
ಚಲನಚಿತ್ರ: ರಾಜ ನನ್ನ ರಾಜ (1976)
ಸಾಹಿತ್ಯ : "ಸಾಹಿತ್ಯ ರತ್ನ" ಚಿ. ಉದಯಶಂಕರ್
ಸಂಗೀತ: ಜಿ. ಕೆ. ವೆಂಕಟೇಶ್
ಗಾಯಕರು : "ಗಾನ ಗಂಧರ್ವ" ಡಾ. ರಾಜಕುಮಾರ್.
ನಿರ್ದೇಶನ: ಎ. ವಿ. ಶೇಷಗಿರಿ ರಾವ್
ನಟನೆ: ರಾಜ್ ಕುಮಾರ್, ಆರತಿ, ಕೆ. ಎಸ್. ಅಶ್ವಥ್
ನಿನದೇ ನೆನಪು ದಿನವೂ ಮನದಲ್ಲಿ...
ನೋಡುವ ಆಸೆಯು ತುಂಬಿದೆ ನನ್ನಲಿ ನನ್ನಲಿ...
ನಿನದೇ ನೆನಪು ದಿನವೂ ಮನದಲ್ಲಿ...
ನೋಡುವ ಆಸೆಯು ತುಂಬಿದೆ ನನ್ನಲಿ ನನ್ನಲಿ...
ತಂಗಾಳಿಯಲ್ಲಿ ಬೆಂದೆ, ಏಕಾಂತದಲ್ಲಿ ನಾನೊಂದೆ...
ತಂಗಾಳಿಯಲ್ಲಿ ಬೆಂದೆ, ಏಕಾಂತದಲ್ಲಿ ನಾನೊಂದೆ...
ಹಗಲಲಿ ತಿರುಗಿ ಬಳಲಿದೆ,
ಇರುಳಲಿ ಬಯಸಿ ಕೊರಗಿದೆ...
ದಿನವೂ ನಿನ್ನನಾ, ಕಾಣದೆ...
ನಿನದೇ ನೆನಪು ದಿನವೂ ಮನದಲ್ಲಿ...
ನೋಡುವ ಆಸೆಯು ತುಂಬಿದೆ ನನ್ನಲಿ ನನ್ನಲಿ...
ಕಡಲಿಂದ ಬೇರೆಯಾಗಿ ತೆಲಾಡೊ ಮೋಡವಾಗಿ...
ಕಡಲಿಂದ ಬೇರೆಯಾಗಿ ತೆಲಾಡೊ ಮೋಡವಾಗಿ...
ಕರಗುತ ಧರೆಗೆ ಇಳಿವುದು,
ಹರಿಯುತ ಕಡಲ ಬೆರೆವುದು...
ನಮ್ಮೀ ಬಾಳಿನ, ಬಗೆಯಿದು...
ನಿನದೇ ನೆನಪು ದಿನವೂ ಮನದಲ್ಲಿ...
ನೋಡುವ ಆಸೆಯು ತುಂಬಿದೆ ನನ್ನಲಿ ನನ್ನಲಿ...
ಚಂದಿರನ ಕಾಣದಿರುಳು ನೀನಿರದೆ ನನ್ನ ಬಾಳು...
ಚಂದಿರನ ಕಾಣದಿರುಳು ನೀನಿರದೆ ನನ್ನ ಬಾಳು...
ಮನಸಲಿ ಏನೋ ತಳಮಳ,
ಹೃದಯದಿ ತುಂಬ ಕಳವಳ...
ದಿನವೂ ನಿನ್ನದೇ ಹಂಬಲ...
ನಿನದೇ ನೆನಪು ದಿನವೂ ಮನದಲ್ಲಿ...
ನೋಡುವ ಆಸೆಯು ತುಂಬಿದೆ ನನ್ನಲಿ ನನ್ನಲಿ...
*********************************************************************************
No comments:
Post a Comment