Sunday, March 31, 2019

ಸಂತ ಶ್ರೀ ಶಿಶುನಾಳ ಷರೀಫರ ತತ್ವ ಪದಗಳು

ಸಾಹಿತ್ಯ: ಸಂತ ಶ್ರೀ ಶಿಶುನಾಳ ಷರೀಫ್   
ಸಂಗೀತ: ಸಿ.ಅಶ್ವಥ್   
ಗಾಯನ: ಸಿ.ಅಶ್ವಥ್   
ರಾಕ್ ಶೈಲಿಯಲ್ಲಿ : ರಘು ದೀಕ್ಷಿತ್    

ಏ... ರೇ ರೇ ರೆ ರೆ ರಾ.... ಏ...
ಸೋರುತಿಹುದು ಮನೆಯ ಮಾಳಿಗೀ..
ಸೋರುತಿಹುದು ಮನೆಯ ಮಾಳಿಗಿ ಅಜ್ಞಾನದಿಂದಾ
ಸೋರುತಿಹುದು ಮನೆಯ ಮಾಳಿಗೀ..

ಸೋರುತಿಹುದು ಮನೆಯ ಮಾಳಿಗಿ
ದಾರುಗಟ್ಟಿ ಮಾಳ್ಪರಿಲ್ಲಾ
ಸೋರುತಿಹುದು ಮನೆಯ ಮಾಳಿಗಿ
ದಾರುಗಟ್ಟಿ ಮಾಳ್ಪರಿಲ್ಲಾ ಕಾಳಕತ್ತಲೆ ಒಳಗೆ
ನಾನ್ ನೆಲಕೇರಿ ಮೆಟ್ಟಲಾರೆ
ಸೋರುತಿಹುದು ಮನೆಯ ಮಾಳಿಗಿ ಅಜ್ಞಾನದಿಂದಾ
ಸೋರುತಿಹುದು ಮನೆಯ ಮಾಳಿಗೀ.. 

ಮುರುಕು ತೊಲೆಯು ಹುಳುಕು ಜಂತಿ
ಕೊರೆದು ಸರಿದು ಕೀಲ ಕಡಲಿ
ಮುರುಕು ತೊಲೆಯು ಹುಳುಕು ಜಂತಿ
ಕೊರೆದು ಸರಿದು ಕೀಲ ಕಡಲಿ
ಹರಕು ಚಪ್ಪರ ಕೇರು ಗಿಂಡಿ
ಮೇಲಕ್ಕೇ..ರಿ ಮೆಟ್ಟಲಾರೆ 

ಸೋರುತಿಹುದು ಮನೆಯ ಮಾಳಿಗಿ ಅಜ್ಞಾನದಿಂದಾ
ಸೋರುತಿಹುದು ಮನೆಯ ಮಾಳಿಗೀ.. 

ಕಾಂತೆ ಕೇಳೆ ಕರುಣದಿಂದ
ಬಂತು ಕಾಣೆ ಹುಬ್ಬಿ ಮಳೆಯು
ಕಾಂತೆ ಕೇಳೆ ಕರುಣದಿಂದ
ಬಂತು ಕಾಣೆ ಹುಬ್ಬಿ ಮಳೆಯು
ಎಂತ ಶಿಶುನಾಳದೀಶತಾನು
ರೆ ರೇ............ ಏ.................
ರೇ...............ಏ... ಹೇ............
ಎಂತ ಶಿಶುನಾಳದೀಶತಾನು
ನಿಂತು ಪೊರೆವನು ಎಂದು ನಂಬಿದೆ 

ಸೋರುತಿಹುದು ಮನೆಯ ಮಾಳಿಗಿ ಅಜ್ಞಾನದಿಂದಾ

ಸೋರುತಿಹುದು ಮನೆಯ ಮಾಳಿಗೀ..

*********************************************************************************

ಶೀರ್ಷಿಕೆ : ತರವಲ್ಲ ತಗಿ ನಿನ್ನ ತಂಬೂರಿ 
ಕವಿ : ಸಂತ ಶ್ರೀ ಶಿಶುನಾಳ ಷರೀಫ್   
ಪ್ರಕಾರ : ಜಾನಪದ / ತತ್ವಪದ



ತರವಲ್ಲ ತಗಿ ನಿನ್ನ ತಂಬೂರಿ ಸ್ವರ
ಬರದೇ ಬಾರಿಸದಿರು ತಂಬೂರಿ
ಸರಸ ಸಂಗೀತದ ಕುರುಹುಗಳ ಅರಿಯದೆ
ಬರಿದೆ ಬಾರಿಸದಿರು ತಂಬೂರಿ

ಮದ್ದಾಲಿ ದನಿಯೊಳು ತಂಬೂರಿ ಆದ
ತಿದ್ದಿ ನುಡಿಸಬೇಕು ತಂಬೂರಿ
ಸಿದ್ದ ಸಾಧಕರ ವಿದ್ಯೆಗೆ ಒದಗುವ
ಬುದ್ಧಿವಂತಕೆ ತಕ್ಕ ತಂಬೂರಿ

ಬಾಳ ಬಲ್ಲವರಿಗೆ ತಂಬೂರಿ ದೇವಾ
ಬಾಳಾಕ್ಷ ರಚಿಸಿದ ತಂಬೂರಿ
ಹೇಳಲಿ ಎನಿದರ ಹಂಚಿಕೆ ತಿಳಿಯದ
ತಾಳಗೇಡಿಗೆ ಸಲ್ಲ ತಂಬೂರಿ

ಹಸನಾದ ಮೆಳಕ್ಕೆ ತಂಬೂರಿ ಇದು
ಕುಶಲರಿಗೊಪ್ಪುವ ತಂಬೂರಿ
ಶಿಶುನಾಳದೀಶನ ಓದು ಪುರಾಣದಿ
ಹಸನಾಗಿ ಬಾರಿಸೊ ತಂಬೂರಿ

*********************************************************************************

No comments:

Post a Comment