Thursday, August 30, 2018

ವಂಶಿ (2008)



ಭುವನಂ ಗಗನಂ..

ಚಲನಚಿತ್ರ :  ವಂಶಿ (2008) 
ಸಾಹಿತ್ಯ : ವಿ.ನಾಗೇಂದ್ರ ಪ್ರಸಾದ್
ಸಂಗೀತ: ಆರ್.ಪಿ. ಪಟ್ನಾಯಕ್
ಗಾಯಕರು : ಸೋಹ್ಂ ಚಕ್ರವರ್ತಿ. 
ನಿರ್ದೇಶನ: ಪ್ರಕಾಶ್ 
ನಟರು: ಪುನೀತ್ ರಾಜ್ ಕುಮಾರ್, ನಿಕಿತಾ    


ಭುವನಂ ಗಗನಂ... ಸಕಲಂ ಶರಣಂ...
ಅಖಿಲಂ ನಿಖಿಲಂ... ಶಿವನೇ ಶರಣಂ....
ಉಸಿರನು ಕಾಯಲೂ, ಹಸಿರನು ನೀಡಿದ...
ಇರುಳನು ನೀಗಲೂ, ಹಗಲನು ನೀಡಿದ...
ಶರಣು ಎನಲು, ಇವನು ಒಲಿದು ಬರುವ....
ಎದುರು ನಿಲ್ಲಲು, ಇವನು ಮುನಿದೇ ಬಿಡುವ....
ಭುವನಂ ಗಗನಂ .... ಸಕಲಂ ಶರಣಂ...
ಅಖಿಲಂ ನಿಖಿಲಂ... ಶಿವನೇ ಶರಣಂ....

ತಾಯಿಗೆ ಮಗನೆ ಜೀವ, ಆ ಮಗನಿಗೆ ತಾಯೆ ದೈವ...
ಇಲ್ಲಿ ತ್ಯಾಗ ಪ್ರೀತಿಯ ಕರುಳಿನ ಬಂಧ ನೋಡು....
ಜಗದಾ ಬಾರಿ ಸಾಗರವ, ಜಿಗಿದು ಈಜಿ ಮೀರಿಸುವ...
ಪ್ರಬಲ ಧೈರ್ಯ ನೀಡಿರುವ ಶಿವನೇ...ಏ...

ಭುವನಂ ಗಗನಂ... ಸಕಲಂ ಶರಣಂ...
ಅಖಿಲಂ ನಿಖಿಲಂ... ಶಿವನೇ ಶರಣಂ....

ಕಾಲ ಓಡುತಿದೆ ಬೇಗ, ಸರಿಯಾಗಿ ಬಾಳುವುದೇ ಯೋಗ...
ಜನಕಾಗಿ ಬಾಳುವ ಸೇವಕ ನಾನು ಈಗ...
ಶಿವನು ಮೇಲೆ ನೋಡಿರುವ, ಜನರು ಮಾಡೋ ಕಾಯಕವ....
ನಿಜದ ಅಂಕೆ ನೀಡಿರುವ ತಿಳಿಯೋ...

ಭುವನಂ ಗಗನಂ... ಸಕಲಂ ಶರಣಂ...
ಅಖಿಲಂ ನಿಖಿಲಂ... ಶಿವನೇ ಶರಣಂ....
ಉಸಿರನು ಕಾಯಲೂ, ಹಸಿರನು ನೀಡಿದ...
ಇರುಳನು ನೀಗಲೂ, ಹಗಲನು ನೀಡಿದ...
ಶರಣು ಎನಲು, ಇವನು ಒಲಿದು ಬರುವ....
ಎದುರು ನಿಲ್ಲಲು, ಇವನು ಮುನಿದೇ ಬಿಡುವ....

ಭುವನಂ ಗಗನಂ... ಸಕಲಂ ಶರಣಂ...
ಅಖಿಲಂ ನಿಖಿಲಂ... ಶಿವನೇ ಶರಣಂ....


*******************************************************************************

ಅಮಲು ಅಮಲು ಅಮಲು

ಸಾಹಿತ್ಯ: ಜಯಂತ್ ಕಾಯ್ಕಿಣಿ 
ಗಾಯನ: ರಾಜೇಶ್ ಕೃಷ್ಣನ್, ಹರಿಣಿ  


ಅಮಲು ಅಮಲು ಅಮಲು
ಗೆಳತಿ ನೀನು ಸಿಗಲು
ಮರುಳೀಗ ಮಿತಿ ಮೀರಿ ನನಗಂತು ದಿಗಿಲು

ಅಮಲು ಅಮಲು ಅಮಲು
ಗೆಳೆಯ ನೀನು ನಗಲು
ನನಗಂತು ಯಾರಿಲ್ಲ ನಿನಗಿಂತ ಮಿಗಿಲು

ಬಾರೆ ಬಳಿ ಬಾರೆ ಏಕೆ ಕಾಲ ಹರಣ
ಎಲ್ಲ ಪಿಸು ಮಾತು ಮುತ್ತಾಗೋ ಲಕ್ಷಣ
ತಿಳಿಯದೆ ತೆರೆದಿದೆ ಕನಸಿನ ಕದ
ಅರಿಯದೆ ಅರಳಿದೆ ಹಸಿ ಬಿಸಿ ಪದ
ಹರೆಯ ನೋಡಿದೆ ಮಾತಾಡಲು......

ನಿನ್ನ ಉಸಿರಿಂದ ನೇರ ಜೀವದಾನ
ಜೀವ ಹಸಿರಾಗಿ ಬದುಕೀಗ ಶ್ರಾವಣ
ಪರದೆಯ ಸರಿಸಿದೆ ಪರವಶ ಮನ
ಹೃದಯವೆ ಅರಿತಿದೆ ಹೃದಯದ ಗುಣ
ಸಮಯ ನಿಂತಿದೆ ಹಾರೈಸಲು.....


*******************************************************************************

ಜೊತೆ ಜೊತೆಯಲಿ 

ಸಾಹಿತ್ಯ: ರಾಮ್ ನಾರಾಯಣ್ 
ಗಾಯನ: ಪುನೀತ್ ರಾಜಕುಮಾರ್, ಶ್ರೇಯಾ ಘೋಷಾಲ್ 


ಜೊತೆ ಜೊತೆಯಲಿ ಪ್ರೀತಿ ಜೊತೆಯಲಿ
ನಡೆದಿದೆ ದಿನ ಬಯಸಿ ಬಯಸಿ
ಸಿಹಿ ಸಿಹಿ ಸಿಹಿ ಮಾತು ಸಿಹಿ ಸಿಹಿ
ನುಡಿದಿದೆ ಮನ ಹರಸಿ ಹರಸಿ
ಹೀಗೆ ಸಾಗಲಿ ನಮ್ಮೀ ಪಯಣ
ಹಾಡಿ ನಲಿದು ಸ ಸ ರಿ ರಿ ಗ ಗ ಮ ಮ

ದಿನ ದಿನ ದಿನ ಏನಾದರು ಚಿನ್ನ ಕರಗದು ಈ ಪ್ರೇಮ
ಕ್ಷಣ ಕ್ಷಣ ಕ್ಷಣ ನೀನಿಲ್ಲದ ಕ್ಷಣ ಸಹಿಸದು ಈ ಪ್ರೇಮ
ಆ ಬಾನಿಗಾದರೆ ಮಿನುಗು ತಾರೆ
ಈ ಬಾಳಿಗಾಸರೆ ನೀನೆ ಬಾರೆ

ನಾವಾಡೋ ಒಲವಿನ ಮಾತು ಕೇಳಿ
ಹಾರಾಡೋ ಗಿಳಿಗಳ ಗಾನ ಸ ಸ ರಿ ರಿ ಗ ಗ ಮ ಮ ......

ಕಣ ಕಣ ಕಣ ಹೊಸ ಹುರುಪಿನ ಚಿಲುಮೆಯು ಈ ಪ್ರೇಮ
ಮಿಣ ಮಿಣ ಮಿಣ ಹೊಸ ಬೆಳಕಿನ ಹೊಳಪಿದು ಈ ಪ್ರೇಮ
ಏಳೇಳು ಜನುಮದಾ ಜೋಡಿಯಾಗಿ
ಹೀಗೇನೆ ಬಾಳುವೆ ಪ್ರೇಮಿಯಾಗಿ
ಈ ನಮ್ಮ ಪ್ರೀತಿಯ ನೋಡಿ ನೋಡಿ
ಲೋಕವೇ ಹಾಡಿದೆ ಹಾಡು ಸ ಸ ರಿ ರಿ ಗ ಗ ಮ ಮ ......

******************************************************************************

ತಾಯಿ ತಾಯಿ ಲಾಲಿ

ಸಾಹಿತ್ಯ: ಹಂಸಲೇಖ 
ಗಾಯಕರು: ಡಾ. ರಾಜ್ ಕುಮಾರ್


ತಾಯಿ ತಾಯಿ ಲಾಲಿ ಹಾಡೋ ಭೂಮಿತಾಯಿಗೆ
ತಾಯಿ ತಾಯಿ ಲಾಲಿ ಹಾಡೋ ಹೆತ್ತ ತಾಯಿಗೆ
ಹೊರುವಳು ಭೂಮಿ ಭಾರ, ಹೆರುವಳು ತಾಯಿ ನೋವ
ತ್ಯಾಗಮಯಿ ಈ ತಾಯಿ ।।ತಾಯಿ।। 

ಕರುಳ ಕುಡಿಯ ಸುಖ ಕೋರಿ ಗೂಡಿನಿಂದ ಹೊರ ಹಾರಿ
ಅಲೆವಳು ದಣಿವಳು ಅನುಕ್ಷಣಾ ಮಿಡಿವಳು
ಕಾಲಕೂಟವನ್ನು ಸಹಿಸಿ ಕಾಮಕೂಟವನ್ನು ಕ್ಷಮಿಸಿ
ಜಗವನೆ ಮಗುವಿನ ತೆರದಲಿ ತಿಳಿವಳು
ಅಳುವಳು ಅಬಲೆಯು ಎಂದೂ ದುಡಿವಳು
ಮಗುವಿಗೆ ಎಂದೂ ಪ್ರೇಮಮಯಿ ಈ ತಾಯಿ ।।ತಾಯಿ।। 

ಗರ್ಭವೇ ತಾಯಿಯ ಸ್ವರ್ಗ ಎಂದಿತು ದೈವ ನಿಸರ್ಗ
ಮೊಲೆಯುಣಿಸುವ ಸ್ತ್ರೀ ಧರ್ಮ ವಹಿಸಿದಾ ತಾಯಿಗೆ ಬ್ರಹ್ಮ
ತೊರೆವಳು ಸುಖ ಸಹವಾಸ ಇರುವಳು ದಿನ ಉಪವಾಸ

ವೇದಮಯಿ ಈ ತಾಯಿ ।।ತಾಯಿ।।

********************************************************************************

No comments:

Post a Comment