
ನಿರ್ದೇಶನ: ಹರಿ ಸಂತೋಷ್
ಸಂಗೀತ: ಅರ್ಜುನ್ ಜನ್ಯ
ಸಾಹಿತ್ಯ: ಯೋಗರಾಜ್ ಭಟ್
ಗಾಯಕರು: ವಿಜಯ್ ಪ್ರಕಾಶ್
ನಟನೆ: ಶರಣ್, ಅಸ್ಮಿತಾ ಸೂದ್, ಅಪೂರ್ವ, ರವಿಶಂಕರ್.
ಮನೆಗ್ ಬಂದಿಲ್ಲಾ ಅಂತಾ ಬೈಬೇಡಿ ನೀವು,
ಹನಿ ನೀರಾವರಿಯ ನಡೆಸಿದ್ದೀವಿ ನಾವು ಹೋ ಹೋ ಹೋ...
ಮನೆಗ್ ಬಂದಿಲ್ಲಾ ಅಂತಾ ಬೈಬೇಡಿ ನೀವು,
ಹನಿ ನೀರಾವರಿಯ ನಡೆಸಿದ್ದೀವಿ ನಾವು ಹೋ ಹೋ ಹೋ.. ಓ ಓ ಓ...
೧೫ ನಿಮಿಷದಲ್ಲಿ ಬರ್ತೀನಿ ಅಂತಾ ನಾನು ಆಗ್ಲೇ ಮೆಸೇಜು ಮಾಡಿಲ್ವಾ?...
ಚಿನ್ನಾ ಆಗ್ಲೇ ಮೆಸೇಜು ಮಾಡಿಲ್ವಾ?..
ಬರ್ಲಿಲ್ಲಾ ಅಂತಾ ಅಂದ್ರೆ ಅದೆ ಮೆಸೇಜು ತಿರ್ಗಾ ಓದೋಕೆ ನಿಂಗೆ ಆಗಲ್ವಾ?
ಯಾಕೆ ಕರೆನ್ಸಿ ಮೊನ್ನೆ ಹಾಕಿಲ್ವಾ? ನಾವ್ ಮನೆಗ್ ಹೋಗೋದಿಲ್ಲ...
ನಾವ್ ಮನೆಗ್ ಹೋಗೋದಿಲ್ಲ...ನಮ್ಗೆ ಬಾಗ್ಲು ತಗ್ಯೋರಿಲ್ಲಾ...
ಇಲ್ಲ ಇಲ್ಲ ಇಲ್ಲ ಇಲ್ಲಾ... ನಾನ್ ಮನೆಗ್ ಹೋಗೋದಿಲ್ಲಾ ಇಲ್ಲಾ...
ಮನೆಗ್ ಬಂದಿಲ್ಲಾ ಅಂತಾ ಬೈಬೇಡಿ ನೀವು,
ಹನಿ ನೀರಾವರಿಯ ನಡೆಸಿದ್ದೀವಿ ನಾವು ಹೋ ಹೋ ಹೋ...
ಹೆಂಡಿರು ಮಕ್ಕಳ ಚಿಂತೆ ಮಾಡೋಕೆ,
ಬಾರಿಗೆ ಬಂದ್ರೆ ತಪ್ಪೇನಿದೆ? ತಪ್ಪೇನಿದೆ? ತಪ್ಪೇನಿದೆ?...
ಒಮ್ಮೊಮ್ಮೆ ಕುಸ್ತಿ ಒಮ್ಮೊಮ್ಮೆ ಪ್ರೀತಿ,
ಸಂಸಾರದಲ್ಲಿ ಮತ್ತೇನಿದೆ? ಮತ್ತೇನಿದೆ? ಮತ್ತೇನಿದೆ?...
ಒಳ್ಳೇದಲ್ಲ ಕುಡಿತ ಬಿಡುವುದು ಖಚಿತ,
ಲೇಡೀಸೆಲ್ಲಾ ಕೇಳಿ ಈ ಫಿಲಾಸಫಿ ಉಚಿತ...
ಮನೆಗೆ ಬಾ ನೋಡ್ಕೋತೀನಿ ಅಂತಿರಲ್ಲಾ ನಮ್ಗೆ,
ನಾವೇನು ಮನೆ ಕಟ್ಸಿಲ್ವಾ?
ಇಎಂಐ ತಿಂಗಳ ಕಟ್ಟಲ್ವಾ?
ನಾವ್ ಮನೆಗ್ ಹೋಗೋದಿಲ್ಲ... ನಾವ್ ಮನೆಗ್ ಹೋಗೋದಿಲ್ಲ...
ನಮ್ಗೆ ಬಾಗ್ಲು ತಗ್ಯೋರಿಲ್ಲಾ... ಇಲ್ಲ ಇಲ್ಲ ಇಲ್ಲ ಇಲ್ಲಾ...
ನಾವು ಜಲ್ದಿ ಬಂದ್ರೆ ಜಲ್ದಿ ಯಾಕೆ ಬಂದ್ರಿ ಅಂತೀರಾ?
ಚೂರು ಲೇಟಾಗಿ ಬಂದ್ರೆ, ಲೇಟಾಗ್ ಯಾಕೆ ಬಂದ್ರಿ ಅಂತೀರಾ?
ಹೇಳಿದ್ ಟೈಮಿಗೆ ಬಂದ್ರೆ ಏನಿವತ್ತು ಕರೆಕ್ಟ್ ಟೈಮಿಗೆ ಬಂದ್ರಿ ಅಂತೀರಾ?
ನಾವು ಬರ್ಬೇಕಾ ಬೇಡ್ವಾ? ನಾವು ಬರ್ಬೇಕಾ ಬೇಡ್ವಾ?
ಈ ಪ್ರಶ್ನೆ ಯಾರಿಗೆ ಕೇಳಾಣಾ ?
ಇದಕೆ ಮೀಟಿಂಗ್ ಆಗ್ಬೇಕು, ಇದಕೆ ಮೀಟಿಂಗ್ ಆಗ್ಬೇಕು,
ಒಂದ್ ಹಾಫ್ ಬಾಟ್ಲು ಎಕ್ಸಟ್ರಾ ಹೇಳನಾ,
ಆ ಆಗಲಪ್ಪಾ ನಮ್ ಕೈಲಿ, ಉಗುಸ್ಕಳಕೆ ನಿಮ್ ಕೈಲಿ,
ಓ.. ಓ.. ಹೋ ಸಂಸಾರ ಯಾಕೆ ಬೇಕು ಅಂತೀರಲ್ಲಾ ನಮ್ಗೆ,
ನಾನೇನು ತಾಳಿ ಕಟ್ಟಿಲ್ವಾ? ಹಂಗೆ ಒಂದೆರೆಡು ಮಕ್ಳು ಮಾಡಿಲ್ವಾ?...
ನಾವ್ ಮನೆಗ್ ಹೋಗೋದಿಲ್ಲ... ನಾವ್ ಮನೆಗ್ ಹೋಗೋದಿಲ್ಲ...
ನಮ್ಗೆ ಬಾಗ್ಲು ತಗ್ಯೋರಿಲ್ಲಾ... ಇಲ್ಲ ಇಲ್ಲ ಇಲ್ಲ ಇಲ್ಲಾ...
ನಾವ್ ಮನೆಗ್ ಹೋಗೋದಿಲ್ಲ, ಇಲ್ಲಾ...
*********************************************************************************
No comments:
Post a Comment