Sunday, March 24, 2019

ಸೋಲಿಲ್ಲದ ಸರದಾರ (1992)

 ಚಲನ ಚಿತ್ರ: ಸೋಲಿಲ್ಲದ ಸರದಾರ (1992) 
ನಿರ್ದೇಶನ: ಓಂ ಸಾಯಿ ಪ್ರಕಾಶ್ 
ಸಂಗೀತ & ಸಾಹಿತ್ಯ: ಹಂಸಲೇಖ
ಗಾಯಕರು: ಎಸ್.ಪಿ.ಬಿ.  
ನಟನೆ: ಅಂಬರೀಷ್, ಮಾಲಾಶ್ರೀ, ಭವ್ಯಾ 


ಕನ್ನಡ, ರೋಮಾಂಚನವೀ ಕನ್ನಡ
ಕಸ್ತೂರಿ ನುಡಿಯಿದು, ಕರುಣಾಳು ಮಣ್ಣಿದು
ಚಿಂತಿಸು, ವಂದಿಸು, ಪೂಜಿಸು, ಪೂಜಿಸು
ಈ ಕನ್ನಡ ಮಣ್ಣನು ಮರಿಬೇಡ
ಓ ಅಭಿಮಾನಿ, ಓ ಅಭಿಮಾನಿ
ಈ ಮಣ್ಣಿನ ಹೆಣ್ಣನು ಜರಿಬೇಡ
ಓ ಅಭಿಮಾನಿ, ಓ ಅಭಿಮಾನಿ
ಸುಸಂಸ್ಕೃತ ಚರಿತೆಯ ತಾಯ್ನಾಡು
ಮಹೋನ್ನತ ಕಲೆಗಳ ನೆಲೆವೀಡು
ಕೆಡಿಸದಿರು ಈ ಹೆಸರ, ಈ ಹೆಸರ

ಈ ಕನ್ನಡ ಮಣ್ಣನು ಮರಿಬೇಡ
ಓ ಅಭಿಮಾನಿ, ಓ ಅಭಿಮಾನಿ
ಈ ಮಣ್ಣಿನ ಹೆಣ್ಣನು ಜರಿಬೇಡ
ಓ ಅಭಿಮಾನಿ, ಓ ಅಭಿಮಾನಿ

ಹಾಡಾಗಲಿ ಗೂಡಾಗಲಿ ನಾಡಾಗಲಿ
ಕಟ್ಟೋಕೆ ನಾನಾದಿನ, ಕೆಡವೋಕೆ ಮೂರೇ ದಿನ
ಹರಸಿದರು ಮುನಿಗಳು, ಗಳಿಸಿದರು ಕಲಿಗಳು
ನೆತ್ತರದಿ ನೆಚ್ಚಿನ ಈ ಮೆಚ್ಚಿನ ಸಾಮ್ರಾಜ್ಯವ
ಹಾಡಿದರು ಕವಿಗಳು, ಕರಗಿದವು ಶಿಲೆಗಳು
ತುಂಬಿದರು ಎದೆಯಲಿ ಸಿರಿಗನ್ನಡ ಅಭಿಮಾನವ
ಕನ್ನಡ, ರೋಮಾಂಚನವೀ ಕನ್ನಡ
ಹಾಡಿಸು, ಕೇಳಿಸು, ಪ್ರೀತಿಸು

ಈ ಕನ್ನಡ ಮಣ್ಣನು ಮರಿಬೇಡ
ಓ ಅಭಿಮಾನಿ, ಓ ಅಭಿಮಾನಿ
ಈ ಮಣ್ಣಿನ ಹೆಣ್ಣನು ಜರಿಬೇಡ
ಓ ಅಭಿಮಾನಿ, ಓ ಅಭಿಮಾನಿ

ಜ್ಞಾನ ಇದೆ, ಚಿನ್ನ ಇದೆ, ಕಾವೇರಿ ಇದೆ
ಬಡತನವೆ ಮೇಲಾಗಿದೆ, ನಮ್ಮತನವೆ ಮಂಕಾಗಿದೆ
ಯಾರಿಹರು ನಿಮ್ಮಲಿ, ಮದಕರಿಯ ನಾಯಕ
ಕೆಚ್ಚೆದೆಯ ಎಚ್ಚಮ, ರಣಧೀರರು ನುಡಿದಾಸರು
ಉಳಿದಿಹುದು ನಿಮ್ಮಲಿ, ಹೊಯ್ಸಳರ ಕಿಡಿಗಳು
ಹೊನ್ನ ಮಳೆ ಸುರಿಸಿದ, ಅರಿರಾಯರ ತೋಳ್ಬಲಗಳು
ಏಳಿರಿ, ಏಳಿರಿ, ಈ ಪ್ರಾರ್ಥನೆಯ ಕೇಳಿರಿ
ಕಲಿಯಿರಿ, ದುಡಿಯಿರಿ, ಉಳಿಸಿರಿ

ಈ ಕನ್ನಡ ಮಣ್ಣನು ಮರಿಬೇಡ
ಓ ಅಭಿಮಾನಿ, ಓ ಅಭಿಮಾನಿ
ಈ ಮಣ್ಣಿನ ಹೆಣ್ಣನು ಜರಿಬೇಡ
ಓ ಅಭಿಮಾನಿ, ಓ ಅಭಿಮಾನಿ
ಸುಸಂಸ್ಕೃತ ಚರಿತೆಯ ತಾಯ್ನಾಡು
ಮಹೋನ್ನತ ಕಲೆಗಳ ನೆಲೆವೀಡು
ಕೆಡಿಸದಿರು ಈ ಹೆಸರ, ಈ ಹೆಸರ

ಈ ಕನ್ನಡ ಮಣ್ಣನು ಮರಿಬೇಡ
ಓ ಅಭಿಮಾನಿ, ಓ ಅಭಿಮಾನಿ
ಈ ಮಣ್ಣಿನ ಹೆಣ್ಣನು ಜರಿಬೇಡ
ಓ ಅಭಿಮಾನಿ, ಓ ಅಭಿಮಾನಿ

No comments:

Post a Comment