Sunday, March 31, 2019

ಬಾ ನಲ್ಲೆ ಮಧುಚಂದ್ರಕೆ (1993)


ಚಲನ ಚಿತ್ರ: ಬಾ ನಲ್ಲೆ ಮಧುಚಂದ್ರಕೆ (1993)
ನಿರ್ದೇಶನ: ನಾಗತಿಹಳ್ಳಿ ಚಂದ್ರಶೇಖರ್ 
ಸಂಗೀತ: ಹಂಸಲೇಖ
ಸಾಹಿತ್ಯ: ನಾಗತಿಹಳ್ಳಿ ಚಂದ್ರಶೇಖರ್ 
ಗಾಯಕರು: ಎಸ್.ಪಿ. ಬಾಲಸುಬ್ರಹ್ಮಣ್ಯಂ, ಕೆ. ಎಸ್. ಚಿತ್ರಾ 
ನಟನೆ: ಕೆ. ಶಿವರಾಮ್, ನಂದಿನಿ ಸಿಂಗ್ 


ಬಾ ನಲ್ಲೆ ಬಾ ನಲ್ಲೆ ಮಧುಚಂದ್ರಕೆ
ಬಾ ನಲ್ಲೆ ಬಾ ನಲ್ಲೆ ಮಧುಮಂಚಕೆ
ಹೋ ಹೋ ಹೋ   ಹೋ ಹೋ ಹೋ
ಬಾ ನಲ್ಲೆ ಬಾ ನಲ್ಲೆ ಮಧುಚಂದ್ರಕೆ
ಬಾ ನಲ್ಲೆ ಬಾ ನಲ್ಲೆ ಮಧುಮಂಚಕೆ
ಹೋ ಹೋ ಹೋ ಹೋ ಹೋ ಹೋ

ಗಿರಿ ಶಿಖರ ಜಲಪಾತ ಎಲ್ಲಾ ಬೆತ್ತಲೆ
ಇಲ್ಲಿ ಎಲ್ಲಾ ಬೆತ್ತಲೆ ಇಲ್ಲಿ
ಅಲ್ಲವೆನೇ ಅಲ್ಲವೆನೇ ಬಲ್ಲೆಯೆನೇ ಬಲ್ಲೆಯೆನೇ

ಕನಸುಗಳ ಗುರಿಕಾರ
ಸ್ವಪ್ನ ಮಂದಿರದಾಚೆ ಸ್ವಪ್ನ ಮಂದಿರದಾಚೆ
ಮೂಡಿಬಾರೋ ಮೂಡಿಬಾರೋ
ಹಾಡುಬಾರೋ ಕೂಡುಬಾರೋ
ಹೋ ಹೋ ಹೋ ಹೋ ಹೋ ಹೋ

ಬಾ ನಲ್ಲ ಬಾ ನಲ್ಲ ಮಧುಚಂದ್ರಕೆ
ಬಾ ನಲ್ಲ ಬಾ ನಲ್ಲ ಮಧುಮಂಚಕೆ
ಹೋ ಹೋ ಹೋ ಹೋ ಹೋ ಹೋ

ರತಿ ಸುಖಕೆ ಜೊತೆಯಾಗು
ನಗ್ನ ಕೋಟೆಯನೇರಿ ನಗ್ನ ಕೋಟೆಯನೇರಿ
ನಿಲ್ಲು ಬಾರೇ ನಿಲ್ಲು ಬಾರೇ ಗೆಲ್ಲು ಬಾರೇ ಗೆಲ್ಲು ಬಾರೇ

ಪ್ರಿಯಸಖನೆ ವಿರಹಾಗ್ನಿ
ಬೆಂಕಿ ಬಂಧನವಿಲ್ಲಿ ಬೆಂಕಿ ಬಂಧನವಿಲ್ಲಿ
ನೀಗು ಬಾರೋ ನೀಗು ಬಾರೋ
ಬಾಳ ತುಂಬಾ ಸಾಗಿ ಬಾರೋ
ಹೋ ಹೋ ಹೋ ಹೋ ಹೋ ಹೋ

ಬಾ ನಲ್ಲ ಬಾ ನಲ್ಲ ಮಧುಚಂದ್ರಕೆ
ಬಾ ನಲ್ಲ ಬಾ ನಲ್ಲ ಮಧುಮಂಚಕೆ
ಹೋ ಹೋ ಹೋ ಹೋ ಹೋ ಹೋ
ಬಾ ನಲ್ಲೆ ಬಾ ನಲ್ಲೆ ಮಧುಚಂದ್ರಕೆ
ಬಾ ನಲ್ಲೆ ಬಾ ನಲ್ಲೆ ಮಧುಮಂಚಕೆ
ಹೋ ಹೋ ಹೋ ಹೋ ಹೋ ಹೋ

*********************************************************************************

ಆ ಬೆಟ್ಟದಲ್ಲಿ

ಸಾಹಿತ್ಯ : ಪ್ರೊ. ಸಿದ್ದಲಿಂಗಯ್ಯ
ಗಾಯನ : ಎಸ್. ಪಿ. ಬಾಲಸುಬ್ರಮಣ್ಯಂ


ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ 
ಸುಳಿದಾಡಬೇಡ ಗೆಳತಿ
ಚೆಲುವಾದ ನಿನ್ನ ಮಲ್ಲಿಗೆಯ ಮೈಯ್ಯ 
ಸುಟ್ಟಾವು ಬೆಳ್ಳಿ ಕಿರಣ!! ಸುಟ್ಟಾವು ಬೆಳ್ಳಿ ಕಿರಣ.

ಇಳಿಜಾರಿನಲ್ಲಿ ಆ ಕಣಿವೆಯಲ್ಲಿ ನೀ ಇಳಿಯಬೇಡ ಗೆಳತಿ!
ಇಳಿಜಾರಿನಲ್ಲಿ ಆ ಕಣಿವೆಯಲ್ಲಿ ನೀ ಇಳಿಯಬೇಡ ಗೆಳತಿ
ನೀ ಇಳಿಯಬೇಡ ಗೆಳತಿ ಆ ಕಣಿವೆಯಲ್ಲಿ

ತತ್ತರಿಸುವಂತೆ ಕಾಲಲ್ಲಿ ಕಮಲ ಮುತ್ತುವುವು 
ಮೊಲದ ಹಿಂಡು!! ಮುತ್ತುವುವು ಮೊಲದ ಹಿಂಡು.
ಈ ನನ್ನ ಎದೆಯ ಹೂದೋಟದಲ್ಲಿ ನೀನೆತ್ತ ಪ್ರೀತಿ ಬಳ್ಳಿ!
ಈ ನನ್ನ ಎದೆಯ ಹೂದೋಟದಲ್ಲಿ ನೀನೆತ್ತ ಪ್ರೀತಿ ಬಳ್ಳಿ
ನೀನೆತ್ತ ಪ್ರೀತಿ ಬಳ್ಳಿ ಹೂದೋಟದಲ್ಲಿ
ಫಲ ಕೊಟ್ಟಿತೇನೆ ಹೂ ಬಿಟ್ಟಿತೇನೆ 
ಉಲ್ಲಾಸವನ್ನು ಚೆಲ್ಲಿ!! ಉಲ್ಲಾಸವನ್ನು ಚೆಲ್ಲಿ.

ಈ ಊರ ಬನಕೆ ಚೆಲುವಾದ ಒಂಟಿ ಹೂವಾಗಿ ಅರಳಿ ನೀನು!
ಈ ಊರ ಬನಕೆ ಚೆಲುವಾದ ಒಂಟಿ ಹೂವಾಗಿ ಅರಳಿ ನೀನು
ಹೂವಾಗಿ ಅರಳಿ ನೀನು ಈ ಊರ ಬನಕೆ
ಮರೆಯಾಗಬೆಡ ಮಕರಂದವೆಂದ 
ದುಂಬಿಗಳ ದಾಳಿಯಲ್ಲಿ!! ದುಂಬಿಗಳ ದಾಳಿಯಲ್ಲಿ.
ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡಬೇಡ ಗೆಳತಿ
ಚೆಲುವಾದ ನಿನ್ನ ಮಲ್ಲಿಗೆಯ ಮೈಯ್ಯ 
ಸುಟ್ಟಾವು ಬೆಳ್ಳಿ ಕಿರಣ!! ಸುಟ್ಟಾವು ಬೆಳ್ಳಿ ಕಿರಣ.

*********************************************************************************

ಬಂದಾಳೊ ಬಂದಾಳೊ

ಸಾಹಿತ್ಯ: ನಾಗತಿಹಳ್ಳಿ ಚಂದ್ರಶೇಖರ್    
ಗಾಯಕರು : ಎಸ್. ಪಿ. ಬಾಲಸುಬ್ರಮಣ್ಯಂ


ಬಂದಾಳೊ ಬಂದಾಳೊ ಬಿಂಕದ ಸಿಂಗಾರಿ
ಬಂದಾಳೊ ಬಂದಾಳೊ ಚಂದಿರ ಚಕೋರಿ
ತಂದಾಳೊ! ತಂದಾಳೊ ಪ್ರೇಮದ ಸಿರಿ
ಬಂದಾಳೊ ಬಂದಾಳೊ ಬಿಂಕದ ಸಿಂಗಾರಿ
ಬಂದಾಳೊ ಬಂದಾಳೊ ಚಂದಿರ ಚಕೋರಿ

ಮಳೆ ಬಿಲ್ಲಮೇಲೆ ಇಳಿಜಾರೊ ಬಾಲೆ
ರತಿದೇವಿ ಸೌಂದರ್ಯ ಸವತಿ ನೀ!
ಕವಿತೆ ನೀ ಕಾವ್ಯ ಸ್ಪೂರ್ತಿ ನೀ
ಎದೆಯಾಳದೊಲವು ಹೆಣ್ಣಾಗಿ ಬಂದ
ಭೂಲೊಕ ಸೌಂದರ್ಯ ರಾಣಿ ನೀ
ಪ್ರಾಣ ನೀ ನೀಲ ವೇಣಿ ನೀ
ನಕ್ಕಾಳೊ ನಕ್ಕಾಳೊ ಹುಣ್ಣಿಮೆ ಹಾಲಂತೆ
ಉಕ್ಯಾಳೊ ಉಕ್ಯಾಳೊ ತುಂಗೆಯ ನೀರಂತೆ
ಜೀವನದ ಚಂದ್ರೊದಯಕೆ ಮೈಮನದ ಪ್ರಣಯಾಲಯಕೆ
||ಬಂದಾಳೊ ಬಂದಾಳೊ||

ಮಲೆನಾಡ ಸಿರಿಗೆ ಮನಸೊತು ನಿಂತ
ಹಸಿರೂರ ಗಿರಿಬಾಲೆ ಹೆಣ್ಣು ನೀ
ಕಣ್ಣು ನೀ ಬಾಳ ಬಣ್ಣ ನೀ
ನಡು ರಾತ್ರಿಯಲ್ಲಿ ಜಲ ರಾಶಿ ಮೇಲೆ
ಗುರಿ ತೊರೊ ಎಕಾಂತ ತಾರೆ ನೀ
ನೀರೆ ನೀ ಕಾವ್ಯ ಧಾರೆ ನೀ
ಮೂಡ್ಯಾಳೊ ಮೂಡ್ಯಾಳೊ ಮಾಗಿಯ ಕನಸಂತೆ
ಮುತ್ಯಾಳೊ ಮುತ್ಯಾಳೊ ಬೆಚ್ಚನೆ ಮುತಂತೆ
ಜೀವನದ ಚಂದ್ರೊದಯಕೆ ಮೈಮನದ ಪ್ರಣಯಾಲಯಕೆ

ಬಂದಾಳೊ ಬಂದಾಳೊ ಬಿಂಕದ ಸಿಂಗಾರಿ
ಬಂದಾಳೊ ಬಂದಾಳೊ ಚಂದಿರ ಚಕೋರಿ
ತಂದಾಳೊ! ತಂದಾಳೊ ಪ್ರೇಮದ ಸಿರಿ
ಬಂದಾಳೊ ಬಂದಾಳೊ ಬಿಂಕದ ಸಿಂಗಾರಿ
ಬಂದಾಳೊ ಬಂದಾಳೊ ಚಂದಿರ ಚಕೋರಿ

*********************************************************************************

ಓಹೋ ಹಿಮಾಲಯ

ಸಾಹಿತ್ಯ : ಹಂಸಲೇಖ  
ಗಾಯಕರು : ಎಸ್.ಪಿ. ಬಾಲಸುಬ್ರಮಣ್ಯಂ, ಮಂಜುಳ ಗುರುರಾಜ್


ಓಹೋ ಹಿಮಾಲಯ ಓಹೋ ಹಿಮಾಲಯ
ಓಹೋ ಹಿಮಾಲಯ ಓಹೋ ಹಿಮಾಲಯ
ಶಿವನಿಗು ಗಿರಿಜೆಗು ದೇವಾಲಯ
ನವ ವಧುವರರಿಗೆ ಪ್ರೇಮಾಲಯ
ಓಹೋ ಹಿಮಾಲಯ ಓಹೋ ಹಿಮಾಲಯ
ಶಿವನಿಗು ಗಿರಿಜೆಗು ದೇವಾಲಯ
ನವ ವಧುವರರಿಗೆ ಪ್ರೇಮಾಲಯ

ಅಂಬರವೊ ಇಲ್ಲಾ ಬೆಳ್ಳಿ ಚಪ್ಪರವೊ! 
ಗುಡ್ಡಗಳೊ ಇಲ್ಲಾ ಬೆಣ್ಣೆ ಮುದ್ದೆಗಳೊ
ಚಿಲಿಪಿಲಿಯೊ ಇಲ್ಲಾ ಕಾವ್ಯ ವಾಚನವೊ! 
ಕಲಕಲವೊ ಇಲ್ಲಾ ಗಂಗೆ ಗಾಯನವೊ
ಅಪ್ಪುಗೆಯೊ ಇಲ್ಲಾ ಇದು ಒಪ್ಪಿಗೆಯೊ! 
ಚುಂಬನವೊ ಇಲ್ಲಾ ಇದು ಬಂಧನವೊ
ಆತುರವೊ ಇಲ್ಲಾ ಇದು ಕಾತುರವೊ! 
ಆಸೆಗಳೊ ನಲ್ಲ ನಲ್ಲೆ ಲೀಲೆಗಳೊ
ಜಿಗಿಜಿಗಿವಾ ಜೊಡಿ ಪ್ರೇಮ ಹೃದಯಗಳು 
ಚುಕುಚುಕುಚು ರೈಲನ್ನೇರಿದವು
ಗರಿಗರಿಯ ಹಿಮಗಿರಿಯ ಬೆನ್ನಿನಲಿ 
ಚಳಿ ಚಳಿಯೊ ಎನ್ನುತಾ ಜಾರಿದವೊ
ಮೈಸೂರ ಚೆಲುವೆ ನೀನು ಮೈಸೂರ ಚೆಲುವ ನೀನು
ಎನ್ನುತ ಕನ್ನಡ ಕಂಪನು ಬೀರಿದೆವು ಹಿಮದಲಿ

ಓಹೋ ಹಿಮಾಲಯ ಓಹೋ ಹಿಮಾಲಯ
ಓಹೋ ಹಿಮಾಲಯ ಓಹೋ ಹಿಮಾಲಯ
ಶಿವನಿಗು ಗಿರಿಜೆಗು ದೇವಾಲಯ
ನವ ವಧುವರರಿಗೆ ಪ್ರೇಮಾಲಯ

ನನ್ನವಳೆ ನನ್ನವಳೆ ನನ್ನವಳೆ  
ತಂಬೆಲರ ತಂಬೆಲರ ತಂದವಳೆ
ತಂಬೆಲರೆ ಮುಂಗುರುಳ ಕಾಮಿಸಿದೆ
ಮುಂಗುರುಳೆ ಮೊಗವನ್ನು ಮೊದಿಸಿದೆ
ನನ್ನವನೆ ನನ್ನವನೆ ನನ್ನವನೆ 
ನನ್ನೆದೆಗೆ ಹುಣ್ಣಿಮೆಯ ತಂದವನೆ
ಹುಣ್ಣಿಮೆಯ ಗಿರಿಯೂರ ತೊರಿಸಿದೆ 
ಕಿನ್ನರರ ತವರೂರ ಸೇರಿಸಿದೆ
ಮಾತಿನಲಿ ಮಾಯ ಮಾಡೊ ಮೊಹಿನಿಯು 
ಮಾರನಿಗೆ ಸೊತು ಬಿದ್ದಳು
ಹೂಗಳ ಬಾಣವನೆಸೆವ ಮನ್ಮಥನು 
ಹೂವಿನಲೆ ಜಾರಿ ಬಿದ್ದನು
ಮೈಸೂರ ಚೆಲುವೆ ನೀನು ಮೈಸೂರ ಚೆಲುವ ನೀನು
ಎನ್ನುತ ಕನ್ನಡ ಕಂಪನು ಬೀರಿದೆವು ಹಿಮದಲಿ

ಓಹೋ ಹಿಮಾಲಯ ಓಹೋ ಹಿಮಾಲಯ
ಓಹೋ ಹಿಮಾಲಯ ಓಹೋ ಹಿಮಾಲಯ
ಶಿವನಿಗು ಗಿರಿಜೆಗು ದೇವಾಲಯ
ನವ ವಧುವರರಿಗೆ ಪ್ರೇಮಾಲಯ

*********************************************************************************

No comments:

Post a Comment