ನೆರಳನು ಕಾಣದ
ಚಲನ ಚಿತ್ರ : ಅವಳ ಹೆಜ್ಜೆ (1981)ಸಂಗೀತ: ರಾಜನ್ ನಾಗೇಂದ್ರ
ಸಾಹಿತ್ಯ: ಚಿ.ಉದಯ್ ಶಂಕರ್
ನಿರ್ದೇಶನ: ಭಾರ್ಗವ
ಗಾಯಕರು: ಎಸ್.ಪಿ.ಬಾಲಸುಬ್ರಮಣ್ಯಂ
ನಟನೆ: ವಿಷ್ಣುವರ್ಧನ್, ಲಕ್ಷ್ಮೀ, ಅಂಬರೀಷ್

ಬಿಸಿಲಿಗೆ ಬಾಡಿದ ಹೂವಂತೆ,
ಸೋತಿದೆ ಈ ಮೊಗವೇಕೆ,......
ಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆ,
ಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆ,
ನೆರಳನು ಕಾಣದ ಲತೆಯಂತೆ,
ಬಿಸಿಲಿಗೆ ಬಾಡಿದ ಹೂವಂತೆ,
ಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆ,
ಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆ,
ನಯನದಲಿ ಕಾಂತಿ ಇಲ್ಲಾ,ತುಟಿಗಳಲಿ ನಗುವೇ ಇಲ್ಲಾ,
ಸವಿಯಾದ ಮಾತನು ಇಂದೇಕೋ ಕಾಣೆನು.
ನಿನ್ನ ಮನಸು ನಾನು ಬಲ್ಲೆ,ನಿನ್ನ ವಿಷಯವೆಲ್ಲ ಬಲ್ಲೆ,
ನೀನೇನು ಹೇಳದೆ,ನಾನೆಲ್ಲಾ ಹೇಳಲೇ,
ಏನಿಂತ ನಾಚಿಕೆ,ಕಣ್ಣೀರು ಏತಕೆ.
ನೆರಳನು ಕಾಣದ ಲತೆಯಂತೆ,
ಬಿಸಿಲಿಗೆ ಬಾಡಿದ ಹೂವಂತೆ,
ಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆ,
ಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆ,
ಈ ಗುಡಿಯ ದೇವಿ ನೀನು,
ಈ ತನುವಾ ಪ್ರಾಣ ನೀನು,
ಬಾಳಲ್ಲಿ ನೆಮ್ಮದಿ,ನಿನ್ನಿಂದ ಕಂಡೆನು,
ನೀ ಅಳಲು ನೋಡಲಾರೆ,
ನೀ ಇರದೇ ಬಾಳಲಾರೆ,

ನೀ ದೂರವಾದರೆ ನನಗಾರು ಆಸರೆ........
ನೆರಳನು ಕಾಣದ ಲತೆಯಂತೆ,
ಬಿಸಿಲಿಗೆ ಬಾಡಿದ ಹೂವಂತೆ,
ಸೋತಿದೆ ಈ ಮೊಗವೇಕೆ,......
ಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆ,
ಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆ,
ನೆರಳನು ಕಾಣದ ಲತೆಯಂತೆ,
ಬಿಸಿಲಿಗೆ ಬಾಡಿದ ಹೂವಂತೆ,
ಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆ,
ಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆ,
********************************************************************************

ಬಂದೆಯಾ ಬಾಳಿನ ಬೆಳಕಾಗಿ
ಸಾಹಿತ್ಯ: ಚಿ. ಉದಯಶಂಕರ್ಗಾಯಕರು: ಎಸ್. ಜಾನಕಿ, ಎಸ್. ಪಿ. ಬಾಲಸುಬ್ರಹ್ಮಣ್ಯಂ
ಗಂಡು : ಬಂದೆಯಾ ಬಾಳಿನ ಬೆಳಕಾಗಿ ,
ಬಂದೆಯಾ ಪ್ರೇಮದ ಸಿರಿಯಾಗಿ
ನನಗಾಗಿ ನನ್ನ ಜೊತೆಯಾಗಿ,
ನನಗಾಗಿ ನನ್ನ ಜೊತೆಯಾಗಿ

ಜೇನಿಂದ ತುಂಬುತ ಆನಂದಾ...
ಬಂದೆಯಾ ಬಾಳಿನ ಬೆಳಕಾಗಿ ,
ಬಂದೆಯಾ ಪ್ರೇಮದ ಸಿರಿಯಾಗಿ
ನನಗಾಗಿ ನನ್ನ ಜೊತೆಯಾಗಿ,
ನನಗಾಗಿ ನನ್ನ ಜೊತೆಯಾಗಿ
ಗಂಡು : ತಾವರೆ ಮೊಗ್ಗೊಂದು
ಸೂರ್ಯನ ಕಂಡಾಗ ಅರಳೀ ನಗುವ ಹಾಗೆ,
ಈ ಮೊಗವೇಕೋ ಕಾಣೆ,ಹೂವಾಯಿತೀಗ
ಹೆಣ್ಣು : ಕತ್ತಲು ಎಲ್ಲೆಲ್ಲೂ ಮುತ್ತಲು ಭಯದಲ್ಲಿ
ಹೂವೂ ಬಾಡುತಿರಲು ಈ ನಿನ್ನ ಕಣ್ಣ ಕಾಂತಿ,
ಹೊಸ ಜೀವ ತಂದಿತು
ಗಂಡು : ಜಾಣೆ ನುಡಿಗಳೋ ವೀಣೆಸ್ವರಗಳೋ
ಕಾಣೆನು ಪ್ರೇಯಸಿ ನಾನು,ಕಾಣೆನು ಪ್ರೇಯಸಿ ನಾನು
ಹೆಣ್ಣು : ಬಂದೆಯಾ ಬಾಳಿನ ಬೆಳಕಾಗಿ,
ಬಂದೆಯಾ ಪ್ರೇಮದ ಸಿರಿಯಾಗಿ
ನನಗಾಗಿ ನನ್ನ ಜೊತೆಯಾಗಿ,
ನನಗಾಗಿ ನನ್ನ ಜೊತೆಯಾಗಿ
ಗಂಡು : ಸ್ನೇಹದ ಮಾತಿಂದ
ಪ್ರೀತಿಯ ಜೇನಿಂದ ತುಂಬುತ ಆನಂದಾ...
ಗಂಡು : ಬಂದೆಯಾ ಬಾಳಿನ ಬೆಳಕಾಗಿ,
ಬಂದೆಯಾ ಪ್ರೇಮದ ಸಿರಿಯಾಗಿ
ನನಗಾಗಿ ನನ್ನ ಜೊತೆಯಾಗಿ,
ನನಗಾಗಿ ನನ್ನ ಜೊತೆಯಾಗಿ
ಹೆಣ್ಣು : ಆಸರೆ ಏನೊಂದು ಕಾಣದೆ
ನಾ ನೊಂದು ಅಂದು ಓಡಿ
ಬಂದೆ ದೇವರ ಹಾಗೆ ನಿನ್ನ ನಾನಲ್ಲಿ ಕಂಡೆ
ಗಂಡು : ಹೇಳುವರಾರಿಲ್ಲ ಕೇಳುವರಾರಿಲ್ಲ
ಒಂಟೀ ಬಾಳಿನಲ್ಲಿ ದೇವತೆಯಂತೆ
ನೀನು ನನ್ನಲ್ಲಿ ಬಂದೆ
ಹೆಣ್ಣು : ಹೃದಯ ಅರಳಿತು ಮನಸು ಕುಣಿಯಿತು
ಈ ಸವಿ ಮಾತನು ಕೇಳಿ,ಈ ಸವಿ ಮಾತನು ಕೇಳಿ....
ಗಂಡು : ಬಂದೆಯಾ ಬಾಳಿನ ಬೆಳಕಾಗಿ
ಹೆಣ್ಣು : ಬಂದೆಯಾ ಪ್ರೇಮದ ಸಿರಿಯಾಗಿ
ಗಂಡು : ನನಗಾಗಿ ನನ್ನ ಜೊತೆಯಾಗಿ
ಹೆಣ್ಣು : ನನಗಾಗಿ ನನ್ನ ಜೊತೆಯಾಗಿ
ಇಬ್ಬರು : ಸ್ನೇಹದ ಮಾತಿಂದ ಪ್ರೀತಿಯ ಜೇನಿಂದ
ತುಂಬುತ ಆನಂದಾ...
ಬಂದೆಯಾ ಬಾಳಿನ ಬೆಳಕಾಗಿ ,
ಬಂದೆಯಾ ಪ್ರೇಮದ ಸಿರಿಯಾಗಿ
ನನಗಾಗಿ ನನ್ನ ಜೊತೆಯಾಗಿ,
ಲಲಲಾ ಲಲಲಲಲಾ,ಲಲಲಾ,
ಆ ಆ ಆ ಆ
*********************************************************************************
ಆಕಾಶ ನೀರಾಗಲಿ
ಸಾಹಿತ್ಯ: ಚಿ.ಉದಯಶಂಕರ್
ಗಾಯಕರು: ಎಸ್. ಜಾನಕಿ, ಎಸ್.ಪಿ. ಬಾಲಸುಬ್ರಹ್ಮಣ್ಯಂ
ಆಕಾಶ ನೀರಾಗಲಿ... ಆ ಸೂರ್ಯ ತಂಪಾಗಲೀ..
ಪ್ರಳಯವೇ ಆಗಲಿ ಭಯವೇನು ಇಲ್ಲ..
ಎಂದಿಗೂ ನಿನ್ನನ್ನು ಬಿಡಲಾರೆ ಕುಳ್ಳ. ..
ಆಕಾಶ ನೀರಾಗಲಿ... ಆ ಸೂರ್ಯ ತಂಪಾಗಲೀ..
ಪ್ರಳಯವೇ ಆಗಲಿ ಭಯವೇನು ಇಲ್ಲ..
ಎಂದಿಗೂ ನನಗೆ ನೀ ಜೋಡಿಯಲ್ಲ . ..
ಪ್ರಳಯವೇ ಆಗಲಿ ಭಯವೇನು ಇಲ್ಲ..
ಎಂದಿಗೂ ನಿನ್ನನ್ನು ಬಿಡಲಾರೆ ಕುಳ್ಳ. ..
ಆಕಾಶ ನೀರಾಗಲಿ... ಆ ಸೂರ್ಯ ತಂಪಾಗಲೀ..
ಪ್ರಳಯವೇ ಆಗಲಿ ಭಯವೇನು ಇಲ್ಲ..
ಎಂದಿಗೂ ನನಗೆ ನೀ ಜೋಡಿಯಲ್ಲ . ..
ಆಕಾಶ ನೀರಾಗಲಿ...
ನಿನ್ನ ಬಿಟ್ಟೇನೆ ಬಿಟ್ಟು ಕೆಟ್ಟೇನೆ.. ಪುಟ್ಟಾ ಬಾ ಸೋತೆನು
ಕಂಡಂದೆ ಮನದಲ್ಲೇ ಮದುವೆ ನಾನಾದೆನು..
ಅಯ್ಯೋ ಅಮ್ಮಯ್ಯ ನಿನ್ನ ದಮ್ಮಯ್ಯ ನಿನಗೇಕೆ ಈ ಮೋಹವು..
ಸರಿಯಲ್ಲ ಈ ಮಾತು ನಿನಗಲ್ಲ ಈ ಸ್ನೇಹವೂ
ಏಕೆ ಈ ದಾಹವೂ ಏನೋ ಗ್ರಹಚಾರವೂ...
ಕಂಡಂದೆ ಮನದಲ್ಲೇ ಮದುವೆ ನಾನಾದೆನು..
ಅಯ್ಯೋ ಅಮ್ಮಯ್ಯ ನಿನ್ನ ದಮ್ಮಯ್ಯ ನಿನಗೇಕೆ ಈ ಮೋಹವು..
ಸರಿಯಲ್ಲ ಈ ಮಾತು ನಿನಗಲ್ಲ ಈ ಸ್ನೇಹವೂ
ಏಕೆ ಈ ದಾಹವೂ ಏನೋ ಗ್ರಹಚಾರವೂ...
ಆಕಾಶ ನೀರಾಗಲಿ... ಆ ಸೂರ್ಯ ತಂಪಾಗಲೀ..
ಪ್ರಳಯವೇ ಆಗಲಿ ಭಯವೇನು ಇಲ್ಲ..
ಎಂದಿಗೂ ನನಗೆ ನೀ ಜೋಡಿಯಲ್ಲ . ..
ಆಕಾಶ ನೀರಾಗಲಿ...
ಅಬ್ಬಾ ಹುಚ್ಚಿಗ ಇನ್ನು ಹೆಚ್ಚಾಯ್ತೆ... ಅಯ್ಯೋ ಭಯವಾಗಿದೇ...
ನಾ ಕೊಟ್ಟ ಮದ್ದೆಲ್ಲಾ ಕಡೆಗಿಂದು ಹೀಗಾಯಿತೇ...
ಹುಚ್ಚು ಅಂದೇನೆ ಬಿಟ್ಟು ಹೋಗಾಯ್ತು... ಪೆಚ್ಚೆ ನೀ ಕೇಳಲೋ..
ನಿನ್ನಿಂದ ದೂರಾಗಿ ಮನೆಯಲ್ಲೇ ಇರಲಾರದೇ...
ಜೊತೆಗಿರಲೂ ಹೀಗಾಡಿದೆ.. ನಿನಗಾಗಿ ನಾ ನಟಿಸಿದೆ..
ನಾ ಕೊಟ್ಟ ಮದ್ದೆಲ್ಲಾ ಕಡೆಗಿಂದು ಹೀಗಾಯಿತೇ...
ಹುಚ್ಚು ಅಂದೇನೆ ಬಿಟ್ಟು ಹೋಗಾಯ್ತು... ಪೆಚ್ಚೆ ನೀ ಕೇಳಲೋ..
ನಿನ್ನಿಂದ ದೂರಾಗಿ ಮನೆಯಲ್ಲೇ ಇರಲಾರದೇ...
ಜೊತೆಗಿರಲೂ ಹೀಗಾಡಿದೆ.. ನಿನಗಾಗಿ ನಾ ನಟಿಸಿದೆ..
ಆಕಾಶ ನೀರಾಗಲಿ... ಆ ಸೂರ್ಯ ತಂಪಾಗಲೀ..
ಪ್ರಳಯವೇ ಆಗಲಿ ಭಯವೇನು ಇಲ್ಲ..
ಎಂದಿಗೂ ನಿನ್ನನು ಬಿಡಲಾರೆ ಕುಳ್ಳ
ಆಕಾಶ ನೀರಾಗಲಿ... ಆ ಸೂರ್ಯ ತಂಪಾಗಲೀ..
ಪ್ರಳಯವೇ ಆಗಲಿ ಭಯವೇನು ಇಲ್ಲ..
ಎಂದಿಗೂ ಸುಂದರಿ ಬಿಡಲಾರೆ ನಿನ್ನ
ಆಕಾಶ ನೀರಾಗಲಿ...ಅಹಹಹಾ
ರಾರಾರಾರ್ ಲಲಲಲಲ ಲಲಲಲಲ
*********************************************************************************
ದೇವರ ಆಟ ಬಲ್ಲವರಾರು
ಸಾಹಿತ್ಯ: ಚಿ.ಉದಯಶಂಕರ್
ಗಾಯಕರು: ಎಸ್. ಜಾನಕಿ
ದೇವರ ಆಟ ಬಲ್ಲವರಾರು.. ಆತನ ಎದುರೂ ನಿಲ್ಲುವರಾರು...
ಕೇಳದೆ ಸುಖವ ತರುವ, ಹೇಳದೇ ದುಃಖವ ಕೊಡುವ
ತನ್ನ ಮನದಂತೆ ಕುಣಿಸಿ ಆಡುವ..
ದೇವರ ಆಟ ಬಲ್ಲವರಾರು.. ಆತನ ಎದುರೂ ನಿಲ್ಲುವರಾರು...
ಕೇಳದೆ ಸುಖವ ತರುವ, ಹೇಳದೇ ದುಃಖವ ಕೊಡುವ
ತನ್ನ ಮನದಂತೆ ಕುಣಿಸಿ ಆಡುವ..
ಕೇಳದೆ ಸುಖವ ತರುವ, ಹೇಳದೇ ದುಃಖವ ಕೊಡುವ
ತನ್ನ ಮನದಂತೆ ಕುಣಿಸಿ ಆಡುವ..
ದೇವರ ಆಟ ಬಲ್ಲವರಾರು.. ಆತನ ಎದುರೂ ನಿಲ್ಲುವರಾರು...
ಕೇಳದೆ ಸುಖವ ತರುವ, ಹೇಳದೇ ದುಃಖವ ಕೊಡುವ
ತನ್ನ ಮನದಂತೆ ಕುಣಿಸಿ ಆಡುವ..
ದೇವರ ಆಟ ಬಲ್ಲವರಾರು.. ಆತನ ಎದುರೂ ನಿಲ್ಲುವರಾರು...
ಹೊಸ ಹೊಸ ರಾಗ ಅನುದಿನ ಮೂಡಿ
ವಿಧ ವಿಧ ಭಾವ ಜೊತೆಯಲಿ ಕೂಡಿ
ಸಂತಸ ಒಮ್ಮೆ ವೇದನೆ ಒಮ್ಮೆ
ನೋವಲಿ ಹೃದಯ ಹಿಂಡುವುದೊಮ್ಮೆ ಬಾಳಿನ ಈ ಹಾಡಿನ ರೀತಿ
ಬಾಳಿನ ಈ ಹಾಡಿನ ರೀತಿ.. ಯಾರು ಇಂದು ಬಲ್ಲವರಾರು...
ವಿಧ ವಿಧ ಭಾವ ಜೊತೆಯಲಿ ಕೂಡಿ
ಸಂತಸ ಒಮ್ಮೆ ವೇದನೆ ಒಮ್ಮೆ
ನೋವಲಿ ಹೃದಯ ಹಿಂಡುವುದೊಮ್ಮೆ ಬಾಳಿನ ಈ ಹಾಡಿನ ರೀತಿ
ಬಾಳಿನ ಈ ಹಾಡಿನ ರೀತಿ.. ಯಾರು ಇಂದು ಬಲ್ಲವರಾರು...
ದೇವರ ಆಟ ಬಲ್ಲವರಾರು.. ಆತನ ಎದುರೂ ನಿಲ್ಲುವರಾರು...
ಕಾನನ ಬರಲಿ ಕೊರತೆಯೇ ಇರಲಿ
ಓಡುವ ನದಿಯು ಸಾಗುವ ಹಾಗೆ..
ಹೂ ಬನವಿರಲಿ.. ಮರುಭೂಮಿ ಬರಲಿ
ನಿನ್ನೆದೆ ಗಾಳಿ ಬೀಸುವ ಹಾಗೆ.. ನಿಲ್ಲದ ಈ ಪಯಣದ ಗುರಿಯ..
ನಿಲ್ಲದ ಈ ಪಯಣದ ಗುರಿಯ.. ಯಾರು.. ಇಂದು.. ಕಂಡವರಾರು..
ಓಡುವ ನದಿಯು ಸಾಗುವ ಹಾಗೆ..
ಹೂ ಬನವಿರಲಿ.. ಮರುಭೂಮಿ ಬರಲಿ
ನಿನ್ನೆದೆ ಗಾಳಿ ಬೀಸುವ ಹಾಗೆ.. ನಿಲ್ಲದ ಈ ಪಯಣದ ಗುರಿಯ..
ನಿಲ್ಲದ ಈ ಪಯಣದ ಗುರಿಯ.. ಯಾರು.. ಇಂದು.. ಕಂಡವರಾರು..
ದೇವರ ಆಟ ಬಲ್ಲವರಾರು.. ಆತನ ಎದುರೂ ನಿಲ್ಲುವರಾರು...
ಕೇಳದೆ ಸುಖವ ತರುವ, ಹೇಳದೇ ದುಃಖವ ಕೊಡುವ
ತನ್ನ ಮನದಂತೆ ಕುಣಿಸಿ ಆಡುವ..
ತನ್ನ ಮನದಂತೆ ಕುಣಿಸಿ ಆಡುವ..
ದೇವರ ಆಟ ಬಲ್ಲವರಾರು.. ಆತನ ಎದುರೂ ನಿಲ್ಲುವರಾರು...
*********************************************************************************
No comments:
Post a Comment