Sunday, March 24, 2019

ಜಿಮ್ಮೀ ಗಲ್ಲು (1982)

ತುತ್ತು ಅನ್ನ ತಿನ್ನೋಕೆ

ಚಲನಚಿತ್ರ: ಜಿಮ್ಮೀ ಗಲ್ಲು (1982)
ಸಾಹಿತ್ಯ: ಚಿ. ಉದಯಶಂಕರ್ 
ಸಂಗೀತ: ವಿಜಯ ಭಾಸ್ಕರ್ 
ಗಾಯನ: ವಿಷ್ಣುವರ್ಧನ್ 
ನಿರ್ದೇಶನ: ಕೆ. ಎಸ್. ಎಲ್. ಸ್ವಾಮಿ 
ನಟನೆ: ವಿಷ್ಣುವರ್ಧನ್, ಶ್ರೀಪ್ರಿಯ, ಲೋಕೇಶ್ 


ಹ್ಞೂ ಹ್ಞೂ......ಹ್ಞೂ ಹ್ಞೂ ......ಆಹಾ ಹಾ ..ಆಹಾ ಹಾ...ಆಹಾ

ತುತ್ತು ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ
ತುತ್ತು ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ
ತುಂಡು ಬಟ್ಟೆ ಸಾಕು ನನ್ನ ಮಾನ ಮುಚ್ಚೋಕೆ
ಅಂಗೈ ಅಗಲ ಜಾಗ ಸಾಕು ಹಾಯಾಗಿರೋಕೆ

ತುತ್ತು ಅನ್ನ ತಿನ್ನೋಕ ಬೊಗಸೆ ನೀರು ಕುಡಿಯೋಕೆ 

ಕಡ್ನಾಗ್ ಒಂದು ಮರವೇ ಒಣಗಿ ಬಿದ್ರೆ ಏನಾಯ್ತು
ಊರಾಗ್ ಒಂದು ಮನೆಯೇ ಉರಿದು ಹೋದ್ರೆ ಏನಾಯ್ತು
ಕಡ್ನಾಗ್ ಒಂದು ಮರವೇ ಒಣಗಿ ಬಿದ್ರೆ ಏನಾಯ್ತು
ಊರಾಗ್ ಒಂದು ಮನೆಯೇ ಉರಿದು ಹೋದ್ರೆ ಏನಾಯ್ತು
ಒಂದು ಹಳ್ಳಿ ನನ್ನಾ,ಹೋಗೋ ಅಂದರೇನು,
ಸ್ವರ್ಗದಂತ ಊರು ನನ್ನ ಹತ್ತಿರ ಕರೆದಾಯ್ತು

ತುತ್ತು ಅನ್ನ ತಿನ್ನೋಕೆ,ಬೊಗಸೆ ನೀರು ಕುಡಿಯೋಕೆ

ದುಡಿಯೋದಕ್ಕೆ ಮೈಯಾ ತುಂಬಾ ಶಕ್ತಿ ತುಂಬೈತೆ
ಅಡ್ಡದಾರಿ ಹಿಡಿಯೋದ್ ತಪ್ಪು ಅಂತಾ ಗೊತೈತೆ
ದುಡಿಯೋದಕ್ಕೆ ಮೈಯಾ ತುಂಬಾ ಶಕ್ತಿ ತುಂಬೈತೆ
ಅಡ್ಡದಾರಿ ಹಿಡಿಯೋದ್ ತಪ್ಪು ಅಂತಾ ಗೊತೈತೆ
ಕಷ್ಟ ಒಂದೇ ಬರದು,ಸುಖವು ಬರದೆ ಇರದು,
ರಾತ್ರಿ ಮುಗಿದ ಮೇಲೆ ಹಗಲು ಬಂದೇ ಬರ್ತೈತೆ ಆಂ.......

ತುತ್ತು ಅನ್ನ ತಿನ್ನೋಕೆ,ಬೊಗಸೆ ನೀರು ಕುಡಿಯೋಕೆ

ಹರಿಯೋ ನದಿಯು ಒಂದೇ ಕಡೆ ನಿಲ್ಲೋಕಾಗಲ್ಲ
ಹುಟ್ಟಿದ ಮನುಷಾ ಒಂದೇ ಊರಲಿ ಬಾಳೋಕಾಗಲ್ಲ
ಹರಿಯೋ ನದಿಯು ಒಂದೇ ಕಡೆ ನಿಲ್ಲೋಕಗಲ್ಲಾ
ಹುಟ್ಟಿದ ಮನುಷಾ ಒಂದೇ ಊರಲಿ ಬಾಳೋಕಾಗಲ್ಲ
ದೇವ್ರು ತಾನೆ ನಂಗೆ,ಅಪ್ಪ ಅಮ್ಮ ಎಲ್ಲಾ, 
ಸಾಯೋಗಂಟ ನಂಬಿದವರ ಕೈ ಬಿಡೋಕಿಲ್ಲಾ

ತುತ್ತು ಅನ್ನ ತಿನ್ನೋಕೆ,ಬೊಗಸೆ ನೀರು ಕುಡಿಯೋಕೆ
ತುಂಡು ಬಟ್ಟೆ ಸಾಕು ನನ್ನ ಮಾನ ಮುಚ್ಚೋಕೆ
ಅಂಗೈ ಅಗಲ ಜಾಗ ಸಾಕು ಹಾಯಾಗಿರೋಕೆ
ಹಾಯಾಗಿರೋಕೆ ಹಾಯಾಗಿರೋಕೆ

********************************************************************************

No comments:

Post a Comment