Sunday, March 31, 2019

ಯಜಮಾನ (2000)

ಪ್ರೇಮ ಚಂದ್ರಮ

ಚಲನ ಚಿತ್ರ: ಯಜಮಾನ (2000)
ಸಂಗೀತ: ರಾಜೇಶ್ ರಾಮನಾಥ್ 
ಸಾಹಿತ್ಯ: ಕೆ. ಕಲ್ಯಾಣ್ 
ನಿರ್ದೇಶನ: ಆರ್. ಶೇಷಾದ್ರಿ, ರಾಧಾಭಾರತಿ 
ಗಾಯಕರು: ರಾಜೇಶ್ ಕೃಷ್ಣನ್ 
ನಟನೆ: ವಿಷ್ಣುವರ್ಧನ್, ಪ್ರೇಮಾ, ಶಶಿಕುಮಾರ್, ಅಭಿಜಿತ್ 


ಪ್ರೇಮ ಚಂದ್ರಮ ಕೈಗೆ ಸಿಗುವುದೇ,
ಹೇಳೇ ತಂಗಾಳಿ ನೀ ಹೇಳೇ ತಂಗಾಳಿ
ಮನಸಾರೆ ಮೆಚ್ಚಿಕೊಳುವೆ 
ಹೃದಯಾನಾ ಬಿಚ್ಚಿ ಕೊಡುವೆ
ಈ ಭೂಮಿ ಇರೋವರೆಗೂ 
ನಾ ಪ್ರೇಮಿಯಾಗಿರುವೆ

ಪ್ರೇಮ ಚಂದ್ರಮ ಕೈಗೆ ಸಿಗುವುದೇ,
ಹೇಳೇ ತಂಗಾಳಿ ನೀ ಹೇಳೇ ತಂಗಾಳಿ

ಬಾನಲಿ ಹುಣ್ಣಿಮೆಯಾದರೆ ನೀ, 
ಸವೆಯ ಬೇಡ ಸವೆಯುವೆ ನಾ
ಮೇಣದ ಬೆಳಕೇ ಆದರೆ ನೀ,
ಕರಗ ಬೇಡ ಕರಾಗುವೆ ನಾ
ಹೂದೋಟವೇ ಆದರೆ ನೀನು,
ಹೂಗಳ ಬದಲು ಉದುರುವೆ ನಾ
ಹೇಳೇ ತಂಗಾಳಿ ನೀ ಹೇಳೇ ತಂಗಾಳಿ

ಪ್ರೇಮ ಚಂದ್ರಮ ಕೈಗೆ ಸಿಗುವುದೇ 
ಹೇಳೇ ತಂಗಾಳಿ ನೀ ಹೇಳೇ ತಂಗಾಳಿ
ಈ ಪ್ರತಿರೂಪವ ಬಿಡಿಸಲು ನಾ 
ನೆತ್ತರಲೇ ಬಣ್ಣವನಿಡುವೆ
ಈ ಪ್ರತಿ ಬಿಂಬವ ಕೆತ್ತಲು ನಾ 
ಎದೆಯ ರೋಮದ ಉಳಿ ಇಡುವೆ
ಕವಿತೆಯ ಹಾಗೆ ಬರೆದಿಡಲು 
ಉಸಿರನೇ ಬಸಿದು ಪದವಿಡುವೆ
ಹೇಳೇ ತಂಗಾಳಿ ನೀ ಹೇಳೇ ತಂಗಾಳಿ

ಪ್ರೇಮ ಚಂದ್ರಮ ಕೈಗೆ ಸಿಗುವುದೇ 
ಹೇಳೇ ತಂಗಾಳಿ ನೀ ಹೇಳೇ ತಂಗಾಳಿ
ಮನಸಾರೆ ಮೆಚ್ಚಿಕೊಳುವೆ 
ಹೃದಯಾನಾ ಬಿಚ್ಚಿ ಕೊಡುವೆ
ಈ ಭೂಮಿ ಇರೋವರೆಗೂ 
ನಾ ಪ್ರೇಮಿಯಾಗಿರುವೆ
ಪ್ರೇಮ ಚಂದ್ರಮ ಕೈಗೆ ಸಿಗುವುದೇ 
ಹೇಳೇ ತಂಗಾಳಿ ನೀ ಹೇಳೇ ತಂಗಾಳಿ

*********************************************************************************

ಓ ಮೈನಾ

ಸಾಹಿತ್ಯ: ಕೆ. ಕಲ್ಯಾಣ್ 
ಗಾಯಕರು: ರಾಜೇಶ್ ಕೃಷ್ಣನ್, ಕೆ. ಎಸ್. ಚಿತ್ರಾ 


ಆ ಆ..  ಹೂಂ ಹಾ... ಆ.. ಹಂ..

ಓ ಮೈನಾ ಓ ಮೈನಾ ಏನಿದು ಮಾಯೆ,
ಮಳೆ ಇಲ್ಲದೆ ಮೈ ನೆನೆಯೋ ಮಾಯದ ಮಾಯೆ
ನಿನ್ನೆ ಕಂಡ ನೋಟವೇ ಅಂತರಾಳವಾಗಿದೆ
ಇಂದು ಕಂಡ ನೋಟವೇ ಗಟ್ಟಿಮೇಳವಾಗಿದೆ
ರಾಗ ಎನ್ನಲೇ ಅನುರಾಗ ಎನ್ನಲೇ
ಪ್ರೀತಿ ಎನ್ನಲೇ ಹೊಸ ಮಾಯೆ ಎನ್ನಲೇ...

ಓ ಮೈನಾ ಓ ಮೈನಾ ಏನಿದು ಮಾಯೆ,
ಮಳೆ ಇಲ್ಲದೆ ಮೈ ನೆನೆಯೋ ಮಾಯದ ಮಾಯೆ

ಕಾವೇರಿ ತೀರದಲಿ ಬರೆದೇನು ನಿನ್ನ ಹೆಸರ
ಮರಳೆಲ್ಲ ಹೊನ್ನಾಯಿತು ಯಾವ ಮಾಯೆ
ಬಿದಿರಿನ ಕಾಡಿನಲಿ ಕೂಗಿದೆ ನಿನ್ನ ಹೆಸರ
ಬಿದಿರೆಲ್ಲಾ ಕೊಳಲಾಯಿತು ಯಾವ ಮಾಯೆ
ಸೂತ್ರವು ಇರದೇ ಗಾಳಿಯು ಇರದೇ
ಬಾನಲಿ ಗಾಳಿ ಪಟವಾಗಿರುವೆ
ಇಂತಾ ಮಾಯಾವಿ ಸಂತೋಷ ಇನ್ನೇನೆ ಮೈನಾ

ಓ ಮೈನಾ ಓ ಮೈನಾ ಏನಿದು ಮಾಯೆ,
ಮಳೆ ಇಲ್ಲದೆ ಮೈ ನೆನೆಯೋ ಮಾಯದ ಮಾಯೆ

ಬೇಡನ ಕಣ್ಣಿಗೆ ಬಾಣವ ನಾಟಿಸುವ
ಈ ಜಿಂಕೆ ಬೇಟೆ ಇಲ್ಲಿ ಯಾವ ಮಾಯೆ
ಹತ್ತಿಗೆ ಬೆಂಕಿಯನು ಹತ್ತಿಸುವ ಮಾಯೆ
ಮೀನುಗಳೇ ಗಾಳಬೀಸೋ ಯಾವ ಮಾಯೆ
ಆಕಾಶಕ್ಕೆ ಬಲೆಯ ಬೀಸಿ ಮೋಡ ನಗುವಾ ಮರ್ಮ ಏನೋ
ಇಂತಾ ಮಾಯಾವಿ ಸಂತೋಷ ಇನ್ನೇನೆ ಮೈನಾ

ಓ ಮೈನಾ ಓ ಮೈನಾ ಏನಿದು ಮಾಯೆ,
ಮಳೆ ಇಲ್ಲದೆ ಮೈ ನೆನೆಯೋ ಮಾಯದ ಮಾಯೆ
ನಿನ್ನೆ ಕಂಡ ನೋಟವೇ ಅಂತರಾಳವಾಗಿದೆ
ಇಂದು ಕಂಡ ನೋಟವೇ ಗಟ್ಟಿಮೇಳವಾಗಿದೆ
ರಾಗ ಎನ್ನಲೇ ಅನುರಾಗ ಎನ್ನಲೇ
ಪ್ರೀತಿ ಎನ್ನಲೇ ಹೊಸ ಮಾಯೆ ಎನ್ನಲೇ...


*********************************************************************************

ನಮ್ಮ ಮನೆಯಲಿ

ಸಾಹಿತ್ಯ: ಕೆ. ಕಲ್ಯಾಣ್ 
ಗಾಯನ: ಎಸ್.ಪಿ.ಬಿ, ರಾಜೇಶ್ ಕೃಷ್ಣನ್, ಕೆ. ಎಸ್. ಚಿತ್ರಾ


ನಮ್ಮ ಮನೆಯಲಿ ದಿನವೂ ಮಿರುಗೋ ಚೈತ್ರವೇ
ಬೆಳದಿಂಗಳ ಈ ಪ್ರೀತಿ ಕರಗಲು ಸಾಧ್ಯವೇ ||ಪ||
ನಮ್ಮ ಮನೆಯಲಿ ದಿನವೂ ಮಿರುಗೋ ಚೈತ್ರವೇ
ಬೆಳದಿಂಗಳ ಈ ಪ್ರೀತಿ ಕರಗಲು ಸಾಧ್ಯವೇ
ಹೆಜ್ಜೇನಿನ ಸವಿಗೂಡಿದು ಇಲ್ಲಿ ಪ್ರೀತಿಯ ಪರಮಾನ್ನ
ಪ್ರೀತಿಯ ಯಜಮಾನ ||ನಮ್ಮ ಮನೆಯಲಿ||

ಹಾಡೋ ಚಿಲಿಪಿಲಿ ಹಕ್ಕಿಗಳೆ ಪ್ರೀತಿಯ ಭಾಷೆ ಕೇಳಿರಿ
ಕಣ್ಣಿನಂಥ ಅಣ್ಣನು ತಾಯಿಯಾದನು ನೋಡಿರಿ
ಶಿಲುಬೆಯನೇ ಎರಿದರೂ ನಗುವಿನ ಒಲುಮೆ ತುಂಬಿದೆ
ಹಾರಾಡೋ ಮನಸೀಗೆ ಆಕಾಶವೆ ನೀನಾದೆ
ಈ ಕಣ್ಗಳೇ ಕೊಡೆಯಾಗಲಿ ಕಣ್ಣಿನ ಹನಿಯಲ್ಲೇ
ಹೃದಯಕೆ ಹೂಮಳೆ ||ನಮ್ಮ ಮನೆಯಲಿ||

ನಮ್ಮ ಬಂಧ ಅನುಬಂಧ ಸ್ವರ್ಗವೇ ನಾಚುವ ಹಾಗಿದೆ
ಗಿಲ್ಲಿ ಮೊಗ್ಗು ಅರಳಿದರೆ ಹೂವಿಗೆ ಸಾವಿರ ವರ್ಷವೇ
ಕಣ್ಣೆರಡೂ ಇರಬಹುದು ನೋಟಗಳೊಂದೇ ಅಲ್ಲವೇ
ರೂಪಗಳು ಎರಡೆರಡು ಇರಬಹುದು ಹೃದಯ ಒಂದೇ ಅಲ್ಲವೇ
ಈ ಜೀವನ ಸಂಜೀವಿನಿ ಇದು ಅಣ್ಣನಾಶಯ ನೀ ಹೇಳೋ ಶುಭಾಶಯ

ನಮ್ಮ ಮನೆಯಲಿ ದಿನವೂ ಮಿರುಗೋ ಚೈತ್ರವೇ
ಬೆಳದಿಂಗಳ ಈ ಪ್ರೀತಿ ಕರಗಲು ಸಾಧ್ಯವೇ
ಹೆಜ್ಜೇನಿನ ಸವಿಗೂಡಿದು ಇಲ್ಲಿ ಪ್ರೀತಿಯ ಪರಮಾನ್ನ
ಪ್ರೀತಿಯ ಯಜಮಾನ ||ನಮ್ಮ ಮನೆಯಲಿ||

*******************************************************************************

ಮೈಸೂರು ಮಲ್ಲಿಗೆ

ಸಾಹಿತ್ಯ: ಕೆ. ಕಲ್ಯಾಣ್ 
ಗಾಯನ: ರಾಜೇಶ್ ಕೃಷ್ಣನ್, ಕೆ. ಎಸ್. ಚಿತ್ರಾ


ಜಿಲಕ್ ಜಿಲಕ್ ಜಿಲಕ್ ಜಿಲಕ್..
ಧಿಂತನಕ್ಕಿಟ ಧಿಂತನಕ್ಕಿಟ
ಧಿಂದನಿಕ ತಕ್ಕಿಟತ

ಏಯ್....
ಮೈಸೂರು ಮಲ್ಲಿಗೆ, ಮೈಯೆಲ್ಲಾ ಹೋಳಿಗೆ
ಅಂಗಾಂಗ ಅರಳಿಸಿ, ಪಂಚಾಂಗ ಓದಿಸಿ
ಪಲ್ಲಂಗ ಹಾಸಿ ಬಿಡುವೆ
ಈ ಮೈಸೂರೆ ಬರೆದೂ ಬಿಡುವೆ ||ಪ||

||ಮೈಸೂರು ಮಲ್ಲಿಗೆ||

ಚುಮ್ಕು ಚಕ ಚುಮ್ಕು ಚಕ
ಚುಮ್ಕು ಚಕ ಚುಮುಕು ತಾ
ಬಕ್‍ಬಕ್‍ತಕಿಟತ

ಲಜ್ಜೆ ಬಿಟ್ಟು ಗೆಜ್ಜೆ ಕಟ್ಟು
ಹೆಜ್ಜೆ ಬಿಟ್ಟು ಬಾಜಿ ಕಟ್ಟು
ರಾಜಿಯಾಗಿ ಸೂಜಿಮಲ್ಲೆ ಮುಡಿಸಿಬಿಡುವೆ
ಸುವ್ವಿ ಸುವ್ವಿ ನಿನ್ನ ಕಣ್ಣುಗಳೆ
ನನ್ನೆದೆಯಾ ಮುಂಬಾಗಿಲೋ
ಯವ್ವಿ ಯವ್ವಿ ನಿನ್ನ ಹೆಜ್ಜೆಗಳೆ
ನನ್ನುಸಿರ ಬೆಂಗಾವಲು
ಕೈ ಹಿಡಿಯೋ ಕಾರಣವೇ
ಕೈ ಬಳೆಯ ಝುಲಕು ಝುಲಕು
ಅದೇ ಗುಂಡಿಗೆಯ ಮಿಣುಕು ಮಿಣುಕು
ಆ ಶ್ರೀರಂಗಾಪಟ್ಣಾ ಬಳಸೀ
ಪ್ರೀತಿ ಕಾಲ್ಗೆಜ್ಜೆ ಘಲ್ ಘಲ್ ಘಲುಕು

||ಮೈಸೂರು ಮಲ್ಲಿಗೆ||

ಮುಟ್ಟಿದರೇ ತಕಿಟ ತಕಿಟ
ಮುಟ್ಟದಿದ್ರು ತಕಿಟ ತಕಿಟ
ಒತ್ತಿದರೇ ತಕಿಟ ತಕಿಟ
ಅಪ್ಪಿದರೇ ಚುಪ್
ಮಳ್ಳಿ ಮಳ್ಳೀ.. ನಿನ್ನ ಮಾತುಗಳೇ ಮನಸುಗಳಾ ಓಟ ಕಣೆ
ಮಳ್ಳ ಮಳ್ಳಾ... ನಿನ್ನ ತುಂಟತನ ಯವ್ವನಕೆ ಪಾಠ ಕಣೋ
ಮುತ್ತುಗಳ ಪಲ್ಲಕಿಯಾ ಹತ್ತಿದರೇ ಸೈ ಸೈ ಸೈ
ಜೋಡಿ ಜೀವಗಳ ಥೈ ಥೈ ಥಕ ಥೈ ಥೈ ಥೈ ಥೈ
ಚಾಮುಂಡಿ ಬೆಟ್ಟ ಬಳಸೋ
ಪ್ರೀತಿ ಬಾವುಟಕ್ಕೆ ಜೈ ಜೈ ಜೈ!!!

[ಗಂಡು] ||ಮೈಸೂರು ಮಲ್ಲಿಗೆ||
[ಹೆಣ್ಣು] ||ಮೈಸೂರು ಮಲ್ಲಿಗೆ||

********************************************************************************

ಶ್ರೀಗಂಧದಾ ಗೊಂಬೆ

ಸಾಹಿತ್ಯ: ಕೆ. ಕಲ್ಯಾಣ್ 
ಗಾಯನ: ರಾಜೇಶ್ ಕೃಷ್ಣನ್, ಕೆ. ಎಸ್. ಚಿತ್ರಾ


[ಹೆಣ್ಣು] ಶ್ರೀಗಂಧದಾ ಗೊಂಬೆ...
ಮೆಲ್ಲ ಮೆಲ್ಲನೆ ಬರುತಾಳಮ್ಮಾ
ಈ ಪ್ರೀತಿ ಅರಮನೆಗೆ
ಬೆಳ್ಳಿ ಬೆಳಕು ತರುತಾಳಮಾ
ಮನೆತನಕ ಬಂದಾ ಹೆಣ್ಣು
ಈ ಮನೆತನ ಬೆಳಗಲಿ..
ನಮ್ಮ ಹರಕೆಯೂ ಫಲಿಸಲಿ

[ಗಂಡು] ಶ್ರೀಗಂಧದಾ ಗೊಂಬೆ...
ಮೆಲ್ಲ ಮೆಲ್ಲನೆ ಬರುತಾಳಮ್ಮಾ

[ಹೆಣ್ಣು] ಸರಿಗಮಗಳಲಿ, ಸಾಗರದಲ್ಲಿ
ಅಲೆಗಳ ಹಾಗೆ ಇವಳ ಕಾಲ್ಗೆಜ್ಜೆ
[ಗಂಡು] ಹೋ! ಘಮಘಮಗಳಲೀ, ಗೋಪುರದಲ್ಲಿ
ನಿತ್ಯ ವಸಂತ ಇವಳ ಈ ಲಜ್ಜೆ
[ಹೆಣ್ಣು] ಏನುಸಿರೋ ಏನುಸಿರೋ ಏನಿರಲಿ
ನನ್ನ ಕನಸೀನ ಬಾಗಿನ ನಗುತಿರಲಿ
[ಗಂಡು] ಶ್ರೀಗಂಧದಾ ಗೊಂಬೆ...
ಮೆಲ್ಲ ಮೆಲ್ಲನೇ ಬರುತಾಳಮ್ಮಾ

ನಂದಾದೀಪ, ಹುಟ್ಟಿದ ಮನೆಗೆ
ಆರದ ದೀಪ ನೀ ಮೆಟ್ಟಿದ ಮನೆಗೆ
[ಹೆಣ್ಣು] ಬಯಸೀ ತಂದ ಈ ಅನುಬಂಧ
ಸಾವಿರ ಸಾವಿರ ಜನ್ಮ ಇರೋವರೆಗೆ
[ಗಂಡು] ಊರೆಲ್ಲ ಹರಸಿದ ಪುಷ್ಪಾಂಜಲಿ
ಅಣ್ಣನಾ ಹರಕೆ ಭಾಷ್ಪಾಂಜಲಿ
ಶ್ರೀಗಂಧದಾ ಗೊಂಬೆ...
ಮೆಲ್ಲ ಮೆಲ್ಲನೆ ಬರುತಾಳಮ್ಮಾ
ಈ ಪ್ರೀತಿ ಅರಮನೆಗೇ
ಬೆಳ್ಳಿ ಬೆಳಕು ತರುತಾಳಮ್ಮಾ
ಮನೆತನಕ ಬಂದಾ ಹೆಣ್ಣು
ಈ ಮನೆತನ ಬೆಳಗಲಿ..
ನಮ್ಮ ಹರಕೆಯೂ ಫಲಿಸಲಿ..
ಈ ಮನೆತನ ಬೆಳಗಲಿ..
ನಮ್ಮ ಹರಕೆಯೂ ಫಲಿಸಲಿ..

********************************************************************************

ನವಿಲೇ ಪಂಚರಂಗಿ

ಸಾಹಿತ್ಯ: ಕೆ. ಕಲ್ಯಾಣ್ 
ಗಾಯನ: ದೇವನ್, ನಂದಿತಾ 


ನವಿಲೇ ಪಂಚರಂಗಿ ನವಿಲೇ
ಜಿಗಿಸೋ ಅಂತರಂಗಿ ನವಿಲೇ
ನಿನ್ನ ನಗೆಯ ಬಾಚಿ ಬಾಚಿ
ನನ್ನ ಎದೆಯ ಒಳಗೆ ಇಟ್ಟೆ
ಅದರಿಂದ ಹೃದಯ ತೆಗೆದು
ನಿನ್ನ ತುಟಿಗೆ ಒತ್ತಿ ಬಿಟ್ಟೆ
ಕೋಂ ತಕೋಂ ಈ ತುಂಟು ವಯಸು
ಯಾತಕೋ ನಿಲ್ಲದು ಮನಸು
ಕೋಂ ತಕೋಂ ಈ ತುಂಟು ವಯಸು
ಯಾತಕೋ ನಿಲ್ಲದು ಮನಸು

ನವಿಲೇ ಪಂಚರಂಗಿ ನವಿಲೇ ಜಿಗಿಸೋ
ಅಂತರಂಗಿ ನವಿಲೇ ---

ಅಚ್ಚು ಬೆಲ್ಲ ಅಚ್ಚು ಬೆಲ್ಲ ಹಚ್ಚಿ ಬೀರಲ,
ಅಲ್ಲಿ ಕೊಂಚ ಇಲ್ಲಿ ಕೊಂಚ ||೨||
ಹುಚ್ಚು ಬಿಡುವ ಮುಂಚೆ ಹಚ್ಚಿ ಬಿಡಲಾ
ನನ್ನೆದೆಯೆ ಪರಪಂಚ ||೨||
ಸೃಷ್ಟಿಯೊಳಗೆ ಪ್ರೇಮಿಯ ಸಂಖ್ಯೆ
ಏರುಪೇರು ಆಗದು ಎಂದು
ಹೃದಯ ಒಂದೆ ಮುಷ್ಟಿ
ಅದಕಿಂದು ನೇರ ದೃಷ್ಟಿ
ಆ ಸೃಷ್ಟಿಯೊಳಗೆ ಜೀವಾ
ಬೆಳೆಸುವುದು ವಂಶವೃಷ್ಠಿ

ನವಿಲೇ ಪಂಚರಂಗಿ ನವಿಲೇ ಜಿಗಿಸೋ
ಅಂತರಂಗಿ ನವಿಲೇ ---

ಒಂದು ಹೆಜ್ಜೆಯಲ್ಲಿ ಕೋಟಿ ಲಜ್ಜೆ ಇರುವ
ನಿನ್ನ ಲಜ್ಜೆ ಸಿಹಿ ಸಜ್ಜೆ ||೨||
ಸಜ್ಜೆಗಳ ಸಿಹಿಗಳ ಗೆಜ್ಜೆ ಕುಣಿಸಿ
ಕಾಯುತೀನಿ ಪ್ರತಿ ಸಂಜೆ ||೨||
ಲೋಕಕಷ್ಟೆ ರಾತ್ರಿ ಹಗಲು
ಪ್ರೇಮಿಗಳಿಗೆ ಬರಿ ಹಗಲು
ಆಂತರ್ಯ ಬಿಚ್ಚಿ ನೋಡು
ಐಶ್ವರ್ಯ ನಮ್ಮ ಪ್ರೀತಿ
ಇಡಿ ಸ್ವರ್ಗ ತೋಳಿನಲ್ಲೇ
ಆಶ್ಚರ್ಯವಾಗೋ ರೀತಿ

ನವಿಲೇ ಪಂಚರಂಗಿ ನವಿಲೇ ಜಿಗಿಸೋ
ಅಂತರಂಗಿ ನವಿಲೇ
ನಿನ್ನ ನಗೆಯ ಬಾಚಿ ಬಾಚಿ
ನನ್ನ ಎದೆಯ ಒಳಗೆ ಇಟ್ಟೆ
ಅದರ ಹೃದಯ ತೆಗೆದು ನಿನ್ನ ತುಟಿಗೆ ಒತ್ತಿ ಬಿಟ್ಟೆ
ಕೋಂ ತತೋಮ್ ಈ ಸುಪ್ತ ವಯಸು
ಯಾತಕೋ ನಿಲ್ಲದು ಮನಸು
ಕೋಂ ತತೋಮ್ ಇದು ತುಂಟು ವಯಸು
ಯಾತಕೋ ನಿಲ್ಲದು ಮನಸು
ಕೋಂ ತತೋಮ್ ಈ ತುಂಟು ವಯಸು
ಇದು ಯಾತಕೋ ನಿಲ್ಲದು ಮನಸು

ಲಾ ಲಲ್ಲ ಲಾ ಲಲಾ ಲಲಲ
ಲಾ ಲಲ್ಲ ಲಾ ಲಾಲಾಲಲಲ

********************************************************************************

ಪ್ರೇಮ ಚಂದ್ರಮ

ಸಾಹಿತ್ಯ: ಕೆ. ಕಲ್ಯಾಣ್ 
ಗಾಯನ: ಎಸ್.ಪಿ. ಬಾಲಸುಬ್ರಹ್ಮಣ್ಯಂ  


ಪ್ರೇಮ ಚಂದ್ರಮ ಕೈಗೆ ಸಿಗುವುದೆ
ಹೇಳೆ ತಂಗಾಳಿ, ನೀ ಹೇಳೆ ತಂಗಾಳಿ
ಮನಸಾರೆ ಮೆಚ್ಚಿ ಕೊಡುವೆ ಹೃದಯಾನೆ ಬಿಚ್ಚಿ ಇಡುವೆ
ಈ ಭೂಮಿಯಿರೊವರೆಗೂ ನಾ ಪ್ರೇಮಿಯಾಗಿರುವೇ
ಪ್ರೇಮ ಚಂದ್ರಮ ಕೈಗೆ ಸಿಗುವುದೆ
ಹೇಳೆ ತಂಗಾಳಿ, ನೀ ಹೇಳೆ ತಂಗಾಳಿ

ಬಾನಲ್ಲಿ ಹುಣ್ಣಿಮೆಯಾದರೆ ನೀ ಸವೆಯಬೇಡ ಸವೆಯುವೆ ನಾ
ಮೇಣದ ಬೆಳಕೆ ಆದರು ನೀ ಕರಗಬೇಡ ಕರಗುವೆ ನಾ
ಹೂದೋಟವೆ ಆದರೆ ನೀನು ಹೂಗಳ ಬದಲು ಉದುರುವೆ ನಾ
ಹೇಳೆ ತಂಗಾಳಿ, ನೀ ಹೇಳೆ ತಂಗಾಳಿ

ಪ್ರೇಮ ಚಂದ್ರಮ ಕೈಗೆ ಸಿಗುವುದೆ
ಹೇಳೆ ತಂಗಾಳಿ, ನೀ ಹೇಳೆ ತಂಗಾಳಿ

ಈ ಪ್ರತಿರೂಪ ಬಿಡಿಸಲು ನಾ ನೆತ್ತರಲೆ ಬಣ್ಣವನಿಡುವೆ
ಈ ಪ್ರತಿಬಿಂಬವ ಕೆತ್ತಲು ನಾ ಎದೆಯ ರೋಮದ ಉಳಿ ಇಡುವೆ
ಕವಿತೆಯ ಹಾಗೆ ಬರೆದಿಡಲು ಉಸಿರಲೆ ಬಸಿರು ಪದವಿಡುವೆ
ಹೇಳೆ ತಂಗಾಳಿ, ನೀ ಹೇಳೆ ತಂಗಾಳಿ

ಪ್ರೇಮ ಚಂದ್ರಮ ಕೈಗೆ ಸಿಗುವುದೆ
ಹೇಳೆ ತಂಗಾಳಿ, ನೀ ಹೇಳೆ ತಂಗಾಳಿ
ಮನಸಾರೆ ಮೆಚ್ಚಿ ಕೋಡುವೆ
ಹೃದಯಾನ ಬಿಚ್ಚಿ ಕೊಡುವೆ
ಈ ಭೂಮಿ ಇರುವರೆಗೂ
ನಾ ಪ್ರೇಮಿಯಾಗಿರುವೆ

ಪ್ರೇಮ ಚಂದ್ರಮ ಕೈಗೆ ಸಿಗುವುದೇ
ಹೇಳೆ ತಂಗಾಳಿ, ನೀ ಹೇಳೆ ತಂಗಾಳಿ

********************************************************************************

1 comment:

  1. ಯಜಮಾನ ಚಿತ್ರದಲ್ಲಿ ಪ್ರೇಮ ಚಂದ್ರಮ ಕೈಗೆ ಸಿಗುವುದೆ ಹೇಳೆ ತಂಗಾಳಿ ರಾಜೇಶ್ ಕೃಷ್ಣನ್ ಅವರ ಹಾಡಿರುವ ಈ ಹಾಡು ತುಂಬಾ ಅರ್ಥಪೂರ್ಣವಾದ ಹಾಡು ಹಾಡಿನಲ್ಲಿರುವ ಇವರ ಧ್ವನಿಗೆ ಈ ಹಾಡಿಗೆ ಆದಷ್ಟು ಪ್ರಶಸ್ತಿಗಳನ್ನು ಕೊಟ್ಟರೂ ಸಾಲದು ವಿಷ್ಣುವರ್ಧನ್ ಅವರ ನಟನೆ ರಾಜೇಶ್ ಕೃಷ್ಣನ್ ಅವರ ಗಾಯನ ಮತ್ತು ಈ ಹಾಡನ್ನು ಚಿತ್ರಿಸಿದ ಸ್ಥಳ ಮೈಸೂರ್ ಅರಮನೆ ಈ ಹಾಡಿಗೆ ರಾಜೇಶ್ ಕೃಷ್ಣನ್ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ಬರಬೇಕಿತ್ತು ಮತ್ತು ಈ ಚಿತ್ರದ ನಟನೆಗೆ ವಿಷ್ಣುವರ್ಧನ್ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ಬರಬೇಕಿತ್ತು ಈ ಪ್ರಶಸ್ತಿಗಳು ಇವರಿಗೆ ಬರಲಿಲ್ಲ ಈ ಚಿತ್ರಕ್ಕೆ ಮತ್ತು ಈ ಹಾಡಿನ ರಾಜೇಶ್ ಕೃಷ್ಣನ್ ಅವರ ಗಾಯನಕ್ಕೆ ಅಂತರಾಷ್ಟ್ರೀಯ ಪ್ರಶಸ್ತಿಯನ್ನು ಕೊಟ್ಟರೂ ಕಡಿಮೆಯೇ ಏಕೆಂದರೆ ಈ ಹಾಡು ಭೂಮಿತೂಕದ ಹಾಡು ಸುಮ್ಮನೆ ಹೇಳಲ್ಲ ಈ ಹಾಡಿನಲ್ಲಿ ಅಂತಹ ಧ್ವನಿಯಿದೆ ಧ್ವನಿಗೆ ಅಂತಃಶಕ್ತಿ ಇದೆ
    ಹೃದಯಪೂರ್ವಕವಾಗಿ ಹಾಡಿದ್ದಾರೆ ಈ ಹಾಡನ್ನು ಈ ಹಾಡಿನಲ್ಲಿ ವಿಷ್ಣುವರ್ಧನ್ ಅವರ ನಟನೆ ಎಷ್ಟು ವರ್ಣನೆ ಮಾಡಿದರೂ ಸಾಲದು ರಾಜೇಶ್ ಕೃಷ್ಣನ್ ಅವರಿಗೆ ಇನ್ನು ಮುಂದೆಯಾದರೂ ರಾಷ್ಟ್ರೀಯ ಪ್ರಶಸ್ತಿ ಬರಬೇಕು ಅಷ್ಟೇ ಅಲ್ಲ ಅವರಿಗೂ ಪದ್ಮಶ್ರೀ ಪ್ರಶಸ್ತಿ ಸಿಗಬೇಕು ಏಕೆಂದರೆ 30 ವರ್ಷಗಳ ಕಾಲ ಚಿತ್ರರಂಗದಲ್ಲಿ 5000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ ಮತ್ತು ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಭಾರತರತ್ನ ಪ್ರಶಸ್ತಿ ಸಿಗಬೇಕು ಇದೇ ನನ್ನ ಕೋರಿಕೆ ಧನ್ಯವಾದಗಳು

    ReplyDelete