Friday, August 31, 2018

ಅಮೃತ ಘಳಿಗೆ (1984)


ಹಿಂದೂಸ್ಥಾನವು ಎಂದೂ

ಚಲನಚಿತ್ರ: ಅಮೃತ ಘಳಿಗೆ (1984) 
ಸಾಹಿತ್ಯ: ವಿಜಯ ನಾರಸಿಂಹ 
ಸಂಗೀತ: ವಿಜಯ ಭಾಸ್ಕರ್ 
ಗಾಯನ: ಬಿ. ಆರ್. ಛಾಯಾ  
ನಿರ್ದೇಶನ: ಪುಟ್ಟಣ್ಣ ಕಣಗಾಲ್ 
ನಟನೆ: ರಾಮಕೃಷ್ಣ, ಪದ್ಮ ವಾಸಂತಿ, ಶ್ರೀಧರ್ 



ಲಾ ಲಾ ಲ್ಲಲ್ಲಲ್ಲಾ ಲಾ ಲಾ ಲ್ಲಲ್ಲಲ್ಲಾ  
ಹೂಂಹೂಂಹೂಂ  ಹೂಂಹೂಂಹೂಂ

ಹಿಂದೂಸ್ಥಾನವು ಎಂದೂ ಮರೆಯದ ಭಾರತ ರತ್ನವು ಜನ್ಮಿಸಲಿ
ಹಿಂದೂಸ್ಥಾನವು ಎಂದೂ ಮರೆಯದ ಭಾರತ ರತ್ನವು ಜನ್ಮಿಸಲಿ
ಈ ಕನ್ನಡ ಮಾತೆಯ ಮಡಿಲಲ್ಲಿ ಈ ಕನ್ನಡ ನುಡಿಯ ಗುಡಿಯಲ್ಲಿ
ಹಿಂದೂಸ್ಥಾನವು ಎಂದೂ ಮರೆಯದ ಭಾರತ ರತ್ನವು ಜನ್ಮಿಸಲಿ

ದೇಶಭಕ್ತಿಯ ಬಿಸಿಬಿಸಿ ನೆತ್ತರು ಧಮನಿ ಧಮನಿಯಲಿ ತುಂಬಿರಲಿ
ದೇಶಭಕ್ತಿಯ ಬಿಸಿಬಿಸಿ ನೆತ್ತರು ಧಮನಿ ಧಮನಿಯಲಿ ತುಂಬಿರಲಿ
ವಿಶ್ವಪ್ರೇಮದ ಶಾಂತಿ ಮಂತ್ರದ ಘೋಷವ ಎಲ್ಲೆಡೆ ಮೊಳಗಿಸಲಿ
ಸಕಲ ಧರ್ಮದ ಸತ್ವ ಸಮನ್ವಯ ತತ್ವ ಜ್ಯೋತಿಯ ಬೆಳಗಿಸಲಿ

ಹಿಂದೂಸ್ಥಾನವು ಎಂದೂ ಮರೆಯದ ಭಾರತ ರತ್ನವು ಜನ್ಮಿಸಲಿ

ಕನ್ನಡ ತಾಯಿಯ ಕೋಮಲ ಹೃದಯದ ಭವ್ಯ ಶಾಸನ ಬರೆಯಿಸಲಿ
ಕನ್ನಡ ತಾಯಿಯ ಕೋಮಲ ಹೃದಯದ ಭವ್ಯ ಶಾಸನ ಬರೆಯಿಸಲಿ
ಕನ್ನಡನಾಡಿನ ಎದೆ‍ಎದೆಯಲ್ಲೂ ಕನ್ನಡ ವಾಣಿಯ ಸ್ಥಾಪಿಸಲಿ
ಈ ಮಣ್ಣಿನ ಪುಣ್ಯದ ದಿವ್ಯಚರಿತೆಯ ಕಲ್ಲು ಕಲ್ಲಿನಲಿ ಕೆತ್ತಿಸಲಿ

ಹಿಂದೂಸ್ಥಾನವು ಎಂದೂ ಮರೆಯದ ಭಾರತ ರತ್ನವು ಜನ್ಮಿಸಲಿ
ಈ ಕನ್ನಡ ಮಾತೆಯ ಮಡಿಲಲ್ಲಿ ಈ ಕನ್ನಡ ನುಡಿಯ ಗುಡಿಯಲ್ಲಿ
ಹಿಂದೂಸ್ಥಾನವು ಎಂದೂ ಮರೆಯದ ಭಾರತ ರತ್ನವು ಜನ್ಮಿಸಲಿ
ಲಾಲಲಲಾಲ ಲ್ಲಲ್ಲ   ಲಾಲಲಲಾಲ ಲ್ಲಲ್ಲ   ಲಾಲಲಲಾಲ ಲ್ಲಲ್ಲ

********************************************************************************

ಹಿಂದೂಸ್ಥಾನವು ಎಂದೂ ಮರೆಯದ

ಸಾಹಿತ್ಯ : ವಿಜಯನಾರಸಿಂಹ 
ಗಾಯನ: ಬಿ.ಆರ್.ಛಾಯಾ 

ಹಿಂದೂಸ್ಥಾನವು ಎಂದೂ ಮರೆಯದ ಭಾರತರತ್ನವು ನೀನಾಗು
ಹಿಂದೂಸ್ಥಾನವು ಎಂದೂ ಮರೆಯದ ಭಾರತರತ್ನವು ನೀನಾಗು
ಕನ್ನಡ ಹಿರಿಮೆಯ ಮಗನಾಗು ಕನ್ನಡ ನುಡಿಯ ಸಿರಿಯಾಗು
ಹಿಂದೂಸ್ಥಾನವು ಎಂದೂ ಮರೆಯದ ಭಾರತರತ್ನವು ನೀನಾಗು

ಭಾರತ ದೇಶದ ಬಡವರ ಕಂಬನಿ ಒರೆಸುವ ನಾಯಕ ನೀನಾಗು
ಭಾರತ ದೇಶದ ಬಡವರ ಕಂಬನಿ ಒರೆಸುವ ನಾಯಕ ನೀನಾಗು
ಭಾರತೀಯರ ವಿಶ್ವಪ್ರೇಮವ ಮೆರೆಸುವ ಜ್ಞಾನಿ ನೀನಾಗು
ಭಾರತೀಯರ ಭವ್ಯ ಭವಿಷ್ಯವ ಬೆಳಗುವ ವಿಜ್ಞಾನಿ ನೀನಾಗು
ಬೆಳಗುವ ವಿಜ್ಞಾನಿ ನೀನಾಗು

ಹಿಂದೂಸ್ಥಾನವು ಎಂದೂ ಮರೆಯದ ಭಾರತರತ್ನವು ನೀನಾಗು

ಭೂಮಂಡಲದ ಹಾಹಾಕಾರವ ನೀಗುವ ಶಕ್ತಿಯು ನೀನಾಗು
ಭೂಮಂಡಲದ ಹಾಹಾಕಾರವ ನೀಗುವ ಶಕ್ತಿಯು ನೀನಾಗು
ಭಾರತ ಶಕ್ತಿಯ ದೂರಗೈಯುವ ಧೀರ ಶಿರೋಮಣಿ ನೀನಾಗು
ಬ್ರಹ್ಮಾಂಡವನೇ ಬೆಳಗುವ ಶಕ್ತಿಯ ಕಾಣುವ ಯೋಗಿಯು ನೀನಾಗು
ಕಾಣುವ ಯೋಗಿಯು ನೀನಾಗು

ಹಿಂದೂಸ್ಥಾನವು ಎಂದೂ ಮರೆಯದ ಭಾರತರತ್ನವು ನೀನಾಗು
ಕನ್ನಡ ಹಿರಿಮೆಯ ಮಗನಾಗು ಕನ್ನಡ ನುಡಿಯ ಸಿರಿಯಾಗು
ಹಿಂದೂಸ್ಥಾನವು ಎಂದೂ ಮರೆಯದ ಭಾರತರತ್ನವು ನೀನಾಗು

********************************************************************************

ಮಯೂರಿ ನಾಟ್ಯ ಮಯೂರಿ

ಸಾಹಿತ್ಯ: ವಿಜಯನಾರಸಿಂಹ, 
ಗಾಯನ : ಬಿ.ಆರ್.ಛಾಯಾ, ಎಸ್.ಪಿ.ಬಿ 

ಗಂಡು : ಮಯೂರಿ ನಾಟ್ಯ ಮಯೂರಿ (ಆ....ಆ...ಆ....ಆ....).
            ಮಯೂರಿ ನಾಟ್ಯ ಮಯೂರಿ  ಚಕೋರಿ ಚಂದ್ರ ಚಕೋರಿ
            ಮಯೂರಿ ನಾಟ್ಯ ಮಯೂರಿ ಚಕೋರಿ ಚಂದ್ರ ಚಕೋರಿ
ಗಂಡು : ಸಂಗೀತ ಸುಧೆಯಲ್ಲಿ ಮಿಯೋಣ ಬಾ  (ಆ....ಆ....)
            ಸಾಹಿತ್ಯ ಮಧುವೆಲ್ಲ ಹೀರೋಣ ಬಾ (ಆ....ಆ....)
            ಸಂಗೀತ ಸುಧೆಯಲ್ಲಿ ಮಿಯೋಣ ಬಾ
            ಸಾಹಿತ್ಯ ಮಧುವೆಲ್ಲ ಹೀರೋಣ ಬಾ ಬಾ
            ಋತುಗಾನ ಶೃತಿಯಲ್ಲಿ ಹಾಡೋಣ ಬಾ ಬಾ.
           (ಆ....ಆ....)  ಬಾ.. (ಆ....ಆ....)
          ರತಿಲೀಲೆ ಹಿತದಲ್ಲಿ ನಲಿಯೋಣ ಬಾ
          ರತಿಲೀಲೆ ಹಿತದಲ್ಲಿ ನಲಿಯೋಣ ಬಾ ಬಾ
          ಮಯೂರಿ ನಾಟ್ಯ ಮಯೂರಿ ಚಕೋರಿ ಚಂದ್ರ ಚಕೋರಿ
          ಚಕೋರಿ ಚಂದ್ರ ಚಕೋರಿ
ಗಂಡು : ಆಕಾಶಗಂಗೆಯಲಿ ಬೆಳಕಾಗಿ ಬಾ..(ಆ....ಆ....)
           ಆನಂದ ನಂದನದ ಹೂವಾಗಿ ಬಾ..(ಆ....ಆ....)
          ಆಕಾಶಗಂಗೆಯಲಿ ಬೆಳಕಾಗಿ ಬಾ
          ಆನಂದ ನಂದನದ ಹೂವಾಗಿ ಬಾ
          ಸ್ನೇಹದ ಸೀಮೆಯ ನಗುವಾಗಿ ಬಾ ಬಾ.. ಬಾ
          (ಆ....ಆ....) ಬಾ (ಆ....ಆ....)
         ಮೋಹದ ಮಂತ್ರವ ಜಪಿಸೋಣ ಬಾ
         ಮೋಹದ ಮಂತ್ರವ ಜಪಿಸೋಣ ಬಾ
         ಮಯೂರಿ ನಾಟ್ಯ ಮಯೂರಿ  ಚಕೋರಿ ಚಂದ್ರ ಚಕೋರಿ
        ಚಕೋರಿ ಚಂದ್ರ ಚಕೋರಿ
ಗಂಡು : ಅಮೃತ ಕಲಶವ ಹೊತ್ತು ಬಾ..(ಆ....ಆ....)
           ಅನುರಾಗದೌತಣವ ನೀ ನೀಡು ಬಾ..(ಆ....ಆ....)
           ಅಮೃತ ಕಲಶವ ಹೊತ್ತು ಬಾ  ಅನುರಾಗದೌತಣವ ನೀ ನೀಡು ಬಾ
           ರಸಲೋಕ ಸ್ಪೂರ್ತಿಗೆ ಕಲೆಯಾಗಿ ಬಾ ಬಾ.
           (ಆ....ಆ....) ಬಾ (ಆ....ಆ....)
           ಸುಮರಾಶಿ ಶಯ್ಯೆಯಲಿ ಮೆರೆಯೋಣ ಬಾ
           ಸುಮರಾಶಿ ಶಯ್ಯೆಯಲಿ ಮೆರೆಯೋಣ ಬಾ ಬಾ
           ಮಯೂರಿ ನಾಟ್ಯ ಮಯೂರಿ  ಚಕೋರಿ ಚಂದ್ರ ಚಕೋರಿ
           ಮಯೂರಿ (ಆ....ಆ....) ನಾಟ್ಯ ಮಯೂರಿ  (ಆ....ಆ....)
           ಚಕೋರಿ (ಆ....ಆ....) ಚಂದ್ರ ಚಕೋರಿ(ಆ....ಆ....)

********************************************************************************

ಪಾರ್ವತಿ ಪರಶಿವರ

ಸಾಹಿತ್ಯ : ವಿಜಯನಾರಸಿಂಹ   
ಗಾಯನ : ಬಿ.ಆರ್.ಛಾಯಾ, ಎಸ್.ಪಿ.ಬಿ 


ಎಸ್.ಪಿ.ಬಿ :  ಪಾರ್ವತಿ ಪರಶಿವರ ಪ್ರಣಯ ಪ್ರಸಂಗ ಶೃoಗಾರ ಧಾರೆಯ ನಾಟ್ಯರಂಗ

ಬಿ.ಆರ್.ಛಾಯಾ: ಪಾರ್ವತಿ ಪರಶಿವರ ಪ್ರಣಯ ಪ್ರಸಂಗ ಶೃoಗಾರ ಧಾರೆಯ ನಾಟ್ಯರಂಗ
ಎಸ್.ಪಿ.ಬಿ : ಕಾಮನು ಹೂಡಿದ ಹೂ ಬಾಣ  ಪರವಶವಾಯಿತು ಶಿವನ ಮನ
                ಕಾಮನು ಹೂಡಿದ ಹೂ ಬಾಣ ಪರವಶವಾಯಿತು ಶಿವನ ಮನ
                ಮನೋಹರಿ ಮಾಹೇಶ್ವರಿ ನೀನೇ ಎನ್ನ ಹೃದಯೇಶ್ವರಿ
               ಎಂದನು ಆ ಜಟಾಧಾರಿ..  ಎಂದನು ಆ ಜಟಾಧಾರಿ
ಇಬ್ಬರೂ : ಪಾರ್ವತಿ ಪರಶಿವರ ಪ್ರಣಯ ಪ್ರಸಂಗ ಶೃoಗಾರ ಧಾರೆಯ ನಾಟ್ಯರಂಗ
ಬಿ.ಆರ್.ಛಾಯಾ: ನಾಟ್ಯವಾಡಿತು ಅಂಗಾಂಗ ಬಯಸಿತು ಮನವು ಶಿವನ ಸಂಗ
                        ನಾಟ್ಯವಾಡಿತು ಅಂಗಾಂಗ (ಹುಂಹೂಂ)
                       ಬಯಸಿತು ಮನವು ಶಿವನ ಸಂಗ (ಹುಂಹೂಂ)
                       ಮನೋಹರ ಮಾಹೇಶ್ವರ ನೀನೇ ಎನ್ನ ಹೃದಯೇಶ್ವರ
                      ಎಂದಳು ಆ ರಾಜೇಶ್ವರಿ... ಎಂದಳು ಆ ರಾಜೇಶ್ವರಿ
ಇಬ್ಬರೂ : ಪಾರ್ವತಿ ಪರಶಿವರ ಪ್ರಣಯ ಪ್ರಸಂಗ ಶೃoಗಾರ ಧಾರೆಯ ನಾಟ್ಯರಂಗ
ಎಸ್.ಪಿ.ಬಿ : ಪಾರ್ವತಿ ಸ್ಪಂದನ ಪರಶಿವ ನರ್ತನ 
ಬಿ.ಆರ್.ಛಾಯಾ: ಪರಶಿವ ಸನ್ನಿಧಿ ಪಾರ್ವತಿ ಚೇತನ 
ಎಸ್.ಪಿ.ಬಿ : ಪಾರ್ವತಿ ಸ್ಪಂದನ ಪರಶಿವ ನರ್ತನ
ಬಿ.ಆರ್.ಛಾಯಾ:ಪರಶಿವ ಸನ್ನಿಧಿ ಪಾರ್ವತಿ ಚೇತನ
ಎಸ್.ಪಿ.ಬಿ : ರಾಗಾನಂದದ ಯೋಗ ವೈಭವ
ಬಿ.ಆರ್.ಛಾಯಾ: ಲೋಕವೆಲ್ಲಾ ಪರಮಾನಂದ
ಎಸ್.ಪಿ.ಬಿ : ಪ್ರೇಮವೇ ಸದಾನಂದ
ಇಬ್ಬರೂ : ಆಆಆ... ಪ್ರೇಮವೇ ಸದಾನಂದ
               ಪಾರ್ವತಿ ಪರಶಿವರ ಪ್ರಣಯ ಪ್ರಸಂಗ ಶೃoಗಾರ ಧಾರೆಯ ನಾಟ್ಯರಂಗ
               ಪಾರ್ವತಿ ಪರಶಿವರ ಪ್ರಣಯ ಪ್ರಸಂಗ  ಶೃoಗಾರ ಧಾರೆಯ ನಾಟ್ಯರಂಗ

*********************************************************************************

ಅಶ್ವಮೇಧ (1990)



ಹೃದಯ ಸಮುದ್ರ ಕಲಕಿ

ಚಲನಚಿತ್ರ: ಅಶ್ವಮೇಧ (1990) 
ಸಾಹಿತ್ಯ: ದೊಡ್ಡ ರಂಗೇಗೌಡ 
ಸಂಗೀತ: ಸಂಗೀತ ರಾಜಾ 
ಗಾಯಕರು: ಡಾ. ರಾಜ್ ಕುಮಾರ್ 
ನಟರು: ಕುಮಾರ್ ಬಂಗಾರಪ್ಪ  


ಹೃದಯ ಸಮುದ್ರ ಕಲಕಿ 
ಹೊತ್ತಿದೆ ದ್ವೇಷದ ಬೆಂಕಿ 
ರೋಶಾಗ್ನಿ ಜ್ವಾಲೆ ಉರಿದುರಿದು 
ದುಷ್ಟ ಸಂಹಾರಕೆ ಸತ್ಯ  ಜೇಂಕಾರಕೆ 
ಪ್ರಾಣ ಒತ್ತೆ ಇಟ್ಟು ಹೋರಾಡುವೆ  
ದಿಟ್ಟ ಹೆಜ್ಜೆ ಇಟ್ಟು ಯಜ್ಞ ದೀಕ್ಷೆ ತೊಟ್ಟು 
ನಡೆಸುವೆ ಅಶ್ವಮೇಧ ಅಶ್ವಮೇಧ 
ಅಶ್ವಮೇಧ ಅಶ್ವಮೇಧ  

ಸೂರ್ಯ ಚಂದ್ರರೇ ನಿನ್ನ ಕಂಗಳು 
ಗಿರಿ ಶ್ರುಂಗವೇ ನಿನ್ನ ಅಂಗವೋ 
ದಿಕ್ಪಾಲಕರೆ ನಿನ್ನ ಕಾಲ್ಗಳು 
ಮಿಂಚು ಸಿಡಿಲು ನಿನ್ನ ವೇಗವು 
ಜೀವ ಜೀವದಲಿ ಬೆರೆತು ಹೋದ 
ಭಾವ ಭಾವದಲಿ ಕರಗಿ ಹೋದ 
ಜೀವಾಶ್ವವೆ ದೂರಾದೆಯ 
ಪ್ರಾಣಾಶ್ವವೆ ಮರೆಯಾದೆಯ 
ದಿಟ್ಟ ಹೆಜ್ಜೆ ಇಟ್ಟು......  

ವಿಷ ವ್ಯೂಹವ ಕುಟ್ಟಿ ಕೆಡವಲು   
ವೀರ ಪೌರುಷ ಎತ್ತಿ ಹಿಡಿದು 
ತಕಿಟ ಧಿಂ ದಿರನ ತಕಿಟ ಧಿಂ ಧಿರನ 
ದಿರನ ದಿರನ ದಿರನ ತಕಿಟ ಧಿಂ ತನ 
ತಕಿಟ ಧಿಂ ತಕಿಟ ಧಿಂ ಧಿಂ ತನ್ 
ಚದ್ಮ ವೇಷವ ಹೊರ ಎಳೆಯಲು 
ಕ್ಷಾತ್ರ ತೇಜದ ಕತ್ತಿ ಇರಿದು 
ಗೂಡ ರಾಕ್ಷಸರ ಕೊಚ್ಚಿ ನಡೆವೆ  
ನೀತಿ ನೇಮಗಳ ಬಿತ್ತಿ ಬೆಳೆವೆ 
ಆಕಾಶವೇ ಮೇಲ್ಬೀಳಲಿ 
ಭೂತಾಯಿಯೇ ಬಾಯ್ಬಿರಿಯಲಿ 
ದಿಟ್ಟ ಹೆಜ್ಜೆ........


*********************************************************************************

ಎ.ಕೆ.47 (1999)


ಕಡಲೊ ಕಡಲೊ

ಚಲನಚಿತ್ರ: ಎ.ಕೆ.47 (1999)
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ 
ಗಾಯನ: ಹರಿಹರನ್, ಕೆ. ಎಸ್. ಚಿತ್ರಾ 
ನಿರ್ದೇಶನ: ಓಂ ಪ್ರಕಾಶ್ ರಾವ್ 
ನಟನೆ: ಶಿವರಾಜ್ ಕುಮಾರ್, ಚಾಂದಿನಿ, ಓಂಪುರಿ, ಗಿರೀಶ್ ಕಾರ್ನಾಡ್ 


ಕಡಲೊ ಕಡಲೊ ಕಣ್ ಕಡಲೋ 
ಮುಗಿಲೊ ಮುಗಿಲೊ ಮನ ಮುಗಿಲೋ 
ಕಡಲಲ್ಲೊ ಮುಗಿಲಲ್ಲೊ ನೀ ನನ್ನ ತೇಲಿಸು...
ಕಡಲಲ್ಲೊ ಮುಗಿಲಲ್ಲೊ ನೀ ನನ್ನ ಬದುಕಿಸು...
ನುಡಿ ಮುತ್ತುದುರಿಸಬೇಡ,
ಪ್ರೇಮ ಪತ್ರ ರವಾನಿಸಬೇಡ 
ನಿನ್ನ ಮುದ್ದಿನ ನಗುವೆ ಸಾಕು
ಆ ನಗುವಲಿ ಒಪ್ಪಿಗೆ ಹಾಕು 
ಅರೆ ಸಾಕು ಅರೆ ಸಾಕು ಆ ನಗುವ ಬಿಸಾಕು 

ಕಡಲೊ ಕಡಲೊ ಕಣ್ ಕಡಲೋ 
ಮುಗಿಲೊ ಮುಗಿಲೊ ಮನ ಮುಗಿಲೋ 
ಕಡಲಲ್ಲೊ ಮುಗಿಲಲ್ಲೊ ನೀ ನನ್ನ ತೇಲಿಸು...
ಕಡಲಲ್ಲೊ ಮುಗಿಲಲ್ಲೊ ನೀ ನನ್ನ ಬದುಕಿಸು...
ನುಡಿ ಮುತ್ತುದುರಿಸಬೇಡ,
ಪ್ರೇಮ ಪತ್ರ ರವಾನಿಸಬೇಡ 
ನಿನ್ನ ಮುದ್ದಿನ ನಗುವೆ ಸಾಕು
ಆ ನಗುವಲಿ ಒಪ್ಪಿಗೆ ಹಾಕು 
ಅರೆ ಸಾಕು ಅರೆ ಸಾಕು ಆ ನಗುವ ಬಿಸಾಕು 


ಮನದ ಬನದ ಒಂಟಿ ಮರದ ಆಸೆ ರೆಂಬೆಗೆ 
ಬಿಗಿದೆ ನೀನು ಸ್ನೇಹದ ಸರಪಳಿ ತೂಗುಯ್ಯಾಲೆಗೆ 
ಒಳಗೆ ಚಿಗುರು, ಹೊರಗೆ ಸಿಬಿರು ನನ್ನ ಆಸೆಗೆ 
ಆತುರ ಕಾಣೆ ಅವಸರ ಕಾಣೆ ಯಾಕೀ ಪ್ರೀತಿಗೆ 
ನಾನು ಹೆಣ್ಣೇ ಕಾಣದೇ 
ನನಗೂ ಒಂದೂ ಮನಸಿದೆ 
ತುಟಿಗಳು ಎರಡು ಭಯದಲಿ ನಿಂತು 
ಬಿಗಿಯಿತು ಬೀಗಗಳ 

ನುಡಿ ಮುತ್ತುದುರಿಸಬೇಡ,
ಪ್ರೇಮ ಪತ್ರ ರವಾನಿಸಬೇಡ 
ನಿನ್ನ ಮುದ್ದಿನ ನಗುವೆ ಸಾಕು
ಆ ನಗುವಲಿ ಒಪ್ಪಿಗೆ ಹಾಕು 
ಅರೆ ಸಾಕು ಅರೆ ಸಾಕು ಆ ನಗುವ ಬಿಸಾಕು 

ಕಡಲೊ ಕಡಲೊ ಕಣ್ ಕಡಲೋ 
ಮುಗಿಲೊ ಮುಗಿಲೊ ಮನ ಮುಗಿಲೋ 
ಕಡಲಲ್ಲೊ ಮುಗಿಲಲ್ಲೊ ನೀ ನನ್ನ ತೇಲಿಸು...
ಕಡಲಲ್ಲೊ ಮುಗಿಲಲ್ಲೊ ನೀ ನನ್ನ ಬದುಕಿಸು...


ಇಂದೋ ನಾಳೆ ನಗುವೆ ನೀನು ಅಂತ ಗೊತ್ತಿದೆ 
ನಗದೆ ಇದ್ದರೆ ನನ್ನೀ ಪ್ರಾಣ ಕೊಡಲೂ ಗೊತ್ತಿದೆ
ನಕ್ಕರೆ ಲೋಕ ನಗುವುದು ಎಂಬ ಚಿಂತೆ ನನ್ನದು 
ಎಷ್ಟೇ ಜನುಮ ಆದರು ಪಡೆಯೊ ಶಪಥ ನನ್ನದು 
ಕಡಲಿಗೆ ಎರಡೂ ತೀರವಿದೆ 
ಮುಗಿಲಿಗೆ ಕೊನೆಯೇ ಕಾಣದಿದೆ 
ಮನಸಿನ ಮುಗಿಲ ಬೆಳಗಿಸು ಒಮ್ಮೆ ನನ್ನೀ ಹಂಬಲಕೆ 

ಗೆಳತಿಯರನ್ ಕೇಳಬೇಡ, ಮೇಘದೂತರ ಕಳಿಸಲುಬೇಡ 
ನಿನ್ನ ಸಣ್ಣನೆ ನಗುವೆ ಸಾಕು ಆ ನಗುವಲಿ ಒಪ್ಪಿಗೆ ಹಾಕು 
ಅರೆ ಸಾಕು ಅರೆ ಸಾಕು ಆ ನಗುವ ಬಿಸಾಕು 

ಕಡಲೊ ಕಡಲೊ ಕಣ್ ಕಡಲೋ 
ಮುಗಿಲೊ ಮುಗಿಲೊ ಮನ ಮುಗಿಲೋ 
ಕಡಲಲ್ಲೊ ಮುಗಿಲಲ್ಲೊ ನೀ ನನ್ನ ತೇಲಿಸು...
ಕಡಲಲ್ಲೊ ಮುಗಿಲಲ್ಲೊ ನೀ ನನ್ನ ಬದುಕಿಸು...


********************************************************************************

ನಾನು ಕನ್ನಡದ ಕಂದ

ಸಾಹಿತ್ಯ: ಹಂಸಲೇಖ 
ಗಾಯನ: ಕೆ. ಜೆ. ಯೇಸುದಾಸ್ 


ಅಮ್ಮಾ... 
ನಾನು ಕನ್ನಡದ ಕಂದ
ಬಂದೆ ಶಾಂತಿಯ ಮಣ್ಣಿಂದ
ನಾನು ಕನ್ನಡದ ಕಂದ
ಬಂದೆ ಶಾಂತಿಯ ಮಣ್ಣಿಂದ
ನಮ್ಮಮ್ಮ ಕನ್ನಡತಿ
ಅವಳಮ್ಮ ಜಯ ಭಾರತಿ
ಏಕತೆಯೆ ನಮ್ಮುಸಿರು
ಸಹಬಾಳ್ವೆ ನಮ್ಮ ಒಡಲು
ನಿನ್ನ ಎದೆ ಆಳದ ಈ ಪಲ್ಲವಿ ಬಿಡೆನು
ಭಾವದ ಎದೆ ತಾಳ ಶ್ರುತಿ ತಪ್ಪಲು ಬಿಡೆನು 

ಎದೆ ಹಾಲುಂಡು ಎದೆ ಬಗೆದವರ
ಕ್ಷಮಿಸುವುದುಂಟೆ, ಬೆಳೆಸುವುದುಂಟೆ
ಬೇಲಿಗೆ ಮದ್ದು ಹಾಕದೆ ಇದ್ರೆ
ನೆರಳಿನ ಮರವು ಉಳಿಯುವುದುಂಟೆ
ಅಮ್ಮಾ... 

ನಾನು ಕನ್ನಡದ ಕಂದ
ಬಂದೆ ಶಾಂತಿಯ ಮಣ್ಣಿಂದ
ನಮ್ಮಮ್ಮ ಕನ್ನಡತಿ
ಅವಳಮ್ಮ ಜಯ ಭಾರತಿ
ಏಕತೆಯೆ ನಮ್ಮುಸಿರು
ಸಹಬಾಳ್ವೆ ನಮ್ಮ ಒಡಲು
ನಿನ್ನ ಎದೆ ಆಳದ ಈ ಪಲ್ಲವಿ ಬಿಡೆನು
ಭಾವದ ಎದೆ ತಾಳ ಶ್ರುತಿ ತಪ್ಪಲು ಬಿಡೆನು 

ಜಾತಿಗಳಿಲ್ಲ ವರ್ಣಗಳಿಲ್ಲ
ಪ್ರೀತಿ ಪತಾಕೆ ಜಯಹೆ ನಿನಗೆ
ಶಾಂತಿಯ ಧ್ವಜವೆ ಕೀರ್ತಿಯ ಭುಜವೆ
ಧರ್ಮದ ಚಕ್ರ ವಂದನೆ ನಿನಗೆ
ಅಮ್ಮಾ... 

ನಾನು ಕನ್ನಡದ ಕಂದ
ಬಂದೆ ಶಾಂತಿಯ ಮಣ್ಣಿಂದ
ನಮ್ಮಮ್ಮ ಕನ್ನಡತಿ
ಅವಳಮ್ಮ ಜಯ ಭಾರತಿ
ಏಕತೆಯೆ ನಮ್ಮುಸಿರು
ಸಹಬಾಳ್ವೆ ನಮ್ಮ ಒಡಲು
ನಿನ್ನ ಎದೆ ಆಳದ ಈ ಪಲ್ಲವಿ ಬಿಡೆನು
ಭಾವದ ಎದೆ ತಾಳ ಶ್ರುತಿ ತಪ್ಪಲು ಬಿಡೆನು 


*******************************************************************************

ಓ ಮೈ ಸನ್ 

ಸಾಹಿತ್ಯ: ಹಂಸಲೇಖ 
ಗಾಯನ: ಎಸ್. ಪಿ. ಬಾಲಸುಬ್ರಹ್ಮಣ್ಯಂ 


ಓ ಮೈ ಸನ್ 

ಅಮ್ಮನ ಆಸೆಯ ಆರತಿ ಆಗು
ಅಪ್ಪನ ಆಸೆಯ ಆಗಸವಾಗು
ಒಳ್ಳೇ ಜನರಲೊಂದಾಗೂ
ನಾಡಿನ ಒಳ್ಳೆಯ ಪ್ರಜೆಯಾಗು 
ಓ ಮೈ ಸನ್ 

ಅಮ್ಮನ ಆಸೆಯ ಆರತಿ ಆಗು
ಅಪ್ಪನ ಆಸೆಯ ಆಗಸವಾಗು
ಒಳ್ಳೇ ಜನರಲೊಂದಾಗು
ನಾಡಿನ ಒಳ್ಳೆಯ ಪ್ರಜೆಯಾಗು 

ಯಾರು ಹೆತ್ತರಯ್ಯ ಇಂತ ಕಂದನನ್ನು
ಅಂತ ಲೋಕ ಮೆಚ್ಚಬೇಕು ನಿನ್ನನ್ನು
ನಮ್ಮ ಆಶಾ ಗೋಪುರದ ಕಳಶವಾಗು
ವಿದ್ಯೆ ಎಂಬ ಖಡ್ಗ ಒಂದು ತಂದೆ ಕೊಡುಗೆ
ವಿನಯ ಎಂಬ ಅಸ್ತ್ರ ಒಂದು ತಾಯ ಕೊಡುಗೆ
ದ್ರೋಹಿ ಎಂಬ ಪಟ್ಟದಿಂದ ದೂರವಾಗು
ಕೋಪವೆ ಹಿಂಸೆಗೆ ಕಾರಣ
ಸಹನೆಯೆ ಬಾಳಿಗೆ ಭೂಷಣ
ಆವೇಶವನು ಜಯಿಸು
ಓಂ ಸಹನ ಭವತು ಜಪಿಸು 

ಓ ಮೈ ಸನ್ 
ಅಮ್ಮನ ಆಸೆಯ ಆರತಿ ಆಗು
ಅಪ್ಪನ ಆಸೆಯ ಆಗಸವಾಗು
ಒಳ್ಳೇ ಜನರಲೊಂದಾಗು
ನಾಡಿನ ಒಳ್ಳೆಯ ಪ್ರಜೆಯಾಗು 

ನಿನ್ನ ಬಾಳಿಗೊಂದು ಪುಟ್ಟ ಗುರಿಯಿರಲಿ
ಸರಳ ರೇಖೆಯಲ್ಲಿ ದಿಟ್ಟ ನಡೆಯಿರಲಿ
ಅಕ್ಕ ಪಕ್ಕ ನೋಡದಂತೆ ನೀ ಸಾಗು
ನಿನಗೆ ಮಾತ್ರವಲ್ಲ ನಿನಗಾಗೊ ನೋವು
ಪಾಲುದಾರರಯ್ಯ ನೋವಿನಲ್ಲು ನಾವು
ನೋವು ನೀಡದಂತೆ ಮುದ್ದು ಮಗನಾಗು
ಆತುರ ಪಟ್ಟರೆ ಆಪತ್ತು
ಮಾನವೆ ಸಜ್ಜನ ಸಂಪತ್ತು
ಅಹಂಕಾರವನು ತ್ಯಜಿಸು
ಓಂ ಶಾಂತಿ ಶಾಂತಿ ಜಪಿಸು 

ಓ ಮೈ ಸನ್
ಕನ್ನದ ತಾಯಿಗೆ ಆರತಿ ಆದೆ
ಭಾರತ ಮಾತೆಯ ಕೀರುತಿ ಆದೆ
ನಾಡೆ ಮೆಚ್ಚುವ ಮಗನಾದೆ
ನಮ್ಮ ಎದೆಗೆ ಹಾಲೆರೆದೆ 

ನನ್ನ ಮನೆ ನನ್ನ ಮಗ ಅಂದೆ ನಾನು
ನಮ್ಮ ನಾಡೆ ನನ್ನ ಮನೆ ಅಂದೆ ನೀನು
ನಿನ್ನ ಮನೆಯಲ್ಲಿ ನೀ ಚಿರಾಯು ಆದೆ
ಹಿಂಸೆಯನ್ನು ಸಹಿಸಬೇಕು ಅಂದೆ ನಾನು
ಸಹಿಸುವುದೆ ಅಪರಾಧ ಎಂದೆ ನೀನು
ಒಪ್ಪಿಕೊಂಡೆ ಕಿರಿಯರಿಗೆ ಗುರುವಾದೆ
ಸಾವಿರ ಎರಡು ಸಾವಿರ ವರ್ಷದ ಮಹಾ ಮನ್ವಂತರ
ಈ ಧರೆಯು ಕಾಣಲಿದೆ
ಅಲ್ಲಿ ನಿನ್ನ ಮಾತು ಫಲಿಸಲಿದೆ 

ಓ ಮೈ ಸನ್
ಕನ್ನದ ತಾಯಿಗೆ ಆರತಿ ಆದೆ
ಭಾರತ ಮಾತೆಯ ಕೀರುತಿ ಆದೆ
ನಾಡೆ ಮೆಚ್ಚುವ ಮಗನಾದೆ
ನಮ್ಮ ಎದೆಗೆ ಹಾಲೆರೆದೆ 

******************************************************************************

ಮಣ್ಣಿನ ದೋಣಿ (1992)



ಮೇಘ ಬಂತು ಮೇಘ


ಚಲನಚಿತ್ರ : ಮಣ್ಣಿನ ದೋಣಿ (1992)
ಸಾಹಿತ್ಯ: ಹಂಸಲೇಖ 
ಸಂಗೀತ: ಹಂಸಲೇಖ 
ಗಾಯನ: ರಾಜ್ ಕುಮಾರ್ 
ನಿರ್ದೇಶನ: ಎಂ. ಎಸ್.  ರಾಜಶೇಖರ್ 
ನಟಿಸಿದವರು: ಅಂಬರೀಶ್, ಸುಧಾ ರಾಣಿ 



ಮೇಘ ಬಂತು ಮೇಘ, ಮೇಘ ಬಂತು ಮೇಘ
ಮೇಘ ನೀಲಿಯ ಮೇಘ, ಮೇಘ ಮಲ್ಲಾರ ಮೇಘ
ಇರುಳು ಸರಿದು ಬೆಳಕು ಹರಿದು ಕನಸು ಮುಗಿದು
ಮನಸು ಜಿಗಿದು ಸರಿಗಮಪ ಪದನಿಸ ಸಂಚಾರದಲಿ

ರವಿಯ ರಾಶಿಯಲಿ ಹೊನ್ನ ರಶ್ಮಿಯಲಿ ಜನಿಸಿತೊಂದು ರೂಪ
ಬೆಳಕಿನ ಚೆಲುವೆ ಸುಳಿದಳು ಬಳುಕುತ ಇಳೆಗೆ ಇಳಿದಳು
ಉಷೆಯ ರಂಗಿನಲ್ಲಿ ತ್ರುಷೆಯ ನೋಟದಲಿ ರವಿಯ ಬಳಿಗೆ ಬಂದು
ಪ್ರೇಮದ ನಯನ ತೆರೆದಳು ಕಾವ್ಯದ ಒಳಗೆ ಕುಳಿತಳು
ಕಲಕಲಗೊಂಡವು ತ್ರಿಪದಿ ಪದಗಳು ಪರವಶಗೊಂಡವು ಸಕಲ ರಸಗಳು
ಇರುಳು ಸರಿದು ಬೆಳಕು ಹರಿದು ಕನಸು ಮುಗಿದು ಮನಸು ಜಿಗಿದು
ಸರಿಗಮಪ ಪದನಿಸ ಸಂಚಾರದಲಿ

ಮೇಘ ಬಂತು ಮೇಘ, ಮೇಘ ಬಂತು ಮೇಘ
ಮೇಘ ಕಾವ್ಯದ ಮೇಘ, ಕನ್ಯಾಕವನ ಮೇಘ

ನಾದ ಮಂದಿರದ ವೇದದಿಂಚರದ ಮದುವೆ ಮಂಟಪದಲಿ
ನಲಿದವು ಲಕ್ಷದಕ್ಷತೆ ಪಡೆದವು ಧಾನ್ಯ ಧನ್ಯತೆ
ಪ್ರೇಮ ಸಿಂಚನದ ಬಾಳ ಬಂಧನದ ಪ್ರೇಮ ಶಾಸ್ತ್ರದೊಳಗೆ
ನಡೆದವು ಸಪ್ತಪದಿಗಳು ಮುಗಿದವು ಸಕಲ ವಿಧಿಗಳು
ಋತುವಿನ ಪಥದಲಿ ಬಾಳ ರಥವಿದೆ
ಪಯಣವ ಸವೆಸಲು ಪ್ರೇಮ ಜೊತೆಗಿದೆ
ಇರುಳು ಸರಿದು ಬೆಳಕು ಹರಿದು ಕನಸು ಮುಗಿದು
ಮನಸು ಜಿಗಿದು ಸರಿಗಮಪ ಪದನಿಸ ಸಂಚಾರದಲಿ......

ಮೇಘ ಬಂತು ಮೇಘ, ಮೇಘ ಬಂತು ಮೇಘ
ಮೇಘ ಕಲ್ಯಾಣ ಮೇಘ, ಯೋಗಾಯೋಗದ ಮೇಘ......


*******************************************************************************

ಕಿರಿಕ್ ಪಾರ್ಟಿ (2016)


ಬೆಳಗೆದ್ದು ಯಾರ ಮುಖವ

ಚಲನಚಿತ್ರ: ಕಿರಿಕ್ ಪಾರ್ಟಿ (2016)
ಸಾಹಿತ್ಯ: ಧನಂಜಯ್ ರಂಜನ್ 
ಸಂಗೀತ: ಬಿ. ಅಜನೀಶ್ ಲೋಕನಾಥ್ 
ಗಾಯನ: ವಿಜಯ ಪ್ರಕಾಶ್, ಶ್ರುತಿ ಪ್ರಶಾಂತ್ 
ನಿರ್ದೇಶನ: ರಿಷಬ್ ಶೆಟ್ಟಿ 
ನಟನೆ: ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ, ಸಂಯುಕ್ತ ಹೆಗಡೆ 


ಬೆಳಗೆದ್ದು ಯಾರ ಮುಖವ ನಾನು ನೋಡಿದೆ 
ಅಂದಾನೋ ಅದ್ರುಷ್ಟನೋ ಮುಂದೆ ಕುಂತಿದೆ 
ನಿನ್ನೆ ಕಂಡ ಕನಸು ಬ್ಲಾಕ್ ಅಂಡ್ ವೈಟು 
ಇಂದು ಬಣ್ಣ ಆಗಿದೆ 
ನಿನ್ನ ಮೇಲೆ ಕವನ ಬರೆಯೊ ಗಮನ 
ಈಗ ತಾನೆ ಮೂಡಿದೆ 

ಕನಸಲ್ಲಿ ಅರೆರೆರೆ 
ಬಳಿಬಂದು ಅಲೆಲೆಲೆ 
ಮುದ್ದಾಡಿ ಅಯ್ಯಯ್ಯಯ್ಯೊ 
ಕಚಗುಳಿ ತಾಳಲಾರೆ 

ಕನಸಲ್ಲಿ ಅರೆರೆರೆ 
ಬಳಿಬಂದು ಅಲೆಲೆಲೆ 
ಮುದ್ದಾಡಿ ಅಯ್ಯಯ್ಯಯ್ಯೊ 
ಕಚಗುಳಿ ತಾಳಲಾರೆ 

ಪ್ರೀತಿಯಲ್ಲಿ ಹೊಸ ದಾರಿ ಕಟ್ಟುವ ಖಯಾಲಿ 
ಅಡ್ಡಾದಿಡ್ಡಿ ಹೋಗೋದು ಮಾಮೂಲಿ 
ಸನ್ನೆಯಲ್ಲೆ ಹಾಡೊಂದು ಹಾಡುವ ವಿಧಾನ 
ಕಾದು ಕೇಳೊ ಪ್ರೀತಿನೇ ಮಜಾನ 

ಬಿಡದಂತಿರೊ ಬೆಸುಗೆ 
ಸೆರೆ ಸಿಕ್ಕಿರೊ ಸಲಿಗೆ... 

ನಿನ್ನ ಸುತ್ತ ಸುಳಿಯೊ ಆಸೆಗೀಗ ಆಯಸ್ಸು ಹೆಚ್ಚಿ ಹೋಗಿದೆ 
ನಿನ್ನ ಜೊತೆ ಕಳೆಯೊ ಎಲ್ಲ ಕ್ಷಣವು ಕಲ್ಪನೆಗೂ ಮೀರಿದೆ 

ಕನಸಲ್ಲಿ ಅರೆರೆರೆ 
ಬಳಿಬಂದು ಅಲೆಲೆಲೆ 
ಮುದ್ದಾಡಿ ಅಯ್ಯಯ್ಯಯ್ಯೊ 
ಕಚಗುಳಿ ತಾಳಲಾರೆ 

ಹೈ ಸಾನ್ವಿ ಏನ್ ಇಷ್ಟೊತ್ತಿಗೆ? ಅರೆರೆರೆ 
ಓ ನಿದ್ದೆ ಬರ್ತಿಲ್ವ? ಅಲೆಲೆಲೆ 
ನಂಗು ಬರ್ತಿಲ್ಲ. ಅಯ್ಯಯ್ಯಯ್ಯೊ 
ಹೊಟ್ಟೆ ಉರಿ ತಾಳಲಾರೆ 

ಬೆಳಗೆದ್ದು ಯಾರ ಮುಖವ ನಾನು ನೋಡಿದೆ 
ಅಂದಾನೋ ಅದ್ರುಷ್ಟನೋ ಮುಂದೆ ಕುಂತಿದೆ 
ನಿನ್ನೆ ಕಂಡ ಕನಸು ಬ್ಲಾಕ್ ಅಂಡ್ ವೈಟು 
ಇಂದು ಬಣ್ಣ ಆಗಿದೆ 
ನಿನ್ನ ಮೇಲೆ ಕವನ ಬರೆಯೊ ಗಮನ 
ಈಗ ತಾನೆ ಮೂಡಿದೆ 

ಕನಸಲ್ಲಿ ಅರೆರೆರೆ 
ಬಳಿಬಂದು ಅಲೆಲೆಲೆ 
ಮುದ್ದಾಡಿ ಅಯ್ಯಯ್ಯಯ್ಯೊ 
ಕಚಗುಳಿ ತಾಳಲಾರೆ 

ಕನಸಲ್ಲಿ ಅರೆರೆರೆ 
ಬಳಿಬಂದು ಅಲೆಲೆಲೆ 
ಮುದ್ದಾಡಿ ಅಯ್ಯಯ್ಯಯ್ಯೊ 
ಕಚಗುಳಿ ತಾಳಲಾರೆ 

ಬೆಳಗೆದ್ದು ಯಾರ ಮುಖವ ನಾನು ನೋಡಿದೆ 
ಅಂದಾನೋ ಅದ್ರುಷ್ಟನೋ ಮುಂದೆ ಕುಂತಿದೆ 


*********************************************************************************


ಕಥೆಯೊಂದ ಹೇಳಿದೆ

ಸಾಹಿತ್ಯ: ರಕ್ಷಿತ್ ಶೆಟ್ಟಿ 
ಗಾಯನ: ವರುಣ್ ರಾಮಚಂದ್ರ 


ದಮ್ ದರೆ  ದಮ್ ದರೆ
ದಮ್ ದರೆ ದಮ್ ದರೆ
ದಮ್ ದಾ 

ದಮ್ ದರೆ ದಮ್
ದಮ್ ದರೆ
ದರೆ ದಮ್ ದಮ್ ದಮ್ 
ದಮ್ ದರೆ
ದಮ್ ದರೆ
ದಮ್ ದರೆ ದಮ್ ದರೆ
ದಮ್ ದಾ 
ದಮ್ ದರೆ ದಮ್
ದಮ್ ದರೆ
ದರೆ ದಮ್ ದಮ್ ದಮ್

ಕಥೆಯೊಂದ ಹೇಳಿದೆ
ಬರಿ ಗುರುತಗಳೇ ಕಾಲೇಜ್ ಅಲಿ
ಕ್ಲಾಸ್ ರೂಮಿನ ಬೆಂಚಲಿ
ಕಾರಿಡಾರ್ ವಾಲಲಿ
ಸಾಲದೆ
ಗುರುತೊಂದನು ನಾ ಗೀಚಿದೆ
ಫ್ರೆಂಡ್ ಶಿಪ್ಪಿನ ನೆಪದಲಿ

ದಮ್ ದರೆ
ದಮ್ ದರೆ
ದಮ್ ದರೆ ದಮ್ ದರೆ
ದಮ್ ದಾ 
ದಮ್ ದರೆ ದಮ್
ದಮ್ ದರೆ
ದರೆ ದಮ್ ದಮ್ ದಮ್

ಕಾಲೇಜಲ್ಲಿ ಮೊದಲೆರಡು ಕ್ಲಾಸು
ಮಾಸ್ ಬಂಕ್ ಆಗಿದೆ
ಅಟ್ಟೆಂಡೆನ್ಸ್ ಅಲ್ಲಿ ಶಾರ್ಟೇಜ್ ನಮಗೆ
ಪ್ರಾಕ್ಸಿ ಇಲ್ಲದೆ 
ಎಕ್ಸಾಮ್ಸ್ ಅಲ್ಲಿ ಸ್ಕೋರ್ ಮಾಡಿದ ಅಂಕೆ
ಮಾರ್ಕ್ಸ್ ಕಾರ್ಡ್ ನಲ್ಲಿ ಕಾಣೆ
ರೀವ್ಯಾಲ್ಸ್ ನಲ್ಲಿ ಒಂದೆರೆಡು ಪೇಪರ್
ಕ್ಲಿಯರ್ ಆಗೋದು ಗ್ಯಾರಂಟಿ ನನ್ನಾಣೇ...

ಕಾಲೇಜಲ್ಲಿ ಮೊದಲೆರಡು ಕ್ಲಾಸು
ಮಾಸ್ ಬಂಕ್ ಆಗಿದೆ
ಅಟ್ಟೆಂಡೆನ್ಸ್ ಅಲ್ಲಿ ಶಾರ್ಟೇಜ್ ನಮಗೆ
ಪ್ರಾಕ್ಸಿ ಇಲ್ಲದೆ 
ಎಕ್ಸಾಮ್ಸ್ ಅಲ್ಲಿ ಸ್ಕೋರ್ ಮಾಡಿದ ಅಂಕೆ
ಮಾರ್ಕ್ಸ್ ಕಾರ್ಡ್ ನಲ್ಲಿ ಕಾಣೆ
ರೀವ್ಯಾಲ್ಸ್ ನಲ್ಲಿ ಒಂದೆರೆಡು ಪೇಪರ್
ಕ್ಲಿಯರ್ ಆಗೋದು ಗ್ಯಾರಂಟಿ ನನ್ನಾಣೇ...

ದಮ್ ದರೆ  ದಮ್ ದರೆ
ದಮ್ ದರೆ ದಮ್ ದರೆ
ದಮ್ ದಾ 

ದಮ್ ದರೆ ದಮ್
ದಮ್ ದರೆ
ದರೆ ದಮ್ ದಮ್ ದಮ್

ಕಥೆಯೊಂದ ಹೇಳಿದೆ
ಬರಿ ಗುರುತಗಳೇ ಕಾಲೇಜ್ ಅಲಿ
ಕ್ಲಾಸ್ ರೂಮಿನ ಬೆಂಚಲಿ
ಕಾರಿಡಾರ್ ವಾಲಲಿ
ಸಾನವಿ...

ನಮ್ಮೆಲರ ಕಥೆ ಪುಟದಲಿ
ನಿನದೊಂದೆ ಹೆಸರಿದೆ 
ಫ್ರೆಂಡ್-ಶಿಪ್ ಅಲ್ಲಿ ಒಂದಿಷ್ಟು ಜಗಳ
ಕಾಮನ್ ಅಲ್ಲವೆ
ಕಾಂಪ್ರು ಮಾಡಿ ಮತ್ತರಿತುಕೊ
ಒಗ್ಗಟ್ಟಲಿ ಬಲವಿದೆ 
ಸೊಷಿಯಲ್ ಕಾಸಿಗೆ
ಒಂದೆರಡು ಸ್ಟ್ರೈಕು
ನೀನು ಮಾಡಲೆ ಬೇಕು 
ಕಾಲೆಝ್ ಲೈಫು ನಮಗೆಲ್ಲಿ ಸಾಕು
ಕ್ಯಾಂಪಸ್ ಅಲ್ಲಿ ಸೈಟ್ ಒಂದು ಬರೆದ್ ಹಾಕು

ದಮ್ ದರೆ
ದಮ್ ದರೆ
ದಮ್ ದರೆ ದಮ್ ದರೆ
ದಮ್ ದಾ
ದಮ್ ದರೆ ದಮ್
ದಮ್ ದರೆ
ದರೆ ದಮ್ ದಮ್ ದಮ್ 


********************************************************************************

ಕಾಗದದ ದೋಣಿಯಲ್ಲಿ

ಸಾಹಿತ್ಯ: ಜಯಂತ್ ಕಾಯ್ಕಿಣಿ 
ಗಾಯನ: ವಾಸುಕಿ ವೈಭವ್ 

ಕಾಗದದ ದೋಣಿಯಲ್ಲಿ ನಾ 
ಕೂರುವಂತ ಹೊತ್ತಾಯಿತೇ
ಕಾಣಿಸದ ಹನಿಯೊಂದು ಕಣ್ಣಲ್ಲೇ 
ಕೂತು ಮುತ್ತಾಯಿತೇ
ಹಗುರಾದೀತೇನೋ ನನ್ನೆದೆಯ ಭಾರ
ಕಂಡಿತೇನೋ ತಂಪಾದ ತೀರಾ
ಸಿಕ್ಕೀತೆ ಮುಂದಿನ ದಾರಿ
ನನ್ನೆಲ್ಲ ಕಲ್ಪನೆ ಮೀರಿ
ಇನ್ನೊಂದೇ ವಿಸ್ಮಯ ತೋರಿ 

ಹಾದಿಯಲಿ ಹೆಕ್ಕಿದ ನೆನಪಿನ ಪುಟ್ಟ ಜೋಳಿಗೆ ಬೆನ್ನಲ್ಲಿದೆ
ಆಡದಿರೋ ಸಾವಿರ ಪದಗಳ ಮೂಕ ಸೇತುವೆ ಕಣ್ಮುಂದಿದೆ
ಈ ಹೆಜ್ಜೆಯ ಗುರುತೆಲ್ಲವ ಅಳಿಸುತ್ತಿರೋ ಮಳೆಗಾಲವೇ
ನಾ ನಿನ್ನಯ ಮಡಿಲಲ್ಲಿರೋ ಬರಿಗಾಲಿನ ಮಗುವಾಗುವೆ
ಮನಸಾದೀತೇನೋ ಇನ್ನೂ ಉದಾರ
ಬಂದಿತೇನೋ ನನ್ನ ಬಿಡಾರ 
ಸಿಕ್ಕೀತೆ ಮುಂದಿನ ದಾರಿ
ನನ್ನೆಲ್ಲ ಕಲ್ಪನೆ ಮೀರಿ
ಇನ್ನೊಂದೇ ವಿಸ್ಮಯ ತೋರಿ


*********************************************************************************

ಆಟೋರಾಜ (1982)


ನಲಿವ ಗುಲಾಬಿ ಹೂವೆ
 

ಚಲನಚಿತ್ರ: ಆಟೋರಾಜ (1982)
ನಿರ್ದೇಶನ: ವಿಜಯ್
ಸಾಹಿತ್ಯ: ಚಿ. ಉದಯಶಂಕರ್ 
ಸಂಗೀತ: ರಾಜನ್-ನಾಗೇಂದ್ರ 
ಗಾಯನ: ಎಸ್. ಪಿ. ಬಾಲಸುಬ್ರಹ್ಮಣ್ಯಂ 
ನಟನೆ: ಶಂಕರ್ ನಾಗ್, ಗಾಯಿತ್ರಿ 



ನಲಿವ ಗುಲಾಬಿ ಹೂವೆ
ಮುಗಿಲ ಮೇಲೇರಿ ನಗುವೇ
ನಿನಗೆ ನನ್ನಲ್ಲಿ ಒಲವೋ
ಬರಿಯೇ ನನ್ನಲ್ಲಿ ಛಲವೋ....

ನಲಿವ ಗುಲಾಬಿ ಹೂವೆ
ಒಲವೋ ಛಲವೋ.....

ಸುಳಿದೆ ತಂಗಾಳಿಯಂತೆ
ನುಡಿದೆ ಸಂಗೀತದಂತೆ
ಒಲವಿನ ಬಲೆಯಲಿ ಸೆಳೆಯುತ ಕುಣಿದೆ
ಸೊಗಸಾಗಿ ಹಿತವಾಗಿ
ಮನವ ನೀ ಸೇರಲೆಂದೆ
ಬಯಕೆ ನೂರಾರು ತಂದೆ
ಬಯಸದೆ ಬಳಿಯಲಿ ಸುಳಿಯುತ ಒಲಿದೆ,
ಇಂದೇಕೆ ದೂರಾದೆ? ಹೀಗೇಕೆ ಮರೆಯಾದೆ?....


ಸುಮವೇ ನೀ ಬಾಡದಂತೆ ಬಿಸಿಲ ನೀ ನೋಡದಂತೆ
ನೆರಳಲಿ ಸುಖದಲಿ ನಗುತಿರು ಚೆಲುವೆ ಎಂದೆಂದೂ ಎಂದೆಂದೂ
ಇರು ನೀ ಹಾಯಾಗಿ ಹೀಗೆ ಇರಲಿ ನನಗೆಲ್ಲ ಬೇಗೆ
ಕನಸಲಿ ನೋಡಿದ ಸಿರಿಯನು ಮರೆವೇ ನಿನಗಾಗಿ ನನಗಾಗಿ.....

*********************************************************************************

ಹೊಸ ಬಾಳು ನಿನ್ನಿಂದ

ರಚನೆ: ಚಿ. ಉದಯಶಂಕರ್ 
ಗಾಯಕರು: ಎಸ್.ಜಾನಕಿ 


ಹೊಸ ಬಾಳು  ನಿನ್ನಿಂದ
ಹೊಸ ಬಾಳು  ನಿನ್ನಿಂದ, ನೀ ತಂದೆ ಆನಂದ
ನಿನ್ನ ನಾ ನೋಡಲು, ಹೊ, ನಿನ್ನ ನಾ ಸೇರಲು
ತನುವೂ ಹೂವಾಯ್ತು, ಮನವೂ ಜೇನಾಯ್ತು
ತನುವೂ ಹೂವಾಯ್ತು, ಮನವೂ ಜೇನಾಯ್ತು

ಹೊಸ ಬಾಳು  ನಿನ್ನಿಂದ, ನೀ ತಂದೆ ಆನಂದ
ನಿನ್ನ ನಾ ನೋಡಲು, ಹಾ, ನಿನ್ನ ನಾ ಸೇರಲು

ನಿನ್ನ ನಾ ಮೆಚ್ಚಿ, ನನ್ನ ನೀ ಮೆಚ್ಚಿ
ಪ್ರೀತಿಯಿಂದ ಮನಸು ಬಿಚ್ಚಿ ಮಾತನಾಡಿ
ನೀನೇ ನನ ಜೋಡಿ, ಎಂದು ಕೈ ನೀಡಿ ಸಂಗಾತಿ ಆದೆನು
ನಿನ್ನ ಸ್ನೇಹಕ್ಕೆ, ನಿನ್ನ ಪ್ರೇಮಕ್ಕೆ ಎಂದೊ ಸೋತುಹೋದೆ ಮುದ್ದುನಲ್ಲ
ನಿನ್ನ ಮಾತಲ್ಲಿ, ಕಣ್ಣ ಮಿಂಚಲ್ಲಿ ನೀರಾಗಿ ಹೋದೆನು, ನೀರಾಗಿ ಹೋದೆನು

ಹೊಸ ಬಾಳು  ನಿನ್ನಿಂದ, ನೀ ತಂದೆ ಆನಂದ
ನಿನ್ನ ನಾ ನೋಡಲು, ಹಾ, ನಿನ್ನ ನಾ ಸೇರಲು

ಲಾಲಾ ಲಲ ಲಾಲಾ,
ಲಾಲಾ ಲಾಲಾಲ,
ಲಾಲಾ ಲಾಲಾಲ, ಲಾಲ್ಲಾ

ಮಾತ ಒಂದಾಗಿ, ಆಸೆ ಒಂದಾಗಿ,
ನಿನ್ನ ನನ್ನ ಮನಸು ಬೆರೆತು ಹೋಗಿ
ಬಯಕೆ ಹೂವಾಗಿ, ಪ್ರೀತಿ ಹಣ್ಣಾಗಿ, ಒಂದಾಗಿ ಹೋದೆವು 

ಮಾತು ಬಂಗಾರ, ಗುಣವು ಬಂಗಾರ
ನನ್ನ ರಾಜ ನನ್ನ ಬಾಳ ಬಂಗಾರ
ನೀನು ನನ್ನಂತೆ, ನಾನು ನಿನ್ನಂತೆ,
ನೀ ನನ್ನ ಜೀವವು, ನೀ ನನ್ನ ಜೀವವು 

ಹೊಸ ಬಾಳು  ನಿನ್ನಿಂದ ಹೊಸ ಬಾಳು  ನಿನ್ನಿಂದ,
ನೀ ತಂದೆ ಆನಂದ ನಿನ್ನ ನಾ ನೋಡಲು, ಹೊ,
ನಿನ್ನ ನಾ ಸೇರಲು
ತನುವೂ ಹೂವಾಯ್ತು, ಮನವೂ ಜೇನಾಯ್ತು
ತನುವೂ ಹೂವಾಯ್ತು, ಮನವೂ ಜೇನಾಯ್ತು
ಹೊಸ ಬಾಳು  ನಿನ್ನಿಂದ, ನೀ ತಂದೆ ಆನಂದ
ನಿನ್ನ ನಾ ನೋಡಲು, ಹೊ, ನಿನ್ನ ನಾ ಸೇರಲು
ಲಲ್ಲಾ ಲಾಲಲ್ಲಾ....

*********************************************************************************

ನನ್ನ ಆಸೆ ಹಣ್ಣಾಗಿ

ಸಾಹಿತ್ಯ: ಚಿ.ಉದಯಶಂಕರ್  
ಗಾಯಕರು: ಎಸ್.ಪಿ.ಬಿ, ಎಸ್.ಜಾನಕಿ


ನನ್ನ ಆಸೆ ಹಣ್ಣಾಗಿ, ನನ್ನ ಬಾಳ ಕಣ್ಣಾದೆ
ಮನವನು ಸೇರಿದೆ, ಸಂತೋಷ ತುಂಬಿದೆ
ನನ್ನ ಆಸೆ ಹಣ್ಣಾಗಿ, ನನ್ನ ಬಾಳ ಕಣ್ಣಾದೆ
ನನ್ನ ಆಸೆ ಹಣ್ಣಾಗಿ, ನನ್ನ ಬಾಳ ಕಣ್ಣಾದೆ
ಮನವನು ಸೇರಿದೆ, ಸಂತೋಷ ತುಂಬಿದೆ
ನನ್ನ ಆಸೆ ಹಣ್ಣಾಗಿ, ನನ್ನ ಬಾಳ ಕಣ್ಣಾದೆ

ಕನಸುಗಳು ಸವಿಗನಸುಗಳು, ನಿನ್ನಿಂದ ನನಸಾಗಿದೆ
ನಿನ್ನಾ ಜೊತೆ ಸೇರಿ, ಸುಖವೇನೊ ನಾ ಕಂಡೆ ಇಂದೆ
ಮಾತುಗಳು ಸವಿಮಾತುಗಳು, ಮುತ್ತಂತೆ ಸೊಗಸಾಗಿದೆ
ನಿನ್ನಾ ಜೊತೆ ಸೇರಿ, ಒಲವೇನೊ ನಾ ಕಂಡೆ ಇಂದೆ
ಓ ಗೆಳೆಯ ನನ್ನಿನಿಯ ನಿನ್ನಾಸೆ ನನ್ನಾಸೆ ಒಂದೇನೆ ಇನ್ನೆಂದಿಗೂ

ನನ್ನ ಆಸೆ ಹಣ್ಣಾಗಿ, ನನ್ನ ಬಾಳ ಕಣ್ಣಾದೆ
ನನ್ನ ಆಸೆ ಹಣ್ಣಾಗಿ, ನನ್ನ ಬಾಳ ಕಣ್ಣಾದೆ
ಮನವನು ಸೇರಿದೆ, ಸಂತೋಷ ತುಂಬಿದೆ
ನನ್ನ ಆಸೆ ಹಣ್ಣಾಗಿ, ನನ್ನ ಬಾಳ ಕಣ್ಣಾದೆ

ಕಣ್ಣಿನಲಿ ಕಣ್ಣ ಮಿಂಚಿನಲಿ, ಈ ಜೀವ ತೇಲಾಡಿದೆ
ಹೀಗೇ ಇರುವಾಸೆ, ಹೂವಲ್ಲಿ ನಾ ದುಂಬಿಯಂತೆ
ಸ್ನೇಹದಲಿ ನಿನ್ನ ಮೋಹದಲಿ, ನನಗಿಂದು ಹಿತವಾಗಿದೆ
ಹೀಗೇ ಇರುವಾಸೆ, ಹಾಯಾಗಿ ಮರೆತೆಲ್ಲ ಚಿಂತೆ
ಓ ಗೆಳತಿ ನನ್ನರಸಿ ನೀ ನಂಬು ಎಂದೆಂದು ನಾ ನಿನ್ನ ಬಿಡಲಾರೆನು

ನನ್ನ ಆಸೆ ಹಣ್ಣಾಗಿ, ನನ್ನ ಬಾಳ ಕಣ್ಣಾದೆ
ನನ್ನ ಆಸೆ ಹಣ್ಣಾಗಿ, ನನ್ನ ಬಾಳ ಕಣ್ಣಾದೆ
ಮನವನು ಸೇರಿದೆ, ಸಂತೋಷ ತುಂಬಿದೆ


*********************************************************************************

ಬಹದ್ದೂರ್ ಗಂಡು (1976)


ಮುತ್ತಿನಂತ ಮಾತೊಂದು

ಚಲನಚಿತ್ರ: ಬಹದ್ದೂರ್ ಗಂಡು (1976)
ಸಾಹಿತ್ಯ: ಚಿ. ಉದಯಶಂಕರ್ 
ಸಂಗೀತ: ಎಂ. ರಂಗಾ ರಾವ್ 
ಗಾಯನ: ರಾಜ್ ಕುಮಾರ್ 
ನಿರ್ದೇಶನ: ಎ. ವಿ. ಶೇಷಗಿರಿ ರಾವ್ 
ನಟನೆ: ರಾಜ್ ಕುಮಾರ್, ಜಯಂತಿ, ಆರತಿ, ಬಾಲಕೃಷ್ಣ 


ಹಾಡುವಾ ದನಿಯಲ್ಲಿ ಶ್ರುತಿ ಸೇರಬೇಕು,
ನೋಡುವಾ ನೋಟದಲಿ ಹಿತ ಕಾಣಬೇಕು,
ಆಡುವಾ ಮಾತಿನಲಿ........ಪ್ರೀತಿ ಇರಬೇಕು..............
ಆ ಆಹಾ ಹಾ ಹಾ .........ಆಹಾ ಹಾ ಹಾ .........
ಆಹಾ ಹಾ ಹಾ ಹಾ .........
ಮುತ್ತಿನಂತ ಮಾತೊಂದು ಗೊತ್ತೇನಮ್ಮ,
ನಿನಗೆ ಗೊತ್ತೇನಮ್ಮ
ನಾವು ಕಾಲಕ್ಕೆ ತಕ್ಕಂತೆ ನಡೆಯಬೇಕು,
ಎಂದು ತಾಳಕ್ಕೆ ತಕ್ಕಂತೆ ಕುಣಿಯಬೇಕು,
ಮುತ್ತಿನಂತ ಮಾತೊಂದು ಗೊತ್ತೇನಮ್ಮ,
ನಿನಗೆ ಗೊತ್ತೇನಮ್ಮ
ನಾವು ಕಾಲಕ್ಕೆ ತಕ್ಕಂತೆ ನಡೆಯಬೇಕು,
ಎಂದು ತಾಳಕ್ಕೆ ತಕ್ಕಂತೆ ಕುಣಿಯಬೇಕು,

ಸಿರಿತನವೆಂದು ಶಾಶ್ವತವಲ್ಲ,
ಬಡ ಜನರೆಂದು ಪ್ರಾಣಿಗಳಲ್ಲ,
ದೇವರ ಆಟ ಬಲ್ಲವರಿಲ್ಲ,
ಬಾಳಿನ ಮರ್ಮ ಅರಿತವರಿಲ್ಲಾ,
ನಿನ್ನೆ ತನಕ ಹಾಯಾಗಿ ಸುಪ್ಪೋತಿಗೆ.........ಪಾಪ,
ಇಂದು ಮಣ್ಣೇ ಗತಿಯಾಯ್ತು ಈ ಮೈಯಿಗೆ,
ನಿನ್ನೆ ತನಕ ಹಾಯಾಗಿ ಸುಪ್ಪೋತಿಗೆ,
ಇಂದು ಮಣ್ಣೇ ಗತಿಯಾಯ್ತು ಈ ಮೈಯಿಗೆ
ಎಂದು ಆಳಾಗ ಬಲ್ಲವನೇ ಅರಸಾಗುವ 
ಒಳ್ಳೆ ಅರಸಾಗುವ ಹೇ ............

ಮುತ್ತಿನಂತ ಮಾತೊಂದು ಗೊತ್ತೇನಮ್ಮ,
ನಿನಗೆ ಗೊತ್ತೇನಮ್ಮ
ನಾವು ಕಾಲಕ್ಕೆ ತಕ್ಕಂತೆ ನಡೆಯಬೇಕು,
ಎಂದು ತಾಳಕ್ಕೆ ತಕ್ಕಂತೆ ಕುಣಿಯಬೇಕು,

ಕಪ್ಪನೆ ಮೋಡ ಕರಗಲೇ ಬೇಕು 
ಆಗಸದಿಂದ ಇಳಿಯಲೇ ಬೇಕು,
ಕಪ್ಪನೆ ಮೋಡ ಕರಗಲೇ ಬೇಕು 
ಆಗಸದಿಂದ ಇಳಿಯಲೇ ಬೇಕು,
ಕೋಟೆ ಕಟ್ಟಿ ಮೆರೆದೊರೆಲ್ಲ ಏನಾದರು ......ಏನು,
ಮೀಸೆ ತಿರುವಿ ಕುಣಿದೊರೆಲ್ಲ ಮಣ್ಣಾದರು,
ಕೋಟೆ ಕಟ್ಟಿ ಮೆರೆದೊರೆಲ್ಲ ಏನಾದರು,
ಮೀಸೆ ತಿರುವಿ ಕುಣಿದೊರೆಲ್ಲ ಮಣ್ಣಾದರು,
ಇನ್ನು ನೀನ್ಯಾವ ಲೆಕ್ಕ ಹೇಳೇ ಸುಕುಮಾರಿಯೇ,
ಅಯ್ಯೋ ಹೆಮ್ಮಾರಿಯೇ ಹೇ ......

ಮುತ್ತಿನಂತ ಮಾತೊಂದು ಗೊತ್ತೇನಮ್ಮ,
ನಿನಗೆ ಗೊತ್ತೇನಮ್ಮ
ನಾವು ಕಾಲಕ್ಕೆ ತಕ್ಕಂತೆ ನಡೆಯಬೇಕು,
ಎಂದು ತಾಳಕ್ಕೆ ತಕ್ಕಂತೆ ಕುಣಿಯಬೇಕು,
ಶ್ರೀಮಂತಿಕೆಯು ಮೆರೆಯಲು ಅಲ್ಲಾ,
ರಾಜಕುಮಾರಿ ದೇವತೆಯಲ್ಲ ,
ಶ್ರೀಮಂತಿಕೆಯು ಮೆರೆಯಲು ಅಲ್ಲಾ,
ರಾಜಕುಮಾರಿ ದೇವತೆಯಲ್ಲ ,
ಹಸಿವು ನಿದ್ದೆ ,ಕೋಪ ತಾಪ,ನಿನಗೂ ಇದೆ ........ಹಾನ್,
ನಿನ್ನಂತೆ ರೋಷ ,ದ್ವೇಷ ನಮಗೂ ಇದೆ,
ಹಸಿವು ನಿದ್ದೆ ,ಕೋಪ ತಾಪ,ನಿನಗೂ ಇದೆ,
ನಿನ್ನಂತೆ ರೋಷ ,ದ್ವೇಷ ನಮಗೂ ಇದೆ,
ಈ ನಿಜವನ್ನು ಅರಿತಾಗ ಹೆಣ್ಣಾ ಗುವೇ ,
ಇಲ್ಲ ಮಣ್ಣುತಿನ್ನುವೆ ಹೇ...........

ಮುತ್ತಿನಂತ ಮಾತೊಂದು ಗೊತ್ತೇನಮ್ಮ,
ನಿನಗೆ ಗೊತ್ತೇನಮ್ಮ
ನಾವು ಕಾಲಕ್ಕೆ ತಕ್ಕಂತೆ ನಡೆಯಬೇಕು,
ಎಂದು ತಾಳಕ್ಕೆ ತಕ್ಕಂತೆ ಕುಣಿಯಬೇಕು


********************************************************************************

ಮಾನವನಾಗುವೆಯಾ

ಸಾಹಿತ್ಯ: ಚಿ.ಉದಯ ಶಂಕರ್  
ಗಾಯಕರು: ಡಾ. ರಾಜಕುಮಾರ್  


ಮಾನವನಾಗುವೆಯಾ ಇಲ್ಲಾ ದಾನವನಾಗುವೆಯಾ
ನೀ ಮಾನವ ಕುಲಕೆ ಮುಳ್ಳಾಗುವೆಯಾ
ಮಾನವನಾಗುವೆಯಾ ಇಲ್ಲಾ ದಾನವನಾಗುವೆಯಾ
ನೀ ಮಾನವ ಕುಲಕೆ ಮುಳ್ಳಾಗುವೆಯಾ
ಹೇಳು ನೀ ಹೇಳು ಹೇಳು ನೀ ಹೇಳು 

ಎಲ್ಲಾ ಗುಣಗಳು ನಿನ್ನಲೇ ಅಡಗಿ ಕಾಳಗ ಮಾಡುತಿವೆ........
ಎಲ್ಲಾ ಗುಣಗಳು ನಿನ್ನಲೇ ಅಡಗಿ ಕಾಳಗ ಮಾಡುತಿವೆ
ಮನ ತುಂಬಿರುವ ಶಾಂತಿಯ ನುಂಗಿ ಕೊನೆಯನು ನೋಡುತಿವೆ
ರೋಷವಾ ಬಿಡುವೆಯಾ,ದ್ವೇಷವಾ ಮರೆವೆಯಾ,
ರೋಷವಾ ಬಿಡುವೆಯಾ,ದ್ವೇಷವಾ ಮರೆವೆಯಾ,
ರಕ್ಕಸನಾ ವಿಷ ಗಾಳಿಯ ನುಂಗದೆ,ಬದುಕಿ ಎಲ್ಲರಾ ಉಳಿಸುವೆಯಾ,
ಬದುಕಿ ಎಲ್ಲರಾ ಉಳಿಸುವೆಯಾ ................ 

ಮಾನವನಾಗುವೆಯಾ ಇಲ್ಲಾ ದಾನವನಾಗುವೆಯಾ
ನೀ ಮಾನವ ಕುಲಕೆ ಮುಳ್ಳಾಗುವೆಯಾ ಹೇಳು
ನೀ ಹೇಳು ಹೇಳು ನೀ ಹೇಳು 

ಧನ ಕನಕಗಳಾ ಕೇಳುವುದಿಲ್ಲಾ ಸ್ನೇಹದ ಹವ್ಯಾಸಾ,
ಧನ ಕನಕಗಳಾ ಕೇಳುವುದಿಲ್ಲಾ ಸ್ನೇಹದ ಹವ್ಯಾಸಾ,
ನಿನ್ನಭಿಮಾನವಾ ಕೆಣಕುವುದಿಲ್ಲ,ಪ್ರೇಮದ ಸಂತೋಷ
ಅಂದದಾ ತುಟಿಯಲಿ ಹುಸಿನಗೆ ತೇಲಲಿ,
ಅಂದದಾ ತುಟಿಯಲಿ ಹುಸಿನಗೆ ತೇಲಲಿ
ಅಕ್ಕರೆ ನುಡಿಯ,ಸಕ್ಕರೆ ರುಚಿಯಾ, ನೀಡಿ ಎಲ್ಲರಾ ಗೆಲ್ಲುವೆಯಾ,
ನೀನು ಎಲ್ಲರಾ ಗೆಲ್ಲುವೆಯಾ, 

ಮಾನವನಾಗುವೆಯಾ ಇಲ್ಲಾ ದಾನವನಾಗುವೆಯಾ
ನೀ ಮಾನವ ಕುಲಕೆ ಮುಳ್ಳಾಗುವೆಯಾ
ಹೇಳು ನೀ ಹೇಳು ಹೇಳು ನೀ ಹೇಳು


********************************************************************************

ಅಭಯ್ (2009)

ಚಲನಚಿತ್ರ: ಅಭಯ್ (2009)
ಸಾಹಿತ್ಯ: ಜಯಂತ್ ಕಾಯ್ಕಿಣಿ 
ಸಂಗೀತ: ವಿ. ಹರಿಕೃಷ್ಣ 
ಗಾಯನ: ಸುನೀತಾ ಗೋಪರಾಜು 
ನಿರ್ದೇಶನ: ಮಹೇಶ್ ಬಾಬು 
ನಟರು: ದರ್ಶನ್, ಆರತಿ ಠಾಕೂರ್ 


ಬಾನು ಕೆಂಪಾದಂತೆ ಗಾಳಿ ಇಂಪಾದಂತೆ
ತಾಜಾ ಅನುರಾಗ ಶುರುವಾಗುವ ಲಕ್ಷಣವೇ
ನೀನು ನೆನಪಾದಂತೆ ಜೀವ ನವಿರಾದಂತೆ
ತಾಜಾ ಅನುರಾಗ ಶುರುವಾಗುವ ಲಕ್ಷಣವೇ
ಅತಿಯಾಗಿ ಸುಳಿವಂತ ಹಿತವಾಗಿ ಕಾಡುವಂತ
ಆತಂಕವಾದಿಯೇ ನಿನಗಾಗಿ ಕಾಯುವೆ 

ಕಳೆದು ಹೋದೆ ನೋಡು ಹೇಗೆ ನಿನ್ನ ಧ್ಯಾನದಲ್ಲಿ ನಾನು
ಕನಸಿನಲ್ಲಿ ನನ್ನ ಹೀಗೆ ಎಳೆದುಕೊಂಡು ಹೋಗು ನೀನು
ಒಂದು ಚೂರೆ ಕಾಯಿಸು, ಬಂದು ಚೆಂದಗಾಣಿಸು
ಮಿತಿಮೀರಿ ಹಚ್ಚಿಕೊಂಡು ಬಲವಾಗಿ ಮೆಚ್ಚಿಕೊಂಡು
ಮನಸೊಂದೆ ಆದಮೇಲೆ ಮರೆಯಾಗಿ ದೂರ....
ಇರಲಾರೆ ಇರಲಾರೆ

ಒಂದೆ ಮಾತು ನೂರು ಬಾರಿ ಹೇಳಬೇಕು ಎಂಬ ಆಸೆ
ಆದರು ಸಾಲದಾಗಿ ಹೋಯಿತೀಗ ನನ್ನ ಭಾಷೆ
ಮೌನ ಕೂಡ ಮಲ್ಲಿಗೆ ಸೋಕಿದಾಗ ಮೆಲ್ಲಗೆ
ಹೊಸ ರೆಕ್ಕೆ ಮೂಡಿ ಬಂತು ಹೃದಯಕ್ಕೆ ಈಗ ತಾನೇ
ಜೊತೆಯಲ್ಲೇ ಇಂದು ನಿನ್ನ ಖುಷಿಯಾಗಿ ಹಾರಿ.....
ಬರಲೇನು ಬರಲೇನು

ಬಾನು ಕೆಂಪಾದಂತೆ ಗಾಳಿ ಇಂಪಾದಂತೆ
ತಾಜಾ ಅನುರಾಗ ಶುರುವಾಗಿದೆ ಈ ಕ್ಷಣವೇ
ಅತಿಯಾಗಿ ಸುಳಿವಂತ ಹಿತವಾಗಿ ಕಾಡುವಂತ
ಆತಂಕವಾದಿಯೇ ನಿನಗಾಗಿ ಕಾಯುವೆ.....

********************************************************************************

ಆಕ್ಸಿಡೆಂಟ್ (2008)

ಚಲನಚಿತ್ರ: ಆಕ್ಸಿಡೆಂಟ್ (2008)
ಸಾಹಿತ್ಯ: ಬಿ.ಆರ್. ಲಕ್ಷ್ಮಣ ರಾವ್
ಸಂಗೀತ: ರಿಕ್ಕಿ ಕೇಜ್
ನಿರ್ದೇಶನ: ರಮೇಶ್ ಅರವಿಂದ್
ಗಾಯನ: ಸೋನು ನಿಗಮ್ 
ನಟರು: ರಮೇಶ್, ರೇಖಾ ಮತ್ತು ಇತರರು


ಬಾ ಮಳೆಯೇ ಬಾ, ಬಾ ಮಳೆಯೇ ಬಾ
ಅಷ್ಟು ಬಿರುಸಾಗಿ ಬಾರದಿರು
ನನ್ನ ನಲ್ಲೆ ಬರಲಾರದಂತೆ
ಅವಳಿಲ್ಲಿ ಬಂದೊಡನೆ ಬಿಡದೆ ಬಿರುಸಾಗಿಸು
ನೀ ಹಿಂತಿರುಗಿ ಹೋಗದಂತೆ
ಹಿಂತಿರುಗಿ ಹೋಗದಂತೆ ಬಿಡದೆ ಬಿರುಸಾಗಿಸು ನೀ...

ಓಡು ಕಾಲವೇ ಓಡು ಬೇಗ ಕವಿಯಲಿ ಇರುಳು
ಓಡು ಕಾಲವೇ ಓಡು ಬೇಗ ಕವಿಯಲಿ ಇರುಳು
ಕಾದಿಹಳು ಅಬಿಸಾರಿಕೆ ಅವಳಿಲ್ಲಿ ಬಂದೊಡನೆ
ನಿಲ್ಲು ಕಾಲವೇ ನಿಲ್ಲು ಒಮ್ಮತಕೆ ಸಡಿಲಾಗದಂತೆ
ಬೀರು ದೀಪವೆ ಬೀರು ನಿನ್ನ ಹೊಂಬೆಳಕಲ್ಲಿ
ಬೀರು ದೀಪವೆ ಬೀರು ನಿನ್ನ ಹೊಂಬೆಳಕಲ್ಲಿ
ನೋಡುವೆನು ನಲ್ಲೆ ರೂಪ,
ಆರು ಬೇಗಲೇ ಆರು ಶೃಂಗಾರ ಛಾಯೆಯಲ್ಲಿ
ನಾಚಿ ನೀರಾಗದಂತೆ

ಬಾ ಮಳೆಯೇ ಬಾ..... 


********************************************************************************

ಬಯಲುದಾರಿ (1976)




ಎಲ್ಲಿರುವೆ ಮನವ ಕಾಡುವ

ಚಲನಚಿತ್ರ: ಬಯಲುದಾರಿ (1976)
ಸಾಹಿತ್ಯ: ಚಿ. ಉದಯಶಂಕರ್ 
ಸಂಗೀತ: ರಾಜನ್-ನಾಗೇಂದ್ರ 
ಗಾಯನ: ಎಸ್. ಪಿ. ಬಾಲಸುಬ್ರಹ್ಮಣ್ಯಂ 
ನಿರ್ದೇಶನ: ದೊರೈ ಭಗವಾನ್  
ನಟನೆ: ಅನಂತ್ ನಾಗ್, ಕಲ್ಪನಾ 

ಎಲ್ಲಿರುವೆ ಮನವ ಕಾಡುವ ರೂಪಸಿಯೆ
ಬಯಕೆಯ ಬಳ್ಳಿಯ ನಗುವ ಹೂವಾದ ಪ್ರೇಯಸಿಯೆ!
ಬಯಕೆಯ ಬಳ್ಳಿಯ ನಗುವ ಹೂವಾದ ಪ್ರೇಯಸಿ ನೀನು 
ಎಲ್ಲಿರುವೆ..ಮನವ ಕಾಡುವ ರೂಪಸಿಯೆ

ತೇಲುವ ಈ ಮೊಡದ ಮೇಲೆ ನೀ ನಿಂತ ಹಾಗಿದೆ
ನಸು ನಗುತ ನಲಿ ನಲಿದು ನನ್ನ ಕೂಗಿದಂತಿದೆ
ಸೇರುವ ಬಾ ಆಗಸದಲ್ಲಿ ಎಂದು ಹೇಳಿದಂತಿದೆ
ತನುವೆಲ್ಲ ಹಗುರಾಗಿ ತೇಲಾಡುವಂತಿದೆ! ಹಾಡುವಂತಿದೆ
ಚೆಲುವೇ ಎಲ್ಲಿರುವೆ ಮನವ ಕಾಡುವ ರೂಪಸಿಯೆ
ಬಯಕೆಯ ಬಳ್ಳಿಯ ನಗುವ ಹೂವಾದ ಪ್ರೇಯಸಿಯೆ!
ಬಯಕೆಯ ಬಳ್ಳಿಯ ನಗುವ ಹೂವಾದ ಪ್ರೇಯಸಿ ನೀನು 
ಎಲ್ಲಿರುವೆ..ಮನವ ಕಾಡುವ ರೂಪಸಿಯೆ

ಕಣ್ಣಲ್ಲೆ ಒಲವಿನ ಗೀತೆ ನೀನು ಹಾಡಿದಂತಿದೆ
ನಿನ್ನಾಸೆ ಅತಿಯಾಗಿ ತೂರಾಡುವಂತಿದೆ
ಹಗಲಲ್ಲು ಚಂದ್ರನ ಕಾಣೊ ಭಾಗ್ಯ ನನ್ನದಾಗಿದೆ
ಚಂದ್ರಿಕೆಯ ಚೆಲುವಿಂದ ಬಾಳು ಭವ್ಯವಾಗಿದೆ! ಭವ್ಯವಾಗಿದೆ
ನಲ್ಲೆ ಎಲ್ಲಿರುವೆ ಮನವ ಕಾಡುವ ರೂಪಸಿಯೆ
ಬಯಕೆಯ ಬಳ್ಳಿಯ ನಗುವ ಹೂವಾದ ಪ್ರೇಯಸಿಯೆ!
ಬಯಕೆಯ ಬಳ್ಳಿಯ ನಗುವ ಹೂವಾದ ಪ್ರೇಯಸಿ ನೀನು ಎಲ್ಲಿರುವೆ..
ಮನವ ಕಾಡುವ ರೂಪಸಿಯೆ
ಲಲ್ಲಲಾ ಲಾಲಾಲ ಲಲ್ಲಲ್ಲಲಾ ಆಹಾಹ ಹ್ಹಾಹ್ಹಹ್ಹಹ್ಹಹಾ 

********************************************************************************

ಬಾನಲ್ಲು ನೀನೇ ಭುವಿಯಲ್ಲು ನೀನೆ

ಸಾಹಿತ್ಯ : ಚಿ|| ಉದಯಶಂಕರ್  
ಗಾಯನ : ಎಸ್.ಜಾನಕಿ 

ಬಾನಲ್ಲು ನೀನೇ ಭುವಿಯಲ್ಲು ನೀನೆ 
ಬಾನಲ್ಲು ನೀನೇ ಭುವಿಯಲ್ಲು ನೀನೆ 
ಎಲ್ಲೆಲು ನೀನೇ ನನ್ನಲ್ಲು ನೀನೇ
ಬಾನಲ್ಲು ನೀನೇ ಭುವಿಯಲ್ಲು ನೀನೆ 

ಹೂವಲ್ಲಿ ನಿನ್ನ ಮೊಗವನ್ನು ಕಂಡೆ 
ಮೊಗದಲ್ಲಿ ನಿನ್ನ ಹೂ ನಗೆಯ ಕಂಡೆ
ನಗುವಲ್ಲಿ ನಿನ್ನ ಚೆಲುವನ್ನು ಕಂಡೆ 
ಚೆಲುವಲ್ಲಿ ನಿನ್ನ ಒಲವನ್ನು ಕಂಡೆ
ಒಲವಿಂದ ಬಾಳ ಹೊಸ ದಾರಿ ಕಂಡೆ
ಮುಗಿಲಲ್ಲು ನೀನೇ ಮನದಲ್ಲು ನೀನೇ 
ಮುಗಿಲಲ್ಲೂ ನೀನೇ ಮನದಲ್ಲೂ ನೀನೇ
ಎಲ್ಲೆಲು ನೀನೇ ನನ್ನಲ್ಲು ನೀನೇ 

ಬಾನಲ್ಲು ನೀನೇ ಭುವಿಯಲ್ಲು ನೀನೆ
ಆಹಾಹಾ..ಆಆಆಆ ಆಆಆ ... 

ಬಿರುಗಾಳಿ ಬೀಸಿ ಎದುರಾದರೇನು 
ಭೂಕಂಪವಾಗಿ ನೆಲ ಬಿರಿದರೇನು
ಕಡಲೆಲ್ಲ ಹೊಮ್ಮಿ ಬಳಿ ಬಂದರೇನು 
ಮಳೆಯಂತೆ ಬೆಂಕಿ ಧರೆಗಿಳಿದರೇನು
ಜತೆಯಿರಲು ನೀನು ಭಯಪಡೆನು ನಾನು
ರವಿಯಲ್ಲು ನೀನೇ ಶಶಿಯಲ್ಲು ನೀನೇ
ರವಿಯಲ್ಲು ನೀನೇ ಶಶಿಯಲ್ಲು ನೀನೇ 
ಎಲ್ಲೆಲು ನೀನೇ ನನ್ನಲ್ಲು ನೀನೇ  

ಬಾನಲ್ಲು ನೀನೇ ಭುವಿಯಲ್ಲು ನೀನೆ 
ಲಲಲ್ಲಾಲ  ಲಲಲ್ಲಾಲ  ಲಲಲ್ಲಾಲ  

*********************************************************************************

ಕನಸಲೂ ನೀನೇ

ಸಾಹಿತ್ಯ : ಚಿ|| ಉದಯಶಂಕರ್
ಗಾಯನ : ಎಸ್.ಪಿ.ಬಾಲಸುಬ್ರಮಣ್ಯಂ


ಗಂಡು : ಕನಸಲು ನೀನೇ ಮನಸಲು ನೀನೇ 
            ಕನಸಲು ನೀನೇ ಮನಸಲು ನೀನೇ ನನ್ನಾಣೆ ನಿನ್ನಾಣೆ
            ನನ್ನಾಣೆ ನಿನ್ನಾಣೆ ಒಲಿದ ನಿನ್ನ ಬಿಡೆನು ಚಿನ್ನ 
            ಇನ್ನೂ ಎಂದೆಂದಿಗು ನಿನ್ನನೆಂದೆಂದಿಗೂ
             ಕನಸಲು ನೀನೇ ಮನಸಲು ನೀನೇ ನನ್ನಾಣೆ ನಿನ್ನಾಣೆ
            ನನ್ನಾಣೆ ನಿನ್ನಾಣೆ 
ಗಂಡು : ಮೌನವು ಚೆನ್ನ ಮಾತಲು ಚೆನ್ನ ನಗುವಾಗ ನೀನಿನ್ನು ಚೆನ್ನ
            ನೊಡಲು ಚೆನ್ನ ಕಾಡಲು ಚೆನ್ನ ನಿನಗಿಂತ ಯಾರಿಲ್ಲ ಚೆನ್ನ
ಹೆಣ್ಣು : ಸ್ನೇಹಕೆ ಸೋತೆ ಮೋಹಕೆ ಸೋತೆ ಕಂಡಂದೆ ನಾ ಸೊತು ಹೊದೆ
           ಮಾತಿಗೆ ಸೋತೆ ಪ್ರೀತಿಗೆ ಸೋತೆ ಸೋಲಲ್ಲು ಗೆಲುವನ್ನೆ ಕಂಡೆ
ಗಂಡು : ಸೋಲಲ್ಲು ಗೆಲುವನ್ನೆ ಕಂಡೆ
ಹೆಣ್ಣು : ಕನಸಲು ನೀನೇ ಮನಸಲು ನೀನೇ ನನ್ನಾಣೆ ನಿನ್ನಾಣೆ
          ನನ್ನಾಣೆ ನಿನ್ನಾಣೆ
ಗಂಡು : ಒಲಿದ ನಿನ್ನ ಬಿಡೆನು ಚಿನ್ನ ಇನ್ನೂ ಎಂದೆಂದಿಗು ನಿನ್ನನೆಂದೆಂದಿಗೂ
           ಕನಸಲು ನೀನೇ ಮನಸಲು ನೀನೇ ನನ್ನಾಣೆ ನಿನ್ನಾಣೆ
          ನನ್ನಾಣೆ ನಿನ್ನಾಣೆ
ಹೆಣ್ಣು : ದೇವರೇ ಬಂದು ಬೇಡಿಕೋ ಎಂದೂ ಕಣ್ಣ್ಮುಂದೆ ನಿಂತಾಗ ನಾನು 
          ಬೇಡೇನು ಏನೂ ನೀನಿರುವಾಗ ಹೊಸ ಆಸೇ ನನಗೇಕೆ ಇನ್ನೂ 

ಗಂಡು : ಸೂರ್ಯನ ಆಣೆ ಚಂದ್ರನ ಆಣೆ ಎದೆಯಲ್ಲಿ ನೀನಿಂತೆ ಜಾಣೆ
           ಪ್ರಾಣವು ನೀನೆ ದೇಹವು ನಾನೆ ಈ ತಾಯಿ ಕಾವೇರಿ ಆಣೆ
ಹೆಣ್ಣು : ಈ ತಾಯಿ ಕಾವೇರಿ ಆಣೆ
ಗಂಡು : ಕನಸಲು ನೀನೇ ಮನಸಲು ನೀನೇ ನನ್ನಾಣೆ ನಿನ್ನಾಣೆ
           ನನ್ನಾಣೆ ನಿನ್ನಾಣೆ
ಹೆಣ್ಣು : ಒಲಿದ ನಿನ್ನ ಬಿಡೆನು ಚಿನ್ನ ಇಂದು ಎಂದೆಂದಿಗು ನಿನ್ನನೆಂದೆಂದಿಗೂ
          ನಿನ್ನನೆಂದೆಂದಿಗೂ
ಗಂಡು : ಕನಸಲು ನೀನೇ   ಹೆಣ್ಣು : ಮನಸಲು ನೀನೇ 
ಗಂಡು : ನಿನ್ನಾಣೆ              ಹೆಣ್ಣು : ನಿನ್ನಾಣೆ
ಗಂಡು : ನಿನ್ನಾಣೆ              ಹೆಣ್ಣು : ನಿನ್ನಾಣೆ
ಹೆಣ್ಣು : ಆಹ್ಹಾಹಾ .. ಆಹ್ಹಾಹಾ .. ಆಹ್ಹಾಹಾ .. ಆಹ್ಹಾಹಾ .. 

********************************************************************************

ಬಾನಲ್ಲು ನೀನೇ ಭುವಿಯಲ್ಲು ನೀನೆ (ದುಃಖದ ಹಾಡು)


ಸಾಹಿತ್ಯ : ಚಿ|| ಉದಯಶಂಕರ್  
ಗಾಯನ : ಎಸ್.ಜಾನಕಿ 

ಬಾನಲ್ಲು ನೀನೇ ಭುವಿಯಲ್ಲು ನೀನೆ 
ಬಾನಲ್ಲು ನೀನೇ ಭುವಿಯಲ್ಲು ನೀನೆ 
ಎಲ್ಲೆಲು ನೀನೇ ನನ್ನಲ್ಲು ನೀನೇ
ಬಾನಲ್ಲು ನೀನೇ ಭುವಿಯಲ್ಲು ನೀನೆ

ಬರಿದಾದ ನನ್ನ ಬಾಳಲ್ಲಿ ಬಂದೇ 
ಬಾಳಲ್ಲಿ ಬಂದು ಸಂತೋಷ ತಂದೇ 
ಸಂತೋಷ ತಂದು ಮರೆಯಾಗಿ ಹೋದೆ 
ಮರೆಯಾಗಿ ಹೋಗಿ ಹೂವಾಗಿ ಬಂದೇ 
ಹೂವಾಗಿ ಬಂದು ಮಡಿಲಲ್ಲಿ ನಿಂದೇ 
ಮುಗಿಲಲ್ಲಿ ನೀನೇ ಮನದಾಗೇ ನೀನೇ 
ಮುಗಿಲಲ್ಲೂ ನೀನೇ ಮನದಲ್ಲೂ ನೀನೇ 
ಎಲ್ಲೆಲು ನೀನೇ ನನ್ನಲ್ಲು ನೀನೇ 
ಬಾನಲ್ಲು ನೀನೇ ಭುವಿಯಲ್ಲು ನೀನೆ 
ಆಆಆಆ... ಆಆಆಅ.... ಆಆಆ... 

ನನ್ನಿಂದ ನೀನೂ ದೂರಾಗಿ ಹೋದೆ 
ಬೇರಾಗಿ ಹೋಗಿ ಕಣ್ಣೀರು ತಂದೆ 
ಕಣ್ಣೀರನ್ನೇ ನಾ ಕರಗಿ ಹೋದೆ 
ನಾ ಕರಗಿ ಹೋಗಿ ಒಲವಲ್ಲಿ ಬಂದೆ 
ಈ ಬಯಲುದಾರಿಯ ಲತೆಯಾಗಿ ನಿಂದೆ 
ನೋವಲ್ಲೂ ನೀನೇ ನಗುವಲ್ಲೂ ನೀನೇ 
ನೋವಲ್ಲೂ ನೀನೇ ನಗುವಲ್ಲೂ ನೀನೇ 
ಎಲ್ಲೆಲು ನೀನೇ ನನ್ನಲ್ಲು ನೀನೇ 
ಬಾನಲ್ಲು ನೀನೇ ಭುವಿಯಲ್ಲು ನೀನೆ 

ಲಾಲಲಲಲ ಲಾಲಾಲಲಾ ಲಲಲಲ ಲಾಲಾಲ 

********************************************************************************

ಪ್ರೇಮದ ಕಾಣಿಕೆ (1976)



ಬಾನಿಗೊಂದು ಎಲ್ಲೆ ಎಲ್ಲಿದೆ 

ಚಲನಚಿತ್ರ: ಪ್ರೇಮದ ಕಾಣಿಕೆ (1976)
ಸಾಹಿತ್ಯ: ಚಿ. ಉದಯಶಂಕರ್ 
ಸಂಗೀತ: ಉಪೇಂದ್ರಕುಮಾರ್ 
ಗಾಯನ: ರಾಜ್ ಕುಮಾರ್  
ನಿರ್ದೇಶನ: ವಿ. ಸೋಮಶೇಖರ್ 
ನಟರು: ರಾಜ್ ಕುಮಾರ್, ಆರತಿ   


ಬಾನಿಗೊಂದು ಎಲ್ಲೆ ಎಲ್ಲಿದೆ
ನಿನ್ನಾಸೆಗೆಲ್ಲಿ ಕೊನೆಯಿದೆ
ಏಕೆ ಕನಸು ಕಾಣುವೆ
ನಿಧಾನಿಸು ನಿಧಾನಿಸು

ಆಸೆಯೆಂಬ ಬಿಸಿಲು ಕುದುರೆ ಏಕೆ ಏರುವೆ
ಮರಳುಗಾಡಿನಲ್ಲಿ ಸುಮ್ಮನೇಕೆ ಅಲೆಯುವೆ
ಅವನ ನಿಯಮ ಮೀರಿ ಇಲ್ಲಿ ಏನು ಸಾಗದು
ನಾವು ನೆನೆಸಿದಂತೆ ಬಾಳಲೇನು ನಡೆಯದು
ವಿಷಾದವಾಗಲಿ ವಿನೋದವಾಗಲಿ
ಅದೇನೇ ಆಗಲಿ ಅವನೇ ಕಾರಣ....

ಹುಟ್ಟು ಸಾವು ಬಾಳಿನಲ್ಲಿ ಎರಡು ಕೊನೆಗಳು
ಬಯಸಿದಾಗ ಕಾಣದಿರುವ ಎರಡು ಮುಖಗಳು
ಹರುಷವೊಂದೆ ಯಾರಿಗುಂಟು ಹೇಳು ಜಗದಲಿ
ಹೂವು ಮುಳ್ಳು ಎರಡು ಉಂಟು ಬಾಳ ಲತೆಯಲಿ
ದುರಾಸೆ ಏತಕೆ ನಿರಾಸೆ ಏತಕೆ
ಅದೇನೇ ಬಂದರು ಅವನ ಕಾಣಿಕೆ......

*******************************************************************************

ಇದು ಯಾರು ಬರೆದ

ಸಾಹಿತ್ಯ: ಚಿ. ಉದಯಶಂಕರ್ 
ಗಾಯನ: ಡಾ. ರಾಜ್ ಕುಮಾರ್ 


ಇದು ಯಾರು ಬರೆದ ಕಥೆಯೊ
ನನಗಾಗಿ ಬಂದ ವ್ಯಥೆಯೊ
ಕೊನೆ ಹೇಗೋ ಅರಿಯಲಾರೆ
ಮರೆಯಾಗಿ ಹೋಗಲಾರೆ

ಕಾಣದಿಹ ಕೈಯೊಂದು ಸೂತ್ರ ಹಿಡಿದಿದೆ
ಆಡಿಸಿದೆ ಕಾಡಿಸಿದೆ ಅಳಿಸಿ ನಗುತಿದೆ
ಬರಿ ಕನಸಾಯ್ತು ಸುಖ ಶಾಂತಿಯೆಲ್ಲ
ಇನ್ನು ಬದುಕೇಕೆ ಕಾಣೆನಲ್ಲ.....

ಹಾವ ಕಂಡ ಮೂಗನಂತೆ ಕೂಗಲಾರದೆ
ಕಾಡಿನೊಳು ನಿಂತಿಹೆ ದಾರಿ ಕಾಣದೆ
ಜೊತೆಯಾರಿಲ್ಲ ನಾ ಒಂಟಿಯಾದೆ
ನಗುವಿನ್ನೆಲ್ಲಿ ಸೋತುಹೋದೆ......

*********************************************************************************

ನಾ ಬಿಡಲಾರೆ ಎಂದೂ

ಸಾಹಿತ್ಯ: ವಿಜಯನಾರಸಿಂಹ 

ಗಾಯಕರು: ರಾಜ್‌ಕುಮಾರ್, ವಾಣಿ ಜಯರಾಮ್


ನಾ ಬಿಡಲಾರೆ ಎಂದೂ ನಿನ್ನ ನೀನಾದೆ ನನ್ನೀ ಪ್ರಾಣ
ದೂರಾಗಿ ಹೋದರೆ ನೀನು ನಾನೆಂದೂ ಬಾಳೆನು
ನಾ ಬಿಡಲಾರೆ ಎಂದೂ ನಿನ್ನ ನೀನಾದೆ ನನ್ನೀ ಪ್ರಾಣ
ದೂರಾಗಿ ಹೋದರೆ ನೀನು ನಾನೆಂದೂ ಬಾಳೆನು

ಓ, ನಾ ಸೂರ್ಯಕಾಂತಿಯಂತೆ 
ನೀ ಸೂರ್ಯ ದೇವನಂತೆ
ನಾ ನಿನ್ನ ಬಾಳ ಜೋಡಿ  
ನೀನೆ ನನ್ನ ಜೀವನಾಡಿ

ಬಿಡಲಾರೆ ಎಂದೂ ನಿನ್ನ ನೀನಾದೆ ನನ್ನೀ ಪ್ರಾಣ
ದೂರಾಗಿ ಹೋದರೆ ನೀನು ನಾನೆಂದೂ ಬಾಳೆನು

ನಾನೆ ರಾಗ ನೀನೆ ಭಾವ ಎಂದೆಂದೂ
ನಾನೆ ದೇಹ ನೀನೆ ಪ್ರಾಣ ಇನ್ನೆಂದೂ
ನಾನೆ ಕಣ್ಣು ನೀನೆ ನೋಟ ಎಂದೆಂದೂ
ನಾನೆ ಜ್ಯೋತಿ ನೀನೆ ಕಾಂತಿ ಇನ್ನೆಂದೂ
ಬಾಳೆಂಬ ದೋಣಿ ಏರಿ, ಸಂತೋಷ ಎಲ್ಲೆ ಮೀರಿ
ಇಲ್ಲಿಂದ ದೂರ ಸಾಗಿ ಪ್ರೇಮ ಲೋಕ ಸೇರುವ

ಬಿಡಲಾರೆ ಎಂದೂ ನಿನ್ನ ನೀನಾದೆ ನನ್ನೀ ಪ್ರಾಣ
ದೂರಾಗಿ ಹೋದರೆ ನೀನು  ನಾನೆಂದೂ ಬಾಳೆನು

ಆಹಾ ಮೈಮಾಟವು ಈ ಸವಿನೋಟವು
ಜೀವ ಕವಲಾಗಿ ಮೈತುಂಬೋ ಈ ಅಂದವು
ಬಂತು ಇಂತ ಅಂದ ಚೆಂದ ನಿನ್ನ ಪ್ರೇಮದಿಂದ
ನಾಳೆ ನಮ್ಮ ಲಾಲಿ ಹಾಡು ಕೇಳೊ ಕಂದ ಚೆಂದ
ಇನ್ನು ನೀ ತಂದ ಸುಖಕಿಂತ ಬೇರೆ ಭಾಗ್ಯಕಾಣೆನಲ್ಲ

ಬಿಡಲಾರೆ ಎಂದೂ ನಿನ್ನ ನೀನಾದೆ ನನ್ನೀ ಪ್ರಾಣ
ದೂರಾಗಿ ಹೋದರೆ ನೀನು ನಾನೆಂದೂ ಬಾಳೆನು

ನಂದಾದೀಪ ತಂದೆ ನೀನು ತಾಯಾಗಿ
ಕಂದ ಬಂದ ಕಾಂತಿ ತಂದ ತಂಪಾಗಿ
ನಿನ್ನ ಸ್ನೇಹ ತಂದ ಭಾಗ್ಯ ಹಾಯಾಗಿ
ಬಂತು ನನ್ನ ಮಡಿಲ ತುಂಬೋ ಹೂವಾಗಿ
ಸಂಸಾರ ಸ್ವರ್ಗವಾಗಿ ಶೃಂಗಾರ ಕಾವ್ಯವಾಗಿ
ಒಂದಾಗಿ ಕೂಡಿ ನಾವು ಬಾಳ ಗೀತೆ ಹಾಡುವ
ಬಿಡಲಾರೆ ಎಂದೂ ನಿನ್ನ  ನೀನಾದೆ ನನ್ನೀ ಪ್ರಾಣ
ದೂರಾಗಿ ಹೋದರೆ ನೀನು  ನಾನೆಂದೂ ಬಾಳೆನು

********************************************************************************

ನಗುವೆಯಾ ಹೆಣ್ಣೇ

ಸಾಹಿತ್ಯ: ವಿಜಯನಾರಸಿಂಹ 

ಗಾಯಕರು: ಡಾ.ರಾಜ್‌ಕುಮಾರ್, ಹೆಚ್.ಪಿ.ಗೀತಾ


ನಗುವೆಯಾ ಹೆಣ್ಣೇ ನಾನು ಜಾರಿ ಬೀಳುವಾಗ
ಅರಿತೆಯಾ ಕಲಿಯುವ ದಾರಿ ಈಗ
ಸಹಜವು ನಡೆವನು ಎಡವುವುದು
ಸಹಜವು ಜಾರೋನು ಉರುಳೋದು
ಇನ್ನೆಂದೂ ಹಿರಿಯರ ಈ ಹೊನ್ನ 
ನುಡಿಯ ಮರೆಯ ಬೇಡವೆ

ನಗುವೆಯಾ ಹೆಣ್ಣೇ ನಾನು ಜಾರಿ ಬೀಳುವಾಗ
ಅರಿತೆಯಾ ಕಲಿಯುವ ದಾರಿ ಈಗ

ತಿಳಿಸಿದೆ ನೀತಿಯ ನುಡಿಗಳನು
ಕಲಿಸಿದೆ ನಡೆಯುವ ರೀತಿಯನು
ಎಂದೆಂದೂ ನಾ ನಿನ್ನ ಈ ಜಾಣ ನುಡಿಯ ಮರೆತು ಬಾಳೆನು
ಚೆಲುವೆಯೆ ನೀ ಜಾಣೆ ಮುತ್ತಂತ ಮಾತಾಡಿ ಮನಕೆ ಆನಂದ ತಂದೆ
ಚೆಲುವೆಯೆ ನೀ ಜಾಣೆ ಮುತ್ತಂತ ಮಾತಾಡಿ ಮನಕೆ ಆನಂದ ತಂದೆ
ರಸಿಕನೆ ಸಾಕಿನ್ನು ಹೊಗಳಿಕೆ ಏಕಿನ್ನು
ನಿನಗೆ ನಾ ಸೋತು ಹೋದೆ  
ನಿನಗೆ ನಾ ಸೋತು ಹೋದೆ
ನಗುವೆಯಾ, ನಗುವೆಯಾ

ಬಯಸದೆ ನೀ ಬಂದೆ ನೂರಾಸೆಯ ತಂದೆ ಮರೆವೆನೆ ಇನ್ನು ನಿನ್ನ
ಬಯಸದೆ ನೀ ಬಂದೆ ನೂರಾಸೆಯ ತಂದೆ  ಮರೆವೆನೆ ಇನ್ನು ನಿನ್ನ
ಬಯಕೆಯ ಹೂವಾದೆ ಒಲವಿನ ಜೇನಾದೆ  ಬಿಡುವೆನೆ ನಾನು ನಿನ್ನ
ಬಿಡುವೆನೆ ನಾನು ನಿನ್ನ

ನಗುವೆಯಾ ಹೆಣ್ಣೇ ನಾನು ಜಾರಿ ಬೀಳುವಾಗ
ಅರಿತೆಯಾ ಕಲಿಯುವ ದಾರಿ ಈಗ
ಸಹಜವು ನಡೆವನು ಎಡವುವುದು
ಸಹಜವು ಜಾರೋನು ಉರುಳೋದು
ಇನ್ನೆಂದೂ ಹಿರಿಯರ ಈ ಹೊನ್ನ 
ನುಡಿಯ ಮರೆಯ ಬೇಡವೆ
ನಗುವೆಯಾ ಹೆಣ್ಣೇ ನಾನು ಜಾರಿ ಬೀಳುವಾಗ
ಅರಿತೆಯಾ ಕಲಿಯುವ ದಾರಿ ಈಗ

********************************************************************************

ಚಿನ್ನ ಎಂದು ನಗುತಿರು

ರಚನೆ: ಚಿ. ಉದಯಶಂಕರ್   
ಗಾಯಕರು: ಪಿ. ಬಿ. ಶ್ರೀನಿವಾಸ್ 


ಚಿನ್ನ ಎಂದು ನಗುತಿರು ನನ್ನ ಸಂಗ  ಬಿಡದಿರು...
ಚಿನ್ನ ಎಂದು ನಗುತಿರು ನನ್ನ ಸಂಗ  ಬಿಡದಿರು... 
ಸರಸದ ಸಮಯದಿ ಸದಾ ವಿರಸವೇನು
ಚಿನ್ನ ಎಂದು ನಗುತಿರು ನನ್ನ ಸಂಗ ಬಿಡದಿರು

ಸ್ನೇಹವ ತೋರು ಎಲ್ಲರ ಸೇರು 
ಸ್ನೇಹವ ತೋರು ಎಲ್ಲರ ಸೇರು 
ದಿನವೂ ಸಂತೋಷದಿ ನಲಿನಲಿದಾಡು
ದಿನವೂ ಸಂತೋಷದಿ ನಲಿನಲಿದಾಡು
ನೂರಾರು ವರುಷ ಕಂದ ಸುಖದಿ ಬಾಳು
ಚಿನ್ನ ಎಂದು ನಗುತಿರು ನನ್ನ ಸಂಗ ಬಿಡದಿರು

ಯಾರಲೊ ಕೋಪ ಯಾರಿಗೊ ತಾಪ ।
ಯಾರಲೊ ಕೋಪ ಯಾರಿಗೊ ತಾಪ
ದಿನವೂ ಇದೇನಿದು ಈ ಪರಿತಾಪ
ದಿನವೂ ಇದೇನಿದು ಈ ಪರಿತಾಪ
ನೀ ತಾಯಿಯಂತೆ ಬಿಡು ಇನ್ನು ಚಿಂತೆ

ಚಿನ್ನ ಎಂದು ನಗುತಿರು ನನ್ನ ಸಂಗ ಬಿಡದಿರು
ಸರಸದ ಸಮಯದಿ ಸದಾ ವಿರಸವೇನು
ಚಿನ್ನ ಎಂದು ನಗುತಿರು ನನ್ನ ಸಂಗ  ಬಿಡದಿರು

********************************************************************************

ಪುಟ್ಟ ಪುಟ್ಟ

ರಚನೆ: ಚಿ. ಉದಯಶಂಕರ್   

ಗಾಯಕರು: ಎಸ.ಜಾನಕಿ


ಪುಟ್ಟ ಪುಟ್ಟ ಹೆಜ್ಜೆ ಇಟ್ಟು, 
ಹಿಂದೆ ನೋಡಿ ಕಣ್ಣು ಬಿಟ್ಟು 
ಒಡೋದೇಕೆ ಕೈ ಕೊಟ್ಟು, 
ನಿಲ್ಲು ಅಲ್ಲೇ ಕೋಪ ಬಿಟ್ಟು 
ಶೋಭಾ..   ಶೋಭಾ..

ತಾವರೆ ಹೂವು ಮೀರಿದ ಚಂದ 
ತಾವರೆ ಹೂವು ಮೀರಿದ ಚಂದ 
ತೇಲುವ ಮೋಡ ಬಾನಿಗೆ ಚಂದ 
ಕಂದನ ನಗು ಬಾಳಿಗೆ ಚಂದ 
ಹರುಷದಿ ಕುಣಿಯದೇ ನಲಿಯದೇ 
ನನ್ನ ಚಿನ್ನ ಏನಿದೆ 

ಪುಟ್ಟ ಪುಟ್ಟ ಹೆಜ್ಜೆ ಇಟ್ಟು, 
ಹಿಂದೆ ನೋಡಿ ಕಣ್ಣು ಬಿಟ್ಟು 
ಒಡೋದೇಕೆ ಕೈ ಕೊಟ್ಟು, 
ನಿಲ್ಲು ಅಲ್ಲೇ ಕೋಪ ಬಿಟ್ಟು 
ಶೋಭಾ..   ಶೋಭಾ..

ಪ್ರೇಮದಿ ನಿನ್ನ ಅಮ್ಮನೇ ತನ್ನ...  
ಪ್ರೇಮದಿ ನಿನ್ನ ಅಮ್ಮನೇ ತನ್ನ... 
ಕಂದನ ಕೂಡಿ ಆಡಲು ನನ್ನ 
ಸಲುಹಲು ಇಲ್ಲಿ ಬಂದೆನು ಚಿನ್ನ 
ಸಿಡುಕದೇ ಸನಿಹಕೆ ಬಂದರೇ .. 
ಸಿಹಿ ಮುತ್ತು ನೀಡುವೆ... 

ಪುಟ್ಟ ಪುಟ್ಟ ಹೆಜ್ಜೆ ಇಟ್ಟು,
ಹಿಂದೆ ನೋಡಿ ಕಣ್ಣು ಬಿಟ್ಟು 
ಒಡೋದೇಕೆ ಕೈ ಕೊಟ್ಟು, 
ನಿಲ್ಲು ಅಲ್ಲೇ ಕೋಪ ಬಿಟ್ಟು 
ಶೋಭಾ..   ಶೋಭಾ..


********************************************************************************

ಸ್ಕೂಲ್ ಮಾಸ್ಟರ್ (1958)

ಚಲನಚಿತ್ರ: ಸ್ಕೂಲ್ ಮಾಸ್ಟರ್ (1958)

ಸಾಹಿತ್ಯ: 
ಸಂಗೀತ: ಟಿ.ಜಿ. ಲಿಂಗಪ್ಪ
ಗಾಯಕರು: ಜಮುನ ರಾಣಿ, ಎ. ಎಂ. ರಾಜಾ   
ನಿರ್ದೇಶನ: ಬಿ. ಆರ್. ಪಂತುಲು 
ನಟರು: ಡಿ. ಮಾಧವ ರಾವ್, ಉದಯಕುಮಾರ್, 
ಬಿ. ಸರೋಜಾ ದೇವಿ 

ಅತಿ ಮಧುರ ಅನುರಾಗ
ಜೀವನ ಸಂಧ್ಯಾರಾಗ

ಸಮರಸದ ವೈಭೋಗ ಸಂಗ
ಸಮಾಗಮ ರಾಗ

ನೀಲಿಯ ಬಾನಿನ ಬೆಳ್ಮುಗಿಲೆ
ನವಿಲಿನ ನಾಟ್ಯಕೆ ಕರೆಯೋಲೆ
ಜೇನಿನ ಹೊನಲೇ ಉಕ್ಕುವ ವೇಳೆ
ಒಲವೆ ಸುಖದ ಉಯ್ಯಾಲೆ.....

ಯೌವ್ವನ ಬಾಳಿನ ಹೊಂಬಾಳೆ
ಪ್ರೀತಿಯೇ ಬಾಡದ ಹೂಮಾಲೆ
ನಲ್ಮೆಯ ನೀಡೋ ಪ್ರೇಮದ ಲೀಲೆ
ಒಲವೆ ಸುಖದ ಉಯ್ಯಾಲೆ.....


******************************************************************************

ನಾ ನಿನ್ನ ಮರೆಯಲಾರೆ (1976)



ಎಲ್ಲೆಲ್ಲಿ ನೋಡಲಿ

ಚಲನಚಿತ್ರ: ನಾ ನಿನ್ನ ಮರೆಯಲಾರೆ (1976)
ಸಾಹಿತ್ಯ: ಚಿ. ಉದಯಶಂಕರ್ 
ಸಂಗೀತ: ರಾಜನ್-ನಾಗೇಂದ್ರ 
ಗಾಯಕರು: ಡಾ.ರಾಜ್ ಕುಮಾರ್,  ಎಸ್. ಜಾನಕಿ  
ನಿರ್ದೇಶನ: ವಿಜಯ್ 
ನಟರು: ಡಾ. ರಾಜ್ ಕುಮಾರ್, ಲಕ್ಷ್ಮೀ   


ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ
ಕಣ್ಣಲ್ಲಿ ತುಂಬಿರುವೆ ಮನದಲಿ ಮನೆ ಮಾಡಿ ಆಡುವೆ 

ಆ ಕೆಂಪು ತಾವರೆ ಆ ನೀರಿಗಾದರೆ
ಈ ಹೊನ್ನ ತಾವರೆ ನನ್ನಾಸೆಯಾಸರೆ
ಆ.........
ಮಿಂಚೆಂಬ ಬಳ್ಳಿಗೆ ಮೇಘದ ಆಸರೆ
ಈ ಹೆಣ್ಣ ಬಾಳಿಗೆ ನಿನ್ನ ತೋಳಿನಾಸರೆ
ಯುಗಗಳೇ ಜಾರಿ ಉರುಳಿದರೇನು
ನಾನೇ ನೀನು ನೀನೆ ನಾನು
ಆದಮೇಲೆ ಬೇರೆ ಏನಿದೆ.....

ರವಿಯನ್ನು ಕಾಣದೆ ಹಗಲೆಂದು ಆಗದು
ನಿನ್ನನ್ನು ನೋಡದೆ ಈ ಪ್ರಾಣ ನಿಲ್ಲದು
ಕಡಲನ್ನು ಸೇರದ ನದಿಯೆಲ್ಲಿ ಕಾಣುವೆ
ನಿನ್ನನ್ನು ಸೇರದೆ ನಾ ಹೇಗೆ ಬಾಳುವೆ
ವಿರಹದ ನೋವ ಮರೆಯಲಿ ಜೀವ
ಹೂವು ಗಂಧ ಸೇರಿದಂತೆ
ಪ್ರೇಮದಿಂದ ನಿನ್ನ ಸೇರುವೆ.....


********************************************************************************

ನಾ ನಿನ್ನ ಮರೆಯಲಾರೆ

ಸಾಹಿತ್ಯ: ಚಿ. ಉದಯಶಂಕರ್ 
ಗಾಯಕರು: ಡಾ.ರಾಜ್ ಕುಮಾರ್, ವಾಣಿ ಜಯರಾಂ 


ನಿನ್ನ ಮರೆಯಲಾರೆ,
ನಾ ನಿನ್ನ ಮರೆಯಲಾರೆ
ಎಂದೆಂದೂ ನಿನ್ನ ಬಿಡಲಾರೆ ಚಿನ್ನ
ನೀನೆ ಪ್ರಾಣ ನನ್ನಾಣೆಗೂ


ಜೊತೆಗೆ ನೀನು ಸೇರಿ ಬರುತಿರೆ
ಜಗವ ಮೆಟ್ಟಿ ನಾ ನಿಲ್ಲುವೆ
ಒಲಿದ ನೀನು ನಕ್ಕು ನಲಿದರೆ
ಏನೇ ಬರಲಿ ನಾ ಗೆಲ್ಲುವೆ
ಆಹಾ ....ಲಾಲಾ.....ಲಾಲಾ....ತರರ.....
ಚೆಲುವೆ ನೀನು ಉಸಿರು ಉಸಿರಲಿ
ಬೆರೆತು ಬದುಕು ಹೂವಾಗಿದೆ
ಎಂದು ಹೀಗೆ ಇರುವ ಬಯಕೆಯು ಮೂಡಿ ಮನಸು ತೇಲಾಡಿದೆ
ನಮ್ಮ ಬಾಳು, ಹಾಲು ಜೇನು .....

ನೂರು ಮಾತು ಏಕೆ ಒಲವಿಗೆ ನೋಟ ಒಂದೇ ಸಾಕಾಗಿದೆ
ಕಣ್ಣ ತುಂಬ ನೀನೆ ತುಂಬಿಹೆ ದಾರಿ ಕಾಣದಂತಾಗಿದೆ
ಆಹಾ ......
ಸಿಡಿಲೆ ಬರಲಿ ಊರೇ ಗುಡುಗಲಿ ದೂರ ಹೋಗೆ ನಾನೆಂದಿಗೂ
ಸಾವೇ ಬಂದು ನನ್ನ ಸೆಳೆದರು ನಿನ್ನ ಬಿಡೆನು ಎಂದೆಂದಿಗೂ
ನೋವು ನಲಿವು, ಎಲ್ಲ ಒಲವು.....


********************************************************************************



ಸಿಹಿ ಮುತ್ತು ಸಿಹಿ ಮುತ್ತು

ಸಾಹಿತ್ಯ:ಚಿ ಉದಯಶಂಕರ್ 
ಗಾಯಕರು: ಪಿ. ಬಿ. ಶ್ರೀನಿವಾಸ್ & ಎಸ್ ಜಾನಕಿ 


ಸಿಹಿ ಮುತ್ತು ಸಿಹಿ ಮುತ್ತು ಇನ್ನೊಂದು ,
ಕೆನ್ನೆಗೆ ಗಲ್ಲಕೆ ಮತ್ತೊಂದು
ಸಿಹಿ ಮುತ್ತು ಸಿಹಿ ಮುತ್ತು ಇನ್ನೊಂದು ,
ಕೆನ್ನೆಗೆ ಗಲ್ಲಕೆ ಮತ್ತೊಂದು
ಕಂದಾ ಕೊಡುವೆಯಾ ...
ಚಿನ್ನದ ತೋಳಲಿ ನನ್ನಾ ಬಳಸುತಾ.......
ನಿನ್ನ ಚಿನ್ನದ ತೋಳಲಿ ನನ್ನಾ ಬಳಸುತಾ
ಸಿಹಿ ಮುತ್ತು ಸಿಹಿ ಮುತ್ತು ಇನ್ನೊಂದು ,
ಕೆನ್ನೆಗೆ ಗಲ್ಲಕೆ ಮತ್ತೊಂದು
ಕಂದಾ ಕೊಡುವೆಯಾ ...

ಚಿನಕುರಳಿ ಮಾತಿನಲ್ಲಿ ಹೂ ಬಾಣ ನೋಟದಲ್ಲಿ
ಕೋಪದಿ ಸಿಡಿದರೆ ಆನೆ ಪಟಾಕಿ
ನೀ ನಕ್ಕರು ಚೆಂದಾ, ನೀ ಅತ್ತರು ಅಂದ
ಕುಣಿಸುವೆ ತಣಿಸುವೆ ತುಂಟಾಟದಿಂದಾ
ಆ  ಅ ಅ ಆಅ ........ ಓ ಓ ಓ ಹೋ ..... 

ಸಿಹಿ ಮುತ್ತು ಸಿಹಿ ಮುತ್ತು ಇನ್ನೊಂದು ,
ಕೆನ್ನೆಗೆ ಗಲ್ಲಕೆ ಮತ್ತೊಂದು
ಕಂದಾ ಕೊಡುವೆಯಾ ...
ಚಿನ್ನದ ತೋಳಲಿ ನನ್ನಾ ಬಳಸುತಾ.......
ನಿನ್ನ ಚಿನ್ನದ ತೋಳಲಿ ನನ್ನಾ ಬಳಸುತಾ
ಸಿಹಿ ಮುತ್ತು ಸಿಹಿ ಮುತ್ತು ಇನ್ನೊಂದು ,
ಕೆನ್ನೆಗೆ ಗಲ್ಲಕೆ ಮತ್ತೊಂದು
ಕಂದಾ ಕೊಡುವೆಯಾ ...

ಮುತ್ತಂತೆ ನಿನ್ನ ನುಡಿಯೂ, 
ಒಂದೊಂದು ಜೇನ ಹನಿಯು
ಸವಿಯುತ ನಲಿವುದು ಈ ನನ್ನ ಜೀವಾ
ಈ ನಿನ್ನ ಸ್ನೇಹದಲ್ಲಿ, ನಾ ತೇಲಿ ಸ್ವರ್ಗದಲ್ಲಿ
ಮರೆಯುವೆ ಮನಸಿನ ನೂರೆಂಟು ನೋವಾ 
ಆಹಾಹಾ ......... ಆಹಾಹಾ 

ಸಿಹಿ ಮುತ್ತು ಸಿಹಿ ಮುತ್ತು ನಂಗೊಂದು, 
ಕೆನ್ನೆಗೆ ಗಲ್ಲಕೆ ಮತ್ತೊಂದು
ಸಿಹಿ ಮುತ್ತು ಸಿಹಿ ಮುತ್ತು ಇನ್ನೊಂದು ,
ಕೆನ್ನೆಗೆ ಗಲ್ಲಕೆಇನ್ನೊಂದು
ನೀನು ಕೊಡುವೆಯಾ, 
ಚಿನ್ನದ ತೋಳಲಿ ನನ್ನಾ ಬಳಸುತಾ.......
ನಿನ್ನ ಚಿನ್ನದ ತೋಳಲಿ ನನ್ನಾ ಬಳಸುತಾ
ಸಿಹಿ ಮುತ್ತು ಸಿಹಿ ಮುತ್ತು ಇನ್ನೊಂದು ,
ಕೆನ್ನೆಗೆ ಗಲ್ಲಕೆ ಮತ್ತೊಂದು
ಇನ್ನೊಂದು ಮತ್ತೊಂದು, 
ಇನ್ನೊಂದು ಮತ್ತೊಂದು ಹಾ .......   

********************************************************************************

ನನ್ನಾಸೆಯ ಹೂವೇ

ಸಾಹಿತ್ಯ: ಚಿ. ಉದಯಶಂಕರ್ 
ಗಾಯಕರು: ರಾಜ್ ಕುಮಾರ್, ಎಸ್. ಜಾನಕಿ 


ನನ್ನಾಸೆಯ ಹೂವೇ ಬೆಳದಿಂಗಳ ಚೆಲುವೆ 
ಇನ್ನೇತಕೆ ಅಳುವೆ ಏಕಾಂತದಿ ಭಯವೆ 
ನಿನ್ನೊಲವಿಗೆ ಸೋತೆನು ಬಂದೆನು ನಾ 

ಈ ಮೌನವೇನು ನಿನ್ನಲ್ಲಿ
ಈ ಕೋಪವೇಕೆ ನನ್ನಲ್ಲಿ 
ನೀ ದೂರ ಹೋದರೆ ಹೀಗೆ 
ನಾ ತಾಳೆ ಈ ವಿರಹದ ಬೇಗೆ 
ಅಹಹ ಅಹಹ ಆಹಾ..... 

ಕಾಣದಿರೆ ನೋಡುವ ಆಸೆ
ನೋಡುತಿರೆ ಸೇರುವ ಆಸೆ
ಸೇರಿದರೆ ಚಿನ್ನ ನಿನ್ನ
ಕೆಂಪಾದ ಚೆಂದುಟಿಯ ಆಸೆ 

ನನ್ನಾಸೆಯ..... 

ಆಹಾ ....ಲಲಲ...... 

ಬಾನಲ್ಲಿ ನೀಲಿ ಬೆರೆತಂತೆ 
ಹೂವಲ್ಲಿ ಜೇನು ಇರುವಂತೆ
ನನ್ನಲ್ಲಿ ನೀನೊಂದಾಗಿ 
ಇರುವಾಗ ಏಕೆ ಈ ಚಿಂತೆ 
ಕಣ್ಣಲ್ಲಿ ಕಣ್ಣ ನೀ ಬೆರೆಸು 
ಲತೆಯಂತೆ ನನ್ನ ಮೈ ಬಳಸು 
ನೂರೆಂಟು ಸುಂದರ ಕನಸು 
ಆ ನಿಮಿಷ ಬಾಳಿಗೆ ಸೊಗಸು 

ನನ್ನಾಸೆಯ ಹೂವೇ......


********************************************************************************

ಎರಡು ಕನಸು (1974)

ಬಾಡಿ ಹೋದ ಬಳ್ಳಿಯಿಂದ


ಸಾಹಿತ್ಯ: ಚಿ. ಉದಯಶಂಕರ್ 
ಗಾಯನ : ಪಿ.ಬಿ.ಶ್ರಿನಿವಾಸ್

ಬಾಡಿ ಹೋದ ಬಳ್ಳಿಯಿಂದ ಹೂವು ಅರಳಬಲ್ಲದೇ
ಬಾಡಿ ಹೋದ ಬಳ್ಳಿಯಿಂದ ಹೂವು ಅರಳಬಲ್ಲದೇ
ತಂತಿ ಹರಿದ ವೀಣೆಯಿಂದ ನಾದ ಹರಿಯಬಲ್ಲದೇ
ಮನಸು ಕಂಡ ಆಸೆ ಎಲ್ಲ ಕನಸಿನಂತೆ ಕರಗಿತಲ್ಲ ಉಲ್ಲಾಸ ಇನ್ನೆಲ್ಲಿದೆ

ಬಾಡಿ ಹೋದ ಬಳ್ಳಿಯಿಂದ ಹೂವು ಅರಳಬಲ್ಲದೆ

ಹಣತೆಯಲ್ಲಿ ದೀಪ ಉರಿಯೇ ಬೆಳಕಿನಲ್ಲಿ ಬಾಳುವೆ
ಹಣತೆಯಲ್ಲಿ ದೀಪ ಉರಿಯೇ ಬೆಳಕಿನಲ್ಲಿ ಬಾಳುವೆ
ಧರೆಯೆ ಹತ್ತಿ ಉರಿಯುವಾಗ ಬದುಕಲೆಲ್ಲಿ ಓಡುವೆ
ಧರೆಯೆ ಹತ್ತಿ ಉರಿಯುವಾಗ ಬದುಕಲೆಲ್ಲಿ ಓಡುವೆ
ತಂತಿ ಹರಿದ ವೀಣೆಯಿಂದ ನಾದ ಹರಿಯಬಲ್ಲದೆ
ಮನಸು ಕಂಡ ಆಸೆ ಎಲ್ಲ ಕನಸಿನಂತೆ ಕರಗಿತಲ್ಲ ಉಲ್ಲಾಸ ಇನ್ನೆಲ್ಲಿದೆ

ಬಾಡಿ ಹೋದ ಬಳ್ಳಿಯಿಂದ ಹೂವು ಅರಳಬಲ್ಲದೆ

ನೀರಿನಲ್ಲಿ ದೋಣಿ ಮುಳುಗೆ ಈಜಿ ದಡವ ಸೇರುವೆ
ನೀರಿನಲ್ಲಿ ದೋಣಿ ಮುಳುಗೆ ಈಜಿ ದಡವ ಸೇರುವೆ
ಸುಳಿಗೆ ದೋಣಿ ಸಿಲುಕಿದಾಗ ಬದುಕಿ ಬರಲು ಸಾಧ್ಯವೆ
ಸುಳಿಗೆ ದೋಣಿ ಸಿಲುಕಿದಾಗ ಬದುಕಿ ಬರಲು ಸಾಧ್ಯವೆ
ಬಾಳ ಪಗಡೆ ಆಟದಲ್ಲಿ ಬರಿಯ ಕಾಯಿ ಎಲ್ಲರೂ
ನಡೆಸುವಾತ ಬೇರೆ ಅವನ ಇಚ್ಚೆ ಯಾರು ಬಲ್ಲರೂ

*******************************************************************************

ಇಂದು ಎನಗೆ ಗೋವಿಂದ


ಸಾಹಿತ್ಯ : ಶ್ರೀ ರಾಘವೇಂದ್ರಸ್ವಾಮಿಗಳು 
ಗಾಯನ : ಎಸ್.ಜಾನಕಿ 

ಇಂದು ಎನಗೆ ಗೋವಿಂದ ನಿನ್ನಯ ಪಾದಾರವಿಂದವ
ತೋರೋ ಮುಕುಂದನೇ....ಮುಕುಂದನೇ
ಸುಂದರ ವದನನೇ ನಂದ ಗೋಪಿಯ ಕಂದ
ಮಂದರೋದ್ಧಾರ ಆನಂದ ಇಂದಿರಾ ರಮಣ....{ಪಲ್ಲವಿ}
ನೊಂದೇನಯ್ಯ ಭವಬಂಧನದೊಳು ಸಿಲುಕಿ
ಮುಂದೆ ದಾರಿ ಕಾಣದೇ ಕುಂದಿದೇ ಜಗದೊಳು
ಕಂದನಂತೆಂದೆನ್ನ ಕುಂದುಗಳ ಎಣಿಸದೇ
ತಂದೆ ಕಾಯೋ ಕೃಷ್ಣ ಕಂದಪ್ಪ..ಜನಕನೇ....{ಪಲ್ಲವಿ}
ಧಾರುಣಿಯೊಳು ಬಲುಭಾರ ಜೀವನನಾಗಿ
ದಾರಿ ತಪ್ಪಿ ನಡೆದೆ...ಸೇರಿದೆ ಕುಜನರಾ
ಆರುಕಾಯುವರಿಲ್ಲ ಸಾರಿದೆ ನಿನಗಯ್ಯ
ಧೀರ ವೇಣುಗೋಪಾಲ ಪಾರುಗಾಣಿಸೋ ಹರಿಯೇ...{ಪಲ್ಲವಿ}

*******************************************************************************

ತಂ ನಂ ತಂ ನಂ 

ಸಾಹಿತ್ಯ: ಚಿ.ಉದಯಶಂಕರ್
ಗಾಯನ : ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ.


ತಂ ನಂ ತಂ ನಂ ನನ್ನೀ ಮನಸು ಮಿಡಿಯುತಿದೇ.... ಓ.. ಸೋತಿದೇ....
ಕೈಯಲ್ಲಿ ಕುಣಿವ ಈ ಹೊನ್ನ ಬಳೆಯ  ಘಲ್ ಘಲ್ ಘಲ್ ಘಲ್ ತಾಳಕೆ
ನನ್ನೆದೆಯ ವೀಣೆ ತನ್ನಂತೇ ತಾನೆ  ತನಮ್ ತನಮ್ ತನಮ್ ತನಮ್ ಎಂದಿದೆ
ಘಲ್ ಘಲ್ ಘಲ್ ಘಲ್ ತಾಳಕೆ  ತಂ ನಂ ತಂ ನಂ ಎಂದಿದೆ
ನೀ ಸನಿಹಕೇ ಬಂದರೇ ತನುವಿದೂ
ನಡುಗುತಿದೇ ಏತಕೇ ಎದೆ ಝಲ್ ಎಂದಿದೇ
ಅಹಾಹ.. ಒಲಿದಿಹಾ ಜೀವವೂ ಬೆರೆಯಲೂ
ಮನ ಹೂವಾಗಿ ತನು ಕೆಂಪಾಗಿ ನಿನ್ನಾ ಕಾದಿದೇ
ನೀ ನಡೆಯುವ ಹಾದಿಗೆ ಹೂವಿನಾ ಹಾಸಿಗೆಯಾ ಹಾಸುವೇ ಕೈ ಹಿಡಿದೂ ನಡೆಸುವೇ
ಮೆಲ್ಲಗೇ ನಲ್ಲನೇ ನಡೆಸುಬಾ ಎಂದೂ ಹೀಗೆ ಇರುವಾ ಆಸೆ ನನ್ನೀ ಮನಸಿಗೇ
ತಂ ನಂ ತಂ ನಂ ನನ್ನೀ ಮನಸು ಮಿಡಿಯುತಿದೇ ........   ಓ ಸೋತಿದೇ
ಕೈಯಲ್ಲಿ ಕುಣಿವ ಈ ಹೊನ್ನ ಬಳೆಯ  ಘಲ್ ಘಲ್ ಘಲ್ ಘಲ್ ತಾಳಕೆ
ನನ್ನೆದೆಯ ವೀಣೆ ತನ್ನನ್ತೆ ತಾನೆ  ತಮ್ ನಮ್ ತಮ್ ನಮ್ ಎಂದಿದೆ
ಘಲ್ ಘಲ್ ಘಲ್ ಘಲ್ ತಾಳಕೆ  ತಂ ನಂ ತಂ ನಂ ಎಂದಿದೆ

*******************************************************************************

ಎಂದು ನಿನ್ನ ನೋಡುವೆ

ಸಾಹಿತ್ಯ: ಚಿ.ಉದಯಶಂಕರ್ 
ಗಾಯನ: ಪಿ.ಬಿ.ಶ್ರಿನಿವಾಸ್ 

ಹೆ..ಹೆ..ಹೆಹೇ ... ಆ ಹ ಹಹಾ ಓ.ಹೋ.ಹೊ..ಹೋ..ಲಾ ಲಾಲ ಲ
ಎಂದು ನಿನ್ನ ನೋಡುವೆ ಎಂದು ನಿನ್ನ ಸೇರುವೆ
ಎಂದು ನಿನ್ನ ನೋಡುವೆ ಎಂದು ನಿನ್ನ ಸೇರುವೆ  
ನಿಜ ಹೇಳಲೇನು ನನ್ನ ಜೀವ ನೀನು

ನೂರಾರು ಬಯಕೆ ಆತುರ ತಂದಿದೆ  
ನೂರಾರು ಕನಸು ಕಾತರ ತುಂಬಿದೆ
ಮುಗಿಲಿಗಾಗಿ ಬಾನು ದುಂಬಿಗಾಗಿ ಜೇನು
ನನಗಾಗಿ ನೀನು ನಿನಗಾಗಿ ನಾನು
ನನಗಾಗಿ ನೀನು ನಿನಗಾಗಿ ನಾನು

ಓ..ಓ..ಓ..ಓ ತಣ್ಣನೆ ಗಾಳಿ ಹಿತ ತೋರದಲ್ಲಾ 
ಕೋಗಿಲೆ ಗಾನ ಸುಖ ನೀಡದಲ್ಲಾ
ತಣ್ಣನೆ ಗಾಳಿ ಹಿತ ತೋರದಲ್ಲಾ   
ಕೋಗಿಲೆ ಗಾನ ಸುಖ ನೀಡದಲ್ಲಾ
ಕಾಮನ ಬಿಲ್ಲಿಗೂ ಮನ ಸೋಲಲಿಲ್ಲ
ನಿನ್ನಯ ನೆನಪಲ್ಲೇ ಸೋತೆ ನಾನು
ನನ್ನಾಸೆ ನೀನು ನಿನ್ನಾಸೆ ನಾನು
ನನ್ನಾಸೆ ನೀನು ನಿನ್ನಾಸೆ ನಾನು

ಎಂದು ನಿನ್ನ ನೋಡುವೆ ಎಂದು ನಿನ್ನ ಸೇರುವೆ 
ನಿಜ ಹೇಳಲೇನು ನನ್ನ ಜೀವ ನೀನು
ನಿಜ ಹೇಳಲೇನು ನನ್ನ ಜೀವ ನೀನು
ಕಂಗಳ ಕಾಂತಿ ನೀನಾಗಿರುವೆ ಮೈಮನವೆಲ್ಲಾ ನೀ ತುಂಬಿರುವೆ
ಕಂಗಳ ಕಾಂತಿ ನೀನಾಗಿರುವೆ ಮೈಮನವೆಲ್ಲಾ ನೀ ತುಂಬಿರುವೆ
ನನ್ನೀ ಬಾಳಿಗೆ ಬೆಳಕಾಗಿರುವೆ ಜನುಮ ಜನುಮದ ಜೋಡಿ ನೀನು
ನನಗಾಗಿ ನೀನು ನಿನಗಾಗಿ ನಾನು ಆಹಾ.ಆ ಆ ಆ
ನನಗಾಗಿ ನೀನು ನಿನಗಾಗಿ ನಾನು ಓ..ಹೋ..ಓ

*******************************************************************************

ಪೂಜಿಸಲೆಂದೇ ಹೂಗಳ

ಸಾಹಿತ್ಯ : ಶ್ರೀ ರಾಘವೇಂದ್ರಸ್ವಾಮಿಗಳು 
ಗಾಯನ : ಎಸ್.ಜಾನಕಿ

ಪೂಜಿಸಲೆಂದೇ ಹೂಗಳ ತಂದೆ
ಪೂಜಿಸಲೆಂದೇ ಹೂಗಳ ತಂದೆ
ದರುಶನ ಕೋರಿ ನಾ ನಿಂದೆ
ತೆರೆಯೋ ಬಾಗಿಲನು ರಾಮ
ತೆರೆಯೋ ಬಾಗಿಲನು ರಾಮ
ಪೂಜಿಸಲೆಂದೇ ಹೂಗಳ ತಂದೆ

ಮೋಡದ ಮೇಲೆ ಚಿನ್ನದ ನೀರು , 
ಚೆಲ್ಲುತ ಸಾಗಿದೆ ಹೊನ್ನಿನ ತೇರು
ಮೋಡದ ಮೇಲೆ ಚಿನ್ನದ ನೀರು , 
ಚೆಲ್ಲುತ ಸಾಗಿದೆ ಹೊನ್ನಿನ ತೇರು
ಮಾಣಿಕ್ಯಾದರತಿ ಆಆಆಆ
ಮಾಣಿಕ್ಯಾದರತಿ ಉಷೆ ತಂದಿಹಳೂ
ತಾಮಸವೇಕಿನು ಸ್ವಾಮಿ
ತೆರೆಯೋ ಬಾಗಿಲನು ರಾಮ

ಪೂಜಿಸಲೆಂದೇ ಹೂಗಳ ತಂದೆ
ದರುಶನ ಕೋರಿ ನಾ ನಿಂದೆ
ಪೂಜಿಸಲೆಂದೇ ಹೂಗಳ ತಂದೇ

ಒಲಿದರು ಚೆನ್ನ ,ಮುನಿದರು ಚೆನ್ನ,
ನಿನ್ನ ಆಸರೆಯೇ ಬಾಳಿಗೆ ಚೆನ್ನ
ಒಲಿದರು ಚೆನ್ನ ,ಮುನಿದರು ಚೆನ್ನ,
ನಿನ್ನ ಆಸರೆಯೇ ಬಾಳಿಗೆ ಚೆನ್ನ
ನಾ ನಿನ್ನ ಪಾದದ ಧೂಳಾದರೂ ಚೆನ್ನ
ನಾ ನಿನ್ನ ಪಾದದ ಧೂಳಾದರೂ ಚೆನ್ನ
ಸ್ವೀಕರಿಸು ನನ್ನಾ ಸ್ವಾಮಿ
ತೆರೆಯೋ ಬಾಗಿಲನು ರಾಮ

ಪೂಜಿಸಲೆಂದೇ ಹೂಗಳ ತಂದೆ
ದರುಶನ ಕೋರಿ ನಾ ನಿಂದೆ
ತೆರೆಯೋ ಬಾಗಿಲನು ರಾಮ
ಪೂಜಿಸಲೆಂದೇ ಹೂಗಳ ತಂದೆ

*******************************************************************************

ಎಂದೆಂದೂ ನಿನ್ನನು ಮರೆತು

ಸಾಹಿತ್ಯ: ಚಿ.ಉದಯಶಂಕರ್ 
ಗಾಯನ: ಪಿ.ಬಿ.ಶ್ರಿನಿವಾಸ್,  ವಾಣಿ ಜಯರಾಂ

ಎಂದೆಂದೂ ನಿನ್ನನು ಮರೆತು ಬದುಕಿರಲಾರೆ
ಇನ್ನೆಂದು ನಿನ್ನನು ಅಗಲಿ ನಾನಿರಲಾರೆ
ಒಂದು ಕ್ಷಣ ನೊಂದರು ನೀ ನಾ ತಾಳಲಾರೆ
ಒಂದು ಕ್ಷಣ ವಿರಹವನು ನಾ ಸಹಿಸಲಾರೆ

ಸಾಗರ ಹುಣ್ಣಿಮೆ ಕಂಡು ಉಕ್ಕುವ ರೀತಿ
ನಿನ್ನನು ಕಂಡ ದಿನವೇ ಹೊಮ್ಮಿತು ಪ್ರೀತಿ
ಓಹೋಹೋಹೋ...ನೀ ಕಡಲಾದರೆ ನಾ ನದಿಯಾಗುವೆ
ನಿಲ್ಲದೆ ಓಡಿ ಓಡಿ ನಿನ್ನ ಸೇರುವೆ ಸೇರುವೆ ಸೇರುವೆ.....

ಎಂದೆಂದೂ .. ಎಂದೆಂದೂ ನಿನ್ನನು ಮರೆತು ಬದುಕಿರಲಾರೆ
ಇನ್ನೆಂದು .. ಇನ್ನೆಂದು ನಿನ್ನನು ಅಗಲಿ ನಾನಿರಲಾರೆ

ನೀ ಹೂವಾದರೆ ನಾನು ಪರಿಮಳವಾಗಿ
ಸೇರುವೆ ನಿನ್ನೊಡಲನ್ನು ಬಲು ಹಿತವಾಗಿ
ಓಹೋಹೋಹೋ ನೀ ಮುಗಿಲಾದರೆ ನಾ ನವಿಲಾಗುವೆ
ತೇಲುವ ನಿನ್ನ ನೋಡಿ ನೋಡಿ ಹಾಡುವೆ ಕುಣಿಯುವೆ ನಲಿಯುವೆ.....

ಎಂದೆಂದೂ .. ಎಂದೆಂದೂ ನಿನ್ನನು ಮರೆತು ಬದುಕಿರಲಾರೆ
ಇನ್ನೆಂದು .. ಇನ್ನೆಂದು ನಿನ್ನನು ಅಗಲಿ ನಾನಿರಲಾರೆ

ಸಾವಿರ ಜನುಮವೇ ಬರಲಿ ಬೇಡುವುದೊಂದೇ
ನನ್ನವಳಾಗಿರು ನೀನು ಎನ್ನುವುದೊಂದೇ
ಓಹೋಹೋಹೋ ನೀನಿರುವುದಾದರೆ ಸ್ವರ್ಗವು ಈ ಧರೆ
ನಾನಿನ್ನ ಜೋಡಿಯಾಗಿ ಎಂದು ಬಾಳುವೆ ಬಾಳುವೆ ಬಾಳುವೆ.....

ಎಂದೆಂದೂ .. ಎಂದೆಂದೂ ನಿನ್ನನು ಮರೆತು ಬದುಕಿರಲಾರೆ
ಇನ್ನೆಂದು .. ಇನ್ನೆಂದು ನಿನ್ನನು ಅಗಲಿ ನಾನಿರಲಾರೆ
ಒಂದು ಕ್ಷಣ ನೊಂದರು ನೀ ನಾ ತಾಳಲಾರೆ
ಒಂದು ಕ್ಷಣ ವಿರಹವನು ನಾ ಸಹಿಸಲಾರೆ

********************************************************************************

ದೇವತಾ ಮನುಷ್ಯ (1988)




ಹಾಲಲ್ಲಾದರು ಹಾಕು

ಚಲನಚಿತ್ರ: ದೇವತಾ ಮನುಷ್ಯ (1988)  
ಸಾಹಿತ್ಯ: ಚಿ. ಉದಯಶಂಕರ್ 
ಸಂಗೀತ: ಉಪೇಂದ್ರ ಕುಮಾರ್ 
ನಿರ್ದೇಶನ: ಸಿಂಗೀತಂ ಶ್ರೀನಿವಾಸ ರಾವ್ 
ಹಾಡಿದವರು: ರಾಜ್ ಕುಮಾರ್, ಬಿ ಆರ್ ಛಾಯ  
ನಟರು: ರಾಜ್ ಕುಮಾರ್, ಸುಧಾ ರಾಣಿ, ಗೀತಾ 

ಆ..ಆ.. ಆ.. ಆ..ಹಾಲಲ್ಲಾದರು ಹಾಕು  
ನೀರಲ್ಲಾದರು ಹಾಕು ರಾಘವೇಂದ್ರಾ..
ಹಾಲಲ್ಲಿ ಕೆನೆಯಾಗಿ  ನೀರಲ್ಲಿ ಮೀನಾಗಿ
ಹಾಯಾಗಿರುವೇ ರಾಘವೇಂದ್ರ..
ಹಾಲಲ್ಲಾದರು ಹಾಕು  ನೀರಲ್ಲಾದರು ಹಾಕು
ರಾಘವೇಂದ್ರಾ..
ಹಾಲಲ್ಲಿ ಕೆನೆಯಾಗಿ ನೀರಲ್ಲಿ ಮೀನಾಗಿ
ಹಾಯಾಗಿರುವೇ.. ರಾಘವೇಂದ್ರ..
ಹಾಲಲ್ಲಾದರು ಹಾಕು ನೀರಲ್ಲಾದರು ಹಾಕು ರಾಘವೇಂದ್ರಾ||

ಮುಳ್ಳಲ್ಲಾದರು ನೂಕು  ಕಲ್ಲಲ್ಲಾದರು ನೂಕು
ರಾಘವೇಂದ್ರಾ.. ಆ.. ಆ.. ಆ..
ಮುಳ್ಳಲ್ಲಾದರು ನೂಕು  ಕಲ್ಲಲ್ಲಾದರು ನೂಕು
ರಾಘವೇಂದ್ರಾ
ಮುಳ್ಳಲ್ಲಿ ಮುಳ್ಳಾಗಿ  ಕಲ್ಲಲ್ಲಿ ಕಲ್ಲಾಗಿ
ಒಂದಾಗಿರುವೇ ರಾಘವೇಂದ್ರ
ಬಿಸಿಲಲ್ಲೆ ಒಣಗಿಸು ನೆರಳಲ್ಲೆ ಮಲಗಿಸು
ರಾಘವೇಂದ್ರಾ..
ಬಿಸಿಲಲ್ಲಿ ಕೆಂಪಾಗಿ ನೆರಳಲ್ಲಿ ತಂಪಾಗಿ
ನಗುನಗುತ ಇರುವೇ.. ರಾಘವೇಂದ್ರಾ||

ಹಾಲಲ್ಲಾದರು ಹಾಕು  ನೀರಲ್ಲಾದರು ಹಾಕು
ರಾಘವೇಂದ್ರಾ ಆ.. ಆ.. ಆ..
ಸುಖವನ್ನೆ ನೀಡೆಂದು  ಎಂದೂ ಕೇಳೆನು ನಾನು
ರಾಘವೇಂದ್ರಾ.. ಆ.. ಆ.. ಆ..
ಸುಖವನ್ನೆ ನೀಡೆಂದು  ಎಂದೂ ಕೇಳೆನು ನಾನು
ರಾಘವೇಂದ್ರಾ..

ಮುನ್ನ ಮಾಡಿದ ಪಾಪ, ಯಾರ ತಾತನ ಗಂಟು
ಮುನ್ನ ಮಾಡಿದ ಪಾಪ, ಯಾರ ತಾತನ ಗಂಟು
ನೀನೇ ಹೇಳೂ ರಾಘವೇಂದ್ರ..
ಎಲ್ಲಿದ್ದರೇನು ನಾ, ಹೇಗಿದ್ದರೇನು ನಾ
ರಾಘವೇಂದ್ರಾ..
ನಿನ್ನಲ್ಲಿ ಶರಣಾಗಿ, ನೀ ನನ್ನ ಉಸಿರಾಗಿ
ಬಾಳಿದರೆ ಸಾಕೂ.. ರಾಘವೇಂದ್ರ..

ಹಾಲಲ್ಲಾದರು ಹಾಕು  ನೀರಲ್ಲಾದರು ಹಾಕು
ರಾಘವೇಂದ್ರಾ..
ಹಾಲಲ್ಲಿ ಕೆನೆಯಾಗಿ  ನೀರಲ್ಲಿ ಮೀನಾಗಿ
ಹಾಯಾಗಿರುವೇ ರಾಘವೇಂದ್ರ..
ಹಾಲಲ್ಲಾದರು ಹಾಕು  ನೀರಲ್ಲಾದರು ಹಾಕು
ರಾಘವೇಂದ್ರಾ..

********************************************************************************

ಹೃದಯದಲಿ ಇದೇನಿದು

ಸಾಹಿತ್ಯ :ಚಿ.ಉದಯಶಂಕರ್
ಗಾಯನ:  ಡಾ.ರಾಜ, ಮಂಜುಳ ಗುರುರಾಜ್

ಡಾ.ರಾಜ : ಆಹಹಾ.. ಆಹಾ ಹೂಂ.. ಹೂಂ... ಹೂಂ
                ಹೃದಯದಲಿ ಇದೇನಿದು ನದಿಯೊಂದು ಓಡಿದೆ
                ಹೃದಯದಲಿ ಇದೇನಿದು ನದಿಯೊಂದು ಓಡಿದೆ
                ಕಲಕಲನೇ ಕಲರವ ಕೇಳಿ ಹೊಸ ಬಯಕೆ ಹೂವು ಅರಳಿ
                ಜೊತೆಯಲ್ಲಿ ಪ್ರೇಮಗೀತೆ ಹಾಡುವಾಸೆ ಈಗ
ಮಂಜುಳ : ಹೃದಯದಲಿ ಇದೇನಿದು ನದಿಯೊಂದು ಓಡಿದೆ
                ಹೃದಯದಲಿ ಇದೇನಿದು ನದಿಯೊಂದು ಓಡಿದೆ
                ಕಲಕಲನೇ ಕಲರವ ಕೇಳಿ ಹೊಸ ಬಯಕೆ ಹೂವು ಅರಳಿ
                 ಜೊತೆಯಲ್ಲಿ ಪ್ರೇಮಗೀತೆ ಹಾಡುವಾಸೆ ಈಗ
ಡಾ.ರಾಜ : ಹೃದಯದಲಿ ಇದೇನಿದು
ಮಂಜುಳ ಗುರುರಾಜ್: ನದಿಯೊಂದು ಓಡಿದೆ
ಡಾ.ರಾಜ : ಸುಯ್ ಎನ್ನುತಾ ಬೀಸುವ ತಣ್ಣನೆ ಗಾಳಿಗೆ
ಮಂಜು : ಗುಯ್ ಎನ್ನುವಾ ದುಂಬಿಯ ಹಾಡಿನ ಮೋಡಿಗೆ
ಡಾ.ರಾಜ:  ಈ ಮನಸು ಸೋಲುತಿದೆ
ಮಂಜು: ಹೊಸ ಕನಸು ಕೆಣಕುತಿದೆ
ಡಾ.ರಾಜ : ಮಾಡುವುದೇನೀಗಾ.....
ಮಂಜು: ಹೃದಯದಲಿ ಇದೇನಿದು
ಡಾ.ರಾಜ :ನದಿಯೊಂದು ಓಡಿದೆ
ಮಂಜು:ಘಮ್ ಎನ್ನುವಾ ತಾವರೆ ಹೂವಿನ ಕಂಪಿಗೆ
ಡಾ.ರಾಜ :ಜುಮ್ ಎನ್ನಿಸಿ ತನುವಲಿ ಓಡುವಾ ಮಿಂಚಿಗೆ
ಮಂಜು: ಮೈ ಬಿಸಿಯು ಏರುತಿದೆ
ಡಾ.ರಾಜ : ಈ ಬೆಸುಗೆ ಹೇಳುತಿದೆ
ಮಂಜು: ತುಂಬಿತು ಆನಂದಾ.......
ಡಾ.ರಾಜ : ಹೃದಯದಲಿ ಇದೇನಿದು ನದಿಯೊಂದು ಓಡಿದೆ
ಮಂಜು: ಹೃದಯದಲಿ ಇದೇನಿದು ನದಿಯೊಂದು ಓಡಿದೆ
ಡಾ.ರಾಜ : ಕಲಕಲನೇ ಕಲರವ ಕೇಳಿ
ಮಂಜು: ಹೊಸ ಬಯಕೆ ಹೂವು ಅರಳಿ
ಇಬ್ಬರೂ : ಜೊತೆಯಲ್ಲಿ ಪ್ರೇಮಗೀತೆ ಹಾಡುವಾಸೆ ಈಗ
              ಹೃದಯದಲಿ ಇದೇನಿದು ನದಿಯೊಂದು ಓಡಿದೆ
              ಹೃದಯದಲಿ ಇದೇನಿದು ನದಿಯೊಂದು ಓಡಿದೆ

********************************************************************************

ಈ ಸೊಗಸಾದ ಸಂಜೆ

ಸಾಹಿತ್ಯ : ಚಿ.ಉದಯಶಂಕರ್ 
ಗಾಯನ : ಡಾ.ರಾಜಕುಮಾರ್ ಮತ್ತು ವಾಣಿ ಜಯರಾಂ 

ಡಾ.ರಾಜ : ಈ ಸೊಗಸಾದ ಸಂಜೆ
                  ಈ ಸೊಗಸಾದ ಸಂಜೆ ನಿನ್ನನ್ನು ನೋಡುತಾ ನನ್ನನ್ನೇ ಮರೆತೆ
                   ಎಂದೆಂದೂ ಜೊತೆಯಿರುವಾ ಬಯಕೆ ಇನ್ನೂ ಏಕೆ
ವಾಣಿ : ಈ ಸೊಗಸಾದ ಸಂಜೆ ನಿನ್ನನ್ನು ನೋಡುತಾ ನನ್ನನ್ನೇ ಮರೆತೆ
          ಎಂದೆಂದೂ ಜೊತೆಯಿರುವಾ ಬಯಕೆ ಇನ್ನೂ ಏಕೆ
ಡಾ.ರಾಜ : ಈ ಸೊಗಸಾದ ಸಂಜೆ
ಡಾ.ರಾಜ :ನಲ್ಲೆಯು ಮುಡಿದ ಮಲ್ಲಿಗೆ ಹೂವು
               ಪ್ರೇಮದ ಗೀತೆ ಹಾಡಿದೆ ಇಂಪಾಗಿ
               ಕಂಪನ್ನು ಚೆಲ್ಲಿದೆ ಹಿತವಾಗಿ
ವಾಣಿ : ನಲ್ಲನ ನುಡಿಯೂ ಕೊಳಲಿನ ದನಿಯೊ
           ಕಾಣೆನು ನಾನು ಕೇಳುತ ಬೆರಗಾಗಿ
           ಸಂಕೋಚ ತುಂಬಿತು ತಾನಾಗಿ
ಡಾ.ರಾಜ :  ಓ...ಓ....ಪ್ರೇಮದ ಗಂಗೆ ಪ್ರಣಯದ ತುಂಗೆ  ನಲ್ಲೆಯ ಮಾತುಗಳೆಲ್ಲ
ವಾಣಿ :  ಈ ಸೊಗಸಾದ ಸಂಜೆ ನಿನ್ನನ್ನು ನೋಡುತಾ ನನ್ನನ್ನೇ ಮರೆತೆ
ಇಬ್ಬರೂ: ಎಂದೆಂದೂ ಜೊತೆಯಿರುವಾ ಬಯಕೆ ಇನ್ನೂ ಏಕೆ  ಈ ಸೊಗಸಾದ ಸಂಜೆ
ವಾಣಿ: ಗೆಳೆಯನೆ ನಿನ್ನ ಕಣ್ಣಲೆ ಇಂದು
          ಪ್ರೇಮದ ಲೋಕ ನೋಡಿದೆ ನಾನೀಗ
          ನನ್ನಲ್ಲೀ ಮೂಡಿತು ಅನುರಾಗ
ಡಾ.ರಾಜ :    ಅರಗಿಣಿ ಕೂಡ ನಾಚಿತು ನಿನ್ನ
                   ಮಾತಾನು ಕೇಳಿ ಕಾದಿದೆ ಓ ಜಾಣೆ
                  ನಿನ್ನಂತೆ ಯಾರನು ನಾ ಕಾಣೆ
ವಾಣಿ :  ಓ......ಓ...... ಬಾಳಲಿ ಸರಸ ತುಂಬಿದ ಕಳಸ  ಪ್ರೇಮವು ತುಂಬಿರುವಾಗ
ಡಾ.ರಾಜ : ಈ ಸೊಗಸಾದ ಸಂಜೆ ನಿನ್ನನ್ನು ನೋಡುತಾ ನನ್ನನ್ನೇ ಮರೆತೆ
ವಾಣಿ :  ಈ ಸೊಗಸಾದ ಸಂಜೆ ನಿನ್ನನ್ನು ನೋಡುತಾ ನನ್ನನ್ನೇ ಮರೆತೆ
ಇಬ್ಬರೂ: ಎಂದೆಂದೂ ಜೊತೆಯಿರುವಾ ಬಯಕೆ ಇನ್ನೂ ಏಕೆ
              ಈ ಸೊಗಸಾದ ಸಂಜೆ

********************************************************************************

ನಿನ್ನಂಥ ಅಪ್ಪ ಇಲ್ಲಾ

ಸಾಹಿತ್ಯ : ಚಿ.ಉದಯಶಂಕರ್ 
ಗಾಯನ :ಡಾ.ರಾಜಕುಮಾರ್, ಬಿ.ಆರ್.ಛಾಯಾ 

ಬಿ.ಆರ್.ಛಾಯಾ: ನಿನ್ನಂಥ ಅಪ್ಪ ಇಲ್ಲಾ (ಆಹಾ) ಒಂದೊಂದು ಮಾತು ಬೆಲ್ಲ (ಒಹೋ)
                        ನಿನ್ನಂಥ ಅಪ್ಪ ಇಲ್ಲಾ (ಆಹಾ) ಒಂದೊಂದು ಮಾತು ಬೆಲ್ಲ (ಒಹೋ)
                        ನೀನೇ ನನ್ನ ಜೀವ ನೀನೇ ನನ್ನ ಪ್ರಾಣ
                       ಯಾವ ದೇವ ತಂದ ವರವೋ ಇನ್ನು ನಾನು ಅರಿಯೆನು
ಡಾ.ರಾಜ: ನಿನ್ನಂಥ ಮಗಳು ಇಲ್ಲಾ (ಆಹಾ) ಬಾಳಲ್ಲಿ ನೀನೇ ಎಲ್ಲಾ (ಒಹೋ)
                ನಿನ್ನಂಥ ಮಗಳು ಇಲ್ಲಾ ಬಾಳಲ್ಲಿ ನೀನೇ ಎಲ್ಲಾ
                ನಿನ್ನ ಕಂಡ ಮೇಲೆ ಬೆಳಕ ಕಂಡೆ ಬಾಲೆ
               ಯಾವ ದೇವ ತಂದ ವರವೋ ಇನ್ನು ನಾನು ಅರಿಯೆನು
ಬಿ.ಆರ್.ಛಾಯಾ: ನಿನ್ನಂಥ ಅಪ್ಪ ಇಲ್ಲಾ (ಆಹಾ..)
ಡಾ.ರಾಜ : ನಿನ್ನಂಥ ಮಗಳು ಇಲ್ಲಾ (ಹ್ಹಹ್ಹಹ್ಹ.. )  
ಬಿ.ಆರ್.ಛಾಯಾ:  ನೀ ಹೀಗೇ ನಡೆಯಲು ನಡು ಹೀಗೇ ಕುಣಿಯಲು
                          ಹದಿನೆಂಟು ವಯಸಿನ ಹುಡುಗನ ಹಾಗಿದೆ
ಡಾ.ರಾಜ: ಹೇ... ಹೇ... ನೀ ಹೀಗೆ ನಗುತಿರೆ ಜೊತೆಯಾಗಿ ಬರುತಿರೆ
               ಆನಂದ ತರುತಿರೆ ಹುಡುಗನೇ ಎಂದಿಗೂ
ಇಬ್ಬರೂ : ರಂಪಂ ರಪಂಪ ಪಂಪ ರಂಪಂ ರಪಂಪ ಪಂಪ
ಬಿ.ಆರ್.ಛಾಯಾ:  ಮಾತಿನಾ ಮೋಡಿಗೆ ನಿನ್ನಾಣೆ ನಾನು ಮೆಚ್ಚಿದೆ
ಡಾ.ರಾಜ: ನಿನ್ನಂಥ ಮಗಳು ಇಲ್ಲಾ
ಬಿ.ಆರ್.ಛಾಯಾ: ನಿನ್ನಂಥ ಅಪ್ಪ ಇಲ್ಲಾ
ಡಾ.ರಾಜ: ಸಂತೋಷವೆಂದರೆ ಉಲ್ಲಾಸವೆಂದರೆ ಸಂಗೀತವೆಂದರೆ ನಿನ ಜೊತೆ ನಡೆದರೆ
ಬಿ.ಆರ್.ಛಾಯಾ:  ಮುದ್ಡಾದ ಮಾತನೆ ಹಿತವಾದ ರಾಗದಿ ದಿನವೆಲ್ಲ ಹಾಡಲು ಹೇಗೇ ನೀ ಅರಿತೆಯೋ
ಇಬ್ಬರೂ : ರಂಪಂ ರಪಂಪ ಪಂಪ ರಂಪಂ ರಪಂಪ ಪಂಪ
ಡಾ.ರಾಜ: ನನ್ನ ಈ ಅರಗಿಣಿ ಮಾತಾಡೇ ನೋಡಿ ಕಲಿತೆನೋ
ಬಿ.ಆರ್.ಛಾಯಾ: ನಿನ್ನಂಥ ಅಪ್ಪ ಇಲ್ಲಾ ಒಂದೊಂದು ಮಾತು ಬೆಲ್ಲ
ಡಾ.ರಾಜ: ನಿನ್ನಂಥ ಮಗಳು ಇಲ್ಲಾ ಬಾಳಲ್ಲಿ ನೀನೇ ಎಲ್ಲಾ
ಬಿ.ಆರ್.ಛಾಯಾ:  ನೀನೇ ನನ್ನ ಜೀವ
ಡಾ.ರಾಜ: ನೀನೇ ನನ್ನ ಪ್ರಾಣ
ಇಬ್ಬರೂ : ಯಾವ ದೇವ ತಂದ ವರವೋ ಇನ್ನು ನಾನು ಅರಿಯೆನು
ಬಿ.ಆರ್.ಛಾಯಾ: ನಿನ್ನಂಥ ಅಪ್ಪ ಇಲ್ಲಾ
ಡಾ.ರಾಜ:ನಿನ್ನಂಥ ಮಗಳು ಇಲ್ಲಾ
ಬಿ.ಆರ್.ಛಾಯಾ: ನಿನ್ನಂಥ ಅಪ್ಪ ಇಲ್ಲಾ
ಡಾ.ರಾಜ:ನಿನ್ನಂಥ ಮಗಳು ಇಲ್ಲಾ
ಬಿ.ಆರ್.ಛಾಯಾ: ನಿನ್ನಂಥ ಅಪ್ಪ ಇಲ್ಲಾ
ಡಾ.ರಾಜ:ನಿನ್ನಂಥ ಮಗಳು ಇಲ್ಲಾ
ಬಿ.ಆರ್.ಛಾಯಾ: ನಿನ್ನಂಥ ಅಪ್ಪ ಇಲ್ಲಾ
ಡಾ.ರಾಜ:ನಿನ್ನಂಥ ಮಗಳು ಇಲ್ಲಾ
ಬಿ.ಆರ್.ಛಾಯಾ: ನಿನ್ನಂಥ ಅಪ್ಪ ಇಲ್ಲಾ
ಡಾ.ರಾಜ:ನಿನ್ನಂಥ ಮಗಳು ಇಲ್ಲಾ
ಬಿ.ಆರ್.ಛಾಯಾ: ನಿನ್ನಂಥ ಅಪ್ಪ ಇಲ್ಲಾ
ಡಾ.ರಾಜ:ನಿನ್ನಂಥ ಮಗಳು ಇಲ್ಲಾ

********************************************************************************

ಬಿಸಿಲಲ್ಲೇ ಒಣಗಿಸು ನೆರಳಲ್ಲೇ

ಸಾಹಿತ್ಯ : ಚಿ.ಉದಯಶಂಕರ್
ಗಾಯನ : ಬಿ.ಆರ್.ಛಾಯಾ 

ಬಿಸಿಲಲ್ಲೇ ಒಣಗಿಸು ನೆರಳಲ್ಲೇ ಮಲಗಿಸು ರಾಘವೇಂದ್ರ
ಬಿಸಲಲ್ಲಿ ಕೆಂಪಾಗಿ ನೆರಳಲ್ಲಿ ತಂಪಾಗಿ ನಗುನಗುತಾ ಇರುವೆ ರಾಘವೇಂದ್ರ
ಹಾಲಲ್ಲಾದರೂ ಹಾಕು ನೀರಲ್ಲಾದರೂ ಹಾಕು ರಾಘವೇಂದ್ರ

********************************************************************************

ಇದೇ ಜೀವನ 

ಸಾಹಿತ್ಯ : ಚಿ.ಉದಯಶಂಕರ್ 
ಗಾಯನ :ಎಸ್.ಪಿ.ಬಿ,. 

ಇದೇ ಜೀವನ... ಇದೇ ಜೀವನ
ಅರಿತಾಗ ಬಾಳು ಸುಮಧುರ ಗಾನಾ
ದೇವರು ಬೇರೆ ಇಲ್ಲ ಕಾಣದೆಯೇ ಅಡಗಿಲ್ಲ
ಅರಿಯುವ ಜಾಣ್ಮೆಯು ಬೇಕು
ನೋಡುವ ಕಣ್ಣಿರಬೇಕು
ಪ್ರೇಮವೂ ತುಂಬಿದ ಜೀವ
ಮಾನವನಾದರು ದೈವ

********************************************************************************