Sunday, March 24, 2019

ಕೃಷ್ಣ ರುಕ್ಮಿಣಿ (1988)


ಕರ್ನಾಟಕದ ಇತಿಹಾಸದಲಿ 

ಚಲನ ಚಿತ್ರ: ಕೃಷ್ಣ ರುಕ್ಮಿಣಿ (1988)  
ಸಂಗೀತ: ಕೆ.  ವಿ.  ಮಹದೇವನ್   
ಸಾಹಿತ್ಯ: ಆರ್ ಎನ್ ಜಯಗೋಪಾಲ್   
ನಿರ್ದೇಶನ: ಹೆಚ್ ಆರ್ ಭಾರ್ಗವ    
ಗಾಯಕರು: ಎಸ್ ಪಿ ಬಾಲಸುಬ್ರಹ್ಮಣ್ಯಂ   
ನಟನೆ: ವಿಷ್ಣುವರ್ಧನ್, ರಮ್ಯಾ ಕೃಷ್ಣನ್, ದೇವರಾಜ್    


ಕರ್ನಾಟಕದ ಇತಿಹಾಸದಲಿ ......
ಬಂಗಾರದ ಯುಗದ ಕತೆಯನ್ನು,
ಹಾಡುವೆ ಕೇಳಿ ನಾ ಹಾಡುವೆ ಕೇಳಿ.
ಹಾಡುವೆ ಕೇಳಿ ನಾ ಹಾಡುವೆ ಕೇಳಿ.
ಕರ್ನಾಟಕದ ಇತಿಹಾಸದಲಿ ... 
ಜ್ಞಾನದ ಜ್ಯೋತಿಯು ವಿದ್ಯಾರಣ್ಯರು,
ಅನುಗ್ರಹಗೈದ ಭೂಮಿ ಇದು,
ಜ್ಞಾನದ ಜ್ಯೋತಿಯು ವಿದ್ಯಾರಣ್ಯರು,
ಅನುಗ್ರಹಗೈದ ಭೂಮಿ ಇದು,
ಹಕ್ಕ ಬುಕ್ಕರು ಆಳಿದರಿಲ್ಲಿ,
ಹರುಷದ ಮಳೆಯನ್ನು ಎಲ್ಲೂ ಚೆಲ್ಲಿ,
ವಿಜಯದ ಕಹಳೆಯ ಊದಿದರು,
ವಿಜಯನಗರ ಸ್ಥಾಪನೆ ಮಾಡಿದರು... 

ಕರ್ನಾಟಕದ ಇತಿಹಾಸದಲಿ ......
ಬಂಗಾರದ ಯುಗದ ಕತೆಯನ್ನು,
ಹಾಡುವೆ ಕೇಳಿ ನಾ ಹಾಡುವೆ ಕೇಳಿ.
ಹಾಡುವೆ ಕೇಳಿ ನಾ ಹಾಡುವೆ ಕೇಳಿ. 

ಗಂಡರಗಂಡ ಧೀರ ಪ್ರಚಂಡ
ಕೃಷ್ಣದೇವರಾಯ ಆಳಿದ ವೈಭವದೇ ,
ಗಂಡರಗಂಡ ಧೀರಪ್ರಚಂಡ
ಕೃಷ್ಣದೇವರಾಯ ಆಳಿದ ವೈಭವದೇ ,
ಕಲಿಗಳ ನಾಡು ಕವಿಗಳ ಬೀಡು, 
ಕಲಿಗಳ ನಾಡು ಕವಿಗಳ ಬೀಡು,
ಎನಿಸಿತು ಹಂಪೆಯು ಆ ದಿನದೇ.
ಕನ್ನಡ ಬಾವುಟ ಹಾರಿಸಿದಾ ,
ಮದುರೆವರೆಗೂ ರಾಜ್ಯವಾ  ಹರಡಿಸಿದ, 

ಕರ್ನಾಟಕದ ಇತಿಹಾಸದಲಿ... 

ಸಂಗೀತ ನಾಟ್ಯಗಳ ಸಂಗಮವಿಲ್ಲೆ,
ಶಿಲ್ಪಾ  ಕಲೆಗಳ ತಾಣವಿದೆ
ಸಂಗೀತ ನಾಟ್ಯಗಳ ಸಂಗಮವಿಲ್ಲೆ,
ಶಿಲ್ಪಾ  ಕಲೆಗಳ ತಾಣವಿದೆ
ಭುವನೇಶ್ವರಿಯ ತವರೂರಿಲ್ಲೆ,
ಯತಿಗಳ ದಾಸರ ನೆಲೆನಾಡಿಲ್ಲೆ,
ಪಾವನ ಮಣ್ಣಿದು ಹಂಪೆಯದು,
ಯುಗ ಯುಗ ಅಳಿಯದ ಕೀರ್ತಿ ಇದು...
ಕನ್ನಡ ಭೂಮಿ ...ಕನ್ನಡ ನುಡಿಯು .......  .
ಕನ್ನಡ ಪ್ರೀತಿ.......  .ಎಂದೆಂದೂ ಬಾಳಲಿ.
ಸಿರಿಗನ್ನಡಂ ಗೆಲ್ಗೆ... ಸಿರಿಗನ್ನಡಂ ಗೆಲ್ಗೆ...
ಸಿರಿಗನ್ನಡಂ ಗೆಲ್ಗೆ... 

*******************************************************************************

No comments:

Post a Comment