನಿನ್ನ ಒಲವಿನ ಕನ್ನಡಿ ಇರಲಿ
ಹೆಣ್ಣು : ಅಕ್ಕರೆಯ ತೋಟದಲಿ ಅರಳಿರುವಾ ಜೋಡಿ ಬೆಳದಿಂಗಳು ನಾವುಗಳು
ಗಂಡು : ರಾಶಿ ರಾಶಿ ಕನಸಿನ ತೇರಿನಲಿ ಪ್ರೇಮಕಾಶಿ ಸುತ್ತಿ ಬರೋ ಪ್ರೇಮಿಗಳು
ಹೆಣ್ಣು : ಆ ದೇವರೆಂಬುದು ನಿಜವಾದರೆ ನೀನೇ ದೊರೆ
ಗಂಡು : ಓಓಓ .. ಮಧುವಂತಿ ...
*********************************************************************************

ಮಂಡಕ್ಕಿ ತಿನ್ನು ಬಾರೆ

ಸಾಹಿತ್ಯ : ಕೆ.ಕಲ್ಯಾಣ 
ಗಾಯನ : ಎಸ್.ಪಿ.ಬಿ., ಅನುರಾಧ ಶ್ರೀರಾಮ 

ಗಂಡು : ಮಂಡಕ್ಕಿ ತಿನ್ನು ಬಾರೆ ಮಾವನ ಮಗಳೇ  ಮುತ್ತಿಕ್ಕೂವಾಗ ಬ್ಯಾಡ ರಾಂಗು ರಗಳೆ 
             ಸೊಮಾರ ಸಂತೆಗೆ ಬಾರೆ ಭೀಮನ ಮಗಳೇ ಬಿಗಿದಾಡುವಾಗ ಬ್ಯಾಡ ತಂಟೆ ತರಲೇ 
ಹೆಣ್ಣು : ಕಟ್ಟು ಬಂಡಿಯ ಕಟ್ಟು ಬಂಡಿಯಾ ಹೊತ್ತಾಯಿತು 
          ಹೊತ್ತು ಮುಳುಗುವಾ ಮುಂಚೆ ಹಟ್ಟಿಗೆ ಬಂದ್ರಾಯಿತು 
ಗಂಡು : ಮುಂಜಾನೆ ಹೊತ್ನಾಗೆ ಕೋಳಿ ಕೂಗದಂಗೇ ಹಿತ್ಲಾಗೆ 
ಇಬ್ಬರು : ನೀ ಬಂದೆ ಧೈಯ್ಯಾ ಥಕ್ಕಾ ಮಜ ತಕೋ ತಕೋ
ಗಂಡು : ಮಂಡಕ್ಕಿ ತಿನ್ನು ಬಾರೆ ಮಾವನ ಮಗಳೇ  ಮುತ್ತಿಕ್ಕೂವಾಗ ಬ್ಯಾಡ ರಾಂಗು ರಗಳೆ 
             ಸೊಮಾರ ಸಂತೆಗೆ ಬಾರೆ ಭೀಮನ ಮಗಳೇ ಬಿಗಿದಾಡುವಾಗ ಬ್ಯಾಡ ತಂಟೆ ತರಲೇ 
ಹೆಣ್ಣು : ಚಾಮುಂಡಿಗೆ ಕಾಯಿ ಹೊಡೆದು ಕನಸಾ ಕಟ್ತಿನ ಬಾರೋ 
          ಅಣ್ಣಮ್ಮಂಗೆ ಹರಕೆ ಹೊತ್ತು ಸಾಥೀ ಆಗ್ತಿನ ಬಾರೋ 
ಗಂಡು: ಎಷ್ಟೇ ಆದ್ರೂ ನೀನು ನಮ್ಮ ಕನ್ನಡದಾ ಮಗಳು 
          ನಿನ್ನ ಮಾನಾ ಕಾಯೋಕ್ ಪ್ರಾಣಾ ಕೊಡ್ತಿನ್ ದಿನ ರಾತ್ರಿ ಹಗಲು 
ಹೆಣ್ಣು : ಮೇಲುಕೋಟೆ ಚೆಲುವ ಗೆಳೆಯನಾಣೆ  ನಿನ್ನ ಕೋಟೆಗೆ ರಾಣಿ ಎಂದು ನಾನೇ 
ಗಂಡು : ಓಓಓ ... ನನ್ನುಡುಗಿ ಮೆಲುಡುಗೆ ಯಾಕೆ ಗೊಡವೇ 
           ನಾ ತಾನೇ ನಿನಗೆಂದು ಜೀವನ ಒಡವೆ 
ಹೆಣ್ಣು : ಇಷ್ಟು ಸಾಕು ನನಗಿಷ್ಟೇ ಸಾಕು 
ಗಂಡು : ರಮ್ಯಕೃಷ್ಣ ನಿನ್ನ ಹತ್ರ ರಮ್ಯವಾಗಿ ಇದ್ರೆ ಸಾಕು 
           ಮಂಡಕ್ಕಿ ತಿನ್ನು ಬಾರೆ ಮಾವನ ಮಗಳೇ  ಮುತ್ತಿಕ್ಕೂವಾಗ ಬ್ಯಾಡ ರಾಂಗು ರಗಳೆ 
           ಸೊಮಾರ ಸಂತೆಗೆ ಬಾರೆ ಭೀಮನ ಮಗಳೇ ಬಿಗಿದಾಡುವಾಗ ಬ್ಯಾಡ ತಂಟೆ ತರಲೇ 
ಗಂಡು : ಮಂಡ್ಯಾಲಿರೋ ಸಕ್ಕರೇ ಫ್ಯಾಕ್ಟರಿ ಬರೆದು ಕೊಡ್ತೀನ ಬಾರೆ 
           ಆಸೆ ಪಟ್ರೆ ಮೈಸೂರ ಪ್ಯಾಲೇಸ್ ಬಿಟ್ಟು ಕೊಡ್ತೀನ ಬಾರೇ 
ಹೆಣ್ಣು : ನಿನ್ನ ಹಾರ್ಟ್ ಎಂದು ನಂಗೆ ಶುಗರ್ ಫ್ಯಾಕ್ಟರಿ ಮಾವ್ 
          ನಿನ್ನ್ ಮನಸ್ ಪ್ಯಾಲೇಸಿನಲ್ಲಿ ಎಂದು ಇದ್ರೆ ಸಾಕು ಜೀವ 
ಗಂಡು : ಬೇಲೂರಗೇ ನಿನ್ನ ಹೆಸರ್ ಇಡಿಸುವೆ ಅರೇ ಬೇಕಾದ್ರೇ ಗೋಳಗುಮ್ಮಟ ಕೊಡಿಸುವೇ 
ಹೆಣ್ಣು : ನಿನ್ ಮಾತಿನ ಚೆಲುವೇ ಸಾಕು ಬೇಲೂರು ಯಾಕೆ ಗುಂಡಿಗೆಯ್ ಗುರುತು ಸಾಕು 
          ಗೊಮ್ಮಟ ಯಾಕೇ 
ಗಂಡು : ಏನು ಬೇಕು ಬೇರೇನೂ ಬೇಕು 
ಹೆಣ್ಣು : ಸಿಂಹಾದ್ರಿಯ ಸಿಂಹ ನಿನ್ನ ಹೆಂಡತಿಯಾದ್ರೆ ಸಾಕು 
ಗಂಡು : ರಮ್ಯಕೃಷ್ಣ ನಿನ್ನ ಹತ್ರ ರಮ್ಯವಾಗಿ ಇದ್ರೆ ಸಾಕು 
           ಮಂಡಕ್ಕಿ ತಿನ್ನು ಬಾರೆ ಮಾವನ ಮಗಳೇ  ಮುತ್ತಿಕ್ಕೂವಾಗ ಬ್ಯಾಡ ರಾಂಗು ರಗಳೆ 
           ಸೊಮಾರ ಸಂತೆಗೆ ಬಾರೆ ಭೀಮನ ಮಗಳೇ ಬಿಗಿದಾಡುವಾಗ ಬ್ಯಾಡ ತಂಟೆ ತರಲೇ 
*********************************************************************************

ನೀನೇ ನೀನೇ ರಾಜ ರಾಜ ನರಸಿಂಹ 

ಸಾಹಿತ್ಯ : ಕೆ.ಕಲ್ಯಾಣ 
ಗಾಯನ : ಎಸ್.ಪಿ.ಬಿ., 

ಕೋರಸ್ : ಲಕ್ಷ್ಮಿ ನರಸಿಂಹ ಉಗ್ರ ನರಸಿಂಹ ಯೋಗ ನರಸಿಂಹ ರಾಜ ನರಸಿಂಹ
               ಗಾಳಿ ನೀರು ಭೂಮಿ ಬೆಂಕಿ ಬಾನು ನೀನು ಎಂಟು ದಿಕ್ಕಿನಲ್ಲೂ ನೀನೇ
               ತಕಿಟ ತಕಿಟ ತಕಿಟ ತಕ ತರಿಕಿಟ ತಕಧಿಮಿ  ತಕಿಟ ತಕಿಟ ತಕಿಟ ತಕ ತರಿಕಿಟ ತಕಧಿಮಿ
              ಓಂ ಓಂ .......
ಗಂಡು : ನೀನೇ ನೀನೇ ರಾಜ ರಾಜ ನರಸಿಂಹ ಲೋಕ ಕಾಯೋ ನೀನೇ ಹರಿಹರಬ್ರಹ್ಮ
           ದಿಕ್ಕು ನೀನಯ್ಯಾ ದಾರಿ ನೀನಯ್ಯಾ ದಾರಿ ದೀಪಾನೂ ನೀನೇ
          ಬೆಳಕು ನೀನಯ್ಯಾ ಬದುಕು ನೀನಯ್ಯಾ ಬದುಕಿನ ಬೆಳಕು ನೀನೇ
ಕೋರಸ್ : ಯಜಮಾನ ಯಜಮಾನ ಜಗಕೆ ಒಬ್ಬನೇ ಯಜಮಾನ
ಗಂಡು : ನೀನೇ ನೀನೇ ರಾಜ ರಾಜ ನರಸಿಂಹ ಲೋಕ ಕಾಯೋ ನೀನೇ ಹರಿಹರಬ್ರಹ್ಮ
ಗಂಡು : ಹಸಿವಿನಲು ನಿನ್ನ ಹೆಸರಿದೆ ಅನ್ನದಲ್ಲೂ ನಿನ್ನ ನೆನಪಿದೆ
            ನೋವಿರಲು ನಿನ್ನ ಉಸಿರಿದೆ ನಗುವಿನಲೂ ನಿನ್ನ ನೆರೆಳಿದೆ
            ನಿನ್ನ ಮನಸು ಮುದ್ದಾದ  ಮಗುವಂತೆ ದಿನ ಹರಸು ನಾವೆಲ್ಲಾ ನಗುವಂತೆ
            ನೀನೇ ... ನಮ್ಮ ಬಂಧು ಎಂದೂ ನೀನೇ ನಮ್ಮ ಬಂಧು
            ನಿನ್ನ ಮುಂದೆ ನಾವೆಲ್ಲಾ ಒಂದು ಶಕ್ತಿ ನಿನದು ಭಕ್ತಿ ನಮದು ಮುಕ್ತಿ ನೀಡಯ್ಯಾ
ಕೋರಸ್ : ನೀನೇ ನೀನೇ ರಾಜ ರಾಜ ನರಸಿಂಹ ಲೋಕ ಕಾಯೋ ನೀನೇ ಹರಿಹರಬ್ರಹ್ಮ ಅಹ್ಹಹ್ಹಾ..
ಗಂಡು : ಮನಸಿನಲಿ ಶುದ್ದಿಯಾ ಕೊಡು ಬದುಕಿನಲಿ ಬುದ್ದಿಯಾ ಕೊಡು
            ಅನ್ಯಾಯ ಮೆಟ್ಟಿ ನಡೆಯುವ ಅಪರೂಪ ಶಕ್ತಿಯಾ ಕೊಡು
            ನಿನ್ನ ಹೆಸರನ್ನ ಉಳಿಸುವೆ ನಾ ಕಣ್ಣೀರಿನ ಮಾತನ್ನೇ ಅಳಿಸುವೆ ನಾ
            ನೀನೇ...  ತಂದೆ ತಾಯಿ ಎಂದೂ ನೀನೇ ತಂದೆ ತಾಯಿ
            ನಮ್ಮ ಕಾಯೋ ಮಹಾಮಾಯಿ ಕರುಣಾಳು ನಿನ್ನ ಕರುಣೆ ಮುಂದೆ ಕರವು ನಾನಯ್ಯಾ
           ನೀನೇ ನೀನೇ ರಾಜ ರಾಜ ನರಸಿಂಹ ಅಹ್ಹಹ್ಹಾ ಲೋಕ ಕಾಯೋ ನೀನೇ ಹರಿಹರಬ್ರಹ್ಮ
           ದಿಕ್ಕು ನೀನಯ್ಯಾ ದಾರಿ ನೀನಯ್ಯಾ ದಾರಿ ದೀಪಾನೂ ನೀನೇ
ಕೋರಸ್ : ಯಜಮಾನ ಯಜಮಾನ ಜಗಕೆ ಒಬ್ಬನೇ ಯಜಮಾನ
*********************************************************************************

ಕಳ್ಳ ಕುಳ್ಳ (1975)

ಅಮ್ಮ ಎಂದರೆ ಏನೋ ಹರುಷವು...

ಚಲನ ಚಿತ್ರ: ಕಳ್ಳ ಕುಳ್ಳ (1975)
ನಿರ್ದೇಶನ: ಕೆ.ಎಸ್.ಆರ್. ದಾಸ್ 
ಸಾಹಿತ್ಯ : ಚಿ.ಉದಯಶಂಕರ್
ಸಂಗೀತ : ರಾಜನ್ - ನಾಗೇಂದ್ರ 
ಗಾಯನ : ಪಿ.ಬಿ.ಶ್ರೀನಿವಾಸ್, ಕೃಷ್ಣಮೂರ್ತಿ
ನಟನೆ: ವಿಷ್ಣುವರ್ಧನ್, ದ್ವಾರಕೀಶ್, ಭವಾನಿ, ಜಯಲಕ್ಷ್ಮೀ 


ಕೃಷ್ಣ : ಅಮ್ಮಾ...  ಪಿಬಿಎಸ್ : ಅಮ್ಮಾ..
ಇಬ್ಬರು : ಆಹಾಹಾ ಆಹಾಹಾ ಆಹಾಹಾ
ಪಿಬಿಎಸ್ : ಅಮ್ಮ ಎಂದರೆ ಏನೋ ಹರುಷವು
ಕೃಷ್ಣ :  ನಮ್ಮಾ ಪಾಲಿಗೆ ಅವಳೇ ದೈವವು
ಪಿಬಿಎಸ್ : ಅಮ್ಮ ಎಂದರೆ ಏನೋ ಹರುಷವು
ಕೃಷ್ಣ :  ನಮ್ಮಾ ಪಾಲಿಗೆ ಅವಳೇ ದೈವವು
ಪಿಬಿಎಸ್ : ಅಮ್ಮಾ ಎನ್ನಲೂ ಎಲ್ಲಾ ಮರೆತೆವು
ಕೃಷ್ಣ : ಎಂದೂ ಕಾಣದಾ ಸುಖವಾ ಕಂಡೆವು......{ಪಲ್ಲವಿ}
ಇಬ್ಬರು :  ಅಮ್ಮ ಎಂದರೆ ಏನೋ ಹರುಷವು ನಮ್ಮಾ ಪಾಲಿಗೆ ಅವಳೇ ದೈವವು
ಪಿಬಿಎಸ್ : ನೂರು ನದಿಯು ಸೇರಿ ಹರಿದು ಬಂದರೇನು?
                ಜನರು ಅದರ ರಭಸ ಕಂಡು ಕಡಲು ಎನುವರೇನು?
ಕೃಷ್ಣ :  ಆಹಾ....ಅಹಹ.....
          ಕೋಟಿ ದೇವರೆಲ್ಲಾ ಕೂಡಿ ನಿಂತರೇನು
          ತಾಯಿ ಹಾಗೆ ಪ್ರೀತಿ ತೋರಿ ಸನಿಹ ಬರುವರೇನು
          ಎಂದೋ ಕನಸಲಿ ಕಂಡಾ ನೆನಪಿದೆ
          ಇಂದು ನಿನ್ನ ಕಾಣೋ ಆಸೆ ಎದೆಯಾ ತುಂಬಿದೆ.....
ಇಬ್ಬರು :  ಅಮ್ಮ ಎಂದರೆ ಏನೋ ಹರುಷವು ನಮ್ಮಾ ಪಾಲಿಗೆ ಅವಳೇ ದೈವವು
ಕೃಷ್ಣ :  ನನ್ನೀ ವಯಸು ಮರೆವೆ ಮಗುವೇ ಆಗಿ ಬಿಡುವೆ
          ಅಮ್ಮ ನಿನ್ನ ಕಂದ ಬಂದೆ ನೋಡು ಎನ್ನುವೆ
ಪಿಬಿಎಸ್ :  ಅಹಾ....ಅಹಹ.....
             ನನ್ನೀ ತೋಳಿನಲ್ಲಿ ಅವಳ ಬಳಸಿ ನಲಿವೆ
            ಇನ್ನೂ ನಿನ್ನಎಂದೂ ಬಿಟ್ಟು ಇರೆನು ಎನ್ನುವೆ
ಇಬ್ಬರು : ತಾಯಿ ಮಡಿಲಲಿ ನಾವು ಹೂಗಳು ನಮ್ಮಾ ಬಾಳೀಗೆ ಅವಳೇ ಕಂಗಳು.....
             ಅಮ್ಮ ಎಂದರೆ ಏನೋ ಹರುಷವು ನಮ್ಮಾ ಪಾಲಿಗೆ ಅವಳೇ ದೈವವು
            ಅಮ್ಮಾ ಎನ್ನಲೂ ಎಲ್ಲಾ ಮರೆತೆವು ಎಂದೂ ಕಾಣದಾ ಸುಖವಾ ಕಂಡೆವು.....
             ಅಮ್ಮ ಎಂದರೆ ಏನೋ ಹರುಷವು ನಮ್ಮಾ ಪಾಲಿಗೆ ಅವಳೇ ದೈವವು
            ಅಮ್ಮಾ ಎನ್ನಲೂ ಎಲ್ಲಾ ಮರೆತೆವು ಎಂದೂ ಕಾಣದಾ ಸುಖವಾ ಕಂಡೆವು.....
           ಆಹಾಹಾ ಆಹಾಹಾ ಆಹಾಹಾ ಆಹಾಹಾ ಆಹಾಹಾ ಆಹಾಹಾ 
********************************************************************************

ನಾ ಹಾಡಲು ನೀವು ಆಡಬೇಕು

ಸಾಹಿತ್ಯ : ಚಿ.ಉದಯಶಂಕರ್  
ಗಾಯನ : ಎಸ್.ಪಿ. ಬಾಲಸುಬ್ರಮಣ್ಯಂ


ಗಂಡು : ಲಾ..  ಆಹಾಹಾ ಪಪ್ಪಪಪಪಪಪಾ ಜೂ ಜೂಜೂಜೂಜೂ ಲಾಲಾಲಾಲಾಲಾಲ
          ನಾ ಹಾಡಲೂ ನೀವು ಹಾಡಬೇಕು ತೂಗಾಡುತಾ ತಾಳ ಹಾಕಬೇಕು
         ಎಲ್ಲರೂ ಒಂದಾಗುತಾ ನಕ್ಕು ನಲಿಯಬೇಕು
         ಹಾಡುತ ಕುಣಿದಾಡುತಾ ಮೈಯ್ಯ ಮರೆಯಬೇಕು......
         ನಕ್ಕು ನಲಿಯಬೇಕು ಮೈಯ್ಯ ಮರೆಯಬೇಕು....
ಗಂಡು : ಚೆಲ್ಲಾಟವಾಡೋ ವಯಸು ಸಂಗಾತಿಬೇಕು
           ಈ ಸ್ನೇಹದಿಂದ ನಮ್ಮ ಆಸೆ ತೀರಬೇಕು
           ಚೆಲ್ಲಾಟವಾಡೋ ವಯಸು ಸಂಗಾತಿಬೇಕು
          ಈ ಸ್ನೇಹದಿಂದ ನಮ್ಮ ಆಸೆ ತೀರಬೇಕು
          ರಸಮಯ ನಿಮಿಷದ ಆನಂದ ಮೈತುಂಬಿದೆ
         ಮರೆಯದ ಅನುಭವ ನಮಗೇ ಕಾದಿದೆ.......
        ನಾ ಹಾಡಲೂ ನೀವು ಹಾಡಬೇಕು ತೂಗಾಡುತಾ ತಾಳ ಹಾಕಬೇಕು
ಎಲ್ಲರು :  ಎಲ್ಲರೂ ಒಂದಾಗುತಾ ನಕ್ಕು ನಲಿಯಬೇಕು
         ಹಾಡುತ ಕುಣಿದಾಡುತಾ ಮೈಯ್ಯ ಮರೆಯಬೇಕು......
         ನಕ್ಕು ನಲಿಯಬೇಕು ಮೈಯ್ಯ ಮರೆಯಬೇಕು....
ಗಂಡು : ಸಂತೋಷದ ಈ ಸಮಯ ಸದಾ ಸವಿಯಬೇಕು
         ಈ ಸಮಯ ಜಾರದಂತೆ ನೋಡಿ ನಡೆಯಬೇಕು
         ಸಂತೋಷದ ಈ ಸಮಯ ಸದಾ ಸವಿಯಬೇಕು
         ಈ ಸಮಯ ಜಾರದಂತೆ ನೋಡಿ ನಡೆಯಬೇಕು
         ಮುತ್ತಿನ ಅಹ್ಹಹ...ನಗುವಲಿ ಎಂದೆಂದು ತೇಲಾಡುವಾ
         ಚಿನ್ನದ ಹೃದಯವ ಇಂದೇ ದೋಚುವಾ.....
        ನಾ ಹಾಡಲೂ ನೀವು ಹಾಡಬೇಕು ತೂಗಾಡುತಾ ತಾಳ ಹಾಕಬೇಕು
ಎಲ್ಲರು :  ಎಲ್ಲರೂ ಒಂದಾಗುತಾ ನಕ್ಕು ನಲಿಯಬೇಕು
         ಲಾಲಲ ಲಲ್ಲಲ್ಲಾ ಲಾಲಲ ಲಲ್ಲಲ್ಲಾ ಲಾಲಲ ಲಲ್ಲಲ್ಲಾ
********************************************************************************

ಸುತ್ತ ಮುತ್ತ ಯಾರೂ ಇಲ್ಲ

ಸಾಹಿತ್ಯ : ಚಿ. ಉದಯಶಂಕರ  
ಗಾಯನ : ಪಿ.ಬಿ. ಶ್ರೀನಿವಾಸ್, ವಾಣಿ ಜಯರಾಮ್


ಗಂಡು : ಏ.....(ಆ.)......ಸುತ್ತ ಮುತ್ತ ಯಾರೂ ಇಲ್ಲ  ನೀನು ನಾನೆ ಇಲ್ಲಿ ಎಲ್ಲಾ......|
          ಸುತ್ತ ಮುತ್ತ ಯಾರೂ ಇಲ್ಲ  ನೀನು ನಾನೆ ಇಲ್ಲಿ ಎಲ್ಲಾ......
          ಬಾರೆ ಸನಿಹಕೆ....ಕೆಂಪು ಕೆನ್ನೆಗೆ ಜೇನ ಅಧರಕೆ ಕೊಡುವೇ ಕಾಣಿಕೆ......
ಹೆಣ್ಣು : ಸುತ್ತ ಮುತ್ತ ಯಾರೂ ಇಲ್ಲ ಎಂದು ನಾನು ಬಲ್ಲೆ ನಲ್ಲ....
          ಸುತ್ತ ಮುತ್ತ ಯಾರೂ ಇಲ್ಲ ಎಂದು ನಾನು ಬಲ್ಲೆ ನಲ್ಲ....
          ಅದಕೇ ಹೆದರಿಕೆ..... ನಿನ್ನ ಮಾತಿಗೆ ಮನದ ಆಸೆಗೆ ಬಂತೂ ನಾಚಿಕೆ......
          ಸುತ್ತ ಮುತ್ತ ಯಾರೂ ಇಲ್ಲ ಎಂದು ನಾನು ಬಲ್ಲೆ ನಲ್ಲ....ಯಾರು ಇಲ್ಲ ಇಲ್ಲ ಇಲ್ಲ ಇಲ್ಲ ಇಲ್ಲ ಇಲ್ಲ
          ಅಹಹಾ.......(ಆಹಾ.. ಆಹ್ಹಾಹಹ್ಹಾ ) ಓಹೋಹೋ. ಒಹೋಹ್ಹೋ .....(ಒಹೋಹ್ಹೋ)
ಇಬ್ಬರು :  ಲಲ್ಲಲ ಲಾ.....
ಗಂಡು : ಕಣ್ಣ ಮಿಂಚಿನಲಿ ಸಂಚು ಮಾಡುತಿಹೆ ನನ್ನೇ ನೋಡುತಾ
            ಸನ್ನೆ ಮಾತಿನಲಿ ಏಕೆ ಕೆಣಕುತಿಹೆ ದೂರಾ ಓಡುತಾ
ಹೆಣ್ಣು : ಗಾಳಿ ಬೀಸುತಿದೆ ಬಳ್ಳಿ ನಡುವಿದು ಬಳುಕಿ ಆಡಿದೆ
          ಬಯಕೆ ಕಣ್ಣಲಿದೆ ಮನಸು ತೂಗುತಿದೆ ಅದಕೇ ಓಡಿದೆ....
ಗಂಡು : ಸಂಜೆ (ನೋಡಿದೆ) ...ಇರುಳು (ಕಾದಿದೆ)
            ಸುತ್ತ ಮುತ್ತ ಯಾರೂ ಇಲ್ಲ     ಹೆಣ್ಣು : ಎಂದು ನಾನು ಬಲ್ಲೆ ನಲ್ಲ....
ಹೆಣ್ಣು :  ಸುತ್ತ ಮುತ್ತ ಯಾರೂ ಇಲ್ಲ ಎಂದು ನಾನು ಬಲ್ಲೆ ನಲ್ಲ....
          ಅದಕೇ ಹೆದರಿಕೆ..... ನಿನ್ನ ಮಾತಿಗೆ ಮನದ ಆಸೆಗೆ ಬಂತೂ ನಾಚಿಕೆ......
          ಸುತ್ತ ಮುತ್ತ (ಯಾರೂ ಇಲ್ಲ)  ನಾನು ನೀನೆ (ಇಲ್ಲಿ ಎಲ್ಲಾ.)
         ಯಾರು ಇಲ್ಲ ಇಲ್ಲ ಇಲ್ಲ ಇಲ್ಲ ಇಲ್ಲ ಇಲ್ಲ
ಹೆಣ್ಣು : ಹೂವು ಎಂದಿಗೂ ಮುಡಿಪು ದೇವರಿಗೆ ಏಕೇ ಕಾತರ.....
         ನಾನು ನಿನ್ನವಳು ನೀನು ನನ್ನವನು ಬೇಡ ಅವಸರ....
ಗಂಡು : ಮುತ್ತು ಜಾರಿದರೆ ಹೊತ್ತು ಮೀರಿದರೆ ಮತ್ತೇ ದೊರಕದು
           ನಿನ್ನ ಸೇರದೆಲೆ ದೂರವಾದರೆ ಜೀವ ನಿಲ್ಲದು
ಹೆಣ್ಣು :  ಆಸೆ (ತೀರದೇ) ಮನಸು ( ಸೋತಿದೆ )
          ಸುತ್ತ ಮುತ್ತ ಯಾರೂ ಇಲ್ಲ
ಗಂಡು : ನಾನು ನೀನೆ ಇಲ್ಲಿ ಎಲ್ಲಾ.
          ಸುತ್ತ ಮುತ್ತ ಯಾರೂ ಇಲ್ಲ  ನಾನು ನೀನೆ ಇಲ್ಲಿ ಎಲ್ಲಾ.
         ಯಾರು ಇಲ್ಲ ಇಲ್ಲ ಇಲ್ಲ ಇಲ್ಲ ಇಲ್ಲ ಇಲ್ಲ
          ಬಾರೆ ಸನಿಹಕೆ....ಕೆಂಪು ಕೆನ್ನೆಗೆ ಜೇನ ಅಧರಕೆ ಕೊಡುವೇ ಕಾಣಿಕೆ......
ಹೆಣ್ಣು : ಸುತ್ತ ಮುತ್ತ (ಯಾರೂ ಇಲ್ಲ)  ನಾನು ನೀನೇ (ಇಲ್ಲೆ ಎಲ್ಲ)
ಗಂಡು:  ಯಾರು ಇಲ್ಲ ಇಲ್ಲ
ಇಬ್ಬರು : ಇಲ್ಲ ಇಲ್ಲ ಇಲ್ಲ ಇಲ್ಲ
ಗಂಡು :  ಅಹಹಾ.......(ಆಹ್ಹಾಹಹ್ಹಾ ) ಓಹೋಹೋ. .(ಆಹ್ಹಾಹಹ್ಹಾ  ಲಲ್ಲಲಲಾ )
          ಲಲ್ಲಲಲಾ (ಲಲ್ಲಲಲಾ) ಲಲ್ಲಲಲಾ    
********************************************************************************

ಸಾಕಾ ಇಷ್ಟೇ ಸಾಕಾ

ಸಾಹಿತ್ಯ:ಚಿ.ಉದಯಶಂಕರ, 
ಗಾಯನ:ಪಿ.ಸುಶೀಲಾ,ಎಸ್.ಜಾನಕೀ, ರಘುರಾಮ, ಕೋರಸ್  


 ಸಾಕಾ ಇಷ್ಟೇ ಸಾಕಾ ಇನ್ನೂ ಸ್ವಲ್ಪ ಬೇಕಾ 
 ಸಾಕಾ ಇಷ್ಟೇ ಸಾಕಾ ಇನ್ನೂ ಸ್ವಲ್ಪ ಬೇಕಾ 
ಒಂದೇ ಒಂದು ಸಾಕಾ ಜತೆಗೇ ಎರಡೂ ಬೇಕಾ 
ಕಣ್ಣು ಕಣ್ಣು ಸೇರಿದಾಗ ಮೈಗೇ ಮೈಯ್ಯಿ ಸೋಕಿದಾಗ 
ನೋಡು ಆ ಸುಖ ಓ.. ರಾಜ 
ಜಿಂಗಿಲಕ್ಕ ಜಿಂಗಿಲಕ್ಕ ನಿಂಗಿಲಕ್ಕ ನಿಂಗಿಲಕ್ಕ ಕುಣಿಯೋ ಥೈತಕ್ಕ 
ಜಿಂಗಿಲಕ್ಕ ಜಿಂಗಿಲಕ್ಕ ನಿಂಗಿಲಕ್ಕ ನಿಂಗಿಲಕ್ಕ ಕುಣಿಯೋ ಥೈತಕ್ಕ 
ಕುಣಿಯೋ ಥೈತಕ್ಕ
ಪ್ರೇಮದಾ ಚಂದಿರಾ
ಆಹ್ಹಾ ಪ್ರೇಮದಾ ಚಂದಿರಾ ಮೋಹದ ಮಂದಿರಾ ಕಾಣೆ ನಾನಿಂತ ಚಂದ 
ಮೆತ್ತಗೇ ಹತ್ತಿರ 
ಮೆತ್ತಗೇ ಹತ್ತಿರ ಬಂದರೆ ಸುಂದರ ನಿಂದೇ ಈ ಎಲ್ಲ ಅಂದ  
ವೀರ ಹಮ್ಮಿರ ಸುಕುಮಾರ ಬಾ ಬಂಗಾರ 
ವೀರ ಹಮ್ಮಿರ ಸುಕುಮಾರ ಬಾ ಬಂಗಾರ 
ಏಯ್ .... ಠಕ್ಕ  ಬಿಟ್ರೇ ಸಿಕ್ಕ   ಠಕ್ಕ  ಸಿಕ್ಕ  ಠಕ್ಕ  ಸಿಕ್ಕ 
ಸಾಕಾ ಇಷ್ಟೇ ಸಾಕಾ ಇನ್ನೂ ಸ್ವಲ್ಪ ಬೇಕಾ 
(ಒಂದೇ ಒಂದು ಸಾಕಾ ಜತೆಗೇ ಎರಡೂ ಬೇಕಾ )
(ಸಾಕಾ ಇಷ್ಟೇ ಸಾಕಾ ಇನ್ನೂ ಸ್ವಲ್ಪ ಬೇಕಾ 
ಒಂದೇ ಒಂದು ಸಾಕಾ ಜತೆಗೇ ಎರಡೂ ಬೇಕಾ )
ಜಿಂಗಿಲಕ್ಕ ಜಿಂಗಿಲಕ್ಕ ನಿಂಗಿಲಕ್ಕ ನಿಂಗಿಲಕ್ಕ ಕುಣಿಯೋ ಥೈತಕ್ಕ 
ಕುಣಿಯೋ ಥೈತಕ್ಕ 
ನೋಟದಿ ತಂಪಿದೆ
ನೋಟದಿ ತಂಪಿದೆ ಏಟಲಿ ಹಿತವಿದೆ ಬೇಕೇ ಇನ್ನೊಂದು ಬೇಕೇ  
ಆಟಕೆ ಕೂಗಿದೆ
ಆಟಕೆ ಕೂಗಿದೆ ಬೇಟೆಯಾ ಆಡಿದೇ ಕೋಪ ನನ್ನಲ್ಲಿ ಏಕೇ
ಬೇಕಾ ಸುಖ ಬೇಕಾ ಬಳಿ ಬಾರೋ ನೀ  ನನ್ನ ಪಕ್ಕಾ .
ಬೇಕಾ ಸುಖ ಬೇಕಾ ಬಳಿ ಬಾರೋ ನೀ  ನನ್ನ ಪಕ್ಕಾ .
 ಡೀ ಡೀಕ್ಕಾ  ಡೀ ಡೀಕ್ಕಾ  ಡೀಕ್ಕಾ  ಡೀಕ್ಕಾ  ಡೀಕ್ಕಾ  
(ಸಾಕಾ ಇಷ್ಟೇ ಸಾಕಾ ಇನ್ನೂ ಸ್ವಲ್ಪ ಬೇಕಾ )
ಒಂದೇ ಒಂದು ಸಾಕಾ ಜತೆಗೇ ಎರಡೂ ಬೇಕಾ 
ನಾನು ಬೇಕಾ ನಾನು ಬೇಕಾ ನಾನು ಬೇಕಾ ನಾನು ಬೇಕಾ ಹೇಳೋ ಡಿಮ್ಮಹಕ್ಕಾ 
ಓ.. ರಾಜ 
ಜಿಂಗಿಲಕ್ಕ ಜಿಂಗಿಲಕ್ಕ ನಿಂಗಿಲಕ್ಕ ನಿಂಗಿಲಕ್ಕ
ಜಿಂಗಿಲಕ್ಕ ಜಿಂಗಿಲಕ್ಕ ನಿಂಗಿಲಕ್ಕ ನಿಂಗಿಲಕ್ಕ ಕುಣಿಯೋ ಥೈತಕ್ಕ 
********************************************************************************

ಮದನ ಪ್ರೇಮ ಸದನ

ಸಾಹಿತ್ಯ : ಚಿ. ಉದಯಶಂಕರ 
ಗಾಯನ : ಪಿ.ಬಿ. ಶ್ರೀ, ಎಸ್.ಜಾನಕೀ, ಉಡುಪಿ ಜಯರಾಮ, ಗೋಪಿ ಕೃಷ್ಣ, ಕೋರಸ್ 

            ಮದನಾ ಪ್ರೇಮ ಸಾಧನಾ 
 ಹೆಣ್ಣು : ಆಆಆ... (ಆಆ ) ಆಆಆ ಆಆಆ... (ಆಆ ) ಆಆಆ
          ಮದನಾ ಪ್ರೇಮ ಸಾಧನಾ
         ಓ.. ಮದನಾ ಪ್ರೇಮ ಸಾಧನಾ ಮೂಲೋಕಕೆಲ್ಲಾ ಪ್ರಣಯ ಸಾಧನ 
         ಈ ನಮ್ಮ ಮಿಲನ ಶುಭ ತಂದ ಸುದಿನ 
        ಮದನಾ ಪ್ರೇಮ ಸಾಧನಾ 
ಗಂಡು : ರತಿಯೇ ಪ್ರಾಣ ಸಖಿಯೇ 
           ಓ...  ರತಿಯೇ ಪ್ರಾಣ ಸಖಿಯೇ  ಸನಿಹ ಬಾರೆ ಪ್ರೇಮ ಸುಧೆಯ 
          ನನಗಾಗಿ ಬಂದಾ ಸೌಂದರ್ಯ ನಿಧಿಯೇ 
         ರತಿಯೇ ಪ್ರಾಣ ಸಖಿಯೇ 
ಹೆಣ್ಣು :ಸಾ ಸಸಸಸಸ ಸಸಸಸಸ ದನಿಸ ದನಿಸ ದನಿಗಮರಿಗ
ಗಂಡು : ಚೋಮ್ ಚನನ ಚೋಮ್ ಚನನ
ಹೆಣ್ಣು : ನಿಗ ಗರರಿ ಘನಿ ಗಮದ
ಇಬ್ಬರು : ಧಾಮಗ ಧಾಮಗ ಧಾಮ
ಹೆಣ್ಣು : ಹೂವಿನಿಂದ ಲತೆಯ ಅಂದ ಒಲವಿನಿಂದ ಬಾಳು ಚೆಂದ 
ಗಂಡು : ಸೃಷ್ಟಿ ಸೊಬಗು ಆದಿಯಿಂದ ಹೆಣ್ಣು ಗಂಡು ಮಿಲನದಿಂದ 
ಇಬ್ಬರು : ಪ್ರೇಮ ಗಂಗೆ ಹರಿಯಲೀಗ
ಗಂಡು : ಓಡಿ ಬಾ..    ಹೆಣ್ಣು : ಆಡು ಬಾ ... 
ಗಂಡು : ಓಡಿ ಬಾ..    ಹೆಣ್ಣು : ಆಡು ಬಾ ... 
ಇಬ್ಬರು : ಜೋಡಿಯಾಗು ಬಾ.. ಬಾ.. ಬಾ.. 
ಗಂಡು : ರತಿಯೇ ಪ್ರಾಣ ಸಖಿಯೇ
ಹೆಣ್ಣು : ಮದನಾ ಪ್ರೇಮ ಸಾಧನಾ 
ಇಬ್ಬರು : ಮೂಲೋಕಕೆಲ್ಲಾ ಪ್ರಣಯ ಸಾಧನ 
            ಈ ನಮ್ಮ ಮಿಲನ ಶುಭ ತಂದ ಸುದಿನ 
           ಆ ಆಹಾ ಆ ಆಹಾಹಾ
ಕೋರಸ್ : ಓಂ.. ಓಂ..  ಓಂ..  ಓಂ..  
ಇಬ್ಬರು :  ಜಯ ಹೇ ಶಂಕರನೇ ಶಿವನೇ ಜಯಹೇ ಗಂಗಾಧರನೇ 
              ಜಯ ಹೇ ಶಂಕರನೇ ಶಿವನೇ ಜಯಹೇ ಗಂಗಾಧರನೇ 
ಹೆಣ್ಣು : ಭವ್ಯ ಸುಂದರ ಭವ ಪರಿಹಾರ
ಗಂಡು : ಪುಣ್ಯ ಮಂದಿರ ಪಾಪ ವಿಧೂರ 
ಇಬ್ಬರು : ಏಕೇ ಈ ತಪವು ಹರನೇ ಏಕೇ ಈ ಜಪವೂ 
ಗಂಡು : ಭಂ ಭಂ ಭಂ ಭಂ  ಶಂಖನಾದವು ಮೂಗ ಜಗ ತುಂಬಿ ಮೊಳಗಲಿ 
ಹೆಣ್ಣು :  ಡಂ ಡಂ ಡಂ ಡಂ ಡಮರುಗ ಘರ್ಜನೆ ಬ್ರಹ್ಮಾಂಡದಲಿ ಗುಡುಗಲಿ 
ಗಂಡು : ಭಂ ಭಂ ಭಂ ಭಂ  ಶಂಖನಾದವು ಮೂಗ ಜಗ ತುಂಬಿ ಮೊಳಗಲಿ 
ಹೆಣ್ಣು :  ಡಂ ಡಂ ಡಂ ಡಂ ಡಮರುಗ ಘರ್ಜನೆ ಬ್ರಹ್ಮಾಂಡದಲಿ ಗುಡುಗಲಿ 
           ಗಗನ ನಡಗುತಿರೆ ಶಿವನ ಭವಣೆ ಮೈಡನೆ ಕುಣಿಯ ಬಾ 
ಗಂಡು : ಜಗದ ಜನದ ಮನವ  ತಣಿಸೆ ಬಾ
ಇಬ್ಬರು : ಹರನೇ ನಮ್ಮ ಹರಿಸಿ ಪೋರೆಯೇ 
            ಏಳಯ್ಯ ಶಂಕರನೇ ಶಿವನೇ ಏಳಯ್ಯ ಸುಂದರನೇ 
ಇಬ್ಬರು : ಜಟಾ ಜೂಟದಲಿ ಗಂಗೆಯು ನಲಿದಿರೇ 
            ಶಿರದಿ ಚಂದಿರನು ಚಂದ್ರಿಕೆ ಚೆಲ್ಲಿರೇ 
           ರುಂಡ ಮಾಲೆ ಸಿರಿಕಂಠದಿ ಕುಣಿದಿರೆ 
           ಬೆಳ್ಳನೆ ಕಿವಿಯಲಿ ಕುಂಡಲ ಬೆಳಗಿರೆ 
           ಭಸ್ಮಧಾರಿ ತ್ರಿನೇತ್ರ ದಿಗಂಬರ ನಿರತವು 
          ಗಿರಿ ಕೈಲಾಸ ಶಿಖರದಲಿ ಮೆರೆವ ಶೂಲಧಾರಿ 
         ಸಕಲ ಪಾಪಹಾರಿ ತ್ರಿಪುರಾರೀ 
         ಜಯ ಹೇ ಶಂಕರನೇ ಶಿವನೇ ಜಯಹೇ ಗಂಗಾಧರನೇ 
         ಭವ್ಯ ಸುಂದರ ಭವ್ಯ ಪರಿಹಾರ ಪುಣ್ಯ ಮಂದಿರ ಪಾಪ ವಿಧೂರ
(ಸ್ವರಗಳು )
********************************************************************************

ಗುರಿ (1986)

ವಸಂತ ಕಾಲ ಬಂದಾಗ

ಚಲನ ಚಿತ್ರ: ಗುರಿ (1986)
ನಿರ್ದೇಶನ: ಪಿ. ವಾಸು 
ಸಂಗೀತ: ರಾಜನ್-ನಾಗೇಂದ್ರ 
ಸಾಹಿತ್ಯ: ಚಿ.ಉದಯಶಂಕರ್ 
ಗಾಯನ: ಡಾ| ರಾಜ್‍ಕುಮಾರ್
ನಟನೆ: ಡಾ| ರಾಜ್‍ಕುಮಾರ್, ಅರ್ಚನಾ, ತಾರಾ


ವಸಂತ ಕಾಲ ಬಂದಾಗ
ಮಾವು ಚಿಗುರಲೇ ಬೇಕು
ಕೋಗಿಲೆ ಹಾಡಲೆ ಬೇಕು
ಕಂಕಣ ಕೂಡಿ ಬಂದಾಗ
ಮದುವೆ ಆಗಲೇ ಬೇಕು
ಮಂಗಳ ವಾದ್ಯ ಮೊಳಗಲೇ ಬೇಕು

ಹೊಸಬಾಳ ಹೊಸಿಲಲ್ಲಿ
ನಸುನಾಚಿ ನಿಂತಾಗ
ನಿನ್ನಂದ ನಾ ನೋಡಬೇಕು
||ವಸಂತ ಕಾಲ||

ರೇಷ್ಮೇ ಸೀರೆಯುಟ್ಟು
ಹೊಸ ಹೂವ ಮುಡಿಯಲಿಟ್ಟು
ಮಧುಮಗಳಾಗಿ ಕುಳಿತಿರುವಾಗ ||೨||
ನೋಡುವುದೇ ಭಾಗ್ಯ ನಿನ್ನನು
ಮಂತ್ರ ಹೇಳುವಾಗ ಮಾಂಗಲ್ಯ ಕಟ್ಟುವಾಗ
ಕಳ್ಳಿಯಹಾಗೆ ಮಳ್ಳಿಯ ಹಾಗೆ ||೨||
ನಲ್ಲನ ನೀ ನೋಡೋ ನೋಟವಾ
ಕಾಣುವಾಸೆ ತಾಳಲಾರೆ ನನ್ನ ಮುದ್ದಿನ ಸೋದರಿ
|| ವಸಂತ ಕಾಲ||

ಜೋಡಿ ಬಂದ ಮೇಲೆ
ನಿನ್ನ ಬಾಳ ರೀತಿ ಬೇರೆ
ಬದುಕಲಿ ಜಾಲಿ, ವರುಷದಿ ಲಾಲಿ ||೨||
ಗೊಂಬೆಯ ಹಾಗೊಂದು ಕೈಯಲಿ
ನಾಳೆ ನಿನ್ನ ಮಗನು ನನ್ನ ಮಾವ ಎನ್ನುವಾಗ
ತಂಗಿಯೇ ನಿನಗೆ ಅಂದದ ಸೊಸೆಯಾ
ಎಲ್ಲಿಂದ ನಾ ತಂದು ಕೊಡಲಿ
ಓ...ಲಕ್ಷ ಲಕ್ಷ ಕೇಳಿದಾಗ
ಎಲ್ಲಿಗೆ ನಾ ಹೋಡಿ ಹೋಗಲಿ

||ವಸಂತ ಕಾಲ||  ||ವಸಂತ ಕಾಲ||

ತಾಕ್ಕಡ್ತ ತಾಕಡ್ತ ತಕ್ ತಾ....ಹ ಹ ಹ ಹ...
*****************************************************************************

ಅಲ್ಲಾ ಅಲ್ಲಾ, ನೀನೇ ಎಲ್ಲಾ

ಸಾಹಿತ್ಯ: ಚಿ.ಉದಯಶಂಕರ್
ಗಾಯನ: ಡಾ| ರಾಜ್‍ಕುಮಾರ್

ಅಲ್ಲಾ ಅಲ್ಲಾ, ನೀನೇ ಎಲ್ಲಾ... ||೨||
ನಿನ್ನನು ಬಿಟ್ಟರೆ ಗತಿಯಾರಿಲ್ಲ
ನಿನ್ನದೆ ಜಗವೆಲ್ಲ
ನಿನ್ನನು ಬಿಟ್ಟರೆ ಗತಿಯಾರಿಲ್ಲ
ನಿನ್ನದೆ ಜಗವೆಲ್ಲ
|| ಲಾ ಇಲಾಹಿ ||

ಅಲ್ಲಾ ಅಲ್ಲಾ, ನೀನೇ ಎಲ್ಲಾ...
ಅಲ್ಲಾ ಅಲ್ಲಾ, ನಿನ್ನದೆ ಎಲ್ಲಾ...

ಬೀಸುತ ಓಡುವ ತಂಬೆಲರೆಲ್ಲಾ
ಬಾನಲಿ ಹಾರುವ ಹಕ್ಕಿಗಳೆಲ್ಲಾ
ಬೀಸುತ ಓಡುವ ತಂಬೆಲರೆಲ್ಲಾ
ಬಾನಲಿ ಹಾರುವ ಹಕ್ಕಿಗಳೆಲ್ಲಾ
ಕಡಲಲ್ಲಿ ಏಳುವ ಅಲೆ ಅಲೆಯಲ್ಲಾ
ಅಲ್ಲಾ ಅಲ್ಲಾ ಎನುತಿದೆಯಲ್ಲಾ ||೨||

ಅಲ್ಲಾ ಅಲ್ಲಾ ಯಾ ಅಲ್ಲಾ
ಅಲ್ಲ ಅಲ್ಲಾ, ನೀನೇ ಎಲ್ಲಾ...ಹಾಯ್ ಅಲ್ಲಾ
ನಿನ್ನನು ಬಿಟ್ಟರೆ ಗತಿಯಾರಿಲ್ಲ
ನಿನ್ನದೆ ಜಗವೆಲ್ಲಾ

ನನ್ನ ಬಾಳಲ್ಲಿ ನೆಮ್ಮದಿಯಿಲ್ಲಾ
ಎಲ್ಲೆಡೆ ಕತ್ತಲೆ ತುಂಬಿದೆಯಲ್ಲಾ
ದಾರಿಯ ತೋರುವವರಾರು ಇಲ್ಲಾ ||೨||
ನೀ ಕೈಬಿಟ್ಟರೆ ಬದುಕೇ ಇಲ್ಲಾ.....

ಅಲ್ಲಾ  ಅಲ್ಲಾ ಅಲ್ಲಾ, ನೀನೇ ಎಲ್ಲಾ...
ನಿನ್ನನು ಬಿಟ್ಟರೆ ಗತಿಯಾರಿಲ್ಲ
ನಿನ್ನದೆ ಜಗವೆಲ್ಲಾ
ಯಾಲ್ಲ ಅಲ್ಲಾ ಯಾ ಅಲ್ಲಾ ||೩||

ಅಲ್ಲಾ ಎಂದರೆ ಕಷ್ಟಗಳಿಲ್ಲಾ
ಅಲ್ಲಾ ಎಂದರೆ ವೇದನೆಯಿಲ್ಲಾ
ಅಲ್ಲಾ ಎಂದರೆ ಕಷ್ಟಗಳಿಲ್ಲ, ಯಾ ಅಲ್ಲಾ
ಅಲ್ಲಾ ಎಂದರೆ ವೇದನೆಯಿಲ್ಲ, ಹಾಯ್ ಅಲ್ಲಾ
ಅಲ್ಲಾ ನೀನು ದಯೆ ತೋರಿದರೆ
ಮುಳ್ಳು ಹೂವಾಗಿ ಅರಳುವುದಲ್ಲಾ ||೨||

ಅಲ್ಲಾ ಅಲ್ಲಾ, ನೀನೇ ಎಲ್ಲಾ...
ನಿನ್ನನು ಬಿಟ್ಟರೆ ಗತಿಯಾರಿಲ್ಲ
ನಿನ್ನದೇ ಜಗವೆಲ್ಲಾ  ||ಲಾಹಿ ಲಾಹ||
ಅಲ್ಲಾ........................ (ಹಿನ್ನೆಲೆ)
ಅಲ್ಲಾ ಅಲ್ಲಾ, ನೀನೇ ಎಲ್ಲಾ..
ಅಲ್ಲಾ ಅಲ್ಲಾ, ನಿನ್ನದೆ ಎಲ್ಲಾ ||೩||

*****************************************************************************

ಕಲ್ಲಿನ ವೀಣೆಯ

ಸಾಹಿತ್ಯ: ಚಿ.ಉದಯಶಂಕರ್
ಗಾಯನ: ಡಾ| ರಾಜ್‍ಕುಮಾರ್ 

ಕಲ್ಲಿನ ವೀಣೆಯ ಮೀಟಿದರೇನು
ನಾದವು ಹೊಮ್ಮುವುದೇ
ಮಲ್ಲಿಗೆ ಹೂಗಳು ಬಾಡಿದ ಮೇಲೆ
ಪರಿಮಳ ಚೆಲ್ಲುವುದೇ
ಹೇಳೂ.. ಪರಿಮಳ ಚೆಲ್ಲುವುದೇ

ಕಲ್ಲಿನ ವೀಣೆಯ ಮೀಟಿದರೇನು
ನಾದವು ಹೊಮ್ಮುವುದೇ

ಎಲೆ ಎಲೆಯಲ್ಲಾ ಹೂವುಗಳಾಗಿ
ಹೂವುಗಳೆಲ್ಲಾ ಬಾಣಗಳಾಗಿ
ನನ್ನೆದೆಯಾ ಸೋಕಲಿ

ಆ ಮನ್ಮಥನೇ ನನ್ನೆದುರಾಗಿ
ಮೋಹನರಾಗದೀ ನನ್ನನು ಕೂಗಿ
ಛಲದಲಿ ಹೋರಾಡಲಿ
ಎಂದಿಗು ಅವನು ಗೆಲ್ಲುವುದಿಲ್ಲಾ
ಸೋಲದೆ ಗತಿಯಿಲ್ಲಾ...  ||ಕಲ್ಲಿನ ವೀಣೆಯ||

ಕಲ್ಲಿನ ವೀಣೆಯ ಮೀಟಿದರೇನು
ನಾದವೂ ಹೊಮ್ಮುವುದೇ

ಕಾಣುವ ಅಂಧಕೇ ನಾ ಕುರುಡಾಗಿ
ಪ್ರೇಮದ ಹಾಡಿಗೇ ನಾ ಕಿವುಡಾಗಿ
ನೆಮ್ಮದೀ... ದೂರಾಗಿದೇ..
ರೋಷದ ಬೆಂಕಿ, ಒಡಲನು ನುಂಗಿ
ಶಾಂತಿಯು ನನ್ನಾ, ಎದೆಯಲಿ ಇಂಗಿ
ಆಸೆಯೂ ಮಣ್ಣಾಗಿದೇ..
ಗಾಳಿಯ ಹಿಡಿವ ಹಂಬಲವೇಕೆ
ಚಪಲವು ನಿನಗೇಕೇ..

||ಕಲ್ಲಿನ ವೀಣೆಯ||

*********************************************************************************

ನಾ ಮೆಚ್ಚಿದ ಹುಡುಗ (1972)

ಬೆಳದಿಂಗಳಿನಾ ನೊರೆ ಹಾಲು

ಚಲನ ಚಿತ್ರ: ನಾ ಮೆಚ್ಚಿದ ಹುಡುಗ (1972)
ನಿರ್ದೇಶನ: ಆರ್. ಎನ್. ಜಯಗೋಪಾಲ್ 
ಸಂಗೀತ: ವಿಜಯಭಾಸ್ಕರ್
ಸಾಹಿತ್ಯ: ಆರ್.ಎನ್.ಜಯಗೋಪಾಲ್  
ಗಾಯಕರು: ಎಸ್.ಜಾನಕಿ ಮತ್ತು ಪಿ.ಬಿ.ಶ್ರೀನಿವಾಸ್  
ನಟನೆ: ಶ್ರೀನಾಥ್, ಕಲ್ಪನಾ, ಕೆ. ಎಸ್. ಅಶ್ವಥ್
   

ಬೆಳದಿಂಗಳಿನಾ ನೊರೆ ಹಾಲು ಕೊಡದಲಿ ತುಂಬಿ ತಂದವಳೇ 
ಹೊಳೆಯುವ ತಾರೆಯ ಹೊಂಬೆಳಕೂ ಕಣ್ಣಲಿ ಸೂಸಿ ನಿಂದವಳೇ 
ಬಾ ಬಾರೆ  ಬಾ ಬಾರೆ ಓ ಗೆಳತೀ ಜೀವನ ಸಂಗಾತಿ.... 

ಮಲ್ಲಿಗೆ ಹಂಬಿನ ತೋಟದಲೀ ತಂಬೆಲರಂತೆ ಬಂದವನೇ 
ಅರಿಯದ ಹೆಣ್ಣಿನ ಹೃದಯದಲೀ ಸುಮಧುರ ನೋವನು ತಂದವನೇ 
ಬಾ ಬಾರೋ  ಬಾ ಬಾರೋ ಓ ಗೆಳೆಯಾ ಜೀವನ ಸಂಗಾತಿ...  ....||ಪಲ್ಲವಿ||   

ವಸಂತ ಕಾಲದ ಪ್ರಥಮ ಕುಸುಮವೋ ಪ್ರೇಮಪಲ್ಲವಿಯೋ ||೨|| 
ಅನುರಾಗಾಮೃತ ಝರಿಯಲಿ ಮಿಂದಾ ಚಲುವ ಚೆನ್ನಿಗನೋ 
ಹೂವಿನ ತೇರಲಿ ಮೆರೆಯುತ ಬಂದಾ ದೇವಕನ್ನಿಕೆಯೋ....||ಮಲ್ಲಿಗೆ ಹಂಬಿನ ತೋಟದಲೀ||   

ಆಸೆಗಳೆಂಬ ಕಾರಂಜಿಗಳೂ ಹೊಮ್ಮುವ ನಂದನವೋ||೨|| 
ನಿನ್ನಾ ಕಿರುನಗೆಯೆಂಬ ಹೂವುಗಳಿಂದ ನಲಿಯುವ ಹೂಬನವೋ 
ಪ್ರಣಯಿಗಳಾ ಮಧುರವಿಹಾರವೋ ಪ್ರೇಮಕಾಶ್ಮೀರವೋ  ....||ಬೆಳದಿಂಗಳಿನಾ ನೊರೆಹಾಲು|| 

******************************************************************************** 

ಮಂಗಳದಾ ಈ ಸುದಿನ

ಸಾಹಿತ್ಯ: ಆರ್.ಎನ್.ಜಯಗೋಪಾಲ್  
ಗಾಯಕರು: ಎಸ್.ಜಾನಕಿ  

ಆ....ಆ...... 

ಮಂಗಳದಾ ಈ ಸುದಿನ ಮಧುರವಾಗಲೀ 
ನಿಮ್ಮೊಲವೇ ಈ ಮನೆಯಾ ನಂದಾದೀಪವಾಗಲೀ..||೨||...||ಪಲ್ಲವಿ||   

ಅನುರಾಗದ ರಾಗಮಾಲೆ ನಿಮ್ಮದಾಗಲೀ 
ಅಪಸ್ವರದಾ ಛಾಯೆಯೆಂದು ಕಾಣದಾಗಲೀ..||೨|| 
ಶೃತಿಯೊಡನೇ ಸ್ವರತಾನ ಲೀನವಾಗಲೀ 
ಶುಭಗೀತೆ ಮಿಡಿಯಲೀ  ....||ಮಂಗಳದಾ||   

ತಂದೆತಾಯಿ ದಾರಿತೋರೋ ಕಣ್ಣುಗಳೆರಡೂ 
ಅವರ ಪ್ರೇಮ ದೂರವಾಗೆ ಮಕ್ಕಳು ಕುರುಡೂ..||೨|| 
ಮಮತೆ ಇರುವ ಮನೆಯೆ ಸದಾ ಜೇನಿನ ಗೂಡೂ 
ಅದೇ ಶಾಂತಿಯ ಬೀಡೂ  ....||ಮಂಗಳದಾ||

********************************************************************************
http://lyricsforannavarahits.blogspot.com/

https://kn.wikisource.org/wiki/%E0%B2%9A%E0%B2%B2%E0%B2%A8%E0%B2%9A%E0%B2%BF%E0%B2%A4%E0%B3%8D%E0%B2%B0_%E0%B2%B8%E0%B2%BE%E0%B2%B9%E0%B2%BF%E0%B2%A4%E0%B3%8D%E0%B2%AF

ಜೀವಾ (2009)


ಸುಮ್ಮನೆ ಯಾಕೆ ಬಂದೆ

ಚಲನ ಚಿತ್ರ: ಜೀವಾ (2009)
ಸಾಹಿತ್ಯ: ಕವಿರಾಜ್
ಸಂಗೀತ: ಗುರುಕಿರಣ್
ಗಾಯನ: ಸೋನು ನಿಗಮ್, ಶ್ರುತಿ
ನಿರ್ದೇಶನ: ಪ್ರಭು ಶ್ರೀನಿವಾಸ್ 
ನಟನೆ: ಪ್ರಜ್ವಲ್ ದೇವರಾಜ್, ಋತುವಾ 


ಸುಮ್ಮನೆ ಯಾಕೆ ಬಂದೆ
ಮಿಂಚಂತೆ ನನ್ನ ಮುಂದೆ
ನಿನ್ನನು ನೋಡಿದಂದೆ
ನಾ ಬಿದ್ದೆ ನಿನ್ನ ಹಿಂದೆ
ಬರದೀಗ ನಂಗೆ ನಿದ್ದೆ
ನಿನ್ನನು ನೋಡದೆ... ||ಸುಮ್ಮನೆ ಯಾಕೆ||

ಬೊಂಬೆಗೆ ಜೀವ ತಂದು,
ಆ ಬ್ರಹ್ಮನು ನನಗೆಂದು, ಭೂಮಿಗೆ ತಂದನು
ನಿನ್ನನು ಇಂದು...
ಜನಿಸುವೆ ಜನಿಸುವೆ ಪುನ ಪುನಃ
ಜೊತೆಯಲಿ ಬದುಕಲು ಇದೆ ತರಹ‌
ಜಾರದ ಹಾಗೆ ಇಂದು
ಕಣ್ಣೀರ ಬಿಂದು ಒಂದು
ನಾನಿನ್ನ ಕಾಯುವೆ... ಜೊತೆಯಾಗಿ ಇಂದು
ಎದೆ ಬಡಿತ ಇದೆ ಸತತ
ನಿನ್ನನೆ ಕೂಗುತ.... ||ಸುಮ್ಮನೆ ಯಾಕೆ||

ಮೈಯಲ್ಲಿ ನೂರು ರಾಗ‌
ನೀ ನನ್ನ ಸೋಕಿದಾಗ‌
ಬಳಿಯಲ್ಲಿ ನೀನು ಬರಲು
ನಾ ತೇಲೊ ಮೇಘ...
ದಿನ ದಿನ ಅನವರತ‌
ಜೊತೆ ಇರು ಜೊತೆ ಇರು ನಗುನಗುತ...
ನಿನ್ನೆದೆ ಗೂಡಲೀಗ, ನನಗೊಂದು ಪುಟ್ಟ ಜಾಗ‌
ನೀ ನೀಡು ಸಾಕು ನನಗೆ, ಇನ್ನೇಕೆ ಲೋಕ..
ನಿನ್ನ ಪಡೆದೆ ಅನಿಸುತಿದೆ,
ಈ ಜನ್ಮ ಸಾರ್ಥಕ.... ||ಸುಮ್ಮನೆ ಯಾಕೆ||

ಸುಮ್ಮನೆ ಯಾಕೆ ಬಂದೆ
ನಾ ನಿನ್ನ ಕಣ್ಣ ಮುಂದೆ....

*********************************************************************************

ಸಹೋದರರ ಸವಾಲ್ (1977)



ಚಲನ ಚಿತ್ರ: ಸಹೋದರರ ಸವಾಲ್ (1977)
ಸಾಹಿತ್ಯ: ಚಿ. ಉದಯಶಂಕರ್ 
ಸಂಗೀತ: ರಾಜನ್-ನಾಗೇಂದ್ರ 
ಗಾಯನ: ಪಿ.ಸುಶೀಲ & ಎಸ್.ಪಿ. ಬಾಲಸುಬ್ರಹ್ಮಣ್ಯಂ
ನಿರ್ದೇಶನ: ಕೆ. ಎಸ್. ಆರ್. ದಾಸ್ 
ನಟನೆ: ವಿಷ್ಣುವರ್ಧನ್, ರಜಿನಿಕಾಂತ್  


ಓ ನಲ್ಲನೆ ಸವಿ ಮಾತೊಂದ ನುಡಿವೆಯಾ
ನಾನೇನಲು ನುಡಿಯಲೆ ನಲ್ಲೆ ತಿಳಿಸೆಯಾ
ನಾ ನಿನ್ನ ಬಿಡೆನು ಎಂದಿಗೂ
ನೀ ನನ್ನ ಜೀವ ಎಂದಿಗೂ

ಹಾಲು ಜೇನು ಕಲೆತಂತೆ
ಮನಸು ಮನಸು ಕಲೆತಾಯ್ತು
ಬದುಕಲ್ಲಿ ಹರುಷ ತುಂಬಿತು
ನದಿಗಳೆರಡು ಬೆರೆತಂತೆ
ಹೃದಯವೆರಡು ಬೆರೆತಾಯ್ತು
ನೀ ಬಂದು ಬಾಳು ಬೆಳಗಿತು
ನಾವೆಂದೆಂದೂ ಹೀಗೊಂದಾಗಿ
ಇರುವಾಸೆ ತಂದಿತು ||ಓ ನಲ್ಲನೆ||

ಪ್ರೇಮ ಜ್ಯೋತಿ ಬೆಳಗುತಿದೆ
ಇರುಳ ನುಂಗಿ ಬೆಳೆಯುತಿದೆ
ಬಾಳಿಗೆ ತಂತೂ ಹರುಷವ
ಆರದಂತೆ ಜ್ಯೋತಿಯನು
ಕಾವಲಿರಿಸಿ ಕಂಗಳನು
ಬಾಳನ್ನೇ ಧಾರೆ ಎರೆಯುವಾ
ನಾವೆಂದಂದೂ ಹೀಗೊಂದಾಗಿ
ಆನಂದ ಹೊಂದುವಾ ಓ ಅರಗಣಿ

ಸವಿ ಮಾತೊಂದ ನುಡಿವೆಯಾ..
ನಾ ನಿನ್ನ ಬಿಡೆನೂ ಎಂದಿಗೂ..



********************************************************************************

ಮಹಾಕ್ಷತ್ರಿಯ (1994)


ಈ ಭೂಮಿ ಬಣ್ಣದ ಬುಗುರಿ

ಚಲನಚಿತ್ರ: ಮಹಾಕ್ಷತ್ರಿಯ (1994)
ಸಾಹಿತ್ಯ: ಹಂಸಲೇಖ 
ಸಂಗೀತ: ಹಂಸಲೇಖ 
ಗಾಯನ: ಎಸ್. ಪಿ. ಬಾಲಸುಬ್ರಹ್ಮಣ್ಯಂ  
ನಿರ್ದೇಶನ: ರಾಜೇಂದ್ರ ಸಿಂಗ್ ಬಾಬು 
ನಟನೆ: ವಿಷ್ಣುವರ್ಧನ್, ಸೋನು ವಾಲಿಯಾ, 
ರಾಮ್ ಕುಮಾರ್, ಸುಧಾ ರಾಣಿ 


ಓ ಒಹೋ ಓಹೋ
ಈ ಭೂಮಿ ಬಣ್ಣದ ಬುಗುರಿ
ಆ ಶಿವನೇ ಚಾಟಿ ಕಣೋ
ಈ ಬಾಳು ಸುಂದರ ನಗರಿ
ನೀನಿದರ ಮೇಟಿ ಕಣೋ
ನಿಂತಾಗ ಬುಗುರಿಯ ಆಟ
ಎಲ್ಲಾರು ಒಂದೆ ಓಟ
ಕಾಲ ಕ್ಷಣಿಕ ಕಣೋ
ಈ ಭೂಮಿ ಬಣ್ಣದ ಬುಗುರಿ
ಆ ಶಿವನೇ ಚಾಟಿ ಕಣೋ
ಈ ಬಾಳು ಸುಂದರ ನಗರಿ
ನೀನಿದರ ಮೇಟಿ ಕಣೋ

ಮರಿಬೇಡ ತಾಯಿಯ ಋಣವ
ಮರಿಬೇಡ ತಂದೆಯ ಒಲವ
ಹಡೆದವರೇ ದೈವ ಕಣೋ
ಸುಖವಾದ ಬಾಷೆಯ ಕಲಿಸೊ
ಸರಿಯಾದ ದಾರಿಗೆ ನೆಡೆಸೊ
ಸಂಸ್ಕೃತಿಯೇ ಗುರುವು ಕಣೋ
ಮರೆತಾಗ ಜೀವನ ಪಾಠ
ಕೊಡುತಾನೆ ಚಾಟಿಯ ಏಟ
ಕಾಲ ಕ್ಷಣಿಕ ಕಣೋ
ಈ ಭೂಮಿ ಬಣ್ಣದ ಬುಗುರಿ
ಆ ಶಿವನೇ ಚಾಟಿ ಕಣೋ
ಈ ಬಾಳು ಸುಂದರ ನಗರಿ
ನೀನಿದರ ಮೇಟಿ ಕಣೋ

ಮರಿಬೇಡ ಮಗುವಿನ ನಗುವ
ಕಳಿಬೇಡ ನಗುವಿನ ಸುಖವ
ಭರವಸೆಯೇ ಮಗುವು ಕಣೇ
ಕಳಬೇಡ ಕೊಲ್ಲಲು ಬೇಡ
ನೀ ಹಾಡು ಶಾಂತಿಯ ಹಾಡ
ಜೀವನವೇ ಪ್ರೀತಿ ಕಣೋ
ನಿಂತಾಗ ಬುಗುರಿಯ ಆಟ
ಎಲ್ಲಾರು ಒಂದೆ ಓಟ
ಕಾಲ ಕ್ಷಣಿಕ ಕಣೋ
ಈ ಭೂಮಿ ಬಣ್ಣದ ಬುಗುರಿ
ಆ ಶಿವನೇ ಚಾಟಿ ಕಣೋ
ಈ ಬಾಳು ಸುಂದರ ನಗರಿ
ನೀನಿದರ ಮೇಟಿ ಕಣೋ

*******************************************************************************

ಹೃದಯಗೀತೆ (1989)



ಯುಗಯುಗಗಳೇ ಸಾಗಲಿ

ಚಲನಚಿತ್ರ: ಹೃದಯಗೀತೆ (1989)
ನಿರ್ದೇಶನ: ಹೆಚ್. ಆರ್. ಭಾರ್ಗವ 
ಸಂಗೀತ: ರಾಜನ್-ನಾಗೇಂದ್ರ 
ಸಾಹಿತ್ಯ: ಎಂ. ಎನ್. ವ್ಯಾಸರಾವ್
ಗಾಯನ: ಎಸ್.ಪಿ. ಬಾಲಸುಬ್ರಹ್ಮಣ್ಯಂ, ಕೆ.ಎಸ್. ಚಿತ್ರಾ 
ನಟನೆ: ವಿಷ್ಣುವರ್ಧನ್, ಖುಷ್ಬೂ, ಭವ್ಯಾ 


ಯುಗಯುಗಗಳೇ ಸಾಗಲಿ ನಮ್ಮ ಪ್ರೇಮ ಶಾಶ್ವತ
ಗಿರಿಗಗನವೇ ಬೀಳಲಿ ನಮ್ಮ ಪ್ರೀತಿ ಶಾಶ್ವತ
ನದಿ-ಸಾಗರ ಕೆರಳಲಿ ನಮ್ಮ ಪ್ರೇಮ ಶಾಶ್ವತ
ಜಗವೇನೇ ಹೇಳಲಿ ನಮ್ಮ ಪ್ರೀತಿ ಶಾಶ್ವತ
ಯುಗಯುಗಗಳೇ ಸಾಗಲಿ ನಮ್ಮ ಪ್ರೇಮ ಶಾಶ್ವತ

ನಡುಗಲಿ ಭುವಿ ಬಿರಿಯಲಿ, ನೀನೇ ಈ ಬಾಳ ಜೀವ
ಉರಿಯಲಿ ಕಿಡಿ ಸಿಡಿಯಲಿ, ಏಕೆ ಈ ತಾಪ ಭಾವ
ಒಲವಿಂದು ತುಂಬಿ ಬಂದು ಮೈ ತುಂಬ ಮಿಂಚಿದೆ
ಒಡನಾಡಿ ಪ್ರೀತಿ ನೀಡು ಈ ನಿನ್ನ ಪ್ರೇಮಿಗೆ
ಈ ಭೀತಿ ಇನ್ನೇಕೇ ಈ ದೂರವೇಕೆ?



ಯುಗಯುಗಗಳೇ ಸಾಗಲಿ ನಮ್ಮ ಪ್ರೇಮ ಶಾಶ್ವತ
ಗಿರಿಗಗನವೇ ಬೀಳಲಿ ನಮ್ಮ ಪ್ರೀತಿ ಶಾಶ್ವತ
ನದಿ-ಸಾಗರ ಕೆರಳಲಿ, ನಮ್ಮ ಪ್ರೇಮ ಶಾಶ್ವತ
ಜಗವೇನೇ ಹೇಳಲಿ ನಮ್ಮ ಪ್ರೀತಿ ಶಾಶ್ವತ
ಯುಗಯುಗಗಳೇ ಸಾಗಲಿ ನಮ್ಮ ಪ್ರೇಮ ಶಾಶ್ವತ

ಭಯವ ಬಿಡು ನೀನು ನಿನಗಾಗಿ ಓಡೋಡಿ ಬಂದೆ
ಸುಖದ ಮಧು ನೀನು ಬದುಕಲ್ಲಿ ತಂಗಾಳಿ ತಂದೆ

ಅಮರ ಈ ಪ್ರೇಮ ಬರಲಾರದಿಂದೆಂದು ಸಾವು
ದಹಿಸು ಈ ಮೌನ ಮನದೆಲ್ಲಿ ಏಕಿಂಥ ನೋವು
ಈ ಪ್ರಾಣವೇ ಹೋಗಲಿ ಈ ಲೋಕವೇ ನೂಕಲಿ
ಎಂದೆಂದು ಸಂಗಾತಿ ನೀನೇ

ಯುಗಯುಗಗಳೇ ಸಾಗಲಿ ನಮ್ಮ ಪ್ರೇಮ ಶಾಶ್ವತ
ಗಿರಿಗಗನವೇ ಬೀಳಲಿ ನಮ್ಮ ಪ್ರೀತಿ ಶಾಶ್ವತ
ನದಿ-ಸಾಗರ ಕೆರಳಲಿ ನಮ್ಮ ಪ್ರೇಮ ಶಾಶ್ವತ
ಜಗವೇನೇ ಹೇಳಲಿ ನಮ್ಮ ಪ್ರೀತಿ ಶಾಶ್ವತ
ಯುಗಯುಗಗಳೇ ಸಾಗಲಿ ನಮ್ಮ ಪ್ರೇಮ ಶಾಶ್ವತ
ಆ ಹಾ ಆ ಹಾ ಆ ಹಾ ಆ ಹಾ ಆ ಹುಂ ಹುಂ ಹಂ  ಹಂ ಹಂ

********************************************************************************

ಹೃದಯಗೀತೆ ಹಾಡುತಿರೆ


ರಚನೆ: ಪ್ರೊ. ದೊಡ್ಡರಂಗೇಗೌಡ  
ಗಾಯನ : ಎಸ್.ಪಿ.ಬಾಲಸುಬ್ರಮಣ್ಯಂ, ಕೆ. ಎಸ್. ಚಿತ್ರಾ 


ಹೃದಯಗೀತೆ ಹಾಡುತಿರೆ ಭೂಮಿ ಸ್ವರ್ಗವಾಗಿದೆ
ಹೃದಯಗೀತೆ ಹಾಡುತಿರೆ ಭೂಮಿ ಸ್ವರ್ಗವಾಗಿದೆ
ಮನದಾಸೆ ಮೂಡಿದೆ ಒಲವಿನ ಜೊತೆ ಬೇಡಿದೆ
ಮನದಾಸೆ ಮೂಡಿದೆ ಒಲವಿನ ಜೊತೆ ಬೇಡಿದೆ
ಎಲ್ಲಿರುವೆ ನೀ ಎಲ್ಲಿರುವೆ ಎಲ್ಲಿರುವೆ ನೀ ಎಲ್ಲಿರುವೆ

ಇನ್ನೆ೦ದೂ ಏಕಾ೦ಗಿ ನೀನಲ್ಲ 
ಸ೦ಗಾತಿ ನಾನಾಗಿ ಬರುವೆ
ರಾಧೆ ಕೃಷ್ಣ ಕೂಡಿದ೦ತೆ
ಎ೦ದೆ೦ದೂ ಪ್ರೀತಿಯಿ೦ದ
ಸ೦ತೋಷದಿ೦ದ ಬಾಳುವಾ
ಕಣ್ಣೀರ ನೀ ತೊರೆದು ನಕ್ಕಾಗ
ನಿನಗಾಗಿ ನಾನಿರುವೆ ಬ೦ಧು
ನದಿಯು ಕಡಲ ಸೇರಿದ೦ತೆ     
ಒ೦ದಾಗಿ ನಾವು ಇ೦ದು
ಶೃ೦ಗಾರ ಹಾದಿ ಕಾಣುವಾ      
ನಾನೇ ನೀನಾಗಿ ನೀನೇ ನಾನಾಗಿ

ಹೃದಯಗೀತೆ ಹಾಡುತಿರೆ ಭೂಮಿ ಸ್ವರ್ಗವಾಗಿದೆ
ಹೃದಯಗೀತೆ ಹಾಡುತಿರೆ ಭೂಮಿ ಸ್ವರ್ಗವಾಗಿದೆ
ಮನದಾಸೆ ಮೂಡಿದೆ ಒಲವಿನ ಜೊತೆ ಬೇಡಿದೆ
ಮನದಾಸೆ ಮೂಡಿದೆ ಒಲವಿನ ಜೊತೆ ಬೇಡಿದೆ
ಎಲ್ಲಿರುವೆ ನೀ ಎಲ್ಲಿರುವೆ ಎಲ್ಲಿರುವೆ ನೀ ಎಲ್ಲಿರುವೆ

ನಿನ್ನನ್ನು ಮನಸಾರೆ ಪ್ರೀತಿಸಿ 
ನೆರಳ೦ತೆ ನಾ ಹಿ೦ದೆ ಬರುವೆ
ನಿನ್ನನ್ನು ಮನಸಾರೆ ಪ್ರೀತಿಸಿ 
ನೆರಳ೦ತೆ ನಾ ಹಿ೦ದೆ ಬರುವೆ
ಹಾಲು ಜೇನು ಸೇರಿದ೦ತೆ 
ನಾವಿ೦ದು ಹೊ೦ದಿಕೊ೦ಡು
ಹಾಲು ಜೇನು ಸೇರಿದ೦ತೆ 
ನಾವಿ೦ದು ಹೊ೦ದಿಕೊ೦ಡು
ಆನ೦ದದಿ೦ದ ಹಾಡುವ 
ಆನ೦ದದಿ೦ದ ಹಾಡುವ
ರಾಗ ನೀನಾಗಿ ತಾಳ ನೀನಾಗಿ

ಹೃದಯಗೀತೆ ಹಾಡುತಿರೆ ಭೂಮಿ ಸ್ವರ್ಗವಾಗಿದೆ
ಹೃದಯಗೀತೆ ಹಾಡುತಿರೆ ಭೂಮಿ ಸ್ವರ್ಗವಾಗಿದೆ
ಮನದಾಸೆ ಮೂಡಿದೆ ಒಲವಿನ ಜೊತೆ ಬೇಡಿದೆ
ಮನದಾಸೆ ಮೂಡಿದೆ ಒಲವಿನ ಜೊತೆ ಬೇಡಿದೆ
ಎಲ್ಲಿರುವೆ ನೀ ಎಲ್ಲಿರುವೆ ಎಲ್ಲಿರುವೆ ನೀ ಎಲ್ಲಿರುವೆ

ಆ ಹಾ ಹಾ ಆ ಹಾ ಹಾ ಓಹೋ ಓಹೋ ಓಹೋ

*********************************************************************************

ಈ ಕಡೆ ಬರ್ಮಾ ಬಜಾರ್

ಸಾಹಿತ್ಯ : ಗೀತಪ್ರಿಯ 
ಗಾಯನ : ಎಸ್.ಪಿ.ಬಾಲಸುಬ್ರಮಣ್ಯಂ


ಈ ಕಡೆ ಬರ್ಮಾ ಬಜಾರ್ ಆ ಕಡೆ ಚೈನಾ ಬಜಾರ್
ಮು೦ದ್ಗಡೆ ಬೊ೦ಬೂ ಬಜಾರ್ ಹಿ೦ದ್ಗಡೆ ಚೊ೦ಬು ಬಜಾರ್
ಲೋಕವೆಲ್ಲಾ ಮಾಯಾ ಬಜಾರ್ರ್ ಅದರಲ್ಲಿ ಜನತಾ ಬಜಾರ್
ಹುಷಾರ್ ಹುಷಾರ್ ನಮ್ಮದು ಮಹಾ ಹುಚ್ಚರ ಬಜಾರ್
ಹುಷಾರ್ ಹುಷಾರ್ ನಮ್ಮದು ಮಹಾ ಹುಚ್ಚರ ಬಜಾರ್

ಗುಟ್ಟೊ೦ದು ಹೇಳ್ತೀನಿ ಒಳಗಿಟ್ಕೊಳ್ಳಿ
ಕೊಡಿ ಕೊಡಿ ನ೦ಗ್ ಸ್ವಲ್ಪ ನ೦ಗ್ ಸ್ವಲ್ಪ ನ೦ಗೆ ನ೦ಗೆ ನ೦ಗೆ
ಯಾರಿಗೂ ಇದನ್ನ ಬಾಯ್ಬಿಡ್ಬೇಡಿ  ಹೌದಾ
ಆಕಾಶ ಮೇಲೈತೆ ಯಾರಿಗೂ ಗೊತ್ತಿಲ್ಲ   
ಭೂಮಿ ಕೆಳಗೈತೆ ಒಬ್ಬರಿಗೂ ಗೊತ್ತಿಲ್ಲ
ಮಧ್ಯದಲ್ಲಿ ನಾವಿದ್ದೀವಿ ನಮಗೇ ಗೊತ್ತಿಲ್ಲ
ನಮಗೇ ಗೊತ್ತಿಲ್ಲ  ಅಯ್ಯೋ ನಮಗೇ ಗೊತ್ತಿಲ್ಲ
ಇ೦ಥ ದೊಡ್ಡ ದೊಡ್ಡ ವಿಷಯ ದೊಡ್ಡೋರಿಗೂ ಗೊತ್ತಿಲ್ಲ
ದೊಡ್ಡೋರಿಗೂ ಗೊತ್ತಿಲ್ಲ   ಗೊತ್ತಿಲ್ಲ ಗೊತ್ತಿಲ್ಲ ಗೊತ್ತಿಲ್ಲ
ಗೊತ್ತಿರೋ ನಮ್ಮ೦ಥ ಮೇಧಾವಿಗಳ್ನ
ಹುಚ್ಚರು ಅ೦ತಾರಲ್ಲಾ ಹುಷಾರ್!

ಈ ಕಡೆ ಸೇ೦ದಿ ಬಜಾರ್ ಆ ಕಡೆ ಚಿ೦ದಿ ಬಜಾರ್
ಮು೦ದ್ಗಡೆ ಬ್ರಾ೦ದಿ ಬಜಾರ್ ಹಿ೦ದ್ಗಡೆ ಬೂ೦ದಿ ಬಜಾರ್
ಲೋಕವೆಲ್ಲಾ ಮಾಯಾ ಬಜಾರ್ ಅದರಲ್ಲಿ ಜನತಾ ಬಜಾರ್
ಹುಷಾರ್ ಹುಷಾರ್ ನಮ್ಮದು ಮಹಾ ಹುಚ್ಚರ ಬಜಾರ್
ಹುಷಾರ್ ಹುಷಾರ್ ನಮ್ಮದು ಮಹಾ ಹುಚ್ಚರ ಬಜಾರ್

ಅ೦ಗಳದಲ್ಲಿ ಆಡೋವಾಗ ಕೋಳಿ ಅ೦ತಾರೆ
ಕಿಚನ್ನಲ್ಲಿ ಬೇಯಿಸಿ ಅದನ್ನ ಚಿಕನ್ ಅ೦ತಾರೆ
ಸುಳ್ಳು ಪಳ್ಳು ಎಲ್ಲಾ ಸೇರ್ಸಿ ಸೆಟಪ್ ಮಾಡ್ತಾರೆ
ನಿಜ ಹೇಳೋಕ್ ಹೋದರೆ ನಮ್ಮನ್ನ ಶಟಪ್ ಅ೦ತಾರೆ
ಶಟಪ್ ಶಟಪ್ ಶಟಪ್
ಒಬ್ಬರನ್ನಕಿತ್ತು ಇನ್ನೊಬ್ರಿಗೆ ದಾನ ಮಾಡ್ತಾರೆ
ನಟ್ಟು ಬೋಳ್ಟು ಎಲ್ಲಾ ಕಿತ್ತು ಹರಾಜ್ ಹಾಕ್ತಾರೆ
ಒ೦ದ್ ಸಾರಿ ಎರ್ಡು ಸಾರಿ ಮೂರ್ ಸಾರಿ
ಹುಷಾರ್

ಈ ಕಡೆ ಬರ್ಮಾ ಬಜಾರ್ ಆ ಕಡೆ ಚೈನಾ ಬಜಾರ್
ಮು೦ದ್ಗಡೆ ಬೊ೦ಬೂ ಬಜಾರ್ ಹಿ೦ದ್ಗಡೆ ಚೊ೦ಬು ಬಜಾರ್
ಲೋಕವೆಲ್ಲಾ ಮಾಯಾ ಬಜಾರ್ ಅದರಲ್ಲಿ ಜನತಾ ಬಜಾರ್
ಹುಷಾರ್ ಹುಷಾರ್ ನಮ್ಮದು ಮಹಾ ಹುಚ್ಚರ ಬಜಾರ್
ಹುಷಾರ್ ಹುಷಾರ್ ನಮ್ಮದು ಮಹಾ ಹುಚ್ಚರ ಬಜಾರ್

ಬರ್ಮಾ ಬಜಾರ್ ಚೈನಾ ಬಜಾರ್
ಬೊ೦ಬೂ ಬಜಾರ್ ಚೊ೦ಬು ಬಜಾರ್
ಮಾಯಾ ಬಜಾರ್ ಜನತಾ ಬಜಾರ್
ಹುಚ್ಚರ ಬಜಾರ್

*********************************************************************************

ಪ್ರೇಮಾನುರಾಗ ಬಾಳಲ್ಲಿ

ರಚನೆ: ರುದ್ರಮೂರ್ತಿಶಾಸ್ತ್ರಿ 
ಗಾಯನ : ಎಸ್.ಪಿ.ಬಾಲಸುಬ್ರಮಣ್ಯಂ


ಪ್ರೇಮಾನುರಾಗ ಬಾಳಲ್ಲಿ ತು೦ಬಿ
ಮನಸ್ಸುಗಳು ಕೂಡಲಿ ಶುಭಗೀತೆ ಹಾಡಲಿ
ಮನಸ್ಸುಗಳು ಕೂಡಲಿ ಶುಭಗೀತೆ ಹಾಡಲಿ
ಪ್ರೇಮಾನುರಾಗ...

ಪ್ರೇಮ ಮಿಡಿದಾಗ ಜಗವಾ ಮರೆವಾ ಮಧುರಾ ಭಾವನ
ಭಾವ ಬೆರೆತಾಗ ಒಲಿದು ನಲಿದು ಪುಳಕ ಮೈಮನ
ಪ್ರೇಮ ಹೊಳೆಯ೦ತೆ ಹರಿದು ಎದೆಗೆ ತರುವ ತಲ್ಲಣ
ಪ್ರೇಮ ಹೂವಾಗಿ ಅರಳಿ ಮನದ ಮನೆಗೆ ತೋರಣ
ಮನುಜನ ಬಾಳಿಗೆ ಒಲವಿನ ಬ೦ಧನ
ಮಧುಮಯ ಪ್ರೇಮಗಾನ

ಪ್ರೇಮಾನುರಾಗ ಬಾಳಲ್ಲಿ ತು೦ಬಿ
ಮನಸ್ಸುಗಳು ಕೂಡಲಿ ಶುಭಗೀತೆ ಹಾಡಲಿ
ಮನಸ್ಸುಗಳು ಕೂಡಲಿ ಶುಭಗೀತೆ ಹಾಡಲಿ


ಪ್ರೇಮಾನುರಾಗ...


ಪ್ರೇಮ ಹೂ ಅಲ್ಲ ವಿಷದ ಮುಳ್ಳು ಚುಚ್ಚಿ ನೋಯಿಸಿ
ಪ್ರೇಮ ಎದೆ ತು೦ಬಾ ಉರಿಯ ಸುರಿದು ದಿನವೂ ಬೇಯಿಸಿ
ಪ್ರೇಮ ಅವಿವೇಕ ಸುಖದಾ ಕಲಸ ತುಡಿವ ಹಾದತಿ
ಪ್ರೇಮ ಬರೀ ಮೋಸ ಮನವ ಮುರಿದು ನಗುವ ರಕ್ಕಸಿ
ಈ ಪ್ರೇಮ ಕಡು ಪಾಪಿಯೋ.. ಅಹ್ಹಹಾ
ಎದೆ ಸೀಳೋ ಅತಿ ಕ್ರೂರಿಯೋ ಅಹ್ಹಹಾ
ಈ ಪ್ರೇಮ ಮನಮೋಹಕ  ಹ್ಹಾ.. ಏನಲ್ಲ ನಯವ೦ಚಕ
ಸುಡುವುದು ಪ್ರೇಮ ಬಡಿಯುದು ಪ್ರೇಮ
ಸಿಡಿದು ಬಡಿದೂ ಬದುಕೇ ಬರಿದೂ

*********************************************************************************

ಪ್ರೀತಿಯ ಮಾತನ್ನು

ರಚನೆ: ಶ್ಯಾಮಸುಂದರ ಕುಲಕರ್ಣಿ 
ಗಾಯನ : ಎಸ್.ಪಿ.ಬಾಲಸುಬ್ರಮಣ್ಯಂ
ವಾಣಿ ಜಯರಾಮ್  


ಗಂ: ಪ್ರೀತಿಯ ಮಾತನ್ನು ಕೇಳಿ ಕುಣಿದೆನು
ಆಸೆಯ ಬಾನಲ್ಲಿ ತೇಲಿ ಹೋದೆನು
ಐ ಲವ್ ಯು ಐ ಲವ್ ಯು ಐ ಲವ್ ಯು
ಹೆ: ಸಂತಸದ ನಿಧಿಯಾಗಿ ಜೀವನದ ಜೊತೆಯಾಗಿ
ನವ ಜ್ಯೋತಿಯಾಗಿ ಮನ ಬೆಳಗು ಬಾ..
ಲವ್ ಯು ಲವ್ ಯು ಲವ್ ಯು
ಗಂ: ಪ್ರೀತಿಯ ಮಾತನ್ನು ಕೇಳಿ ಕುಣಿದೆನು
ಹೆ: ಆಸೆಯ ಬಾನಲ್ಲಿ ತೇಲಿ ಹೋದೆನು
ಇಬ್ಬರು: ಐ ಲವ್ ಯು ಐ ಲವ್ ಯು ಐ ಲವ್ ಯು

ಗಂ: ಹೂವಲ್ಲೇ ನೈದಿರುವ ಈ ನಿನ್ನ ಅಂದವ
ಆ ಬ್ರಹ್ಮ ಅವನೆಂಥ ಜಾಣ
ಹೆ: ಮೈಯೆಲ್ಲಾ ನಿಂದೇನೆ ಹೊಸ ಗುಂಗು ತುಂಬಿದೆ
ಬಾಳಾಯ್ತು ಶೃಂಗಾರ ತಾಣ
ಗಂ: ಚೈತ್ರವು ತಂದಿದೆ ನಿಜ ಮೈತ್ರಿಯಾ ಸಂಗವ
ಹೆ: ನಿನ್ನಲ್ಲೇ ಕಂಡೆನು ನವ ರಾತ್ರಿಯ ವೈಭವ
ಗಂ:ಲವ್ ಯು ಲವ್ ಯು ಲವ್ ಯು ಲವ್ ಯು ಲವ್ ಯು

ಹೆ : ಪ್ರೀತಿಯ ಮಾತನ್ನು ಕೇಳಿ ಕುಣಿದೆನು
ಗಂ: ಆಸೆಯ ಬಾನಲ್ಲಿ ತೇಲಿ ಹೋದೆನು
ಇಬ್ಬರು: ಐ ಲವ್ ಯು ಐ ಲವ್ ಯು ಐ ಲವ್ ಯು 
ಲಾಲಾ ಲ ಲಾಲಾ ಲಾಲಾ ಲಲಲಲಲ

ಹೆ: ಒಲವೆಂಬ ಹೊನಲಾಗಿ ಈ ಮನವ ತುಂಬಿದೆ
ಮೈ ಮರೆತು ನಾ ಹಿಗ್ಗಿ ನಲಿದೆ
ಗಂ: ನಿನಗಾಗಿ ದಿನ ನಿತ್ಯ ನಾ ಧ್ಯಾನ ಮಾಡಿದೆ
ದಯ ತೋರಿ ನೀನಿಂದು ಒಲಿದೆ
ಹೆ: ಮಾತಲ್ಲೇ ಗೆಲ್ಲುತ ಮನ ದೋಚಿದ ಮನ್ಮಥ
ಗಂ: ಸೇರುತ ಸವಿಯುವ ಸಿಹಿ ಸ್ನೇಹದ ಅಮೃತ
ಹೆ: ಲವ್ ಯು ಲವ್ ಯು ಲವ್ ಯು ಲವ್ ಯು ಲವ್ ಯು

ಹೆ: ಪ್ರೀತಿಯ ಮಾತನ್ನು ಕೇಳಿ ಕುಣಿದೆನು
ಆಸೆಯ ಬಾನಲ್ಲಿ ತೇಲಿ ಹೋದೆನು
ಐ ಲವ್ ಯು ಐ ಲವ್ ಯು ಐ ಲವ್ ಯು 
ಗಂ: ಸಂತಸದ ನಿಧಿಯಾಗಿ ಜೀವನದ ಜೊತೆಯಾಗಿ
ನವ ಜ್ಯೋತಿಯಾಗಿ ಮನ ಬೆಳಗು ಬಾ..
ಲವ್ ಯು ಲವ್ ಯು ಲವ್ ಯು

ಹೆ: ಪ್ರೀತಿಯ ಮಾತನ್ನು ಕೇಳಿ ಕುಣಿದೆನು
ಗಂ: ಆಸೆಯ ಬಾನಲ್ಲಿ ತೇಲಿ ಹೋದೆನು
ಇಬ್ಬರು: ಐ ಲವ್ ಯು ಐ ಲವ್ ಯು ಐ ಲವ್ ಯು 

*********************************************************************************

ಯಜಮಾನ (2000)

ಪ್ರೇಮ ಚಂದ್ರಮ

ಚಲನ ಚಿತ್ರ: ಯಜಮಾನ (2000)
ಸಂಗೀತ: ರಾಜೇಶ್ ರಾಮನಾಥ್ 
ಸಾಹಿತ್ಯ: ಕೆ. ಕಲ್ಯಾಣ್ 
ನಿರ್ದೇಶನ: ಆರ್. ಶೇಷಾದ್ರಿ, ರಾಧಾಭಾರತಿ 
ಗಾಯಕರು: ರಾಜೇಶ್ ಕೃಷ್ಣನ್ 
ನಟನೆ: ವಿಷ್ಣುವರ್ಧನ್, ಪ್ರೇಮಾ, ಶಶಿಕುಮಾರ್, ಅಭಿಜಿತ್ 


ಪ್ರೇಮ ಚಂದ್ರಮ ಕೈಗೆ ಸಿಗುವುದೇ,
ಹೇಳೇ ತಂಗಾಳಿ ನೀ ಹೇಳೇ ತಂಗಾಳಿ
ಮನಸಾರೆ ಮೆಚ್ಚಿಕೊಳುವೆ 
ಹೃದಯಾನಾ ಬಿಚ್ಚಿ ಕೊಡುವೆ
ಈ ಭೂಮಿ ಇರೋವರೆಗೂ 
ನಾ ಪ್ರೇಮಿಯಾಗಿರುವೆ

ಪ್ರೇಮ ಚಂದ್ರಮ ಕೈಗೆ ಸಿಗುವುದೇ,
ಹೇಳೇ ತಂಗಾಳಿ ನೀ ಹೇಳೇ ತಂಗಾಳಿ

ಬಾನಲಿ ಹುಣ್ಣಿಮೆಯಾದರೆ ನೀ, 
ಸವೆಯ ಬೇಡ ಸವೆಯುವೆ ನಾ
ಮೇಣದ ಬೆಳಕೇ ಆದರೆ ನೀ,
ಕರಗ ಬೇಡ ಕರಾಗುವೆ ನಾ
ಹೂದೋಟವೇ ಆದರೆ ನೀನು,
ಹೂಗಳ ಬದಲು ಉದುರುವೆ ನಾ
ಹೇಳೇ ತಂಗಾಳಿ ನೀ ಹೇಳೇ ತಂಗಾಳಿ

ಪ್ರೇಮ ಚಂದ್ರಮ ಕೈಗೆ ಸಿಗುವುದೇ 
ಹೇಳೇ ತಂಗಾಳಿ ನೀ ಹೇಳೇ ತಂಗಾಳಿ
ಈ ಪ್ರತಿರೂಪವ ಬಿಡಿಸಲು ನಾ 
ನೆತ್ತರಲೇ ಬಣ್ಣವನಿಡುವೆ
ಈ ಪ್ರತಿ ಬಿಂಬವ ಕೆತ್ತಲು ನಾ 
ಎದೆಯ ರೋಮದ ಉಳಿ ಇಡುವೆ
ಕವಿತೆಯ ಹಾಗೆ ಬರೆದಿಡಲು 
ಉಸಿರನೇ ಬಸಿದು ಪದವಿಡುವೆ
ಹೇಳೇ ತಂಗಾಳಿ ನೀ ಹೇಳೇ ತಂಗಾಳಿ

ಪ್ರೇಮ ಚಂದ್ರಮ ಕೈಗೆ ಸಿಗುವುದೇ 
ಹೇಳೇ ತಂಗಾಳಿ ನೀ ಹೇಳೇ ತಂಗಾಳಿ
ಮನಸಾರೆ ಮೆಚ್ಚಿಕೊಳುವೆ 
ಹೃದಯಾನಾ ಬಿಚ್ಚಿ ಕೊಡುವೆ
ಈ ಭೂಮಿ ಇರೋವರೆಗೂ 
ನಾ ಪ್ರೇಮಿಯಾಗಿರುವೆ
ಪ್ರೇಮ ಚಂದ್ರಮ ಕೈಗೆ ಸಿಗುವುದೇ 
ಹೇಳೇ ತಂಗಾಳಿ ನೀ ಹೇಳೇ ತಂಗಾಳಿ

*********************************************************************************

ಓ ಮೈನಾ

ಸಾಹಿತ್ಯ: ಕೆ. ಕಲ್ಯಾಣ್ 
ಗಾಯಕರು: ರಾಜೇಶ್ ಕೃಷ್ಣನ್, ಕೆ. ಎಸ್. ಚಿತ್ರಾ 


ಆ ಆ..  ಹೂಂ ಹಾ... ಆ.. ಹಂ..

ಓ ಮೈನಾ ಓ ಮೈನಾ ಏನಿದು ಮಾಯೆ,
ಮಳೆ ಇಲ್ಲದೆ ಮೈ ನೆನೆಯೋ ಮಾಯದ ಮಾಯೆ
ನಿನ್ನೆ ಕಂಡ ನೋಟವೇ ಅಂತರಾಳವಾಗಿದೆ
ಇಂದು ಕಂಡ ನೋಟವೇ ಗಟ್ಟಿಮೇಳವಾಗಿದೆ
ರಾಗ ಎನ್ನಲೇ ಅನುರಾಗ ಎನ್ನಲೇ
ಪ್ರೀತಿ ಎನ್ನಲೇ ಹೊಸ ಮಾಯೆ ಎನ್ನಲೇ...

ಓ ಮೈನಾ ಓ ಮೈನಾ ಏನಿದು ಮಾಯೆ,
ಮಳೆ ಇಲ್ಲದೆ ಮೈ ನೆನೆಯೋ ಮಾಯದ ಮಾಯೆ

ಕಾವೇರಿ ತೀರದಲಿ ಬರೆದೇನು ನಿನ್ನ ಹೆಸರ
ಮರಳೆಲ್ಲ ಹೊನ್ನಾಯಿತು ಯಾವ ಮಾಯೆ
ಬಿದಿರಿನ ಕಾಡಿನಲಿ ಕೂಗಿದೆ ನಿನ್ನ ಹೆಸರ
ಬಿದಿರೆಲ್ಲಾ ಕೊಳಲಾಯಿತು ಯಾವ ಮಾಯೆ
ಸೂತ್ರವು ಇರದೇ ಗಾಳಿಯು ಇರದೇ
ಬಾನಲಿ ಗಾಳಿ ಪಟವಾಗಿರುವೆ
ಇಂತಾ ಮಾಯಾವಿ ಸಂತೋಷ ಇನ್ನೇನೆ ಮೈನಾ

ಓ ಮೈನಾ ಓ ಮೈನಾ ಏನಿದು ಮಾಯೆ,
ಮಳೆ ಇಲ್ಲದೆ ಮೈ ನೆನೆಯೋ ಮಾಯದ ಮಾಯೆ

ಬೇಡನ ಕಣ್ಣಿಗೆ ಬಾಣವ ನಾಟಿಸುವ
ಈ ಜಿಂಕೆ ಬೇಟೆ ಇಲ್ಲಿ ಯಾವ ಮಾಯೆ
ಹತ್ತಿಗೆ ಬೆಂಕಿಯನು ಹತ್ತಿಸುವ ಮಾಯೆ
ಮೀನುಗಳೇ ಗಾಳಬೀಸೋ ಯಾವ ಮಾಯೆ
ಆಕಾಶಕ್ಕೆ ಬಲೆಯ ಬೀಸಿ ಮೋಡ ನಗುವಾ ಮರ್ಮ ಏನೋ
ಇಂತಾ ಮಾಯಾವಿ ಸಂತೋಷ ಇನ್ನೇನೆ ಮೈನಾ

ಓ ಮೈನಾ ಓ ಮೈನಾ ಏನಿದು ಮಾಯೆ,
ಮಳೆ ಇಲ್ಲದೆ ಮೈ ನೆನೆಯೋ ಮಾಯದ ಮಾಯೆ
ನಿನ್ನೆ ಕಂಡ ನೋಟವೇ ಅಂತರಾಳವಾಗಿದೆ
ಇಂದು ಕಂಡ ನೋಟವೇ ಗಟ್ಟಿಮೇಳವಾಗಿದೆ
ರಾಗ ಎನ್ನಲೇ ಅನುರಾಗ ಎನ್ನಲೇ
ಪ್ರೀತಿ ಎನ್ನಲೇ ಹೊಸ ಮಾಯೆ ಎನ್ನಲೇ...


*********************************************************************************

ನಮ್ಮ ಮನೆಯಲಿ

ಸಾಹಿತ್ಯ: ಕೆ. ಕಲ್ಯಾಣ್ 
ಗಾಯನ: ಎಸ್.ಪಿ.ಬಿ, ರಾಜೇಶ್ ಕೃಷ್ಣನ್, ಕೆ. ಎಸ್. ಚಿತ್ರಾ


ನಮ್ಮ ಮನೆಯಲಿ ದಿನವೂ ಮಿರುಗೋ ಚೈತ್ರವೇ
ಬೆಳದಿಂಗಳ ಈ ಪ್ರೀತಿ ಕರಗಲು ಸಾಧ್ಯವೇ ||ಪ||
ನಮ್ಮ ಮನೆಯಲಿ ದಿನವೂ ಮಿರುಗೋ ಚೈತ್ರವೇ
ಬೆಳದಿಂಗಳ ಈ ಪ್ರೀತಿ ಕರಗಲು ಸಾಧ್ಯವೇ
ಹೆಜ್ಜೇನಿನ ಸವಿಗೂಡಿದು ಇಲ್ಲಿ ಪ್ರೀತಿಯ ಪರಮಾನ್ನ
ಪ್ರೀತಿಯ ಯಜಮಾನ ||ನಮ್ಮ ಮನೆಯಲಿ||

ಹಾಡೋ ಚಿಲಿಪಿಲಿ ಹಕ್ಕಿಗಳೆ ಪ್ರೀತಿಯ ಭಾಷೆ ಕೇಳಿರಿ
ಕಣ್ಣಿನಂಥ ಅಣ್ಣನು ತಾಯಿಯಾದನು ನೋಡಿರಿ
ಶಿಲುಬೆಯನೇ ಎರಿದರೂ ನಗುವಿನ ಒಲುಮೆ ತುಂಬಿದೆ
ಹಾರಾಡೋ ಮನಸೀಗೆ ಆಕಾಶವೆ ನೀನಾದೆ
ಈ ಕಣ್ಗಳೇ ಕೊಡೆಯಾಗಲಿ ಕಣ್ಣಿನ ಹನಿಯಲ್ಲೇ
ಹೃದಯಕೆ ಹೂಮಳೆ ||ನಮ್ಮ ಮನೆಯಲಿ||

ನಮ್ಮ ಬಂಧ ಅನುಬಂಧ ಸ್ವರ್ಗವೇ ನಾಚುವ ಹಾಗಿದೆ
ಗಿಲ್ಲಿ ಮೊಗ್ಗು ಅರಳಿದರೆ ಹೂವಿಗೆ ಸಾವಿರ ವರ್ಷವೇ
ಕಣ್ಣೆರಡೂ ಇರಬಹುದು ನೋಟಗಳೊಂದೇ ಅಲ್ಲವೇ
ರೂಪಗಳು ಎರಡೆರಡು ಇರಬಹುದು ಹೃದಯ ಒಂದೇ ಅಲ್ಲವೇ
ಈ ಜೀವನ ಸಂಜೀವಿನಿ ಇದು ಅಣ್ಣನಾಶಯ ನೀ ಹೇಳೋ ಶುಭಾಶಯ

ನಮ್ಮ ಮನೆಯಲಿ ದಿನವೂ ಮಿರುಗೋ ಚೈತ್ರವೇ
ಬೆಳದಿಂಗಳ ಈ ಪ್ರೀತಿ ಕರಗಲು ಸಾಧ್ಯವೇ
ಹೆಜ್ಜೇನಿನ ಸವಿಗೂಡಿದು ಇಲ್ಲಿ ಪ್ರೀತಿಯ ಪರಮಾನ್ನ
ಪ್ರೀತಿಯ ಯಜಮಾನ ||ನಮ್ಮ ಮನೆಯಲಿ||

*******************************************************************************

ಮೈಸೂರು ಮಲ್ಲಿಗೆ

ಸಾಹಿತ್ಯ: ಕೆ. ಕಲ್ಯಾಣ್ 
ಗಾಯನ: ರಾಜೇಶ್ ಕೃಷ್ಣನ್, ಕೆ. ಎಸ್. ಚಿತ್ರಾ


ಜಿಲಕ್ ಜಿಲಕ್ ಜಿಲಕ್ ಜಿಲಕ್..
ಧಿಂತನಕ್ಕಿಟ ಧಿಂತನಕ್ಕಿಟ
ಧಿಂದನಿಕ ತಕ್ಕಿಟತ

ಏಯ್....
ಮೈಸೂರು ಮಲ್ಲಿಗೆ, ಮೈಯೆಲ್ಲಾ ಹೋಳಿಗೆ
ಅಂಗಾಂಗ ಅರಳಿಸಿ, ಪಂಚಾಂಗ ಓದಿಸಿ
ಪಲ್ಲಂಗ ಹಾಸಿ ಬಿಡುವೆ
ಈ ಮೈಸೂರೆ ಬರೆದೂ ಬಿಡುವೆ ||ಪ||

||ಮೈಸೂರು ಮಲ್ಲಿಗೆ||

ಚುಮ್ಕು ಚಕ ಚುಮ್ಕು ಚಕ
ಚುಮ್ಕು ಚಕ ಚುಮುಕು ತಾ
ಬಕ್‍ಬಕ್‍ತಕಿಟತ

ಲಜ್ಜೆ ಬಿಟ್ಟು ಗೆಜ್ಜೆ ಕಟ್ಟು
ಹೆಜ್ಜೆ ಬಿಟ್ಟು ಬಾಜಿ ಕಟ್ಟು
ರಾಜಿಯಾಗಿ ಸೂಜಿಮಲ್ಲೆ ಮುಡಿಸಿಬಿಡುವೆ
ಸುವ್ವಿ ಸುವ್ವಿ ನಿನ್ನ ಕಣ್ಣುಗಳೆ
ನನ್ನೆದೆಯಾ ಮುಂಬಾಗಿಲೋ
ಯವ್ವಿ ಯವ್ವಿ ನಿನ್ನ ಹೆಜ್ಜೆಗಳೆ
ನನ್ನುಸಿರ ಬೆಂಗಾವಲು
ಕೈ ಹಿಡಿಯೋ ಕಾರಣವೇ
ಕೈ ಬಳೆಯ ಝುಲಕು ಝುಲಕು
ಅದೇ ಗುಂಡಿಗೆಯ ಮಿಣುಕು ಮಿಣುಕು
ಆ ಶ್ರೀರಂಗಾಪಟ್ಣಾ ಬಳಸೀ
ಪ್ರೀತಿ ಕಾಲ್ಗೆಜ್ಜೆ ಘಲ್ ಘಲ್ ಘಲುಕು

||ಮೈಸೂರು ಮಲ್ಲಿಗೆ||

ಮುಟ್ಟಿದರೇ ತಕಿಟ ತಕಿಟ
ಮುಟ್ಟದಿದ್ರು ತಕಿಟ ತಕಿಟ
ಒತ್ತಿದರೇ ತಕಿಟ ತಕಿಟ
ಅಪ್ಪಿದರೇ ಚುಪ್
ಮಳ್ಳಿ ಮಳ್ಳೀ.. ನಿನ್ನ ಮಾತುಗಳೇ ಮನಸುಗಳಾ ಓಟ ಕಣೆ
ಮಳ್ಳ ಮಳ್ಳಾ... ನಿನ್ನ ತುಂಟತನ ಯವ್ವನಕೆ ಪಾಠ ಕಣೋ
ಮುತ್ತುಗಳ ಪಲ್ಲಕಿಯಾ ಹತ್ತಿದರೇ ಸೈ ಸೈ ಸೈ
ಜೋಡಿ ಜೀವಗಳ ಥೈ ಥೈ ಥಕ ಥೈ ಥೈ ಥೈ ಥೈ
ಚಾಮುಂಡಿ ಬೆಟ್ಟ ಬಳಸೋ
ಪ್ರೀತಿ ಬಾವುಟಕ್ಕೆ ಜೈ ಜೈ ಜೈ!!!

[ಗಂಡು] ||ಮೈಸೂರು ಮಲ್ಲಿಗೆ||
[ಹೆಣ್ಣು] ||ಮೈಸೂರು ಮಲ್ಲಿಗೆ||

********************************************************************************

ಶ್ರೀಗಂಧದಾ ಗೊಂಬೆ

ಸಾಹಿತ್ಯ: ಕೆ. ಕಲ್ಯಾಣ್ 
ಗಾಯನ: ರಾಜೇಶ್ ಕೃಷ್ಣನ್, ಕೆ. ಎಸ್. ಚಿತ್ರಾ


[ಹೆಣ್ಣು] ಶ್ರೀಗಂಧದಾ ಗೊಂಬೆ...
ಮೆಲ್ಲ ಮೆಲ್ಲನೆ ಬರುತಾಳಮ್ಮಾ
ಈ ಪ್ರೀತಿ ಅರಮನೆಗೆ
ಬೆಳ್ಳಿ ಬೆಳಕು ತರುತಾಳಮಾ
ಮನೆತನಕ ಬಂದಾ ಹೆಣ್ಣು
ಈ ಮನೆತನ ಬೆಳಗಲಿ..
ನಮ್ಮ ಹರಕೆಯೂ ಫಲಿಸಲಿ

[ಗಂಡು] ಶ್ರೀಗಂಧದಾ ಗೊಂಬೆ...
ಮೆಲ್ಲ ಮೆಲ್ಲನೆ ಬರುತಾಳಮ್ಮಾ

[ಹೆಣ್ಣು] ಸರಿಗಮಗಳಲಿ, ಸಾಗರದಲ್ಲಿ
ಅಲೆಗಳ ಹಾಗೆ ಇವಳ ಕಾಲ್ಗೆಜ್ಜೆ
[ಗಂಡು] ಹೋ! ಘಮಘಮಗಳಲೀ, ಗೋಪುರದಲ್ಲಿ
ನಿತ್ಯ ವಸಂತ ಇವಳ ಈ ಲಜ್ಜೆ
[ಹೆಣ್ಣು] ಏನುಸಿರೋ ಏನುಸಿರೋ ಏನಿರಲಿ
ನನ್ನ ಕನಸೀನ ಬಾಗಿನ ನಗುತಿರಲಿ
[ಗಂಡು] ಶ್ರೀಗಂಧದಾ ಗೊಂಬೆ...
ಮೆಲ್ಲ ಮೆಲ್ಲನೇ ಬರುತಾಳಮ್ಮಾ

ನಂದಾದೀಪ, ಹುಟ್ಟಿದ ಮನೆಗೆ
ಆರದ ದೀಪ ನೀ ಮೆಟ್ಟಿದ ಮನೆಗೆ
[ಹೆಣ್ಣು] ಬಯಸೀ ತಂದ ಈ ಅನುಬಂಧ
ಸಾವಿರ ಸಾವಿರ ಜನ್ಮ ಇರೋವರೆಗೆ
[ಗಂಡು] ಊರೆಲ್ಲ ಹರಸಿದ ಪುಷ್ಪಾಂಜಲಿ
ಅಣ್ಣನಾ ಹರಕೆ ಭಾಷ್ಪಾಂಜಲಿ
ಶ್ರೀಗಂಧದಾ ಗೊಂಬೆ...
ಮೆಲ್ಲ ಮೆಲ್ಲನೆ ಬರುತಾಳಮ್ಮಾ
ಈ ಪ್ರೀತಿ ಅರಮನೆಗೇ
ಬೆಳ್ಳಿ ಬೆಳಕು ತರುತಾಳಮ್ಮಾ
ಮನೆತನಕ ಬಂದಾ ಹೆಣ್ಣು
ಈ ಮನೆತನ ಬೆಳಗಲಿ..
ನಮ್ಮ ಹರಕೆಯೂ ಫಲಿಸಲಿ..
ಈ ಮನೆತನ ಬೆಳಗಲಿ..
ನಮ್ಮ ಹರಕೆಯೂ ಫಲಿಸಲಿ..

********************************************************************************

ನವಿಲೇ ಪಂಚರಂಗಿ

ಸಾಹಿತ್ಯ: ಕೆ. ಕಲ್ಯಾಣ್ 
ಗಾಯನ: ದೇವನ್, ನಂದಿತಾ 


ನವಿಲೇ ಪಂಚರಂಗಿ ನವಿಲೇ
ಜಿಗಿಸೋ ಅಂತರಂಗಿ ನವಿಲೇ
ನಿನ್ನ ನಗೆಯ ಬಾಚಿ ಬಾಚಿ
ನನ್ನ ಎದೆಯ ಒಳಗೆ ಇಟ್ಟೆ
ಅದರಿಂದ ಹೃದಯ ತೆಗೆದು
ನಿನ್ನ ತುಟಿಗೆ ಒತ್ತಿ ಬಿಟ್ಟೆ
ಕೋಂ ತಕೋಂ ಈ ತುಂಟು ವಯಸು
ಯಾತಕೋ ನಿಲ್ಲದು ಮನಸು
ಕೋಂ ತಕೋಂ ಈ ತುಂಟು ವಯಸು
ಯಾತಕೋ ನಿಲ್ಲದು ಮನಸು

ನವಿಲೇ ಪಂಚರಂಗಿ ನವಿಲೇ ಜಿಗಿಸೋ
ಅಂತರಂಗಿ ನವಿಲೇ ---

ಅಚ್ಚು ಬೆಲ್ಲ ಅಚ್ಚು ಬೆಲ್ಲ ಹಚ್ಚಿ ಬೀರಲ,
ಅಲ್ಲಿ ಕೊಂಚ ಇಲ್ಲಿ ಕೊಂಚ ||೨||
ಹುಚ್ಚು ಬಿಡುವ ಮುಂಚೆ ಹಚ್ಚಿ ಬಿಡಲಾ
ನನ್ನೆದೆಯೆ ಪರಪಂಚ ||೨||
ಸೃಷ್ಟಿಯೊಳಗೆ ಪ್ರೇಮಿಯ ಸಂಖ್ಯೆ
ಏರುಪೇರು ಆಗದು ಎಂದು
ಹೃದಯ ಒಂದೆ ಮುಷ್ಟಿ
ಅದಕಿಂದು ನೇರ ದೃಷ್ಟಿ
ಆ ಸೃಷ್ಟಿಯೊಳಗೆ ಜೀವಾ
ಬೆಳೆಸುವುದು ವಂಶವೃಷ್ಠಿ

ನವಿಲೇ ಪಂಚರಂಗಿ ನವಿಲೇ ಜಿಗಿಸೋ
ಅಂತರಂಗಿ ನವಿಲೇ ---

ಒಂದು ಹೆಜ್ಜೆಯಲ್ಲಿ ಕೋಟಿ ಲಜ್ಜೆ ಇರುವ
ನಿನ್ನ ಲಜ್ಜೆ ಸಿಹಿ ಸಜ್ಜೆ ||೨||
ಸಜ್ಜೆಗಳ ಸಿಹಿಗಳ ಗೆಜ್ಜೆ ಕುಣಿಸಿ
ಕಾಯುತೀನಿ ಪ್ರತಿ ಸಂಜೆ ||೨||
ಲೋಕಕಷ್ಟೆ ರಾತ್ರಿ ಹಗಲು
ಪ್ರೇಮಿಗಳಿಗೆ ಬರಿ ಹಗಲು
ಆಂತರ್ಯ ಬಿಚ್ಚಿ ನೋಡು
ಐಶ್ವರ್ಯ ನಮ್ಮ ಪ್ರೀತಿ
ಇಡಿ ಸ್ವರ್ಗ ತೋಳಿನಲ್ಲೇ
ಆಶ್ಚರ್ಯವಾಗೋ ರೀತಿ

ನವಿಲೇ ಪಂಚರಂಗಿ ನವಿಲೇ ಜಿಗಿಸೋ
ಅಂತರಂಗಿ ನವಿಲೇ
ನಿನ್ನ ನಗೆಯ ಬಾಚಿ ಬಾಚಿ
ನನ್ನ ಎದೆಯ ಒಳಗೆ ಇಟ್ಟೆ
ಅದರ ಹೃದಯ ತೆಗೆದು ನಿನ್ನ ತುಟಿಗೆ ಒತ್ತಿ ಬಿಟ್ಟೆ
ಕೋಂ ತತೋಮ್ ಈ ಸುಪ್ತ ವಯಸು
ಯಾತಕೋ ನಿಲ್ಲದು ಮನಸು
ಕೋಂ ತತೋಮ್ ಇದು ತುಂಟು ವಯಸು
ಯಾತಕೋ ನಿಲ್ಲದು ಮನಸು
ಕೋಂ ತತೋಮ್ ಈ ತುಂಟು ವಯಸು
ಇದು ಯಾತಕೋ ನಿಲ್ಲದು ಮನಸು

ಲಾ ಲಲ್ಲ ಲಾ ಲಲಾ ಲಲಲ
ಲಾ ಲಲ್ಲ ಲಾ ಲಾಲಾಲಲಲ

********************************************************************************

ಪ್ರೇಮ ಚಂದ್ರಮ

ಸಾಹಿತ್ಯ: ಕೆ. ಕಲ್ಯಾಣ್ 
ಗಾಯನ: ಎಸ್.ಪಿ. ಬಾಲಸುಬ್ರಹ್ಮಣ್ಯಂ  


ಪ್ರೇಮ ಚಂದ್ರಮ ಕೈಗೆ ಸಿಗುವುದೆ
ಹೇಳೆ ತಂಗಾಳಿ, ನೀ ಹೇಳೆ ತಂಗಾಳಿ
ಮನಸಾರೆ ಮೆಚ್ಚಿ ಕೊಡುವೆ ಹೃದಯಾನೆ ಬಿಚ್ಚಿ ಇಡುವೆ
ಈ ಭೂಮಿಯಿರೊವರೆಗೂ ನಾ ಪ್ರೇಮಿಯಾಗಿರುವೇ
ಪ್ರೇಮ ಚಂದ್ರಮ ಕೈಗೆ ಸಿಗುವುದೆ
ಹೇಳೆ ತಂಗಾಳಿ, ನೀ ಹೇಳೆ ತಂಗಾಳಿ

ಬಾನಲ್ಲಿ ಹುಣ್ಣಿಮೆಯಾದರೆ ನೀ ಸವೆಯಬೇಡ ಸವೆಯುವೆ ನಾ
ಮೇಣದ ಬೆಳಕೆ ಆದರು ನೀ ಕರಗಬೇಡ ಕರಗುವೆ ನಾ
ಹೂದೋಟವೆ ಆದರೆ ನೀನು ಹೂಗಳ ಬದಲು ಉದುರುವೆ ನಾ
ಹೇಳೆ ತಂಗಾಳಿ, ನೀ ಹೇಳೆ ತಂಗಾಳಿ

ಪ್ರೇಮ ಚಂದ್ರಮ ಕೈಗೆ ಸಿಗುವುದೆ
ಹೇಳೆ ತಂಗಾಳಿ, ನೀ ಹೇಳೆ ತಂಗಾಳಿ

ಈ ಪ್ರತಿರೂಪ ಬಿಡಿಸಲು ನಾ ನೆತ್ತರಲೆ ಬಣ್ಣವನಿಡುವೆ
ಈ ಪ್ರತಿಬಿಂಬವ ಕೆತ್ತಲು ನಾ ಎದೆಯ ರೋಮದ ಉಳಿ ಇಡುವೆ
ಕವಿತೆಯ ಹಾಗೆ ಬರೆದಿಡಲು ಉಸಿರಲೆ ಬಸಿರು ಪದವಿಡುವೆ
ಹೇಳೆ ತಂಗಾಳಿ, ನೀ ಹೇಳೆ ತಂಗಾಳಿ

ಪ್ರೇಮ ಚಂದ್ರಮ ಕೈಗೆ ಸಿಗುವುದೆ
ಹೇಳೆ ತಂಗಾಳಿ, ನೀ ಹೇಳೆ ತಂಗಾಳಿ
ಮನಸಾರೆ ಮೆಚ್ಚಿ ಕೋಡುವೆ
ಹೃದಯಾನ ಬಿಚ್ಚಿ ಕೊಡುವೆ
ಈ ಭೂಮಿ ಇರುವರೆಗೂ
ನಾ ಪ್ರೇಮಿಯಾಗಿರುವೆ

ಪ್ರೇಮ ಚಂದ್ರಮ ಕೈಗೆ ಸಿಗುವುದೇ
ಹೇಳೆ ತಂಗಾಳಿ, ನೀ ಹೇಳೆ ತಂಗಾಳಿ

********************************************************************************

ಅವಳ ಹೆಜ್ಜೆ (1981)


ನೆರಳನು ಕಾಣದ

ಚಲನ ಚಿತ್ರ : ಅವಳ ಹೆಜ್ಜೆ (1981)
ಸಂಗೀತ: ರಾಜನ್ ನಾಗೇಂದ್ರ  
ಸಾಹಿತ್ಯ: ಚಿ.ಉದಯ್ ಶಂಕರ್  
ನಿರ್ದೇಶನ: ಭಾರ್ಗವ  
ಗಾಯಕರು: ಎಸ್.ಪಿ.ಬಾಲಸುಬ್ರಮಣ್ಯಂ
ನಟನೆ: ವಿಷ್ಣುವರ್ಧನ್, ಲಕ್ಷ್ಮೀ, ಅಂಬರೀಷ್   


ನೆರಳನು ಕಾಣದ ಲತೆಯಂತೆ,
ಬಿಸಿಲಿಗೆ ಬಾಡಿದ ಹೂವಂತೆ,
ಸೋತಿದೆ ಈ ಮೊಗವೇಕೆ,......
ಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆ,
ಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆ,

ನೆರಳನು ಕಾಣದ ಲತೆಯಂತೆ,
ಬಿಸಿಲಿಗೆ ಬಾಡಿದ ಹೂವಂತೆ,
ಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆ,
ಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆ,


ನಯನದಲಿ ಕಾಂತಿ ಇಲ್ಲಾ,ತುಟಿಗಳಲಿ ನಗುವೇ ಇಲ್ಲಾ,
ಸವಿಯಾದ ಮಾತನು ಇಂದೇಕೋ ಕಾಣೆನು.
ನಿನ್ನ ಮನಸು ನಾನು ಬಲ್ಲೆ,ನಿನ್ನ ವಿಷಯವೆಲ್ಲ ಬಲ್ಲೆ,
ನೀನೇನು ಹೇಳದೆ,ನಾನೆಲ್ಲಾ ಹೇಳಲೇ,
ಏನಿಂತ ನಾಚಿಕೆ,ಕಣ್ಣೀರು ಏತಕೆ.

ನೆರಳನು ಕಾಣದ ಲತೆಯಂತೆ,
ಬಿಸಿಲಿಗೆ ಬಾಡಿದ ಹೂವಂತೆ,
ಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆ,
ಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆ,

ಈ ಗುಡಿಯ ದೇವಿ ನೀನು,
ಈ ತನುವಾ ಪ್ರಾಣ ನೀನು,
ಬಾಳಲ್ಲಿ ನೆಮ್ಮದಿ,ನಿನ್ನಿಂದ ಕಂಡೆನು,
ನೀ ಅಳಲು ನೋಡಲಾರೆ,
ನೀ ಇರದೇ ಬಾಳಲಾರೆ,
ನನ್ನಲ್ಲಿ ಕೋಪವೇ,ನಾ ನಿನಗೆ ಬೇಡವೇ,
ನೀ ದೂರವಾದರೆ ನನಗಾರು ಆಸರೆ........

ನೆರಳನು ಕಾಣದ ಲತೆಯಂತೆ,
ಬಿಸಿಲಿಗೆ ಬಾಡಿದ ಹೂವಂತೆ,
ಸೋತಿದೆ ಈ ಮೊಗವೇಕೆ,......
ಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆ,
ಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆ,

ನೆರಳನು ಕಾಣದ ಲತೆಯಂತೆ,
ಬಿಸಿಲಿಗೆ ಬಾಡಿದ ಹೂವಂತೆ,
ಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆ,
ಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆ,

********************************************************************************

ಬಂದೆಯಾ ಬಾಳಿನ ಬೆಳಕಾಗಿ

ಸಾಹಿತ್ಯ: ಚಿ. ಉದಯಶಂಕರ್ 
ಗಾಯಕರು: ಎಸ್. ಜಾನಕಿ, ಎಸ್. ಪಿ. ಬಾಲಸುಬ್ರಹ್ಮಣ್ಯಂ 


ಗಂಡು : ಬಂದೆಯಾ ಬಾಳಿನ ಬೆಳಕಾಗಿ ,
ಬಂದೆಯಾ ಪ್ರೇಮದ ಸಿರಿಯಾಗಿ
ನನಗಾಗಿ ನನ್ನ ಜೊತೆಯಾಗಿ,
ನನಗಾಗಿ ನನ್ನ ಜೊತೆಯಾಗಿ

ಹೆಣ್ಣು : ಸ್ನೇಹದ ಮಾತಿಂದ ಪ್ರೀತಿಯ
ಜೇನಿಂದ ತುಂಬುತ ಆನಂದಾ...
ಬಂದೆಯಾ ಬಾಳಿನ ಬೆಳಕಾಗಿ ,
ಬಂದೆಯಾ ಪ್ರೇಮದ ಸಿರಿಯಾಗಿ
ನನಗಾಗಿ ನನ್ನ ಜೊತೆಯಾಗಿ,
ನನಗಾಗಿ ನನ್ನ ಜೊತೆಯಾಗಿ

ಗಂಡು : ತಾವರೆ ಮೊಗ್ಗೊಂದು
ಸೂರ್ಯನ ಕಂಡಾಗ ಅರಳೀ ನಗುವ ಹಾಗೆ,
ಈ ಮೊಗವೇಕೋ ಕಾಣೆ,ಹೂವಾಯಿತೀಗ
ಹೆಣ್ಣು : ಕತ್ತಲು ಎಲ್ಲೆಲ್ಲೂ ಮುತ್ತಲು ಭಯದಲ್ಲಿ
ಹೂವೂ ಬಾಡುತಿರಲು ಈ ನಿನ್ನ ಕಣ್ಣ ಕಾಂತಿ,
ಹೊಸ ಜೀವ ತಂದಿತು

ಗಂಡು : ಜಾಣೆ ನುಡಿಗಳೋ ವೀಣೆಸ್ವರಗಳೋ
ಕಾಣೆನು ಪ್ರೇಯಸಿ ನಾನು,ಕಾಣೆನು ಪ್ರೇಯಸಿ ನಾನು

ಹೆಣ್ಣು : ಬಂದೆಯಾ ಬಾಳಿನ ಬೆಳಕಾಗಿ,
ಬಂದೆಯಾ ಪ್ರೇಮದ ಸಿರಿಯಾಗಿ
ನನಗಾಗಿ ನನ್ನ ಜೊತೆಯಾಗಿ,
ನನಗಾಗಿ ನನ್ನ ಜೊತೆಯಾಗಿ

ಗಂಡು : ಸ್ನೇಹದ ಮಾತಿಂದ
ಪ್ರೀತಿಯ ಜೇನಿಂದ ತುಂಬುತ ಆನಂದಾ...

ಗಂಡು : ಬಂದೆಯಾ ಬಾಳಿನ ಬೆಳಕಾಗಿ,
ಬಂದೆಯಾ ಪ್ರೇಮದ ಸಿರಿಯಾಗಿ
ನನಗಾಗಿ ನನ್ನ ಜೊತೆಯಾಗಿ,
ನನಗಾಗಿ ನನ್ನ ಜೊತೆಯಾಗಿ

ಹೆಣ್ಣು : ಆಸರೆ ಏನೊಂದು ಕಾಣದೆ
ನಾ ನೊಂದು ಅಂದು ಓಡಿ
ಬಂದೆ ದೇವರ ಹಾಗೆ ನಿನ್ನ ನಾನಲ್ಲಿ ಕಂಡೆ
ಗಂಡು : ಹೇಳುವರಾರಿಲ್ಲ ಕೇಳುವರಾರಿಲ್ಲ
ಒಂಟೀ ಬಾಳಿನಲ್ಲಿ ದೇವತೆಯಂತೆ
ನೀನು ನನ್ನಲ್ಲಿ ಬಂದೆ
ಹೆಣ್ಣು : ಹೃದಯ ಅರಳಿತು ಮನಸು ಕುಣಿಯಿತು
ಈ ಸವಿ ಮಾತನು ಕೇಳಿ,ಈ ಸವಿ ಮಾತನು ಕೇಳಿ....

ಗಂಡು : ಬಂದೆಯಾ ಬಾಳಿನ ಬೆಳಕಾಗಿ
ಹೆಣ್ಣು : ಬಂದೆಯಾ ಪ್ರೇಮದ ಸಿರಿಯಾಗಿ
ಗಂಡು : ನನಗಾಗಿ ನನ್ನ ಜೊತೆಯಾಗಿ
ಹೆಣ್ಣು : ನನಗಾಗಿ ನನ್ನ ಜೊತೆಯಾಗಿ
ಇಬ್ಬರು : ಸ್ನೇಹದ ಮಾತಿಂದ ಪ್ರೀತಿಯ ಜೇನಿಂದ
ತುಂಬುತ ಆನಂದಾ...
ಬಂದೆಯಾ ಬಾಳಿನ ಬೆಳಕಾಗಿ ,
ಬಂದೆಯಾ ಪ್ರೇಮದ ಸಿರಿಯಾಗಿ
ನನಗಾಗಿ ನನ್ನ ಜೊತೆಯಾಗಿ,
ಲಲಲಾ ಲಲಲಲಲಾ,ಲಲಲಾ,
ಆ ಆ ಆ ಆ

*********************************************************************************

ಆಕಾಶ ನೀರಾಗಲಿ 

ಸಾಹಿತ್ಯ: ಚಿ.ಉದಯಶಂಕರ್ 
ಗಾಯಕರು: ಎಸ್. ಜಾನಕಿ, ಎಸ್.ಪಿ. ಬಾಲಸುಬ್ರಹ್ಮಣ್ಯಂ 


ಆಕಾಶ ನೀರಾಗಲಿ... ಆ ಸೂರ್ಯ ತಂಪಾಗಲೀ..
ಪ್ರಳಯವೇ ಆಗಲಿ ಭಯವೇನು ಇಲ್ಲ..
ಎಂದಿಗೂ ನಿನ್ನನ್ನು ಬಿಡಲಾರೆ ಕುಳ್ಳ. ..
ಆಕಾಶ ನೀರಾಗಲಿ... ಆ ಸೂರ್ಯ ತಂಪಾಗಲೀ..
ಪ್ರಳಯವೇ ಆಗಲಿ ಭಯವೇನು ಇಲ್ಲ..
ಎಂದಿಗೂ ನನಗೆ ನೀ ಜೋಡಿಯಲ್ಲ . ..
ಆಕಾಶ ನೀರಾಗಲಿ... 

ನಿನ್ನ ಬಿಟ್ಟೇನೆ ಬಿಟ್ಟು ಕೆಟ್ಟೇನೆ.. ಪುಟ್ಟಾ ಬಾ ಸೋತೆನು
ಕಂಡಂದೆ ಮನದಲ್ಲೇ ಮದುವೆ ನಾನಾದೆನು..
ಅಯ್ಯೋ ಅಮ್ಮಯ್ಯ ನಿನ್ನ ದಮ್ಮಯ್ಯ ನಿನಗೇಕೆ ಈ ಮೋಹವು..
ಸರಿಯಲ್ಲ ಈ ಮಾತು ನಿನಗಲ್ಲ ಈ ಸ್ನೇಹವೂ
ಏಕೆ ಈ ದಾಹವೂ ಏನೋ ಗ್ರಹಚಾರವೂ...

ಆಕಾಶ ನೀರಾಗಲಿ... ಆ ಸೂರ್ಯ ತಂಪಾಗಲೀ..
ಪ್ರಳಯವೇ ಆಗಲಿ ಭಯವೇನು ಇಲ್ಲ..
ಎಂದಿಗೂ ನನಗೆ ನೀ ಜೋಡಿಯಲ್ಲ . ..
ಆಕಾಶ ನೀರಾಗಲಿ... 

ಅಬ್ಬಾ ಹುಚ್ಚಿಗ ಇನ್ನು ಹೆಚ್ಚಾಯ್ತೆ... ಅಯ್ಯೋ ಭಯವಾಗಿದೇ...
ನಾ ಕೊಟ್ಟ ಮದ್ದೆಲ್ಲಾ ಕಡೆಗಿಂದು ಹೀಗಾಯಿತೇ...
ಹುಚ್ಚು ಅಂದೇನೆ ಬಿಟ್ಟು ಹೋಗಾಯ್ತು... ಪೆಚ್ಚೆ ನೀ ಕೇಳಲೋ..
ನಿನ್ನಿಂದ ದೂರಾಗಿ ಮನೆಯಲ್ಲೇ ಇರಲಾರದೇ...
ಜೊತೆಗಿರಲೂ ಹೀಗಾಡಿದೆ.. ನಿನಗಾಗಿ ನಾ ನಟಿಸಿದೆ..   

ಆಕಾಶ ನೀರಾಗಲಿ... ಆ ಸೂರ್ಯ ತಂಪಾಗಲೀ..
ಪ್ರಳಯವೇ ಆಗಲಿ ಭಯವೇನು ಇಲ್ಲ..
ಎಂದಿಗೂ ನಿನ್ನನು ಬಿಡಲಾರೆ ಕುಳ್ಳ

ಆಕಾಶ ನೀರಾಗಲಿ... ಆ ಸೂರ್ಯ ತಂಪಾಗಲೀ..
ಪ್ರಳಯವೇ ಆಗಲಿ ಭಯವೇನು ಇಲ್ಲ..
ಎಂದಿಗೂ ಸುಂದರಿ ಬಿಡಲಾರೆ ನಿನ್ನ
ಆಕಾಶ ನೀರಾಗಲಿ...ಅಹಹಹಾ 
ರಾರಾರಾರ್ ಲಲಲಲಲ ಲಲಲಲಲ

*********************************************************************************

ದೇವರ ಆಟ ಬಲ್ಲವರಾರು 

ಸಾಹಿತ್ಯ: ಚಿ.ಉದಯಶಂಕರ್ 
ಗಾಯಕರು: ಎಸ್. ಜಾನಕಿ 


ದೇವರ ಆಟ ಬಲ್ಲವರಾರು.. ಆತನ ಎದುರೂ ನಿಲ್ಲುವರಾರು...
ಕೇಳದೆ ಸುಖವ ತರುವ, ಹೇಳದೇ ದುಃಖವ  ಕೊಡುವ
ತನ್ನ ಮನದಂತೆ ಕುಣಿಸಿ ಆಡುವ..
ದೇವರ ಆಟ ಬಲ್ಲವರಾರು.. ಆತನ ಎದುರೂ ನಿಲ್ಲುವರಾರು...
ಕೇಳದೆ ಸುಖವ ತರುವ, ಹೇಳದೇ ದುಃಖವ  ಕೊಡುವ
ತನ್ನ ಮನದಂತೆ ಕುಣಿಸಿ ಆಡುವ..
ದೇವರ ಆಟ ಬಲ್ಲವರಾರು.. ಆತನ ಎದುರೂ ನಿಲ್ಲುವರಾರು... 

ಹೊಸ ಹೊಸ ರಾಗ ಅನುದಿನ ಮೂಡಿ
ವಿಧ ವಿಧ ಭಾವ ಜೊತೆಯಲಿ ಕೂಡಿ
ಸಂತಸ ಒಮ್ಮೆ ವೇದನೆ ಒಮ್ಮೆ
ನೋವಲಿ ಹೃದಯ ಹಿಂಡುವುದೊಮ್ಮೆ ಬಾಳಿನ ಈ ಹಾಡಿನ ರೀತಿ
ಬಾಳಿನ ಈ ಹಾಡಿನ ರೀತಿ.. ಯಾರು ಇಂದು ಬಲ್ಲವರಾರು...

ದೇವರ ಆಟ ಬಲ್ಲವರಾರು.. ಆತನ ಎದುರೂ ನಿಲ್ಲುವರಾರು... 
ಕಾನನ ಬರಲಿ ಕೊರತೆಯೇ ಇರಲಿ
ಓಡುವ ನದಿಯು ಸಾಗುವ ಹಾಗೆ..
ಹೂ ಬನವಿರಲಿ.. ಮರುಭೂಮಿ ಬರಲಿ
ನಿನ್ನೆದೆ ಗಾಳಿ ಬೀಸುವ ಹಾಗೆ.. ನಿಲ್ಲದ ಈ ಪಯಣದ ಗುರಿಯ..
ನಿಲ್ಲದ ಈ ಪಯಣದ ಗುರಿಯ..  ಯಾರು.. ಇಂದು.. ಕಂಡವರಾರು..

ದೇವರ ಆಟ ಬಲ್ಲವರಾರು.. ಆತನ ಎದುರೂ ನಿಲ್ಲುವರಾರು... 
ಕೇಳದೆ ಸುಖವ ತರುವ, ಹೇಳದೇ ದುಃಖವ  ಕೊಡುವ
ತನ್ನ ಮನದಂತೆ ಕುಣಿಸಿ ಆಡುವ..
ದೇವರ ಆಟ ಬಲ್ಲವರಾರು.. ಆತನ ಎದುರೂ ನಿಲ್ಲುವರಾರು... 

*********************************************************************************

ಶ್ !!! (1993)



ಅವನಲ್ಲಿ, ಇವಳಿಲ್ಲಿ

ಚಲನ ಚಿತ್ರ: ಶ್ !!! (1993)
ಸಾಹಿತ್ಯ: ಉಪೇಂದ್ರ 
ಸಂಗೀತ: ಸಾಧು ಕೋಕಿಲ 
ಗಾಯನ: ಎಲ್. ಎನ್. ಶಾಸ್ತ್ರೀ 
ನಿರ್ದೇಶನ: ಉಪೇಂದ್ರ 
ನಟನೆ: ಕುಮಾರ್ ಗೋವಿಂದ್, ಕಾಶೀನಾಥ್


ಅವನಲ್ಲಿ, ಇವಳಿಲ್ಲಿ,
ಮಾತಿಲ್ಲಾ, ಕಥೆಯಿಲ್ಲ.
ಎದುರೆದುರು ಬಂದಾಗ,
ಹೆದಹೆದರಿ ನಿಂತಾಗಾ,
ಅಲ್ಲೇ ಆರಂಭ ಪ್ರೇಮ.

ಅವನಲ್ಲಿ, ಇವಳಿಲ್ಲಿ,
ಮಾತಿಲ್ಲಾ, ಕಥೆಯಿಲ್ಲ.
ಎದುರೆದುರು ಬಂದಾಗ,
ಹೆದಹೆದರಿ ನಿಂತಾಗಾ,
ಅಲ್ಲೇ ಆರಂಭ ಪ್ರೇಮ.

ಅವನಲ್ಲಿ ಇವಳಿಲ್ಲಿ,
ಮಾತಿಲ್ಲಾ, ಕಥೆಯಿಲ್ಲ.

ನೀನೆ ಎಲ್ಲಾ,
ನೀನಿರದೆ ಬಾಳೇ ಇಲ್ಲಾ,
ಅನ್ನುವುದು ಪ್ರೇಮಾ ಅಲ್ಲ.
ಮರಗಳನು ಸುತ್ತೋದಲ್ಲಾ.
ಕವನಗಳ ಗೀಚೋದಲ್ಲಾ,
ನೆತ್ತರಲಿ ಬರಿಯೋದಲ್ಲಾ,
ವಿಷವನು ಕುಡಿಯೋದಲ್ಲ
ಮೌನವೇನೆ ಧ್ಯಾನವೇ ಪ್ರೇಮಾ …..

ಅವನಲ್ಲಿ, ಇವಳಿಲ್ಲಿ,
ಮಾತಿಲ್ಲಾ, ಕಥೆಯಿಲ್ಲ.

ನೋಡಿ ನೋಡಿ ಪ್ರೇಮವನು ಮಾಡೋದಲ್ಲ.
ಮಾಡುತಲಿ ಹಾಡೋದಲ್ಲಾ,
ಹಾಡಿನಲಿ ಹೇಳೋದಲ್ಲ.
ಹೇಳುವುದ ಕೇಳೋದಲ್ಲಾ,
ಕೇಳುತಲಿ ಕಲಿಯೋದಲ್ಲಾ,
ಕಲಿತು ನೀ ಮಾಡೋದಲ್ಲಾ,
ಮೌನವೇನೆ ಧ್ಯಾನವೇ ಪ್ರೇಮಾ …..

ಅವನಲ್ಲಿ ಇವಳಿಲ್ಲಿ,
ಮಾತಿಲ್ಲಾ, ಕಥೆಯಿಲ್ಲ.
ಎದುರೆದುರು ಬಂದಾಗ,
ಹೆದಹೆದರಿ ನಿಂತಾಗಾ,
ಅಲ್ಲೇ ಆರಂಭ ಪ್ರೇಮ.
ಅವನಲ್ಲಿ ಇವಳಿಲ್ಲಿ,
ಮಾತಿಲ್ಲಾ, ಕಥೆಯಿಲ್ಲ.

*********************************************************************************

ಢವ ಢವ ನಡುಕವ

ಸಾಹಿತ್ಯ: ಉಪೇಂದ್ರ 
ಗಾಯನ: ಎಸ್.ಪಿ. ಬಾಲಸುಬ್ರಹ್ಮಣ್ಯಂ, ಮಂಜುಳಾ ಗುರುರಾಜ್ 


ಢವ ಢವ ನಡುಕವ
ಬಿಡು ನೀ ನಲ್ಲೆ
ಇರುವೆ ಇಲ್ಲೇ
ಏಕೆ ಅಂಜಿಕೆ ..
ಢವ ಢವ ನಡುಕವ ..

ರೋಜಾ ಹೂವಿನಂತ
ತುಟಿ ಇಂದು ಬೆದರಿ ಒಣಗಿದೆ
ನಾಚಿ ಅದರ ಕೆನ್ನೆ
ಏಕೆ ಇಂದು ಬಾಡಿ ಹೋಗಿದೆ
ಕಣ್ಣಿನ ಹನಿಗಳ
ಮಣ್ಣಿಗೆ ಚೆಲ್ಲದೆ
ಬಾರೆ ನೀ ಬಾಚಿಕೊ
ಹೆದರಿಕೆ ಏತಕೆ?

ಉಹು ಹೆದರಬೇಡ
ಎಂದು ನಾವು ಬೇರೆಯಾಗೆವು
ಊಹು ಭಯವು ಬೇಡ
ನಿನ್ನ ಬಿಟ್ಟು ದೂರ ಹೋಗೆನು
ನಿನಗೆ ನಾ ಬೇಲಿಯು
ಹಾಡುವೆ ಲಾಲಿಯು
ಹಾಯಾಗಿ ಮಲಗಿಕೊ

ಢವ ಢವ ನಡುಕವ
ಬಿಡು ನೀ ನಲ್ಲೆ
ಇರುವೆ ಇಲ್ಲೇ
ಏಕೆ ಅಂಜಿಕೆ ..
ಮಲಗಿಕೊ ಮಲಗಿಕೊ
hmmm... hmmm...
ಆಹಾಹಹ... ಆಹಾಹಹ...
ಲಲಲಲ.. hmmm...
*********************************************************************************

ಉಪೇಂದ್ರ (1999)



ಚಲನ ಚಿತ್ರ: ಉಪೇಂದ್ರ (1999)
ಸಾಹಿತ್ಯ: ಉಪೇಂದ್ರ 
ಸಂಗೀತ: ಗುರುಕಿರಣ್ 
ಗಾಯಕರು: ಪ್ರತಿಮಾ ರಾವ್ 
ನಿರ್ದೇಶನ: ಉಪೇಂದ್ರ 
ನಟನೆ: ಉಪೇಂದ್ರ, ಪ್ರೇಮಾ, ದಾಮಿನಿ, ರವೀನಾ ಟಂಡನ್ 

ಏನಿಲ್ಲ ಏನಿಲ್ಲ, ನಿನ್ನ ನನ್ನ ನಡುವೆ ಏನಿಲ್ಲ, ಏನೇನಿಲ್ಲ.
ಏನಿಲ್ಲ ಏನಿಲ್ಲ, ನಿನ್ನ ನನ್ನ ನಡುವೆ ಏನಿಲ್ಲ.
ನಿಜದಂತಿರುವ ಸುಳ್ಳಲ್ಲ,
ಸುಳ್ಳುಗಳೆಲ್ಲ ನಿಜವಲ್ಲ.
ಸುಳ್ಳಿನ ನಿಜವು ಸುಳ್ಳಲ್ಲ.

ಏನಿಲ್ಲ ಏನಿಲ್ಲ, ಏನೇನಿಲ್ಲ.

ಕಳೆದ ದಿನಗಳಲೇನೂ ಇಲ್ಲ.
ನೆನಪುಗಳಲಿ ಏನೇನಿಲ್ಲ.
ಉತ್ತರ, ದಕ್ಷಿಣ, ಸೇರಿಸೋ ದಿಂಬಲಿ ನೀನಿಲ್ಲ.
ಪ್ರಶ್ನೆಗೆ, ಉತ್ತರ, ಹುಡುಕಿದರೆ ಏನೇನಿಲ್ಲ.
ಕೆದಕಿದರೆ ಏನೇನಿಲ್ಲ.

ಏನಿಲ್ಲ ಏನಿಲ್ಲ, ನಿನ್ನ ನನ್ನ ನಡುವೆ ಏನಿಲ್ಲ,
ಏನೇನಿಲ್ಲ.

ಮನಸಿನೊಳಗೆ ಖಾಲಿ ಖಾಲಿ.
ನೀ ಮನದೊಳಗೆ ಇದ್ದರೂ.
ಮಲ್ಲಿಗೆ, ಸಂಪಿಗೆ, ತರದೆ ಹೋದರು
ನೀ ನನಗೆ. ಓ ನಲ್ಲ, ನೀನಲ್ಲ.
ಕರಿಮಣಿ ಮಾಲೀಕ ನೀನಲ್ಲ.
ಕರಿಮಣಿ ಮಾಲೀಕ ನೀ…ನಲ್ಲ.

ಏನಿಲ್ಲ ಏನಿಲ್ಲ, ನಿನ್ನ ನನ್ನ ನಡುವೆ ಏನಿಲ್ಲ.
ನಿಜದಂತಿರುವ ಸುಳ್ಳಲ್ಲ, ಸುಳ್ಳುಗಳೆಲ್ಲ ನಿಜವಲ್ಲ.
ಏನಿಲ್ಲ ಏನಿಲ್ಲ, ನಿನ್ನ ನನ್ನ ನಡುವೆ ಏನಿಲ್ಲ,
ಏನೇನಿಲ್ಲ.

*********************************************************************************

ಎಮ್ ಟಿವಿ ಸುಬ್ಬುಲಕ್ಷ್ಮಿಗೆ

ಸಾಹಿತ್ಯ: ಉಪೇಂದ್ರ 
ಗಾಯಕ: ಉದಿತ್ ನಾರಾಯಣ್ 


ಕುಚ್ ಕುಚ್ ಹೋ ಗಯಾ  
ಕುಚ್ ಕುಚ್ ಕುಚ್ ಹೋ ಗಯಾ
ಬರಿ ಓಳು..  ಬರಿ ಓಳು...  
ಬರಿ ಓಳು....  ಬರಿ ಓಳು...

ಎಮ್ ಟಿವಿ  ಸುಬ್ಬುಲಕ್ಷ್ಮಿಗೆ 
ಬರಿ ಓಳು ಬರಿ ಓಳು
ಜೀ ಟಿವಿ  ಮಾದೆಗೌಡ್ರಿಗೆ 
ಬರಿ ಓಳು   ಬರಿ ಓಳು
ಸೆನ್ಸರ್ ಇಲ್ಲದೆ...   
ಎಲ್ಲಾ ತೋರಿಸೊ ವೀ ಚಾನ್ನೆಲ್  ತರ
ಕೆಲ್ಸ ಮಾಡೋ ಆಳು...  ನಾ ಆಳು

ಆ...ಎಮ್ ಟಿವಿ  ಸುಬ್ಬುಲಕ್ಷ್ಮಿಗೆ ಬರಿ ಓಳು ಬರಿ ಓಳು
ಜೀ ಟಿವಿ  ಮಾದೆಗೌಡ್ರಿಗೆ ಬರಿ ಓಳು   ಬರಿ ಓಳು
ಸೆನ್ಸರ್ ಇಲ್ಲದೆ...   ಎಲ್ಲಾ ತೋರಿಸೊ ವೀ ಚಾನ್ನೆಲ್  ತರ
ಕೆಲ್ಸ ಮಾಡೋ ಆಳು...  ನಾ ಆಳು

ಗಂಡಂಗೆ ಮರೆಮಾಚೂ ಫ್ರೆಂಡಿಗೆ ಬೇ ವಾಚೂ
ಮನೆಯಲ್ಲಿ ಟಾಪ್ ಟೆನ್ನು  ಬಾರಲ್ಲಿ ಫೌಂಟ್ಟೆನ್ನೂ
ಮೇಲೆ ಸೂಪರ್ ಶೋ ಒಳಗೆ ಹಾರರ್ ಶೋ
ಇದೆ ಮಿಡ್ ನೈಟ್ ಮಸಾಲ್  ಕಣೆ
ಬರಿ ಓಳು  ಬರಿ ಓಳು

ಎಮ್ ಟಿವಿ  ಸುಬ್ಬುಲಕ್ಷ್ಮಿಗೆ ಬರಿ ಓಳು ಬರಿ ಓಳು
ಜೀ ಟಿವಿ  ಮಾದೆಗೌಡ್ರಿಗೆ ಬರಿ ಓಳು   ಬರಿ ಓಳು
ಸೆನ್ಸರ್ ಇಲ್ಲದೆ...   ಎಲ್ಲಾ ತೋರಿಸೊ ವೀ ಚಾನ್ನೆಲ್  ತರ
ಕೆಲ್ಸ ಮಾಡೋ ಆಳು...  ನಾ ಆಳು

ಕುಚ್ ಕುಚ್ ಹೋ ಗಯಾ  
ಕುಚ್ ಕುಚ್ ಕುಚ್ ಹೋ ಗಯಾ
ಕುಚ್ ಕುಚ್ ಹೋ ಗಯಾ  
ಕುಚ್ ಕುಚ್ ಕುಚ್ ಹೋ ಗಯಾ
ಬಿಪಿಎಲ್  ಓಹ್..  ಲಾ .. ಲಾ   
ಆತಿ ಕ್ಯಾ ಖಂಡಾಲಾ
ಸನ್ ಟಿವಿ ಉಂಗಾಲ್ ಚಾಯ್ಸ್  
ಕಣ್ಣಲಿ ಲವ್ಲೀ ಸೀನ್
ಸಿಟಿ ಚಾನೆಲು ಪ್ರಿಯಾ ರಾಗಾಲು
ಪ್ರೀತ್ಸೋ ಉದಯ ಟಿವಿ  ನಾನೇನೆ
ಬರಿ ಓಳು...  ಬರಿ ಓಳು

ಹೆಯ್...  ಎಮ್ ಟಿವಿ  ಸುಬ್ಬುಲಕ್ಷ್ಮಿಗೆ ಬರಿ ಓಳು ಬರಿ ಓಳು
ಜೀ ಟಿವಿ  ಮಾದೆಗೌಡ್ರಿಗೆ ಬರಿ ಓಳು ಬರಿ ಓಳು
ಸೆನ್ಸರ್ ಇಲ್ಲದೆ... ಎಲ್ಲಾ ತೋರಿಸೊ ವೀ ಚಾನ್ನೆಲ್  ತರ
ಕೆಲ್ಸ ಮಾಡೋ ಆಳು...  ನಾ ಆಳು

ಕುಚ್ ಕುಚ್ ಹೋ ಗಯಾ  
ಕುಚ್ ಕುಚ್ ಕುಚ್ ಹೋ ಗಯಾ

********************************************************************************

ಮಸ್ತು ಮಸ್ತು ಹುಡುಗಿ

ಸಾಹಿತ್ಯ: ಉಪೇಂದ್ರ  
ಗಾಯಕರು: ಮನು


ಮಸ್ತು ಮಸ್ತು ಹುಡುಗಿ ಬಂದ್ಲು
ನಾನು ನಿನ್ನ ದೋಸ್ತು ಅಂದ್ಲು
ಎಲ್ಲದಕ್ಕು ಅಸ್ತು ಅಂದ್ಲು
ಸುಸ್ತು ಆಗಿ ಕುಸ್ತು ಬಿದ್ದೆ
ಹೇ, ಮಸ್ತು ಮಸ್ತು ಹುಡುಗಿ ಬಂದ್ಲು
ನಾನು ನಿನ್ನ ದೋಸ್ತು ಅಂದ್ಲು
ಎಲ್ಲದಕ್ಕು ಅಸ್ತು ಅಂದ್ಲು
ಸುಸ್ತು ಆಗಿ ಕುಸ್ತು ಬಿದ್ದೆ
ಅಂಕು ಡೊಂಕು ಮೈಯಿ ನೋಡು
ಡಿಂಗು ಡಾಂಗು ಸ್ಟೈಲು ನೋಡು
ಅಂಕು ಡೊಂಕು ಮೈಯಿ ನೋಡು
ಡಿಂಗು ಡಾಂಗು ಸ್ಟೈಲು ನೋಡು
ಫಳ್ ಫಳ್ ಹೊಳೆಯುವ
ಘಲ್ ಘಲ್ ಕುಣಿಯುವ
ಲಂಗಿಲ್ಲದೆ ಲಗಾಮಿಲ್ಲದೆ
ಎಲ್ಲೆಲ್ಲೋ ಓಡೋ ಕುದುರೆಗೀಗ ಜಾಕಿ ನಾನು
ಮಸ್ತು ಮಸ್ತು ಹುಡುಗಿ ಬಂದ್ಲು
ನಾನು ನಿನ್ನ ದೋಸ್ತು ಅಂದ್ಲು
ಎಲ್ಲದಕ್ಕು ಅಸ್ತು ಅಂದ್ಲು
ಸುಸ್ತು ಆಗಿ ಕುಸ್ತು ಬಿದ್ದೆ
ಹೇ, ಮಸ್ತು ಮಸ್ತು ಹುಡುಗಿ ಬಂದ್ಲು
ನಾನು ನಿನ್ನ ದೋಸ್ತು ಅಂದ್ಲು
ಬಿಲ್ಲಿನಂತೆ ಹುಬ್ಬು ನೋಡು
ಬಾಣದಂತೆ ನೋಟ ನೋಡು
ಬಿಲ್ಲಿನಂತೆ ಹುಬ್ಬು ನೋಡು
ಬಾಣದಂತೆ ನೋಟ ನೋಡು
ಥಳ್ ಥಳ್ ಮಿನುಗುವ
ಝಲ್ ಝಲ್ ಕುಲುಕುವ
ಕೊಬ್ಬಿದ್ದರೂ ಕೋಳಿದ್ದರೂ
ಹುಂಬಂಗೆ ಜಂಬದ ಕೋಳಿಗೂಟ ಬಂತು ನೋಡು
ಮಸ್ತು ಮಸ್ತು ಹುಡುಗಿ ಬಂದ್ಲು
ನಾನು ನಿನ್ನ ದೋಸ್ತು ಅಂದ್ಲು
ಎಲ್ಲದಕ್ಕು ಅಸ್ತು ಅಂದ್ಲು
ಸುಸ್ತು ಆಗಿ ಕುಸ್ತು ಬಿದ್ದೆ
ಹೇ, ಮಸ್ತು ಮಸ್ತು ಹುಡುಗಿ ಬಂದ್ಲು
ನಾನು ನಿನ್ನ ದೋಸ್ತು ಅಂದ್ಲು
ಎಲ್ಲದಕ್ಕು ಅಸ್ತು ಅಂದ್ಲು
ಸುಸ್ತು ಆಗಿ ಕುಸ್ತು ಬಿದ್ದೆ

*********************************************************************************

ಶೇಕ್ ಯುವರ್ ಬಾಡೀ


ಸಾಹಿತ್ಯ: ಉಪೇಂದ್ರ  
ಗಾಯಕರು:ಗುರುಕಿರಣ್ 


ಶೇಕ್ ಯುವರ್ ಬಾಡೀ..
ಶೇಕ್ ಶೇಕ್ ಶೇಕ್, ಶೇಕ್ ಯುವರ್ ಬಾಡೀ, .ಶೇಕ್ ಶೇಕ್ ಶೇಕ್..
ಶೇಕ್ ಶೇಕ್ ಶೇಕ್, ಶೇಕ್ ಯುವರ್ ಬಾಡೀ, ಶೇಕ್ ಶೇಕ್ ಶೇಕ್..
ಶೇಕ್ ಶೇಕ್ ಶೇಕ್, ಶೇಕ್ ಯುವರ್ ಬಾಡೀ, ಶೇಕ್ ಶೇಕ್ ಶೇಕ್..
2000ಎಡಿ ಲೇಡಿಯೇ ಅಲ್ಟ್ರಾ ಮಾಡರ್ನ್,
ಈವನ್ಲೀ ಕ್ಯಾನ್ ಡೇಟ್ ಇಂಡಿವಿಜುವಲೀ ಪೂರಾ ವೆಸ್ಟ್ರರ್ನ್,
ಫ್ಲರ್ಟಿಂಗ್ ಕಾಮನ್, ಹೈ ಸ್ಪೀಡ್ ಎಂಜಿನ್,
ಡಿಚಿಂಗೂ ಹಾಬೀ ಹುಡ್ಗಿ...
ಕಂಪ್ಯೂಟರ್ ಬ್ರೈನಿನಲ್ಲಿದೆ,
ಸಿಲಿಕನ್ ಗ್ರ್ಯಾಫಿಕ್ಸ್ ಕನ್ನದೇ ಜೋಕೆ,
ಏಂಜಲ್ ಜೀನ್ಸ್ ಕ್ಲೋದಿಂಗ್ ಗರ್ಲ್ ಓ ಬ್ಯೂಟಿಫುಲ್,
ಸ್ಕ್ಯಾನಿಂಗ್ ಸಿಗದ ಮನಸು ಯಾ ವಂಡರ್‌ಫುಲ್,
2000AD ಲೇಡಿಯೇ ಅಲ್ಟ್ರಾ ಮಾಡರ್ನ್,
ಈವನ್ಲೀ ಕ್ಯಾನ್ ಡೇಟ್ ಇಂಡಿವಿಜುವಲೀ ಪೂರಾ ವೆಸ್ಟ್ರರ್ನ್,
ಫ್ಲರ್ಟಿಂಗ್ ಕಾಮನ್, ಹೈ ಸ್ಪೀಡ್ ಎಂಜಿನ್,
ಡಿಚಿಂಗೂ ಹಾಬೀ ಹುಡ್ಗಿ...
ಶೇಕ್ ಶೇಕ್ ಶೇಕ್, ಶೇಕ್ ಯುವರ್ ಬಾಡೀ, ಶೇಕ್ ಶೇಕ್ ಶೇಕ್..
ಟು ಸೇ ದಟ್ ದ ಗರ್ಲ್ ಲುಕ್ಡ್ ರಾಕಿಂಗ್ ದ ಮೂಡ್,
ಆಫ್ಟರ್ ಹ್ಯಾವಿಂಗ್ ಸಮ್ ಡರ್ಟ್ ಮಾಸ್ಟರ್ ಫಾರ್ಮೂಡ್,
ಶೀ ಪೀಸ್ ಅಟ್ ದ ಪರ್ಲ್ ಈಸ್ ಅಟ್ ಹರ್ ಫೀಟ್ ಅಂಡ್ ವುಡ್
ಲೈಕ್ ಎವೆರಿವನ್ ಟು ಡ್ಯಾನ್ಸ್ ಟು ದಬೀಟ್ ,
ಹೇ 2K AD ಮಾಡೆಲ್ ಈ ಗಾಡಿ, ಮದರ್ ಈ ಲೇಡೀ ..
ಶೇಕ್ ಯುವರ್ ಬಾಡೀ..
ಶೇಕ್ ಶೇಕ್ ಶೇಕ್, ಶೇಕ್ ಯುವರ್ ಬಾಡೀ, ಶೇಕ್ ಶೇಕ್ ಶೇಕ್.......
ಬ್ಯಾಕ್‌ಸ್ಟ್ರೀಟ್ ಬಾಯ್ಸ್ ಸುಪ್ರಬಾತವೋ,
ಪಿಸ್ಸಾ ಬರ್ಗರ್ ನೈವೇದ್ಯವೋ,
ರೆವ್ಲಾನ್ ಪರ್ಫ್ಯೂಮ್ ಬಾಡಿಲಿ,
ಆಫ್ಟರ್ 6 ಡಿಸ್ಕೊ ಪಬ್ಬಲಿ..
ಡ್ಯಾನ್ಸ್ ಡ್ಯಾನ್ಸ್....
ಬೂಸಿಂಗು ಆದ್ಮೇಲೆ ಆ ಬಟರ್‌ಫ್ಲೈ,
ಇವ್ಲೆಂತ ಭಾರತಾಂಬೆ ? ಜೈ ಜೈ ಜೈ...
2000AD ಲೇಡಿಯೇ ಅಲ್ಟ್ರಾ ಮಾಡರ್ನ್,
ಈವನ್ಲೀ ಕ್ಯಾನ್ ಡೇಟ್ ಇಂಡಿವಿಜುವಲೀ ಪೂರಾ ವೆಸ್ಟ್ರರ್ನ್,
ಫ್ಲರ್ಟಿಂಗ್ ಕಾಮನ್, ಹೈ ಸ್ಪೀಡ್ ಎಂಜಿನ್,
ಡಿಚಿಂಗೂ ಹಾಬೀ ಹುಡ್ಗಿ...
2000AD ಲೇಡಿಯೇ....!!!

*********************************************************************************

ಧಿನಕಧಿನ್ ಧಾ

ಸಾಹಿತ್ಯ: ಉಪೇಂದ್ರ  
ಗಾಯಕರು: ಉಪೇಂದ್ರ 


ಧಾ ಧಿನಕಧಿನ್ ಧಾ ಧಾ ಧಿನಕಧಿನ್ ಧಾ
ಧಾ ಧಿನಕಧಿನ್ ಧಾ 
ಉಪ್ಪಿಗಿಂತ ರುಚಿ ಬೇರೆ ಇಲ್ಲಾ..  ಧಾ ಧಿನಕಧಿನ್ ಧಾ 
ಒಪ್ಪಿಕೊಂಡೋರು ದದ್ದರಲ್ಲಾ... ಧಾ ಧಿನಕಧಿನ್ ಧಾ ಧಿನಕಧಿನ್
ಅಪ್ಪ ಅಮ್ಮ ನನಗೆ ಯಾರು ಇಲ್ಲಾ
ಇಲ್ಲಿ ನನಗೆ ನಾನೇ ಎಲ್ಲಾ.. ಧಿನಕಧಿನ್ ಧಿನಕಧಿನ್
ಉಪ್ಪಿಗಿಂತ ರುಚಿ ಬೇರೆ ಇಲ್ಲಾ..  ಧಾ ಧಿನಕಧಿನ್ ಧಾ 
ಒಪ್ಪಿಕೊಂಡೋರು ದದ್ದರಲ್ಲಾ... ಧಾ ಧಿನಕಧಿನ್ ಧಾ ಧಿನಕಧಿನ್
ಡಮಾರು ಡಮಾರು ಶಾಕಿನಿ ಡಾಕಿನಿ
ಹಿಂಬಮ ಮೂಪದ ಎಂಡಮೂರಿಗಳ ಘೋರ ವಾಹಿನಿ
ಖಾಲಿ ಕಟಕಟ ಜಟಾಪಟ ರುಂಡಧಾರಿಣಿ
ಜೂ ಮಂತರ ಕಾಲೇ ಚಂದರ್
ಹೊ..ಹೊ... ಹೊ..ಹೊ... ಯ್ಯಾ ... ನಾನೇ... ನಾನೇ...
ನನ್ನ ಆಸೆಗಳು ತೌಸಂಡೂ
ಈ ಭೂಮಿಯೇ ನನ್ನ ಕಾಲ ಚೆಂಡು.. ಧಾ ಧಿನಕಧಿನ್ ಧಾ
ನನಗೆ ನಾನೇನೇ ಡೈಮಂಡೂ   ಆ ವೈರಿಗಳ ನಾ ಚೂರಚೆಂಡು
ಯಾರಿಗಾಗಲ್ಲ ನಾ ಬೆಂಡು...
ಯಾರಿಗಾಗಲ್ಲ ನಾ ಬೆಂಡು...  ಈ ಬೆಂಕಿ ಚೆಂಡೂ... ಹಾಂ...
ಉಪ್ಪಿಗಿಂತ ರುಚಿ ಬೇರೆ ಇಲ್ಲಾ..  ಧಾ ಧಿನಕಧಿನ್ ಧಾ 
ಒಪ್ಪಿಕೊಂಡೋರು ದಡ್ಡರಲ್ಲಾ... ಧಾ ಧಿನಕಧಿನ್ ಧಾ
ಅಪ್ಪ ಅಮ್ಮ ನನಗೆ ಯಾರು ಇಲ್ಲಾ
ಇಲ್ಲಿ ನನಗೆ ನಾನೇ ಎಲ್ಲಾ..
ಉಪ್ಪಿಗಿಂತ ರುಚಿ ಬೇರೆ ಇಲ್ಲಾ..  ಧಾ ಧಿನಕಧಿನ್ ಧಾ 
ಒಪ್ಪಿಕೊಂಡೋರು ದಡ್ಡರಲ್ಲಾ... ಧಾ ಧಿನಕಧಿನ್ ಧಾ
ನಾನು ಹುಟ್ಟಿದ ಮೇಲೇನೆ  ಶತಕೋಟಿ ದೇವರು ಹುಟ್ಟಿದೂ
ಧಾ ಧಿನಕಧಿನ್ ಧಾ
ನಾನು ಕಣ್ಣು ಬಿಟ್ಟ ಮೇಲೇನೆ ಆ ಸೂರ್ಯ ಚಂದ್ರ ಹುಟ್ಟಿದೂ
ನಾನು ಇಲ್ಲದೇ ಏನಿಲ್ಲಾ...  ನಾನು ಇಲ್ಲದೇ ಏನಿಲ್ಲಾ...
ನಾನಿದ್ದರೇ ಎಲ್ಲಾ... ಹ್ಹಾ...
ಉಪ್ಪಿಗಿಂತ ರುಚಿ ಬೇರೆ ಇಲ್ಲಾ..  ಧಾ ಧಿನಕಧಿನ್ ಧಾ 
ಒಪ್ಪಿಕೊಂಡೋರು ದಡ್ಡರಲ್ಲಾ... ಧಾ ಧಿನಕಧಿನ್ ಧಾ
ಅಪ್ಪ ಅಮ್ಮ ನನಗೆ ಯಾರು ಇಲ್ಲಾ
ಇಲ್ಲಿ ನನಗೆ ನಾನೇ ಎಲ್ಲಾ.. ಧಿನಕಧಿನ್  ಧಿನಕಧಿನ್
ಉಪ್ಪಿಗಿಂತ ರುಚಿ ಬೇರೆ ಇಲ್ಲಾ..  ಧಾ ಧಿನಕಧಿನ್ ಧಾ 
ಒಪ್ಪಿಕೊಂಡೋರು ದಡ್ಡರಲ್ಲಾ... ಧಾ ಧಿನಕಧಿನ್ ಧಾ ನಾನೂ....


*********************************************************************************