Tuesday, August 28, 2018

ಗೂಗ್ಲಿ (2013)



ಬಿಸಿಲು ಕುದುರೆಯೊಂದು


ಚಲನಚಿತ್ರ : ಗೂಗ್ಲಿ (2013) 
ಸಾಹಿತ್ಯ : ಯೋಗರಾಜ್ ಭಟ್.
ಸಂಗೀತ: ಜೋಶುವಾ ಶ್ರೀಧರ್ 
ಗಾಯಕರು: ರಾಜೇಶ್ ಕೃಷ್ಣನ್.
ನಿರ್ದೇಶನ: ಪವನ್ ಒಡೆಯರ್ 
ನಟನೆ: ಯಶ್, ಕೃತಿ ಕರಬಂಧ 


ಓ...
ಬಿಸಿಲು ಕುದುರೆಯೊಂದು ಎದೆಯಿಂದ ಓಡಿದಂತೆ..
ಅವಳ ನೆನಪಿನಿಂದ ನದಿಯೊಂದು ಮೂಡಿದಂತೆ..
ಕಣ್ಣು ಕಂಬನಿಯಾ ಮುಚ್ಚಿಡಲು ಹೇದರುವುದು...
ನಿನ್ನೆ, ಮೊನ್ನೆಗಳಾ ಎತ್ತಿಡಲಿ ಅನಿಸುವುದು...
ಕೆಳಗೆ ಬಂದು ಮರಳಿ ಹೋದ ಹಾಡಾದ ಚಂದೀರ..
ಅವಳು ಹೋದ ಮೇಲೆ ಬಂದನೋ ಒಂದೇ ಸುಂದರ..
ಬರೆದುಕೊಂಡೆ ಹಣೆಯ ರಂಗೋಲಿ...
ಇನ್ನು ಮುಂದೆ ವಿರಹ ಮಾಮೂಲೀ...
ನನ್ನ ನೆರಳಿಗೂ, ದಾರಿ ಮರೆಯುತಿದೆ..
ಕುರುಡು ಕನಸಿಗೆ, ನೆನಪೇ ದೀವಟಿಗೆ..

ಹೃದಯದ ತೋಟದೊಳಗಡೆ,
ಎಂದೂ ಅರಳದ ಹೂವಿನ ಬೆಳವಣಿಗೆ..
ಎಲ್ಲಿಗೋ ಹೊರಟು ಹೋಗಿದೆ,
ನಂಗೂ ತಿಳಿಯದೇ ನನ್ನಯ ಮುಗುಳುನಗೆ..
ಹೃದಯದ ತೋಟದೊಳಗಡೆ,
ಎಂದೂ ಅರಳದ ಹೂವಿನ ಬೆಳವಣಿಗೆ..
ಎಲ್ಲಿಗೋ ಹೊರಟು ಹೋಗಿದೆ,
ನಂಗೂ ತಿಳಿಯದೇ ನನ್ನಯ ಮುಗುಳುನಗೆ..

ಬಿಸಿಲು ಕುದುರೆಯೊಂದು ಎದೆಯಿಂದ ಓಡಿದಂತೆ..
ಅವಳ ನೆನಪಿನಿಂದ ನದಿಯೊಂದು ಮೂಡಿದಂತೆ..

ಕಣ್ಣಿನ ಕಡಲಲಿ ಮುಳುಗಡೆಯಾಗಿದೆ ನಾನೇ ಬಿಟ್ಟ ದೋಣಿ,
ನಿನ್ನೇಯ ಪ್ರಶ್ನೇಗೆ ಉತ್ತರ ಎಲ್ಲಿದೆ? ಅವಳೋ ತುಂಬಾ ಮೌನಿ,
ಮೊದಲಿನಿಂದ ಮೋಹಿಸುವೇನು, ಮರಳಿ ಬಂದರೆ ಅವಳು..
ನನಗೂ ಗೋತ್ತು, ಅವಳು ಬರಳು ನನ್ನ ಸ್ವಪ್ನದಲೂ..

ಹೃದಯದ ತೋಟದೊಳಗಡೆ,
ಎಂದೂ ಅರಳದ ಹೂವಿನ ಬೆಳವಣಿಗೆ..
ಎಲ್ಲಿಗೋ ಹೊರಟು ಹೋಗಿದೆ,
ನಂಗೂ ತಿಳಿಯದೇ ನನ್ನಯ ಮುಗುಳುನಗೆ..
ಹೃದಯದ ತೋಟದೊಳಗಡೆ,
ಎಂದೂ ಅರಳದ ಹೂವಿನ ಬೆಳವಣಿಗೆ..
ಎಲ್ಲಿಗೋ ಹೊರಟು ಹೋಗಿದೆ,
ನಂಗೂ ತಿಳಿಯದೇ ನನ್ನಯ ಮುಗುಳುನಗೆ..

ಬಿಸಿಲು ಕುದುರೆಯೊಂದು ಎದೆಯಿಂದ ಓಡಿದಂತೆ..
ಅವಳ ನೆನಪಿನಿಂದ ನದಿಯೊಂದು ಮೂಡಿದಂತೆ..


*********************************************************************************

No comments:

Post a Comment