Sunday, March 24, 2019

ಸಂಗಮ (2008)


ಮಧುಮಾಸ ಅವಳಿಗೆ ಖಾಸಾ

ಚಲನಚಿತ್ರ: ಸಂಗಮ (2008)
ಸಾಹಿತ್ಯ: ಕವಿರಾಜ್ 
ಸಂಗೀತ: ದೇವಿ ಶ್ರೀಪ್ರಸಾದ್ 
ನಿರ್ದೇಶನ: ರವಿ ವರ್ಮ (ಗುಬ್ಬಿ)
ಹಾಡಿದವರು: ಕಾರ್ತಿಕ್  
ನಟರು: ಗಣೇಶ್, ವೇದಿಕಾ   


ಹೇ ...ಮಧುಮಾಸ ಅವಳಿಗೆ ಖಾಸಾ
ಮಳೆಬಿಲ್ಲೆ ಅವಳ ನಿವಾಸ
ಇರಬೇಕು ಅಂತ ವಿಳಾಸ ನನ್ನ ಹುಡುಗೀಗೆ
ಹೋ..ಅವಳೆದುರು ಸೂರ್ಯನೇ ಮೋಸ
ಅವಳಿರಲು ಅಂತ ಉಲ್ಲಾಸ
ಆ ಚಂದಕೆ ಚಂದಿರ ದಾಸ ನನ್ನ ಹುಡುಗೀಗೆ


ನಕ್ಕರೆ ನೂರಾರು ತಾರೆ ಮಿಂಚಬೇಕು
ಅತ್ತರೆ ಕಣ್ಣಿಂದ ಮುತ್ತು ಸುರಿಯಬೇಕು
ಅವಳನ್ನೇ ನೋಡುತ್ತಾ ಭೂಮಿಯೇ ನಿಲಬೇಕು
ಅವಳಂದ್ರೆ.....
ಅವಳಂದ್ರೆ  ಬೆಳದಿಂಗಳ ಹುಣ್ಣಿಮೆ ಬಾಲೆ
ಅವಳ್ ಬಂದ್ರೆ ಸುರಿಬೇಕು ಹೂಮಳೆ ಅಲ್ಲೇ


ಎ....ಹೂವೆಲ್ಲ ಅವಳ ನೋಡಲು
ಹಾಗೆಯೇ ಅವಳ್ ಹಿಂದೆ ಹಿಂದೆ ಬರುತಿರಬೇಕು
ತೆಳ್ಳನೆ ಬಳುಕೋ ಮೈಯಲಿ
ಕೋಮಲ ಮಿಂಚೊಂದು ಮನೆಯ ಮಾಡಿರಬೇಕು
ಪಟ ಪಟ ಪಟ ಮಾತಿನ ಮಲ್ಲಿ
ಚಿಟ ಪಟ ಚಿಟ ಮಳೆಹನಿ ಚೆಲ್ಲಿ
ಮಟ ಮಟ ಮಟ ಬಿರುಬಿಸಿಲಲ್ಲಿ
ಮನಸು ತಣಿಸಿ ಬಿಡಬೇಕು
ಗಿಲಿ ಗಿಲಿ ಗಿಲಿ ಜಾದೂ ಆಕೆ
ಬಿಳಿ ಬಿಳಿ ಬಿಳಿ ಬೆಳ್ಳಿ ಝುಮ್ಕೆ
ಜಿಗಿ ಜಿಗಿ ಜಿಗಿ ಜಿಗಿಯೋ ಜಿಂಕೆ
ಅವಳೆ ಅವಳೆ ಅವಳೆ ನನ್ನಾಕೆ
ಅವಳಂದ್ರೆ ಬೆಳದಿಂಗಳ..................


ಹೊಯ್ ತಾಕಲು ಅವಳ ಕೈಗಳು
ಆಸೆಲೆ ತುಸು ಜೀವ ಬಂದು ಕಂಪಿಸಬೇಕು
ಸುಮ್ಮನೆ ಅವಳ ಸೋಕಲು
ಗಾಳಿಯು ಅವಳತ್ತ ಇತ್ತ ಸುತ್ತಿರಬೇಕು
ತರ ತರ ತರ ತರಲೆಯು ಬೇಕು
ಅರೆಘಳಿಗೆಯೇ ಮುನಿಸಿರಬೇಕು
ಮರುಘಳಿಗೆಯೇ ನಗುತಿರಬೇಕು
ಅಂತ ಹುಡುಗಿ ಸಿಗಬೇಕು
ಹದಿ ಹದಿ ಹದಿ ಹರೆಯದ ಬೆಣ್ಣೆ
ಪಳ ಪಳ ಪಳ ಹೊಳೆಯೋ ಕಣ್ಣೆ
ಮಿರ ಮಿರ ಮಿರ ಮಿನುಗೋ ಕೆನ್ನೆ
ಇರುವ ಚೆಲುವೆ ನನಗೆ ಸಿಗಬೇಕು
ಅವಳಂದ್ರೆ ಬೆಳದಿಂಗಳ.............


*******************************************************************************


ಕೊಡು ಕೊಡು ವರವನು ಭಗವಂತ

ಸಾಹಿತ್ಯ: ಕವಿರಾಜ್ 
ಗಾಯನ: ಗೋಪಿಕ ಪೂರ್ಣಿಮಾ  


ಮಮ.........ಮಮ
ಮಮ.........ಮಮ


ಕೊಡು ಕೊಡು ವರವನು ಭಗವಂತ
ಕೊಡು ಕೊಡು ಇವನನು ನನಗಂತ....
ಮಮ ಮಮ
ಕೊಡು ಕೊಡು ವರವನು ಭಗವಂತ
ಇವನಿಗೆ ಆಗಲಿ ನಾ ಸ್ವಂತ..............
ಮಮ ಮಮ


ಹಣೆಯಲ್ಲಿ ಬರೆದರು ಏನೇ ಬದಲಾಯಿಸಿ ಬಿಡು ನೀನೆ
ನನಗಾಗಿ ಜನಿಸಿದ ಹುಡುಗ ಇವನೇ ತಾನೇ

ನಾ ನಗಲು ತಾ ನಗುವ ಮಗುವಿನ ಮನಸಿನ ಈ ಹುಡುಗ........ಮಮ
ನೊಂದರೆ ನಾ ಸ್ಪಂದಿಸುವ ಹೃದಯದ ಗೆಳೆಯನು ಈ ಹುಡುಗ...ಮಮ
ಇವನೊಂದಿಗೆ ಇದ್ದರೆ ಆ ಘಳಿಗೆ ನನ್ನ ಪಾಲಿಗೆ ದೀವಳಿಗೆ
ಮನ ತುಂಬುವ ಈತನ ಮುದ್ದು ನಗೆ ನನಗೆ ನನಗೆ ನನಗೆ ನನಗೆ ನನಗೆ

ತಾರೆಗಳ ತೋರಿಸುವ ಬಿರು ಬಿರು ಬಿಸಿಲಲು ಹೇಗೋ ಇವ.......ಮಮ
ಕೂಡಿಟ್ಟ ಕನಸುಗಳ ದೋಚಿದ ಚೋರನೆ ಈ ಚೆಲುವ..............ಮಮ
ಇವನ ಎದೆ ಗೂಡಲಿ ಜಾಗ ಕೊಡು ನನಗೆ ಜಗ ಬೇಡ ಬಿಡು
ನಮ್ಮಿಬ್ಬರ ಸಂಗಮ ಮಾಡಿ ಬಿಡು ಇದುವೇ ಬಯಕೆ ನಿನಗೆ ಹೊರುವೆ ಹರಕೆ

********************************************************************************

ಆಗಲಿ ಸಂಗಮ

ಸಾಹಿತ್ಯ: ಕವಿರಾಜ್ 
ಗಾಯಕರು: ಸಾಗರ್, ದಿವ್ಯ 


ಕಾದು ಕಾದು ನಾ ಕುಳಿತಿರುವೆ
ಎಂದು ಎಂದು ನೀ ನನಗೊಲಿವೆ
ಆಗಲಿ ಸಂಗಮ ನಮ್ಮ ಹೃದಯದ ಸಂಗಮ

ಹುಡುಗ ಬಾರೋ ಬೇಗ ನೀನು
ಹೃದಯ ಕೂಗಿ ಕರೆಯುತಿದೆ
ಹುಡುಗಿ ಮೋಡಿ ಮಾಡಿ ನೀನು
ಮನಸು ತೇಲಿದೆ

ಎಲ್ಲೋ ಇಟ್ಟು ಕಳೆದಿರೋ ಓಲೆ
ಏನೋ ಗೀಚಿ ಹರಿದಿರೋ ಹಾಳೆ
ಎಲ್ಲದಕ್ಕೂ ನೀನೆ ಕಾರಣ
ಮನಸು ಕೆಡಿಸಿದವನೇ

ಏನೋ ಮಾಡೋ ನೆಪದಲಿ ನೀನು
ನನ್ನೇ ನೋಡೋ ಗಳಿಗೆಗೆ ನಾನು
ಯಾಕೆ ಹೀಗೆ ಕಾದು ಕೂರುವೆ
ತಿಳಿಸು ನನಗೆ ನೀನೆ

ಕಣ್ಣಿಂದ ಒಂದು ಕಣ್ಣೀರ ಬಿಂದು
ಖುಷಿಯಲ್ಲಿ ಜಾರಿದೆ
ಆಗಲಿ ಸಂಗಮ ನಮ್ಮ ಹೃದಯದ ಸಂಗಮ

ಒಂಟಿಯಾಗಿ ಕುಳಿತರು ಹೀಗೆ
ಅಂಟಿ ನಿಂಗೆ ಕುಳಿತಿರೋ ಹಾಗೆ
ಬೆಚ್ಚನೆಯ ಭಾವ ನನ್ನಲಿ ಬರುತಲಿರುವುದೇಕೋ

ನೆನ್ನೆ ಮೊನ್ನೆ ಎಣಿಸಿರಲಿಲ್ಲ
ಇಂದು ನೀನೆ ಎದೆಯೊಳಗೆಲ್ಲ
ನಿನ್ನ ಬಿಟ್ಟು ಬೇರೆ ಯೋಚನೆ
ನನಗೆ ಬರದು ಏಕೋ

ಕಣ್ಮುಚ್ಚಿಕೊಂಡು ನಿನ್ನನ್ನೇ ಕಂಡು
ಮೈಮರೆತು ಹೋದೆನಾ
ಆಗಲಿ ಸಂಗಮ ನಮ್ಮ ಹೃದಯದ ಸಂಗಮ


*******************************************************************************

No comments:

Post a Comment