ವಸಂತ ಕಾಲ ಬಂದಾಗ
ಚಲನ ಚಿತ್ರ: ಗುರಿ (1986)ನಿರ್ದೇಶನ: ಪಿ. ವಾಸು
ಸಂಗೀತ: ರಾಜನ್-ನಾಗೇಂದ್ರ
ಸಾಹಿತ್ಯ: ಚಿ.ಉದಯಶಂಕರ್
ಗಾಯನ: ಡಾ| ರಾಜ್‍ಕುಮಾರ್
ನಟನೆ: ಡಾ| ರಾಜ್‍ಕುಮಾರ್, ಅರ್ಚನಾ, ತಾರಾ
ವಸಂತ ಕಾಲ ಬಂದಾಗ
ಮಾವು ಚಿಗುರಲೇ ಬೇಕು
ಕೋಗಿಲೆ ಹಾಡಲೆ ಬೇಕು
ಕಂಕಣ ಕೂಡಿ ಬಂದಾಗ
ಮದುವೆ ಆಗಲೇ ಬೇಕು
ಮಂಗಳ ವಾದ್ಯ ಮೊಳಗಲೇ ಬೇಕು
ಹೊಸಬಾಳ ಹೊಸಿಲಲ್ಲಿ
ನಸುನಾಚಿ ನಿಂತಾಗ
ನಿನ್ನಂದ ನಾ ನೋಡಬೇಕು
||ವಸಂತ ಕಾಲ||
ರೇಷ್ಮೇ ಸೀರೆಯುಟ್ಟು
ಹೊಸ ಹೂವ ಮುಡಿಯಲಿಟ್ಟು
ಮಧುಮಗಳಾಗಿ ಕುಳಿತಿರುವಾಗ ||೨||
ನೋಡುವುದೇ ಭಾಗ್ಯ ನಿನ್ನನು
ಮಂತ್ರ ಹೇಳುವಾಗ ಮಾಂಗಲ್ಯ ಕಟ್ಟುವಾಗ
ಕಳ್ಳಿಯಹಾಗೆ ಮಳ್ಳಿಯ ಹಾಗೆ ||೨||
ನಲ್ಲನ ನೀ ನೋಡೋ ನೋಟವಾ
ಕಾಣುವಾಸೆ ತಾಳಲಾರೆ ನನ್ನ ಮುದ್ದಿನ ಸೋದರಿ
|| ವಸಂತ ಕಾಲ||
ಜೋಡಿ ಬಂದ ಮೇಲೆ
ನಿನ್ನ ಬಾಳ ರೀತಿ ಬೇರೆ
ಬದುಕಲಿ ಜಾಲಿ, ವರುಷದಿ ಲಾಲಿ ||೨||
ಗೊಂಬೆಯ ಹಾಗೊಂದು ಕೈಯಲಿ
ನಾಳೆ ನಿನ್ನ ಮಗನು ನನ್ನ ಮಾವ ಎನ್ನುವಾಗ
ತಂಗಿಯೇ ನಿನಗೆ ಅಂದದ ಸೊಸೆಯಾ
ಎಲ್ಲಿಂದ ನಾ ತಂದು ಕೊಡಲಿ
ಓ...ಲಕ್ಷ ಲಕ್ಷ ಕೇಳಿದಾಗ
ಎಲ್ಲಿಗೆ ನಾ ಹೋಡಿ ಹೋಗಲಿ
||ವಸಂತ ಕಾಲ|| ||ವಸಂತ ಕಾಲ||
ತಾಕ್ಕಡ್ತ ತಾಕಡ್ತ ತಕ್ ತಾ....ಹ ಹ ಹ ಹ...
*****************************************************************************
ಅಲ್ಲಾ ಅಲ್ಲಾ, ನೀನೇ ಎಲ್ಲಾ
ಸಾಹಿತ್ಯ: ಚಿ.ಉದಯಶಂಕರ್ಗಾಯನ: ಡಾ| ರಾಜ್‍ಕುಮಾರ್
ಅಲ್ಲಾ ಅಲ್ಲಾ, ನೀನೇ ಎಲ್ಲಾ... ||೨||
ನಿನ್ನನು ಬಿಟ್ಟರೆ ಗತಿಯಾರಿಲ್ಲ
ನಿನ್ನದೆ ಜಗವೆಲ್ಲ
ನಿನ್ನನು ಬಿಟ್ಟರೆ ಗತಿಯಾರಿಲ್ಲ
ನಿನ್ನದೆ ಜಗವೆಲ್ಲ
|| ಲಾ ಇಲಾಹಿ ||
ಅಲ್ಲಾ ಅಲ್ಲಾ, ನೀನೇ ಎಲ್ಲಾ...
ಅಲ್ಲಾ ಅಲ್ಲಾ, ನಿನ್ನದೆ ಎಲ್ಲಾ...
ಬೀಸುತ ಓಡುವ ತಂಬೆಲರೆಲ್ಲಾ
ಬಾನಲಿ ಹಾರುವ ಹಕ್ಕಿಗಳೆಲ್ಲಾ
ಬೀಸುತ ಓಡುವ ತಂಬೆಲರೆಲ್ಲಾ
ಬಾನಲಿ ಹಾರುವ ಹಕ್ಕಿಗಳೆಲ್ಲಾ
ಕಡಲಲ್ಲಿ ಏಳುವ ಅಲೆ ಅಲೆಯಲ್ಲಾ
ಅಲ್ಲಾ ಅಲ್ಲಾ ಎನುತಿದೆಯಲ್ಲಾ ||೨||
ಅಲ್ಲಾ ಅಲ್ಲಾ ಯಾ ಅಲ್ಲಾ
ಅಲ್ಲ ಅಲ್ಲಾ, ನೀನೇ ಎಲ್ಲಾ...ಹಾಯ್ ಅಲ್ಲಾ
ನಿನ್ನನು ಬಿಟ್ಟರೆ ಗತಿಯಾರಿಲ್ಲ
ನಿನ್ನದೆ ಜಗವೆಲ್ಲಾ
ನನ್ನ ಬಾಳಲ್ಲಿ ನೆಮ್ಮದಿಯಿಲ್ಲಾ
ಎಲ್ಲೆಡೆ ಕತ್ತಲೆ ತುಂಬಿದೆಯಲ್ಲಾ
ದಾರಿಯ ತೋರುವವರಾರು ಇಲ್ಲಾ ||೨||
ನೀ ಕೈಬಿಟ್ಟರೆ ಬದುಕೇ ಇಲ್ಲಾ.....
ಅಲ್ಲಾ ಅಲ್ಲಾ ಅಲ್ಲಾ, ನೀನೇ ಎಲ್ಲಾ...
ನಿನ್ನನು ಬಿಟ್ಟರೆ ಗತಿಯಾರಿಲ್ಲ
ನಿನ್ನದೆ ಜಗವೆಲ್ಲಾ
ಯಾಲ್ಲ ಅಲ್ಲಾ ಯಾ ಅಲ್ಲಾ ||೩||
ಅಲ್ಲಾ ಎಂದರೆ ಕಷ್ಟಗಳಿಲ್ಲಾ
ಅಲ್ಲಾ ಎಂದರೆ ವೇದನೆಯಿಲ್ಲಾ
ಅಲ್ಲಾ ಎಂದರೆ ಕಷ್ಟಗಳಿಲ್ಲ, ಯಾ ಅಲ್ಲಾ
ಅಲ್ಲಾ ಎಂದರೆ ವೇದನೆಯಿಲ್ಲ, ಹಾಯ್ ಅಲ್ಲಾ
ಅಲ್ಲಾ ನೀನು ದಯೆ ತೋರಿದರೆ
ಮುಳ್ಳು ಹೂವಾಗಿ ಅರಳುವುದಲ್ಲಾ ||೨||
ಅಲ್ಲಾ ಅಲ್ಲಾ, ನೀನೇ ಎಲ್ಲಾ...
ನಿನ್ನನು ಬಿಟ್ಟರೆ ಗತಿಯಾರಿಲ್ಲ
ನಿನ್ನದೇ ಜಗವೆಲ್ಲಾ ||ಲಾಹಿ ಲಾಹ||
ಅಲ್ಲಾ........................ (ಹಿನ್ನೆಲೆ)
ಅಲ್ಲಾ ಅಲ್ಲಾ, ನೀನೇ ಎಲ್ಲಾ..
ಅಲ್ಲಾ ಅಲ್ಲಾ, ನಿನ್ನದೆ ಎಲ್ಲಾ ||೩||
*****************************************************************************
ಕಲ್ಲಿನ ವೀಣೆಯ
ಸಾಹಿತ್ಯ: ಚಿ.ಉದಯಶಂಕರ್ಗಾಯನ: ಡಾ| ರಾಜ್‍ಕುಮಾರ್
ಕಲ್ಲಿನ ವೀಣೆಯ ಮೀಟಿದರೇನು
ನಾದವು ಹೊಮ್ಮುವುದೇ
ಮಲ್ಲಿಗೆ ಹೂಗಳು ಬಾಡಿದ ಮೇಲೆ
ಪರಿಮಳ ಚೆಲ್ಲುವುದೇ
ಹೇಳೂ.. ಪರಿಮಳ ಚೆಲ್ಲುವುದೇ
ಕಲ್ಲಿನ ವೀಣೆಯ ಮೀಟಿದರೇನು
ನಾದವು ಹೊಮ್ಮುವುದೇ
ಎಲೆ ಎಲೆಯಲ್ಲಾ ಹೂವುಗಳಾಗಿ
ಹೂವುಗಳೆಲ್ಲಾ ಬಾಣಗಳಾಗಿ
ನನ್ನೆದೆಯಾ ಸೋಕಲಿ
ಆ ಮನ್ಮಥನೇ ನನ್ನೆದುರಾಗಿ
ಮೋಹನರಾಗದೀ ನನ್ನನು ಕೂಗಿ
ಛಲದಲಿ ಹೋರಾಡಲಿ
ಎಂದಿಗು ಅವನು ಗೆಲ್ಲುವುದಿಲ್ಲಾ
ಸೋಲದೆ ಗತಿಯಿಲ್ಲಾ... ||ಕಲ್ಲಿನ ವೀಣೆಯ||
ಕಲ್ಲಿನ ವೀಣೆಯ ಮೀಟಿದರೇನು
ನಾದವೂ ಹೊಮ್ಮುವುದೇ
ಕಾಣುವ ಅಂಧಕೇ ನಾ ಕುರುಡಾಗಿ
ಪ್ರೇಮದ ಹಾಡಿಗೇ ನಾ ಕಿವುಡಾಗಿ
ನೆಮ್ಮದೀ... ದೂರಾಗಿದೇ..
ರೋಷದ ಬೆಂಕಿ, ಒಡಲನು ನುಂಗಿ
ಶಾಂತಿಯು ನನ್ನಾ, ಎದೆಯಲಿ ಇಂಗಿ
ಆಸೆಯೂ ಮಣ್ಣಾಗಿದೇ..
ಗಾಳಿಯ ಹಿಡಿವ ಹಂಬಲವೇಕೆ
ಚಪಲವು ನಿನಗೇಕೇ..
||ಕಲ್ಲಿನ ವೀಣೆಯ||
*********************************************************************************
No comments:
Post a Comment