Thursday, August 30, 2018

ನಮ್ಮೂರ ಮಂದಾರ ಹೂವೇ (1997)


ಓಂಕಾರದಿ ಕಂಡೆ

ಚಲನಚಿತ್ರ: ನಮ್ಮೂರ ಮಂದಾರ ಹೂವೇ (1997)
ನಿರ್ದೇಶನ: ಸುನೀಲ್ ಕುಮಾರ್ ದೇಸಾಯಿ 
ಸಂಗೀತ: ಇಳಯರಾಜ
ಸಾಹಿತ್ಯ: ವಿ. ಮನೋಹರ್ 
ಗಾಯಕರು: ಇಳಯರಾಜ, ಚಿತ್ರಾ 
ನಟನೆ: ಶಿವರಾಜ್ ಕುಮಾರ್, ಪ್ರೇಮಾ, ರಮೇಶ್ ಅರವಿಂದ್ 


ಓಂಕಾರದಿ ಕಂಡೆ ಪ್ರೇಮನಾದವ..
ಈ ತಾಣದಿ ತಂದೆ ನೀ ಶುಭೋದಯ..
ಅನುರಾಗ ನದಿಯ  ಜೇನ ಕಡಲ ಸೇರಿತು..
ಪ್ರಿಯರಾಗದಿಂದ ಬದುಕೇ ಗೆಲುವ ಕಂಡಿತು..
ನಿನದೇ.. ಸ್ವರವೂ... ನಿನದೇ..ವರವು..

ಓಂಕಾರದಿ ಕಂಡೆ ಪ್ರೇಮನಾದವ..
ಈ ತಾಣದಿ ತಂದೆ ನೀ ಶುಭೋದಯ..

ನಿನ್ನೀ ಹರುಷ.. ನನಗೆ ವಸಂತ..
ನಿನ್ನೀ ಒಲವು.. ಮಧುರಾನಂತ..
ಮುಂಜಾನೆ ಮೂಡೋ ರಂಗಾವಲಿ..
ನೀನಾದೆ ನನ್ನ ಈ ಬಾಳಲಿ..
ಮಂದಹಾಸ ಎಂದೂ ನಿಂದೆ..
ನಿನ್ನ ಜಯವೂ ಎಂದೂ ನಂದೆ..
ಒಲವೇ.. ಒಲವೇ.. ನಿನ್ನದೇ ಗೆಲುವು..

ಓಂಕಾರದಿ ಕಂಡೆ ಪ್ರೇಮನಾದವ..
ಈ ತಾಣದಿ ತಂದೆ ನೀ ಶುಭೋದಯ..
ಅನುರಾಗ ನದಿಯ  ಜೇನ ಕಡಲ ಸೇರಿತು..
ಪ್ರಿಯರಾಗದಿಂದ ಬದುಕೇ ಗೆಲುವ ಕಂಡಿತು..
ನಿನದೇ.. ಸ್ವರವೂ... ನಿನದೇ..ವರವು..

ಓಂಕಾರದಿ ಕಂಡೆ ಪ್ರೇಮನಾದವ..
ಒಲವು ಇರುವ ಮನಸೇ ಪ್ರಶಾಂತ..
ಗೆಳತೀ ಹರಿಸು ಹರುಷ ಸಂಗೀತ..
ನೂರಾರು ಹೂವು ಹಾಡಾದವು..
ನಾನ್ನಾಸೆಯೆಲ್ಲ ಸಾಕಾರವು..
ಮನ ತುಂಬಾ ನಿನ್ನ ಧ್ಯಾನ..
ಬದುಕೆಲ್ಲ ಚೈತ್ರ ಗಾನ..
ನಿನದೇ.. ಸ್ವರವೂ.. ನಿನದೇ.. ವರವು..

ಓಂಕಾರದಿ ಕಂಡೆ ಪ್ರೇಮನಾದವ..
ಈ ತಾಣದಿ ತಂದೆ ನೀ ಶುಭೋದಯ..
ಅನುರಾಗ ನದಿಯ  ಜೇನ ಕಡಲ ಸೇರಿತು..
ಪ್ರಿಯರಾಗದಿಂದ ಬದುಕೇ ಗೆಲುವ ಕಂಡಿತು..
ನಿನದೇ.. ಸ್ವರವೂ... ನಿನದೇ..ವರವು..

ಓಂಕಾರದಿ ಕಂಡೆ ಪ್ರೇಮನಾದವ..
ಈ ತಾಣದಿ ತಂದೆ ನೀ ಶುಭೋದಯ..

*******************************************************************************

ಮನದಾಸೆ ಹಕ್ಕಿಯಾಗಿ

ಸಾಹಿತ್ಯ: ದೊಡ್ಡರಂಗೇಗೌಡ 
ಗಾಯನ: ಮಂಜುಳಾ ಗುರುರಾಜ್, ಎಸ್.ಪಿ.ಬಾಲಸುಬ್ರಹ್ಮಣ್ಯಂ 


ಮನದಾಸೆ ಹಕ್ಕಿಯಾಗಿ ಮುಗಿಲಾಗೆ ತೇಲಿ ತೇಲಿ |೨|
ಬನದಾಗೆ ಸುತ್ತಿ ಸುಳಿದು ಬಯಲಾಗೆ ಜೀಕಿ ಜೀಕಿ
ಓ ಜುಳುಜುಳು ಹರಿಯುವ ನದಿಯಲಿ
ಕಿಲಕಿಲ ಉಲಿಯುವ ಗಿಳಿಯಲಿ |೨|
ಪ್ರೀತಿ ಮಾತೇನೇ!

ಮನದಾಸೆ ಹಕ್ಕಿಯಾಗಿ ಮುಗಿಲಾಗೆ ತೇಲಿ ತೇಲಿ
ಬನದಾಗೆ ಸುತ್ತಿ ಸುಳಿದು ಬಯಲಾಗೆ ಜೀಕಿ ಜೀಕಿ
ಚಿಲಿಪಿಲಿ ಹಾಡೊ ಮೈನಾ
ಪ್ರೇಮದರ್ಥ ಗೊತ್ತೆ ನಿನಗೆ?..
ತುಡಿವ ಮಿಡಿವ ಜೀವ ಒಳಗೆ |೩|
ತುಂತುಂ ಎಂದು ಹಾಡೊ ದುಂಬಿ
ಪ್ರೀತಿ ರೀತಿ ಗೊತ್ತೆ ನಿನಗೆ?..
ಕೂಗಿ ಕರೆವ ಭಾವ ಒಳಗೆ |೩|

ನೀಲಾದ ನೆಲಕೆ ಹಸಿರಾ ನೀಡೆ ತೂಗಾಡೊ ಗಿಡಮರ ಪ್ರೀತಿ
ಬೊಳಾದ ಮರಕೆ ಚಿಗುರಾ ತಂದು ಓಲಾಡೊ ಎಲೆಯೆಲಿ ಪ್ರೀತಿ
ಇತ್ತಾ ಮಲೆಮಲೆಯಲ್ಲಿ.. ಅತ್ತಾ ನೆಲೆನೆಲೆಯಲ್ಲಿ
ಸುಂದರ ಸುಂದರ ಸೆಲೆ.. ಹಂದರ ಹಂದರ ಬಲೆ
ಎಂದೂ ಪ್ರೀತಿ ತಂದಾಗ..

ಮನದಾಸೆ ಹಕ್ಕಿಯಾಗಿ ಮುಗಿಲಾಗೆ ತೇಲಿ ತೇಲಿ
ಬನದಾಗೆ ಸುತ್ತಿ ಸುಳಿದು ಬಯಲಾಗೆ ಜೀಕಿ ಜೀಕಿ
ಓ ಜುಳುಜುಳು ಹರಿಯುವ ನದಿಯಲಿ
ಕಿಲಕಿಲ ಉಲಿಯುವ ಗಿಳಿಯಲಿ
ಓ ನ ನ ನ ನ ನ ನ ನ ನಾ ಪ್ರೀತಿ ಮಾತೇನೇ!

ಮನದಾಸೆ ಹಕ್ಕಿಯಾಗಿ ಮುಗಿಲಾಗೆ ತೇಲಿ ತೇಲಿ
ಬನದಾಗೆ ಸುತ್ತಿ ಸುಳಿದು ಬಯಲಾಗೆ ಜೀಕಿ ಜೀಕಿ

ಪ್ರೇಮಿ ಅವಳ ಕಾಣದೆ ಇರಲು..
ಪ್ರೀತಿ ನೋವು ತಂದೆ ತಹುದು
ಪ್ರೇಮ ರೋಗ ಬಂದೇ ಬಹುದು |೩|
ಪ್ರೇಮ ರೋಗ ಬಿಡದೆ ಬರಲು..
ಪ್ರೇಮಿ ಎದೆಯ ಸುಡದೆ ಇರಲು
ಸುಡುವ ಎದೆಗೆ ಪ್ರೇಮವೆ ಮದ್ದು |೩|

ಸಂತೋಷ ತಂದಾ ಪ್ರೀತಿ ಎಂದು ನೋವಲ್ಲೆ ಮುಳುಗಿ ಸಾಗಿ
ಸಂಗಾತಿ ಕಂಡಾ ಪ್ರೀತಿ ನಿತ್ಯ ಬಾಳಲ್ಲಿ ಬೆಂದು ಹೋಗಿ
ಹೊನ್ನಾ ರಾಗ ರಂಗಿನಲ್ಲೀ..
ಮಣ್ಣಾ ಅಂದ ಚಂದದಲ್ಲೀ
ಚಂದನ ಚಂದನ ಸಿರಿ
ಚುಂಬನ ಚುಂಬನ ಸವಿ ಓ ಓ ಓ ಓ!

ಮನದಾಸೆ ಹಕ್ಕಿಯಾಗಿ ಋತುಮಾನ ರಂಗು ತೂಗಿ
ಸಂತೋಷ ಸೂರ್ಯ ಮಿನುಗಿ ಅನುರಾಗ ಭಾನು ಬೀಗಿ
ಓ ಕನಸಲಿ ಮನಸಲಿ ಅಲೆಯುತ
ನೋವಲಿ ನಲಿವಲಿ ಕಲೆಯುತ
ಏನು ಅರಿಯೇನಾ ಅ ಅ ಅ ಆ!

ಮನದಾಸೆ ಹಕ್ಕಿಯಾಗಿ ಋತುಮಾನ ರಂಗು ತೂಗಿ
ಸಂತೋಷ ಸೂರ್ಯ ಮಿನುಗಿ ಅನುರಾಗ ಭಾನು ಬೀಗಿ

********************************************************************************

ಹಳ್ಳೀ ಲಾವಣಿಯಲಿ

ಸಾಹಿತ್ಯ: ಕೆ. ಕಲ್ಯಾಣ್ 
ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ 


ಆ ಆ ಆ ಆ ಆ ಆ...
ಹಳ್ಳೀ ಲಾವಣಿಯಲಿ ಲಾಲಿ ಸುವ್ವಲಾಲಿ
ಎಲ್ಲೀ ಲಲಿತವಲ್ಲಿ ಇಲ್ಲಿ ಮನಸಲ್ಲಿ
ನೀ ಮುಡಿದರೆ, ಅ ಆ ಆ
ಹೂ ನಲಿವುದು, ಅ ಆ ಆ
ನೀ ನುಡಿದರೆ, ಅ ಆ ಆ
ಕಾವ್ಯಾ ಸುರಿವುದು, ಅ ಆ ಆ
ಅರೆ ಅಹ್ ಆ ಆ ಆ..

ಹಳ್ಳೀ ಲಾವಣಿಯಲಿ ಲಾಲಿ ಸುವ್ವಲಾಲಿ
ಎಲ್ಲೀ ಲಲಿತವಲ್ಲಿ ಇಲ್ಲಿ ಮನಸಲ್ಲಿ

ಮುತ್ತು ಹೇಳಿತ್ತು ಮುತ್ತಲ್ಲೆ ನಿನ್ನ ಸಿಂಗರಿಸು ಅಂತ
ಅನುಮತಿಯ ನೀಡುವೆಯ ಕಲ್ಯಾಣಿ ಕಲ್ಯಾಣಿ
ಗಿಳಿಯು ಹೇಳಿತು ನಿನ್ನಿಂದ ಮಾತು ಕಲಿಬೇಕು ಅಂತ
ನಿನ್ನ ಮಾತೆ ಗಿಳಿಗಳಿಗೆ ಕವಿವಾಣಿ ಕವಿವಾಣಿ
ಹಾಲು ಹಂಸೆ ಹೇಳುತಾವೆ..
ನಿನ್ನ ನಡೆಯೆ ಸ್ಪೂರ್ತಿ
ಮಿಂಚು ಬಳ್ಳಿ ಹೇಳುತಾವೆ..
ನಿನ್ನ ತಳುಕೆ ಸ್ಪೂರ್ತಿ
ಆಕಾಶ, ಸಂಸಾರ, ಶೃ೦ಗಾರ ಬೇಡುತ್ತ ಕಾದಿತ್ತು ಆ ಬಾನಲ್ಲಿ

ಹಳ್ಳೀ ಲಾವಣಿಯಲಿ ಲಾಲಿ ಸುವ್ವಲಾಲಿ
ಎಲ್ಲೀ ಲಲಿತವಲ್ಲಿ ಇಲ್ಲಿ ಮನಸಲ್ಲಿ
ನೀ ಮುಡಿದರೆ, ಅ ಆ ಆ
ಹೂ ನಲಿವುದು, ಅ ಆ ಆ
ನೀ ನುಡಿದರೆ, ಅ ಆ ಆ
ಕಾವ್ಯಾ ಸುರಿವುದು, ಅ ಆ ಆ
ಅರೆ ಅಹ್ ಅ ಅ ಅ ಆ

ಹಳ್ಳೀ ಲಾವಣಿಯಲಿ ಲಾಲಿ ಸುವ್ವಲಾಲಿ
ಎಲ್ಲೀ ಲಲಿತವಲ್ಲಿ ಇಲ್ಲಿ ಮನಸಲ್ಲಿ

ಬೀಸೊ ತಂಗಾಳಿ ನಿನ್ನನ್ನು ಸೋಕಿ ತಂಪಾದೆ ಅಂತು
ನಿನ್ನ ವಯಸೆ ತಂಪಿನಲು ಬಲು ತಂಪು ಬಲು ತಂಪು
ಹರಿಯೊ ನೀರೆಲ್ಲ ನಿನ್ನ ಗೆಜ್ಜೆ ನಾದ ವರವಾಯ್ತು ಅಂತು
ನೀ ಕೊಡುವ ಕಲರವವೆ ಕಿವಿಗಿಂಪು, ಕಿವಿಗಿಂಪು
ಮಳೆಬಿಲ್ಲು ಅಂದುಕೊಂತು ನಿನ್ನ ಬಣ್ಣ ಸ್ಪೂರ್ತಿ
ಕವಿ ಮನಸು ಹಾಡಿಕೊಂತು ನಿನ್ನ ಹೆಸರೆ ಸ್ಪೂರ್ತಿ
ಈನಿನ್ನ ವ್ಯ್ಯಾರ ನೋಡುತ್ತ ಹಾಡಿತ್ತು ನಿಂತಿತ್ತು
ಮಂದಾರ ಈ ಊರಲ್ಲಿ

ಹಳ್ಳೀ ಲಾವಣಿಯಲಿ ಲಾಲಿ ಸುವ್ವಲಾಲಿ
ಎಲ್ಲೀ ಲಲಿತವಲ್ಲಿ ಇಲ್ಲಿ ಮನಸಲ್ಲಿ
ನೀ ಮುಡಿದರೆ, ಅ ಆ ಆ
ಹೂ ನಲಿವುದು, ಅ ಆ ಆ
ನೀ ನುಡಿದರೆ, ಅ ಆ ಆ
ಕಾವ್ಯಾ ಸುರಿವುದು, ಅ ಆ ಆ
ಅರೆ ಅಹ್ ಅ ಅ ಅ ಆ

ಹಳ್ಳೀ ಲಾವಣಿಯಲಿ ಲಾಲಿ ಸುವ್ವಲಾಲಿ
ಎಲ್ಲೀ ಲಲಿತವಲ್ಲಿ ಇಲ್ಲಿ ಮನಸಲ್ಲಿ

********************************************************************************

ಹೇಳೆ ಕೋಗಿಲೆ

ಸಾಹಿತ್ಯ: ಕೆ.ಕಲ್ಯಾಣ್  
ಗಾಯಕರು: ಚಿತ್ರಾ 


ಹೇಳೆ ಕೋಗಿಲೆ ಇಂಪಾಗಲ ಹೇಳೆ ಮಲ್ಲಿಗೆ ಕಂಪಾಗಲ
ಎಲ್ಲೆಲ್ಲೂ ಹೊಸ ಬೆಳಕು ಕಂಡಂತಾಯಿತು
ಹೇಳೆ ಇಬ್ಬನಿ ತಂಪಾಗಲ
ಹೇಳೆ ದುಂಬಿಯೆ ಜೊಂಪಾಗಲ
ಎಲ್ಲೆಲ್ಲೂ ಹೊಸ ಚಿಗುರು ಬಂದಂತಾಯಿತು 
ಹೇ ಓ ಮೈನಾ ಈ ಮೈನ ಮರೆತಾಯಿತು
ಈ ಮನ ದುಂಬಿ ಹುರಿದುಂಬಿದಂತಾಯಿತು
ಹೇ ಏಕಿಂತ ಲವಲವಿಕೆ ಮೈಗೂಡಿತು
ಹೇಳೆ ಕೋಗಿಲೆ ಇಂಪಾಗಲ
ಎಲ್ಲೆಲ್ಲೂ ಹೊಸ ಬೆಳಕು ಕಂಡಂತಾಯಿತು

ಜಿಗಿಯೊ ಭಾವನೆಯು ಮೈಯಲಿ
ಹಸಿರ ಉತ್ಸವವ ಮಾಡಿತೊ
ಕನಸೊ ಕಲ್ಪನೆಯೊ ತೋಚದೆ
ತುಮುಲ ಪುಲಕಗಳ ತಂದಿತೊ
ಹೂವುಗಳ ಪರಿಮಳವೆ
ಪರಿಪರಿ ನಾಚುವಂತೆ
ಹೃದಯವೆ ಭ್ರಮಿಸುತಿದೆ ಏಕಿಂದು
ಹೇಳೆ ಕೋಗಿಲೆ ಇಂಪಾಗಲ
ಎಲ್ಲೆಲ್ಲೂ ಹೊಸ ಬೆಳಕು ಕಂಡಂತಾಯಿತು
ಹೇ ಓ ಮೈನ ಈ ಮೈನ ಮರೆತಾಯಿತು
ಈ ಮನ ದುಂಬಿ ಹುರಿದುಂಬಿದಂತಾಯಿತು
ಹೇ ಏಕಿಂತ ಲವಲವಿಕೆ ಮೈಗೂಡಿತು
ಹೇಳೆ ಕೋಗಿಲೆ ಇಂಪಾಗಲ
ಮುಗಿಲ ಮೇಲೇರಿ ಹಾರುವ
ಬಯಕೆ ಏಕಿಂದು ಮೂಡಿತು
ಕಡಲ ಒಡಲಾಳ ಈಜುವ
ತವಕ ಏಕಿಲ್ಲಿ ಕಾಡಿತು
ಹೊಸ ಆಕಾಶವಿದೊ
ಹೊಸತು ಭೂಮಿಯಿದೊ
ಹೃದಯವೆ ಭ್ರಮಿಸುತಿದೆ ಏಕಿಂದು
ಹೇಳೆ ಕೋಗಿಲೆ ಇಂಪಾಗಲ
ಹೇಳೆ ಮಲ್ಲಿಗೆ ಕಂಪಾಗಲ
ಎಲ್ಲೆಲ್ಲೂ ಹೊಸ ಬೆಳಕು ಕಂಡಂತಾಯಿತು
ಹೇಳೆ ಇಬ್ಬನಿ ತಂಪಾಗಲ
ಹೇಳೆ ದುಂಬಿಯೆ ಜೊಂಪಾಗಲ
ಎಲ್ಲೆಲ್ಲೂ ಹೊಸ ಚಿಗುರು ಬಂದಂತಾಯಿತು
ಹೇ ಓ ಮೈನಾ ಈ ಮೈನ ಮರೆತಾಯಿತು
ಈ ಮನ ದುಂಬಿ ಹುರಿದುಂಬಿದಂತಾಯಿತು
ಹೇ ಏಕಿಂತ ಲವಲವಿಕೆ ಮೈಗೂಡಿತು
ಹೇಳೆ ಕೋಗಿಲೆ ಇಂಪಾಗಲ
ಎಲ್ಲೆಲ್ಲೂ ಹೊಸ ಬೆಳಕು ಕಂಡಂತಾಯಿತು

*********************************************************************************

ಮುತ್ತು ಮುತ್ತು ನೀರ ಹನಿಯ

ಸಾಹಿತ್ಯ: ಕೆ.ಕಲ್ಯಾಣ್ 
ಗಾಯಕರು: ಎಸ್.ಪಿ.ಬಾಲಸುಬ್ರಮಣ್ಯಂ, ಚಿತ್ರಾ


ಮುತ್ತು ಮುತ್ತು ನೀರ ಹನಿಯ ತಾಂತನನಂ
ಉಲ್ಲಾಸದ ಮೇರೆ ಮೀರಿ ಧೀಂತನಕಧೀಂ
ಆಹಾ ಇಂತ ಸ್ಪಂದನಕಿಲ್ಲಿ ಮೂಲ ಋತುಮಾನ
ಓಹೋ ಇದೇನಿಂಥ ಹೊಸಥರ ಚೈತ್ರ ಋತುಗಾನ
ಮೈ ಮನವೇ ಋತು ಋತುಗಳ ಚೇತನ

ಋತುಗಳ ಆ ಬಂಡಿಯ ಮೇಲೆ ಈ ಬಾಳ ಪಯಣವಿದೆ
ಬಾಳಿನ ಈ ಪಯಣಗಳನ್ನು ಪ್ರೀತಿಯೆ ನಡೆಸುತಿದೆ
ಮಿನು ಮಿನುಗೋ ಮಿಂಚುಗಳಂತೆ ಬಾಳಲ್ಲಿ ತಿರುವು ಇದೆ
ಒಂದೊಂದು ತಿರುವುಗಳಲ್ಲೂ ಶೃಂಗಾರ ಸರಸವಿದೆ
ಆಹಾ ಎಲ್ಲಾ ಮನಸೂ ಆಹ್ಲಾದಮಯವಿಲ್ಲಿ
ಓಹೋ ಎಲ್ಲಾ ಹೃದಯ ತುಂಬೋ ಈ ಸ್ನೇಹ ಜೊತೆಯಲ್ಲಿ
ಇಲ್ಲಿ ತುಟಿಪಿಟಿ ಕೆನ್ನೆಗೆ ಚಟಪಟ ಪುಟಿಯುವ ತುಂತುರು ಸಡಗರದಲ್ಲಿ

ತಿರುತಿರುಗೋ ಭೂಮಿಯಿಂದ ಎಲ್ಲ ಮನಸು ತಿರುಗುತಿವೆ
ತಿರುತಿರುಗೋ ಮನಸುಗಳೊಳಗೆ ಆಸೆಗಳು ತಿರುಗುತಿವೆ
ತಿರುಗಾಡೊ ಮನಸುಗಳೆಲ್ಲ ಒಂದೆಡೆಗೆ ನಿಲ್ಲುತಿವೆ
ಅದು ನಿಲ್ಲೋ ಜಾಗದ ಹೆಸರು ಸವಿ ಪ್ರೀತಿ ಅಲ್ಲವೆ
ಓಹೋ ಎಂಥ ಸಮಯ ಆತ್ಮೀಯವಾಯ್ತಿಲ್ಲಿ
ಓಹೋ ಇಲ್ಲಿ ಎಲ್ಲಾ ಹೃದಯ ಬೆಳಕಾಗಿ ಹೋಯ್ತಿಲ್ಲಿ
ಇಲ್ಲಿ ಝುಳು ಝುಳು ಹನಿಯಿಸಿ ಪುಳಕಿಸಿ ಪುಸಯಿಸಿ
ಕುಣಿಸೋ ಸಡಗರದಲ್ಲಿ ನಾವಿಲ್ಲಿ

*********************************************************************************

ಓಂಕಾರದಿ ಕಂಡೆ (Female)

ಸಾಹಿತ್ಯ: ಎಸ್.ಎಮ್.ಪಾಟೀಲ್ 
ಗಾಯನ: ಚಿತ್ರಾ 


ಓಂಕಾರದಿ ಕಂಡೆ ಪ್ರೇಮ ನಾದವ
ಈ ತಾನದಿ ತಂದೆ ನೀ ಶುಭೋದಯ
ಮಂದಾರವಿಲ್ಲಿ ಅರಳಿ ಕಂಪು ಸೂಸಿದೆ
ಸೌಗಂಧ ಹಾಸ ಚೆಲ್ಲಿ ನಿನ್ನ ಕಾದಿದೆ
ಅರಿಯೋ ಇನಿಯ ಒಲವ ಕರೆಯ

ಮಧುರ ತಾನ ಸ್ವರಗಳ ಸೇರಿ
ಜಲಲ ಧಾರೆ ಜಲದಲಿ ಜಾರಿ
ಆಕಾಶದಾಚೆ ಆ ಹೂ ನಗೆ
ಆ ತಾರೆ ಏಕೆ ತಂಪೇರಿದೆ
ಬಂದಾಗ ಅರಿವು ಇಲ್ಲಿ
ತಂದೀತು ಒಲವು ಅಲ್ಲಿ
ಅರಿಯೋ ಇನಿಯ ಒಲವ ನಿಧಿಯ

ನಿನದೆ ಧ್ಯಾನ ಹೃದಯದಿ ತೇಲಿ
ಲಯದಿ ರಾಗ ಅಲೆಗಳ ಬೀರಿ
ಈ ಗೀತೆಗಾದೆ ನೀ ಭಾವನ
ಈ ಬಾಳಿಗಾದೆ ನೀ ಚೇತನ
ಸಂಗೀತ ಸುಧೆಯ ತುಂಬಿ
ಮಾಧುರ್ಯ ಮನದಿ ತಂದೆ
ಅರಿಯೋ ಇನಿಯ ಒಲವ ಸವಿಯ


*********************************************************************************

No comments:

Post a Comment