Thursday, August 30, 2018

ಸಂಜು ವೆಡ್ಸ್ ಗೀತಾ (2011)

ಗಗನವೇ ಬಾಗಿ 

ಚಲನ ಚಿತ್ರ: ಸಂಜು ವೆಡ್ಸ್ ಗೀತಾ (2011)
ಸಾಹಿತ್ಯ: ಕವಿರಾಜ್ 
ಸಂಗೀತ: ಜೆಸ್ಸಿ ಗಿಫ್ಟ್ 
ಗಾಯಕ: ಶ್ರೇಯಾ ಘೋಷಾಲ್ 
ನಿರ್ದೇಶನ: ನಾಗಶೇಖರ್ 
ನಟನೆ: ಶ್ರೀನಗರ ಕಿಟ್ಟಿ, ರಮ್ಯಾ 


ಹಾ. ಹಾ.... ಹಾ... ಹಾ... ಹಾ..

ಗಗನವೇ ಬಾಗಿ ಭುವಿಯನು ಕೇಳಿದಾ ಹಾಗೆ,
ಕಡಲು ಕರೆದಂತೆ ನದಿಯನೂ  ಭೇಟಿಗೆ,
ಯಾರು ಬಂದಿರದ ಮನಸಲಿ ನಿನ್ನ ಆಗಮನ ಈ ದಿನ
ನೀಡುವ ಮುನ್ನ ನಾನೇ ಆಮಂತ್ರಣ


ಗಗನವೇ  ಬಾಗಿ ಭುವಿಯನು ಕೇಳಿದಾ ಹಾಗೆ,
ಕಡಲು ಕರೆದಂತೆ ನದಿಯನೂ  ಭೇಟಿಗೆ,,

ಜೀವನಾ ಈ ಕ್ಷಣ ಶುರುವಾದಂತಿದೆ
ಕನಸಿನಾ ಊರಿನಾ ಕದ ತೆರೆಯುತ್ತಿದೆ
ಅಳಬೇಕು ಒಮ್ಮೆ ಅಂತನಿಸಿದೆ ಖುಷಿ ಈಗ ಮೇರೆ ಮೀರಿ
ಮಧುಮಾಸದಂತೆ ಕೈಚಾಚಿದೆ ಹಸಿರಾಯ್ತು ನನ್ನ ದಾರಿ
ನೀಡುವ ಮುನ್ನ ನಾನೇ ಆಮಂತ್ರಣ

ಗಗನವೇ  ಬಾಗಿ ಭುವಿಯನು ಕೇಳಿದಾ ಹಾಗೆ,
ಕಡಲು ಕರೆದಂತೆ ನದಿಯನೂ  ಭೇಟಿಗೆ,
ಯಾರು ಬಂದಿರದ ಮನಸಲಿ ನಿನ್ನ ಆಗಮನ ಈ ದಿನ
ನೀಡುವ ಮುನ್ನ ನಾನೇ ಆಮಂತ್ರಣ

ಸಾವಿನಾ ಅಂಚಿನಾ ಬದುಕಂತಾದೆ ನೀ
ಸಾವಿರಾ ಸೂರ್ಯರಾ ಬೆಳಕಂತಾದೆ ನೀ
ಕೊನೆಯಾಸೆ ಒಂದೇ ಈ ಜೀವಕೆ ನಿನ್ನ ಕೂಡಿ ಬಾಳಬೇಕು
ಪ್ರತಿ ಜನ್ಮದಲ್ಲೂ ನೀ ಹೀಗೆಯೆ ನನ್ನ ಪ್ರೀತಿ ಮಾಡಬೇಕು
ನೀಡುವ ಮುನ್ನ ನಾನೇ ಆಮಂತ್ರಣ

ಗಗನವೇ  ಬಾಗಿ ಭುವಿಯನು ಕೇಳಿದಾ ಹಾಗೆ,
ಕಡಲು ಕರೆದಂತೆ ನದಿಯನೂ  ಭೇಟಿಗೆ,
ಯಾರು ಬಂದಿರದ ಮನಸಲಿ ನಿನ್ನ ಆಗಮನ ಈ ದಿನ
ನೀಡುವ ಮುನ್ನ ನಾನೇ ಆಮಂತ್ರಣ

********************************************************************************

ಸಂಜು ಮತ್ತು ಗೀತಾ

ಸಾಹಿತ್ಯ: ಕವಿರಾಜ್ 
ಗಾಯಕ: ಸೋನು ನಿಗಮ್  


ಸಂಜು ಮತ್ತು ಗೀತಾ ಸೇರಬೇಕು ಅಂತಾ
ಬರೆದಾಗಿದೆ ಇಂದು ಬ್ರಹ್ಮನೂ...
ನನ್ನ ಜೀವಕ್ಕಿಂತಾ ನೀನೆ ನನ್ನ ಸ್ವಂತಾ
ಇರುವಾಗ ನಾನು ಚಿಂತೆ ಏನು?
ನಿನ್ನ ಎಲ್ಲ ನೋವನ್ನು ಕೊಡುಗೇ ನೀಡು ನನಗಿನ್ನು
ನನ್ನ ಎಲ್ಲ ಖುಷಿಯನ್ನು ಕೊಡುವೇ ನಿನ್ನ ವಶಕಿನ್ನು
ಮಳೆಯಾ ಹನಿ ಕುರುಳೋ ದನಿ ತರವೇ?
ನಗಬಾರದೆ ನಗಬಾರದೆ ನನ್ನೊಲವೇ?

ಸಂಜು ಮತ್ತು ಗೀತಾ ಸೇರಬೇಕು ಅಂತಾ
ಬರೆದಾಗಿದೆ ಇಂದು ಬ್ರಹ್ಮನೂ...

ಆ ಕಣ್ಣಿಗೊಂದು ಈ ಕಣ್ಣಿಗೊಂದು
ಸ್ವರ್ಗಾನ ತಂದು ಕೊಡಲೇನು ಇಂದು
ಏನಾಗಲಿ ನನ್ನ ಸಂಗಾತಿ ನೀ..
ನಿನ್ನ ಈ ಕಣ್ಣಲೀ ಇದೆ ಕೊನೆಯಾ ಹನಿ
ಎದೆಯ ಗೂಡಿನಲ್ಲಿ ಪುಟ್ಟ ಗುಬ್ಬಿಯಂತೆ ನಿನ್ನ
ಬೆಚ್ಚನೇಯ ಪ್ರೀತಿ ಕೊಟ್ಟು ಬಚ್ಚಿ ಇಡುವೆ ಚಿನ್ನ
ಇತಿಹಾಸದ ಪುತ ಕಾಣದ ಒಲುಮೆ ನೀಡುವೇ...
ಮಳೆಯಾ ಹನಿ ಕುರುಳೋ ದನಿ ತರವೇ?
ನಗಬಾರದೆ ನಗಬಾರದೆ ನನ್ನೊಲವೇ?

ಸಂಜು ಮತ್ತು ಗೀತಾ ಸೇರಬೇಕು ಅಂತಾ
ಬರೆದಾಗಿದೆ ಇಂದು ಬ್ರಹ್ಮನೂ...

ತಂಗಾಳಿಯಾಗೋ ಬಿರುಗಾಳಿಯಾಗೋ
ನೀ ಒಮ್ಮೆ ಬಂದು ನನ್ನ ಸೋಕಿ ಹೋಗು
ನಿನ್ನ ನೋಡದೇ... ಅಳುವೇ ಬರುತಿದೇ
ನಿನ್ನ ನಗುವಿಲ್ಲದೇ ಜಗ ನಿಂತಂತಿದೆ..
ನಿದಿರೆ ಬರದ ಕಣ್ಣಿಗೆ ಬಾರೆ ಹಗಲುಗನಸ ಹಾಗೆ
ಬಳಲಿ ಹೋದ ನನಗೆ ಬಾರೆ ಜೀವ ತುಂಬು ಹಾಗೆ
 ಉಸಿರಾಡುವ ಶವವಾದೆ ನಾ... ನೀನು ಇಲ್ಲದೇ
ಮಳೆ ನಿಂತರೂ ಮರದಾ ಹನಿ ತರವೇ
ಬಾ ಇಲ್ಲಿಗೆ ನನ್ನಲ್ಲಿಗೆ ನನ್ನೊಲವೇ..
ಸಂಜು ಮತ್ತು ಗೀತಾ ಸೇರಬೇಕು ಅಂತಾ
ಬರೆದಾಗಿದೆ ಇಂದು ಬ್ರಹ್ಮನೂ...

********************************************************************************

ಒಮ್ಮೆ ಬಾರೋ ಒಮ್ಮೆ ಬಾರೋ

ಸಾಹಿತ್ಯ: ಕವಿರಾಜ್ 
ಗಾಯನ: ಶ್ರೇಯಾ ಘೋಷಾಲ್ 

ಒಮ್ಮೆ ಬಾರೋ ಒಮ್ಮೆ ಬಾರೋ ಎಲ್ಲೆ ನೀನಿದ್ದರು
ಒಮ್ಮೆ ಬಾರೋ ಒಮ್ಮೆ ಬಾರೋ ಬೇಗ ನೀನಿದ್ದರು
ಸುರಿಮಳೆ ಸುರಿಯುವ ಸೂಚನೆ ಶುರುವಾಗಿದೆ ಶುರುವಾಗಿದೆ
ಜೊತೆಯಲಿ ನೆನೆಯಲು ನಲ್ಲನೆ ಮನಸಾಗಿದೆ ಮಿಡುಕಾಡಿದೆ ಹುಡುಕಾಡಿದೆ

ಬಲಗಣ್ಣು ಬಡಿದಾಗ ಬರಲಿಲ್ಲ ಯಾಕೆ ನೀನು
ಎಡಗಾಲು ಎಡವಿದರು ಸುಲಿವಿಲ್ಲ ಎಲ್ಲಿ ನೀನು
ಕೈ ತುತ್ತು ಜಾರಿದ ರಂಗೋಲಿಯು ಬರೆದೆನು
ಸುರಿಮಳೆ ಸುರಿಯುವ ಸೂಚನೆ ಶುರುವಾಗಿದೆ ಶುರುವಾಗಿದೆ
ಜೊತೆಯಲಿ ನೆನೆಯಲು ನಲ್ಲನೆ ಮನಸಾಗಿದೆ ಮಿಡುಕಾಡಿದೆ ಹುಡುಕಾಡಿದೆ

ಅದೇ ಹಾದಿ ತುಳಿವಾಗ ಎದೆಯಲ್ಲಿ ನೂರು ನೋವು
ಇಳೆ ಸಂಜೆ ಕಳೆವಾಗ ಸುಳಿದಂತೆ ಇಲ್ಲಿ ಸಾವು
ಅಸುನೀಗೊ ಮುನ್ನ ನಿನ್ನನು ತುಸು ನೋಡಲು ಕಾದೀಹೆನು
ಸುರಿಮಳೆ ಸುರಿಯುವ ಸೂಚನೆ ಶುರುವಾಗಿದೆ ಶುರುವಾಗಿದೆ
ಜೊತೆಯಲಿ ನೆನೆಯಲು ನಲ್ಲನೆ ಮನಸಾಗಿದೆ ಮಿಡುಕಾಡಿದೆ ಹುಡುಕಾಡಿದೆ

********************************************************************************

No comments:

Post a Comment