Sunday, March 31, 2019

ದೇವರ ದುಡ್ಡು (1977)



ಚಲನ ಚಿತ್ರ: ದೇವರ ದುಡ್ಡು (1977)
ನಿರ್ದೇಶನ: ಕೆ. ಎಸ್. ಎಲ್. ಸ್ವಾಮಿ 
ಸಾಹಿತ್ಯ: ಆರ್. ಎನ್. ಜಯಗೋಪಾಲ್ 
ಸಂಗೀತ: ರಾಜನ್-ನಾಗೇಂದ್ರ  
ಗಾಯನ: ಎಸ್. ಪಿ. ಬಿ
ನಟನೆ: ರಾಜೇಶ್, ಶ್ರೀನಾಥ್, ಜಯಂತಿ 


ತರೀಕೆರೆ ಏರಿಮೇಲೆ ಮೂರುಕರಿ ಕುರಿಮರಿ
ತರೀಕೆರೆ ಏರಿಮೇಲೆ ಮೂರುಕರಿ ಕುರಿಮರಿ
ಮೇಯ್ತಿತ್ತು  ಹಾಯಾಗ್ ಮೇಯ್ತಿತ್ತು
ತರೀ ಕೆರೆ ಏರಿ ಮೇಲೆ ಮೂರು ಕರಿ ಕುರಿ ಮರಿ
ಮೇಯ್ತಿತ್ತು....ಹಾಯಾಗ್ ಮೇಯ್ತಿತ್ತು....
ತರೀಕೆರೆ ಏರಿಮೇಲೆ ಮೂರುಕರಿ ಕುರಿಮರಿ
ತರೀಕೆರೆಏರಿಮೇಲೆಮೂರುಕರಿಕುರಿಮರಿ
ತರೀಕೆರೆಏರಿಮೇಲೆಮೂರುಕರಿಕುರಿಮರಿ
ಮೇಯ್ತಿತ್ತು....ಹಾ...ಯಾ....ಗಿ.....ಮೇ....ಯ್ತಿ.....ತ್ತು....
ಮೇಯ್ತಿತ್ತು.....ಮೇಯ್ತಿತ್ತು....ಮೇಯ್ತಿತ್ತು 

ಕಬ್ಬಿನ ಗದ್ದೆ ಮಧ್ಯದಲ್ಲಿ ಉಬ್ಬಿದ
ಕೊಬ್ಬಿದ ಗಬ್ಬದ್ ತೋಳ.....  ಊ................
ಕಬ್ಬಿನ ಗದ್ದೆ ಮಧ್ಯದಲ್ಲಿ ಉಬ್ಬಿದ
ಕೊಬ್ಬಿದ ಗಬ್ಬದ್ ತೋಳ
ಕುರಿನ್ ನೋಡಿ ಹಬ್ಬ ಎಂದು
ಕಾಯ್ತಿತ್ತು......ತಿನ್ನೊಕ್ ಕಾಯ್ತಿತ್ತು
ಬಾಯಲ್ ನೀರು ಚಪ್ಪರ್ ಸ್ಕೊಂಡು ಹ ಹ ಹ....
ಕಣ್ಣು ಕಣ್ಣು ಕೆಕ್ಕೆರ್ ಸ್ಕೊಂಡು
ಕಣ್ಣು ಕಣ್ಣು ಕೆಕ್ಕೆರ್ ಸ್ಕೊಂಡು
ಬಾಯಲ್ ನೀರು ಚಪ್ಪರ್ ಸ್ಕೊಂಡು
ಕಣ್ಣು ಕಣ್ಣು ಕೆಕ್ಕೆರ್ ಸ್ಕೊಂಡು
ಕುರಿ ಕಡೆ ನೋಡಿಕೊಂಡು
ಬರ್ತಿತ್ತು.....ತೋಳ ಬರ್ತಿತ್ತು
ಬಾಲ ಗೀಲ ಸೆಟರ್ ಸ್ಕೊಂಡು .....
ಬಾಲ ಗೀಲ ಸೆಟರ್ ಸ್ಕೊಂಡು
ಹಾರೊ ಹೊತ್ಗೇ..........
ಹಾಳು ಸೀನು ಬಂದೋಯ್ತು
ಕಾಲು ಜಾರಿ ತೋಳ ಕೆಳಗ್
ಬಿದ್ದೋಯ್ತು....ಕೆರೆಗ್ ಬಿದ್ದೋಯ್ತು 

ಮೋಡದ್ ಮಧ್ಯ ಗುಡುಗೊ ಹಾಗೆ
ಭೂಮಿಎಲ್ಲ ನಡುಗೊ ಹಾಗೆ
ಮೋಡದ್ ಮಧ್ಯ ಗುಡುಗೊ ಹಾಗೆ
ಭೂಮಿಎಲ್ಲ ನಡುಗೊ ಹಾಗೆ
ಜೋರಾಗ್ ಗರ್ಜನೆ ಮಾಡ್ತಾ
ಸಿಂಹ ಬರ್ತಿತ್ತು....ಹ......ಹಸ್ಕೊಂಡ್ ಬರ್ತಿತ್ತು
ತೇಗಿನ್ ಬಿಟ್ಕೊಂಡ್ ಬರೊ ತೋಳ
ತಿನ್ನೋಕಂತ ಬಿಟ್ಕೊಂಡ್ ಬಾಯಿ ನುಗ್ಗಿತ್ತು
ಸಿಂಹ ತೋಳ ತೋಳ ಸಿಂಹ ಸಿಂಹ
ತೋಳ ತೋಳ ಸಿಂಹ....ಹ.....
ಕುಯ್....ಕುಯ್....ಕುಯ್....ಹೋ.......
ಹೆದರ್ಕೊಂಡು ತೋಳ ಮುದುರ್ಕೊಂಡು ಬಾಲ
ತಪ್ಪಿಸ್ಕೊಂಡು ಓಡೋಯ್ತು.....
ಬೇಡ ಹಾಕಿದ್ ಬಲೆಗ್ ಸಿಂಹ ಸಿಕ್ಬಿತ್ತು.......
ತೋಳ ಓಡೋಯ್ತು......ಸಿಂಹ ಸಿಕ್ಬಿತ್ತು
ಇಷ್ಟೆಲ್ಲ ಆದ್ರೂ....... 

ತರೀಕೆರೆ ಏರಿಮೇಲೆ ಮೂರುಕರಿ ಕುರಿಮರಿ
ಮೇಯ್ತಿತ್ತು  ಹಾಯಾಗ್ ಮೇಯ್ತಿತ್ತು  ರೀ....ರೀ....ರೀ.....
ಪನಿಪಮದಪಗಸ ಸಸದದ ಗಗಗ  ಸಸಸ ಗಗಮದ
ಸಗಸನಿ ದಸಸಸ ದಸಸಸ ದಸಸ ತರಿ ಕೆರೆ  ತ ರಿ ಕೆ ರೆ....

ತರೀಕೆರೆ ಏರಿ ಮೇಲೆ ಮೂರು ಕರಿ ಕುರಿ ಮರಿ ಮೇಯ್ತಿತ್ತು
ಆ........ಆ.......ತ.. ರಿ... ಕೆ.... ರೆ
ತರೀಕೆರೆ ಏರಿ ಮೇಲೆ ಮೂರು ಕರಿ ಕುರಿ ಮರಿ
ಮೇಯ್ತಿತ್ತು.....ಮೇಯ್ತಿತ್ತು.....ಮೇಯ್ತಿತ್ತು  ಮೇಯ್ತಿತ್ತು ......
ಮೇಯ್ತಿತ್ತು.....ಮೇಯ್ತಿತ್ತು  ಮೇಯ್ತಿತ್ತು ......
ಮೇಯ್ತಿತ್ತು.....ಮೇಯ್ತಿತ್ತು

ತರೀಕೆರೆ ಏರಿ ಮೇಲೆ ಮೂರು...........
ಮೂರು ಕರಿ ಕುರಿ ಮರಿ ಮೂರು........
ತರೀಕೆರೆ ಏರಿಮೇಲೆ ಮೂರುಕರಿ ಕುರಿಮರಿ
ತರೀಕೆರೆ ಏರಿಮೇಲೆ ಮೂರುಕರಿ ಕುರಿಮರಿ
ತರೀಕೆರೆ ಏರಿಮೇಲೆಮೂರುಕರಿಕುರಿಮರಿ
ತರೀಕೆರೆಏರಿಮೇಲೆಮೂರುಕರಿಕುರಿಮರಿ
ಮೇಯ್ತಿತ್ತು ......ಮೇಯ್ತಿತ್ತು.....ಮೇಯ್ತಿತ್ತು.....
ಮೇಯ್ತಿತ್ತು ......ಮೇಯ್ತಿತ್ತು

*********************************************************************************

ಸಂಗಾತಿ ಮೊದಲು

ಸಾಹಿತ್ಯ: ಹುಣಸೂರು ಕೃಷ್ಣಮೂರ್ತಿ  
ಹಾಡಿದವರು: ಎಸ್.ಪಿ.ಬಿ. ಎಸ್.ಜಾನಕೀ 

ಹೆಣ್ಣು : ಸಂಗಾತಿ ಮೊದಲು ನಿಮ್ಮ ನಾ ಕಂಡಾಗ
            ನನ್ನ ರೀ... ಎಂದಾಗ ನಕ್ಕು.. ನಾ ಬಂದಾಗ  ಓ...
            ಸಂಗಾತಿ ಮೊದಲು ನಿಮ್ಮ ನಾ ಕಂಡಾಗ
            ನನ್ನ ರೀ... ಎಂದಾಗ ನಕ್ಕು.. ನಾ ಬಂದಾಗ  
            ಮೈಯೆಲ್ಲಾ ನಾಚಿ ಬೆವೆತು ನಿಂತೋರೆ 
            ಬಾಳಲ್ಲಿ ಪ್ರೀತಿ ಬೆರೆಸಿ ತಂದೋರೆ 
ಗಂಡು : ಹೇಹೇಹೇ .... ಆಆಆ .... ಮೈಸೂರು ಮಲ್ಲಿಗೆಯ ಹೂವ ಮೂಡಿದವಳೇ 
           ನನ್ನ ಕೈಯ್ ಹಿಡಿದವಳೇ ಬಳ್ಳಿ ಹಂಗೆ ಬಳಕೋಳೆ 
           ಕೈಯ ಬಳೆ ನಾದ ಕಿವಿಗಳಿಗೆ ಇಂಪು.. (ಆ..)   
           ನಿನ್ನ ಅಂದ ಚಂದ ಕಣ್ಣಿಗೆ ಸೋಂಪು 
           ಅಹ್ ..ಕೈಯ ಬಳೆ ನಾದ ಕಿವಿಗಳಿಗೆ ಇಂಪು.. (ಆ..)
           ನಿನ್ನ ಅಂದ ಚಂದ ಕಣ್ಣಿಗೆ ಸೋಂಪು 
ಹೆಣ್ಣು : ನೀ.. ನನ್ನ ಸೆರೆಯಲ್ಲಿ  ಆಸೆಯ.. ಬಂಧಿ ನೀವಿಲ್ಲಿ 
          ನೀ.. ನನ್ನ ಸೆರೆಯಲ್ಲಿ ಆಸೆಯ.. ಬಂಧಿ ನೀವಿಲ್ಲಿ 
         ಏಕೆ ಈ ಕಂಪನ ನಿಮ್ಮ ಬಿಡಲಾರೆನಾ  
         ಈ ಚಿರ ಬಂಧನ ಅನುದಿನ 
ಗಂಡು : ನೀ ಇಂದೂ ಕೊಟ್ಟ ಈ ಕೊಡುಗೆ 
           ಜೇನು ತುಂಬಿಟ್ಟ ಒಂದು ಸಿಹಿ ಗಡಿಗೆ 
           ಮತ್ತೇ ಬೇಕೆನಿಸಿತೇ ಇಲ್ಲ ಸಾಕೆನಿಸಿತೇ 
           ಇನ್ನೂ ಎನ್ನೇನನಿಸಿದೆ  ಹೇಳು ನೀ 
ಹೆಣ್ಣು : ಸಂಗಾತಿ ಮೊದಲು ನಿಮ್ಮ ನಾ ಕಂಡಾಗ
          ನನ್ನ ರೀ... ಎಂದಾಗ ನಕ್ಕು.. ನಾ ಬಂದಾಗ
         ಮೈಯೆಲ್ಲಾ ನಾಚಿ ಬೆವೆತು ನಿಂತೋರೆ (ಅಹ್ಹಹ)
         ಬಾಳಲ್ಲಿ ಪ್ರೀತಿ ಬೆರೆಸಿ ತಂದೋರೆ.. ಅಹ್
ಗಂಡು : ಮೈಸೂರು ಮಲ್ಲಿಗೆಯ ಹೂವ ಮೂಡಿದವಳೇ
           ನನ್ನ ಕೈಯ್ ಹಿಡಿದವಳೇ ಬಳ್ಳಿ ಹಂಗೆ ಬಳಕೋಳೆ
           ಕೈಯ ಬಳೆ ನಾದ ಕಿವಿಗಳಿಗೆ ಇಂಪು.. (ಆ..)   
           ನಿನ್ನ ಅಂದ ಚಂದ ಕಣ್ಣಿಗೆ ಸೋಂಪು 
           ಅಹ್ ..ಕೈಯ ಬಳೆ ನಾದ ಕಿವಿಗಳಿಗೆ ಇಂಪು.. (ಆ..)
           ನಿನ್ನ ಅಂದ ಚಂದ ಕಣ್ಣಿಗೆ ಸೋಂಪು 
ಗಂಡು : ನಾನಾಡೋ ಕಿವಿ ಮಾತಗೆಲ್ಲಾ ನೀನು ಕೆಂಪಾದರೆ ಗುಟ್ಟು ಊರಿಗೆಲ್ಲಾ... ಅಹ್ಹಹ್ಹಹ  
          ನಾನಾಡೋ ಕಿವಿ ಮಾತಗೆಲ್ಲಾ ನೀನು ಕೆಂಪಾದರೆ ಗುಟ್ಟು ಊರಿಗೆಲ್ಲಾ
          ನನ್ನ ಕೆಣಕದಾಗೆಲ್ಲಾ ಸುಮ್ನೆ ಬಿಡೋನಲ್ಲ ಸಾಕು ಸಾಕೆನಸದೇ ನಾ ಬಿಡೋಲ್ಲ.. ಹ್ಹಾಂ  
ಹೆಣ್ಣು : ಹಹ್ಹಹ್ಹಹ್ಹ...  ಹೂರಾಶಿ... ಮಡಿಲಲ್ಲಿ ಇರಲು ನೀ ನನ್ನ ಜೊತೆಯಲ್ಲಿ 
         ಕೈಯ ತುಂಟಾಟವೋ ಸರಸ ಚೆಲ್ಲಾಟವೋ ಯಾವ ಹೊಸ ಪಾಠವೋ ಹೇಳೇನಾ (ಅಹ್ಹಹ ಅಹ್ಹ )
ಹೆಣ್ಣು : ಸಂಗಾತಿ ಮೊದಲು ನಿಮ್ಮ ನಾ ಕಂಡಾಗ
            ನನ್ನ ರೀ... ಎಂದಾಗ ನಕ್ಕು.. ನಾ ಬಂದಾಗ
            ಮೈಯೆಲ್ಲಾ ನಾಚಿ ಬೆವೆತು ನಿಂತೋರೆ
            ಬಾಳಲ್ಲಿ ಪ್ರೀತಿ ಬೆರೆಸಿ ತಂದೋರೆ 
ಗಂಡು : ಹೇಹೇಹೇ .... ಆಆಆ .... ಮೈಸೂರು ಮಲ್ಲಿಗೆಯ ಹೂವ ಮೂಡಿದವಳೇ 
           ನನ್ನ ಕೈಯ್ ಹಿಡಿದವಳೇ ಅಹ್ಹ ಬಳ್ಳಿ ಹಂಗೆ ಬಳಕೋಳೆ 
           ಕೈಯ ಬಳೆ ನಾದ ಕಿವಿಗಳಿಗೆ ಇಂಪು.. (ಆ..)   
           ನಿನ್ನ ಅಂದ ಚಂದ ಕಣ್ಣಿಗೆ ಸೋಂಪು 
           ಅಹ್ ..ಕೈಯ ಬಳೆ ನಾದ ಕಿವಿಗಳಿಗೆ ಇಂಪು.. (ಆ..)
           ನಿನ್ನ ಅಂದ ಚಂದ ಕಣ್ಣಿಗೆ ಸೋಂಪು 
           ಅರೇ  ..ಕೈಯ ಬಳೆ ನಾದ ಕಿವಿಗಳಿಗೆ ಇಂಪು.. (ಆ..)
           ನಿನ್ನ ಅಂದ ಚಂದ ಕಣ್ಣಿಗೆ ಸೋಂಪು 
********************************************************************************

ಕೃಷ್ಣಾ .. ಗಾಳಿಯ ಪಟದಂತೆ

ಸಾಹಿತ್ಯ: ಹುಣಸೂರು ಕೃಷ್ಣಮೂರ್ತಿ
ಹಾಡಿದವರು: ಪಿ.ಬಿ.ಶ್ರೀನಿವಾಸ್

ಕೃಷ್ಣಾ, ಹೇ ಕೃಷ್ಣಾ, ಕೃಷ್ಣಾ
ಗಾಳಿಯ ಪಟದಂತೆ ನಾನಯ್ಯ  ಆಡಿಸೋ ಸೂತ್ರದಾರಿ ನೀನಯ್ಯ
ಒಳಗಿನ ಕಣ್ಣನು ತೆರೆಸಿದೆಯೋ
ಗೀತೆಯ ಮರ್ಮವ ತಿಳಿಸಿದೆಯೋ
ಒಳಗಿನ ಕಣ್ಣನು ತೆರೆಸಿದೆಯೋ
ಗೀತೆಯ ಮರ್ಮವ ತಿಳಿಸಿದೆಯೋ
ನಾನೇ ಎಂಬ ಭಾವ ನಾಶವಾಯಿತು
ನೀನೇ ಎಂಬ ನೀತಿ ನಿಜವಾಯಿತು
ನಾನೇ ಎಂಬ ಭಾವ ನಾಶವಾಯಿತು
ನೀನೇ ಎಂಬ ನೀತಿ ನಿಜವಾಯಿತು
ಶ್ರೀ ಕೃಷ್ಣಾ, ಹೇ ಶ್ರೀ ಕೃಷ್ಣಾ
ಹೇಳಿದ ನೀತಿಯ ಕೇಳದೆ ಹೋದೆ
ಕೇಳಿ ನಡೆಯದೆ ಅವಿವೇಕಿಯಾದೆ
ಎಲ್ಲವು ನಾನು, ನನ್ನದೆ ಎಂದು
ನಂಬಿದೆನಯ್ಯೋ ಶಾಶ್ವತವೆಂದು
ಎಲ್ಲಾ ಸುಳ್ಳು, ಎಲ್ಲವು ಪೊಳ್ಳು
ತಿಳಿದೆನು ಇಂದು, ನಾನು ಮಿಥ್ಯ ನೀನು ಸತ್ಯ
ನಾನೇ ಎಂಬ ಭಾವ ನಾಶವಾಯಿತು
ನೀನೇ ಎಂಬ ನೀತಿ ನಿಜವಾಯಿತು
ಒಳಗಿನ ಕಣ್ಣನು ತೆರೆಸಿದೆಯೋ
ಗೀತೆಯ ಮರ್ಮವ ತಿಳಿಸಿದೆಯೋ
ನಾನೇ ಎಂಬ ಭಾವ ನಾಶವಾಯಿತು
ನೀನೇ ಎಂಬ ನೀತಿ ನಿಜವಾಯಿತು
ಶ್ರೀ ಕೃಷ್ಣಾ, ಹೇ ಶ್ರೀ ಕೃಷ್ಣಾ
ಹೆಂಡತಿ ಮಕ್ಕಳು ಬಂಧು ಬಳಗ
ರಾಗ ಭೋಗಗಳ ವೈಭೋಗ
ಕಾಲನು ಬಂದು, ಬಾ ಎಂದಾಗ
ಎಲ್ಲವು ಶೂನ್ಯ ಚಿತೆ ಏರುವಾಗ
ಎಲ್ಲ ಶೂನ್ಯ, ಎಲ್ಲವು ಶೂನ್ಯ
ಉಳಿಯುವುದೊಂದೆ, ದಾನ ಧರ್ಮ ತಂದ ಪುಣ್ಯ
ನಾನೇ ಎಂಬ ಭಾವ ನಾಶವಾಯಿತು
ನೀನೇ ಎಂಬ ನೀತಿ ನಿಜವಾಯಿತು
ಒಳಗಿನ ಕಣ್ಣನು ತೆರೆಸಿದೆಯೋ
ಗೀತೆಯ ಮರ್ಮವ ತಿಳಿಸಿದೆಯೋ
ನಾನೇ ಎಂಬ ಭಾವ ನಾಶವಾಯಿತು
ನೀನೇ ಎಂಬ ನೀತಿ ನಿಜವಾಯಿತು
ಹೇ ಕೃಷ್ಣಾ, ಹೇ ಕೃಷ್ಣಾ
********************************************************************************

No comments:

Post a Comment