Sunday, March 31, 2019

ನಾ ಮೆಚ್ಚಿದ ಹುಡುಗ (1972)

ಬೆಳದಿಂಗಳಿನಾ ನೊರೆ ಹಾಲು

ಚಲನ ಚಿತ್ರ: ನಾ ಮೆಚ್ಚಿದ ಹುಡುಗ (1972)
ನಿರ್ದೇಶನ: ಆರ್. ಎನ್. ಜಯಗೋಪಾಲ್ 
ಸಂಗೀತ: ವಿಜಯಭಾಸ್ಕರ್
ಸಾಹಿತ್ಯ: ಆರ್.ಎನ್.ಜಯಗೋಪಾಲ್  
ಗಾಯಕರು: ಎಸ್.ಜಾನಕಿ ಮತ್ತು ಪಿ.ಬಿ.ಶ್ರೀನಿವಾಸ್  
ನಟನೆ: ಶ್ರೀನಾಥ್, ಕಲ್ಪನಾ, ಕೆ. ಎಸ್. ಅಶ್ವಥ್
   

ಬೆಳದಿಂಗಳಿನಾ ನೊರೆ ಹಾಲು ಕೊಡದಲಿ ತುಂಬಿ ತಂದವಳೇ 
ಹೊಳೆಯುವ ತಾರೆಯ ಹೊಂಬೆಳಕೂ ಕಣ್ಣಲಿ ಸೂಸಿ ನಿಂದವಳೇ 
ಬಾ ಬಾರೆ  ಬಾ ಬಾರೆ ಓ ಗೆಳತೀ ಜೀವನ ಸಂಗಾತಿ.... 

ಮಲ್ಲಿಗೆ ಹಂಬಿನ ತೋಟದಲೀ ತಂಬೆಲರಂತೆ ಬಂದವನೇ 
ಅರಿಯದ ಹೆಣ್ಣಿನ ಹೃದಯದಲೀ ಸುಮಧುರ ನೋವನು ತಂದವನೇ 
ಬಾ ಬಾರೋ  ಬಾ ಬಾರೋ ಓ ಗೆಳೆಯಾ ಜೀವನ ಸಂಗಾತಿ...  ....||ಪಲ್ಲವಿ||   

ವಸಂತ ಕಾಲದ ಪ್ರಥಮ ಕುಸುಮವೋ ಪ್ರೇಮಪಲ್ಲವಿಯೋ ||೨|| 
ಅನುರಾಗಾಮೃತ ಝರಿಯಲಿ ಮಿಂದಾ ಚಲುವ ಚೆನ್ನಿಗನೋ 
ಹೂವಿನ ತೇರಲಿ ಮೆರೆಯುತ ಬಂದಾ ದೇವಕನ್ನಿಕೆಯೋ....||ಮಲ್ಲಿಗೆ ಹಂಬಿನ ತೋಟದಲೀ||   

ಆಸೆಗಳೆಂಬ ಕಾರಂಜಿಗಳೂ ಹೊಮ್ಮುವ ನಂದನವೋ||೨|| 
ನಿನ್ನಾ ಕಿರುನಗೆಯೆಂಬ ಹೂವುಗಳಿಂದ ನಲಿಯುವ ಹೂಬನವೋ 
ಪ್ರಣಯಿಗಳಾ ಮಧುರವಿಹಾರವೋ ಪ್ರೇಮಕಾಶ್ಮೀರವೋ  ....||ಬೆಳದಿಂಗಳಿನಾ ನೊರೆಹಾಲು|| 

******************************************************************************** 

ಮಂಗಳದಾ ಈ ಸುದಿನ

ಸಾಹಿತ್ಯ: ಆರ್.ಎನ್.ಜಯಗೋಪಾಲ್  
ಗಾಯಕರು: ಎಸ್.ಜಾನಕಿ  

ಆ....ಆ...... 

ಮಂಗಳದಾ ಈ ಸುದಿನ ಮಧುರವಾಗಲೀ 
ನಿಮ್ಮೊಲವೇ ಈ ಮನೆಯಾ ನಂದಾದೀಪವಾಗಲೀ..||೨||...||ಪಲ್ಲವಿ||   

ಅನುರಾಗದ ರಾಗಮಾಲೆ ನಿಮ್ಮದಾಗಲೀ 
ಅಪಸ್ವರದಾ ಛಾಯೆಯೆಂದು ಕಾಣದಾಗಲೀ..||೨|| 
ಶೃತಿಯೊಡನೇ ಸ್ವರತಾನ ಲೀನವಾಗಲೀ 
ಶುಭಗೀತೆ ಮಿಡಿಯಲೀ  ....||ಮಂಗಳದಾ||   

ತಂದೆತಾಯಿ ದಾರಿತೋರೋ ಕಣ್ಣುಗಳೆರಡೂ 
ಅವರ ಪ್ರೇಮ ದೂರವಾಗೆ ಮಕ್ಕಳು ಕುರುಡೂ..||೨|| 
ಮಮತೆ ಇರುವ ಮನೆಯೆ ಸದಾ ಜೇನಿನ ಗೂಡೂ 
ಅದೇ ಶಾಂತಿಯ ಬೀಡೂ  ....||ಮಂಗಳದಾ||

********************************************************************************

No comments:

Post a Comment