Sunday, March 24, 2019

ಹುಡುಗರು (2011)


ಶಂಭೋ ಶಿವ ಶಂಭೋ

ಚಲನಚಿತ್ರ: ಹುಡುಗರು (2011)


ಸಂಗೀತ: ವಿ. ಹರಿಕೃಷ್ಣ 
ಸಾಹಿತ್ಯ: ವಿ. ನಾಗೇಂದ್ರ ಪ್ರಸಾದ್ 
ಗಾಯನ: ಶಂಕರ್ ಮಹದೇವನ್ 
ನಿರ್ದೇಶನ:ಕೆ. ಮಾದೇಶ್ 
ನಟನೆ: ಪುನೀತ್ ರಾಜಕುಮಾರ್, ಶ್ರೀನಗರ ಕಿಟ್ಟಿ, ಯೋಗೇಶ್ 
ರಾಧಿಕಾ ಪಂಡಿತ್, ಅಭಿನಯ 


ಶಂಭೋ ಶಿವ ಶಂಭೋ... ಶಿವ ಶಿವ ಶಂಭೋ...
ಶಂಭೋ ಶಿವ ಶಂಭೋ... ಶಿವ ಶಿವ ಶಂಭೋ...
ರುದ್ರನು ಮೂರನೆ ಕಣ್ಣನೆ ಬಿಡಲಿ
ತಾಂಡವ ನಾಟ್ಯಕೆ ಪ್ರಳಯವೆ ಬರಲಿ
ಗಂಗೆಯೆ ಜಟೆಯ ಧುಮುಕಿ ಬರಲಿ
ಎದುರು ನೀ ತಿರುವು...
ನರನರದಲ್ಲೂ ಮಿಂಚುಗಳಿರಲಿ
ದಿಕ್ಕನೆ ಕದಲಿಸೊ ತೋಳ್ಬಲವಿರಲಿ
ಸ್ನೇಹಕೆ ಪ್ರಾಣ ಮುಡಿಪಾಗಿರಲಿ
ಗೆಲುವು ನಿನಗಿರಲಿ....
||ಶಂಭೋ ಶಿವ ಶಂಭೋ... ಶಿವ ಶಿವ ಶಂಭೋ...||

ನಾವೇನು ಒಂದೆ ಗರ್ಭ ಹ‍ಂಚಿಕೊಂಡೋರು ಅಲ್ಲ
ಸ್ನೇಹಾನೆ ನಮ್ಮ ತಾಯಿ, ಅಲ್ಯಾವ ಭೇದ ಇಲ್ಲ...
ನಿನಗೊಬ್ಬ ವೈರಿ ಅಂದ್ರೆ, ನನಗೂನು ವೈರಿ ಅವನು
ಹೀಗನ್ನೊ ಸ್ನೇಹ ಒಂದೆ ಬಾಳಲ್ಲಿ ಮಂತ್ರ ಇನ್ನು...
ಸಾವಿಗು ಅಂಜೋದಿಲ್ಲಾ... ಸ್ನೇಹಕೆ ಒಂದೆ ಕುಲ... ||2 ಸಲ||
ಮನಸಿದ್ರೆ ಮಾರ್ಗ ಅನ್ನೋ ಹುಡುಗರು...

|| ಶಂಭೋ ಶಿವ ಶಂಭೋ... ಶಿವ ಶಿವ ಶಂಭೋ...||

ನಗುವಾಗ ಎಲ್ಲ ನೆಂಟ, ಅಳುವಾಗ ಯಾರು ಇಲ್ಲ
ಹೆಗಲಿಗೆ ಹೆಗಲು ನೀಡೋ ಈ ಸ್ನೇಹ ಹಂಗೇನಲ್ಲ...
ಒಡಹುಟ್ಟಿದವರೂ ಕೂಡ ಬೆಳೆದಾಗ ಬೇರೆ ಬೇರೆ
ಒಡನಾಡಿ ಆದೋರೆಂದು ಆಗೋಲ್ಲ ಬೇರೆ ಬೇರೆ..
ಸ್ನೇಹಕೆ ಸ್ನೇಹ ಒಂದೆ... ಪ್ರೀತಿಗೆ ಪ್ರೀತಿ ಒಂದೆ... ||2 ಸಲ ||
ಮನಸಿದ್ರೆ ಮಾರ್ಗ ಅನ್ನೋ ಹುಡುಗರು...

ಶಂಭೋ ಶಿವ ಶಂಭೋ... ಶಿವ ಶಿವ ಶಂಭೋ...
ಶಂಭೋ ಶಿವ ಶಂಭೋ... ಶಿವ ಶಿವ ಶಂಭೋ...

ಜಗಡಂ ಜಗಡಂ... ಜಗ ಡಗ‌ ಡಂ ಡಂ....
ಜಗಡಂ ಜಗಡಂ... ಜಗ ಡಗ‌ ಡಂ ಡಂ....
ಜಗಡಂ.. ಜಗ ಡಂ ಡಂ....


********************************************************************************

ನೀರಲ್ಲಿ ಸಣ್ಣ ಅಲೆಯೊಂದು ಮೂಡಿ 

ಸಾಹಿತ್ಯ: ಜಯಂತ್ ಕಾಯ್ಕಿಣಿ 
ಗಾಯನ: ಸೋನು ನಿಗಮ್

ನೀರಲ್ಲಿ ಸಣ್ಣ ಅಲೆಯೊಂದು ಮೂಡಿ
ಚೂರಾದ ಚಂದ್ರನೀಗ....
ಇಲ್ಲೊಂದು ಚೂರು, ಅಲ್ಲೊಂದು ಚೂರು
ಒಂದಾಗಬೇಕು ಬೇಗ...
ತುಸು ದೂರ ಸುಮ್ಮನೆ ಜೊತೆಯಲ್ಲಿ ಬಂದೆಯಾ...
ನಡುವೆಲ್ಲೊ ಮೆಲ್ಲಗೆ ಮಾಯವಾದೆಯ....

ಇದ್ದಲ್ಲೆ ಆಲಿಸಬಲ್ಲೆ ನಿನ್ನೆಲ್ಲಾ ಪಿಸುಮಾತು
ನನ್ನಲ್ಲೆ ನೀನಿರುವಾಗ ಇನ್ನೇಕೆ ರುಜುವಾತು...
ನೆನಪಿನಲ್ಲೆ ನೀನೀಗ ಎಂದಿಗಿಂತ ಸನಿಹ‌
ಅಳಿಸಲಾರೆ ನಾನೆಂದು ಮನದ ಗೋಡೆ ಬರಹ...
ಸಹಿಯಾದ ಮೇಲೆ ಸಹಗೀತೆಯೊಂದು
ಮರೆಯಾಯಿತೇಕೆ ನೋಡು,
ಇಲ್ಲೊಂದು ಸಾಲು, ಅಲ್ಲೊಂದು ಸಾಲು,
ಬೆರೆತಾಗಲೇನೆ ಹಾಡು...

ದಾರೀಲಿ ಹೂಗಿಡವಿಂದು ಕಟ್ಟಿಲ್ಲ ಹೂಮಾಲೆ
ಕಣ್ಣಲ್ಲಿ ಕಣ್ಣಿಡು ನೀನು, ಮತ್ತೆಲ್ಲ ಆಮೇಲೆ...
ಕಾಣಬಲ್ಲೆ ಕನಸಲ್ಲೂ, ನಿನ್ನ ಹೆಜ್ಜೆ ಗುರುತು
ಕೇಳಬೇಡ ಇನ್ನೇನು ನೀನು ನನ್ನ ಕುರಿತು...
ಎದೆಯಾಳದಿಂದ ಮೃದು ಮೌನವೊಂದು ಕರೆವಾಗ ಜಂಟಿಯಾಗಿ,
ಇಲ್ಲೊಂದು ಜೀವ, ಅಲ್ಲೊಂದು ಜೀವ ಇರಬೇಕೆ ಒಂಟಿಯಾಗಿ....

********************************************************************************

No comments:

Post a Comment