Thursday, August 30, 2018

ಮನಸಾರೆ (2009)


ಎಲ್ಲೋ ಮಳೆಯಾಗಿದೆ

ಚಲನಚಿತ್ರ: ಮನಸಾರೆ (2009) 
ಸಾಹಿತ್ಯ:ಜಯಂತ್ ಕಾಯ್ಕಿಣಿ 
ಸಂಗೀತ: ಮನೋ ಮೂರ್ತಿ 
ಗಾಯಕರು: ಸೋನು ನಿಗಮ್ 
ನಟರು: ದಿಗಂತ್, ಐಂದ್ರಿತಾ ರೇ 

ಎಲ್ಲೋ ಮಳೆಯಾಗಿದೆ ಎಂದು
ತಂಗಾಳಿಯು ಹೇಳುತಿದೆ
ಇಲ್ಲೇ ಒಲವಾಗಿದೆ ಎಂದು
ಕನಸೊಂದು ಬೀಳುತಿದೆ
ವ್ಯಾಮೋಹವ ಕೇವಲ ಮಾತಿನಲಿ
ಹೇಳಲು ಬರಬಹುದೇ
ನಿನ್ನ ನೋಡಿದ ಮೇಲೆಯೂ
ಪ್ರೀತಿಯಲಿ ಬೀಳದೆ ಇರಬಹುದೇ

ಕಣ್ಣಲಿ ಮೂಡಿದೆ ಹನಿಗವನ
ಕಾಯಿಸಿ ನೀ ಕಾಡಿದರೆ
ನೂತನ ಭಾವದ ಆಗಮನ

ನೀ ಬಿಡದೆ ನೋಡಿದರೆ
ನಿನ್ನ ಧ್ಯಾನದಿ ನಿನ್ನದೇ ತೋಳಿನಲಿ
ಹೀಗೆಯೇ ಇರಬಹುದೇ
ಈ ಧ್ಯಾನವ ಕಂಡರೆ ದೇವರಿಗೂ
ಕೋಪವು ಬರಬಹುದೇ

ನೆನಪಿನ ಹೂಗಳ ಬೀಸಣಿಗೆ
ನೀ ಬರುವ ದಾರಿಯಲಿ
ಓಡಿದೆ ದೂರಕೆ ಬೇಸರಿಕೆ
ನೀನಿರುವ ಊರಿನಲಿ
ಅನುಮಾನವೇ ಇಲ್ಲದೆ ಕನಸಿನಲಿ
ಮೆಲ್ಲಗೆ ಬರಬಹುದೇ
ಅಲೆಮಾರಿಯ ಹೃದಯದ ಡೇರೆಯಲಿ
ನೀನು ಇರಬಹುದೇ


******************************************************************************

ಕಣ್ಣ ಹನಿಯೊಂದಿಗೆ ಕೆನ್ನೆ ಮಾತಾಡಿದೆ

ಸಾಹಿತ್ಯ: ಜಯಂತ್ ಕಾಯ್ಕಿಣಿ 
ಗಾಯಕರು: ಶ್ರೇಯಾ ಘೋಷಾಲ್, ಕೆ. ಕೆ. 

ಕಣ್ಣ ಹನಿಯೊಂದಿಗೆ ಕೆನ್ನೆ ಮಾತಾಡಿದೆ
ಕನಸುಗಳು ಕೂತಿವೆ ಏನು ಮಾತಾಡದೆ
ಮರೆಯದ ನೋವಿಗೆ ಮೆಲ್ಲಗೆ ಮೆಲ್ಲಗೆ
ನೆನಪುಗಳ ಹಾವಳಿಗೆ ಹೃದಯ ಹಾಳಾಗಿದೆ

ಮನದಲಿ ಮಿಂಚಿದೆ ಕುದಿಯುವ ಭಾವ
ನದಿಯೊಂದು ಸುಡುತಿದೆ ವೇದನೆ
ಒಲವಿನ ಕಲ್ಪನೆ ತಂಪನು ಬೀರದೆ
ಬೇಗುದಿಯ ಬಿಡುಗಡೆಗೆ ಹೃದಯ ಹೋರಾಡಿದೆ

ಮಿಡಿತದ ಮುನ್ನುಡಿ ಎದೆಯಲಿ ಗೀಚಿ ನಡೆದರೆ ನೀ 
ಉಳಿಯಲಿ ಹೇಗೆ ನಾ
ಮನದಲಿ ವೇದನೆ ಮೌನದೆ ಕೇಳು ನೀ ದಯವಿರಿಸಿ
ತುಳಿಯದಿರು ಹೃದಯ ಹೂವಾಗಿದೆ

ನಿನ್ನ ದನಿ ಕೇಳಿದೆ ನಿನ್ನ ನಗು ಕಾಡಿದೆ
ಸಣ್ಣ ದನಿಯೊಂದಿಗೆ ನನ್ನ ಮನ ಕೂಗಿದೆ
ನಿನ್ನಯ ಮೌನವು ನನ್ನೆದೆ ಗೀರಲು 
ಕನಸುಗಳ ಗಾಯದಲಿ ಹೃದಯ ಹೋಳಾಗಿದೆ

ಕಣ್ಣ ಹನಿಯೊಂದಿಗೆ ಕೆನ್ನೆ ಮಾತಾಡಿದೆ
ಕನಸುಗಳು ಸೋತಿವೆ ಏನು ಮಾತಾಡದೆ
ಮರೆಯದ ನೋವಿಗೆ ಮೆಲ್ಲಗೆ ಮೆಲ್ಲಗೆ
ನೆನಪುಗಳ ಹಾವಳಿಗೆ ಹೃದಯ ಹಾಳಾಗಿದೆ..


******************************************************************************


ನಾ ನಗುವ ಮೊದಲೆನೆ

ಸಾಹಿತ್ಯ: ಯೋಗರಾಜ್ ಭಟ್ 
ಗಾಯಕರು: ಶ್ರೇಯಾ ಘೋಷಾಲ್ 

ನಾ ನಗುವ ಮೊದಲೆನೆ ಮಿನುಗುತಿದೆ
ಯಾಕೋ ಹೊಸ ಮುಗುಳು ನಗೆ
ನಾ ನುಡಿವ ಮೊದಲೆನೆ ತೊದಲುತಿದೆ
ಹೃದಯವಿದು ಒಳಗೊಳಗೇ
ನಾ ನಡೆವ ಮೊದಲೆನೆ ಎಳೆಯುತಿದೆ
ದಾರಿಯಿದು ನಿನ್ನೆಡೆಗೆ
ನಾ ಅರಿವ ಮೊದಲೆನೆ ಉರಿಯುತಿದೆ
ದೀಪವಿದು ನನ್ನೊಳಗೆ
ಒಂದು ಬಾರಿ ಹೇಳು ಮೆಲ್ಲಗೆ
ಯಾರು ಯಾರು ನೀನನಗೆ?

ತಿಳಿಸದೇ ನನಗೆ ಹುಡುಕಿವೆ ನಿನ್ನ ನನ್ನಯ ಕಣ್ಣು
ಈ ಸಂಕಟ ಸಾಕಾಗಿದೆ ಮುಂದೇನು
ಕಲಿತಿದೆ ಮನವು ಕುಣಿಯುವುದನ್ನು ಕಂಡರೆ ನೀನು
ನಾನು ನನ್ನ ಪಾಡಿಗಿರಲು ಯಾಕೆ ಕಂಡೆ ನೀನನಗೆ?

ಕನವರಿಕೆಯಲಿ ನಿನ್ನಯ ಹೆಸರ ಕರೆಯಿತೆ ಹೃದಯ
ನನಗೇತಕೆ ನನ್ನ ಮೇಲೆಯೇ ಈ ಸಂಶಯ
ಬರಿ ಕನಸಿನಲೇ ಆಗುವೆ ಏಕೆ ನನ್ನಯ ಇನಿಯ
ಹೇಳು ಒಮ್ಮೆ ಹೇಳು ಇದುವೇ ಪ್ರೀತಿಯೆಂದು ನೀನನಗೆ

ನಾ ನಗುವ ಮೊದಲೆನೆ.........   

********************************************************************************

ಒಂದೇ ನಿನ್ನ ನೋಟ ಸಾಕು

ಗಾಯಕರು: ಸೋನು ನಿಗಮ್ 
ಸಾಹಿತ್ಯ: ಜಯಂತ್ ಕಾಯ್ಕಿಣಿ 


ಒಂದೇ ನಿನ್ನ ನೋಟ ಸಾಕು ಮಳ್ಳನಾಗೋಕೆ
ಹೇಳು ಏನು ಮಾಡಬೇಕು ನಲ್ಲ ನಾಗೋಕೆ
ಒಂದೇ ನಿನ್ನ ಮಾತು ಸಾಕು ಮೂಕನಾಗೋಕೆ
ಹೇಳು ಏನು ನೀಡಬೇಕು ಮಾತನಾಡೋಕೆ.. 

ಕಾಣದ ಒಂದು ಕಾಮನಬಿಲ್ಲು
ಮೂಡಿದೆ ನನ್ನೆದುರಲ್ಲೂ...
ಹೂವಿನ ಬಾಣ ನಾಟಿದೆ ಏನು..
ಲೂಟಿಯಾಗಿ ಹೊದೆನಾನು... 

ಒಂದೇ ನಿನ್ನ ನೋಟ ಸಾಕು ಮಳ್ಳನಾಗೋಕೆ
ಹೇಳು ಏನು ಮಾಡಬೇಕು ನಲ್ಲ ನಾಗೋಕೆ.... 

ಎಲ್ಲೇ ನೋಡಿದಲ್ಲೂ ನೀನೆ ಅಡಗಿ ಕೂತಂತೆ
ಹರಿದ ನೋಟಿನಂತೆ ನಾನೇ ತಿರುಗಿ ಬಂದಂತೆ
ಬಾರೆ ಬಿಡಿಸೋಣ... ಕನಸ್ಸುಗಳ ಕಂತೆ
ನನ್ನ ತುಂಬಾ ನೀನೆ ತಾಜಾ ಸುದ್ದಿಯಾದಂತೆ..
ನಿನ್ನ ಮುಂದೆ ಚಂದ್ರ ಕೂಡ ರದ್ದಿಯಾದಂತೆ..

ಸುಂದರವಾದ ಸುಂಟರಗಾಳಿ
ನಿನ್ನಯ ರೂಪವ ತಾಳಿ
ಮಿಂಚಿನ ದಾಳಿ ಮಾಡಿದೆ ಏನು,
ಲೂಟಿಯಾಗಿ ಹೊದೆನಾನು... 

ಒಂದೇ ನಿನ್ನ ನೋಟ ಸಾಕು ಮಳ್ಳನಾಗೋಕೆ
ಹೇಳು ಏನು ಮಾಡಬೇಕು ನಲ್ಲ ನಾಗೋಕೆ.... 

ನೀನು ಕೇಳಲೆಂದೇ ಕಾದ ಒಂದು ಪದವಾಗಿ,
ನಿನ್ನ ಕಾಸ ಕೋಣೆಯಲ್ಲಿ ಸಣ್ಣ ಕದವಾಗಿ,
ಇರಬೇಕು ನಾನು.. ನಿನ್ನ ಜೊತೆಯಾಗಿ
ಓದಲೆಂದೇ ನೀನು ಮಡಿಸಿ ಇಟ್ಟ ಪುಟವಾಗಿ
ಇನ್ನು ಚಂದಗೊಳಿಸುವಂತ ನಿನ್ನ ಹಠವಾಗಿ
ಕಣ್ಣಲಿ ಕಸವ ಬೀಳಿಸಿಕೊಂಡು
ಊದಲೂ ಕರೆದರೆ ನಿನ್ನ
ನಿನ್ನದೇ ಬಿಂಬವು ನೋಡಲು ನೀನು,
ಲೂಟಿಯಾಗಿ ಹೊದೆನಾನು... 

ಒಂದೇ ನಿನ್ನ ನೋಟ ಸಾಕು ಮಳ್ಳನಾಗೋಕೆ
ಹೇಳು ಏನು ಮಾಡಬೇಕು ನಲ್ಲ ನಾಗೋಕೆ
ಒಂದೇ ನಿನ್ನ ಮಾತು ಸಾಕು ಮೂಕನಾಗೋಕೆ
ಹೇಳು ಏನು ನೀಡಬೇಕು ಮಾತನಾಡೋಕೆ



********************************************************************************

No comments:

Post a Comment