ಮಾನವನಾಗಿ ಹುಟ್ಟಿದ ಮೇಲೆ
ಚಲನ ಚಿತ್ರ: ಜೀವನ ಚೈತ್ರ (1992)
ಸಂಗೀತ: ಉಪೇಂದ್ರ ಕುಮಾರ್
ಗಾಯಕರು: ಡಾ. ರಾಜ್ ಕುಮಾರ್
ನಿರ್ದೇಶನ: ದೊರೈ ಭಗವಾನ್
ನಟನೆ: ಡಾ. ರಾಜ್ ಕುಮಾರ್, ಮಾಧವಿ
ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ ?
ಸಾಯೋ ತನಕ ಸಂಸಾರ್ದೊಳಗೆ ಗಂಡಾಗುಂಡಿ
ಹೇರಿಕೊಂಡು ಹೋಗೋದಿಲ್ಲ ಸತ್ತಾಗ್ ಬಂಡಿ
ಇರೋದ್ರೊಳಗೆ ಒಮ್ಮೆ ನೋಡು ಜೋಗದ ಗುಂಡಿ ||
ರಾಜ ರೋರರ್ ರಾಕೆಟ್ ಲೇಡಿ ಚತುರ್ಮುಖ
ಜೋಡಿಗೂಡಿ ಹಾಡುತಾವ ಹಿಂದಿನ್ ಸುಖ
ತಾನು ಬಿದ್ರೆ ಆದೀತೆಳು ತಾಯಿಗೆ ಬೆಳಕ
ಮುಂದಿನವರು ಕಂಡರೆ ಸಾಕು ಸ್ವಂತ ಸುಖ
ತಾನು ಬಿದ್ರೆ ಆದೀತೆಳು ತಾಯಿಗೆ ಬೆಳಕ
ಮುಂದಿನವರು ಕಂಡರೆ ಸಾಕು ಸ್ವಂತ ಸುಖ
ಒಂದು ಎರಡು ಮೂರು ನಾಲ್ಕು ಆದಾವ್ ಮತ
ಹಿಂದಿನಿಂದ ಹರಿದು ಬಂದದ್ ಒಂದೇ ಮತ
ಗುಂಡಿಗ್ ಬಿದ್ದು ಹಾಳಾಗಲಿಕ್ಕೆ ಸಾವಿರ ಮತ
ಮುಂದೆ ಹೋಗಿ ಸೇರುವಲ್ಲಿ ಒಂದೇ ಮತ ||
ಹಿಂದಿನಿಂದ ಹರಿದು ಬಂದದ್ ಒಂದೇ ಮತ
ಗುಂಡಿಗ್ ಬಿದ್ದು ಹಾಳಾಗಲಿಕ್ಕೆ ಸಾವಿರ ಮತ
ಮುಂದೆ ಹೋಗಿ ಸೇರುವಲ್ಲಿ ಒಂದೇ ಮತ ||
ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ ?
ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ ?
ನಾಡಿನೊಳಗೆ ನಾಡು ಚೆಲುವ ಕನ್ನಡ ನಾಡು
ಬೆಳ್ಳಿ ಬಂಗಾರ ಬೆಳಿಯುತಾವೆ ಬೆಟ್ಟ ಕಾಡು
ಭೂಮಿ ತಾಯಿ ಮುಡಿದು ನಿಂತಾಳ್ ಬಾಸಿಂಗ್ ಜೋಡು
ಬಾಣಾವತಿ ಬೆಡಗಿನಿಂದ ಬರ್ತಾಳ್ ನೋಡು
ಬೆಳ್ಳಿ ಬಂಗಾರ ಬೆಳಿಯುತಾವೆ ಬೆಟ್ಟ ಕಾಡು
ಭೂಮಿ ತಾಯಿ ಮುಡಿದು ನಿಂತಾಳ್ ಬಾಸಿಂಗ್ ಜೋಡು
ಬಾಣಾವತಿ ಬೆಡಗಿನಿಂದ ಬರ್ತಾಳ್ ನೋಡು
ಶರಾವತಿ ಕನ್ನಡ ನಾಡ ಭಾಗೀರಥಿ
ಪುಣ್ಯವಂತ್ರು ಬರ್ತಾರಿಲ್ಲಿ ದಿನಂಪ್ರತಿ
ಸಾವು ನೋವು ಸುಳಿಯೋದಿಲ್ಲ ಕರಾಮತಿ
ಮಲ್ಲೇಶನ ನೆನೆಯುತಿದ್ರೆ ಜೀವನ್ಮುಕ್ತಿ ||
ಪುಣ್ಯವಂತ್ರು ಬರ್ತಾರಿಲ್ಲಿ ದಿನಂಪ್ರತಿ
ಸಾವು ನೋವು ಸುಳಿಯೋದಿಲ್ಲ ಕರಾಮತಿ
ಮಲ್ಲೇಶನ ನೆನೆಯುತಿದ್ರೆ ಜೀವನ್ಮುಕ್ತಿ ||
ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ ?
ಸಾಯೋ ತನಕ ಸಂಸಾರ್ದೊಳಗೆ ಗಂಡಾಗುಂಡಿ
ಹೇರಿಕೊಂಡು ಹೋಗೋದಿಲ್ಲ ಸತ್ತಾಗ್ ಬಂಡಿ
ಇರೋದ್ರೊಳಗೆ ಒಮ್ಮೆ ನೋಡು ಜೋಗದ ಗುಂಡಿ ||
ಸಾಯೋ ತನಕ ಸಂಸಾರ್ದೊಳಗೆ ಗಂಡಾಗುಂಡಿ
ಹೇರಿಕೊಂಡು ಹೋಗೋದಿಲ್ಲ ಸತ್ತಾಗ್ ಬಂಡಿ
ಇರೋದ್ರೊಳಗೆ ಒಮ್ಮೆ ನೋಡು ಜೋಗದ ಗುಂಡಿ ||
********************************************************************************
ನಿನ್ನ ಚೆಲುವ ವದನ
ರಚನೆ: ಚಿ. ಉದಯಶಂಕರ್ ಗಾಯಕ: ಡಾ. ರಾಜಕುಮಾರ್, ಮಂಜುಳಾ ಗುರುರಾಜ್
ಗಂ: ನಿನ್ನ ಚೆಲುವ ವದನ ಕಮಲ ನಯನ ಸೆಳೆಯಲು ನಾ
ನೆನೆಯಲು ಕಾಮನ ಸುಮಬಾಣನ ಅದೇ ದಿನ
ಕುಣಿಯಿತು ಮನ, ತಣಿಸುತ ನನ್ನಾ
ನಯನದಿ ನಯನ ಬೆರೆತಾ ಕ್ಷಣ ।೨।
ಹೆ: ನಿನ್ನ ಚೆಲುವ ವದನ ಕಮಲ ನಯನ ಸೆಳೆಯಲು ನಾ
ನೆನೆಯಲು ಕಾಮನ ಸುಮಬಾಣನ ಅದೇ ದಿನ
ಕುಣಿಯಿತು ಮನ, ತಣಿಸುತ ನನ್ನಾ
ನಯನದಿ ನಯನ ಬೆರೆತಾ ಕ್ಷಣ ।೨।
ಜೊ: ನಿನ್ನ ಚೆಲುವ ವದನ ಕಮಲ ನಯನ ಸೆಳೆಯಲು ನಾ
ಗಂ: ಶೃಂಗಾರದ ಸಂಗೀತದ ಸ್ವರ ಮೂಡುತಲಿರೇ
ಅನುರಾಗದ ನವಪಲ್ಲವಿ ಎದೆ ಹಾಡುತಲಿರೇ
ಹೆ: ಹಣ್ಣಾದೆನು ಹೆಣ್ಣಾದೆನು ನಸುಸಾಚಿಕೆ ಬರೇ
ನಿನ್ನ ಆಸೆಯು ನನ್ನ ಆಸೆಯು ಜೊತೆಯಾಗುತಲಿರೇ
ಗಂ: ನಿನ್ನ ಚಲುವಿನಲೀ, ನಿನ್ನ ಒಲವಿನಲೀ,
ಹುಸಿ ನಗುವಿನಲೀ, ಮೃದು ನುಡಿಗಳಲೀ
ಹೆ: ಸಿಹಿ ಜೇನಿನ ಸವಿ ಕಂಡೆನು ನಿನ್ನ ನೋಡುತಲಿರೇ
ಜೊ: ನಿನ್ನ ಚೆಲುವ ವದನ ಕಮಲ ನಯನ ಸೆಳೆಯಲು ನಾ
ಹೆ: ಉಲ್ಲಾಸದೀ ತಂಗಾಳಿಯು ತನು ಸೋಕುತಲಿರೇ
ಬಿಳಿಮೋಡವು ನಸುಗೆಂಪಿನ ರಂಗಾಗುತಲಿರೇ
ಗಂ: ಸಂತೋಷದ ಉಯ್ಯಾಲೆಯು ತೂಗಾಡುತಲಿರೇ
ಮಧುಮಾಸದ ನೆನಪಾಯಿತು ಹಿತವಾಗುತಲಿರೇ
ಹೆ: ಮಾಮರಗಳಲೀ, ಹಸಿರೆಲೆಗಳಲೀ,
ಮನತಣಿಸುತಲೀ, ಸುಖತುಂಬುತಲೀ
ಗಂ: ಮರಿಕೋಗಿಲೆ ಹೊಸರಾಗದ ಧನಿ ಮಾಡುತಲಿರೇ
ಹೆ: ನಿನ್ನ ಚೆಲುವ ವದನ ಕಮಲ ನಯನ ಸೆಳೆಯಲು ನಾ
ಗಂ: ನೆನೆಯಲು ಕಾಮನ ಸುಮಬಾಣನ ಅದೇ ದಿನ
ಹೆ: ಕುಣಿಯಿತು ಮನ, ತಣಿಸುತ ನನ್ನಾ
ಗಂ: ನಯನದಿ ನಯನ ಬೆರೆತಾ ಕ್ಷಣ
ಹೆ: ನಯನದಿ ನಯನ ಬೆರೆತಾ ಕ್ಷಣ
*********************************************************************************
ಲಕ್ಷ್ಮೀ ಬಾರಮ್ಮ
ರಚನೆ: ಚಿ. ಉದಯಶಂಕರ್ಗಾಯಕರು: ಡಾ. ರಾಜಕುಮಾರ್, ಮಂಜುಳಾ ಗುರುರಾಜ್
ಹೆ: ಲಕ್ಷ್ಮೀ ಬಾರಮ್ಮ ಭಾಗ್ಯಲಕ್ಷ್ಮಿ ಬಾರಮ್ಮ ।೨।
ಬೆಳಗಲು ಮನೆಯನ್ನು ಸಿರಿದೇವಿಯೇ
ಗಂ: ಲಕ್ಷ್ಮೀ ಬಾರಮ್ಮ ಭಾಗ್ಯಲಕ್ಷ್ಮಿ ಬಾರಮ್ಮ
ಹೆ: ಕಾಲಲಿ ಕೀರು ಗೆಜ್ಜೆ ಗಲು ಗಲು ಎಂದಾಗ
ಗಂ: ಕಾಲಲಿ ಕೀರು ಗೆಜ್ಜೆ ಗಲು ಗಲು ಎಂದಾಗ
ಮನೆಯಲಿ ನೂರು ವೀಣೆ ನಾದ ಹೊಮ್ಮಿ ಚಿಮ್ಮಲೀ
ಜೊ: ಲಕ್ಷ್ಮೀ ಬಾರಮ್ಮ ಭಾಗ್ಯಲಕ್ಷ್ಮಿ ಬಾರಮ್ಮ
ಬೆಳಗಲು ಮನೆಯನ್ನು ಸಿರಿದೇವಿಯೇ
ಹೆ: ಅನುಗಾಲ ಜೊತೆಯಾಗಿ ನಮ್ಮ ಹರಿಯನ್ನು ಸೇರಲು ಬಾರಮ್ಮ
ಗಂ: ಅನುಗಾಲ ಜೊತೆಯಾಗಿ ನಮ್ಮ ಹರಿಯನ್ನು ಸೇರಲು ಬಾರಮ್ಮ
ಹೆ: ನಮ್ಮ ಸೊಸೆಯಾಗಿ ನರಹರಿ ಸತಿಯಾಗಿ
ಗಂ: ನಮ್ಮ ಸೊಸೆಯಾಗಿ ನರಹರಿ ಸತಿಯಾಗಿ, ನಮಗಾನಂದ ನೀಡುತಲೀ
ಹೆ: ನಮಗಾನಂದ ನೀಡುತಲೀ
ಗಂ: ಸುಖವನು ನೀ ತಾರೆ ನಮ್ಮ ಭಾಗ್ಯದೇವತೇ
ಜೊ: ಲಕ್ಷ್ಮೀ ಬಾರಮ್ಮ ಭಾಗ್ಯಲಕ್ಷ್ಮಿ ಬಾರಮ್ಮ
ಬೆಳಗಲು ಮನೆಯನ್ನು ಸಿರಿದೇವಿಯೇ
ಗಂ: ಹಿತವಾದ ಶ್ರುತಿಯಲ್ಲಿ ನಮ್ಮ ಬದುಕೆಂಬ ಗೀತೆಯ ಹಾಡಮ್ಮಾ
ಹೆ: ಹಿತವಾದ ಶ್ರುತಿಯಲ್ಲಿ ನಮ್ಮ ಬದುಕೆಂಬ ಗೀತೆಯ ಹಾಡಮ್ಮಾ
ಗಂ: ಪ್ರೀತಿ ಸುಮವಾಗಿ ಜೇನಿನ ಹನಿಯಾಗಿ
ಹೆ: ಪ್ರೀತಿ ಸುಮವಾಗಿ ಜೇನಿನ ಹನಿಯಾಗಿ, ಹೊಸಸಂತೋಷ ತುಂಬುತಲೀ
ಗಂ: ಹೊಸಸಂತೋಷ ತುಂಬುತಲೀ
ಹೆ: ಕೀರ್ತಿಯ ತಾರಮ್ಮ ನಮ್ಮ ಭಾಗ್ಯದೇವತೇ
ಜೊ: ।। ಲಕ್ಷ್ಮೀ ಬಾರಮ್ಮ ಭಾಗ್ಯಲಕ್ಷ್ಮಿ ಬಾರಮ್ಮ
ಬೆಳಗಲು ಮನೆಯನ್ನು ಸಿರಿದೇವಿಯೇ ।।೨।।
*******************************************************************************
ಅರಳಿದ ತನುವಿದು
ರಚನೆ: ಚಿ. ಉದಯಶಂಕರ್ಗಾಯಕ: ಡಾ. ರಾಜಕುಮಾರ್
ಅರಳಿದ ತನುವಿದು ಅಂದವೋ ಅಂದ
ನಲಿದಿರುವ ಮನವಿನ್ನೂ ಚಂದವೋ ಚಂದ ।।೨ ಸಲ।।
ಸಂತೋಷದೀ ನೀನಿರು ಬರುವನು ಕಂದ
ಅರಳಿದ ತನುವಿದು ಅಂದವೋ ಅಂದ
ನಲಿದಿರುವ ಮನವಿನ್ನೂ ಚಂದವೋ ಚಂದ
ಮೆದುವಾಗಿ ನೆಡಿ, ನಿನ್ನಾಸೆ ಏನೂ ನುಡಿ
ಬಯಕೆಗಳ ಸರವಿರಲಿ, ಸಂಕೋಚವೇಕೇ
ದಿನವೆಲ್ಲ ನಗು, ಆನಂದದಿಂದಾ ನಗು
ಬೆಳೆಯುತಿಹ ಹಸುಕಂದ ನಗುವಂತೆ ನಲ್ಲೇ
ಬದುಕೆಲ್ಲ ಹೀಗೇ ಇರು, ಉಲ್ಲಾಸದಿಂದಾ
ಅರಳಿದ ತನುವಿದು ಅಂದವೋ ಅಂದ
ನಲಿದಿರುವ ಮನವಿನ್ನೂ ಚಂದವೋ ಚಂದ
ಒಲವೆಂಬಾ ಲತೆ, ಹೂವೊಂದು ಬಿಡುವಾ ದಿನ
ಸಡಗರದಿ ಬರುತಿರಲು, ಉಲ್ಲಾಸ ಕಂಡೇ
ಮಧುಮಾಸಾ ದಿನ, ನೀ ನನಗೆ ಒಲಿದಾ ಕ್ಷಣ
ಬಾಳಲ್ಲಿ ಹೊಸದಾದ ಸುಖವನ್ನು ತಂದೇ
ನನ್ನ ಭಾಗ್ಯತಾನೇ ಇದು, ನಿಜ ಹೇಳು ನೀನು
ಅರಳಿದ ತನುವಿದು ಅಂದವೋ ಅಂದ
ನಲಿದಿರುವ ಮನವಿನ್ನೂ ಚಂದವೋ ಚಂದ
ಸಂತೋಷದೀ ನೀನಿರು ಬರುವನು ಕಂದ
ಅರಳಿದ ತನುವಿದು ಅಂದವೋ ಅಂದ
ನಲಿದಿರುವ ಮನವಿನ್ನೂ ಚಂದವೋ ಚಂದ
********************************************************************************
ನಾದಮಯ...
ಸಾಹಿತ್ಯ: ಚಿ. ಉದಯಶಂಕರ್ಗಾಯನ: ರಾಜ್ ಕುಮಾರ್
ನಾದಮಯ... ನಾದಮಯ….
ನಾದಮಯ ಈ ಲೋಕವೆಲ್ಲ
ಕೊಳಲಿಂದ ಗೋವಿಂದ ಆನಂದ ತಂದಿರಲು
ನದಿಯ ನೀರು ಮುಗಿಲ ಸಾಲು
ಮುರಳಿಯ ಸ್ವರದಿ ಬೆರೆತು
ಚಲನೆ ಮರೆತು ನಿಂತಿರಲು
ನಾದಮಯ ಈ ಲೋಕವೆಲ್ಲಾ ನಾದಮಯ…
ಸ್ವರಗಳ ಮಾಧುರ್ಯ ರಾಗದ ಸೌಂದರ್ಯ
ಮೃಗಗಳ ತಣಿಸೆ, ಖಗಗಳ ಕುಣಿಸೆ
ಸಡಗರದಿಂದ ಗಗನದ ಅಂಚಿಂದ,
ಸಡಗರದಿಂದ ಗಗನದ ಅಂಚಿಂದ
ಸುರರು ಬಂದು, ಹರಿಯ ಕಂಡು ಹರುಷದಿ
ಭುವಿಯೆ ಸ್ವರ್ಗ ಭುವಿಯೆ ಸ್ವರ್ಗ ಎನುತಿರಲು
ನಾದಮಯ ಈ ಲೋಕವೆಲ್ಲಾ
ಕೊಳಲಿಂದ ಗೋವಿಂದ ಆನಂದ ತಂದಿರಲು
ನಾದಮಯ....
ಸಾ ಮಾ ಗಾ ರೀ ಗಮದನಿಸ ನಾದಮಯಾ..
ನಿದಮಗರಿಸ ದಮಗರಿಸ ಮಗರಿಸ
ದನಿಸ ರಿಗಮ ದನಿಸ ನಾದಮಯಾ...
ಗರಿಸ ನಿದನಿ ರಿಸನಿ ದಮದ
ಸಗ ಮದನಿ ನಾದಮಯಾ..
ಸರಿಗರಿ ಸನಿದನಿ ಸನಿದಮಗರಿಸನಿ
ದಾ ಗಾ ದಾ ಗಾ ರಿಗಮಗ ರಿಸನಿ ರೀ ಮಾ
ನಿ ರಿ ಮಗರಿ ಮಗರಿ ಸನಿಸ ಸರಿಸನಿ
ನಿಸನಿದ ಮದನಿಸ ನಿ ನಿಸನಿದ ದನಿದಮ
ಗಮದನಿ ಸರಿಗರಿ ಸನಿದನಿ ಸನಿದಪಮಗರಿಸ
ಗಾ ಮಾ ಗಮದನಿಸ ನಾದಮಯಾ..
ಪಾ ಪಾಪ ದಪದ ದಪದ ದಪಗರಿ
ದಾದ ಸಾಸ ರೀರಿ ಗಾಗ ಪಪದಪಗಾ
ದಾ ದಾದ ಗಗ ದಾದ ರಿಸ ದಾದ
ಪಸದಾಪಗ ರಿಸರಿ ಗಪ ಸದಾ
ಸಾ ಸಾಸ ಸಸ ಸಾ ಸಾಸ ಸಸ ಸಾ ಸಾಸ ರಿಸದಾ
ನಿನಿಪ ಮಪದಾ ನಿನಿಪ ಮಪದಾ
ನಿನಿಪ ಮಪ ದಾದಾದಾದಾದಾದಾನಿಪಾ...
ಆಆಆಆ..........
ಸಾ ನೀ ದಾ ಮಾ ಗಾ ಮಾ ದಾ ಮ ಗಾರಿ
ನಿರಿಸಾ ನಿಸ ಸಸ ಗರಿ ರಿರಿ ಮಗ ಗಗ ದಮ
ಮಮ ಮಗಗ ದಮಮ ನಿದದ ದನಿನಿ ಗರಿಸ
ಸರಿಗರಿಗ ನಿಸರಿಸರಿ ಗರಿಸ ನಿದಪ ಗರಿಸ
ದಮದನಿ ತನನನ ತನನನ ತನನನ ತನನನ
ತನನನ ನನನನನನನನನನನನ ತೋಂತನ
ನನನನ ತೋಂತನ ನನನನ ತೋಂತನ ನನನನ
ತೋಂತನ ನನನನ ತೋಂತನ ನನನನ ತೋಂತನ
ನನನನ ತೋಂತನ ನನನನ ತೋಂತನ ನನನನ
ತೋಂತನ ನನನನ ತೋಂತನ ನನನನ ತೋಂತನ
ನನನನ ತೋಂತನ ನನನನ ನಾದಮಯಾ...
ಈ ಲೋಕವೆಲ್ಲಾ..... ನಾದಮಯಾ....
********************************************************************************
No comments:
Post a Comment