Sunday, March 24, 2019

ಕಸ್ತೂರಿ ನಿವಾಸ (1971)


ಆಡಿಸಿ ನೋಡು ಬೀಳಿಸಿ ನೋಡು

ಚಲನಚಿತ್ರ: ಕಸ್ತೂರಿ ನಿವಾಸ (1971)
 ಸಾಹಿತ್ಯ: ಚಿ. ಉದಯಶಂಕರ್ 
ಸಂಗೀತ: ಜಿ. ಕೆ. ವೆಂಕಟೇಶ್ 
ಗಾಯನ: ಪಿ.ಬಿ. ಶ್ರೀನಿವಾಸ್ 
ನಿರ್ದೇಶನ: ದೊರೈ ಭಗವಾನ್ 
ನಟನೆ: ರಾಜ್ ಕುಮಾರ್, ಜಯಂತಿ, ಆರತಿ

ಆಡಿಸಿ ನೋಡು ಬೀಳಿಸಿ ನೋಡು
ಉರುಳಿ ಹೋಗದು,
ಆಡಿಸಿ ನೋಡು ಬೀಳಿಸಿ ನೋಡು
ಉರುಳಿ ಹೋಗದು,
ಏನೇ ಬರಲಿ ಯಾರಿಗೂ ಎಂದು
ತಲೆಯ ಬಾಗದು,
ಎಂದಿಗೂ ನಾನು ಹೀಗೆ ಇರುವೆ
ಎಂದು ನಗುವುದು,
ಹೀಗೆ ನಗುತಲಿರುವುದು

ಆಡಿಸಿ ನೋಡು ಬೀಳಿಸಿ ನೋಡು
ಉರುಳಿ ಹೋಗದು,


ಗುಡಿಸಲೇ ಆಗಲಿ,ಅರಮನೆ ಆಗಲಿ,ಆಟ ನಿಲ್ಲದು,
ಹಿರಿಯರೇ ಇರಲಿ,ಕಿರಿಯರೆ ಬರಲಿ,ಭೇದ ತೋರದು,
ಗುಡಿಸಲೇ ಆಗಲಿ,ಅರಮನೆ ಆಗಲಿ,ಆಟ ನಿಲ್ಲದು,
ಹಿರಿಯರೇ ಇರಲಿ,ಕಿರಿಯರೆ ಬರಲಿ,ಭೇದ ತೋರದು,
ಕಷ್ಟವೋ,ಸುಖವೋ ಅಳುಕದೆ ಆಡಿ,ತೂಗುತಿರುವುದು, 
ತೂಗುತಿರುವುದು

ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು,

ಮೈಯನೆ ಹಿಂಡಿ ನೊಂದರು ಕಬ್ಬುಸಿಹಿಯ ಕೊಡುವುದು,
ತೇಯುತಲಿದ್ದರು ಗಂಧದ ಪರಿಮಳ ತುಂಬಿ ಬರುವುದು,
ಮೈಯನೆ ಹಿಂಡಿ ನೊಂದರು ಕಬ್ಬುಸಿಹಿಯ ಕೊಡುವುದು,
ತೇಯುತಲಿದ್ದರು ಗಂಧದ ಪರಿಮಳ ತುಂಬಿ ಬರುವುದು,
ತಾನೇ ಉರಿದರು ದೀಪವು ಮನೆಗೆ ಬೆಳಕ ತರುವುದು,
ದೀಪ ಬೆಳಕ ತರುವುದು

ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು,

ಆಡಿಸುವಾತನ ಕೈ ಚಳಕದಲಿ ಎಲ್ಲಾ ಅಡಗಿದೆ,
ಆತನ ಕರುಣೆಯ ಜೀವವ ತುಂಬಿ ಕುಣಿಸಿ ನಲಿಸಿದೆ,
ಆಡಿಸುವಾತನ ಕೈ ಚಳಕದಲಿ ಎಲ್ಲಾ ಅಡಗಿದೆ,
ಆತನ ಕರುಣೆಯ ಜೀವವ ತುಂಬಿ ಕುಣಿಸಿ ನಲಿಸಿದೆ,
ಆ ಕೈ ಸೋತರೆ ಬೊಂಬೆಯ ಕಥೆಯು ಕೊನೆಯಾಗುವುದೇ ,
ಕೊನೆಯಾಗುವುದೇ.

ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು,
ಏನೇ ಬರಲಿ ಯಾರಿಗೂ ಎಂದು ತಲೆಯ ಬಾಗದು,
ಎಂದಿಗೂ ನಾನು ಹೀಗೆ ಇರುವೆ ಎಂದು ನಗುವುದು,
ಹೀಗೆ ನಗುತಲಿರುವುದು

ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು


********************************************************************************

ಎಲ್ಲೇ ಇರು, ಹೇಗೆ ಇರು

ಸಾಹಿತ್ಯ: ಚಿ. ಉದಯಶಂಕರ್ 
ಗಾಯನ: ಪಿ. ಸುಶೀಲಾ 


ಎಲ್ಲೇ ಇರು,ಹೇಗೆ ಇರು, 
ಎಂದೆಂದೂ ಮನದಲ್ಲಿ ನೀ ತುಂಬಿರು,
ಎಲ್ಲೇ ಇರು,ಹೇಗೆ ಇರು, 
ಎಂದೆಂದೂ ಮನದಲ್ಲಿ ನೀ ತುಂಬಿರು,

ಬಾಳೆಂಬ ಗುಡಿಗೆ,ನೀ ದೇವನಾದೆ,
ಕರುಣಾಳು ನೀನು ಆಧಾರವಾದೆ,
ಬಾಳೆಂಬ ಗುಡಿಗೆ,ನೀ ದೇವನಾದೆ,
ಕರುಣಾಳು ನೀನು ಆಧಾರವಾದೆ,
ನಾ ಬೇಡಲಾರೆ ವರವೇನನು,
ನೀ ನೀಡು ಸಾಕು ನಗೆಯೊಂದನು.

ಎಲ್ಲೇ ಇರು,ಹೇಗೆ ಇರು,
ಎಂದೆಂದೂ ಮನದಲ್ಲಿ ನೀ ತುಂಬಿರು,

ನನ್ನಾಸೆ ನೂರು ಹೂವಾಗಿ ನಗಲು,
ಹೂಮಾಲೆ ಮಾಡಿ ನಿನಗೆಂದೇ ತರಲು
ನನ್ನಾಸೆ ನೂರು ಹೂವಾಗಿ ನಗಲು,
ಹೂಮಾಲೆ ಮಾಡಿ ನಿನಗೆಂದೇ ತರಲು
ಕಣ್ತುಂಬ ಕಂಡೆ ಆ ರೂಪವಾ,
ಬೆಳಕಾಗಿ ಬಂದಾ ಆ ದೀಪವಾ.

ಎಲ್ಲೇ ಇರು,ಹೇಗೆ ಇರು,
ಎಂದೆಂದೂ ಮನದಲ್ಲಿ ನೀ ತುಂಬಿರು,
ಎಂದೆಂದೂ ಮನದಲ್ಲಿ ನೀ ತುಂಬಿರು

********************************************************************************

No comments:

Post a Comment