Sunday, March 31, 2019

ಶ್ !!! (1993)



ಅವನಲ್ಲಿ, ಇವಳಿಲ್ಲಿ

ಚಲನ ಚಿತ್ರ: ಶ್ !!! (1993)
ಸಾಹಿತ್ಯ: ಉಪೇಂದ್ರ 
ಸಂಗೀತ: ಸಾಧು ಕೋಕಿಲ 
ಗಾಯನ: ಎಲ್. ಎನ್. ಶಾಸ್ತ್ರೀ 
ನಿರ್ದೇಶನ: ಉಪೇಂದ್ರ 
ನಟನೆ: ಕುಮಾರ್ ಗೋವಿಂದ್, ಕಾಶೀನಾಥ್


ಅವನಲ್ಲಿ, ಇವಳಿಲ್ಲಿ,
ಮಾತಿಲ್ಲಾ, ಕಥೆಯಿಲ್ಲ.
ಎದುರೆದುರು ಬಂದಾಗ,
ಹೆದಹೆದರಿ ನಿಂತಾಗಾ,
ಅಲ್ಲೇ ಆರಂಭ ಪ್ರೇಮ.

ಅವನಲ್ಲಿ, ಇವಳಿಲ್ಲಿ,
ಮಾತಿಲ್ಲಾ, ಕಥೆಯಿಲ್ಲ.
ಎದುರೆದುರು ಬಂದಾಗ,
ಹೆದಹೆದರಿ ನಿಂತಾಗಾ,
ಅಲ್ಲೇ ಆರಂಭ ಪ್ರೇಮ.

ಅವನಲ್ಲಿ ಇವಳಿಲ್ಲಿ,
ಮಾತಿಲ್ಲಾ, ಕಥೆಯಿಲ್ಲ.

ನೀನೆ ಎಲ್ಲಾ,
ನೀನಿರದೆ ಬಾಳೇ ಇಲ್ಲಾ,
ಅನ್ನುವುದು ಪ್ರೇಮಾ ಅಲ್ಲ.
ಮರಗಳನು ಸುತ್ತೋದಲ್ಲಾ.
ಕವನಗಳ ಗೀಚೋದಲ್ಲಾ,
ನೆತ್ತರಲಿ ಬರಿಯೋದಲ್ಲಾ,
ವಿಷವನು ಕುಡಿಯೋದಲ್ಲ
ಮೌನವೇನೆ ಧ್ಯಾನವೇ ಪ್ರೇಮಾ …..

ಅವನಲ್ಲಿ, ಇವಳಿಲ್ಲಿ,
ಮಾತಿಲ್ಲಾ, ಕಥೆಯಿಲ್ಲ.

ನೋಡಿ ನೋಡಿ ಪ್ರೇಮವನು ಮಾಡೋದಲ್ಲ.
ಮಾಡುತಲಿ ಹಾಡೋದಲ್ಲಾ,
ಹಾಡಿನಲಿ ಹೇಳೋದಲ್ಲ.
ಹೇಳುವುದ ಕೇಳೋದಲ್ಲಾ,
ಕೇಳುತಲಿ ಕಲಿಯೋದಲ್ಲಾ,
ಕಲಿತು ನೀ ಮಾಡೋದಲ್ಲಾ,
ಮೌನವೇನೆ ಧ್ಯಾನವೇ ಪ್ರೇಮಾ …..

ಅವನಲ್ಲಿ ಇವಳಿಲ್ಲಿ,
ಮಾತಿಲ್ಲಾ, ಕಥೆಯಿಲ್ಲ.
ಎದುರೆದುರು ಬಂದಾಗ,
ಹೆದಹೆದರಿ ನಿಂತಾಗಾ,
ಅಲ್ಲೇ ಆರಂಭ ಪ್ರೇಮ.
ಅವನಲ್ಲಿ ಇವಳಿಲ್ಲಿ,
ಮಾತಿಲ್ಲಾ, ಕಥೆಯಿಲ್ಲ.

*********************************************************************************

ಢವ ಢವ ನಡುಕವ

ಸಾಹಿತ್ಯ: ಉಪೇಂದ್ರ 
ಗಾಯನ: ಎಸ್.ಪಿ. ಬಾಲಸುಬ್ರಹ್ಮಣ್ಯಂ, ಮಂಜುಳಾ ಗುರುರಾಜ್ 


ಢವ ಢವ ನಡುಕವ
ಬಿಡು ನೀ ನಲ್ಲೆ
ಇರುವೆ ಇಲ್ಲೇ
ಏಕೆ ಅಂಜಿಕೆ ..
ಢವ ಢವ ನಡುಕವ ..

ರೋಜಾ ಹೂವಿನಂತ
ತುಟಿ ಇಂದು ಬೆದರಿ ಒಣಗಿದೆ
ನಾಚಿ ಅದರ ಕೆನ್ನೆ
ಏಕೆ ಇಂದು ಬಾಡಿ ಹೋಗಿದೆ
ಕಣ್ಣಿನ ಹನಿಗಳ
ಮಣ್ಣಿಗೆ ಚೆಲ್ಲದೆ
ಬಾರೆ ನೀ ಬಾಚಿಕೊ
ಹೆದರಿಕೆ ಏತಕೆ?

ಉಹು ಹೆದರಬೇಡ
ಎಂದು ನಾವು ಬೇರೆಯಾಗೆವು
ಊಹು ಭಯವು ಬೇಡ
ನಿನ್ನ ಬಿಟ್ಟು ದೂರ ಹೋಗೆನು
ನಿನಗೆ ನಾ ಬೇಲಿಯು
ಹಾಡುವೆ ಲಾಲಿಯು
ಹಾಯಾಗಿ ಮಲಗಿಕೊ

ಢವ ಢವ ನಡುಕವ
ಬಿಡು ನೀ ನಲ್ಲೆ
ಇರುವೆ ಇಲ್ಲೇ
ಏಕೆ ಅಂಜಿಕೆ ..
ಮಲಗಿಕೊ ಮಲಗಿಕೊ
hmmm... hmmm...
ಆಹಾಹಹ... ಆಹಾಹಹ...
ಲಲಲಲ.. hmmm...
*********************************************************************************

No comments:

Post a Comment