ನೀನೆಂದು ನನ್ನವನು
ಚಲನಚಿತ್ರ: ತಾಜ್ ಮಹಲ್ಸಾಹಿತ್ಯ: ಆರ್. ಚಂದ್ರು

ಹಾಡಿದವರು: ಶ್ರೇಯಾ ಘೋಷಾಲ್
ನಟರು: ಅಜಯ್ ರಾವ್, ಪೂಜಾ ಗಾಂಧಿ
ನೀನೆಂದು ನನ್ನವನು
ನಾನೆಂದೂ ನಿನ್ನವಳು
ನಿನಗಾಗಿ ಕಾಯುವೆ ನಾನು
ಹಗಲು ರಾತ್ರಿ ಬಾರೋ
ಮನಸಲ್ಲಿ ನೀನಿರುವೆ ಕನಸಲ್ಲೂ ಕಾದಿರುವೆ
ಪ್ರೀತಿಲಿ ತೇಲಿಸಿ ನಿನ್ನನು
ಸೇರುವೆ ನಾನು ಬಾರೋ
ನೀ ಮನದ ತುಡಿತ ಕಣೋ
ಈ ಹೃದಯ ಮಿಡಿತ ಕಣೋ
ಓ ನಿನ್ನ ಮೊದಲ ಮಾತಿನಲೆ
ನಾ ಕಳೆದು ಹೋಗಿರುವೆ
ನಿನ್ನಂದ ಚೆಂದಕೆ ಸಾಟಿ
ಯಾರು ಹೇಳೋ ಓ ಚೆಲುವ
ಅಂದು ಕಂಡ ಕನಸು ನೀನು
ಇಂದು ನನ್ನ ಬದುಕೇ ನೀನು
ನೀ ಬೆರೆತು ಹೋದೆ ನನ್ನೀ ಉಸಿರಲಿ
ನಗುನಗುತ ಮನಸನು ಕದ್ದು
ಅನುದಿನವು ಹೊಸತನ ತಂದು
ನೀ ಒಲಿದು ಬಾರೋ ನನ್ನೀ ಬಾಳಲಿ
ಲಾ ಲಾ......
ಈ ನನ್ನ ಹೃದಯದ ಗೂಡಲಿ
ನೀನೆ ರಾಜ ಓ ಚೆಲುವ
ನಿನ್ನ ಪ್ರೀತಿ ಮೂಡಿದ್ದಕ್ಕಾಗಿ
ನನ್ನ ಹೃದಯ ಹಾಡಿದೆ ಕೂಗಿ
ಏಳೇಳು ಜನ್ಮದಲು ನಿನ್ನ ಸೇರುವೆ
ಈ ನನ್ನ ಉಸಿರಿರೋ ತನಕ
ನಿನ್ನ ಕೂಡಿ ಬಾಳುವ ತವಕ
ಸಂಗಾತಿ ನಿನಗಾಗಿ ನಾ ಕಾಯುವೆ
ಲಾ ಲಾ.....
ನಿನ ಪ್ರೀತಿಗಾಗಿ ನಾನು ಸೋತು
ಹೋದೆ ಓ ಚೆಲುವ....
ನೀನೆಂದು ನನ್ನವನು............
*******************************************************************************
ನೀ ನನ್ನ ಮನಸಿನಲಿ
ಸಾಹಿತ್ಯ: ಅಭಿಮಾನ್ ರಾಯ್ ಗಾಯಕರು: ರಾಜೇಶ್ ಕೃಷ್ಣನ್
ನೀ ನನ್ನ ಮನಸಿನಲಿ ನಾ ಕಾಣೋ ಕನಸಿನಲಿ
ಮಾತಾಡೋ ಮಾತಿನಲಿ ನಾ ಹಾಡೋ ಹಾಡಿನಲಿ
ಏಕೋ ಕಾಣೆ ನೀನೆ ಕಾಣುವೆ
ಏಕೋ ಏನೋ ನೀನೆ ಕೇಳುವೆ
ಈ ನನ್ನ ಹೃದಯದ ತುಂಬ ನೀ ನಗುವ ಪ್ರತಿಬಿಂಬ
ಉಸಿರಾಡುವೆ ಪ್ರತಿ ಕ್ಷಣ ನಿನ್ನಲೇ
ನಲಿದಾಡುವೆ ಸದಾ ನಿನ್ನ ನೆನಪಲೆ
ಅನುರಾಗದ ಸವಿ ಈ ಬಂಧನ
ಮನದಾಳದ ಭಾವ ಈ ಸ್ಪಂದನ
ಮೌನವೇ ಒಮ್ಮೆ ಮಾತಾಡಮ್ಮ
ಓ ಪ್ರೇಮವೇ ನನ್ನ ಮನ ಸೇರಮ್ಮ
ಈ ನನ್ನ ಹೃದಯದ ತುಂಬ ನೀ ನಗುವ ಪ್ರತಿಬಿಂಬ
ತಂಗಾಳಿಯಾಗಿ ನೀ ತೇಲಿಬಾ
ಬೆಳದಿಂಗಳಂತೆ ಬೆಳಕಾಗಿ ಬಾ
ಮುಂಜಾನೆ ಮಂಜು ನೀನಾಗಲು
ಹೊಂಗಿರಣವಾಗಿ ನಿನ್ನ ಸೇರಲು
ಸುಮ್ಮನೆ ನೀ ಕಾಯಿಸಬೇಡ
ಸುಮ್ಸುಮ್ಮನೆ ನೀ ನೋಯಿಸಬೇಡ
ಈ ನನ್ನ ಹೃದಯದ ತುಂಬ
ನೀ ನಗುವ ಪ್ರತಿಬಿಂಬ
ನೀ ನನ್ನ ಮನಸಿನಲಿ.......
*******************************************************************************
ಖುಷಿಯಾಗಿದೆ ಏಕೋ ನಿನ್ನಿಂದಲೆ
ಸಾಹಿತ್ಯ: ಆರ್. ಚಂದ್ರು ಗಾಯಕರು: ಕುನಾಲ್ ಗಾಂಜಾವಾಲ
ಅವ್ಳಂದ್ರೆ ನಂಗೆ ತುಂಬಾ ಇಷ್ಟ,
ಅವ್ಳಿಗು ನಾನಂದ್ರೆ ಇಷ್ಟ.....ಅನ್ಸತ್ತೆ.....
ಖುಷಿಯಾಗಿದೆ ಏಕೋ ನಿನ್ನಿಂದಲೆ
ನಾ ನೋಡದೆ ನಿನ್ನನು ಇರಲಾರೆನೆ
ಒಮ್ಮೆ ನೀ ನಕ್ಕರೆ ನಾನು ತುಸು ನಾಚುವೆ
ರೆಪ್ಪೆಯ ಮುಚ್ಚದೇ ನಿನ್ನನೆ ನೋಡುವೆ
ಹೇಳೇ ಕೋಗಿಲೆ ಹಾಡು ಈಗಲೇ
ನಿನ್ನ ಜೊತೆಯಲೇ ನಾನು ಹಾಡಲೇ
ಮುಂಜಾನೆ ವೇಳೆ ಚಿಲಿಪಿಲಿ ಕಲರವ ಕೇಳಿ
ನಾ ಮರೆತು ಬಿಟ್ಟೆ ನನ್ನ
ತಣ್ಣನೆ ಗಾಳಿಲಿ ಹುಣ್ಣಿಮೆ ಚಂದ್ರನ ನೋಡಿ
ನಾ ಮರೆತು ಬಿಟ್ಟೆ ನನ್ನ
ಆದರು ಮರೆತೇ ಇಲ್ಲ ನಾನಿನ್ನ
ಲ ಲ ಲ ಲ........
ಆ ಚಿಲಿಪಿಲಿ ಕಲರವ ನಿನದಲ್ಲವೇ
ಆ ಹುಣ್ಣಿಮೆ ಬೆಳಕು ನೀನಲ್ಲವೇ
ಒಮ್ಮೆ ನೀ ನಕ್ಕರೆ............
ಮಂಜಿನ ಹನಿಗಳ ಚಿಗುರೆಲೆಯ ಮೇಲೆ
ನಿನ್ ಹೆಸರ ನಾ ಬರೆದೆ
ಚಿಟಪಟ ಮಳೆಯಲಿ ಪದೆ ಪದೆ ನೆನೆಯುತ
ನಿನ ಸ್ಪರ್ಶವ ಸವಿದೆ
ನಿನ್ನಲ್ಲೇ ನಾ ಬೆರೆತೆ
ಲ ಲ ಲ ಲ ......
ಆ ಮಂಜಿನ ಹನಿಗಳು ನೀನಲ್ಲವೇ
ಆ ಚಿಟಪಟ ಮಳೆಯಲು ನೀನಿರುವೆ
ಒಮ್ಮೆ ನೀ ನಕ್ಕರೆ..........
ಅವ್ನಂದ್ರೆ ನಂಗೆ ತುಂಬಾ ಇಷ್ಟ
ಅವ್ನಿಗೂ ನಾನಂದ್ರೆ ಇಷ್ಟ....ಅನ್ಸತ್ತೆ.....
********************************************************************************
No comments:
Post a Comment