Monday, August 27, 2018

ತುತ್ತಾ.. ಮುತ್ತಾ.. ( 1998 )


ತುಸು ಮೆಲ್ಲ

ಚಲನಚಿತ್ರ : ತುತ್ತಾ.. ಮುತ್ತಾ.. ( 1998 ) 
ಸಾಹಿತ್ಯ : ನಾದಬ್ರಹ್ಮ "ಹಂಸಲೇಖ" 
ಗಾಯಕರು : ಡಾ || ಎಸ್.ಪಿ.ಬಾಲಸುಬ್ರಮಣ್ಯಂ...
ಸಂಗೀತ: ಹಂಸಲೇಖ 
ನಿರ್ದೇಶನ: ಕಿಶೋರ್ ಸರ್ಜಾ 
ನಟನೆ: ರಮೇಶ್ ಅರವಿಂದ್, ಪ್ರೇಮಾ, ಕಸ್ತೂರಿ 


ತುಸು ಮೆಲ್ಲ ಬೀಸೂ ಗಾಳಿಯೇ....
ತುಸು ಮೆಲ್ಲ ಬೀಸೂ ಗಾಳಿಯೇ....
ಈ ಲಾಲಿ... ಸುವ್ವಾಲಿ... ಈ ತಾಯಿ ಕೇಳಲಿ...
ನಿದ್ದೇಲಿ ಆಡಲಿ...

ತುಸು ಮೆಲ್ಲ ಬೀಸೂ ಗಾಳಿಯೇ....

ಲಾಲನೆಯ , ಪಾಲನೆಯ,
ಮಾಡಿದಂತ ಜೀವಕೆ....
ಚಿಂತಿಸುತ , ಹರಸುತ,
ಮಿಡಿದು ಬಡಿದ ತಂತಿಗೆ....
ಕೊಂಚ ಬಿಡುವು ಬೇಡವೆ,
ನಿದ್ದೆಯಲ್ಲೂ
ಮಗನ ನೆನೆವ ಮನಸ್ಸಿಗೆ... ||

ತುಸು ಮೆಲ್ಲ ಬೀಸೂ ಗಾಳಿಯೇ....
ತುಸು ಮೆಲ್ಲ ಬೀಸೂ ಗಾಳಿಯೇ....
ಈ ಲಾಲಿ... ಸುವ್ವಾಲಿ... ಈ ತಾಯಿ ಕೇಳಲಿ...
ನಿದ್ದೇಲಿ ಆಡಲಿ...

ಜನುಮದ , ಜನುಮದ,
ನೆನಪು ನೀಡು ಜೋಗುಳ...
ನೋವಿನ , ನಲಿವಿನ,
ಕಲಸು ಮೇಳ ಜೋಗುಳ...
ಹೇಳಿದಂತ ಗುರುವಿಗೆ, 
ಜೋಗುಳದಿ ಲೋಕ ತೂಗೊ ತಾಯಿಗೆ...||

ತುಸು ಮೆಲ್ಲ ಬೀಸೂ ಗಾಳಿಯೇ....
ತುಸು ಮೆಲ್ಲ ಬೀಸೂ ಗಾಳಿಯೇ....
ಈ ಲಾಲಿ... ಸುವ್ವಾಲಿ... ಈ ತಾಯಿ ಕೇಳಲಿ...
ನಿದ್ದೇಲಿ ಆಡಲಿ...

*********************************************************************************

ಮುತ್ತು ಕೊಡೋಳು  

ಸಾಹಿತ್ಯ: ಹಂಸಲೇಖ  
ಗಾಯನ : ಉನ್ನಿ ಕೃಷ್ಣನ್   


ಮುತ್ತು ಕೊಡೋಳು ಬಂದಾಗ 
ತುತ್ತು ಕೊಟ್ಟೋಳ ಮರಿಬೇಡ 
ಆಟೋ ಲಾರಿ ಹಿಂದೆ ಬರೆದವನೆ 
ತತ್ವಜ್ನ್ಞಾನಿ ಅಂತ ತಿಳಿಬೇಡ 
ತಾಯಿ ಇಲ್ಲದೆ ಜಗವಿಲ್ಲ ಮಡದಿ ಇಲ್ಲದೆ ಬಾಳಿಲ್ಲ 
ತುತ್ತಾ ಮುತ್ತಾ ಗೊತ್ತ, ಆತ್ತ ಇತ್ತ ಎತ್ತ   

ಮಗುವು ಅತ್ತರೆ ತಾನತ್ತು
ಹಾಲನೆರೆದವಳು ತಾಯಲ್ಲವೆ 
ನಮಗಾಗಿ ಜೀವವ ತೇಯ್ದಿಲ್ಲವೆ 

ತಾಳಿ ಪಾಶಕೆ ತಲೆ ಕೊಟ್ಟು 
ಗಂಡಿನರ್ಧವೆ ತಾನಾಗಿ ಸತಿ ನಮಗೆ ಮೀಸಲಾಗಿಲ್ಲವೆ 
ಇಬ್ಬರು ಕಂಡಿಹರು ಈ ಗಂಡಿನ ಬೆತ್ತಲೆಯ
ಇಬ್ಬರು ಬೆಳಗುವರು ಈ ಹೃದಯದ ಕತ್ತಲೆಯ
ತಾಯಿ ಇಲ್ಲದೆ ಬಲವಿಲ್ಲ್ಲ ಮಡದಿ ಇಲ್ಲದೆ ಛಲವಿಲ್ಲ
ತುತ್ತ ಮುತ್ತ ಗೊತ್ತ, ಅತ್ತ ಇತ್ತ ಎತ್ತ

ಕುಂತಿ ಇಲ್ಲದೆ ಪಾಂಡವರೆ ದ್ರೌಪದಿ ಇಲ್ಲದೆ ಭಾರತವೆ
ಗಂಡು ಇಬ್ಬರ ಸ್ವತ್ತಲ್ಲವೆ
ನಮ್ಮ ಜನ್ಮಕೆ ಈ ಹೆಣ್ಣು ನಮ್ಮ ಮರಿಯ ಜನ್ಮಕೆ ಆ ಹೆಣ್ಣು
ನಮ್ಮ ಎರಡು ಕಣ್ಣು ಎರಡು ಹೆಣ್ಣು
ಮೂಡಣದ ಸೂರ್ಯ ತಾಯಿಯ ಮಡಿಲಂತೆ
ಪಡುವಣದ ಸೂರ್ಯ ಮಡದಿಯ ಮಡಿಲಂತೆ
ತಾಯಿ ಇಲ್ಲದೆ ತವರಿಲ್ಲ ಮಡದಿ ಇಲ್ಲದೆ ಮನೆ ಇಲ್ಲ

ತುತ್ತ ಮುತ್ತ ಗೊತ್ತ ಅತ್ತ ಇತ್ತ ಎತ್ತ

*********************************************************************************

ತಾರೆ ತಾರೆ ಮಿನುಗುವ

ಸಾಹಿತ್ಯ: ಹಂಸಲೇಖ  
ಗಾಯನ: ಉನ್ನಿ ಕೃಷ್ಣನ್



ತಾರೆ ತಾರೆ ಮಿನುಗುವ ತಾರೆ ಮಿನುಗುವ ತಾರೆ
ತಾರೆ ತಾರೆ ಮಿನುಗುವ ತಾರೆ ಮಿನುಗುವ ತಾರೆ
ನಯನಕೆ ತಾರೆ ಚೆಲುವಿನ ಧಾರೆ   
ಹೃದಯಕೆ ತಾರೆ ಅಮೃತ ಧಾರೆ
ತಾರೆ ತಾರೆ ಮಿನುಗುವ ತಾರೆ ಮಿನುಗುವ ತಾರೆ

ನಿನ್ನಯ ಕಿರುನೋಟ ಕಿರುನಗುವಿನ ಕಾಟ
ಕುಳಿತಲ್ಲೆ ಕನಸನು ಕಾಣೊ ಖಾಯಿಲೆ ಕರುಣಿಸಿದೆ
ಅರೆಗಳಿಗೆ ನೆನಪಲ್ಲಿ ಮರುಗಳಿಗೆ ತಪದಲ್ಲಿ
ಪ್ರತಿಗಳಿಗೆ ಕಳೆಯುವುದೆಂತೊ ಹೃದಯ ನಡುಗುತಿದೆ
ಹಾಡಿಗೆ ಹಾಡು ಪ್ರೀತಿಗೆ ಪ್ರೀತಿ
ಔಷಧಿ ಬಾರೆ ಬೇಗನೆ ಬಾರೆ ಔಷಧಿ ತಾರೆ
ಸೌಂದರ್ಯ ಲೋಕದ ರಾಣಿ  ಸಂಗೀತ ಸಾರ ರಸವಾಣಿ
ಮನದುಯ್ಯಾಲೆ ನಿಂದು ತೂಗೋಳೆ  ನನ್ನ ಮೇಲೆ ದಯವ ತೋರೆ

ತಾರೆ ತಾರೆ ಮಿನುಗುವ ತಾರೆ ಮಿನುಗುವ ತಾರೆ
ತಾರೆ ತಾರೆ ಮಿನುಗುವ ತಾರೆ ಮಿನುಗುವ ತಾರೆ
ನಯನಕೆ ತಾರೆ ಚೆಲುವಿನ ಧಾರೆ  
ಹೃದಯಕೆ ತಾರೆ ಅಮೃತ ಧಾರೆ
ತಾರೆ ತಾರೆ ಮಿನುಗುವ ತಾರೆ ಮಿನುಗುವ ತಾರೆ

ಪ್ರೇಮಿಗೆ ಯುಗ ನಿಮಿಷ ವಿರಹಿಗೆ ಕ್ಷಣ ವರುಷ
ಆ ನನ್ನ ಪ್ರೇಮದ ಪದವಿ ದಯಪಾಲಿಸು ಬಾರೆ
ಹೆಣ್ಣಿನ ಗುಣಗಾನ ಪ್ರೇಮಿಗೆ ವರದಾನ
ಬಾಳೆಲ್ಲ ಆರಾಧಿಸುವೆ ಅನುಮತಿಯ ತಾರೆ
ಅಂತರ ಗಂಗೆ ಅಂತರ ಗಂಗೆ
ನಿರ್ಮಲ ನೀರೆ ಜೀವನ ಧಾರೆ ಪ್ರೀತಿಸು ಬಾರೆ
ಅಪರೂಪದ ಸ್ನೇಹದ ತಾರೆ ಅನುರಾಗ ಸಂಗಮ ತಾರೆ
ನಿನ್ನ ಆಂತರ್ಯ ಗೆಲ್ಲೋ ಚಾತುರ್ಯ ಬಂದು ನೀನೆ ತಿಳಿಸಿ ತೋರೆ

ತಾರೆ ತಾರೆ ಮಿನುಗುವ ತಾರೆ ಮಿನುಗುವ ತಾರೆ
ತಾರೆ ತಾರೆ ಮಿನುಗುವ ತಾರೆ ಮಿನುಗುವ ತಾರೆ
ನಯನಕೆ ತಾರೆ ಚೆಲುವಿನ ಧಾರೆ ಹೃದಯಕೆ ತಾರೆ ಅಮೃತ ಧಾರೆ
ತಾರೆ ತಾರೆ ಮಿನುಗುವ ತಾರೆ ಮಿನುಗುವ ತಾರೆ

********************************************************************************

No comments:

Post a Comment