Sunday, March 24, 2019

ಚಂದನದ ಗೊಂಬೆ (1979)

ಈ ಬಿಂಕ ಬಿಡು ಬಿಡು

ಚಲನಚಿತ್ರ: ಚಂದನದ ಗೊಂಬೆ (1979)
ನಿರ್ದೇಶನ: ದೊರೆ-ಭಗವಾನ್ 
ಸಾಹಿತ್ಯ: ಚಿ.ಉದಯಶಂಕರ್ 
ಸಂಗೀತ: ರಾಜನ್-ನಾಗೇಂದ್ರ 
ಗಾಯಕರು: ಎಸ್.ಪಿ.ಬಿ, ಎಸ್.ಜಾನಕಿ
ನಟನೆ: ಅನಂತ್ ನಾಗ್, ಲಕ್ಷ್ಮೀ 


ಈ ಬಿಂಕ ಬಿಡು ಬಿಡು, ನಾ ನಿನ್ನ ಬಲ್ಲೆನು
ಮನಸನ್ನು ಕೊಡು ಕೊಡು, ನಾನಲ್ಲಿ ನಿಲ್ಲುವೆನು
ನನ್ನ ತುಂಬ ನೀನೆ, ತುಂಬಿ ಕೊಂಡ ಮೇಲೆ
ಇನ್ನು ನನ್ನದೇನು, ಮನಸು ಕೊಡುವುದೇನು
ಈ ಬಿಂಕ ಬಿಡು ಬಿಡು, ನಾ ನಿನ್ನ ಬಲ್ಲೆನು
ಮನಸನ್ನು ಕೊಡು ಕೊಡು, ನಾನಲ್ಲಿ ನಿಲ್ಲುವೆನು
ಒಲವನು ತೋರಿದೆ, ಕಣ್ಣಲ್ಲೆ ಬಾ ಎಂದು ಕರೆದೆ
ಆ ಮಾತು ನಂಬಿದೆ, ನಿನ್ನನ್ನು ಸೇರಿದೆ
ಬೇರೇನು ಕಾಣೇ ನಾನು ಪ್ರೀತಿ ಅಲ್ಲದೆ
ಕಾಣದ ಅನುಭವ, ನಿನ್ನಿಂದ ನಾ ಹೊಂದಿ ಇಂದು
ಸಂತೋಷವಾಗಿದೆ ಸಂಕೋಚ ಓಡಿದೆ
ನಿನ್ನಾಸೆ ಹೇಳೋ ಕಾಲ ಕೂಡೀ ಬಂದಿದೆ
ನಿನ್ನಾಸೆ ಹೇಳೋ ಕಾಲ ಕೂಡೀ ಬಂದಿದೆ
ಈ ಬಿಂಕ ಬಿಡು ಬಿಡು, ನಾ ನಿನ್ನ ಬಲ್ಲೆನು
ಮನಸನ್ನು ಕೊಡು ಕೊಡು, ನಾನಲ್ಲಿ ನಿಲ್ಲುವೆನು
ನಾಚಿಕೆ ಎನ್ನುತ, ನಿನ್ನಾಸೆ ಎಲ್ಲವ ನುಡಿದೆ
ನನ್ನೆದೆಯ ವೀಣೆಯ, ಹಿತವಾಗಿ ಮೀಟಿದೆ
ಹೊಸ ರಾಗ ತಾನ ಪಲ್ಲವಿ ಇಂದು ನುಡಿಸಿದೆ
ಏನನು ಅರಿಯದ, ಹೆಣ್ಣಲ್ಲಿ ನಿನ್ನಾಸೆ ತಂದೆ
ನನ್ನುಸಿರ ರಾಗಕೆ, ನನ್ನೆದೆಯ ತಾಳಕೆ
ಹೊಸಬಾಳ ಗೀತೆ ಇಂದು ನೀನು ಹಾಡಿದೆ
ಹೊಸಬಾಳ ಗೀತೆ ಇಂದು ನೀನು ಹಾಡಿದೆ
ಈ ಬಿಂಕ ಬಿಡು ಬಿಡು, ನಾ ನಿನ್ನ ಬಲ್ಲೆನು
ಮನಸನ್ನು ಕೊಡು ಕೊಡು, ನಾನಲ್ಲಿ ನಿಲ್ಲುವೆನು
ನನ್ನ ತುಂಬ ನೀನೆ, ತುಂಬಿ ಕೊಂಡ ಮೇಲೆ
ಇನ್ನು ನನ್ನದೇನು, ಮನಸು ಕೊಡುವುದೇನು

*********************************************************************************

ಕಂಗಳು ತುಂಬಿರಲು

ಸಾಹಿತ್ಯ: ಚಿ.ಉದಯಶಂಕರ್ 
ಗಾಯನ: ಎಸ್.ಜಾನಕಿ


ಕಂಗಳು ತುಂಬಿರಲು ಕಂಬನಿ ಧಾರೆಯಲಿ
ಹೃದಯವು ಬೆಂದಿರಲು ನೋವಿನ ಜ್ವಾಲೆಯಲಿ
ಮೇಣದ ದೀಪದಂತೆ ನೊಂದು ನೊಂದು ನೀರಾದೇ..ಕಂಗಳು..
ನಿಮ್ಮ ರೂಪ ಕಣ್ಣಿನಲಿ ನಿಮ್ಮ ಮಾತೆ ಕಿವಿಗಳಲೀ
ನಿಮ್ಮ ನೋಟ ಇನ್ನೂ ನನ್ನ ಹೃದಯವೀಣೆ ಮೀಟಿರಲೂ
ನಿಮ್ಮ ಸ್ನೇಹ ಮನಸಿನಲಿ ನಿಮ್ಮ ಪ್ರೇಮ ನೆನಪಿನಲಿ
ನಿಮ್ಮ ಮುದ್ದು ಕಂದಾ ನನ್ನಾ ಅಮ್ಮಾ ಎಂದು ಕೂಗಿರಲೂ
ನೊಂದ ನನ್ನ ಜೀವ ಇಂದು ಎನೋ ಸುಖಾ ಕಾಣುತಿದೇ..ಕಂಗಳು..

ನೀವು ತಂದ ಈ ಮನೆಗೆ ನೀವು ತಂದ ಈ ಸಿರಿಗೆ
ದೂರವಾಗಿ ಎಂದೆಂದಿಗೂ ಹೋಗಲಾರೆ ನಿಮ್ಮಾಣೆಗೂ..ಆ..ಆ.
ನಿಮ್ಮ ಮನೆ ಬಾಗಿಲಿಗೆ ತೋರಣದ ಹಾಗಿರುವೇ
ನಿಮ್ಮ ಮನೆ ದೀಪವಾಗೀ ಬೆಳಗುವೆ ನನ್ನಾಣೆಗೂ
ನಿಮ್ಮ ನೆನಪಲ್ಲೇ ನನ್ನಾ ಬಾಳಾ ನಾನೂ ಸಾಗಿಸುವೇ..ಕಂಗಳು..

*********************************************************************************

ಆಕಾಶದಿಂದ ಧರೆಗಿಳಿದ ರಂಭೆ

ಸಾಹಿತ್ಯ: ಚಿ.ಉದಯಶಂಕರ್ 
ಗಾಯಕರು: ಎಸ್.ಪಿ.ಬಿ


ಆಕಾಶದಿಂದ ಧರೆಗಿಳಿದ ರಂಭೆ, 
ಆಕಾಶದಿಂದ ಧರೆಗಿಳಿದ ರಂಭೆ,
ಇವಳೇ ಇವಳೇ ಚಂದನದ ಗೊಂಬೆ,
ಇವಳೇ ಇವಳೇ ಚಂದನದ ಗೊಂಬೆ,
ಚೆಲುವಾದ ಗೂಂಬೆ,ಚಂದನದ ಗೊಂಬೆ,

ಬಂಗಾರದಿಂದ ಬೊಂಬೆಯನು ಮಾಡಿದ
ಚಂದಿರನ ಕಾಂತಿಯ ತನುವಲ್ಲಿ ತುಂಬಿದ,
ತಾವರೆಯ ಅಂದ ಕಣ್ಣಲ್ಲಿ ತಂದ
ಈ ಸಂಜೆ ಕೆಂಪನು ಕೆನ್ನೆಯಲಿ ತುಂಬಿದ,
ಆ ದೇವರೇ ಕಾಣಿಕೆ ನೀಡಿದಾ,ನನ್ನಾ ಜೊತೆ ಮಾಡಿದ...ಆಹಾ........ 

ಆಕಾಶದಿಂದ ಧರೆಗಿಳಿದ ರಂಭೆ, 
ಆಕಾಶದಿಂದ ಧರೆಗಿಳಿದ ರಂಭೆ,
ಇವಳೇ ಇವಳೇ ಚಂದನದ ಗೊಂಬೆ,
ಇವಳೇ ಇವಳೇ ಚಂದನದ ಗೊಂಬೆ,
ಚೆಲುವಾದ ಗೊಂಬೆ,ಚಂದನದ ಗೊಂಬೆ,
ನಡೆವಾಗ ನಿನ್ನಾ,ಮೈ ಮಾಟವೇನು,
ಆ ಹೆಜ್ಜೆ ನಾದಕೆ ಮೈ ಮರೆತು ಹೋದೆನು
ಕಣ್ಣಲ್ಲೇ ನೂರು ಹೊಂಗನಸು ಕಂಡೆನು
ಆ ಕನಸಿನಲ್ಲಿ ನಾ ಕರಗಿ ಹೋದೆನು,
ಆ ಹೂನಗೆ ಕಂಡೆನು,ಸೋತೆನು,ನಿನ್ನಾ ಸೆರೆಯಾದೆನು...ಆಹಾ........

ಆಕಾಶದಿಂದ ಧರೆಗಿಳಿದ ರಂಭೆ, 
ಆಕಾಶದಿಂದ ಧರೆಗಿಳಿದ ರಂಭೆ,
ಇವಳೇ ಇವಳೇ ಚಂದನದ ಗೊಂಬೆ,
ಇವಳೇ ಇವಳೇ ಚಂದನದ ಗೊಂಬೆ,
ಚೆಲುವಾದ ಗೊಂಬೆ,ಚಂದನದ ಗೊಂಬೆ,....
ಚಂದನದ ಗೊಂಬೆ,...ಚಂದನದ ಗೊಂಬೆ,.....ಚಂದನದ ಗೊಂಬೆ, 

*********************************************************************************

ಮನೆಯನು ಬೆಳಗಿದೆ ಇಂದು

ಸಾಹಿತ್ಯ: ಚಿ. ಉದಯಶಂಕರ್  

ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ


ಮನೆಯನು ಬೆಳಗಿದೆ ಇಂದು ನೀ ಬಂದು ಸುಖ ತಂದು
ಮನೆಯನು ಬೆಳಗಿದೆ ಇಂದು ನೀ ಬಂದು ಸುಖ ತಂದು
ಕಣ್ಣಲಿ ಕಲೆತೆ ಉಸಿರಲಿ ಬೆರೆತೆ ನೀನು ನನ್ನಲ್ಲೇ ಸೇರಿ ಹೋದೆ
ಮನವನು ತುಂಬಿದೆ ಇಂದು ನೀ ಬಂದು ಹಿತ ತಂದು
ಕಣ್ಣಲಿ ಕಲೆತೆ ಉಸಿರಲಿ ಬೆರೆತೆ ನೀನು ನನ್ನಲ್ಲೇ ಸೇರಿ ಹೋದೆ
ಮನೆಯನು ಬೆಳಗಿದೆ ಇಂದು ನೀ ಬಂದು ಸುಖ ತಂದು
ಬೇರೆ ಏನೂ ಬೇಡದ ಹಾಗೆ ಮೋಡಿಯ ನೀ ಮಾಡಿದೆ
ಈ ನಿನ್ನ ಚೆಲುವ ಈ ನನ್ನ ಒಲವ ಸವಿಯಲ್ಲಿ ಕರಗಿ ಹೋದೆ
ಬೇರೆ ಏನೂ ಕಾಣದ ಹಾಗೆ ಮಾಯವ ನೀ ಮಾಡಿದೆ
ಈ ನಿನ್ನ ರೂಪ ನನ್ನೆದೆಯ ದೀಪ ಆದಂದೆ ಸೋತು ಹೋದೆ
ನಾನಂದೇ ಸೋತು ಹೋದೆ
ಮನವನು ತುಂಬಿದೆ ಇಂದು ನೀ ಬಂದು ಹಿತ ತಂದು
ಕಣ್ಣಲಿ ಕಲೆತೆ ಉಸಿರಲಿ ಬೆರೆತೆ ನೀನು ನನ್ನಲ್ಲೇ ಸೇರಿ ಹೋದೆ
ಮನವನು ತುಂಬಿದೆ ಇಂದು ನೀ ಬಂದು ಹಿತ ತಂದು
ನೂರು ಜನುಮ ಮಾಡಿದ ಪುಣ್ಯ ನಿನ್ನನು ನಾ ಹೊಂದಿದೆ
ನೀ ನೀಡಿ ಹರುಷ ನೂರಾರು ವರುಷ ಬದುಕುವ ಬಯಕೆ ತಂದೆ
ನೋಡಿ ನೋಡಿ ತಣಿಯದೇ ಮನವು ದಣಿಯದೇ ಹಾಡಿ ಕುಣಿದಿದೆ
ಬಾಳೆಲ್ಲ ಹೀಗೆ ಬಳಿಯಲ್ಲೆ ಇರುವ ಹೊನ್ನಾಸೆ ನೀನು ತಂದೆ
ನೀ ನನ್ನ ಜೀವವಾದೆ
ಮನೆಯನು ಬೆಳಗಿದೆ ಇಂದು ನೀ ಬಂದು ಸುಖ ತಂದು
ಕಣ್ಣಲಿ ಕಲೆತೆ ಉಸಿರಲಿ ಬೆರೆತೆ ನೀನು ನನ್ನಲ್ಲೇ ಸೇರಿ ಹೋದೆ
ಮನವನು ತುಂಬಿದೆ ಇಂದು ನೀ ಬಂದು ಹಿತ ತಂದು

*********************************************************************************

No comments:

Post a Comment