ಕಂಬದಾ ಮ್ಯಾಲಿನ
ಚಲನಚಿತ್ರ: ನಾಗಮಂಡಲ (1997)ಸಾಹಿತ್ಯ: ಗೋಪಾಲ್ ಯಾಗ್ನಿಕ್
ಸಂಗೀತ: ಸಿ. ಅಶ್ವಥ್
ಗಾಯನ: ಸಂಗೀತಾ ಕಟ್ಟಿ
ನಿರ್ದೇಶನ: ಟಿ. ಎಸ್. ನಾಗಾಭರಣ
ನಟನೆ: ಪ್ರಕಾಶ್ ರೈ, ವಿಜಯಲಕ್ಷ್ಮೀ, ಬಿ. ಜಯಶ್ರೀ
ಕಂಬದಾ ಮ್ಯಾಲಿನ ಗೊಂಬಿಯೇ
ನಂಬಲೇನ ನಿನ್ನ ನಗಿಯನ್ನಾ|
ಭಿತ್ತಿಯಾ ಮ್ಯಾಲಿನ ಚಿತ್ತಾರವೇ
ಚಿತ್ತ ಗೊತ್ತ ಹೇಳ ಉತ್ತಾರವಾ||
ಒಬ್ಬಳೇ ನಾನಿಲ್ಲಿ ತಬ್ಬಿಬ್ಬುಗೊಂಡಿಹೆನ
ಮಬ್ಬು ಹರಿಯುವುದೇನಾ ಹಬ್ಬವಾಗುವುದೇನಾ||
ಕಂಬದಾ ಮ್ಯಾಲಿನ ಗೊಂಬಿಯೇ
ನಂಬಲೇನ ನಿನ್ನ ನಗಿಯನ್ನಾ|

ಚಿತ್ತ ಗೊತ್ತ ಹೇಳ ಉತ್ತಾರವಾ||
ನೀರೊಲೆಯ ನಿಗಿ ಕೆಂಡ ಸತ್ಯವೇ
ಈ ಅಭ್ಯಂಜನವಿನ್ನೂ ನಿತ್ಯವೇ|
ಒಳ್ಳೇ ಘಮಗುಡುತಿಯಲ್ಲೆ ಸೀಗೆಯೇ
ನಿನ್ನ ವಾಸನೀ ಹರಡಿರಲಿ ಹೀಗೆಯೇ ||೨||
ಒಬ್ಬಳೇ ನಾನಿಲ್ಲಿ ತಬ್ಬಿಬ್ಬುಗೊಂಡಿಹೆನ
ಮಬ್ಬು ಹರಿಯುವುದೇನಾ ಹಬ್ಬವಾಗುವುದೇನಾ||
ಒಪ್ಪಿಸುವೆ ಹೂ-ಹಣ್ಣು ಭಗವಂತ
ನೆಪ್ಪಿಲೆ ಹರಸುನಗಿ ಇರಲೆಂತ|
ಕಪ್ಪುರವ ಬೆಳಗುವೆ ದೇವನೇ
ತಪ್ಪದೆ ಬರಲೆನ್ನ ಗುಣವಂತ ||೨||
ಒಬ್ಬಳೇ ನಾನಿಲ್ಲಿ ತಬ್ಬಿಬ್ಬುಗೊಂಡಿಹೆನ
ಮಬ್ಬು ಹರಿಯುವುದೇನಾ ಹಬ್ಬವಾಗುವುದೇನಾ||
ಕಂಬದಾ ಮ್ಯಾಲಿನ ಗೊಂಬಿಯೇ
ನಂಬಲೇನ ನಿನ್ನ ನಗಿಯನ್ನಾ|
ಭಿತ್ತಿಯಾ ಮ್ಯಾಲಿನ ಚಿತ್ತಾರವೇ
ಚಿತ್ತ ಗೊತ್ತ ಹೇಳ ಉತ್ತಾರವಾ||
*********************************************************************************
ಈ ಹಸಿರು ಸಿರಿಯಲಿ
ಸಾಹಿತ್ಯ: ಗೋಪಾಲ್ ಯಾಗ್ನಿಕ್
ಈ ಹಸಿರು ಸಿರಿಯಲಿ
ಮನಸು ಮೆರೆಯಲಿ ನವಿಲೇ...
ನಿನ್ನಾಂಗೆಯೆ ಕುಣಿವೆ
ನಿನ್ನಂತೆಯೆ ನಲಿವೆ ನವಿಲೇ..
ನವಿಲೆ ಈ ನೆಲದ ನೆಲೆಯಲಿ
ಮನಸು ಕುಣಿಯಲಿ ನವಿಲೇ...
ನೀನೇನೆ ನಾನಾಗುವೆ
ಗೆಲುವಾಗಿಯೆ ಒಲಿವೆ
ನವಿಲೇ.. ನವಿಲೆ
ತಂಗಾಳಿ ಬೀಸಿ ಬರದೆ ಸೌಗಂಧಾ ಸುಖವ ತರದೇ
ಚಿಗುರೆಲೆಯು ಎಲ್ಲಿ ಮರವೆ ನಿನ್ನ ಗೆಳತಿ ನಾನು ಮೊರೆವೆ
ತಂಗಾಳಿ ಬೀಸಿ ಬರದೇ ಸೌಗಂಧಾ ಸುಖವ ತರದೇ
ಚಿಗುರೆಲೆಯು ಎಲ್ಲಿ ಮರವೇ ನಿನ್ನ ಗೆಳತಿ ನಾನು ಮೊರೆವೆ
ಮತ್ಯಾಕೆ ಮೌನ ಗಿಳಿಯೇ ಸಿಟ್ಯಾಕೆ ಎಂದು ತಿಳಿಯೆ
ಹೊತ್ಯಾಕೆ ಹೇಳು ಅಳಿಲೇ ಗುಟ್ಯಾಕೆ ನನ್ನ ಬಳಿಯೆ ಹೇಳೀರೆ
ನಿಮ್ಮನ್ನ ನಾ ಹ್ಯಾಂಗ ಮರೆಯಲೇ ತೊಳೆಯಲೇ
ಈ ಹಸಿರು ಸಿರಿಯಲಿ ಮನಸು ಮೆರೆಯಲಿ ನವಿಲೇ...
ನಿನ್ನಾಂಗೆಯೆ ಕುಣಿವೆ ನಿನ್ನಂತೆಯೆ ನಲಿವೆ ನವಿಲೇ ನವಿಲೆ
ಏನಂಥಾ ಮುನಿಸು ಗಿರಿಯೆ ಮಾತನ್ನ ಮರೆತೆ ಸರಿಯೇ
ಜೇನಂಥಾ ಪ್ರೀತಿ ಸುರಿದೇ ನನ್ನ ಜೀವ ಜೀವ ನದಿಯೇ
ಏನಂಥಾ ಮುನಿಸು ಗಿರಿಯೆ ಮಾತನ್ನ ಮರೆತೆ ಸರಿಯೇ
ಜೇನಂಥಾ ಪ್ರೀತಿ ಸುರಿದೇ ನನ್ನ ಜೀವ ಜೀವ ನದಿಯೇ
ಸುರಲೋಕಾ ಇದನು ಬಿಡಲೇ ತವರೀಗೆ ಸಾಟಿ ಇದೆಯೇ
ಚಿರಕಾಲ ಇಲ್ಲೆ ಇರಲೇ ನಗುತಿರು ನೀಲಿ ಮುಗಿಲೇ
ನಾನಿನ್ನು ನಿಮ್ಮಿಂದ ಬಹುದೂರ ಸಾಗುವೇ ಹರಸಿರೇ
ಈ ಹಸಿರು ಸಿರಿಯಲಿ ಮನಸು ಮೆರೆಯಲಿ ನವಿಲೇ...
ನಿನ್ನಾಂಗೆಯೆ ಕುಣಿವೆ ನಿನ್ನಂತೆಯೆ ನಲಿವೆ ನವಿಲೇ ನವಿಲೆ
ನವಿಲೇ ನವಿಲೆ ನವಿಲೇ ನವಿಲೆ
*********************************************************************************
No comments:
Post a Comment